10th Standard Kannada Veeralava Kannada Poem Notes Question Answer Summery Extract Mcq Pdf Download in Kannada Medium Karnataka State Syllabus 2025 Kseeb Solutions For Class 10 Kannada Notes 10ನೇ ತರಗತಿ ಕನ್ನಡ ವೀರಲವ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು 10th veeralava kannada notes ವೀರಲವ ಪದ್ಯದ ಸಾರಾಂಶ ವೀರಲವ ಪದ್ಯದ ಪ್ರಶ್ನೋತ್ತರಗಳು ಭಾವಾರ್ಥ Veeralava poem summary in kannada 10th kannada veeralava poem summary in kannada veeralava poem summary in kannada class 10 class 10 kannada veeralava question answer veeralava poem notes in kannada ವೀರಲವ notes ವೀರಲವ ಪದ್ಯದ ಲಘು ಗುರು 10th kannada 7th poem notes.

10ನೇ ತರಗತಿ ವೀರಲವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು.
ಕವಿ ಪರಿಚಯ :
ಲಕ್ಷ್ಮೀಶ (ಕ್ರಿ.ಶ. 1550) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನವನು. ಈತನಿಗೆ ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಗಳೂ ಇವೆ. ಜೈಮಿನಿಭಾರತವೆಂಬ ಪ್ರಸಿದ್ದಕಾವ್ಯದ ಕರ್ತೃ. ಲಕ್ಷ್ಮೀಶ ಕವಿಗೆ “ಉಪಮಾಲೋಲ”, “ಕರ್ಣಾಟಕ ವಿಚೂತವನ ಚೈತ್ರ” ಎಂಬ ಬಿರುದುಗಳಿವೆ.
ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹ ಶಾಸ್ತ್ರೀ ಮತ್ತು ಬಿ.ಶಿವಮೂರ್ತಿಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೇಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಆಶಯ ಭಾವ ನಮ್ಮ ಮಹಾಕಾವ್ಯಗಳಲ್ಲಿ ತಂದೆ-ಮಕ್ಕಳು ಬೇರೆಬೇರೆಯಾಗಿ ಬೆಳೆದು, ಯಾವುದೋ ಸಂದರ್ಭದಲ್ಲಿ ಮುಖಾಮುಖಿಯಾಗುವ ಸನ್ನಿವೇಶಗಳು ಇವೆ. ಪರಸ್ಪರರ ಸಂಬಂಧದ ಅರಿವಿರದೆ ಸಂಘರ್ಷಕ್ಕೆ ಮುಂದಾಗುವ ಪ್ರಸಂಗಗಳಿವೆ. ಅನಂತರ ಯಾರಿಂದಲಾದರೂ ಸಂಬಂಧ ತಿಳಿದಾಗ ಸಂಘರ್ಷ ಮರೆಯಾಗಿ ಹೊಂದಾಣಿಕೆ ರೂಪದ ಸುಖ್ಯಾಂತವಾಗುವ ಸಂದರ್ಭಗಳೇ ಹೆಚ್ಚು. ಭೀಮ-ಘಟೋತ್ಕಚ, ಅರ್ಜುನ-ಬಬ್ರುವಾಹನ. ಲವಕುಶ-ಶ್ರೀರಾಮ ಇವರ ಭೇಟಿ ಇಂತಹ ಪ್ರಸಂಗಗಳಿಗೆ ದೃಷ್ಟಾಂತಗಳು.
ಲವಕುಶರು ಹುಟ್ಟಿದ್ದು ಋಷ್ಯಾಶ್ರಮದಲ್ಲಾದರೂ ಸಹಜ ಕ್ಷಾತ್ರಗುಣ. ವೀರತೆಯಿಂದ ಕುದುರೆಯನ್ನು ಕಟ್ಟಿಹಾಕುತ್ತಾರೆ. ಕಷ್ಟ-ಸವಾಲುಗಳು ಬಂದಾಗ ಚಿಕ್ಕವರು, ಅಸಮರ್ಥರು ಎಂದು ಕೂರದೆ ದಿಟ್ಟತನದಿಂದ ಎದುರಿಸಬೇಕೆಂಬ ಬಾಲ್ಯಸಹಜ ಸಾಹಸ ಪ್ರವೃತ್ತಿಯನ್ನು ಇಲ್ಲಿ ಕಾಣಬಹುದು.
ಪದ ವಿಂಗಡಣೆ
ಅಂಜಿ – ಹೆದರಿ | ಅಗಡು – ಶೌರ್ಯ |
ಅಬ್ಧಿಪ – ವರುಣ | ಆರ್ಪರ್ – ಸಮರ್ಥರು |
ಉಪವನ – ಉದ್ಯಾನವನ | ಉರ್ವಿ – ಭೂಮಿ |
ಕದಳಿ – ಬಾಳೆ | ಚರಿಸು – ಸಂಚರಿಸು |
ತುರಂಗ – ಕುದುರೆ | ನೃಪ – ದೊರೆ |
ನೆತ್ತಿ – ಹೊಣೆ | ಪಸುರು – ಹಸುರು |
ಬಡಿ – ಹೊಡೆ, ಚಚ್ಚು | ಮುಳಿ – ಕೋಪ |
ಲಿಖಿತ – ಬರೆಹ | ವಾಜಿ – ಕುದುರೆ |
ವಾಸಿ – ಪ್ರತಿಜ್ಞೆ | ಹಯ – ಕುದುರೆ |
ಬಂಜೆ(ದ್ಭ) – ವಂಧ್ಯಾ (ತ್ಸ) ಸಂತಾನವಿಲ್ಲದವಳು |
ಟಿಪ್ಪಣಿ
ರಘು : ಸೂರ್ಯ ವಂಶದ ಅರಸ. ತನ್ನ ಪರಾಕ್ರಮದಿಂದ ಭೂಮಂಡಲವನ್ನು ಗೆದ್ದು ‘ವಿಶ್ವಜಿತ್’ ಎಂಬ ಯಾಗ ಮಾಡಿ ಸರ್ವಸ್ವವನವನು ದಾನಮಾಡಿ ಪ್ರಸಿದ್ಧನಾದ. ಸೂರ್ಯವಂಶದ ಶ್ರೇಷ್ಠ ಅರಸನಾದ ಕಾರಣ ಈತನ ಕಾಲಾನಂತರ ಸೂರ್ಯವಂಶಕ್ಕೆ ರಘುವಂಶ ಎಂಬ ಹೆಸರು ಬಂತು.
ವಾಲ್ಮೀಕಿ : ಒಬ್ಬ ಬ್ರಹ್ಮರ್ಷಿ, ದಾರಿಗಳ್ಳನಾಗಿದ್ದ ಬೇಡ, ನಾರದ ಮಹರ್ಷಿಗಳ ಬೋಧನೆಯಿಂದ ರಾಮನಾಮ ಜಪಿಸುತ್ತಿದ್ದಾಗ ಈತನ ಮೈಮೇಲೆ ಹುತ್ತ (ವಲ್ಮೀಕ) ಬೆಳೆಯಿತು. ನಾರದ ಮಹರ್ಷಿಗಳಿಂದಾಗಿ ವಲ್ಮೀಕದಿಂದ ಹೊರಗೆ ಬಂದ ಈತನು ವಾಲ್ಮೀಕಿ ಎಂದು ಪ್ರಸಿದ್ಧನಾದನು. ಆದಿಕಾವ್ಯ ರಾಮಾಯಣವನ್ನು ರಚಿಸಿ ಕೀರ್ತಿವಂತನಾದ.
ವರುಣ : ಅಷ್ಟದಿಕ್ಷಾಲಕರಲ್ಲಿ ಒಬ್ಬನಾದ ಈತ ಪಶ್ಚಿಮದಿಕ್ಕಿಗೆ ಒಡೆಯ. ಜಲಾಧಿಪತಿ ಎಂದು ಪ್ರಸಿದ್ಧನಾದವ.
ಲವ : ಶ್ರೀರಾಮನಿಂದ ಸೀತೆಯಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಚಿಕ್ಕವ. ಶ್ರೀರಾಮನಿಂದ ಪರಿತ್ಯಕ್ತಳಾಧ ತುಂಬುಗರ್ಭಿಣಿಸೀತೆ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ ಜನಿಸಿದವ. ವಾಲ್ಮೀಕಿಯಿಂದ ರಚಿತವಾದ ರಾಮಾಯಣವನ್ನು ಅಣ್ಣ ಕುಶನ ಜೊತೆ ಸೇರಿ ಹಾಡುತ್ತಿದ್ದ.
ಅಬ್ಬಿಪ : ಅಬ್ಬಿ – ಸಮುದ್ರ, ಪ – ಒಡೆಯ, ಅಬ್ಬಿಪ – ಸಮುದ್ರದ ಒಡೆಯ ವರುಣ
ಜೇಗೆಯ್ : ಬಿಲ್ಲಿಗೆ ಕಟ್ಟುವ ಹಗ್ಗವನ್ನು ಹೆದೆ ಎಂದು ಕರೆಯುತ್ತಾರೆ. ಈ ಹೆದೆಯನ್ನು ಬೇಕಾದಾಗ ಮಾತ್ರ ಬಿಗಿಯಲಾಗುತ್ತದೆ. ಉಳಿದ ಸಂದರ್ಭದಲ್ಲಿ ಬಿಲ್ಲಿನ ಒಂದು ತುದಿಯಿಂದ ಮಾತ್ರ ಕಟ್ಟಿರುತ್ತಾರೆ. ಯುದ್ಧಕ್ಕೆ ಸನ್ನಧನಾದಾಗ ಬಿಲ್ಲುಗಾರ ತನ್ನ ಬಿಲ್ಲಿನ ಹೆದೆಯನ್ನು ಅದರ ಇನ್ನೊಂದು ತುದಿಗೆ ಬಿಗಿಯಾಗಿ ಕಟ್ಟುತ್ತಾನ. ಹೆದೆಯ ಬಿಗಿತ ಸರಿಯಾಗಿದ್ದರೆ ಮಾತ್ರ ಬಾಣ ಗುರಿ ಮುಟ್ಟುತ್ತದೆ. ಅದಕ್ಕಾಗಿ ಬಿಲ್ಲುಗಾರ ಬಿಲ್ಲಿನ ಹೆದೆಯನ್ನು ಆಕರ್ಣಾಂತ (ಕಿವಿಯವರೆಗೆ) ಎಳೆದು ಬಿಡುತ್ತಾನೆ. ಗ ಆ ಹೆದೆ ಮೊದಲಿದ್ದ ಸ್ಥಳಕ್ಕೆ ಹೋಗುವಾಗ ‘ಝೇಂ’ ಎಂಬ ಧ್ವನಿ ಮಾಡುತ್ತದೆ. ಈ ಧ್ವನಿಯ ಸಹಾಯದಿಂದ ಬಿಲ್ಲುಗಾರ ಹೆದೆಯ ಬಿಗಿತ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಾನೆ. ಕ್ರಿಯೆಗೆ ‘ಜೇಗೆಯ್ಯು’ವುದು’ ಎಂದು ಹೇಳಲಾಗುತ್ತದೆ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ :
1) ‘ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಯಾರು?
‘ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ‘ಲಕ್ಷ್ಮೀಶ’.
2) ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಯಿಜ್ಞಾಶ್ವವನ್ನು ಕಟ್ಟಿದವನು ಲವ.
3) ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ತನ್ನ ಉತ್ತರಿಯಿಂದ ಲವನು ಕುದುರೆಯನ್ನು ಕಟ್ಟಿದನು.
4) ಮುನಿಸುತರು ಹೆದರಲು ಕಾರಣವೇನು?
ಶ್ರೀರಾಮನ ಕಡೆಯವರು ಬಂದು ಹೊಡೆಯುವರು ಎಂದು ಮುನಿಸುತರು ಹೆದರುತ್ತಿದ್ದರು.
ಆ) ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1) ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ.
ರಾಮನು ಅಶ್ವಮೇಧಯಾಗವನ್ನು ಕೈಗೊಂಡು ಸಂಚಾರಕ್ಕೆ ತೆರಳಿದ ಕುದುರೆಯ ಬೆಂಗಾವಲಿಗೆ ಶತ್ರುಘ್ನನನ್ನು ಕಳುಹಿಸುತ್ತಾನೆ. ದೇಶ, ಪಟ್ಟಣ, ಉಪವನಗಳನ್ನು ಸುತ್ತಾಡುತ್ತ ಈ ಅಶ್ವಕುದುರೆಯು ವಾಲ್ಮೀಕಿ ಆಶ್ರಮಕ್ಕೆ ಬಂದಿತು.
2) ಯಜ್ಞಾಶ್ವದ ಹಣೆಯಲ್ಲಿದ್ದ ಲಿಖಿತದಲ್ಲಿ ಏನೆಂದು ಬರೆಯಲಾಗಿತ್ತು?
ಯಜ್ಞಾಶ್ವದ ಹಣೆಯಲ್ಲಿದ್ದ ಲಿಖಿತದಲ್ಲಿ “ಈ ಭೂಮಿಯ ಮೇಲೆ ಕೌಸಲ್ಯಾ ಪುತ್ರನಾದ ರಾಮನು ಈ ಯಜ್ಞಾಶ್ವವನ್ನು ಬಿಟ್ಟಿರುವನು. ವೀರವೆನಿಸುವುದನ್ನು ಇದನ್ನು ಕಟ್ಟಲಿ” ಎಂಬುದಾಗಿ ಬರೆದಿತ್ತು.
3) ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಯಜ್ಞಾಶ್ವವು ವಾಲ್ಮೀಕಿ ಆಶ್ರಮವನ್ನು ಹೊಕ್ಕು ಗರಿಕೆ ಹುಲ್ಲನ್ನು ಮೇಯುವುದನ್ನು ಕಂಡ ಲವನು ಮುನಿಕುಮಾರರೊಡನೆ ಕುದುರೆ ಬಳಿ ಬಂದು ನೋಡಲು ಅದು ರಾಮನು ಕಳುಹಿಸಿದ ಅಶ್ವಮೇಧದ ಕುದುರೆಯೆಂದು ತಿಳಿಯಿತು. ಅದರ ಮೇಲೆ “ವೀರನೆನಿಸುವವನು ಇದನ್ನು ಕಟ್ಟಲಿ”. ಎಂದು ಬರೆದುದ್ದನ್ನು ಕಂಡು ಲವನು ಕೋಪದಿಂದ ಕುದುರೆಯನ್ನು ಹಿಡಿದು. ಆತನ ಗರ್ವವನ್ನು ಬಿಡಿಸದ್ದಿದ್ದೊಡೆ ನನ್ನ ವೀರವಮಾತೆಯನ್ನು ಬಂಜೆಯೆನ್ನುವುದಿಲ್ಲವೇ? ಎಂದು ತನ್ನ ಉತ್ತರಿಯದಿಂದ ಕುದುರೆಯನ್ನು ಕಟ್ಟಿ ಬಾಳೆಯ ಗಿಡಕ್ಕೆ ಅದನ್ನು ಬಿಗಿದನು. ಇದನ್ನು ಕಂಡ ಮುನಿಕುಮಾರರು ಹೆದರಿ “ಲವನೇ ಬೇಡ-ಬೇಡ, ಇದು ಶ್ರೀರಾಮನ ಕುದುರೆ. ಅದರ ಕಡೆಯವರು ಬಂದು ನಮ್ಮನ್ನು ಬಡಿಯುವರು. ಬಿಟ್ಟುಬಿಡು.” ಎಂಬುದಾಗಿ ಲವನಿಗೆ ಹೇಳತೊಡಗಿದರು.
ಇ) ಎಂಟು ಹತ್ತು ವಾಕ್ಯಗಳು ಉತ್ತರಿಸಿ :
1) ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು?
ಲವನು ಯಜ್ಞಾಶ್ವವನ್ನು ನೋಡಿ ಮೊದಲು ಆಶ್ಚರ್ಯಪಟ್ಟನು. ನಂತರ ಅದರ ಹಣೆಯ ಮೇಲೆ ಬರೆದುದ್ದನ್ನು ಓದಲು ಅದು ರಾಮನ ಅಶ್ವಮೇಧದ ಕುದುರೆಯೆಂದು ‘ವೀರರಾದವರು ಕಟ್ಟಬಹುದು’ ಎಂಬುದಾಗಿ ಬರೆದುದನ್ನು ಓದಿ ಕುಪಿತಗೊಂಡು, ತನ್ನ ಉತ್ತರಿಯವನ್ನು ಕಟ್ಟಿ, ಆತನ ಗರ್ವವನ್ನು ಬಿಡಿಸದಿದ್ದೊಡೆ ನನ್ನ ವೀರಮಾತೆಯನ್ನು ಜನರು ಬಂಜೆಯೆನ್ನುವುದಿಲ್ಲವೇ? ಎನ್ನುತ್ತಾ ಕುದುರೆಯನ್ನು ಎಳೆದುಕೊಂಡು ಬಾಳೆಯ ಗಿಡವೊಂದಕ್ಕೆ ಬಿಗಿದನು. ಲವನ ಸ್ವಾಭಿಮಾನದ ಗುಣ, ತನ್ನ ಶೌರ್ಯದ ಮೇಲೆ ಇದ್ದ ನಂಬಿಕೆ. ತನ್ನ ಮಾತೆಯಾದ ಸೀತಾಮಾತೆಯ ಗೌರವವನ್ನು ಹೆಚ್ಚಿಸುವುದು. ರಾಮನು ತಂದೆಯೆಂದು ತಿಳಿದ ಲವ ಆತನ ಗರ್ವವನ್ನು ಅಳಿಸಬೇಕೆಂದು ಲವನು ಕ್ರೋಧಗೊಂಡು ಯಜ್ಞಾಶ್ವವನ್ನು ಕಟ್ಟಿದನು.
2) ಲವನ ನಡವಳಿಕೆ ಮೆಚ್ಚುಗೆಯಾಯೆತೆ? ಏಕೆ?
‘ಲವನ’ ನಡವಳಿಕೆ ಎಲ್ಲರೂ ಮೆಚ್ಚುವಂತಹುದು. ಬಾಲ್ಯದಲ್ಲಿಯೇ ಆತನ ಸ್ವಾಭಿಮಾನ, ವೀರೋಚಿತ ಮಾತುಗಳು, ಆತನ ಶೌರ್ಯ, ತನ್ನ ತಾಯಿಯ ಬಗ್ಗೆ ಇದ್ದ ಗೌರವ ಎಂಥಹವರನ್ನು ಬೆರಗುಗೊಳಿಸುತ್ತದೆ. ವಾಲ್ಮೀಕಿ ಮಹರ್ಷಿಗಳು ವರುಣನ ಆಹ್ವಾನಕ್ಕೆಂದು ಹೋದ ಸಮಯದಲ್ಲಿ ಆಶ್ರಮದ ಸುಂದರ ಉದ್ಯಾನವನವನ್ನು ನೋಡಿಕೊಳ್ಳುವ ಜವಾಬ್ದಾರಿ ಈತನದಾಗಿರುತ್ತದೆ. ಇದೇ ಸಮಯದಲ್ಲಿ ಯಜ್ಞಾಶ್ವವು ವಾಲ್ಮೀಕಿ ಆಶ್ರಮದೊಳಕ್ಕೆ ನುಗ್ಗಿ ಗರಿಕೆ ಹುಲ್ಲು ಮೇಯುತ್ತಿರುವುದನ್ನು ಕಂಡು ಮೊದಲು ಆಶ್ಚರ್ಯ ಹಾಗೂ ಕೋಪ ಬರುವುದು.
ಮುನಿಕುಮಾರರೊಡನೆ ಕುದುರೆಯ ಬಳಿ ಬಂದು ನೋಡಲು ಅದರ ಮೇಲೆ ಬರೆದ ಲೇಖನವನ್ನು ಓದಿ ಲವನು ಮತ್ತಷ್ಟು ಕೋಪಗೊಳ್ಳುವುದು ಸಹಜವಾಗಿಯೇ ಇತ್ತು. ಏಕೆಂದರೆ ರಾಮನಷ್ಟೇ ಶೌರ್ಯದ ಗುಣ ಆತನಲ್ಲಿ ರಕ್ತಗತವಾಗಿ ಬಂದಿತ್ತು. ಅಲ್ಲದೇ ಸೀತಮಾತೆಯ ಸದ್ನಡತೆ ಋಷಿಗಳ ಆಶೀರ್ವಾದ, ಸಕಲ ಶಾಸ್ತ್ರಗಳ ಅರಿವು, ಸಮಯಕ್ಕೆ ತಕ್ಕ ಸದಾಲೋಚನೆಗಳು ಬಾಲಕನಾದ ಲವನಲ್ಲಿ ಕಾಣಬಹುದು. ಮುನಿಕುಮಾರರೊಡನೆ ನಡೆದ ಸಂವಾದದಿಂದ ಆತನ ವೀರೋಚಿತ ಗುಣಗಳು ಮನದಟ್ಟಾಗುತ್ತವೆ. ಮುನಿಕುಮಾರರು “ರಾಮನ ಕಡೆಯವರು ಬಂದು ಬಡಿಯುವರು” ಎಂಬ ಮಾತು ಕೇಳಿದ ಲವನು ತಕ್ಷಣವೇ ಬಿಲ್ಲನ್ನು ಹೆದೆಗೇರಿಸಿ ‘ಜೀಗೆಯ್ಯ’ ವುದಕ್ಕೆ ಸಿದ್ದನಾದುದು ಆತನ ಸ್ವಾಭಿಮಾನ, ಶೌರ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ಸ್ವಾಭಿಮಾನಿ, ವೀರ ಲವನ ನಡವಳಿಕೆ ಎಲ್ಲರಿಗೂ ಮೆಚ್ಚುಗೆಯಾಗುವುದು.
ಈ) ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ :
1) ‘ರಥೋದ್ವಹನ ಸೊಲ್ಲೇಳಿ ನಮಿಸಲ್’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಲಕ್ಷ್ಮೀಶ” ಕವಿಯು ರಚಿಸಿರುವ “ವೀರ ಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಲಕ್ಷ್ಮೀಶ” ನ ಜೈಮಿನಿ ಭಾರತದಿಂದ ಆರಿಸಲಾಗಿದೆ.
ಸಂದರ್ಭ: ಯಜ್ಞಾಶ್ವವು ದೇಶ, ನಗರ, ಉಪವನಗಳೆಲ್ಲೆಡೆಯಲ್ಲಿಯೂ ಸಂಚರಿಸುತ್ತಿರಲು ಕೆಲವರು ನೃಪನಿಗೆ ಹೆದರಿ ನಮಸ್ಕರಿಸುತ್ತಿದ್ದರೆಂಬ ಸಂಗತಿಯನ್ನು ಸೂಚಿಸುವ ಸಂದರ್ಭ ಇದಾಗಿದೆ.
ವಿವರಣೆ: “ಯಜ್ಞದ ಕುದುರೆ ಬಂದ ನಗರದ ರಾಜರು ಅದರ ಸದ್ದು ಕೇಳುತ್ತಲೇ ಬಂದು ಶಕ್ತಿಭಾವದಿಂದ ನಮಿಸಿ ಅದಕ್ಕೆ ಶರಣಾಗುವುದರ ಮೂಲಕ ಶ್ರೀರಾಮನಿಗೆ ಶರಣಾಗುತ್ತಿದ್ದರು” ಎಂಬುದು ಈ ವಾಕ್ಯದ ಸ್ವಾರಸ್ಯವಾಗಿದೆ.
ವಿಶೇಷತೆ: ಯಜ್ಞಾಶ್ವದ ವಿಶೇಷತೆ, ಹಾಗೂ ಶ್ರೀರಾಮನ ಬಗ್ಗೆ ಇದ್ದ ಭಕ್ತಿಭಾವ ಇಲ್ಲಿನ ವಾಕ್ಯದಲ್ಲಿ ಸ್ಪಷ್ಟವಾಗಿದೆ.
2) “ತನ್ನ ಮಾತೆಯಂ ಸರ್ವಜನಮುಂ ಬಂಜೆಯನ್ನ -ದಿರ್ದಪುದೆ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಲಕ್ಷ್ಮೀಶ” ಕವಿಯು ರಚಿಸಿರುವ “ವೀರ ಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಲಕ್ಷ್ಮೀಶ” ನ ಜೈಮಿನಿ ಭಾರತದಿಂದ ಆರಿಸಲಾಗಿದೆ.
ಸಂದರ್ಭ: ಲವನು ಯಜ್ಞಾಶ್ವದ ಲೇಖನವನ್ನು ಓದಿ, ತನ್ನ ಉತ್ತರಿಯವನ್ನೆ ಕುದುರೆಯ ಕುತ್ತಿಗೆಗೆ ಕಟ್ಟಿ ಬಾಳೆಯ ಗಿಡದ ಕಡೆಗೆ ಅದನ್ನು ಕಟ್ಟಲು ಹೋಗುತ್ತಿರಲು, ಮುನಿಕುಮಾರರು ಹೆದರಿ ಬೇಡ-ಬೇಡ, ಬಿಟ್ಟುಬಿಡು ಕುದುರೆಯನ್ನು ಎಂದಾಗ ವೀರಲವನು ಈ ಮಾತನ್ನು ಹೇಳಿದನು.
ವಿವರಣೆ: ಬಿಟ್ಟುಬಿಡು ಕುದುರೆಯನ್ನು ಎಂದ ಮುನಿಕುಮಾರರ ಮಾತಿಗೆ ಲವನು ನಾನು ಈ ಕುದುರೆ ಬಿಟ್ಟು ಬಿಟ್ಟರೆ, ನನ್ನ ಮಾತೆಯನ್ನು ಎಲ್ಲಾ ಜನರು ಬಂಜೆ ಎನ್ನದಿರುವರೇ? ಎಂಬುದಾಗಿ ನುಡಿಯುವ ಮಾತೆ ಈ ವಾಕ್ಯದ ಸ್ವಾರಸ್ಯ.
ವಿಶೇಷತೆ: ಲವನಿಗೆ ತನ್ನ ತಾಯಿಯ ಮೇಲಿನ ಪ್ರೀತಿ, ಆದರ, ಗೌರವ ಭಾವನೆಗಳು ಅದಕ್ಕೆ ತಿಲಕವಿಟ್ಟಂತೆ ಆತನ ಶೌರ್ಯ ಈ ವಾಕ್ಯದಲ್ಲಿ ಮೂಡಿಬಂದಿದೆ.
3) “ಅರಸುಗಳ ವಾಜಿಯಂ ಬಿಡು”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಲಕ್ಷ್ಮೀಶ” ಕವಿಯು ರಚಿಸಿರುವ “ವೀರ ಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಲಕ್ಷ್ಮೀಶ” ನ ಜೈಮಿನಿ ಭಾರತದಿಂದ ಆರಿಸಲಾಗಿದೆ.
ಸಂದರ್ಭ: ಲವನು ಕುದುರೆಯ ಲೇಖನವನ್ನು ಓದಿ ತನ್ನ ಉತ್ತರಿಯಿಂದ ಕುದುರೆಯನ್ನು ಕಟ್ಟಿ ಬಾಳೆಯ ಗಿಡಕ್ಕೆ ಬಿಗಿಯಲು ಹೊರಟಾಗ ಮುನಿಕುಮಾರರು ಲವನಿಗೆ ಈ ಮಾತನ್ನು ಹೇಳಿದರು.
ವಿವರಣೆ: ಲವನಿಗೆ ಕುಮಾರರು ಕುದುರೆಯನ್ನು ಬಿಟ್ಟುಬಿಟು, ಇದು ಶ್ರೀರಾಮನ ಕುದುರೆ, ಆ ರಾಜನ ಕಡೆಯವರು ಬಂದು ನಮ್ಮನ್ನು ಬಡಿಯುವರು ಎಂಬುದಾಗಿ ಹೇಳಿದುದೇ ಈ ವಾಕ್ಯದ ಸ್ವಾರಸ್ಯವಾಗಿದೆ.
ವಿಶೇಷತೆ: ಮುನಿಕುಮಾರರ ಸ್ವಭಾವ ಹಾಗೂ, ರಾಜರ ಸ್ವಭಾವ ಈ ವಾಕ್ಯದಿಂದ ತಿಳಿದುಬರುತ್ತದೆ.
4) “ಜಾನಕಿಯ ಮಗನಿದಕೆ ಬೆದರುವನೆ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಲಕ್ಷ್ಮೀಶ” ಕವಿಯು ರಚಿಸಿರುವ “ವೀರ ಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಲಕ್ಷ್ಮೀಶ” ನ ಜೈಮಿನಿ ಭಾರತದಿಂದ ಆರಿಸಲಾಗಿದೆ.
ಸಂದರ್ಭ: ಮುನಿಕುಮಾರರು ಈ ಕುದುರೆ ರಾಜನದು ಬಿಟ್ಟುಬಿಡು ಎಂದಾಗ ವೀರಲವನು ಈ ವಾಕ್ಯವನ್ನು ಹೇಳಿದನು.
ವಿವರಣೆ: ‘ಮುನಿಕುಮಾರರ ಮಾತಿಗೆ ಉತ್ತರವಾಗಿ ವೀರಲವನು ನಾನು ಜಾನಕಿ ಮಾತೆಯ ವೀರಮಾತೆಯ ವೀರಪುತ್ರನು, ನಾನು ಆ ರಾಜರಿಗೆಲ್ಲಾ ಹೆದರುವುದಿಲ್ಲ’ ಎಂಬುದಾಗಿ ನುಡಿದಿರುವುದೇ ಈ ವಾಕ್ಯದ ಸ್ವಾರಸ್ಯವಾಗಿದೆ.
ವಿಶೇಷತೆ: ವೀರಮಾತೆಗೆ ವೀರೋಚಿತವಾಗಿ ಆಡುವ ನುಡಿಮುತ್ತುಗಳು ಇದಾಗಿವೆ.
ಉ) ಹೊಂದಿಸಿ ಬರೆಯಿರಿ.
1) ದೇವನೂರು | ಅ) ಅಬ್ದಿಪ |
2) ಕೌಸಲ್ಯ | ಆ) ಅಶ್ವ |
3) ವರುಣ | ಇ) ಲಕ್ಷ್ಮೀಶ |
4) ವಾಲ್ಮೀಕಿ | ಈ) ರಾಮ |
5) ತುರಂಗ | ಉ) ಮುನಿ |
ಉತ್ತರ : 1)-ಇ, 2)-ಈ, 3)-ಅ, 4)-ಉ, 5)-ಆ
ಭಾಷಾ ಚಟುವಟಿಕೆ
1) ವಿಗ್ರಹಿಸಿ ಸಮಾಸವನ್ನು ಹೆಸರಿಸಿ:
1) ಸೋಲ್ಲೇಳಿ = ಸೂಲ್ + ಕೇಳಿ = ಕ್ರಿಯಾಸಮಾಸ
2) ನಲ್ಲುದುರೆ = ನಲ್ + ಕುದುರೆ = ಕರ್ಮಧಾರೆಯ ಸಮಾಸ
) ಬಿಲ್ಗೊಂಡು = ಬಿಲ್ + ಕೊಂಡು =ತತ್ಪುರುಷ ಸಮಾಸ
4) ಬಿಲ್ಲಿರುವನೇರಿಸಿ = ಬಿಲ್ + ತಿರುವನ್ + ಏರಿಸಿ =ಕ್ರಿಯಾ ಸಮಾಸ
5) ಪೂದೋಟ = ಪೂವಿನ + ತೋಟ = ತತ್ಪುರುಷ ಸಮಾಸ.
2) ತತ್ಸಮ-ತದ್ಭವ ಬರೆಯಿರಿ :
ತತ್ಸಮ | ತದ್ಭವ |
---|---|
1) ವೀರ | ಬೀರ |
ಯಜ್ಞ | ಜನ್ನ |
ವಂದ್ಯಾ | ಬಂಜೆ |
3) ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ :
1) ಚರಿಸುತದ್ವರದ = ಚರಿಸುತ + ಅಧ್ವರದ = ಸವರ್ಣಧೀರ್ಘಸಂಧಿ
2) ನಿಜಾಶ್ರಮ = ನಿಜ + ಆಶ್ರಮ = ಸವರ್ಣಧೀರ್ಘಸಂಧಿ
3) ಲೇಖನವನೋದಿ = ಲೇಖನವನ್ನು + ಓದಿ, ಲೇಖನ + ಅನ್ನು + ಓದಿ = ಆಗಮಸಂಧಿ
4) ತೆಗೆದುತ್ತತರೀಯಮಂ = ತೆಗೆದು + ಉತ್ತರಿಯಮಂ =ಸವರ್ಣಧೀರ್ಘಸಂಧಿ
5) ಬೇಡಬೇಡರಸುಗಳ = ಬೇಡ + ಬೇಡ + ಅರಸುಗಳ = ಲೋಪಸಂಧಿ
6) ನಿಂತಿರ್ದನು = ನಿಂತು + ಇರ್ದನು = ಯಣ್ ಸಂಧಿ
4) ಪ್ರಸ್ತಾರ ಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ:

ಲಕ್ಷಣ :
ಒಂದು ಮತ್ತು ಎರಡನೇ ಪಾದಗಳಲ್ಲಿ ಐದು ಮಾತ್ರೆಗಳ ನಾಲ್ಕು ಗಣಗಳು, ಮೂರನೇ ಪಾದದಲ್ಲಿ ಐದು ಮಾತ್ರೆಗಳ ಆರುಗಣ ಹಾಗೂ ಒಂದು ಗುರು.
ಈ ಪದ್ಯವನ್ನು ಕಂಠಪಾಠ ಮಾಡಿ :
ತೆಗೆದು___________ನಿಂತಿರ್ದನು|
ಚಟುವಟಿಕೆ
ಅ. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಉರ್ವಿಯೊಳ್ ಕೌಸಲ್ಯ ಪಡೆದ ಕುವರಂ ರಾಮ
ನೊರ್ವನೇ ವೀರನಾತನ ಯಜ್ಞತುರಗಮಿದು
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ |
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ
ಗುರ್ವ ತೋಳಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ॥
೨. ತೆಗೆದುತ್ತ ರೀಯಮಂ ಮುರಿದು ಕುದು ರೆಯಗಳಕೆ
ಬಿಗಿದು ಕದ ಳೀದ್ರುಮಕೆ ಕಟ್ಟಲೆ ಮುನಿಸುತರ್!
ಮಿಗೆ ನಡುಗಿ ಬೇಡಬೇ ಡರಸುಗಳ ವಾಜಿಯಂ
ಬಿಡು ಬಡಿವ ರೆಮ್ಮನೆನ ಲು|
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ಲಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು
ಹೆಚ್ಚಿನ ಅಧ್ಯಯನಕ್ಕಾಗಿ
1) ಈ ಕೆಳಗಿನ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ತಿಮಾಡಿ :
1) ಲಕ್ಷ್ಮೀಶಕವಿ_________ನವರು.
ಅ) ದೇವನೂರು
ಆ) ತುಮಕೂರು
ಇ) ಮೈಸೂರು
ಈ) ಬೆಂಗಳೂರು
2) ಲಕ್ಷ್ಮೀಶ ಕವಿಗೆ ಇರುವ ಬಿರುದು____________
ಅ) ರೂಪಕ ಚಕ್ರವರ್ತಿ
ಆ) ಉಪಮಾಲೋಲ
ಇ) ನಾಡೋಜ
ಈ) ಸಂಸಾರ ಸಾರೋದಯ
3) ಲವನ ತಾಯಿ__________
ಅ) ಕೌಸಲ್ಯ
ಆ) ಸುಮಿತ್ರ
ಇ) ಸರಸ್ವತಿ
ಈ) ಸೀತೆ
4) ಯಜ್ಞಾಶ್ವವು___________ಆಶ್ರಮವನ್ನು ಪ್ರವೇಶಿಸಿತು.
ಅ) ವಸಿಷ್ಟ
ಆ) ವಿಶ್ವಾಮಿತ್ರ
ಇ) ವ್ಯಾಸ
ಈ) ವಾಲ್ಮೀಕಿ
5) ಯಜ್ಞಾಶ್ವವನ್ನು ಕಟ್ಟಿಹಾಕಿದವರು___________
ಅ) ಲವ
ಆ) ಕುಶ
ಇ) ವಾಲ್ಮೀಕಿ
ಈ) ಶತ್ರುಜ್ಞ
ಉತ್ತರಗಳು:
1)-ಅ
2)-ಆ
3)-ಈ
4)-ಈ
5)-ಅ
2) ಹೊಂದಿಸಿ ಬರೆಯಿರಿ.
ಅ | ಆ |
---|---|
1) ಭೀಮ | ಲಕ್ಷಣ |
2) ಅರ್ಜುನ | ಕುಶ |
3) ಲವ | ಬಬ್ರುವಾಹನ |
4) ಶ್ರೀರಾಮ | ಘಟೋತ್ಕಚ |