10th Standard Vasantha Mukha Toralilla Kannada Notes Question Answer Summery Mcq Pdf Download Kannada Medium Karnataka State Syllabus 2025, ವಸಂತ ಮುಖ ತೋರಲಿಲ್ಲ ಪದ್ಯದ ಸಾರಾಂಶ ಪ್ರಶ್ನೋತ್ತರಗಳು, 10th kannada puraka pata question answer pdf, ವಸಂತ ಮುಖ ತೋರಲಿಲ್ಲ ಪಾಠದ ಪ್ರಶ್ನೋತ್ತರ, kseeb solutions for class 10 kannada puraka pata 1,10th vasantha mukha toralilla summary in kannada, SSLC Vasanta Mukha Toralilla Supplementary in Kannada, mcq 10th vasantha muka toralilla kannada explanation 10ನೇ ತರಗತಿ ವಸಂತ ಮುಖ ತೋರಲಿಲ್ಲ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು Pdf.

10ನೇ ತರಗತಿ ವಸಂತ ಮುಖ ತೋರಲಿಲ್ಲ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು
ಲೇಖಕರ ಪರಿಚಯ
ಡಾ. ವಿಜಯಶ್ರೀ ಸಬರದ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಬಹುಮುಖ್ಯ ಕವಿಯತ್ರಿ 1957ರಲ್ಲಿ ಬೀದರ್‌ನಲ್ಲಿ ಜನಿಸಿದರು. ಉರಿಲಿಂಗ, ಹೂವಿನ ತೇರನೇರಿ ನಾಟಕಗಳು. ಸಾಹಿತ್ಯ ಮತ್ತು ಮಹಿಳೆ, ಜಾನಪದ ಮತ್ತು ಮಹಿಳೆ ಮುಂತಾದ ವಿಮರ್ಶಾ ಸಂಕಲನಗಳು. ಜ್ವಲಂತ, ಲಕ್ಷಣ ರೇಖೆ ದಾಟಿದವರು, ಮುಗಿಲು ಮಲ್ಲಿಗೆ ಕವನ ಸಂಕಲನಗಳನ್ನು ರಚಿಸಿದ್ದಾರೆ. ರತ್ನಮ್ಮ ಹೆಗ್ಗಡೆ ಬಹುಮಾನ, ಮೈಸೂರು ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಂದ ಪುರಸ್ಕೃತರಾಗಿದ್ದು., ಹುಲ್ಬರ್ಗಾ ವಿವಿ ಮತ್ತು ಮಹಿಳಾ ವಿವಿಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ, ಸಿಂಡಿಕೇಟ್ ಸದಸ್ಯರಾಗಿ ಧಾರವಾಡದ ಕಲಾ ನಿಕಾಯದ ಡೀನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಮಹಿಳಾ ವಿ.ವಿ. ವಿಸ್ತರಣಾ ಕೇಂದ್ರ ಮಂಡ್ಯ ಇಲ್ಲಿ ವಿಶೇಷ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಭ್ಯಾಸ
1. ಪುಟ್ಟ ಪೋಲಿ ಏನು ಮಾಡುತ್ತಿದ್ದಾನೆ?
ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.
2. ಅಮ್ಮ ಎಲ್ಲಿ ಮಲಗಿದ್ದಾಳೆ?
ಗುಡಿಸಲಿಲ್ಲ ಅಮ್ಮ ಮಲಗಿದ್ದಾಳೆ.
3. ಯಾರಿಗೆ ವಸಂತ ಮುಖ ತೋರಲಿಲ್ಲ?
ಗುಡಿಸಲಲ್ಲಿ ಇರುವ ಪುಟ್ಟ ಪೋರಿಗೆ ವಸಂತ ಮುಖ ತೋರಲಿಲ್ಲ.
4. ಪುಟ್ಟಿಯ ಪ್ರಶ್ನೆಗಳೇನು?
ಗುಡಿಸಿಲೊಳಗೆ ವಸಂತ ಬರಲು ಹೆದರಿದನೋ ಅಥವಾ ಚಿಂದಿ ಬಟ್ಟೆ ಉಟ್ಟ ಬಡವರೆಂದು ಬರಲಿಲ್ಲವೋ ಮುಂತಾಗಿ ಪ್ರಶ್ನಿಸಿಕೊಳ್ಳುತ್ತಾಳೆ.
5. ಈ ಕವನದಲ್ಲಿ ಪ್ರಕೃತಿಯ ಸಂಭ್ರಮದ ಬಗ್ಗೆ ಹೇಗೆ ವ್ಯಕ್ತವಾಗಿದೆ?
ಚೈತ್ರ ಬರುವಾಗ ವಸಂತ ಋತು ಬಂದಾಗ ಮಾವಿನ ಮರಗಳು ಚಿಗುರು ಹಕ್ಕಿಗಳಿಗೆ ಆಶ್ರಯಿಸುತ್ತವೆ. ಹಾಡುವ ಕೋಗಿಲೆಗಳು ಸಂತೋಷದಿಂದ ಹಾಡುತ್ತವೆ. ಕಡಲು ಉಕ್ಕಿ ಹರಿಯುತ್ತದೆ. ಮುಂತಾಗಿ ಈ ಕವನದಲ್ಲಿ ಪ್ರಕೃತಿ ಸಂಭ್ರಮಿ ಸುತ್ತವೆ.