10th Standard Sankalpa Geete Kannada Notes Question Answer Mcq Pdf Download, Karnataka State Syllabus 10th Kannada Notes Sankalpa Geete, Sankalpa Geethe Question Answer in Kannada, Sankalpa Geethe Kannada Kseeb Solutions For Class 10 Kannada, Poem 1 Notes in Kannada Siri Kannada Text Book Class 10 Solutions Padya Chapter 1 Sankalpa Geete, 10ನೇ ತರಗತಿ ಸಂಕಲ್ಪಗೀತೆ ನೋಟ್ಸ್ ಪ್ರಶ್ನೋತ್ತರಗಳು.

ಲೇಖಕರ ಪರಿಚಯ :
ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧವಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರು ಕ್ರಿ.ಶ.1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.
‘ಮೈಸೂರು, ಉಸ್ಮಾನಿಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರು -” ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಶ್ರೀಯುತರು ರಚಿಸಿರುವ ‘ಕಾವ್ಯಾರ್ಥ ಚಿಂತನ ಕೃತಿಗೆ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳು ಶ್ರೀಯುತರನ್ನು ಗೌರವ ಡಾಕ್ಟರೇಟ್ ಪದವಿ ಹಾಗೂ “ರಾಷ್ಟ್ರಕವಿ” ಅಭಿದಾನಕ್ಕೆ ಪಾತ್ರರಾಗಿದ್ದಾರೆ.
1992 ರಲ್ಲಿ ದಾವಣಗೆರೆಯಲ್ಲಿ ಸಮಾವೇಶಗೊಂಡ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ದಿನಾಂಕ 23-12-2013 ರಂದು ವಿಧಿವಶರಾದರು.
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1) ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಬಿರುಗಾಳಿಗೆ ಸಿಲುಕುವ ನಾವೆಯನ್ನು ಎಚ್ಚರದಲ್ಲಿ ಮುನ್ನಡೆಸಬೇಕು.
2) ನದಿಜಲಗಳು ಏನಾಗಿವೆ?
ನದಿಜಲಗಳು ಕಲುಷಿತವಾಗಿವೆ.
3) ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ನದಿಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4) ಕಾಡು ಮೇಡುಗಳ ಸ್ಥಿತಿ ಹೇಗಿದೆ?
ಕಾಡು ಮೇಡುಗಳ ಸ್ಥಿತಿಯೆಲ್ಲಾ ಬರಡಾಗಿದೆ.
5) ಯಾವ ಎಚ್ಚರದೊಳು ಬದುಕಬೇಕಿದೆ?
ಎಲ್ಲಾ ಮತಗಳು ಒಂದೇ. ಅದರ ಪಥಗಳು ಬೇರೆ-ಬೇರೆಯಾಗದಂತೆ ಎಚ್ಚರದೊಳು ಬದುಕಬೇಕು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1) ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಾಗಿದೆ?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಪ್ರೀತಿ ಎಂಬ ಹಣತೆಯ ಬೆಳಕನ್ನು ಹಚ್ಚಿ ಆ ಬೆಳಕಿನಲ್ಲಿ ಹಡಗನ್ನು ಮುನ್ನಡೆಸಬೇಕಾಗಿದೆ.
2) ಕಾಡುಗಳು ಹೇಗೆ ಮುಟ್ಟಬೇಕಿದೆ?
ಕಾಡುಗಳಿಗೆ ವಸಂತವಾಗಿ ಮುಟ್ಟಬೇಕಿದೆ. ಏಕೆಂದರೆ ವಸಂತ ಮಾಸದಲ್ಲಿಯೂ ಕಾಡುಗಳು ಅಂದರೆ ಕಾಡಿನ ಮರಗಳು ಹಸಿರಿನಿಂದ ಕಂಗೊಳಿಸುತ್ತವೆ. ಆ ಹಸಿರಿನ ಮಧ್ಯದಲ್ಲಿ ವಾಸವಾಗಿರುವ ಹಕ್ಕಿಗಳ ಕಲರವವೂ ಕವಿಗೆ ಇಂಪನ್ನು ಕೊಡುತ್ತವೆ.
3) ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಮನುಷ್ಯನ ನಡುವೆ ಭಿನ್ನಾಭಿಪ್ರಾಯಗಳಿಂದ ಸ್ನೇಹವೆಂಬುದು ಮುರಿದುಬಿತ್ತು. ಅಲ್ಲಿ ಭಿನ್ನಾಭಿಪ್ರಾಯಗಳ ಅಡ್ಡಗೋಡೆಗಳ ಗೋಡೆಯನ್ನು ಕೆಡವಿ ಹೊಸಭರವಸೆಗಳ ಸೇತುವೆಯಾಗಬೇಕಾಗಿದೆ.
4) ನಾಳಿನ ಕನಸನ್ನೂ ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ನಮ್ಮ ಕಣ್ಣುಗಳಲ್ಲಿ ತುಂಬಿರುವ ಭಯ-ಸಂಶಯಗಳನ್ನು ಹೋಗಲಾಡಿಸಬೇಕು. ಏಕೆಂದರೆ ಇದರಿಂದಾಗಿ ನಮ್ಮ ಕಣ್ಣುಗಳು ಮಸುಕಾಗುತ್ತವೆ. ಈ ಮಸುಕಾದ ಕಣ್ಣುಗಳಲ್ಲಿ ಪ್ರಕಾಶಮಾನವಾಗಬೇಕಾದರೆ ಭಯ ಸಂಶಯಗಳ ಬದಲಾಗಿ ಹೊಸ ಕನಸನ್ನು ನಮ್ಮ ಕಣ್ಣುಗಳ ಮೂಲಕ ಕಾಣಬೇಕಾಗಿದೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1) ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯವಾಗಿದೆ?
ಜೀವನದಲ್ಲಿ ಧನಾತ್ಮಕ ಭಾವನೆಯನ್ನು ಹೊಂದಿರಬೇಕೆಂದು, ಹಾಗೂ ಮನದಲ್ಲಿ ಧೃಢ ಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸ ಸಂಕಲ್ಪವನ್ನು ಕೈಗೊಳ್ಳಬೇಕು. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ನಮ್ಮ ಬಲ ವರ್ಧಿಸುತ್ತದೆ. ಆದ್ದರಿಂದ ಐಕ್ಯತೆಯಿಂದ ಇರುವ ಸಂಕಲ್ಪವನ್ನು ಕೈಗೊಳ್ಳಬೇಕು.
ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢತೆಯನ್ನು ನಿಷ್ಠೆಯನ್ನು ತುಂಬುವುದರ ಮೂಲಕ ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಬೇಕು. ಈವೆಲ್ಲವನ್ನು ನಾವು ಸಾಧಿಸಲು ‘ಪೀತಿ’ ಎಂಬ ಹಣತೆಯನ್ನು ಹಚ್ಚಿ, ಭಯವೆಂಬ-ಅವಿಶ್ವಾಸವೆಂಬ ಕತ್ತಲೆಯನ್ನು ದೂರಮಾಡುವ ದೃಢ ಸಂಕಲ್ಪ ಕೈಗೊಳ್ಳಬೇಕೆಂದು ಕವಿ ಶಿವರುದ್ರಪ್ಪನವರ ಆಶಯವಾಗಿದೆ.
2) ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.
ಜೀವನದಲ್ಲಿ ನಾವು ಯಾವಾಗಲೂ ಧನಾತ್ಮಕ ಭಾವನೆಯನ್ನು, ಧೃಡಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದರು ಆತ್ಮವಿಶ್ವಾಸದಿಂದ ಅದನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಬೇಕು. ಸಂಕಲ್ಪ ನಿಷ್ಠೆಯಿಂದ ಯಾವುದೇ ಕಾರ್ಯವನ್ನು ಅನುಷ್ಠಾನಗೊಳಿಸಿದರು ಅದರಲ್ಲಿ ಯಶಸ್ಸು ಲಭಿಸುತ್ತದೆ. ಸಂಕಲ್ಪದತ್ತ ದೃಢ ನಿರ್ಧಾರದಿಂದ ಅನುಷ್ಠಾನಗೊಳಿಸಿದರೆ “ಅಸಾಧ್ಯವಾದುದು ಯಾವುದೂ ಇಲ್ಲ”.
ದೃಢ ಸಂಕಲ್ಪದಿಂದ ಅನುಷ್ಠಾನಗೊಳಿಸುವುದರೊಂದಿಗೆ ನಾವು ಯಶಸ್ಸನ್ನು ಕಾಣಬಹುದೆಂದು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿದ್ದಾರೆ.
ಈ) ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ:-
1) “ಪ್ರೀತಿಯ ಹಣತೆಯ ಹಟ್ಟೋಣ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಡಾ॥ ಜಿ.ಎಸ್.ಶಿವರುದ್ರಪ್ಪ ನವರು ರಚಿಸಿರುವ “ಸಂಕಲ್ಪಗೀತೆ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಎದೆತುಂಬಿ ಹಾಡಿದೆನು” ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನೋವು-ಭಿನಾಭಿಪ್ರಾಯ, ವೈಮನಸ್ಯ ಎಂಬ ಕತ್ತಲೆ ಇದ್ದಾಗ ಪ್ರೀತಿ ಎಂಬ ಹಣತೆ ಹಚ್ಚಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ಆದ್ದರಿಂದಲೇ ಕವಿಯು, ಸುತ್ತಲೂ ಕತ್ತಲೆ ಕವಿದಿದ್ದಾಗ ಪ್ರೀತಿಯ ಹಣತೆ ಹಚ್ಚಬೇಕು ಎಂದು ಕರೆಕೊಟ್ಟಿದ್ದಾರೆ.
ವಿಶೇಷತೆ: ಪ್ರೀತಿಯಿಂದ ನಾವು ಏನು ಬೇಕಾದರೂ ಗೆಲ್ಲಬಹುದು ಎಂಬ ಸತ್ಯತೆಯನ್ನು ಇಲ್ಲಿ ಹೇಳಿದ್ದಾರೆ. ಸರಳವಾದ ಕನ್ನಡ ಭಾಷೆಯಲ್ಲಿ ವಿವರಿಸಿದ್ದಾರೆ.
2) “ಮುಂಗಾರಿನ ಮಳೆಯಾಗೋಣ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಡಾ। ಜಿ.ಎಸ್.ಶಿವರುದ್ರಪ್ಪ” ನವರು ರಚಿಸಿರುವ “ಸಂಕಲ್ಪಗೀತೆ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಎದೆತುಂಬಿ ಹಾಡಿದೆನು” ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನದಿಯ ಜಲಗಳು ಬತ್ತಿದಾಗ ಅದು ಕಲುಷಿತಗೊಳ್ಳುತ್ತದೆ, ಆಗ ಆಗಬೇಕಾಗಿರುವುದರ ಬಗ್ಗೆ ಕವಿ ಹೇಳುತ್ತಾ ಈ ವಾಕ್ಯವನ್ನು ಬರೆದಿದ್ದಾರೆ.
ವಿವರಣೆ: ನದಿಯ ಜಲಗಳು ಬತ್ತಿ ಅವು ಕಲುಷಿತವಾಗಲು ಬಿಡದೆ ನಾವು ಮುಂಗಾರಿನಲ್ಲಿ ಬರುವ ಮಳೆಯಾಗಿ ನದಿಗಳನ್ನು ತುಂಬಿ ಹರಿಯುವಂತೆ ಮಾಡಬೇಕು.
ವಿಶೇಷತೆ: ಕಲುಷಿತಗೊಳ್ಳುವುದು ಎಂದರೆ ಭಿನಾಭಿಪ್ರಾಯ ಬರುವುದು ಅಥವಾ ವೈಮನಸ್ಸಿನಿಂದ ಮನಸ್ಸು ಕಲುಷಿತಗೊಳ್ಳುವುದಕ್ಕೆ ಮೊದಲು ಕಲುಷಿತವನ್ನು ಮುಂಗಾರು ಮಳೆ ಸ್ವಚ್ಚಗೊಳಿಸುತ್ತದೆ.
3) “ಹೊಸ ಭರವಸೆಗಳ ಕಟ್ಟೋಣ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಡಾ॥ ಜಿ.ಎಸ್.ಶಿವರುದ್ರಪ್ಪ” ನವರು ರಚಿಸಿರುವ “ಸಂಕಲ್ಪಗೀತೆ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಎದೆತುಂಬಿ ಹಾಡಿದೆನು” ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಜೀವನದಲ್ಲಿ ಸಂಕಲ್ಪವನ್ನು ಅನುಷ್ಠಾನಕ್ಕೆ ತರಲು ನಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ವಿವರಣೆ : ಹೊಸ ಭರವಸೆಗಳು, ಜೀವನದಲ್ಲಿ ಮೂಡಿದಾಗ ನಾವು ಮತ್ತೆ ಕೆಳಗೆ ಬೀಳದಂತೆ ಹೊಸ ಭರವಸೆಯನ್ನು ಕಟ್ಟೋಣ ಎಂಬ ಹೊಸ ಚೈತನ್ಯವನ್ನು ಕಟ್ಟೋಣ ಎಂಬ ಕರೆಯನ್ನು ಕೊಟ್ಟಿದ್ದಾರೆ.
ವಿಶೇಷತೆ : ನಾವು ಜೀವನ ಪಥದಲ್ಲಿ ಸಾಗಲು ಹೊಸ ಭರವಸೆ ನಮಗೆ ಅಗತ್ಯ ಎಂಬುದನ್ನು ಕವಿ ಹೇಳಿದ್ದಾರೆ.
4) “ಹೊಸ ಎಚ್ಚರದೊಳು ಬದುಕೋಣ”.
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಸಂಕಲ್ಪ ಗೀತೆ’ಯಿಂದ ಆರಿಸಲಾಗಿದೆ. ಇದನ್ನು ‘ಎದೆ ತುಂಬಿ ಹಾಡಿದೆನು’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಾವು ಜೀವನ ಪಥದಲ್ಲಿ ಸಾಗುವಾಗ ಎಚ್ಚರದಿಂದ ಸಾಗಬೇಕೆಂಬ ಸಲಹೆಯನ್ನು ಕೊಡುತ್ತಾ ಈ ವಾಕ್ಯವನ್ನು ಕವಿ ಹೇಳಿದ್ದಾರೆ.
ವಿವರಣೆ : ಒಂದೇ ಪಥದಲ್ಲಿ ಹಲವು ಮತಗಳು ಸಾಗುವಾಗ ನಾವು ಎಚ್ಚರದಿಂದ ಸಾಗಬೇಕು ಎಂಬ ಮಾರ್ಗದರ್ಶನದ ನುಡಿ ಇದಾಗಿದೆ.
ವಿಶೇಷತೆ: ನಾವು ಜೀವನದಲ್ಲಿ ಹೇಗೆ ಬಾಳಬೇಕು ಎಂಬ ಸತ್ಯವನ್ನು ಇಲ್ಲಿ ತಿಳಿಸಲಾಗಿದೆ.
ಉ) ಬಿಟ್ಟ ಜಾಗವನ್ನು ಸೂಕ್ತ ಪದದಿಂದ ತುಂಬಿ:
1) ‘ಸಂಕಲ್ಪಗೀತೆ’ ಪದ್ಯವನ್ನು ________ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
2) ಕತ್ತಲೆಯೊಳಗೆ ಪ್ರೀತಿಯ _________ ಹಟ್ಟೋಣ.
3) ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ________ ಕಟ್ಟೋಣ.
4) ನಾಳಿನ ಕನಸನು ________ ನಲ್ಲಿ ಬಿತ್ತೋಣ.
5) ಜಿ.ಎಸ್.ಶಿವರುದ್ರಪ್ಪನವರು __________ ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಉತ್ತರ :
1)-ಎದೆ ತುಂಬಿ ಹಾಡಿದೆನು
2)-ಹಣತೆ
3)-ಭರವಸೆಗಳ
4)-ಕಂದಿದ ಕಣ್ಣಿನಲ್ಲಿ
5)-ದಾವಣಗೆರೆ
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ:-
೧) ಕಲುಷಿತವಾದೀ ನದಿಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುವ ಮುಟ್ಟೋಣ
೨) ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರ ದೊಳು ಬದುಕೋಣ
ಭಯ-ಸಂಶಯದೊಳು ಕಂದಿ ಕಣ್ಣೋಳು
ನಾಳಿನ ಕನಸನು ಬಿತ್ತೋಣ.
೨. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ:-
- ನಿಲ್ಲಿಸು – ನಿಲ್ಲು
- ನಡೆಸು – ನಡೆ
- ಹಚ್ಚುವುದು – ಹಚ್ಚು
- ಮುಟ್ಟೋಣ – ಮುಟ್ಟು
- ಕಟ್ಟುವುದು – ಕಟ್ಟು
- ಆಗೋಣ – ಆಗು
೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ:-
೧) ಪ್ರೀತಿಯ = ಷಷ್ಠಿ ವಿಭಕ್ತಿ – ಪ್ರೀತಿ + ಅ = ಪ್ರೀತಿಯ
೨) ಬಿರುಗಾಳಿಯ = ಚತುರ್ಥಿ ವಿಭಕ್ತಿ – ಬಿರುಗಾಳಿ + ಗೆ = ಬಿರುಗಾಳಿಗೆ
೩) ಜಲಕ್ಕೆ = ಚತುರ್ಥಿ ವಿಭಕ್ತಿ – ಜಲ + ಕ್ಕೆ =ಜಲಕ್ಕೆ
೪) ಬಿದ್ದುದನ್ನು = ದ್ವಿತೀಯ ವಿಭಕ್ತಿ – ಬಿದ್ದು + ಅನ್ನು = ಬಿದ್ದುದನ್ನು
೫) ಭರವಸೆಗಳ = ಷಷ್ಠಿ ವಿಭಕ್ತಿ – ಭರವಸೆಗಳ + ಅ = ಭರವಸೆಗಳ
೪. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ:-
ဂ) ಸಂಶಯದೊಳ್ – ಸಂಶಯ + ಒಳ್ = ಸಂಶಯದೊಳ್ ಸಪ್ತಮಿವಿಭಕ್ತಿ
৩) ಜಲದಿಂ – ಜಲದಿ + ಅಂ = ಜಲದಿಂ = ದ್ವಿತೀಯ ವಿಭಕ್ತಿ
೩) ಮರದತ್ತಣಿಂ – ಮರದ + ಅತ್ತಣಿಂ = ಮರದತ್ತಣಿಂ = ಪಂಚಮಿ ವಿಭಕ್ತಿ
४) ರಾಯಂಗೆ – ರಾಯಂ + ಗೆ = ರಾಯಂಗೆ = ಚತುರ್ಥಿ ವಿಭಕ್ತಿ
೫. ಕೊಟ್ಟಿರುವ ಧಾತುಗಳಿಗೆ ವಿದ್ಯರ್ಥಕ, ನಿಷೇದಾರ್ಥಕ, ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ:-
ಧಾತು | ವಿದ್ಯರ್ಥಕ | ನಿಷೇದಾರ್ಥಕ | ಸಂಭಾವನಾರ್ಥಕ |
---|---|---|---|
ಹಾಡು | ಹಾಡಲಿ | ಹಾಡನು | ಹಾಡಿಯಾನು |
ನೋಡು | ನೋಡಲಿ | ನೋಡನು | ನೋಡಿಯನು |
ಕಟ್ಟು | ಕಟ್ಟಲಿ | ಕಟ್ಟೇನು | ಕಟ್ಟಿಯಾನು |
ಕೇಳು | ಕೇಳಲಿ | ಕೇಳಿಸು | ಕೇಳಿಯಾನು |
ಓಡು | ಓಡಲಿ | ಓಡನು | ಓಡಿಯಾನು |
ಬರೆ | ಬರೆಯಲಿ | ಬರೆಯನು | ಬರೆಯಾನು |
ಓದು | ಓದಲಿ | ಓದನು | ಓದಿಯಾನು |
ಭಾಷಾ ಚಟುವಟಿಕೆ
೧. ಗದ್ಯವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುವುದು :
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಟ್ಟೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ
ಪ್ರಶ್ನೆಗಳು :
೧. ಯಾವ ಹಡಗನ್ನು ಮುನ್ನಡೆಸಬೇಕಾಗಿದೆ?
ಬಿರುಗಾಳಿಗೆ ಹೊಯ್ದಾಡುವ ಹಡನು ಮುನ್ನಡೆಸ ಬೇಕಾಗಿದೆ.
೨. ನದೀಜಲಗಳ ಕೊಳೆಯನ್ನು ತೆಗೆಯಲು ಯಾವುದು ಬೇಕಾಗಿದೆ?
ನದೀಜಲಗಳ ಕೊಳೆಯನ್ನು ತೆಗೆಯಲು ಮುಂಗಾರಿನ ಮಳೆ ಬೇಕಾಗಿದೆ.
೩. ಕಾಡುಮೇಡುಗಳನ್ನು ಏನಾಗಿಸಿ ಮುಟ್ಟಬೇಕು?
ಕಾಡುಮೇಡುಗಳನ್ನು ವಸಂತವಾಗಿಸಿ ಮುಟ್ಟಬೇಕು.
೪. ಈ ಪದ್ಯದಲ್ಲಿ ಕವಿಯ ಯಾವ ಆಶಯವನ್ನು ಹೆಚ್ಚು ಮೆಚ್ಚಿಕೊಳ್ಳುತ್ತೀರಿ?
ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆ ಯನ್ನು ಹಚ್ಚಬೇಕು ಎಂಬುದು ನನಗೆ ಹೆಚ್ಚು ಮೆಚ್ಚಿಗೆಯಾದ ಸಾಲಾಗಿದೆ.