10th Standard Hasuru Poem Kannada Notes | 10ನೇ ತರಗತಿ ಹಸುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು

Hasuru

10th Standard Kannada Hasuru Poem Notes Question Answer Summary Guide Extract Mcq Pdf Download‌ in Kannada Medium Karnataka State Syllabus 2025 10ನೇ ತರಗತಿ ಹಸುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು Kseeb Solutions For Class 10 Kannada Poem 5 Notes ಹಸುರು ಪದ್ಯದ ಸಾರಾಂಶ Pdf ಹಸುರು ಪದ್ಯದ ಪ್ರಶ್ನೋತ್ತರಗಳು ಹಸುರು ಪದ್ಯ 10ನೇ ತರಗತಿ ಕನ್ನಡ ಹಸುರು ಪದ್ಯ Notes ಹಸುರು ಪದ್ಯದ ಪ್ರಶ್ನೆ ಉತ್ತರ 10th kannada hasuru poem question answer hasuru kannada poem song 10th kannada hasuru poem question answer summery.

10ನೇ ತರಗತಿ ಹಸುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಜನನ 1904 ಡಿಸೆಂಬರ್ 29. ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಿವೃತ್ತರಾದರು. ಆಧುನಿಕ ಕನ್ನಡ ಸಾಹಿತ್ಯದ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ.

ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ- ಕವನ ಸಂಕಲನೆಗಳು, ನನ್ನ ದೇವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರೆ ಕಥೆಗಳು – ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು, ತಪೋನಂದನ, ರಸೋವೈಸಃ – ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು, ಜಲಗಾರ, ಯಮನ ಸೋಲು, ಬೆರಳೆ ಕೊರಳ್ – ನಾಟಕಗಳು, ನೆನಪಿನ ದೋಣಿಯಲ್ಲಿ – ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1968ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ 1957ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ 1964ರಲ್ಲಿ ರಾಷ್ಟ್ರಕವಿ, 1988ರಲ್ಲಿ ಪಂಪ ಪ್ರಶಸ್ತಿ, 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಆಶ್ವೇಜ – ಚೈತ್ರದಿಂದ ಏಳನೆಯ ಮಾಸ (ಅಶ್ವಯುಜ)ಮಕಮಲ್ಲು – ನಯವಾದ ಬಟ್ಟೆ (ಹುಲ್ಲಿನ ಮಕಮಲ್ಲು
ಇಳೆ – ಭೂಮಿವನಧಿ – ಸಮುದ್ರ (ಹಸುರಿನ ಸಮುದ್ರ)
ಎಲರ್ – ಗಾಳಿಶ್ಯಾಮಲ – ಕಪ್ಪು, ನೀಲ
ಕೊನೆ -ಗೊನೆಶಾಲೀವನ – ಬತ್ತದ ಗದ್ದೆ
ತಿರೆ – ಭೂಮಿಹೊಸಪಚ್ಚೆ – ಹೊಸ ಹಸುರು, ಎಳೆಯ ಚಿಗುರು
ನವಧಾತ್ರಿ – ಹೊಸದಾಗಿ ಕಾಣುವ ಭೂಮಿ

1. ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ?

ಅಶ್ವಯುಜದ ಬತ್ತದ ಗದ್ದೆಯು ಹಸಿರು ಗಿಳಿಯ ಹಸುರಿನಂತಿದೆ.

2. ಕವಿಯು ನೋಡಿದ ಅಡಿಕೆ ತೋಟ ಎಲ್ಲಿದೆ?

ಬತ್ತದ ಗದ್ದೆಯ ಪರಡಿಯಲ್ಲಿ ಬನದ ಅಂಚಿನಲ್ಲಿ ಅಡಿಕೆಯ ತೋಟವಿದೆ.

3. ‘ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?

‘ಹಸುರು’ ಎಂಬುದು ಅಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸರನ್ನು ಕಂಡು ಪ್ರೇರಿತವಾದ ಕವನವಾಗಿದೆ.

4. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?

ಕವಿಗೆ ಹುಲ್ಲಿನ ಹಾಸು ನಯವಾದ ಮಕ್‌ಮಲ್ಲಿ ನಂತೆ ಕಂಡಿದೆ.

1. ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ?

ಕವಿಗೆ, ಸಸ್ಯ ಸಮೃದ್ಧಿಯ ಹಸುರು, ಆಗಸ, ಮುಗಿಲು, ಗದ್ದೆ ಬಯಲು, ಸಂಜೆ, ಹೂಗಂಪು ಹಕ್ಕಿಯ ಮಧುರ ಕೂಗು ಜನರಲ್ಲಿ ಹಾಗೂ ಕಡ…. ಹಸುರು ಪ್ರತಿಬಿಂಬಿಸುತ್ತಿದೆ ಎಂಬುದನ್ನು ಒಟ್ಟಾರೆ ಆಗಸದಿಂದ ಬಿಸಿಲವರೆಗೂ ಹಸಿರು ಕಾಣುತ್ತಿರುವುದು ಕಾಣುತ್ತಿದೆ.

2. ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ?

ಪ್ರಕೃತಿಯಲ್ಲಿ ಎಲ್ಲೆಲ್ಲೂ ಕಂಗೊಳಿಸುವ ಹಸುರು ಮನುಷ್ಯನ ಪಂಚೇಂದ್ರಿಯಗಳು ವ್ಯಾಪಿಸಿದೆ ಅಂದರೆ ಭೂತಾಯಿಯ ಮೇಲೆ ನಯವಾಗಿ ಮಕಮಲ್ಲಿನಂತೆ

ಹಾಸಿರುವ ಬತ್ತದ ಗದ್ದೆಗಳು ಕಣ್ಣಿಗೆ ತಂಪನ್ನು ಉಂಟು ಮಾಡಿದರೆ ಇವುಗಳ ನಡುವೆ ಬಿಟ್ಟಿರುವ ಹೂಗಳ ಕಂಪು ನಮ್ಮ ಮೂಗನ್ನು ಅವರಿಸಿರುತ್ತದೆ. ಇಷ್ಟೇ ಅಲ್ಲದೆ ಪ್ರಕೃತಿಯ ಹಸುರಿನ ನಡುವೆ ಕುಳಿತು ಕೂಗುವುದನ್ನು ನಮ್ಮ ಶ್ರವಣೇಂದ್ರಿಯಗಳು ಆಲಿಸುತ್ತವೆ. ಹೀಗೆ ನಮ್ಮ ಸಕಲೇಂದ್ರಿಯಗಳು ಸಹ ಪ್ರಕೃತಿಯ ಹಸರನ್ನು ವ್ಯಾಪಿಸಿದೆ.

3. ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನಲೆಯ ಅಂಶಗಳಾವುವು?

ಉತ್ತರ : ಕವಿಯಾತ್ಮವು ಪ್ರಕೃತಿ ಹಸರನ್ನು ಕಂಡು ಆ ಪ್ರಕೃತಿಯಲ್ಲಿಯೇ ವಿಲೀನವಾಗಿರುವಂತೆ ಭಾಸವಾಗುತ್ತದೆ. ಆದ್ದರಿಂದಲೇಕ ಪ್ರಕೃತಿ ಅಲ್ಲಿನ ತನ್ಮಯತೆಗಳೂ, ಕವಿ ಹಾಗೂ ಪ್ರಕೃತಿ ಒಂದಾಗುವಂತೆ ಕವಿ ಪ್ರಕೃತಿಯಲ್ಲಿ ಲೀನವಾಗಿದೆ. ಆತ್ಮ-ಪರಮಾತ್ಮ ಒಂದೇ ಎಂಬ ಶಂಕರಾಚಾರ್ಯರು ಅದೈತ ಪ್ರತಿಪಾದನೆಯಂತೆ ಕವಿಯ ಮನಸ್ಸು ಹಾಗೂ ಪ್ರಕೃತಿಯ ಹಸುರು ಬೇರೆ ಬೇರೆಯಾಗಿದೆ. ಒಂದರೊಲ್ಲೊಂದು ಪರಸ್ಪರ ಐಕ್ಯವಾಗಿ ಒಂದೇ ಎಂಬ ಭಾವನೆ ವ್ಯಕ್ತ ಪಡಿಸಿದ್ದಾರೆ.

1. ‘ಹಸುರು’ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ :

ಉತ್ತರ : ಹಸುರು ಕವನದ ರೀತ್ಯ ಪ್ರಕೃತಿಯಲ್ಲಿ ಎಲ್ಲೆಲ್ಲಿಯೂ ಅದರಲ್ಲಿಯೂ ಅಶ್ವಯಜಮಾಸದ ಈ ಪ್ರಕೃತಿಯಲ್ಲಿ ಎಲ್ಲೆಲ್ಲೂ ಕಂಡುಬರುವ ದೃಶ್ಯವೆಂದರೆ ಹಸುರು. ಭೂ ತಾಯಿ ಹಸುರಿನ ನಯವಾದ ಮರಮಲ್ಲಿನ ಹೊದಿಕೆ ಹೊದ್ದಿದಂತೆ ಬತ್ತದ ಗದ್ದೆಗಳು ಗಿಳಿ ಹಸುರು ಬಣ್ಣಗಳಿಂದ ಕಂಗೊಳಿಸುತ್ತವೆ. ಸಸ್ಯ ಸಮೃದ್ಧಿಯ ಹಸುರು ಆಗಸ, ಮುಗಿಲು, ಗದ್ದೆ, ಬಯಲು, ಸಂಜೆ, ಹೂ ಗಂಪಿನಲ್ಲಿ, ಹಕ್ಕಿಗಳ ದನಿಗಳಲ್ಲಿ ಹಾಗೂ ಕಡಲಿನವರೆಗೂ ವ್ಯಾಪಿಸಿ ಕಡಲಿನಲ್ಲಿ ಪ್ರತಿಬಿಂಬಿಸುವ ಮಟ್ಟಿಗೆ ಹಸುರು ವ್ಯಾಪಿಸಿದೆ ಎಂಬುದನ್ನು ಕವಿ ತಮ್ಮ ಹಸುರು ಕವಿತೆಯಲ್ಲಿ ನಿರೂಪಿಸಿದ್ದಾರೆ. ಈ ಹಸುರಿನಲ್ಲಿ ತನ್ಮಯಕವಾಗಿರುವ ಕವಿಯ ತನುಮನಗಳನ್ನು ಆಕ್ರಮಿಸಿದೆ ಅಲ್ಲದೆ ಮನುಷ್ಯನ ಸಕಲೇಂದ್ರಿಯಗಳನ್ನು ಹಸುರಿನಿಂದ ಆವರಿಸಿರುವ ಬಗ್ಗೆ ಕವಿ ಹೇಳಿಕೊಂಡಿದ್ದಾರೆ. ಆತ್ಮ-ಪರಮಾತ್ಮನಲ್ಲಿ

ಲೀನವಾದಂತೆ ಕವಿಯಲ್ಲಿನ ಮನಸ್ಸು ಪ್ರಕೃತಿಯ ಹಸುರಿನಲ್ಲಿ ಐಕ್ಯವಾಗಿದೆ ಎಂಬುದಾಗಿ ಕವಿಯೇ ‘ಹಸುರು’ ಕವಿತೆಯಲ್ಲಿ ಹೇಳಿಕೊಂಡಿದ್ದಾರೆ.

2. ಪ್ರಕೃತಿಯ ಹಸುರು ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.

ಪ್ರಕೃತಿಯಲ್ಲಿನ ಹಸುರು ಮನುಷ್ಯ ಮಾತ್ರನಿಗೆ ಸೀಮಿತವಾಗಿರದೆ ಇಡೀ ಜೀವ ಜಗತ್ತಿಗೆ ಬಹಳ ಮುಖ್ಯ ಎಂಬುದಾಗಿ ಕವಿ ತಮ್ಮ ಕವನ ಹಸುರಿನ ಮೂಲಕ ಹಸುರಿನ ವ್ಯಾಪಕತೆಯನ್ನು ವಿವರಿಸಿದ್ದಾರೆ.

ಮನುಷ್ಯ-ಪ್ರಾಣಿ ಎಲ್ಲಾ ಜೀವಿಗಳಿಗೂ ಪ್ರಕೃತಿಯಲ್ಲಿನ ಗಿಡಮರಗಳ, ಆಹಾರ ಸಸ್ಯಗಳ ಹಸಿರೇ ಉಸಿರಾಗಿರುತ್ತದೆ.

ಉದಾಹರಣೆಗೆ : ಆಡು, ದನ, ಹಸು ಮುಂತಾದವುಗಳಿಗೆಲ್ಲ ಮರದ ಹಸಿರೆಲೆ, ಭೂತಾಯಿಯ ಮೇಲೆ ಬೆಳೆಯುವ ಹುಲ್ಲು, ಸೊಪ್ಪು, ಮರಗಿಡಗಳ ಎಲೆಗಳೇ ಮುಖ್ಯ ಕಾರಣವಾಗಿರುತ್ತವೆ. ಇನ್ನು ಮನುಷ್ಯನು ಪರಕೃತಿಯ ಮೇಲಿನ ಎಲ್ಲಾ ಸಸ್ಯಗಳನ್ನು ಅವಲಂಬಿಸಿದ್ದಾನೆ. ಉದಾಹರಣೆಗೆ : ಗದ್ದೆಗಳಲ್ಲಿನ ಭತ್ತ, ಅಡಿಕೆ, ಹೂ, ಪ್ರತಿಯೊಂದು ಸಸ್ಯವನ್ನು ಮನುಷ್ಯನು ಅವಲಂಬಿತನಾಗುತ್ತಾನೆ.

ಬೆಟ್ಟವನ್ನು ಆವರಿಸುವ ಹಸುರು ಗಿಡ ಮರಗಳು ಮಾನವನ ಜೀವನದಲ್ಲಿ ಬಹಳ ಪ್ರಮುಖವಾದುದಾಗಿದೆ. ಮತ್ತೆ ಕೆಲವು ಮರಗಿಡಗಳು ಔಷಧ ರೂಪದಲ್ಲಿ ಆಹಾರ ರೂಪದಲ್ಲಿ ಮತ್ತೆ ಕೆಲವು ಬಟ್ಟೆಗಳ ರೂಪದಲ್ಲಿ ಹೊಂದಿರುತ್ತವೆ. ಇನ್ನು ಮನುಷ್ಯನು ವಾಸಿಸುವ ಮನೆ, ಅದನ್ನು ಕಟ್ಟಲು ಉಪಯೋಗಿಸುವ ಬೆಲೆಬಾಳುವ ಮರಗಳನ್ನು ಉಪಯೋಗಿಸಿ ಮನೆಕಟ್ಟಲು ಹಾಗೂ ಪೀಠೋಪಕರಣಕ್ಕೆ ಉಪಯೋಗಿಸುತ್ತಿದ್ದಾನೆ.

ಹಸುರಿಲ್ಲದೆ ಮನುಷ್ಯ ಜೀವಿಸಲಾರ ಎಂಬುವಷ್ಟು ಮಟ್ಟಿಗೆ ಮನುಷ್ಯನು ಹಸುರನ್ನು ಅವಲಂಬಿಸಿದ್ದಾನೆ ಎಂದರೆ ಮನುಷ್ಯನ ಸಕಲೇಂದ್ರಿಗಳು ಪ್ರಕೃತಿ ಹಸುರನ್ನು ವ್ಯಾಪಿಸಿದೆ ಎಂಬುದನ್ನು ಕವಿ ‘ಹಸುರು’ ಕವಿತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.

1. ‘ಹಸುರಾದುದು ಕವಿಯಾತ್ಮಂ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಪ್ರಕೃತಿಯಲ್ಲಿನ ಹಸುರು ಕಂಡು ಕವಿ ತಮಗಾದ ಸೌಂದರ್ಯಾನುಭವವನ್ನು ಇಲ್ಲಿ ವರ್ಣಿಸಿದ್ದಾರೆ.

ಭಾವಾರ್ಥ : ಅಶ್ವಯುಜದ ನವರಾತ್ರಿಯ ಸಂಭ್ರಮದಲ್ಲಿ ಭೂತಾಯಿ ನವರಾತ್ರಿಯಂತೆ ಕಂಗೊಳಿಸುತ್ತಿರುವುದನ್ನು ಕಂಡು ಕವಿ ತನ್ನ ಆತ್ಮವು ಕೂಡ ಹಸುರಿನಂತೆ ಮುದಗೊಂಡಿತು ಎಂಬುದಾಗಿ ಹೇಳಿದ್ದಾರೆ.

ವಿಶೇಷತೆ : ಕವಿ ಪ್ರಕೃತಿ ಸೌಂದರ್ಯವನ್ನು ಸರಳ, ಸಹಜ, ಸುಂದರ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ.

2. ‘ಬೇರೆ ಬಣ್ಣವನೆ ಕಾಣೆ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ: ಕವಿ ಪ್ರಕೃತಿಯಲ್ಲಿ ಎತ್ತ ನೋಡಿದರೂ ಅವರಿಗೆ ಹಸಿರೇ ಕಾಣುತ್ತಿತ್ತು. ಈ ಸಂದರ್ಭದಲ್ಲಿ ಕವಿ ಪ್ರಕೃತಿಯ ಸೊಬಗನ್ನು ಕಂಡು ವಿವರಿಸಿದ್ದಾರೆ.

ಭಾವಾರ್ಥ : ಕವಿಗೆ ಪ್ರಕೃತಿಯಲ್ಲಿ ಎಲ್ಲೆಲ್ಲೂ ನೆಲ, ಜನ, ಮುಗಿಲು ಎಲ್ಲೆಡೆ ಬರಿ ಹಸಿರೇ ಕಂಗೊಳಿಸುತ್ತವೆ. ಅಂದರೆ ಮುಗಿಲೆತ್ತರಕ್ಕೆ ಬೆಳೆದ ಹಸಿರಿನಿಂದ ಕೂಡಿದ ಮರಗಳು, ಅದರ ತಡಿಯಲ್ಲಿರುವ ಜಲವೆಲ್ಲವು ಅವುಗಳ ಪ್ರತಿಬಿಂಬಗಳಿಂದ ಕೂಡಿದೆ. ಬೆಟ್ಟಗುಡ್ಡಗಳ ಕಣಿವೆಗಳು, ನೆಲ, ಎಲ್ಲವೂ ಹಸೂರಿನಿಂದ ಮುಚ್ಚಿ ಹೋಗಿವೆ. ಎಷ್ಟೆ ದೂರ ಹಾಯಿಸಿದರೂದ ಬರಿ ಹಸುರೇ ಕಂಗೊಳಿಸುವುದು.

ವಿಶೇಷತೆ : ಮಲೆನಾಡಿನ ಸೌಂದರ್ಯವನ್ನು ಕವಿ ತಮ್ಮ ನುಡಿಗಳಲ್ಲಿ ಸರಳ ಭಾಷೆ, ಸಂತೋಷಗಳಿಂದ ತುಂಬಿದೆ ಎಂಬುದಾಗಿ ವರ್ಣಿಸಿದ್ದಾರೆ.

3. ‘ಹಸು ಹಸುರಿಳೆಯುಸಿರು’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಪ್ರಕೃತಿಯಲ್ಲಿನ ಎಲ್ಲಾ ಹಸುರು ಭೂಮಿಯ ಮೇಲೆ ಜೀವಿಸುವ ಎಲ್ಲಾ ಜೀವಿಗಳ ಉಸರಾಗಿರುತ್ತದೆ ಎಂಬುದನ್ನು ಕವಿ ವರ್ಣಿಸುತ್ತಾ ಈ ಸಾಲುಗಳನ್ನು ರಚಿಸಿದ್ದಾರೆ.

ಭಾವಾರ್ಥ : ಹಸಿರಿನಿಂದ ಕೂಡಿದ ಆಹಾರ ಬೆಳೆಗಳು, ಹಸಿರಿನಿಂದ ಕೂಡಿದ ಮರಗಿಡಗಳು, ಎಲ್ಲವೂ ಈ ಭೂಮಿಯ ಮೇಲೆ ವಾಸ ಮಾಡುವ ರೀತಿಯ ಜೀವಿಗಳಿಗೆ ಅವಶ್ಯಕವಾಗಿ ಬೇಕೇ ಬೇಕು. ಹಸಿರು ಇಲ್ಲದೆ ಯಾವ ಜೀವಿಯೂ ಬದುಕಲಾರ. ಉಸಿರಾಡಲು, ಆಹಾರಕ್ಕಾಗಿ ಹಸುರು ಎಲ್ಲಾ ಜೀವಿಗಳಿಗೂ ಅನಿವಾರ್ಯ. ಹೀಗಾಗಿ ಜೀವಿಗಳಿಗೆ ಹಸಿರು, ಉಸಿರಾಗಿದೆ ಎಂಬುದು ಕವಿ ವರ್ಣಿಸಿದ್ದಾರೆ.

ವಿಶೇಷತೆ : ಸರಳ ಹಾಗೂ ಸಹಜ ಭಾಷೆಯಲ್ಲಿ ಹಸಿರು ನಮಗೆ ಪ್ರಾಣವಾಯು ಎಂಬುದನ್ನು ಪ್ರತಿಯೊಂದು ಜೀವಿಯೂ ತನ್ನ ಆಹಾರ ಮತ್ತಿತರ ಬೇಡಿಕೆಗಾಗಿ ಹೇಗೆ ಅವಲಂಬಿತನಾಗಿದ್ದಾನೆ ಎಂಬುದನ್ನು ಇಲ್ಲಿ ವರ್ಣಿಸಿದ್ದಾರೆ.

4. ಹಸುರತ್ತಲ್, ಹಸುರಿತ್ತಲ್, ಹಸುರೆತ್ತಲ್

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಪ್ರಕೃತಿಯಲ್ಲಿ ಎಲ್ಲೆಲ್ಲೂ ಹಸುರೇ ಕಾಣುವುದನ್ನು ಕವಿ ವರ್ಣಿಸುತ್ತಾ ಕವಿ ಈ ಸಾಲುಗಳನ್ನು ಬರೆದಿದ್ದಾನೆ.

ಭಾವಾರ್ಥ : ಎಲ್ಲೆಲ್ಲೂ ನೋಡಿದರೂ ಹಸಿರು, ಅಲ್ಲಿಯೂ ಹಸಿರು, ಎಲ್ಲೆಲ್ಲಿಯೂ ಹಸಿರೇ ಹಸಿರು. ಅಂದರೆ ನಾವು ಎತ್ತ ನೋಡಿದರೂ ಅತ್ತ ಬರಿ ಹಸುರೇ ಕಾಣುವ ಈ ಪ್ರಕೃತಿಯಲ್ಲಿ ನಾವು ಹಸುರಾಗಿ ಸಮಾನಶರಾಗಿ ಬಿಟ್ಟಿದ್ದೇವೆ ಎಂದರೆ ತಪ್ಪಾಗಲಾರದು. ಕವಿಯು ತನ್ನ ಆತ್ಮವೂ ಕೂಡ ಹಸಿರಾಗಿ ಹೋಗಿದೆ ಎನ್ನುತ್ತಾ ಆಧ್ಯಾತ್ಮಕ ಭಾವನೆಯನ್ನು ಅದ್ವೇತತ್ವ ಇಲ್ಲಿ ಕವಿ ಪ್ರತಿಪಾದಿಸಿದ್ದಾರೆ.

ವಿಶೇಷತೆ : ಸರಳ ಭಾಷೆಯಲ್ಲಿ ಪ್ರಕೃತಿ ಹಸಿರಿನ ವರ್ಣನೆಯಿದ್ದು ಅದು ಹೇಗೆ ಮಾನವನಲ್ಲಿ ಅವನ ಆತ್ಮದಲ್ಲಿ ವಿಲೀನವಾಗಿರುವುದನ್ನು ಕವಿ ತನ್ನ ಅನುಭವದೊಂದಿಗೆ ವ್ಯಕ್ತಪಡಿಸಿದ್ದಾರೆ. ಭಾಷೆ ಸರಳ ಹಾಗೂ ಸಹಜವಾಗಿ ಮೂಡಿಬಂದಿದೆ.

1. ಹಸುರಾಗಸ ; ಹಸುರು ಮುಗಿಲು

ಹಸುರು ಗದ್ದೆಯ ಬಯಲು

ಹಸುರಿನ ಮಲೆ; ಹಸುರು ಕಣಿವೆ ;

ಹಸುರು ಸಂಜೆಯೇ ಬಿಸಿಲೂ!

2. ಹೊಸ ಹೂವಿನ ಕಂಪು ಹಸುರು

ಎಲರಿನ ತಂಪೂ ಹಸುರು!

ಹಕ್ಕಿಯ ಕೊರಲಿಂತ್ರ ಹಸುರು !

ಹಸುರು ಹಸುರಿಳೆಯುಸಿರೂ !

1. ಮನಸ್ಸಿದ್ದರೆ ಮಾರ್ಗ

ಯಾವುದೇ ಸಾಧನೆಯನ್ನು ಸಾಧಿಸಬೇಕಾದರೂ ಮನಸ್ಸು ಮಾಡಬೇಕು. ಸಾಧಿಸಿಯೇ ತೀರುತ್ತೇನೆಂಬ ಛಲವಿರಬೇಕು. ಆಗ ಪ್ರಯತ್ನದ ಹಾದಿ ತೋರಿಯೇ ತೋರುತ್ತದೆ. ಒಂದು ಚಿತ್ರ ಗೀತೆಯ ಸಾಲು ಹೀಗಿದೆ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ತನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಮಾಡಬಲ್ಲೆ ಎಂದು ಮನಸ್ಸು ಮಾಡಿದವನು ಎಂಥ ಕೆಲಸವನ್ನಾದರೂ ಮಾಡಬಲ್ಲ. ‘ನಿಘಂಟಿನಿಂದ ಅಸಾಧ್ಯ ಎನ್ನುವ ಪದವನ್ನು ತೆಗೆದು ಹಾಕಿ’ ಎಂದು ನೆಪೋಲಿಯನ್ ಬೋನಾಪಾರ್ಟಿ ಹೇಳುತ್ತಿದ್ದನಂತೆ. ಉದ್ದೇಶ ಗುರಿ ದೊಡ್ಡದಾಗಿರಬೇಕು.

ಮನಸ್ಸು ಮಾಡಬೇಕು. ಪ್ರಯತ್ನ ಪಡಬೇಕು. ಆಗ ಕಾರ್ಯ ಸಾಧನೆ ಆಗಿಯೇ ತೀರುತ್ತದೆ. ಗೌರಿಶಂಕರ ಶಿಖರವನ್ನೇರಬೇಕೆಂಬ ಗುರಿಯಿರಿಸಿಕೊಂಡು ಪ್ರತಿದಿನ ಚಿಕ್ಕ ಗುಡ್ಡ ಬೆಟ್ಟಗಳನ್ನು ಏರುತ್ತಾ ಪ್ರಯತ್ನಿಸಿದರೆ ಕೊನೆಗೊಂದು ದಿನ ಮುಳ್ಳಯ್ಯನ ಗಿರಿಯನ್ನಾದರೂ ಏರಬಹುದು. ಛಲ ಬಿಡದ ತೇನ್‌ಸಿಂಗ್ ಎವರೆಸ್ಟ್ ಶಿಖರವನ್ನೇರಿದರು ಈ ಬಗೆಯ ಪ್ರಯತ್ನದಿಂದಲೇ ಸಾಧ್ಯವಾಯಿತು. ವಿದ್ಯಾರ್ಥಿಯಾದವನು ಯಶಸ್ಸು ಗಳಿಸಲು ಮನಸ್ಸು ಮಾಡಬೇಕು. ಪ್ರಯತ್ನ ಪಡಬೇಕು. ಮನಸಿಟ್ಟು ಪ್ರಯತ್ನಿಸುವವರಿಗೆ ಸಫಲತೆಯ ಹಾದಿ ಕಂಡೇ ಕಾಣುತ್ತದೆ. ಆ ದಾರಿ ಸುಗಮವಾಗುತ್ತದೆ.

2. ಮಾತೇ ಮುತ್ತು ; ಮಾತೇ ಮೃತ್ಯು

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.

ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದಿದ್ದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನ್ನೇ ಗೆಲ್ಲಬಹುದು. ಹಾಗೆಯೇ ಮಾತಿನಿಂದ ದ್ವೇಷ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯುವು ಬರಬಹುದು. “ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ.

Leave a Reply

Your email address will not be published. Required fields are marked *