10th Standard Edege Bidda Akshara Kannada Notes Question Answer Summary Guide Extract Mcq Pdf Download Kannada Medium Karnataka State Syllabus 2025 Kseeb Solutions For Class 10 Standard Kannada Chapter 4 Notes Edege Bidda Akshara Kannada Question and Answer, 10th Standard Kannada Chapter 4 Notes, SSLC Kannada Lesson 4 Notes, 10th Kannada Edege Bidda Akshara Notes Pdf Summery Mcq Download, 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್, ಎದೆಗೆ ಬಿದ್ದ ಅಕ್ಷರ question answer.

10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು
ಲೇಖಕರ ಪರಿಚಯ :
ದೇವನೂರು ಮಹಾದೇವ ಕ್ರಿ.ಶ.1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇವನೂರಿನವರು. ಮೈಸೂರಿನ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಂಡಾಯ ಮತ್ತು ದಲಿತ ಸಾಹಿತ್ಯ ಪ್ರಮುಖದಲ್ಲಿ ಒಬ್ಬರಾಗಿದ್ದಾರೆ. ಆಡು ಮಾಡಿನ ಧ್ವನಿಶಕ್ತಿಯನ್ನು ಉತ್ತರಿಸಿದ ಶಬ್ಧಶಿಲ್ಪ ಇವರು.
ಇವರ ಪ್ರಮುಖ ಕೃತಿಗಳೆಂದರೆ –
ದ್ಯಾವನೂರು, ಒಡಲಾಳ, ಗಾಂಧೀ ಮತ್ತು ಮಾವೋ, ನಂಬಿಕೆಯ ನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ.
ಇವರು ಬರೆದ ಕುಸುಮ ಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.ʼ
ಕಠಿಣ ಪದಗಳ ಅರ್ಥ :
- ಅಂದಾಜಿಸು = ಊಹೆ ಮಾಡು
- ಗುಡಿಮನೆ = ಚಿಕ್ಕದೇವಸ್ಥಾನ
- ಅವಾಹಿಸು = ಮೈಮೇಲೆ ಬರುವಂತೆ ಮಾಡಿಕೊ
- ಕ್ಷೋಭೆ = ತಳಮಳ
- ಆರ್ತತೆ = ಬಯಕೆ
- ಚಿಂತಕ = ಹೊಸ ರೀತಿಯ ವಿಚಾರಗಳನ್ನು ಪ್ರತಿಪಾದಿಸುವವನು
- ಒಡಮೂಡು = ಹುಟ್ಟು
ಅಭ್ಯಾಸದ ಪ್ರಶ್ನೆಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ :
೧. ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾವುವು ?
ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾವುವು.
೨. ಮನೆ ಮಂಚಮ್ಮ ಯಾರು?
ಮನೆ ಮಂಚಮ್ಮ ಗ್ರಾಮದೇವತೆ.
೩. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಮನೆ ಮಂಚಮ್ಮನ ಕತೆ ಹೇಳಿದವರು ಕವಿ ಸಿದ್ದಲಿಂಗಯ್ಯನವರು.
೪. ‘ಶಿವಾನುಭವ ಶಬ್ದ ಕೋಶ’ ಪುಸ್ತಕ ಬರೆದವರು ಯಾರು?
ಶಿವಾನುಭವ ಶಬ್ಧಕೋಶ ಪುಸ್ತಕ ಬರೆದವರು ಹಳಕಟ್ಟಿಯವರು.
೫. ವಚನಕಾರರಿಗೆ ಯಾವುದು ದೇವರಾಗಿತ್ತು?
ಪ್ರತಿಯೊಬ್ಬರಿಗೂ ಅವರವರದೇ ಇಷ್ಟದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.
೬. ಅಶೋಕ ಪೈ ಅವರ ವೃತ್ತಿ ಯಾವುದು?
ಅಶೋಕ ಪೈ ಅವರ ವೃತ್ತಿ ವೈದ್ಯ ವೃತ್ತಿ. ಇವರು ಮನೋವೈದ್ಯರಾಗಿದ್ದರು.
೭. ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟಿಕರಿಸಿ.
ದೇವನೂರರ ‘ನನ್ನ ದೇವರು’ ‘ಮನೆಮಂಚಮ್ಮ’ ಹಾಗೂ ‘ಬುದ್ಧ’.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :
೧. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
‘ಅಶೋಕ ಪೈ’ ಹೇಳಿದ ಸಂಶೋಧನಾ ಸತ್ಯವೆಂದರೆ “ಯಾವ ಜೀವಿಯೂ ತನ್ನಿಷ್ಟಕ್ಕೆ ತಾನಿಲ್ಲ, ಯಾವುದೇ ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ಇಡೀ ಜೀವ ಸಂಕುಲವನ್ನೇ ಒಂದು ಎಂದು ಹೇಳುತ್ತದೆ.
೨. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ. ಅದು ತರ್ಕವಲ್ಲ, ನಡೆಯಿಂದ ನುಡಿ ಹುಟ್ಟಿದರೆ ಅದು ‘ಅರಿವು’.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
೧. ಕವಿ ಸಿದ್ದಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ :
ಕವಿ ಸಿದ್ದಲಿಂಗಯ್ಯನವರು ಹೇಳಿದ ಕತೆಯೆಂದರೆ-ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ” ಇಂದಲ್ಲ-ನಾಳೆ ಫಲ ಕೊಡುವುದು. ಎಂಬ ನೀತಿಯನ್ನು ಹೇಳಿದ್ದಾರೆ. ಅಲ್ಲದೆ ಇದರೊಂದಿಗೆ ಕಾರುಣ್ಯ ಸಮತೆಯ ಕತೆಯನ್ನು ಹೇಳಿದ್ದಾರೆ. ಅದೆಂದರೆ – “ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ.
ಆಗ ಇದ್ದಕ್ಕಿದ್ದಂತೆ ಮಂಚಮ್ಮ ದೇವಿ ಭಕ್ತನೊಬ್ಬನ ಮೇಲೆ ಅವಾಹನೆಯಾಗಿ “ಏನ್ ಮಾಡ್ತಾ ಇದ್ದೀರಿ?” ಎಂದು ಕೇಳುತ್ತಾಳೆ. ‘ನಿನಗೊಂದು ಗುಡಿ ಕಟ್ಟಾ ಇದ್ದೀವಿ ತಾಯಿ’ ಎಂದು ಹೇಳಿದಾಗ ‘ನಿಮಗೆಲ್ಲಾ ಮನೆ ಉಂಟಾ?’ ಎಂದು ಕೇಳಿದಾಗ ಅಲ್ಲೊಬ್ಬ ‘ನನಗಿಲ್ಲ ತಾಯಿ’ ಎಂದು ಹೇಳುತ್ತಾನೆ. ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮ್ಮ ತಾಯಿ ಹೇಳುತ್ತಾಳೆ.
ಅಂದಿನಿಂದ ‘ಮನೆ ಮಂಚಮ್ಮ’ ಎಂದೇ ಪ್ರಸಿದ್ಧಳಾದ ತಾಯಿ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾಳೆ.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ :
1. ‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆಬೇಡ’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ದೇವನೂರು ಮಹಾದೇವೂ” ರವರು ರಚಿಸಿರುವ “ಎದೆಗೆ ಬಿದ್ದ ಅಕ್ಷರ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ವಾಕ್ಯವನ್ನು ಗ್ರಾಮದೇವತೆಯಾದ ಮಂಚಮ್ಮನಿಗೆ ಗ್ರಾಮಸ್ಥರು ಗುಡಿ ಕಟ್ಟುತ್ತಿರುವಾಗ ಭಕ್ತನೊಬ್ಬನ ಮೇಲೆ ಅವಾಹನೆಯಾದ ಮಂಚಮ್ಮದೇವಿ ಈ ಮಾತನ್ನು ಗುಡಿ ಕಟ್ಟುತ್ತಿದ್ದ ಗ್ರಾಮಸ್ಥರಿಗೆ ಹೇಳುತ್ತಾಳೆ.
ವಿವರಣೆ: ತನ್ನ ಭಕ್ತರಿಗೆ ಮನೆ ಇಲ್ಲದಿರುವಾಗ ತನಗೂ ಗುಡಿಬೇಡ, ಎಲ್ಲರಿಗೂ ಮನೆ ಆಗುವವರೆಗೂ ನನಗೆ ಮನೆ(ಗುಡಿ) ಬೇಡ ಎಂಬುದಾಗಿ ಮಂಚಮ್ಮ ದೇವಿ ಹೇಳುತ್ತಾ ತನ್ನ ಭಕ್ತರ ಬಗ್ಗೆ ಕರುಣೆ, ಸಮಾನತೆಯ ಭಾವನೆಯನ್ನು ತೋರಿದ್ದಾಳೆ.
ವಿಶೇಷತೆ: ಇದು ಕವಿ ಸಿದ್ದಲಿಂಗಯ್ಯನವರು, ಲೇಖಕರಿಗೆ ಹೇಳಿದ ಕತೆಯನ್ನು ಇಲ್ಲಿ ಕೊಡಲಾಗಿದೆ. ಸಮಾನತೆಗೆ ಇದೊಂದು ನಿದರ್ಶನವಾಗಿದೆ.
2. ‘ಯಾವ ಜೀವಿಯೂ ತನ್ನಷ್ಟಕ್ಕೆ ತಾನ್ನಿಲ್ಲ’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ದೇವನೂರು ಮಹಾದೇವೂ” ರವರು ರಚಿಸಿರುವ “ಎದೆಗೆ ಬಿದ್ದ ಅಕ್ಷರ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ವಾಕ್ಯವನ್ನು ಮನೋವಿಜ್ಞಾನದ ವೈದ್ಯರಾದ ಡಾ|| ಅಶೋಕ ಪೈ ರವರು ಲೇಖಕರಿಗೆ ಹೇಳಿದ ಮಾತು. ಮನುಷ್ಯನ ಸ್ವಭಾವ ಬದಲಾವಣೆಯ ಬಗ್ಗೆ ಹೇಳುತ್ತಾ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ಪ್ರತಿಯೊಂದು ಜೀವಿಯೂ ವಾತಾವರಣಕ್ಕೆ ತಕ್ಕಂತೆ ಬದಲಾಗುವುದು. ತನ್ನಷ್ಟಕ್ಕೆ ತಾನು ಇರುವುದಿಲ್ಲ ಎಂಬುದನ್ನು T.V. ಯ ಉದಾಹರಣೆಯ ಮೂಲಕ ಇದನ್ನು ವಿವರಿಸುವರು.
ವಿಶೇಷತೆ: ಮಾನವನ ಸ್ವಭಾವದ ಬಗ್ಗೆ ಇಲ್ಲಿ ಹೇಳಲಾಗಿದೆ.
3. ‘ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು’
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ದೇವನೂರು ಮಹಾದೇವ” ರವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಲೇಖಕರು ವಚನಕಾರರ ಬಗ್ಗೆ ಹೇಳುತ್ತಾ ಈ ವಾಕ್ಯವನ್ನು ಹೇಳಿದ್ದಾರೆ.
ವಿಮರ್ಶೆ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದು ಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ ಇಷ್ಟದೈವ, ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. ಈ ರೀತಿ ಪ್ರಜ್ಞೆಯನ್ನೇ ದೇವರು ಎಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ.
ವಿಶೇಷತೆ : ವಚನಕಾರರ ದೇವರ ಬಗ್ಗೆ ಲೇಖಕರು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಭಾಷೆ ಸರಳವಾಗಿ, ಸಹಜ ಶೈಲಿಯಲ್ಲಿ ಮೂಡಿಬಂದಿದೆ.
4. ‘ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ದೇವನೂರು ಮಹಾದೇವೂ” ರವರು ರಚಿಸಿರುವ “ಎದೆಗೆ ಬಿದ್ದ ಅಕ್ಷರ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಸಮನ್ವತೆಯನ್ನು ಕಾಣಬೇಕಾದ್ದಲ್ಲಿ ಅವನ್ನು ಸಮಷ್ಟಿ ಮನಸ್ಸಿನಲ್ಲಿ ಕಾಣಬೇಕು ಎಂದು ಲೇಖಕರು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಮೂಡಿಬಂದಿದೆ.
ವಿವರಣೆ : ಈ ಮನಸ್ಸಿನೊಳಗೆ ಕೊಲೆ, ಸುಲಿಗೆ, ದ್ವೇಷ, ಅಸೂಯೆ, ಕ್ಷೋಭೆ ಮುಂತಾದ ಗುಣಗಳಿಂದ ಈ ಜಗತ್ತು ನರಳುತ್ತಿದ್ದು ಇದನ್ನು ಹೀಗೆ ಬಿಟ್ಟರೆ ಈ ಜಗತ್ತು ಘಾಸಿಗೊಳ್ಳುವುದು, ಏಕೆಂದರೆ ಎಲ್ಲರ ಮನಸ್ಸಿನೊಳಗೆ ಎಲ್ಲರೂ ಇರುತ್ತಾರೆ.
ವಿಶೇಷತೆ: ಮನುಷ್ಯನ ಮನಸ್ಸಿನ ಬಗ್ಗೆ ಸರಳವಾದ ಭಾಷೆಯಲ್ಲಿ ವಿವರಿಸಲಾಗಿದೆ.
ಭಾಷಾ ಚಟುವಟಿಕೆ
ಅ. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ : ಹರಟೆ ಹೊಡೆಯುತ್ತಿದ್ದ ಹುಡುಗರ ಹಿಂದೆ ಆಕಸ್ಮಿಕವಾಗಿ ಮುಖ್ಯೋಪಾಧ್ಯಾಯಿನಿಯನ್ನು ಕಂಡು ಹುಡುಗರು ಕಕ್ಕಾಬಿಕ್ಕಿಯಾದರು.
ಆರಂಭಿಸಿ : ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಲು ಎಲ್ಲರೂ ನಿಶ್ಚಯಿಸಿದರು.
ಪ್ರಯತ್ನಿಸು : ನಾನು ವಾರ್ಷಿಕ ಪರೀಕ್ಷೆಯಲ್ಲಿ ೯೬%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತಿದ್ದೇನೆ.
ಘಾಸಿಗೊಳಿಸು : ಆಪ್ತಮಿತ್ರನ ಮಾತು, ಮನಸ್ಸನ್ನು ಘಾಸಿಗೊಳಿಸಿತು.
ಆ. ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.
ಒಳಿತು x ಕೆಡಕು
ಸಮಷ್ಟಿ x ಅಸಮಷ್ಠಿ
ಪುಣ್ಯ x ಪಾಪ
ಬೆಳಕು x ಕತ್ತಲೆ
ಧರ್ಮ x ಅಧರ್ಮ
ಇ. ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ:-
೧. ಕಟ್ಟುವುದು ಕಠಿಣ; ಕೆಡಹುವುದು ಸುಲಭ
ಯಾವುದೇ ಒಂದು ಕಟ್ಟಡ, ಮನೆ, ಶಾಲೆ, ಗುಡಿ ಯಾವುದಾದರೂ ಸರಿ ಕಟ್ಟುವುದು ಬಹಳ ಕಷ್ಟ. ಆದರೆ ಅದನ್ನು ಕೆಡವಿ ನಾಶಪಡಿಸುವುದು ಬಹಳ ಸುಲಭ. ವರ್ಷಾನುಗಟ್ಟಲೆ ಬಹಳ ಪರಿಶ್ರಮಪಟ್ಟು ಕಟ್ಟಿದ್ದನ್ನು ಕೆಲವೇ ಗಂಟೆಗಳಲ್ಲಿ ಕೆಡವಿ ಹಾಳು ಮಾಡಬಹುದು. ಅದನ್ನು ನಾಶಪಡಿಸುವುದು ಬಹಳ ಸುಲಭ.
ಹಣ, ಶ್ರಮಿಕರು, ಬೇಕಾದ ಸಾಮಾನುಗಳ ಎಲ್ಲವನ್ನು ಒಂದೊಂದಾಗಿ ಒಟ್ಟುಗೂಡಿಸಿ ತನ್ನದೆ ಆದ ಒಂದು ಮನೆಯನ್ನು ಕಟ್ಟುವುದು ನಿಧಾನವಾದರೂ ಅದನ್ನು ನೋಡಿ ಯಾರಾದರೂ ಅದು ಸರಿಯಲ್ಲ. ಇದು ಸರಿಯಲ್ಲ ಎಂಬ ನೆಪಗಳೊಂದಿಗೆ ಯಾರಾದರೂ ವಾಸ್ತು ಸರಿಯಿಲ್ಲ ಎಂದಾಗ ಅದನ್ನು ಕೆಡವಲು ಪ್ರಯತ್ನಿಸಿದರೆ ಅದರಿಂದ ಆಗುವ ನೋವು, ಈ ವಾಕ್ಯವನ್ನು ನೊಂದು ನುಡಿಸುತ್ತದೆ.
೨. ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು
ಗಾದೆ ವೇದಕ್ಕೆ ಸಮಾನ ಎಂದು ಬಹುಕಾಲದಿಂದ ಬಂದ ನಾಣ್ನುಡಿ ಇದೆ. ಇಲ್ಲಿ ಕೊಟ್ಟಿರುವ ಗಾದೆಯ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕಂಡುಬರುತ್ತದೆ, ರಾವಣನನ್ನು ಸಂಹರಿಸಿ ಲಂಕೆಯನ್ನು ಗೆದ್ದು ಅದನ್ನು ವಿಭೀಷಣನಿಗೆ ಹಿಂದಕ್ಕೆ ಕೊಟ್ಟು ಸೀತಾ ಸಮೇತನಾಗಿ ಶ್ರೀರಾಮನು ಅಯೋಧ್ಯೆಗೆ ಹೊರಟು ನಿಂತಾಗ ಈ ಮಾತನ್ನು ಹೇಳುತ್ತಾನೆ. “ಅಪಿ ಸ್ವರ್ಣಮಯೀ ಲಂಕಾ ನಮೋ ಲಕ್ಷ್ಮಣರೋಚತೇ” ಜನನೀ ಜನ್ಮ ಭೂಮಿಶ್ಚ ಸರ್ಗಾದಪಿ ಗಲೀಯಸೀ” “ಓ ಲಕ್ಕಮಣಾ! ಈ ಲಂಕಾ ಪಟ್ಟಣವು ಚಿನ್ನದಿಂದ ತುಂಬಿದ್ದರೂ ಸಹ ನನ್ನನ್ನು ಆಕರ್ಷಿಸುವುದಿಲ್ಲ. ನನ್ನ ತಾಯಿಯೂ, ಜನ್ಮಭೂಮಿಯೂ ಆದ ಅಯೋಧ್ಯೆ ನನಗೆ ಸ್ವರ್ಗಕ್ಕಿಂತ ಹೆಚ್ಚಿನದು”. ಶ್ರೀರಾಮನು ತನ್ನ ತಾಲ್ನಾಡನ್ನು ಎಷ್ಟು ಪ್ರೀತಿಸುತ್ತಿದ್ದನೆಂಬುದಕ್ಕೆ ಈ ಮಾತು ಸಾಕ್ಷಿಯಾಗಿದೆ. ಆದರ್ಶ ಪ್ರಭುವೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು ಈ ನುಡಿಮುತ್ತು ಕನ್ನಡದ ಜನಪದರ ಬಾಯಿಯಲ್ಲಿ ಮೇಲಿನ ಗಾದೆಯಾಗಿ ಪರಿವರ್ತಿತವಾಗಿ ಉಳಿದು ಬಂದಿದೆ.
ಈ. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ. ೧. ಗ್ರಾಮಸ್ವರಾಜ್ಯ
ಪ್ರಸ್ತಾವನೆ : ಭಾರತ ದೇಶದ ಗ್ರಾಮಗಳ ದೇಶ, ಗ್ರಾಮಗಳು ನಮ್ಮ ದೇಶದ ಬೆನ್ನೆಲುಬು, ನಮ್ಮ ದೇಶ ಸ್ವರಾಜ್ಯವಾಗಿದೆ. ಅಂದರೆ ಭಾರತ ದೇಶದಲ್ಲಿರುವ ಎಲ್ಲಾ ಗ್ರಾಮಗಳು ಸ್ವರಾಜ್ಯವನ್ನು ಪಡೆದಿವೆ ಎಂದರ್ಥವಾಗುತ್ತದೆ.
ಆದರೆ ಸರಿಯಾಗಿ ವೀಕ್ಷಿಸಿದಾಗ, ನಿಜಕ್ಕೂ ಎಲ್ಲಾ ಗ್ರಾಮಗಳು ಸ್ವರಾಜ್ಯವಾಗಿದೆಯೋ? ಎಂಬ ಪ್ರಶ್ನೆಗೆ ಉತ್ತರ ‘ಇಲ್ಲ’ ಎಂದೇ ಹೇಳಬೇಕಾಗುವುದು. ಏಕೆಂದರೆ ಇಂದು ಗ್ರಾಮಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
ಆರೋಗ್ಯ ಕೇಂದ್ರಗಳು ಇಲ್ಲದಿರುವಿಕೆ, ಶಾಲೆಗಳು ಇಲ್ಲದಿರುವಿಕೆ, ಕುಡಿಯುವ ನೀರಿನ ಪೂರೈಕೆ, ಸರಿಯಾದ ರಸ್ತೆಗಳು ಇಲ್ಲದಿರುವುದು, ವಾಹನ ಸೌಕರ್ಯ ಇಲ್ಲದಿರುವಿಕೆ, ವ್ಯಾಪಾರ ಮಳಿಗೆಗಳ ಕೊರತೆ, ಬೀದಿ ದೀಪಗಳ ಕೊರತೆ ಮುಂತಾದವುಗಳ ಕೊರತೆಯನ್ನು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವಾರು ಊರುಗಳಲ್ಲಿ ಕಾಣಬಹುದಾಗಿದೆ.
ಉಪಸಂಹಾಗ : ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ಇಂದಿಗೂ ಕನಸಾಗಿಯೇ ಉಳಿದಿರುವುದು ನಿಜಕ್ಕೂ ಶೋಚನೀಯ. ಇದರೊಂದಿಗೆ ಪ್ರಕೃತಿಯ ವಿಕೋಪ, ಕಾಡುಪ್ರಾಣಿಗಳ ಹಾವಣೆಯು ಸೇರಿಕೊಂಡು ಜನರ ಬವಣೆ ಹೇಳತೀರದಾಗಿದೆ. ಸರ್ಕಾರ ಹಲವಾರು ಗ್ರಾಮಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಹಲವಾರು ಹಳ್ಳಿಗಳ ಇಂಥಹ ಸೌಲಭ್ಯಗಳಿಂದ ವಂಚಿತ ವಾಗಿರುವುದು ಶೋಚನೀಯವೇ ಸರಿ.
ಕೊನೆ ಪಕ್ಷ ಗ್ರಾಮದವರೇ ಒಟ್ಟಾಗಿ ರಸ್ತೆ ನಿರ್ಮಾಣ, ಬಾವಿ ನಿರ್ಮಾಣ ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಕೊರತೆಯನ್ನು ನೀಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹವರ ಮೇಲೆ ಭಗವಂತನ ಕೃಪೆ ಎಂಬಂತೆ ಹಲವಾರು ಸಿನಿಮಾ ಯಶ್ ಮುಂತಾದ ನಟರು ಗ್ರಾಮಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗಾಗಿ ಸಹಾಯ ಹಸ್ತ ನೀಡಿರುವುದು ಶ್ಲಾಘನೀಯವಾಗಿದೆ.
೨. ತ್ಯಾಜ್ಯ ವಸ್ತುಗಳ ನಿರ್ವಹಣೆ
ಪ್ರಸ್ತಾವನೆ : ಕಸದ ಸಂಗ್ರಹಣೆ, ಸಂಸ್ಕರಣೆ, ಪುನರ್ಬಳಕೆ ಇಂದು ಮಾನವನ ಭೌತಿಕ ಪರಿಸರ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಕೈಗಾರಿಕೀಕರಣ, ನಗರೀಕರಣ, ಸಂಸ್ಕೃತೀಕರಣ, ಜಾಗತೀಕರಣದ ಅಬ್ಬರದಲ್ಲಿ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ತ್ಯಾಜ್ಯವಸ್ತುಗಳ ನಿರ್ವಹಣೆ ಒಂದು ಸಮಸ್ಯೆಯಾಗುತ್ತಿದೆ.
ವಿಷಯ ನಿರೂಪಣೆ : ಮಾನವನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿ ಬಿಸಾಡುವ ನಿರುಪಯುಕ್ತ ವಸ್ತುಗಳೇ ತ್ಯಾಜ್ಯವಸ್ತುಗಳು. ಇವುಗಳಲ್ಲಿ ಮೂರು ವಿಧ. ಘನತ್ಯಾಜ್ಯವಸ್ತುಗಳು, ದ್ರವ ತ್ಯಾಜ್ಯವಸ್ತುಗಳು ಮತ್ತು ಅನಿಲತ್ಯಾಜ್ಯ ವಸ್ತುಗಳು. ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಪರಿಸರ ನಾಶವಾಗುತ್ತದೆ. ಮೊದಲ ಹಂತದಲ್ಲಿ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು, ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಲು ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮರುಬಳಕೆಗೆ ಯೋಗ್ಯವಾದ ತ್ಯಾಜ್ಯವಸ್ತುಗಳನ್ನು ಮರುಬಳಕೆಗೂ ಮರುಬಳಕೆ ಮಾಡಲಾಗದ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ
ದಹಿಸಬೇಕು ಅಥವಾ ಭೂಮಿಯಲ್ಲಿ ಹೂಳಬೇಕು. ಅಮೆರಿಕದಲ್ಲಿ ಪ್ರತಿವರ್ಷ ರಿಸೈಕಲಿಂಗ್ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ತ್ಯಾಜ್ಯ ವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ತಯಾರಿಸುತ್ತಾರೆ. ನದಿಗಳನ್ನು ದತ್ತು ತೆಗೆದುಕೊಂಡು ತ್ಯಾಜ್ಯವಸ್ತುಗಳು ನದಿಗೆ ಸೇರದಂತೆ ನಿಗವಹಿಸುತ್ತಾರೆ. ವಿಯೆನ್ನಾದಲ್ಲಿ ದಹನಕ್ರಿಯಾ ಸ್ಥಾವರ ನಿರ್ಮಿಸಿರುತ್ತಾರೆ.
ಉಪಸಂಹಾರ : ತ್ಯಾಜ್ಯವಸ್ತುಗಳ ನಿರ್ವಹಣೆ ಮಾಡುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಾಂಪೋಸ್ಟ ತಯಾರಿಕೆ, ರಿಸೈಕಲಿಂಗ್ ಮಾಡುವುದನ್ನು ಹವ್ಯಾಸ ಮಾಡಿಕೊಂಡರೆ ಸ್ವಚ್ಛ ಭಾರತ ಅಭಿಯಾನಕ್ಕೆ ಚೊಚ್ಚಲು ಕಾಣಿಕೆ ನೀಡಿದಂತಾಗುತ್ತದೆ. ಈ ಬಗ್ಗೆ ಜನರಿಗೆ ಅರಿವನ್ನು ಉಂಟುಮಾಡುವ ಕಾರ್ಯಕ್ರಮವನ್ನು ಏರ್ಪಡಿಸಬೆಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಹೆಚ್ಚಿನ ಅಭ್ಯಾಸಕ್ಕಾಗಿ
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :
೧. ದೇವತೆ ಹಾಗೂ ಜನರ ನಡುವೆ ನಡೆದ ಮಾತುಕತೆ ಯನ್ನು ಸಂಭಾಷಣೆಯ ರೂಪದಲ್ಲಿ ಬರೆಯಿರಿ.
ದೇವತೆ – ಏನ್ರಯಾ ಏನ್ ಮಾಡ್ತಾ ಇದ್ದೀರಿ?
ಜನರು – ನಿನಗೊಂದು ಗುಡಿ ಮನೆಕಡ್ತಾ ಇದ್ದೀವಿ ತಾಯಿ
ದೇವರು – ಓಹೋ ನನಗೆ ಗುಡಿ ಮನೆ ಕಟ್ಟತಾ ಇದ್ದೀರಪ ಹಾಗಾದರೆ ನಿಮಗೆಲ್ಲ ಮನೆ ಉಂಟಾ ನನ್ನ ಮಕ್ಕಳಾ
ಒಬ್ಬ – ನನಗಿಲ್ಲ
ದೇವತೆ – ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೆ ಮನೆ ಬೇಡ.
೨. ಊರಿನ ಜನರೆಲ್ಲಾ ಯಾವ ಕಾರ್ಯದಲ್ಲಿ ತೊಡಗಿದ್ದರು?
ಊರಿನ ಜನರೆಲ್ಲಾ ಸೇರಿ ಆ ಊರಿನ ದೇವತೆ ಮಂಚಮ್ಮನಿಗೆ ಗುಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದರು.