10th Standard Dhatugala Avartaniya Vargikarana Science Notes Question Answer Guide Extract Mcq Pdf Download Karnataka State Syllabus 2025 10th class science chapter 5 question answer in kannada Kseeb Solution For Class 10 Science Chapter 5 Notes in Kannada 10ನೇ ತರಗತಿ ಧಾತುಗಳ ಆವರ್ತನೀಯ ವರ್ಗೀಕರಣ ನೋಟ್ಸ್ ಪ್ರಶ್ನೋತ್ತರಗಳು sslc dhatugala avartaniya vargikarana in kannada question answer science notes for class 10 kannada medium 10ನೇ ತರಗತಿ ವಿಜ್ಞಾನ ನೋಟ್ಸ್ pdf 10th science dhatugal avartaniya vargikaran question answer science notes class 10 state board, Class 10th Science Chapter 5th Notes in Kannada.

10ನೇ ತರಗತಿ ಧಾತುಗಳ ಆವರ್ತನೀಯ ವರ್ಗೀಕರಣ ನೋಟ್ಸ್ ಪ್ರಶ್ನೋತ್ತರಗಳು
ಅಧ್ಯಾಯ 05 – ಧಾತುಗಳ ಆವರ್ತನೀಯ ವರ್ಗೀಕರಣ
ಪ್ರಶ್ನೆಗಳು
- ಡೋಬರೈನರ್ರವರ ತ್ರಿವಳಿಗಳು ನ್ಯೂಲ್ಯಾಂಡ್ ಅಷ್ಟಕಗಳ ಗುಂಪಿನಲ್ಲಿಯೂ ಕಂಡುಬರುತ್ತವೆಯೆ? ಹೋಲಿಸಿ ಪತ್ತೆ ಹಚ್ಚಿರಿ.
ಹೌದು, ಡೋಬರೈನರ್ರವರ ತ್ರಿವಳಿಗಳು ನ್ಯೂಲ್ಯಾಂಡ್ ಅಷ್ಟಕಗಳ ಗುಂಪಿನಲ್ಲಿಯೂ ಕಂಡು ಬರುತ್ತದೆ. ಆ ತ್ರಿವಳಿಗಳು Li, Na ಮತ್ತು K.
2. ಡೋಬರೈನರ್ರವರ ವರ್ಗೀಕರಣದ ಮಿತಿಗಳು ಯಾವುವು?
ಡೋಬರೈನರ್ರವರ ವರ್ಗೀಕರಣದಲ್ಲಿ 3 ತ್ರಿವಳಿಗಳನ್ನು ಮಾತ್ರ ವರ್ಗೀಕರಿಸಲು ಸಾಧ್ಯವಾಯಿತು. ಉಳಿದ ಧಾತುಗಳನ್ನು ವರ್ಗೀಕರಿಸಲು ಸಾಧ್ಯವಾಗಲಿಲ್ಲ. ಇದೇ ಅವರ ವರ್ಗೀಕರಣದ ಮಿತಿ3.
3. ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮದ ಮಿತಿಗಳಾವುವು?
ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ಮಿತಿ ಇಂತಿದೆ :
- ಅಷ್ಟಕಗಳ ನಿಯಮವು ಕೇವಲ ಕ್ಯಾಲ್ಸಿಯಂವರೆಗೆ ಮಾತ್ರ ಅನ್ವಯಿಸುತ್ತದೆ. ಕ್ಯಾಲ್ಸಿಯಂನ ನಂತರದ ಪ್ರತಿ ಎಂಟನೇ ಧಾತುವಿನ ಗುಣಗಳು ಮೊದಲನೇ ಧಾತುವಿನ ಗುಣಗಳು ಮೊದಲನೇ ಧಾತುವಿನ ಗುಣಗಳಂತೆ ಇರುವುದಿಲ್ಲ.
- ನ್ಯೂಲ್ಯಾಂಡ್ಸ್ರರವರು ಅಲ್ಲಿಯವರೆಗೆ ಆವಿಷ್ಕರಿಸಿದ್ದ 56 ಧಾತುಗಳನ್ನು ವರ್ಗಿಕರಿಸಿದ್ದರು. ನಂತರದ ಹಲವಾರು ಹೊಸ ಧಾತುಗಳು ಅಷ್ಟಕಗಳ ನಿಯಮಕ್ಕೆ ಸರಿ ಹೊಂದಲಿಲ್ಲ.
- ನಿಕ್ಕಲ್ ಮತ್ತು ಕೋಬಾಲ್ಟನ್ನು ಫ್ಲೋರಿನ್. ಕ್ಲೋರಿನ್, ಬ್ರೋಮಿನ್ಗಳ ಕಂಬ ಸಾಲಿನಲ್ಲಿಟ್ಟುರುವುದಕ್ಕೆ ಕಾರಣವನ್ನು ಕೊಡಲು ಅಸಮರ್ಥವಾಯಿತು.
- ನಿಕ್ಕಲ್ ಕೋಬಾಲ್ಟ್ ಗುಣಗಳನ್ನು ಹೋಲುವ ಕಬ್ಬಿಣವನ್ನು ದೂರದಲ್ಲಿಟ್ಟಿರುವುದಕ್ಕೂ ಸಮರ್ಥವಾದ ಕಾರಣವನ್ನು ಕೊಟ್ಟಿಲ್ಲ.
- ಈ ನಿಯಮವು ಹಗುರವಾದ ಧಾತುಗಳಿಗೆ ಮಾತ್ರ ಸರಿ ಹೊಂದುತ್ತದೆ.
- ಈ ಕೆಳಗಿನ ಧಾತುಗಳ ಆಕ್ಸೈಡ್ ಗಳ ಸೂತ್ರಗಳನ್ನು ಊಹಿಸಲು ಮೆಂಡಲೀವ್ ರವರ ಆವರ್ತಕ ಕೋಷ್ಟಕ ಬಳಸಿ.
K, C, Al, Si, Ba
‘K‘ ಯು । ಗುಂಪಿನಲ್ಲಿದೆ. ಅದರ ಆಕ್ಸೆಡ್ K2O.
‘C‘ ಯು TV ಗುಂಪಿನಲ್ಲಿದೆ. . ಅದರ ಆಕ್ಸೆಡ್ CO2.
ʻAl’ ಯು III ಗುಂಪಿನಲ್ಲಿದೆ. . ಅದರ ಆಕ್ಸೆಡ್ AL2O3.
‘Si‘ ಯು IV ಗುಂಪಿನಲ್ಲಿದೆ. . ಅದರ ಆಕ್ಸೆಡ್ Si2O2.
‘Ba’ ಯು II ಗುಂಪಿನಲ್ಲಿದೆ. . ಅದರ ಆಕ್ಸೆಡ್ BaO.
- ಮೆಂಡಲೀವ್ ತನ್ನ ಆವರ್ತಕ ಕೋಷ್ಟಕದಲ್ಲಿ ಖಾಲಿ ಜಾಗವನ್ನು ಬಿಟ್ಟ ನಂತರದಲ್ಲಿ ಗ್ಯಾಲಿಯಂನ ಜೊತೆಗೆ ಇನ್ನೂ ಯಾವ ಧಾತುಗಳನ್ನು ಪತ್ತೆಮಾಡಲಾಯಿತು ?
(ಯಾವುದಾದರೂ ಎರಡು)
ಸ್ಟ್ಯಾಂಡಿಯಂ ಮತ್ತು ಜರ್ಮೇನಿಯಂ.
3 ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದ ರಚನೆಗೆ ಉಪಯೋಗಿಸಿದ ಮಾನದಂಡಗಳು ಯಾವುವು?
ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದ ರಚನೆಗೆ ಧಾತುಗಳ ಪರಮಾಣು ರಾಶಿ, ಮೂಲಭೂತ ಗುಣಗಳು ಮತ್ತು ಒಂದೇ ರೀತಿಯ ರಾಸಾಯನಿಕ ಲಕ್ಷಣಗಳ ಆಧಾರದ ಮೇಲೆ ಧಾತುಗಳನ್ನು ವರ್ಗೀಕರಿಸಿದರು. ಒಂದೇ ರೀತಿಯ ಭೌತ ಮತ್ತು ರಾಸಾಯನಿಕ ಗುಣಗಳಿರುವ ಧಾತುಗಳು ಅವುಗಳ ಪರಮಾಣುರಾಶಿಯ ಆವರ್ತಕ ಫಲಿತಗಳಾಗಿವೆ ಎಂಬ ಅಂಶವನ್ನು ಮಂಡಿಸಿದರು.
4 ನೀವು ರಾಜಾನಿಲಗಳನ್ನು ಬೇರೆ ಗುಂಪಿನಲ್ಲಿಡಬೇಕೆಂದು ಏಕೆ ಯೋಚಿಸುವಿರಿ?
ರಾಜಾನಿಲಗಳು ಜಡ ಅನಿಲಗಳು ಇವು ನಮ್ಮ ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದು. ಇವುಗಳ ಗುಣಗಳು ಬೇರೆಯೇ ಆಗಿರುವುದರಿಂದ ಹೊಸ ಗುಂಪಿನಲ್ಲಿ ಇಡಬಹುದಾಗಿತ್ತು.
1 ಮೆಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿದ್ದ ವಿವಿಧ ಅಸಂಗತತೆಗಳನ್ನು ಆಧುನಿಕ ಆವರ್ತಕ ಕೋಷ್ಟಕವು ಹೇಗೆ ತೆಗೆದು ಹಾಕಿತು?
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಮೆಂಡಲೀವ್ ರವರ ಆವರ್ತಕೋಷ್ಟಕದಲ್ಲಿದ್ದ ವಿವಿಧ ಅಸಂಗತತೆಗಳನ್ನು ತೆಗೆದು ಹಾಕಿದೆ.
- .ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳನ್ನು ಪರಮಾಣು ಸಂಖ್ಯೆಯ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸಿರುವುದರಿಂದ ಅವುಗಳ ಗುಣಗಳು ಹೆಚ್ಚು ನಿಖರವಾಗಿ ಊಹಿಸಬಹುದಾಗಿದೆ. ಇದರಿಂದ ಒಂದು ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಧಾತುಗಳನ್ನು ಇಡುವ ಸಂಭವ ಬರುವುದಿಲ್ಲ.
- ಒಂದು ಗುಂಪಿನ ಎಲ್ಲಾ ಧಾತುಗಳಲ್ಲಿ ಒಂದೇ ಸಂಖ್ಯೆಯ ವೇಲೆನ್ಸ್ ಇಲೆಕ್ಟ್ರಾನ್ಗಳಿವೆ.
- ಗುಂಪುಗಳು ತಮ್ಮ ಹೊರ ಕವಚದಲ್ಲಿ ಒಂದೇ ರೀತಿಯ ಇಲೆಕ್ಟ್ರಾನಿಕ್ ವಿನ್ಯಾಸವನ್ನು ಹೊಂದಿದೆ.
- ಒಂದೇ ಸಂಖ್ಯೆಯ ಕವಚಗಳನ್ನು ಆಕ್ರಮಿಸಿಕೊಳ್ಳುವ ಬೇರೆ ಬೇರೆ ಧಾತುಗಳ ಪರಮಾಣುಗಳನ್ನು ಒಂದೇ ಆವರ್ತದಲ್ಲಿಡಲಾಗಿದೆ.
- ಹೈಡ್ರೋಜನ್ ಸ್ಥಾನವನ್ನೂ ಸಹ ಪರಿಹಾರ ಮಾಡಲಾಗಿದೆ. ಹೈಡ್ರೋಜನ್ ಅನ್ನು ಇದರಲ್ಲಿರುವ ವೇಲೆನ್ಸ್ ಇಲೆಕ್ಟ್ರಾನ್ಗಳ ಗುಂಪಿನಲ್ಲಿಯೇ ಇದನ್ನೂ ಇಡಲಾಗಿದೆ
2 ಮೆಗ್ನೀಸಿಯಂ ನಂತೆಯೇ ರಾಸಾಯನಿಕ ಕ್ರಿಯೆಗಳನ್ನು ತೋರಿಸುವ ಸಾಧ್ಯತೆಯುಳ್ಳ ಎರಡು ಧಾತುಗಳನ್ನು ಊಹಿಸಿ. ನಿಮ್ಮ ಆಯ್ಕೆಗೆ ಆಧಾರವೇನು?
ಮೆಗ್ನೀಸಿಯಂನಂತೆಯೇ ರಾಸಾಯನಿಕ ಕ್ರಿಯೆಗಳನ್ನು ತೋರಿಸುವ ಎರಡು ಧಾತುಗಳು ಕ್ಯಾಲ್ಸಿಯಂ (Ca) ಮತ್ತು ಸ್ಟ್ರೋನ್ಟಿಯಮ್ (Sr). ಏಕೆಂದರೆ ಇವುಗಳಲ್ಲಿಯೂ ಸಹ ವೇಲೆನ್ಸ್ ಇಲೆಕ್ಟ್ರಾನ್ಗಳ ಸಂಖ್ಯೆ ಸಮವಾಗಿದ್ದು, ಇವೂ ಸಹ ಮೆಗ್ನಿಸಿಯಂನಂತೆಯೇ ರಾಸಾಯನಿಕ ಗುಣಗಳನ್ನು ಹೊಂದಿವೆ.
- ಇವುಗಳನ್ನು ಹೆಸರಿಸಿ.
ಎ. ಅತ್ಯಂತ ಹೊರಕವಚದಲ್ಲಿ ಒಂದೇ ಇಲೆಕ್ಟ್ರಾನ್ ಹೊಂದಿರುವ ಮೂರು ಧಾತುಗಳು #
ಲೀಥಿಯಂ(Li) ಸೋಡಿಯಂ(Na) ಮತ್ತು ಪೊಟ್ಯಾಸಿಯಂ(k) ಧಾತುಗಳು ತಮ್ಮ ಅತ್ಯಂತ ಹೊರ ಕವಚದಲ್ಲಿ ಒಂದೇ ಇಲೆಕ್ಟ್ರಾನ್ಅನ್ನು ಹೊಂದಿವೆ.
ಬಿ. ಅತ್ಯಂತ ಹೊರಕವಚದಲ್ಲಿ ಎರಡು ಇಲೆಕ್ಟ್ರಾನ್ ಹೊಂದಿರುವ ಎರಡು ಧಾತುಗಳು
ಮೆಗ್ನಿಸಿಯಂ(Mg) ಮತ್ತು ಕ್ಯಾಲ್ಸಿಯಂ (Ca) ಗಳು ಎರಡು ಇಲೆಕ್ಟ್ರಾನ್ಗಳನು ಅತ್ಯಂತ ಹೊರಕವಚದಲ್ಲಿ ಹೊಂದಿದೆ.
ಸಿ. ಪೂರ್ತಿ ತುಂಬಿರುವ ಹೊರ ಕವಚವನ್ನು ಹೊಂದಿರುವ ಮೂರು ಧಾತುಗಳು,
ನಿಯಾನ್ (Ne) ಆರ್ಗಾನ್ (Ar) ಮತ್ತು ಝೇನಾನ್ (Xe) ಗಳಲ್ಲಿ ಹೊರಕವಚವು ಪೂರ್ತಿಯಾಗಿ ತುಂಬಿದೆ.
- ಎ. ಲೀಥಿಯಂ, ಸೋಡಿಯಂ, ಪೋಟ್ಯಾಸಿಯಂ ಇವೆಲ್ಲವೂ ಲೋಹಗಳಾಗಿದ್ದು ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ಧಾತುಗಳ ಪರಮಾಣುಗಳಲ್ಲಿ ಸಾಮ್ಯತೆಗಳಿವೆಯೇ?
ಹೌದು, ಲೀಥಿಯಂ, ಸೋಡಿಯಂ ಮತ್ತು ಪೋಟ್ಯಾಸಿಯಂಗಳಲ್ಲಿ ಅತ್ಯಂತ ಹೊರಕವಚದಲ್ಲಿ ಒಂದೇ ಒಂದು ಇಲೆಕ್ಟ್ರಾನ್ನ್ನು ಹೊಂದಿವೆ.
ಬಿ. ಹೀಲಿಯಂ ಕ್ರಿಯಾಪಟುತ್ವವಲ್ಲದ ಅನಿಲವಾಗಿದೆ ಮತ್ತು ನಿಯಾನ್ ಅತ್ಯಂತ ಕಡಿಮೆ ಕ್ರಿಯಾಪಟುತ್ವ ತೋರುತ್ತದೆ, ಅವುಗಳ ಅಣುಗಳಲ್ಲಿ ಏನದರೂ ಸಾಮ್ಯತೆ ಇದೆಯೇ?
ಹೀಲಿಯಂ ಮತ್ತು ನಿಯಾನ್ನ ಹೊರಕವಚಗಳಲ್ಲಿ ಇಲೆಕ್ಟ್ರಾನ್ಗಳು ತುಂಬಿವೆ. ಹೀಲಿಯಂನಲ್ಲಿ K (shall) ನಲ್ಲಿ ಎರಡು ಇಲೆಕ್ಟ್ರಾನ್ಗಳು ಮತ್ತು ನಿಯಾನ್ನಲ್ಲಿ L (shall) ಎಂಟು ಇಲೆಕ್ಟ್ರಾನ್ಗಳಿವೆ.
- ಆಧುನಿಕ ಆವರ್ತಕ ಕೋಷ್ಟಕದ ಮೊದಲ ಹತ್ತು ಧಾತುಗಳಲ್ಲಿ ಲೋಹಗಳಾವುವು?
ಆಧುನಿಕ ಆವರ್ತಕ ಕೋಷ್ಟಕದ ಮೊದಲ ಹತ್ತು ಧಾತುಗಳಲ್ಲಿ ಲೀಥಿಯಂ (Li) ಮತ್ತು ಬೆರಿಲಿಯಮ್ (Be) ಗಳು ಲೋಹಗಳು.
6 ಆಧುನಿಕ ಆವರ್ತಕ ಕೋಷ್ಟಕದಲ್ಲಿನ ಸ್ಥಾನವನ್ನು ಆಧರಿಸಿ, ಕೆಳಗಿನವುಗಳಲ್ಲಿ ಯಾವ ಧಾತು ಅತೀ ಹೆಚ್ಚು ಲೋಹೀಯ ಲಕ್ಷಣಗಳನ್ನು ಹೊಂದಿದೆ ಎಂದು ನೀವು ಭಾವಿಸುತ್ತೀರಿ?
Ga Ge As Se Be
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಕೊಟ್ಟಿರುವ ಎಲ್ಲಾ ಧಾತುಗಳಲ್ಲಿ Be (ಬೆರಿಲಿಯಮ್) ಅತಿ ಹೆಚ್ಚು ಲೋಹೀಯ ಲಕ್ಷಣವನ್ನು ಹೊಂದಿದೆ. ಏಕೆಂದರೆ ಅದು ಕೋಷ್ಟಕದ ಎಡಗಡೆ ತುತ್ತ ತುದಿಯಲ್ಲಿವೆ.
ಅಭ್ಯಾಸ
- ಆವರ್ತಕ ಕೋಷ್ಟಕದ ಆವರ್ತಗಳಲ್ಲಿ ಎಡದಿಂದ ಬಲಕ್ಕೆ ಹೋದಂತೆ ತೋರುವ ಪ್ರವೃತ್ತಿಗೆ ಸಂಬಂಧಿಸಿದಂತೆ ಇರುವ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಲ್ಲ.
a) ಧಾತುಗಳು ಲೋಹಿಯ ಸ್ವಭಾವ ಕಡಿಮೆಯಾಗುತ್ತದೆ.
b) ವೇಲೆನ್ಸ್ ಇಲೆಕ್ಟ್ರಾನ್ಗಳ ಸಂಖ್ಯೆ ಹೆಚ್ಚಾಗುತ್ತದೆ.
c) ಪರಮಾಣುಗಳು ಹೆಚ್ಚು ಸುಲಭವಾಗಿ ತಮ್ಮ ಇಲೆಕ್ಟ್ರಾನ್ಗಳನ್ನು ಕಳೆದುಕೊಳ್ಳುತ್ತವೆ.
d) ಆಕ್ಸೈಡ್ಗಳು ಹೆಚ್ಚು ಆಮ್ಲೀಯವಾಗುತ್ತದೆ.
ಉ: c) ಪರಮಾಣುಗಳು ಹೆಚ್ಚು ಸುಲಭವಾಗಿ ತಮ್ಮ ಇಲೆಕ್ಟ್ರಾನ್ಗಳನ್ನು ಕಳೆದುಕೊಳ್ಳುತ್ತವೆ.
- X ಧಾತು XCL2 ಸೂತ್ರ ಹೊಂದಿರುವ ಕ್ಲೋರೈಡನ್ನು ಉಂಟುಮಾಡುತ್ತದೆ. ಇದೊಂದು ಘನವಾಗಿದ್ದು ಉನ್ನತ ಕರಗುವ ಬಿಂದು ಹೊಂದಿದೆ X ಹೆಚ್ಚಾಗಿ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ವರ್ಗಕ್ಕೇ ಸೇರಿದೆ.
a) Na
b) Mg
c) Al
d) Si
ಉ: b) Mg
- ಯಾವ ಧಾತುವಿನಲ್ಲಿ
a) ಎರಡು ಕವಚಗಳಿದ್ದು, ಎರಡು ಕವಚಗಳಿಗೂ ಎಲೆಕ್ಟ್ರಾನ್ ಗಳಿಂದ ಪೂರ್ತಿಯಾಗಿ ತುಂಬಿದೆ?
ನಿಯಾನ್ (Na).
b) ಇಲೆಕ್ಟ್ರಾನ್ ವಿನ್ಯಾಸ 2.8.2 ಆಗಿದೆ?
ಮೆಗ್ನಿಸಿಯಂ (Mg).
c) ಒಟ್ಟು ಮೂರು ಕವಚಗಳಿದ್ದು, ವೇಲೆನ್ಸ್ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಗಳಿವೆ?
ಸಿಲಿಕಾನ್(Si).
d) ಒಟ್ಟು ಎರಡು ಕವಚಗಳಿದ್ದು, ವೇಲೆನ್ಸ್ ಕವಚದಲ್ಲಿ ಮೂರು ಇಲೆಕ್ಟ್ರಾನ್ಗಳಿವೆ?
ಬೋರಾನ್ (B).
6) ಎರಡನೇ ಕವಚದಲ್ಲಿ ಮೊದಲನೇ ಕವಚದ ಎರಡರಷ್ಟು ಇಲೆಕ್ಟ್ರಾನುಗಳಿವೆ?
ಕಾರ್ಬನ್(C)
4.a) ಆವರ್ತಕ ಕೋಷ್ಟಕದಲ್ಲಿ ಬೋರಾನ್ನ ಗುಂಪಿನಲ್ಲಿರುವ ಎಲ್ಲ ಧಾತುಗಳ ಯಾವ ಗುಣಗಳು ಸಾಮಾನ್ಯವಾಗಿವೆ?
ಬೋರಾನ್ನ ಗುಂಪಿನಲ್ಲಿರುವ ಎಲ್ಲಾ ಧಾತುಗಳ ವೇಲೆನ್ಸಿ 3 ಆಗಿದೆ.
b) ಆವರ್ತಕ ಕೋಷ್ಟಕದಲ್ಲಿ ಪ್ಲೋರಿನ್ ಎಲ್ಲಾ ಧಾತುಗಳ ಯಾವ ಲಕ್ಷಣಗಳು ಸಾಮಾನ್ಯವಾಗಿವೆ?
ಫ್ಲೋರಿನ್ನನ ಗುಂಪಿನಲ್ಲಿರುವ ಎಲ್ಲಾ ಧಾತುಗಳ ವೇಲೆನ್ಸಿ 1 ಆಗಿದೆ.
- ಒಂದು ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸ 2,8,7
a) ಈ ಧಾತುವಿನ ಪರಮಾಣು ಸಂಖ್ಯೆ ಎಷ್ಟು?
ಈ ಧಾತುವಿನ ಪರಮಾಣು ಸಂಖ್ಯೆ 17 ಆಗಿದೆ.
b) ಈ ಕೆಳಗಿನ ಯಾವ ಧಾತುಗಳು ರಾಸಾಯನಿಕವಾಗಿ ಸಮಾನವಾಗಿದೆ?(ಪರಮಾಣು ಸಂಖ್ಯೆಯನ್ನು ಆವರಣದಲ್ಲಿ ನೀಡಲಾಗಿದೆ)
N (7)
F(9)
P(15)
Ar(18)
ಕೊಟ್ಟಿರುವ ಧಾತುಗಳಲ್ಲಿ F(9) ರಾಸಾಯನಿಕವಾಗಿ ಸಮಾನವಾಗಿದೆ. ಇವುಗಳ ಇಲೆಕ್ಟ್ರಾನಿಕ್ ವಿನ್ಯಾಸ 2, 7 ಆಗಿರುವುದರಿಂದ ಸಮಾನವಾಗಿದೆ.
- ಆವರ್ತಕ ಕೋಷ್ಟಕದಲ್ಲಿ A, B ಮತ್ತು C ಈ ಮೂರು ಧಾತುಗಳ ಸ್ಥಾನವನ್ನು ಕೆಳಗೆ ತೋರಿಸಲಾಗಿದೆ

ಎ. A ಲೋಹವೇ ಅಥವಾ ಅಲೋಹವೇ?
Aಯು ಒಂದು ಅಲೋಹ
ಬಿ. C ಹೆಚ್ಚು ಕ್ರಿಯಾಪಟುವಾಗಿದೆಯೇ ಅಥವಾ A ಗಿಂತ ಕಡಿಮೆ ಕ್ರಿಯಾಪಟುದೇ?
C ಯು A ಗಿಂತ ಕಡಿಮೆ ಕ್ರಿಯಾಪಟುವಾಗಿದೆ ಏಕೆಂದರೆ ಕ್ರಿಯಾಶೀಲತ್ವವು M ಹ್ಯಾಲೋಜನ್ ಗುಂಪಿಗಿಂತ ಕಡಿಮೆಯಾಗುತ್ತಾ ಹೋಗುತ್ತದೆ.
ಸಿ. Cಯು ಗಾತ್ರದಲ್ಲಿ B ಗಿಂತ ದೊಡ್ಡದೇ ಅಥವಾ ಚಿಕ್ಕದೇ?
Cಯು Bಗಿಂತ ಚಿಕ್ಕದು, ಏಕೆಂದರೆ ನ್ಯೂಕ್ಲಿಯಸ್ನ ಆವೇಶವು ಇಲೆಕ್ಟ್ರಾನ್ಗಳನ್ನು ನ್ಯೂಕ್ಲಿಯಸ್ನ ಹತ್ತಿರಕ್ಕೆ ಸೆಳೆಯುವುದರಿಂದ ಪರಮಾಣು ಗಾತ್ರ ಕಡಿಮೆಯಾಗುತ್ತದೆ.
ಡಿ. A ಧಾತುವು ಕ್ಯಾಟಿಯಾನು ಅಥವಾ ಆನಯಾನುಗಳಲ್ಲಿ ಯಾವ ಆಯಾನನ್ನು ಉಂಟುಮಾಡುತ್ತದೆ?
A ಧಾತುವು ಆನಯಾನ್ ಏಕೆಂದರೆ ಇದು ಇಲೆಕ್ಟ್ರಾನ್ನ್ನು ಪಡೆದುಕೊಂಡು ಆಸ್ಟ್ರೇಟ್ (octet) ಆಗುವುದು.
- ನೈಟ್ರೋಜನ್ ( ಪರಮಾಣು ಸಂಖ್ಯೆ 7) ಮತ್ತು ರಂಜಕ (ಫಾಸ್ಪರಸ್ ಪರಮಾಣ ಸಂಖ್ಯೆ 15) ಆವರ್ತಕ ಕೋಷ್ಟಕದ 15 ನೇ ವರ್ಗಕ್ಕೆ ಸೇರಿವೆ. ಈ ಎರಡೂ ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬರೆಯಿರಿ. ಇವುಗಳಲ್ಲಿ ಯಾವುದು ಹೆಚ್ಚು ವಿದ್ಯುದೃಣೀಯ? ಏಕೆ?
ನೈಟ್ರೋಜನ್ – 7 – 2, 5 —1S2 2S2 3S3
ಫಾಸ್ಫರಸ್ – 15 – 2, 8, 5 —- 1S2 2S2 3P6 3S2 3P2
ಆವರ್ತಕ ಕೋಷ್ಟಕದ ಗುಂಪಿನಲ್ಲಿ IS, 2S, 2P, IS, 2S, 2P, 3S, 3P, ಮೇಲಿನಿಂದ ಕೆಳಕ್ಕೆ ಬಂದಂತೆ ವಿದ್ಯುತ್ ಋಣಾತ್ಮಕತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ನೈಟ್ರೋಜನ್ ಹೆಚ್ಚು ವಿದ್ಯುದೃಣೀಯವಾಗಿದೆ.
- ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸವು ಆಧುನಿಕ ಆವರ್ತಕ ಕೋಷ್ಟಕದಲ್ಲಿ ಅದರ ಸ್ಥಾನದೊಂದಿಗೆ ಯಾವ ರೀತಿ ಸಂಬಂಧ ಹೊಂದಿದೆ?
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದೇ ಇಲೆಕ್ಟ್ರಾನಿಕ್ ವಿನ್ಯಾಸವನ್ನು ಹೊಂದಿದ ಧಾತುಗಳನ್ನು ಒಂದೇ ಗುಂಪಿನಲ್ಲಿ ಇಟ್ಟಿದ್ದಾರೆ. ಒಂದು ಗುಂಪಿನಲ್ಲಿ ಧಾತುಗಳ ವೇಲೆನ್ಸ್ ಇಲೆಕ್ಟ್ರಾನ್ ಗಳು ಸಮವಾಗಿರುತ್ತವೆ. ಜೊತೆಗೆ ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ವೇಲೆನ್ಸ್ ಇಲೆಕ್ಟ್ರಾನ್ಗಳ ಸಂಖ್ಯೆಯೂ ಹೆಚ್ಚುತ್ತದೆ.
9. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಕ್ಯಾಲ್ಸಿಯಂ (ಪರಮಾಣು ಸಂಖ್ಯೆ 20) 12, 19, 21 ಮತ್ತು 38 ಪರಮಾಣು ಸಂಖ್ಯೆ ಹೊಂದಿರುವ ಧಾತುಗಳಿಂದ ಸುತ್ತುವರಿಯಲ್ಪಟ್ಟಿದೆ. ಇವುಗಳಲ್ಲಿ ಯಾವುವು ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಕ್ಯಾಲ್ಸಿಯಂ ಅನ್ನು ಹೋಲುತ್ತವೆ?
ಕೊಟ್ಟಿರುವ ಧಾತುಗಳಲ್ಲೆಲ್ಲಾ 12 ಪರಮಾಣು ಸಂಖ್ಯೆ ಹೊಂದಿರುವ ಧಾತು ಕ್ಯಾಲ್ಸಿಯಂನಂತೆಯೇ ಭೌತ ಮತ್ತು ರಾಸಾಯನಿಕ ಗುಣಗಳನ್ನು ಹೊಂದಿದೆ. ಏಕೆಂದರೆ ಕ್ಯಾಲ್ಸಿಯಂನಂತೆಯೇ ಇದರ ವೇಲೆನ್ಸ್ ಇಲೆಕ್ಟ್ರಾನ್ 2 ಆಗಿದೆ.
- ಮೆಂಡಲಿವ್ ರವರ ಆವರ್ತಕ ಕೋಷ್ಟಕ ಮತ್ತು ಆಧುನಿಕ ಆವರ್ತ ಕೋಷ್ಟಕದ ಧಾತುಗಳ ಜೋಡಣೆಯನ್ನು ಹೋಲಿಕೆ ಮಾಡಿ ಮತ್ತು ವ್ಯತ್ಯಾಸಗಳನ್ನು ತಿಳಿಸಿ?
ಮೆಂಡಲೀವ್ ರವರ ಆವರ್ತಕ ಕೋಷ್ಟಕ | ಆಧುನಿಕ ಆವರ್ತಕ ಕೋಷ್ಟಕ |
1. ಧಾತುಗಳನ್ನು ಅವುಗಳ ಪರಮಾಣು ರಾಶಿಗಳ ಸಂಖ್ಯೆಯ ಏರಿಕೆ ಕ್ರಮದಲ್ಲಿ ಜೋಡಿಸಿದೆ. 2. ಈ ಕೋಷ್ಟಕದಲ್ಲಿ 8 ಗುಂಪುಗಳಿವೆ 3. ಪ್ರತಿಯೊಂದು ಗುಂಪು ಪುನಃ (೩) ಮತ್ತು (b) ಎಂಬ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ. 4. ರಾಜಾನಿಲ (ಜಡನಿಲ)ಗಳಿಗೆ ಪ್ರತ್ಯೇಕ ಗುಂಪು ಇರಲಿಲ್ಲ. ಏಕೆಂದರೆ ಆಗ ರಾಜಾನಿಲಗಳ ಅವಿಷ್ಕಾರವಾಗಿರಲಿಲ್ಲ. 5. ಐಸೋಟೋಪ್ (ಸಮಸ್ಥಾನಿ)ಗಳಿಗೆ ಕೋಷ್ಟಕದಲ್ಲಿ ಸ್ಥಳವಿರಲಿಲ್ಲ. | 1. ಧಾತುಗಳನ್ನು ಅವುಗಳ ಪರಮಾಣು ಏರಿಕೆ ಕ್ರಮದಲ್ಲಿ ಜೋಡಿಸಿದೆ. 2. ಇದರಲ್ಲಿ 18 ಗುಂಪುಗಳಿವೆ. 3. ಇದರಲ್ಲಿ ಗುಂಪುಗಳು ಸಣ್ಣ ಗುಂಪುಗಳಾಗಿ ವಿಂಗಡಣೆಯಾಗಿಲ್ಲ. 4. ಇಲ್ಲಿ ರಾಜಾನಿಲಗಳಿಗೆ ಪ್ರತ್ಯೇಕವಾದ ಗುಂಪು ಇದೆ. 5. ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಏಕೆಂದರೆ ಇಲ್ಲಿ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ |
ಹೆಚ್ಚುವರಿ ಪ್ರಶೋತ್ತರಗಳು
I ಬಹು ಆಯ್ಕೆ ಪ್ರಶ್ನೆಗಳು
1. ಆಧುನಿಕ ಆವರ್ತಕ ಕೋಷ್ಟಕವು ಕೆಳಗಿನ ಯಾವ ಆಧಾರದ ಮೇಲೆ ರಚಿತವಾಗಿದೆ.
ಎ. ಪರಮಾಣು ದ್ರವ್ಯ
ಬಿ. ಪರಮಾಣು ಸಂಖ್ಯೆ
ಸಿ. ಪರಮಾಣು ಇಲೆಕ್ಟ್ರಾನ್
ಡಿ. ಪರಮಾಣು ರಾಶಿ
ಉ : ಬಿ. ಪರಮಾಣು ಸಂಖ್ಯೆ
2. ಹ್ಯಾಲೋಜನ್ಗಳ ಹಾಗೆ__________ ಕೂಡಾ ದ್ವಿಪರಮಾಣು ಅಣುಗಳಾಗಿ ದೊರೆಯುತ್ತದೆ.
ಎ. ಲೋಹ
ಬಿ. ಅಲೋಹ
ಸಿ. ಕ್ಲೋರಿನ್
ಡಿ. ಹೈಡ್ರೋಜನ್
ಉ : ಡಿ. ಹೈಡೋಜನ್
3. ಅಷ್ಟಕ ನಿಯಮವನ್ನು ಪ್ರತಿಪಾದಿಸಿದವರು
ಎ. ಜೋಹಾನ್
ಬಿ. ಡೋಬರೈನರ್
ಸಿ. ನ್ಯೂಲ್ಯಾಂಡ್ಸ್
ಡಿ. ಮೆಂಡಲೀವ್
ಉ : ಸಿ. ನ್ಯೂಲ್ಯಾಂಡ್ಸ್
4. ವೇಲೆನ್ಸ್ ಇಲೆಕ್ಟ್ರಾನ್ಗಳು ಆ ಧಾತುವಿನ______ ನಿರ್ಧರಿಸುತ್ತವೆ.
ಎ. ಪರಮಾಣು
ಬಿ. ಪರಮಾಣ ಸಂಖ್ಯೆ
ಸಿ. ವೇಲೆನ್ಸಿ
ಡಿ. ಪರಮಾಣು ರಾಶಿ
ಉ : ಸಿ. ವೇಲೆನ್ಸಿ
5. ಅವಿಷ್ಕಾರದಿಂದ ಅಷ್ಟಕಗಳ ನಿಯಮ ಅಪ್ರಸ್ತುತವಾಯಿತು.
ಎ. ಫ್ಲೋರಿನ್
ಬಿ. ಕ್ಯಾಲ್ಸಿಯಂ
ಸಿ. ಜಡ ಅನಿಲಗಳ
ಡಿ. ಹೈಡ್ರೋಜನ್
ಉ : ಸಿ. ಜಡ ಅನಿಲಗಳ
6. ಕೆಳಗಿನವುಗಳಲ್ಲಿ ಡೋಬರೈರ್ನ ತ್ರಿವಳಿಗಳು ಯಾವುವು?
ಎ. Na. Br, Ar
ಬಿ. Li, Na, K
ಸಿ. H2, N2, O2,
ಡಿ. Ca, Br. Cl
ಉ: ಬಿ. Li, Na, K
7. ಅಷ್ಟಕಗಳ ನಿಯಮ ಎಲ್ಲಿಯವರೆಗೆ ಮಾತ್ರ ಅನ್ವಯಿಸುತ್ತದೆ?
ಎ. ಕಬ್ಬಿಣ
ಬಿ. ನಿಕ್ಕಲ್
ಸಿ. ಕೋಬಾಲ್ಟ್
ಡಿ. ಕ್ಯಾಲ್ಸಿಯಂ
ಉ : ಡಿ. ಕ್ಯಾಲ್ಸಿಯಂ
8. ಧಾತುಗಳ ವರ್ಗೀಕರಣದ ಪ್ರಮುಖ ಗೌರವವು ಇವರಿಗೆ ಸಲ್ಲುತ್ತದೆ.
ಎ. ಮೆಂಡಲೀವ್
ಬಿ. ನ್ಯೂಲ್ಯಾಂಡ್
ಸಿ. ಡೋಬರೈನರ್
ಡಿ. ಹೆನ್ರಿಮೋಸ್ಲೆ
ಉ: ಎ. ಮೆಂಡಲೀವ್
9. ಆಕ್ಸೆಡ್ ಮತ್ತು ಹೈಡ್ರೈಡ್ ಗಳ ಸೂತ್ರದಲ್ಲಿ ‘R’ ಅಕ್ಷರವು ಏನನ್ನು ಸೂಚಿಸುತ್ತದೆ?
ಎ. ಆಕ್ಸಿಜನ್
ಸಿ. ಯಾವುದೇ ಧಾತು
ಬಿ. ಹೈಡ್ರೋಜನ್
ಡಿ. ಕ್ಲೋರಿನ್
ಉ : ಸಿ. ಯಾವುದೇ ಧಾತು
10. ಲೋಹ ಅಲೋಹಗಳೊಂದಿಗೆ ವರ್ತಿಸಿ _________ ಸಂಯುಕ್ತಗಳನ್ನು ಉಂಟುಮಾಡುತ್ತವೆ.
ಎ. ಸಹವೇಲೆನ್ಸಿ
ಬಿ. ಅಯಾನಿಕ್
ಸಿ. ತಟಸ್ಥ
ಡಿ. ಲೋಹಾಭ
ಉ. ಎ. ಸಹವೇಲೆನ್ಸಿ
11. ಮೆಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿ _____ ಸರಿಯಾದ ಸ್ಥಾನವನ್ನು ನಿಯೋಜಿಸಲು ಸಾಧ್ಯವಾಗಲಿಲ್ಲ.
ಎ. ಮೆಗ್ನಿಸಿಯಂ
ಸಿ. ಆಕ್ಸಿಜನ್
ಬಿ. ಹೈಡ್ರೋಜನ್
ಡಿ. ಕ್ಲೋರಿನ್
ಉ : ಬಿ. ಹೈಡ್ರೋಜನ್
12. ಲೋಹಗಳು ಆವರ್ತಕ ಕೋಷ್ಟಕದ ಯಾವ ಭಾಗದಲ್ಲಿವೆ?
ಎ. ಎಡ
ಬಿ. ಬಲ
ಸಿ. ಮೇಲೆ
ಡಿ. ಕೆಳ
ಉ: ಎ. ಎಡ
13. ಅಲೋಹಗಳು ಆವರ್ತಕ ಕೋಷ್ಟಕದ ಯಾವ ಭಾಗದಲ್ಲಿವೆ?
ಎ. ಎಡ
ಬಿ. ಬಲ
ಸಿ. ಮೇಲೆ
ಡಿ. ಕೆಳ
ಉ: ಬಿ. ಬಲ
14. ಆಧುನಿಕ ಆವರ್ತಕ ಕೋಷ್ಟಕದಲ್ಲಿ ________ ಗೆರೆಯು ಲೋಹ ಅಲೋಹಗಳನ್ನು ಬೇರ್ಪಡಿಸುತ್ತದೆ.
ಎ. ನೇರ
ಬಿ. ವಕ್ರ
ಸಿ. ಅಂಕು – ಡೊಂಕಾದ
ಡಿ. ಓರೆ
ಉ: ಸಿ. ಅಂಕು – ಡೊಂಕಾದ
15. ಲೋಹ ಅಲೋಹಗಳೆರಡರ ಗುಣಗಳನ್ನು ಪ್ರದರ್ಶಿಸುವ ಧಾತುವನ್ನು___________ ಎನ್ನುತ್ತಾರೆ
ಎ. ಆಮ್ಲ
ಬಿ. ಪ್ರತ್ಯಾಮ್ಲ
ಸಿ. ಆಲ್ಕಲಿ
ಡಿ. ಲೋಹಾಭ
ಉ: ಡಿ. ಲೋಹಾಭ
16. ಹೈಡ್ರೋಜನ್ ನ ಇಲೆಕ್ಟ್ರಾನಿಕ್ ವಿನ್ಯಾಸವು____________ ಲೋಹಗಳನ್ನು ಹೋಲುತ್ತದೆ.
ಎ. ಕ್ಷಾರೀಯ
ಬಿ. ಆಮ್ಲೀಯ
ಸಿ. ಪ್ರತ್ಯಾಮ್ಲೀಯ
ಡಿ. ತಟಸ್ಥ
ಉ: ಎ. ಕ್ಷಾರೀಯ
17. ಲೋಹಗಳು ಬಂಧಗಳನ್ನು ಮಾಡಿದಾಗ _________ ಸ್ವಭಾವದ್ದಾಗುತ್ತದೆ.
ಎ. ತಟಸ್ಥ
ಬಿ. ವಿದ್ಯುದ್ಧನೀಯ
ಸಿ. ವಿದ್ಯುದೃಣೀಯ
ಡಿ. ಪ್ರತ್ಯಾಮ್ಮಿಯ
ಉ : ಬಿ. ವಿದ್ಯುದ್ಧನೀಯ
18. ಪರಮಾಣು ಗಾತ್ರ ಎಂಬ ಪದವು ಪರಮಾಣುವಿನ__________ ವನ್ನು ಸೂಚಿಸುತ್ತದೆ.
ಎ. ತ್ರಿಜ್ಯ
ಬಿ. ವ್ಯಾಸ
ಸಿ. ತೂಕ
ಡಿ. ದ್ರವ್ಯರಾಶಿ
ಉ: ಎ. ತ್ರಿಜ್ಯ
19. ಡೋಬರೈನರ್ರವರು ಎಷ್ಟು ತ್ರಿವಳಿಗಳನ್ನು ಗುರ್ತಿಸಿದರು?
ಎ. ಮೂರು
ಬಿ. ನಾಲ್ಕು
ಡಿ. ಎರಡು
ಸಿ. ಐದು
ಉ : ಎ. ಮೂರು
20. ಎಲ್ಲಾ ಧಾತುಗಳ_______ ಮೆಂಡಲೀವ್ರವರ ಆವರ್ತಕ ನಿಯಮಕ್ಕೆ ಸವಾಲೆನಿಸಿದವು.
ಎ. ಪರಮಾಣು ಸಂಖ್ಯೆ
ಬಿ. ಸಮಸ್ಥಾನಿಗಳು
ಸಿ. ತೂಕ
ಡಿ. ದ್ರವ್ಯರಾಶಿ
ಉ. ಬಿ. ಸಮಸ್ಥಾನಿಗಳು
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :
- ಡೋಬರೈನರ ಹೇಳಿಕೆಗೆ ಒಂದು ಉದಾಹರಣೆಯನ್ನು ಕೊಡಿ.
ಉದಾ : ಲೀಥಿಯಂ 6.9, ಸೋಡಿಯಂ 23 ಮತ್ತು ಪೊಟಾಸಿಯಂ 39 ಆಗಿದೆ.
ಲೀಥಿಯಂ ಮತ್ತು ಪೊಟಾಸಿಯಂನ ಪರಮಾಣು ರಾಶಿಗಳ ಸರಾಸರಿ

ಸೋಡಿಯಂನ ಪರಮಾಣು ರಾಶಿ 22.95 ಆಗಬೇಕಿತ್ತು. ಅದು 23 ಆಗಿದೆ.
2. ಡೋಬರೈನರ್ರ ತ್ರಿವಳಿಗಳ ವರ್ಗೀಕರಣ ಏಕೆ? ಉಪಯುಕ್ತವಾಗಲಿಲ್ಲ?
ಅವರ ಕಾಲದಲ್ಲಿ ಅವಿಷ್ಕರಿಸಲ್ಪಟ್ಟ ಎಲ್ಲಾ ಧಾತುಗಳನ್ನು ಅವರು ತಿಳಿಸಿದ ತ್ರಿವಳಿ ನಿಯಮಗಳಿಗೆ ಸೂಕ್ತವಾಗಲಿಲ್ಲ. ಕೇವಲ ಮೂರೇ ಮೂರು ತ್ರಿವಳಿಗಳನ್ನು ಅವರ ನಿಯಮಕ್ಕೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟಿತು. ಆದ್ದರಿಂದ ಈ ಪದ್ಧತಿಯು ಉಪಯುಕ್ತವೆನಿಸಲಿಲ್ಲ.
3. ನ್ಯೂಲ್ಯಾಂಡ್ರವರ ಅಷ್ಟಕಗಳ ನಿಯಮವನ್ನು ತಿಳಿಸಿ
1866 ರಲ್ಲಿ ಆಂಗ್ಲ ವಿಜ್ಞಾನಿಯಾದ ಜಾನ್ ನ್ಯೂಲ್ಯಾಂಡ್ಸ್ರವರು ಅತಿ ಕಡಿಮೆ ಪರಮಾಣು ರಾಶಿ ಹೊಂದಿದ್ದ ಹೈಡ್ರೋಜನ್ ಧಾತುವಿನಿಂದ 56ನೇ ಧಾತುವಾದ ಥೋರಿಯಂವರೆಗೆ ಅಷ್ಟಕಗಳ ಕ್ರಮದಲ್ಲಿ ಎಲ್ಲಾ ಧಾತುಗಳನ್ನು ಜೋಡಿಸಿದರು. ಇದನ್ನು ಸಂಗೀತದಲ್ಲಿ ಕಂಡು ಬರುವ ʻಸರಿಗಮಪದನಿʻ ಸ್ವರಗಳೊಂದಿಗೆ ಹೋಲಿಸಿದರು. ಅಷ್ಟಕಗಳಲ್ಲಿ ಲೀಥಿಯಂ ಮತ್ತು ಸೋಡಿಯಂಗಳ ಗುಣಗಳು ಮತ್ತು ಬೇರಿಲಿಯಂ ಹಾಗೂ ಮಗ್ನೀಸಿಯಂಗಳ ಲಕ್ಷಣಗಳು ಒಂದನ್ನೊಂದು ಹೋಲುತ್ತಿತ್ತು. ಇದೇ ಅಷ್ಟಕದ ನಿಯಮ.
4. ನ್ಯೂಲ್ಯಾಂಡ್ಸ್ರವರ ಅಷ್ಟಕಗಳನ್ನು ಬರೆಯಿರಿ.
ನ್ಯೂಲ್ಯಾಂಡ್ಸ್ ರವರ ಅಷ್ಟಕಗಳು

5. ರಾಜಾನಿಲಗಳು ಯಾವುವು? ಅವುಗಳ ಗುಣಗಳೇನು?
ಹೀಲಿಯಂ (He), ನಿಯಾನ್ (Ne) ಮತ್ತು ಅರ್ಗಾನ್ (Ar) ಈ ಧಾತುಗಳನ್ನು ರಾಜಾನಿಲಗಳು ಎನ್ನುತ್ತಾರೆ. ಈ ಅನಿಲಗಳು ಅತಿ ಜಡವಾದುದು ಮತ್ತು ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದು.
6. ಮೆಂಡಲೀವ್ ಕೋಷ್ಟಕದ ಒಂದು ಅಸಂಬದ್ಧತೆಯನ್ನು ತಿಳಿಸಿ.
ಒಂದೇ ರೀತಿಯ ಗುಣಗಳುಳ್ಳ ಧಾತುಗಳನ್ನು ಒಟ್ಟಿಗೆ ಗುಂಪುಗೂಡಿಸುವುದಕ್ಕಾಗಿ ಅನುಕ್ರಮ ಜೋಡಣೆಯನ್ನು ಬದಲಾಯಿಸಲಾಯಿತು. ಉದಾಹರಣೆಗೆ ಕೋಬಾಲ್ಟ್ ನ ಪರಮಾಣು ರಾಶಿ ಸಂಖ್ಯೆ 58.9 ನ್ನು ನಿಕ್ಕಲ್ ಪರಮಾಣು ರಾಶಿ 58.7 ಕ್ಕಿಂತ ಮೊದಲೇ ಇಡಲಾಗಿದೆ.
7. ಆವರ್ತಕ ಕೋಷ್ಟಕದಲ್ಲಿ ಗುಂಪು ಮತ್ತು ಆವರ್ತಗಳು ಎಂದರೇನು?
ಆವರ್ತಕ ಕೋಷ್ಟಕದಲ್ಲಿ 18 ಕಂಬಸಾಲುಗಳಿದ್ದು ಇವುಗಳನ್ನು ಗುಂಪು /ವರ್ಗಗಳು ಎನ್ನುತ್ತಾರೆ. 7 ಅಡ್ಡ ಸಾಲುಗಳಿದ್ದು ಅವನ್ನು ಆವರ್ತಗಳು ಎನ್ನುತ್ತಾರೆ.
8. ಲೋಹಾಭಗಳು ಎಂದರೇನು? ಉದಾಹರಣೆ ಕೊಡಿ.
ಲೋಹ ಮತ್ತು ಅಲೋಹಗಳೆರಡರ ಕೆಲವು ಗುಣಗಳನ್ನು ಪ್ರದರ್ಶಿಸುವ, ಆವರ್ತಕ ಕೋಷ್ಟಕದ ಗೆರೆಯ ಅಂಚಿನ ಧಾತುಗಳನ್ನು ಲೋಹಾಭ ಎನ್ನುತ್ತಾರೆ. ಬೋರಾನ್, ಸಿಲಿಕಾನ್, ಜರ್ಮೇನಿಯಂ, ಅರ್ಸೆನಿಕ್, ಅಂಟಿಮನಿ, ಟೆಲ್ಲುರಿಯಮ್, ಪೊಲೋನಿಯಂ ಇತ್ಯಾದಿಗಳು ಲೋಹಾಭಗಳು.
9. ಮೆಂಡಲೀವ್ ರವರ ಆವರ್ತ ಕೋಷ್ಟಕದ ಮಿತಿಯೇನು?
- ಹೈಡ್ರೋಜನ್ಗೆ ಯಾವುದೇ ಸ್ಥಿರ ಸ್ಥಾನವನ್ನು ಕೊಡಲಾಗಲಿಲ್ಲ.
- ಎಲ್ಲಾ ಧಾತುಗಳ ಸಮಸ್ಥಾನಿಗಳು ಆವರ್ತಕ ನಿಯಮಕ್ಕೆ ಸವಾಲೆನಿಸಿದವು.
- ಪರಮಾಣುರಾಶಿಗಳು ಒಂದು ಧಾತುವಿನಿಂದ ಇನ್ನೊಂದು ಧಾತುವಿಗೆ ನಿಯತವಾಗಿ ಏರಿಕೆ ಕ್ರಮದಲ್ಲಿ ಕಂಡು ಬರುವುದಿಲ್ಲ.
- ಎರಡು ಧಾತುಗಳ ಮಧ್ಯೆ ಎಷ್ಟು ಧಾತುಗಳನ್ನು ಅವಿಷ್ಕರಿಸಬಹುದಾಗಿದೆ ಎಂದು ಊಹಿಸುವುದು ಸಾಧ್ಯವಾಗಲಿಲ್ಲ.
10. ಆವರ್ತಕ ಕೋಷ್ಟಕದಲ್ಲಿ ಧಾತುವಿನ ಸ್ಥಾನವು ಏನನ್ನು ತಿಳಿಸುತ್ತದೆ?
ಆವರ್ತಕ ಕೋಷ್ಟಕದಲ್ಲಿ ಧಾತುವಿನ ಸ್ಥಾನವು ಅದರ ರಾಸಾಯನಿಕ ಕ್ರಿಯಾಕಾರತ್ವವನ್ನು ತಿಳಿಸುತ್ತದೆ.
11. ಮೆಂಡಲೀವ್ರವರ ಆವರ್ತಕ ಕೋಷ್ಟಕದಲ್ಲಿ ಯಾವುದು ಉತ್ತಮವಾದ ಆಯ್ಕೆಯಾಗಿತ್ತು?
ವೇಲೆನ್ಸ್ ಇಲೆಕ್ಟ್ರಾನ್ಗಳು ಧಾತುವಿನ ರಾಸಾಯನಿಕ ಬಂಧದ ಬಗೆ ಮತ್ತು ಬಂಧಗಳ ಸಂಖ್ಯೆಯನ್ನು ನಿರ್ಧರಿಸುತ್ತವೆ. ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದಲ್ಲಿ ಧಾತುವಿನ ಸ್ಥಾನವನ್ನು ನಿರ್ಧರಿಸಲು, ಸಂಯುಕ್ತಗಳ ಸೂತ್ರಗಳನ್ನು ಆಧಾರವಾಗಿ ಬಳಸಿದುದು ಒಂದು ಉತ್ತಮವಾದ ಆಯ್ಕೆಯಾಗಿತ್ತು.
12. ಡೋಬರೈನರು ವರ್ಗೀಕರಿಸಿದ ಆ ಮೂರು ತ್ರಿವಳಿಗಳನ್ನು ಹೆಸರಿಸಿ.
ಡೋಬರೈನರ್’ರ ತ್ರಿವಳಿಗಳು
Li | Ca | Cl |
Na | Sr | Br |
K | Ba | I |
13. ಆವರ್ತಕ ಕೋಷ್ಟಕದಲ್ಲಿ ಲೋಹ ಅಲೋಹಗಳು ಎಲ್ಲಿ ಕಂಡು ಬರುತ್ತವೆ?
ಲೋಹಗಳು ಆವರ್ತಕ ಕೋಷ್ಟಕದ ಎಡಭಾಗದಲ್ಲಿ ಮತ್ತು ಅಲೋಹಗಳು ಬಲಬದಿಯ ಮೇಲ್ಬಾಗದಲ್ಲಿ ಕಂಡು ಬರುತ್ತವೆ. ಈ ಪ್ರವೃತ್ತಿಗಳು ಅವುಗಳ ಗುಣಗಳನ್ನು ತಿಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ಲೋಹದ ಆಕ್ಸೈಡ್ಗಳು ಪ್ರತ್ಯಾಮ್ಲೀಯ ಮತ್ತು ಅಲೋಹದ ಆಕ್ಸೈಡ್ಗಳು ಆಮ್ಲೀಯ ಎಂಬುದು ಗೊತ್ತಾಗುತ್ತದೆ.
14. ಡೋಬರೈನರ್ ರವರು ತ್ರಿವಳಿಗಳ ಬಗ್ಗೆ ಏನನ್ನು ತೋರಿಸಿದರು?
ಡೋಬರೈನರ್ರ ತ್ರಿವಳಿಯ ಮೂರು ಧಾತುಗಳನ್ನು ಅವುಗಳ ಪರಮಾಣುರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣುರಾಶಿಯ ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿ ಎಂದು ತೋರಿಸಿಕೊಟ್ಟರು.
ನೆನಪಿನಲ್ಲಿಡಬೇಕಾದ ಮುಖ್ಯಾಂಶಗಳು
- ಧಾತುಗಳು ಒಂದೇ ಬಗೆಯ ಪರಮಾಣುಗಳಿಂದ ಮಾಡಲ್ಪಟ್ಟಿವೆ. ವಿಜ್ಞಾನಿಗಳು ಧಾತುಗಳನ್ನು ಅವುಗಳ ಗುಣಗಳಿಗನುಗುಣವಾಗಿ ವರ್ಗೀಕರಣ ಮಾಡುವ ಹಲವಾರು ಪ್ರಯತ್ನಗಳ ಗೊಂದಲಗಳಿಂದ ಹೊರ ಬಂದು ವ್ಯವಸ್ಥಿತವಾದ ಜೋಡಣೆಯನ್ನು ರೂಪಿಸಿಕೊಂಡರು. ಇದೇ ಧಾತುಗಳ ವರ್ಗೀಕರಣದ ಪ್ರಾರಂಭ.
- ಧಾತುಗಳನ್ನು ಅವುಗಳ ಗುಣಗಳ ಸಾಮ್ಯತೆಯ ಆಧಾರದಲ್ಲಿ ವರ್ಗೀಕರಿಸಲಾಗಿದೆ.
- 1817ರಲ್ಲಿ ಜರ್ಮನಿಯ ರಸಾಯನ ತಜ್ಞರಾದ ಜೋಹಾನ್ ವೂಲ್ಫ್ ಗ್ಯಾಂಗ್ ಡೋಬರೈನಲ್ ತಲಾ ಮೂರು ಧಾತುಗಳಿರುವ ‘ತ್ರಿವಳಿಗಳು‘ ಎಂಬ ವರ್ಗೀಕರಣ ಪ್ರಾರಂಭವಾಯಿತು. ಅದಕ್ಕೂ ಮೊದಲು ಲೋಹಗಳು ಮತ್ತು ಅಲೋಹಗಳು ಎಂದು ವರ್ಗೀಕರಿಸಿದ್ದರು.
- ಡೋಬರೈನಲ್ ಧಾತುಗಳನ್ನು ತ್ರಿವಳಿಗಳಾಗಿ ಗುಂಪು ಮಾಡಿದರು ಮತ್ತು ನ್ಯೂಲ್ಯಾಂಡರವರು ಅಷ್ಟಕಗಳ ನಿಯಮ ನೀಡಿದರು.
- ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮವು ಕೇವಲ ಕ್ಯಾಲ್ಸಿಯಂವರೆಗೆ ಮಾತ್ರ ಅನ್ವಯಿಸುತ್ತದೆ. ಜಡ ಅನಿಲಗಳ ಆವಿಷ್ಕಾರದಿಂದಾಗಿ ಅಷ್ಟಕಗಳ ನಿಯಮ ಅಪ್ರಸ್ತುತವಾಯಿತು. ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮವು ಹಗುರವಾದ ಧಾತುಗಳಿಗೆ ಮಾತ್ರ ಸರಿಹೊಂದುತ್ತದೆ.
- ಧಾತುಗಳ ವರ್ಗೀಕರಣದ ಪ್ರಮುಖ ಗೌರವವು ರಷ್ಯಾದ ರಸಾಯನಶಾಸ್ತ್ರಜ್ಞರಾದ ಡಿಮಿಟ್ರಿ ಇವಾನೊವಿಚ್ ಮೆಂಡಲೀವ್ ರವರಿಗೆ ಸಲ್ಲುತ್ತದೆ. ಇವರ ಕೊಡುಗೆಯು ಪ್ರಮುಖವಾಗಿದೆ.
- ಧಾತುವೊಂದು ಉಂಟುಮಾಡುವ ಹೈಡ್ರೈಡ್ಗಳು ಮತ್ತು ಆಕ್ಸೈಡ್ಗಳ ಸೂತ್ರಗಳನ್ನು ಆಧರಿಸಿ ಧಾತುವಿನ ವರ್ಗೀಕರಣದಲ್ಲಿ ಇದನ್ನು ಒಂದು ಮೂಲಭೂತ ಗುಣವೆಂದು ಪರಿಗಣಿಸಲಾಗಿದೆ.
- ಮೆಂಡಲೀವ್ ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಮತ್ತು ರಾಸಾಯನಿಕ ಗುಣಗಳಿಗನುಗುಣವಾಗಿ ಜೋಡಿಸಿದರು.
- ಮೆಂಡಲೀವ್ ರವರ ಆವರ್ತಕ ನಿಯಮದ ಹೇಳಿಕೆ ಧಾತುಗಳ ಗುಣಗಳು ಅವುಗಳ ಪರಮಾಣುರಾಶಿಯ ಆವರ್ತಕ ಫಲಿತಗಳಾಗಿವೆ.
- ಮೆಂಡಲೀವರು ತಮ್ಮ ಆವರ್ತಕಕೋಷ್ಟಕದಲ್ಲಿನ ಖಾಲಿ ಜಾಗಗಳನ್ನು ಆಧರಿಸಿ ಅದುವರೆಗೂ ಕಂಡುಹಿಡಿಯದೇ ಇದ್ದ ಧಾತುಗಳ ಅಸ್ತಿತ್ವವನ್ನು ಮುನ್ಸೂಚಿಸಿದರು.
- ಮೆಂಡಲೀವ್ ರವರ ಆವರ್ತಕ ಕೋಷ್ಟಕದ ಮಿತಿಗಳು
- ಆವರ್ತಕ ಕೋಷ್ಟಕದಲ್ಲಿ ಹೈಡೋಜನ್ಗೆ ಯಾವುದೇ ಸ್ಥಿರ ಸ್ಥಾನವನ್ನು ಕೊಡಲು ಸಾಧ್ಯವಾಗಲಿಲ್ಲ.
- ಎಲ್ಲಾ ಧಾತುಗಳ ಸಮಸ್ಥಾನಿಗಳು ಸವಾಲಾದವು.
- ಪರಮಾಣು ರಾಶಿಗಳು ಒಂದು ಧಾತುವಿನಿಂದ ಇನ್ನೊಂದು ಧಾತುವಿಗೆ ನಿಯತವಾಗಿ ಏರಿಕೆ ಕ್ರಮದಲ್ಲಿ ಕಂಡು ಬರುವುದಿಲ್ಲ.
- ವಿಶೇಷವಾಗಿ ಭಾರ ಧಾತುಗಳನ್ನು ಪರಿಗಣಿಸುವಾಗ ಎರಡು ಧಾತುಗಳ ಮಧ್ಯೆ ಎಷ್ಟು ಧಾತುಗಳನ್ನು ಆವಿಷ್ಕರಿಸಬಹುದಾಗಿದೆ ಎಂದು ಊಹಿಸುವುದು ಸಾಧ್ಯವಾಗುವುದಿಲ್ಲ.
- ಆಧುನಿಕ ಆವರ್ತಕ ಕೋಷ್ಟಕವು ಗೊಂದಲದಿಂದ ಕ್ರಮಬದ್ದ ಜೋಡಣೆಯೆಡೆಗೆ ಸಾಗಿತು.
- 1913ರಲ್ಲಿ ಹೆನ್ರಿ ಮೋಸೆಯವರು ಧಾತುವಿನ ಪರಮಾಣು ಸಂಖ್ಯೆ ‘Z’ ಸಂಕೇತದಿಂದ ಸೂಚಿಸಿದರು. ಇದು ಪರಮಾಣು ರಾಶಿಗಿಂತ ಹೆಚ್ಚು ಮೂಲಭೂತ ಲಕ್ಷಣದಿಂದ ಕೂಡಿದೆ ಎಂದು ತೋರಿಸಿಕೊಟ್ಟರು.
- ಮೋಸ್ಲೆಯವರು ಕಂಡುಹಿಡಿದ, ಧಾತುವಿನ ಮೂಲಭೂತ ಲಕ್ಷಣವಾದ ಪರಮಾಣು ಸಂಖ್ಯೆಯ ಏರಿಕೆ ಕ್ರಮದಲ್ಲಿ ಧಾತುಗಳನ್ನು ಜೋಡಿಸಿದಾಗ, ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಧಾತುಗಳ ಜೋಡಣೆಯಲ್ಲಿದ್ದ ಅಸಂಗತತೆ ಹೋಗಲಾಡಿಸಲ್ಪಟ್ಟಿತು.
- ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳನ್ನು ಗುಂಪುಗಳೆಂದು ಕರೆಯುವ 18 ಕಂಬ ಸಾಲುಗಳಲ್ಲಿ ಮತ್ತು ಆವರ್ತಗಳೆಂದು ಕರೆಯುವ 7 ಅಡ್ಡ ಸಾಲುಗಳಲ್ಲಿ ಜೋಡಿಸಲಾಗಿದೆ.
- ಆಧುನಿಕ ಆವರ್ತಕ ನಿಯಮದ ಹೇಳಿಕೆಯು ‘ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತಕ ಫಲಿತಗಳಾಗಿವೆ’.
- ಧಾತುಗಳನ್ನು ಪರಮಾಣು ಸಂಖ್ಯೆಯ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸಿದಾಗ ಅವುಗಳ ಗುಣಗಳನ್ನು ಹೆಚ್ಚು ನಿಖರವಾಗಿ ಊಹಿಸಬಹುದಾಗಿದೆ.
- ಆವರ್ತಕ ಕೋಷ್ಟಕದಲ್ಲಿನ ಗುಂಪುಗಳು ತಮ್ಮ ಹೊರ ಕವಚದಲ್ಲಿ ಒಂದೇ ರೀತಿಯ ಇಲೆಕ್ಟ್ರಾನಿಕ್ ವಿನ್ಯಾಸವನ್ನು ಹೊಂದಿರುತ್ತವೆ.
- ಧಾತುವಿನ ಸ್ಥಾನವನ್ನು ನಿರ್ಧರಿಸಲು. ಸಂಯುಕ್ತಗಳ ಸೂತ್ರಗಳನ್ನು ಆಧಾರವಾಗಿ ಬಳಸಿದುದು ಉತ್ತಮವಾದ ಆಯ್ಕೆಯಾಗಿತ್ತು.
- ವೇಲೆನ್ಸ್ ಇಲೆಕ್ಟ್ರಾನ್ ಗಳು ಆ ಧಾತುವಿನ ವೇಲೆನ್ಸಿಯನ್ನು ನಿರ್ಧರಿಸುತ್ತವೆ.
- ಪರಮಾಣು ಗಾತ್ರ ಎಂಬುದು ಪರಮಾಣುವಿನ ತ್ರಿಜ್ಯವನ್ನು ಸೂಚಿಸುತ್ತದೆ.
- ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ತ್ರಿಜ್ಯ ಕಡಿಮೆಯಾಗುತ್ತದೆ. ನ್ಯೂಕ್ಲಿಯಸ್ನ ಆವೇಶ ಹೆಚ್ಚಿದರೂ ಪರಮಾಣು ಗಾತ್ರ ಹೆಚ್ಚುತ್ತದೆ.
- ಆವರ್ತಕ ಕೋಷ್ಟಕದ ಮಧ್ಯದಲ್ಲಿ ಸಿಲಿಕಾನ್ ಇದೆ. ಇದು ಲೋಹ ಮತ್ತು ಅಲೋಹಗಳೆರೆಡರ ಕೆಲವು ಗುಣಗಳನ್ನು ಪ್ರದರ್ಶಿಸುವುದರಿಂದ ಇದನ್ನು ‘ಲೋಹಾಭ‘ ಎಂದು ವರ್ಗೀಕರಿಸಲಾಗಿದೆ.
- ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದು ಅಂಕುಡೊಂಕಾದ (Zig Zag) ಗೆರೆಯು ಲೋಹಗಳನ್ನು ಆಲೋಹಗಳಿಂದ ಬೇರ್ಪಡಿಸುತ್ತದೆ. ಗೆರೆಯ ಅಂಚಿನ ಧಾತುಗಳಾದ ಬೋರಾನ್ ಸಿಲಿಕಾನ್, ಜರ್ಮೇನಿಯಂ, ಅರ್ಸೆನಿಕ್, ಅಂಟಿಮನಿ ಟೆಲ್ಲುರಿಯಮ್ ಮತ್ತು ಪೊಲೋನಿಯಂಗಳು ಲೋಹ – ಅಲೋಹಗಳೆರಡರ ಲಕ್ಷಣಗಳನ್ನು ತೋರಿಸುವುದರಿಂದ ಇವುಗಳನ್ನು ‘ಲೋಹಾಭ‘ ಎಂದು ಕರೆಯುವರು.
- ಹೀಗೆ ಜೋಡಿಲ್ಪಟ್ಟ ಧಾತುಗಳು ಪರಮಾಣು ಗಾತ್ರ, ವೇಲೆನ್ಸಿ ಅಥವಾ ಸಂಯೋಗ ಸಾಮರ್ಥ್ಯ ಮತ್ತು ಲೋಹೀಯ ಮತ್ತು ಅಲೋಹೀಯ ಗುಣಗಳನ್ನೊಳಗೊಂಡ ಗುಣಗಳಲ್ಲಿ ಆವರ್ತನೀಯತೆಯನ್ನು ತೋರಿಸುತ್ತದೆ.