10th Standard Yudda Kannada Notes | 10ನೇ ತರಗತಿ ಯುದ್ಧ ಕನ್ನಡ ನೋಟ್ಸ್

Yudda

10th Standard Yudda Lesson Kannada Notes Questions and Answers Summery Guide Mcq Pdf Download in Kannada Medium Karnataka State Syllabus 2025, yuddha lesson textbook pdf kannada medium, yuddha lesson summary in kannada, ಯುದ್ಧ ಪಾಠದ ಪ್ರಶ್ನೋತ್ತರಗಳು, 10ನೇ ತರಗತಿ ಯುದ್ಧ ಕನ್ನಡ ನೋಟ್ಸ್, ಯುದ್ಧ ಪಾಠ 10ನೇ ತರಗತಿ pdf, ಯುದ್ಧ ಗದ್ಯದ ಸಾರಾಂಶ, SSLC Kannada 5th Lesson Notes Summary Pdf, 10th ಯುದ್ಧ Notes Pdf, kseeb solutions for class 10 kannada chapter 5 notes pdf, Yuddha Kannada Lesson Question Answer, 10th Kannada 5th Lesson Notes.

10ನೇ ತರಗತಿ ಯುದ್ಧ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು

ಲೇಖಕಿ ಸಾ.ರಾ. ಅಬೂಬಕ್ಕರ್ ಅವರು 30ರ ಜೂನ್ 1936ರಂದು ಕಾಸರಗೋಡಿನಲ್ಲಿ ಜನಿಸಿದರು. ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವುದು ಅಪರೂಪ ಎನ್ನುವ ಸಂದರ್ಭದಲ್ಲೂ ಬರೆವಣಿಗೆ ಆರಂಭಿಸಿದ ಇವರು ಇಂದು ನಾಡಿನ ಖ್ಯಾತ ಕತೆಗಾರ್ತಿ ಹಾಗೂ ಕಾದಂಬರಿಗಾರ್ತಿಯಾಗಿ ಜನಪ್ರಿಯತೆ ಗಳಿಸಿರುವರು. ಇವರು ರಚಿಸಿರುವ ಪ್ರಮುಖ ಕೃತಿಗಳೆಂದರೆ:

ಇವರು ರಚಿಸಿರುವ ಪ್ರಮುಖ ಕಾದಂಬರಿಗಳು:

  • ಚಂದ್ರಗಿರಿಯ ತೀರದಲ್ಲಿ
  • ಸಹನಾ
  • ಕದನ ವಿರಾಮ
  • ವಜ್ರಗಳು
  • ಸುಳಿಯಲ್ಲಿ ಸಿಕ್ಕವರು
  • ಕಳ ಒಡೆದ ದೋಣಿಯಲ್ಲಿ

ಇವು ಕಥಾ ಸಂಕಲನಗಳು

  • ಚಪ್ಪಲಿಗಳು
  • ಖೆಡ್ಡಾ
  • ಅರ್ಧ ರಾತ್ರಿಯಲ್ಲಿ ಹುಟ್ಟಿದ ಗೂಸು
  • ಪಯಣ

ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಲಭಿಸಿವೆ. ಕರ್ನಾಟಕದ ಸಂಸ್ಕೃತಿ ಚಿಂತಕರಲ್ಲಿ ಇವರು ಒಬ್ಬರಾಗಿದ್ದಾರೆ.

ಆರ್ತನಾದಕಷ್ಟಕ್ಕೆ ಸಿಕ್ಕಿದವರ ಕೂಗು
ಕ್ರೌರ್ಯಕರುಣೆಯಿಲ್ಲದ, ನಿರ್ದಯತೆ
ರೋಧನಅಳುವಿಕೆ
ಸೂಲಗಿತ್ತಿಹೆರಿಗೆ ಸಮಯದಲ್ಲಿ ಸಹಾಯ ಮಾಡುವ ನರ್ಸು
ಕಿವಿಗಡಚಕ್ಕುಕಿವಿಗೆ ಕರ್ಕಶೂಗು
ಗ್ರೌಂಡ್ಭೂಪ್ರದೇಶ
ಹತಾಶೆನಿರಾಶೆ
ಹಂಬಲಆಸೆ
ಸಾಂತ್ವನಸಮಾಧಾನ ಪಡಿಸುವುದು

ಯುದ್ಧ ಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು.

1. ರಾಹಿಲನು ಯಾರು?

ರಾಹಿಲ್ ಒಬ್ಬ ವೈದ್ಯ, ಯುದ್ಧದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಲು ಪ್ರಯತ್ನಿಸುವ ಡಾಕ್ಟರ್.

2. ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದು ಕೊಂಡಿದ್ದೇನು?

ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಬೇಕಾದ ಔಷಧ ಹಾಗೂ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದನು.

3. ಗಡಿ ಪ್ರದೇಶಗಳಲ್ಲಿ ‘ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?

ಗಡಿ ಪ್ರದೇಶದಲ್ಲಿ ವಿಮಾನದಾಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಕ್ ಔಟ್ ನಿಯಮ ಪಾಲಿಸಲಾಗುತ್ತದೆ.

4. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?

‘ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು’ ಎಂದು ಗಂಭೀರವಾಗಿ ರಾಹಿಲನು ಮುದುಕಿ ಎದುರಿಗೆ ನುಡಿದನು.

5. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?

ಯುದ್ಧದ ಬಗೆಗೆ ಮುದುಕಿಗೆ ಕೋಪ, ತಿರಸ್ಕಾರದ ಭಾವನೆಯಿತ್ತು, ಯುದ್ಧದ ಕಾರಣದಿಂದಾಗಿ ತನ್ನ ಗಂಡ, ಆಸ್ತಿ, ಮಗ, ಮೊಮ್ಮಗ ಎಲ್ಲಾ ದೂರವಾದರು ಎಂಬ ಅಭಿಪ್ರಾಯವಿತ್ತು.

1. ಡಾಕ್ಟರ್‌ಗೆ ವಿಮಾನದ ಪೈಲಟ್ ಏನು ಹೇಳಿದನು?

ಡಾಕ್ಟರ್‌ಗೆ ವಿಮಾನದ ಪೈಲಟ್ -4 ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರೂ ಉಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನು ಕಾಣಿಸ್ತಾ ಇಲ್ಲವಲ್ಲ?” ಎಂದು ಹೇಳಿದನು.

2. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?

ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಒಂದು ಬಗೆಯ ಭಯ ಆವರಿಸಿ ಬೆಚ್ಚಿದನು. ಅವನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಈ ಕತ್ತಲೆಯ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ? ಮುಂತಾದ ಪ್ರಶ್ನೆಗಳು ಮೂಡಿದವು.

3. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?

“ಯುದ್ಧವಂತೆ ಯುದ್ಧ, ಈ ಯುದ್ಧದಿಂದ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ. ಜಮೀನು, ಆಸ್ತಿ ಎಲ್ಲಾ ಇದ್ದರೂ ನೆಮ್ಮದಿಯಿಂದ ಬದುಕಲು ಈ ಯುದ್ಧ ಬಿಡುತ್ತಿಲ್ಲ” ಎಂದು ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದಳು.

4. ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?

“ಈ ಯುದ್ಧ ನನ್ನ ಮೊಮ್ಮಗುವನ್ನು ಉಳಿಸಲಿಲ್ಲವಲ್ಲಾ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ?” ಎನ್ನುತ್ತಾ ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದಳು.

1. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು?

ಮುದುಕಿಯು ಮಗನು ಯುದ್ಧಕ್ಕೆ ಹೋಗಿದ್ದನು, ಆ ಮಗ ಚಿಕ್ಕ ಹುಡುಗನಿದ್ದಾಗ ಯುದ್ಧಕ್ಕೆ ಹೋಗ ಅವನ ತಂದೆ ಹಿಂತಿರುಗಲಿಲ್ಲ. ಆ ನೋವನ್ನು ನುಂಗುತ್ತಾ ತನ್ನ ಮಗನನ್ನು ಸಾಕಿ ಸಲುಹಿದ್ದಳು. ಮದುವೆಯನ್ನು ಮಾಡಿದಳು. ಈಗ ಐದಾರು ಮರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು. ಪುಟ್ಟ ಮಗುವಿನ ಅಳು ಕೇಳಲು ತನ್ನ ಮಗ ತುದಿಗಾಲಲ್ಲಿ, ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ. ಅವನೊಮ್ಮೆ ಹಿಂತಿರುಗಿ ಬಂದರೆ ಸಾಕಾಗಿತ್ತು. ಈ ವಿಷಯ ತಿಳಿದು ಅಂದರೆ ಮಗು ನಿರ್ಜಿವವಾಗಿ ಹುಟ್ಟಿದ ವಿಷಯ ಕೇಳಿ ಅವನೆಷ್ಟು ಸಂಕಟ ಪಡುತ್ತಾನೋ” ಎಂದು ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ರಾಹಿಲ್‌ಗೆ ವಿವರಿಸಿದಳು.

2. ರಾಹಿಲನು ಮುದುಕಿಯ ಕುಟುಂಬಕ್ಕಾಗಿ, ಮುದುಕಿಯೂ ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.

ರಾಹಿಲನು ಪ್ರಥಮ ಚಿಕಿತ್ಸೆ ಪೆಟ್ಟಿಗೆಯೊಂದಿಗೆ ಪ್ರಯಾಣ ಮಾಡುತಿದ್ದಾಗ, ವಿಮಾನವು ಶತ್ರುಗಳ ದಾಳಿಗೆ ಬಲಿಯಾಗಿ ರಾಹಿಲನು ಸಮುದ್ರದಲ್ಲಿ ಬಿದ್ದನು. ಬಿದ್ದ ರಭಸಕ್ಕೆ ಒಂದು ಕಾಲನ್ನುಜ ಕಳೆದುಕೊಂಡನು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ಜೊತೆಗೆ ಗುಡುಗು-ಸಿಡಿಲು, ಆ ಸಿಡಿಲಿನ ಮಿಂಚಿನ ಬೆಳಕಿನಲ್ಲಿ ಈಜುತ್ತಾ ದಡ ಸೇರಿದನು. ತಾನೆಲ್ಲಿದ್ದೇನೆ ಎಂಬ ಅರಿವು ಇಲ್ಲದಿದ್ದರೂ, ಮಿಂಚಿನ ಬೆಳಕಿನಲ್ಲಿ ತೆವಳುತ್ತಲೇ ದೂರದಲ್ಲಿ ಕಾಣುತ್ತಿದ್ದ ಒಂಟಿ ಮನೆಗೆ ಬಂದು ಬಾಗಿಲು ಬಡಿದು, ಬಾಗಿಲು ತೆಗೆಯಲು ಕೇಳಿಕೊಂಡನು. ಮುದುಕಿ ಅನುಮಾನದಿಂದಲೇ ಬಾಗಿಲು ತೆಗೆದಳು. ಅಷ್ಟರಲ್ಲಿ ಮುದುಕಿಯ ಸೊಸೆ ಹೆರಿಗೆ ನೋವಿನಿಂದ ನರಳುತ್ತಿದ್ದುದ್ದನ್ನು ಕೇಳಿ ರಾಹಿಲನು ತಾನೊಬ್ಬ ಡಾಕ್ಟರ್ ಎಂದು, ಅಪ್ಪಣೆ ಕೊಟ್ಟರೆ ಸೊಸೆಯನ್ನು ಪರೀಕ್ಷಿಸುವುದಾಗಿ ಅಪ್ಪಣೆ ಕೇಳಿದಾಗ ಸಂತೋಷದಿಂದಲೇ

ಒಪ್ಪಿಕೊಂಡಳು. ಮುದುಕಿಗೆ ಬಿಸಿ ನೀರು ತರಲು ಹೇಳಿ – ಹೆರಿಗೆ ನೋವಿನಿಂದಾಗಿ ನರಳುತ್ತಿದ್ದ ಆ ಹೆಣ್ಣು ಮಗಳನ್ನು ನೋಡಿ ಪರೀಕ್ಷಿಸಿದನು. ಸ್ಥಿತಿ ಗಂಭೀರವಾಗಿತ್ತು. ತುರ್ತಾಗಿ ಆಸ್ಪತ್ರೆ ಸೇರಿಸಿದರೆ ಮಾತ್ರ ಉಳಿಸುವುದು ಸಾಧ್ಯ ಎಂದು ಗೊತ್ತಿದ್ದರೂ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಒಂದೆಡೆ ಕತ್ತಲೆ, ಧಾರಾಕಾರವಾಗಿ ಸುರಿಯುವ ಮಳೆ, ಎಲ್ಲಕ್ಕಿಂತ ಹೆಚ್ಚಾಗಿ ಯುದ್ಧ ನಡೆದಿತ್ತು. ಬಹಳ ಪ್ರಯಾಸದಿಂದ ನಿರ್ಜಿವ ಮಗುವನ್ನು ಹೊರ ತೆಗೆದು, ಆ ಮುದುಕಿಯು ಸೊಸೆಯನ್ನು ಬದುಕಿಸಿದನು.

ಈ ರೀತಿ ರಾಹಿಲನು ಮುದುಕಿಗೆ ಸಹಾಯ ಮಾಡಿದನು. ಇದೇ ರೀತಿ ಮುದುಕಿಯು ರಾಹಿಲನನ್ನು ಮಂಚದಡಿಯಲ್ಲಿ ಇರಲು ಹೇಳಿ, ಆತನನ್ನು ಹುಡುಕಿಕೊಂಡು ಬಂದ ಸೈನಿಕರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದೇಳಿ ಸೈನಿಕರನ್ನು ಹೊರಗೆ ಕಳುಹಿಸಿ ಆತನನ್ನು ಶತೃಗಳಿಗೆ ಒಪ್ಪಿಸದೆ, ಆಕೆ ತನ್ನ ಮಗನ ಬಟ್ಟೆಗಳನ್ನು ಕೊಟ್ಟು, ಕಾಲಿಗೆ ಕಟ್ಟಲು ಮರದ ತುಂಡು, ಬಟ್ಟೆ ಕೊಟ್ಟು ಅಲ್ಲಿಯೇ ಒಂದೆರೆಡು ದಿನ ಉಳಿಯಲು ಅವಕಾಶ ಕಲ್ಪಿಸುತ್ತಾಳೆ. ಈ ರೀತಿ ಮುದುಕಿಯು ರಾಹಿಲನಿಗೆ ಸಹಾಯ. ಮಾಡುತ್ತಾಳೆ.

3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ಅಭಿಪ್ರಾಯವನ್ನು ಬರೆಯಿರಿ.

ಯುದ್ಧದಿಂದ ಸಾವಿರಾರು ಮಂದಿ ನಿರುಪರಾಧಿಗಳು ತಮ್ಮ ಪ್ರಾಣ ತೆತ್ತಬೇಕಾಗುತ್ತದೆ. ಸಾವಿರಾರು ಮಂದಿಯ ದೇಹಕ್ಕೆ, ಮನಸ್ಸಿಗೆ ಸಹಿಸಲಾರದ ಗಾಯ ಉಂಟಾಗುತ್ತದೆ. ಜೀವ ಹಾನಿಯ ಜೊತೆಗೆ ಆಸ್ತಿಯ ಹಾನಿ, ಮಾನ ಹಾನಿ ಉಂಟಾಗುವುದು.

ಈ ರೀತಿ ಯುದ್ಧದಿಂದ ಆಗುವ ಅನಾಹುತಗಳನ್ನು ವಿವರಿಸಲು ಅಸಾಧ್ಯ, ಪ್ರಸ್ತುತ ಕಥೆಯಲ್ಲಿ ಮುದುಕಿಯ ಗಂಡನು ಯುದ್ಧಕ್ಕೆ ಹೋದವನು ಹಿಂತಿರುಗಲಿಲ್ಲ. ಮಗನು ಕೂಡ ಯುದ್ಧಕ್ಕೆ ಹೋದವನು ಇದುವರೆಗೆ ಬಂದಿರಲಿಲ್ಲ. ತುಂಬು ಗರ್ಭಿಣಿ ಸೊಸೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಆಗದೆ ಈ ಬಾರಿಯು ಮೊಮ್ಮಗನನ್ನು ಕಳೆದುಕೊಂಡಿದ್ದಳು. ಬೇಕಾದಷ್ಟು ಜಮೀನು, ಆಸ್ತಿ ಇದ್ದರೂ ಅದನ್ನು ಶತೃಗಳು ಕೊಳ್ಳೆ ಹೊಡೆದಿದ್ದರು. ಹೀಗೆ ಯುದ್ಧದಿಂದ ಅನಾಹುತಗಳೇ ಹೆಚ್ಚು, ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು,

1. “ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ!”

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಶ್ರೀಮತಿ ಸಾ.ರಾ.ಅಬೂಬಕರರವರು ರಚಿಸಿರುವ “ಯುದ್ಧ” ಎಂಬ ಕಥಾ ಭಾಗದಿಂದ ಆರಿಸಲಾಗಿದೆ.

‘ಯುದ್ಧ’ ಕತೆಯನ್ನು ‘ಚಪ್ಪಲಿಗಳು’ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು, ಶತೃಗಳ ದಾಳಿಗೆ ತುತ್ತಾಗಿ ಒಂದು ಕಾಲನ್ನು ಕಳೆದುಕೊಂಡು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಹಾಗೂ ಕತ್ತಲೆಯಲ್ಲಿ ರಾಹಿಲನು, ಮಿಂಚಿನ ಬೆಳಕಿನಲ್ಲಿ ಕಂಡ ಮನೆಯ ಬಳಿ ಬಂದು ಬಾಗಿಲು ಬಡಿದು ರಾಹಿಲನು ಈ ವಾಕ್ಯವನ್ನು ಹೇಳಿದನು.

ವಿವರಣೆ : ಶತೃಗಳ ದಾಳಿಗೆ ಸಿಲುಕಿ ವಿಮಾನ ಅಪಘಾತದಿಂದ ಸಮುದ್ರದೊಳಗೆ ಬಿದ್ದ ರಾಹಿಲನು ಒಂದು ಕಾಲನ್ನು ಕಳೆದುಕೊಂಡಿದ್ದೆ ಅಲ್ಲದೆ, ಸಾಕಷ್ಟು ಗಾಯಗಳಿಂದ ತುಂಬ ಬಳಲಿದ್ದನು. ಆ ಸಮಯದಲ್ಲಿ ಆತನಿಗೆ ಒಂದಿಷ್ಟು ಆಸರೆಯ ಅಗತ್ಯವಿತ್ತು. ಆಶ್ರಯ ಬಯಸಿ ಸಮೀಪದಲ್ಲಿ ಮಿಂಚಿನ ಬೆಳಕಿನಲ್ಲಿ ಕಂಡ ಮನೆಯ ಬಾಗಿಲು ತಟ್ಟಿ, ‘ದಯವಿಟ್ಟು ಬಾಗಿಲು ತೆರೆಯಿರಿ, ತಾನು ಗಾಯಗೊಂಡು ತುಂಬಾ ಬಳಲಿರುವುದಾಗಿ” ಆ ಮನೆಯೊಡತಿಗೆ ಕೇಳಿಕೊಂಡನು.

ವಿಶೇಷತೆ : ಯುದ್ಧದಿಂದ ಸಂಭವಿಸುವ ಅಪಘಾತ, ಅನಾಹುತಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಸರಳವಾದ ಹಾಗೂ ಸಹಜ ಭಾಷೆಯಲ್ಲಿ ರಾಹಿಲನ ಪರಿಸ್ಥಿತಿಯಲ್ಲಿ ತಿಳಿಸಿ ಕೊಡಲಾಗಿದೆ.

2. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ”

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಶ್ರೀಮತಿ ಸಾ.ರಾ.ಅಬೂಬಕರ್‌ರವರು ರಚಿಸಿರುವ “ಯುದ್ಧ” ಎಂಬ ಕಥಾ ಭಾಗದಿಂದ ಆರಿಸಲಾಗಿದೆ. ಇದನ್ನು ‘ಯುದ್ಧ’ ಎಂಬ ಕತೆಯಿಂದ ‘ಚಪ್ಪಲಿಗಳು’ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಮುದುಕಿಯ ಸೊಸೆ. ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿರುವಾಗ, ವೈದ್ಯನಾದ ರಾಹಿಲ್ ಅಲ್ಲಿಗೆ ಆಶ್ರಯಕ್ಕೆಂದು ಬಂದು, ಸೊಸೆಯ ಸ್ಥಿತಿಯನ್ನು ಕಂಡು ಪರೀಕ್ಷಿಸುವ ಸಂದರ್ಭದಲ್ಲಿ ರಾಹಿಲನು, ಮುದುಕಿಗೆ ಈ ಮೇಲ್ಕಂಡ ಮಾತನ್ನು ಹೇಳಿದನು.

ವಿವರಣೆ : ರಾಹಿಲ್ ವೈದ್ಯನಾಗಿದ್ದರಿಂದ, ಹೆರಿಗೆ ನೋವಿನಿಂದ ನರಳುತ್ತಿರುವ ಮುದುಕಿಯ ಸೋಸೆಯನ್ನು ಪರೀಕ್ಷಿಸಿದನು. ಪರಿಸ್ಥಿತಿ ವಿಪರೀತವಾಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸದಿದ್ದಲ್ಲಿ ತಾಯಿ-ಮಗು ಇಬ್ಬರೂ ಉಳಿಯುವ ಸಂದರ್ಭವಿರಲಿಲ್ಲ. ಆದರೆ ಈ ಭಯಂಕರ ಯುದ್ಧ, ಗುಡುಗು ಸಿಡಿಲಿನಿಂದ ಕೂಡಿನ ಮಳೆ ಹಾಗೂ ಕತ್ತಲೆಯಲ್ಲಿ ಸಾಧ್ಯವಿರಲಿಲ್ಲ. ಆದರೂ ಧೈರ್ಯಗೆಡದೆ ರಾಹಿಲ್, ಮುದುಕಿಗೆ ಬಿಸಿನೀರು ಸಿದ್ಧಪಡಿಸಲು ಹೇಳಿ, ಆಕೆಯನ್ನು ಪರೀಕ್ಷಿಸಿ ನಂತರ ನಿರ್ಜಿವ ಮಗುವನ್ನು ಹೊರತೆಗೆದನು.

ವಿಶೇಷತೆ : ಹೆಣ್ಣು ತಾಯಿಯಾಗುವ ಸಂದರ್ಭವನ್ನು ಹಾಗೂ ವೈದ್ಯ ಕರ್ತವ್ಯದ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ. ರಾಹಿಲನ ಸಮಯ ಪ್ರಜ್ಞೆಯನ್ನು ಸರಳ ಹಾಗೂ ಸಹಜ ಭಾವೇಷದಲ್ಲಿ ವಿವರಿಸಲಾಗಿದೆ.

3. ‘ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?”

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಶ್ರೀಮತಿ ಸಾ.ರಾ.ಅಬೂಬಕರ್‌ರವರು ರಚಿಸಿರುವ “ಯುದ್ಧ” ಎಂಬ ಕಥಾ ಭಾಗದಿಂದ ಆರಿಸಲಾಗಿದೆ. ಇದನ್ನು ಈ ಲೇಖಕಿಯವರ ‘ಚಪ್ಪಲಿಗಳು’ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ರಾಹಿಲನು ಮುದುಕಿಯ ಮನೆಯಲ್ಲಿದ್ದಾಗ ಶತ್ರುಗಳು ಬಾಗಿಲು ಬಡಿದಾಗ ರಾಹಿಲನು ಕೈಸನ್ನೆ ಮಾಡಿದನು. ಆಗ ಅವನ ಕಣ್ಣುಗಳೂ ಆ ಮುದುಕಿಯ ಮಗನ ಕಣ್ಣುಗಳಂತೆಯೇ ಇದ್ದುದ್ದನ್ನು ಕಂಡು ಮುದುಕಿ, ಮನಸ್ಸಿನಲ್ಲಿ ಈ ವಾಕ್ಯವನ್ನು ಹೇಳಿಕೊಂಡಳು.

ವಿವರಣೆ : ರಾಹಿಲನನ್ನು ನೋಡಿದ ಮುದುಕಿಗೆ. ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳು ಈತನ ಕಣ್ಣುಗಳಂತೆಯೇ ಇರುವುದನ್ನು ಕಂಡು ಒಂದೆಡೆ ಆಶ್ಚರ್ಯ. ಸಂತೋಷವಾದರೂ, ಆ ಭಯದ ವಾತಾವರಣದಲ್ಲಿ ಯೋಚಿಸುವಷ್ಟು ವ್ಯವಧಾನವು ಇರಲಿಲ್ಲ. ಏಕೆಂದರೆ ಶತ್ರುಗಳು ಬಂದು ಬಾಗಿಲು ಬಡಿಯುತ್ತಿದ್ದರು.

ವಿಶೇಷತೆ : ಬಹುಶಃ ರಾಹಿಲ್‌ನ ಕಣ್ಣುಗಳೂ ಮುದುಕಿಯ ಮಗನ ಕಣ್ಣುಗಳನ್ನು ಹೋಲುತ್ತಿದ್ದುದರಿಂದ ಬಹುಶಃ ರಾಹಿಲ್ ಆಕೆಯ ಮನೆಯಲ್ಲಿ ಆಶ್ರಯ ಪಡೆಯಲು ಸಾಧ್ಯವಾಯಿತು.

ಭಾಷೆ, ಸರಳ, ಸಹಜವಾಗಿ ಸಂದರ್ಭೋಚಿತವಾಗಿ ಮೂಡಿ ಬಂದಿದೆ.

4. “ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನು ನೋಡಿ”

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಶ್ರೀಮತಿ ಸಾ.ರಾ.ಅಬೂಬಕರ್‌ರವರು ರಚಿಸಿರುವ “ಯುದ್ಧ” ಎಂಬ ಕಥಾ ಭಾಗದಿಂದ ಆರಿಸಲಾಗಿದೆ. ಇದನ್ನು “ಚಪ್ಪಲಿಗಳು’ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ.

ಸಂದರ್ಭ : ಗುಡುಗು-ಮಿಂಚುಗಳೊಂದಿಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ, ಅಲ್ಲದೆ ಬ್ಲಾಕ್‌ಕಾಟ್ ನಿಯಮ ಪಾಲಿಸಬೇಕಾದ ಕಡು ಕತ್ತಲೆಯಲ್ಲಿ ಊರ ಒಂಟಿ ಮನೆಗೆ ಶತ್ರುಗಳು ತಮ್ಮ ಶತ್ರುವಿನ ತಪಾಸಣೆಗಾಗಿ ಬಂದಾಗ ದುಃಖದಲ್ಲಿದ್ದ ಮುದುಕಿ ಶತ್ರುಗಳಿಗೆ ಈ ಮಾತನ್ನು ಹೇಳಿದಳು.

ವಿವರಣೆ : ಯುದ್ಧದ ಕರಾಳ ರಾತ್ರಿಯಲ್ಲಿ ಮುದುಕಿಯ ಸೊಸೆ ತುಂಬು ಗರ್ಭಿಣಿ ಹೆರಿಗೆಯ ನೋವಿನಿಂದ ಬಳಲುತ್ತಿದ್ದಳು. ಆ ಸಮಯಕ್ಕೆ ಡಾಕ್ಟರ್ ರಾಹಿಲ್ ಆಶ್ರಯ ಬೇಡಿ ಬಂದನು. ಮನೆಯ ಪರಿಸ್ಥಿತಿ ಕಂಡು ತುಂಬಾ ಗಂಭೀರವಾಗಿದ್ದ ಆಕೆಯನ್ನು ಮಗುವನ್ನು ಉಳಿಸಲು ಬಹಳ ಕಷ್ಟವಾಯಿತು. ತಾಯಿಯನ್ನು ಉಳಿಸಿದ ರಾಹಿಲ್ ಮಗುವನ್ನು ಉಳಿಸಲಾಗಲಿಲ್ಲ. ಇದರಿಂದ ಮುದುಕಿ ಹಾಗೂ ಸೊಸೆಗೆ ತುಂಬಾ ನಿರಾಸೆಯಾಗಿ ರೋಧಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಶತ್ರುವನ್ನು ಹುಡುಕುತ್ತಾ ಬಂದ ಸೈನಿಕರಿಗೆ ಮುದುಕಿ ಈ ಮೇಲ್ಕಂಡ ಮಾತನ್ನು ಹೇಳಿ ಆ ಮಗುವನ್ನು ತೋರಿಸಿದಳು.

ವಿಶೇಷತೆ : ಯುದ್ಧದ ಪರಿಣಾಮ ಇಲ್ಲಿ ಕಂಡು ಬರುತ್ತದೆ. ಒಂದು ವೇಳೆ ಯುದ್ಧ ಇಲ್ಲದಿದ್ದಲ್ಲಿ ಮಗುವನ್ನು ಬದುಕಿಸಬಹುದೆಂಬ ಆಸೆ ಅವರಲ್ಲಿತ್ತು.

1. ರಾಹಿಲನ ದೇಹದಲ್ಲಿ________ಸಂಚಾರವಾದಂತಾಯಿತು.

ಅ) ಶಕ್ತಿ

ಆ) ವಿದ್ಯುತ್

ಇ) ಹೊಸರಕ್ತ

ಈ) ಮಿಂಚು

2. ನರಳಾಟದ ಬೆನ್ನಲ್ಲೆ ಹಿರಿಯ ಹೆಂಗಸೊಬ್ಬಳ_________ಕೇಳಿ ಬಂತು.

ಅ) ಆರ್ತನಾದ

ප) ಅಳು

ಇ) ಚೀರಾಟ

ಈ) ಸಾಂತ್ವನ

3. ಮುದುಕಿ ಮತ್ತು ಸೊಸೆಯ__________ ಮನೆಯ ಮೂಲೆ ಮೂಲೆಯನ್ನು ಪ್ರತಿಧ್ವನಿಸಿತು.

ಅ) ಸಂತಸ

ಆ) ಜಗಳ

ಇ) ರೋಧನ

ಈ) ಸಂಗೀತ

4. ಯಾರಾದರೂ ಗಾಯಗೊಂಡ_________ಈ ಕಡೆ ಬಂದಿದ್ದಾರೆಯೇ?

ಅ) ಜನರು

ಆ) ಸೈನಿಕರು

ಇ) ಗಂಡಸರು

ಈ) ಹೆಂಗಸರು

5. ಮನೆಯಲ್ಲೊಂದು ಪುಟ್ಟ ಮಗುನ ಅಳು ಕೇಳಲು ನನ್ನ__________ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು.

ಅ) ತಂದೆಯು

ಆ) ತಾಯಿಯು

ಇ) ಮಗಳು

ಈ) ಮಗನು

ಉತ್ತರಗಳು :

1)-ಇ

2)-ಈ

3)-ಇ

4)-ಆ

5)-ಈ

೧. ಎಲ್ಲಾದರೂ ಹಾಗಾದರೂ ಇಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ?

೨. ಈ ನೆಲ ಯಾರಿಗೆ ಸೇರಿದ್ದು?

೩. ಈವರೆಗೆ ಈಜಿದ್ದೆ ಅದ್ಭುತವೆನ್ನಿಸಿತು. ಮುಂದೇನು?

೪. ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?

೫. ಏನು ಮಾಡಲಿ ಮಗಳೆ?

೬ ಈ ಮಳೆಯಲ್ಲಿ ಈ ಕತ್ತಲಲ್ಲಿ ನಾನು ಯಾರನ್ನು ಕರೆಯಲಿ?

೭ ಯಾರಿಗೆ ಬೇಕಾಗಿದೆ ಈ ಯುದ್ಧ?

೮. ಯಾಕೆ? ಎದ್ದು ನಿಲ್ಲಲಾಗುತ್ತಿಲ್ಲವೇ?

೯. ಈ ಯುದ್ದವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?

೧೦. ಈ ಮನುಷ್ಯರಿಗೆ ಎಂಥಹ ಬುದ್ದಿ ಕೊಡುತ್ತೀಯಾ?

೧. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ

‘ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’ ಎಂಬುದು ಹಿರಿಯರ ಅನುಭವದಿಂದ ಬಂದ ಗಾದೆ ಮಾತಾಗಿದೆ. ಇದನ್ನು ನಿರೂಪಿಸಲು ಹಲವಾರು ಕಥೆಗಳು ರಾಮಾಯಣ ಮಹಾಭಾರತ ಪುರಾಣಗಳಲ್ಲಿ ದೊರೆಯುತ್ತವೆ. ನಿಜ ಜೀವನದಲ್ಲಿ ಹಲವಾರು ಘಟನೆಗಳನ್ನು ಕೇಳಿದ್ದೇವೆ. ಕಂಡಿದ್ದೇವೆ.

‘ಸತ್ಯ’ ಹೇಳುವವರಿಗೆ ಹಲವಾರು ಸಂಕಟಗಳು ಎದುರಾಗಬಹುದು. ಅದನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ. ಸತ್ಯಕ್ಕೆ ಹೆದರಿ ಕಷ್ಟಗಳು, ನೋವುಗಳು, ಸಂಕಟಗಳಿಗೆ ಹೆದರಿ ಸುಳ್ಳು ಹೇಳಲು ಹೊರಟರೆ. ಇದರಿಂದ ಆ ಕ್ಷಣಕ್ಕೆ ಸುಖ ಸಂತೋಷ, ಸ್ವಲ್ಪ ಸಮಾಧಾನ ಸಿಗಬಹುದೇ ಹೊರತು, ಶಾಶ್ವತವಾದ ಸತ್ಯ ಎಂದೂ ಸಾಯದೇ, ಒಂದಿಲ್ಲ ಒಂದು ದಿನ ಹೇಳಿದ ಸುಳ್ಳು ಗೊತ್ತಾದಾಗ ತಡೆಯಲು ಅಸಾಧ್ಯವಾದ ನೋವು – ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಹಿರಿಯರು – ಕಿರಿಯರಿಗೆ, ಯಾವಾಗಲೂ ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳಬಾರದು ಎಂಬ ನೀತಿಯನ್ನು ತಿಳಿಸಿ ಕೊಟ್ಟಿದ್ದಾರೆ.

೨. ಆಳಾಗಬಲ್ಲವನು, ಅರಸನಾಗಬಲ್ಲನು

‘ಆಳು’ ಎಂದರೆ ಕೆಲಸ ಮಾಡುವವನು, ದುಡಿಯುವವನು ಎಂಬ ಅರ್ಥವಿದೆ. ಅಂಥಹವನು ಅರಸನು ಆಗಬಲ್ಲ. ಅಂದರೆ ಯಜಮಾನನಾಗಬಹುದು ಎಂಬುದನ್ನು ಗಾದೆ ಸೂಚಿಸುತ್ತದೆ. ಕಾಲಕಾಲಕ್ಕೆ ನಡೆಯಬೇಕಾದ ಕಾರ್ಯಗಳನ್ನು ಕೆಲಸಗಾರರಿಂದ ಸಮರ್ಥವಾಗಿ ನಿರ್ವಹಿಸುವಂತೆ ಮಾಡಬೇಕಾಗುತ್ತದೆ.

ಯಜಮಾನನಿಗೆ ಕೆಲಸದ ಅನುಭವವಿದೆ ಎಂದು ಗೊತ್ತಾದಾಗ ಕೆಲಸಗಾರರು ಅವನ ಮಾತಿಗೆ ಮನ್ನಣೆ ನೀಡುತ್ತಾರೆ. ಆಳಾಗ ಬಲ್ಲವನು ಒಡೆಯನಾಗಿ ಅರಸನಾಗಬೆಕಾದರೆ ಆತನಿಗೆ ತಾನು ಮಾಡಬೇಕಾದ ಕಾರ್ಯದಲ್ಲಿ ಶ್ರದ್ಧೆ, ಆಸಕ್ತಿ, ಇರಬೇಕು. ಪರಿಶ್ರಮದಿಂದ ಕಾರ್ಯವನ್ನು ಪೂರೈಸಬೇಕು. ಇಂದು ಶ್ರೀಮಂತರಾಗಿರುವವರು, ದೊಡ್ಡ ದೊಡ್ಡ ಮಂತ್ರಿಗಳಾಗಿರುವವರು ಕೂಡ ತಮ್ಮ ಬಾಲ್ಯ, ಯೌವ್ವನದಲ್ಲಿ ಪಟ್ಟ ಪರಿಶ್ರಮದ ಪ್ರತಿಫಲವಾಗಿದೆ.

1. ಸಾ.ರಾ. ಅಬೂಬಕರ್‌ರ್ರವರ ಸಂಕ್ಷಿಪ್ತ ಪರಿಚಯ ಮಾಡಿರಿ.

‘ಲೇಖಕಿಯ ಪರಿಚಯ’ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

2. ಯುದ್ಧದ ಕಾರಣಗಳು ಹಾಗೂ ದುಷ್ಪರಿಣಾಮಗಳನ್ನು ನಾಲೈದು ವಾಕ್ಯಗಳಲ್ಲಿ ವಿವರಿಸಿ.

‘ಯುದ್ಧ’ ಗಳನ್ನು ಪುರಾಣ-ಇತಿಹಾಸಗಳ ಕಾಲದಿಂದಲೂ ಇರುವಂಥಹುದೇ ಆಗಿದೆ. ಪುರಾಣಗಳಲ್ಲಿ ಕುರುಕ್ಷೇತ್ರ ಮಹಾಯುದ್ಧ, ರಾಮ-ರಾವಣರ ಯುದ್ಧ, ಧಾರ್ಮಿಕ ಸಂಘರ್ಷಣೆಯ ಯುದ್ಧಗಳು ಸಾಕ್ಷಿಯಾದರೆ ‘ಇತಿಹಾಸ’ ಎಂದರೆ ಯುದ್ಧ ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿಯಾಗಿವೆ.

ಯಾವುದೇ ಯುದ್ಧಗಳಿಗೆ ಕಾರಣಗಳು ಹಾಗೂ ಅವುಗಳಿಂದ ಉಂಟಾಗುವುದು ದುಷ್ಪರಿಣಾಮಗಳು ಮಾತ್ರ ಮಾನವ ಸಮಾಜದಲ್ಲಿ ಗಂಭೀರ ಮುದ್ರೆಯನ್ನೊತ್ತಿದೆ.

ಯುದ್ಧಕ್ಕೆ ಕಾರಣಗಳು ಎಂದಾಗ ರಾಜ್ಯ ವಿಸ್ತರಣೆ, ಲೋಭ, ಶಕ್ತಿ ಪ್ರದರ್ಶನ, ಕೌಟುಂಬಿಕ ಕಲಹ, ದ್ವೇಷ ಸಾಧನೆಗಳು ಕಾರಣವಾಗುತ್ತವೆ.

ಇದರ ದುಷ್ಪರಿಣಾಮಗಳೆಂದರೆ – ಸಾವು-ನೋವು, ಆಸ್ತಿ, ಮಾನಹಾನಿ, ಧರ್ಮ ಭಿನ್ನತೆ, ದೇಶ ಭಿನ್ನತೆ, ಮಿತ್ರರು ವೈರಿಗಳಾಗಬಹುದು. ಮಾನವೀಯ ಮೌಲ್ಯಗಳು, ನಡವಳಿಕೆಗಳು ನಶಿಸಿ ಹೋಗಿ ಮನುಷ್ಯ ಕಾಡು ಕ್ರೂರವಾಗುತ್ತಾನೆ. ಇಲ್ಲವೆ ರಾಕ್ಷಸನಾಗುತ್ತಾನೆ.

ಎಲ್ಲೆಲ್ಲೂ ಕ್ರೌರ್ಯ ಅಶಾಂತಿ, ರೋ-ರುಚಿನಗಳು ತಾಂಡವವಾಡುತ್ತವೆ.

1. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯನ ಹೆಸರೇನು?

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ರಾಹಿಲ್.

2. ಡಾಕ್ಟರ್ ರಾಹಿಲ್ ಯಾವ ಉಡುಪು ಧರಿಸಿದ್ದರು?

ಸೈನಿಕ ಉಡುಪನ್ನು ಧರಿಸಿದ್ದರು.

3. ‘ಬ್ಲಾಕ್ ಔಟ್’ ಎಂದರೇನು?

ಇದೊಂದು ನಿಯಮ, ಯುದ್ಧ ಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ, ವಿದ್ಯುತ್ ದೀಪ, ಬೆಂಕಿ ಉರಿಸದೆ ಕತ್ತಲೆಯಲ್ಲಿದ್ದು ರಕ್ಷಿಸಿಕೊಳ್ಳುವುದನ್ನು ‘ಬ್ಲಾಕ್ ಔಟ್’ ಎನ್ನುವರು.

4. ಡಾಕ್ಟರ್ ರಾಹಿಲ್‌ಗೆ ಆದ ತೊಂದರೆ ಏನು.

ಡಾಕ್ಟರ್ ರಾಹಿಲ್‌ಗೆ ಒಂದು ಕಾಲು ಮುರಿದು ಹೋಗಿತ್ತು.

1. ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ.

ಈ ವಾಕ್ಯವನ್ನು ಪೈಲೆಟ್, ಡಾಕ್ಟರ್ ರಾಹಿಲ್‌ಗೆ ಹೇಳಿದನು.

2. “ಈ ಮಳೆಯಲ್ಲಿ ಈ ಕತ್ತಲಲ್ಲಿ ಯಾರನ್ನು ಕರೆಯಲಿ?”

ಮುದುಕಿ ತನ್ನ ಸೊಸೆ ಹೆರಿಗೆ ನೋವು ಅನುಭವಿಸುತ್ತಿದ್ದಾಗ ಹೇಳಿದಳು.

3. ‘ಯಾರಮ್ಮ ಅದು? ಏನಾಗಿದೆ?”

ಡಾಕ್ಟರ್ ರಾಹಿಲ್ ಮನೆಯ ಯಜಮಾನಿ ಮುದುಕಿಗೆ ಕೇಳಿದಳು.

4. ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿತಾನೆ?

ಮುದುಕಿ ಡಾಕ್ಟರ್ ರಾಹಿಲ್‌ಗೆ ಹೇಳಿದಳು.

5. “ಆಗಲೂ ಯುದ್ಧವಾಗಿತ್ತಾ ಅಜ್ಜಿ?”

ಡಾಕ್ಟರ್ ರಾಹಿಲ್ ಮನೆ ಯಜಮಾನಿ ಮುದುಕಿಗೆ ಕೇಳಿದಳು.

1) ಆರ್ತನಾದ : ದೂರದಿಂದ ಆರ್ತನಾದ ಕೇಳಿ ಬರುತ್ತಿತ್ತು.

2) ಸಾಂತ್ವನ : ನಮ್ಮ ತಂದೆ-ತಾಯಿ ನನಗೆ ಸಾಂತ್ವನ ಹೇಳಿದರು.

3) ಹಂಬಲ : ನನಗೆ ವಿದೇಶ ಪ್ರಯಾಣ ಮಾಡಬೇಕೆಂಬ ಹಂಬಲವಿದೆ.

4) ರೋಧನ : ಆ ಮನೆಯಲ್ಲಿ ಯಾರೋ ರೋಧಿಸುತ್ತಿದ್ದರು.

1) ಮಗು – ಮಕ್ಕಳು

2) ಸೈನಿಕ – ಸೈನಿಕರು

3) ಜನ – ಜನರು

4) ಮಹಿಳೆ – ಮಹಿಳೆಯರು

1) ಜೀವ X ನಿರ್ಜಿವ

2) ದಯೆ X ನಿರ್ದಯೆ

3) ರಾತ್ರಿ X ಹಗಲು

4) ಧರ್ಮ X ಅಧರ್ಮ

  1. ಯೋಗವಾಹಗಳು ಎಂದರೆ _________
  2. ಒಟ್ಟು ವರ್ಗಿಯ ವ್ಯಂಜನಗಳು _________
  3. ಅನುನಾಸಿಕಗಳು _________
  4. ಒಟ್ಟು ಸ್ವರಾಕ್ಷರಗಳ ಸಂಖ್ಯೆ________
  5. ಅವರ್ಗೀಯ ವ್ಯಂಜನಗಳ ಸಂಖ್ಯೆ _________

ಉತ್ತರಗಳು :

1) ಅನುಸ್ವಾರ, : ವಿಸರ್ಗ

2) 25

3) ಔ, ಙ, ಞ, ಣ, ನ, ಮ

4) 13

5) 9

Leave a Reply

Your email address will not be published. Required fields are marked *