10th Standard Vyagra Geethe Kannada Notes Question Answer Summery Guide Extract Mcq Pdf Download Kannada Medium Karnataka State Syllabus 2025, ವ್ಯಾಘ್ರಗೀತೆ ಪಾಠದ ಪ್ರಶ್ನೋತ್ತರಗಳು pdf, vyagra geethe kannada text book pdf, 10ನೇ ತರಗತಿ ವ್ಯಾಘ್ರಗೀತೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, ವ್ಯಾಘ್ರಗೀತೆ Notes, kseeb Solutions Lesson 2 Vyaghra Geethe Kannada Class 10 Pdf, vyagra geethe kannada summary, 10th class kannada 2nd lesson question answer, 10th kannada 2nd chapter important notes in kannada.

10ನೇ ತರಗತಿ ವ್ಯಾಘ್ರಗೀತೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು
ಲೇಖಕರ ಪರಿಚಯ
ಎ.ಎನ್.ಮೂರ್ತಿರಾವ್ ಇವರು ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನವರು. ಇವರ ಪೂರ್ಣ ಹೆಸರು ‘ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಆಧುನಿಕ ಕನ್ನಡದ ಪ್ರಮುಖ ಗದ್ಯ ಬರಹಗಾರರಾದ ಇವರು ಪ್ರಬಂಧಕಾರರಾಗಿಯೇ ಮಾನ್ಯರಾಗಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ – ‘ಹಗಲುಗನಸುಗಳು, ಅಲೆಯುವಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಚಂಡಮಾರುತ, ಮಿನುಗುಮಿಂಚು, ಪೂರ್ವಸೂರಿಗಳೊಡನೆ ಮೊದಲಾದವುಗಳು.
“ಚಿತ್ರಗಳು-ಪತ್ರಗಳು” ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ‘ದೇವರು’ ಎಂಬ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. 1984ರಲ್ಲಿ ಕೈವಾರದಲ್ಲಿ ಸಮಾವೇಶಗೊಂಡ 56ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1) ಭಗವದ್ಗೀತೆಯನ್ನು ರಚಿಸಿದವರು ಯಾರು?
ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.
2) ಹುಲಿಗೆ ಪರಮಾನಂದವಾಗಲು ಕಾರಣವೇನು?
ಹುಲಿಗೆ ಮೊದಲೇ ಹಸಿವಾಗಿತ್ತು. ದುಂಡು ದುಂಡಾಗಿದ್ದ ಮನುಷ್ಯ ಎದುರಿಗೆ ಕಾಣಲು ಹುಲಿಗೆ ಪರಮಾನಂದವಾಯಿತು.
3) ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಹುಲಿಗೆ ಬೆನ್ನು ತೋರಿಸಲು, ಹುಲಿ ಜಿಗಿದಾಗಲೆಲ್ಲಾ ಹಿಂದು-ಮುಂದು ತಿರುಗಿ-ತಿರುಗಿ ಶಾನುಭೋಗರಿಗೆ ತಲೆ ಸುತ್ತಿದಂತಾಯಿತು.
4) ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
‘ಖರ್ದಿ ಪುಸ್ತಕ’ ವು ಶಾನುಭೋಗರ ಬ್ರಹ್ಮಾಸ್ತ್ರವಾಗಿತ್ತು.
5) ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸುತ್ತಿತ್ತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1) ಮರಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಮರಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು- ‘ಬೆಳದಿಂಗಳ ದಿನ’ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದ ಯೋಚಿಸುತ್ತಾ ಭಯದಿಂದಲೇ ಕಾಲನ್ನು ಚುರುಕುಗೊಳಿಸಿ ನಡೆಯುತ್ತಾ ಯೋಚಿಸುತ್ತಿದ್ದರು.
2) ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೇ. ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವೆಂದು ತಿಳಿದುಕೊಂಡಿರುತ್ತದೆ. ಪುಣ್ಯಕೋಟಿಯನ್ನು ತಿನ್ನಲೊಲ್ಲದ ಪ್ರಾಣಬಿಟ್ಟ ಹುಲಿಯ ಮೊಮ್ಮಗನೇ ಹುಲಿಯೇ ಆದ ಕಾರಣ ಬೆನ್ನ ಹಿಂದಿನಿಂದ ಆಕ್ರಮಿಸುವುದಿಲ್ಲ ಅಥವಾ ಹಾರಿ ಕೊಲ್ಲುವುದಿಲ್ಲ..
3) ಶಾನುಭೋಗರು ಮೂರ್ಧೆಯಲ್ಲಿದ್ದಾಗ ನಡೆದ ಘಟನೆಯನ್ನು ವಿವರಿಸಿ.
ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆ ಎಂದರೆ – ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರದಾರಿಯಿದೆ ಎನ್ನುವಾಗ ಎತ್ತುಗಳು ಏನು ಮಾಡಿದರೂ ಮುಂದೆ ಹೋಗದೇ ಕಣಿ ಹಾಕಿಕೊಂಡವು. ಆ ವೇಳೆಗೆ ಎದೆ ನಡುಗುವಂತೆ ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಗಂಟೆಯ ಶಬ್ದವನ್ನು ಕೇಳಿದ ಹುಲಿ ಕೆಲವು ನಿಮಿಷ ತಡೆದು ನೋಡಿತು.
ಆದರೆ ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದಲೂ, ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು. ಗಾಡಿಯವರು ಐದು ಜನವಿದ್ದರೂ ಎಷ್ಟೇ ಆಗಲಿ ಹುಲಿಯೆಂದರೆ ಭಯವಲ್ಲವೇ! ಸ್ವಲ್ಪ ಹೊತ್ತು ಗಾಡಿಯ ಬಳಿಯೇ ನಿಂತು ನೋಡಿದರು. ಮತ್ತೆ ಗರ್ಜನೆ ಕೇಳಲಿಲ್ಲ. ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರೆಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರಿದರು. ಮೂರ್ಭೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
1) ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಮೂರ್ತಿರಾಯರು ಹುಲಿ ಬೇಟೆಯಾಡುವ ರೀತಿಯನ್ನು ಬಹಳ ಸುಂದರವಾಗಿ ಮಾರ್ಮಿಕವಾಗಿ ವರ್ಣಿಸಿದ್ದಾರೆ. ಹಿಂಸಪಶುಗಳು ಸಹ ಬದುಕುವುದಕ್ಕೆ ಒಂದು ಆದರ್ಶವನ್ನು ಪಾಲಿಸುವಾಗ ಪುಣ್ಯಭೂಮಿ ಭಾರತ ದಲ್ಲಿರುವ ಮನುಷ್ಯರು ಹಿರಿಯರ ಆದರ್ಶವನ್ನು ಪಾಲಿಸಿದ್ದಾರೆ ಎಂಬುದಕ್ಕೆ ಹುಲಿ ಬೇಟೆಯಾಡುವ ವಿಧಾನವನ್ನು ಇಲ್ಲಿ ಸಾಕ್ಷೀಕರಿಸಿದ್ದಾರೆ. ನಮ್ಮ ಭಾರತ ದೇಶದ ಹುಲಿಗಳು ಎಷ್ಟೇ ಹಸಿದಿದ್ದರೂ ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವಾದರೂ ಸರಿಯೇ. ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವೆಂಬುದೇ ಅದರ ವಿಶ್ವಾಸ, ಆದ್ದರಿಂದಲೇ ಬೆಳದಿಂಗಳ ರಾತ್ರಿ ಒಬ್ಬಂಟಿಗರಾಗಿ ಸಿಕ್ಕಿದ ಶಾನುಭೋಗರು ನಡೆಯುತ್ತಿದ್ದರೆ ಅವರ ಬೆನ್ನ ಹಿಂದೆ ಇರುತ್ತಿದ್ದ ಹುಲಿ ಅವರ ಮೇಲೆ ಆಕ್ರಮಣ ಮಾಡದೆ, ಅವರ ಮೇಲಿನಿಂದ ಹಾರಿ ಮುಂದಿನಿಂದ ಕೊಲ್ಲಲು ನೆಗೆಯುತ್ತಿತ್ತು, ಆದರೆ ಶಾನುಭೋಗರು ತಕ್ಷಣವೇ ಹಿಂತಿರುಗಿ ಹೆಜ್ಜೆ ಹಾಕುತ್ತಿದ್ದರು.
ಇದರಿಂದ ಹುಲಿಗೆ ಪುನಃ ಅವರ ಬೆನ್ನೇ ಕಾಣುತ್ತಿತ್ತು. ಹುಲಿಗೆ ಎಷ್ಟೇ ಹಸಿದಿದ್ದರು, ಆಯಾಸವಾದರೂ ತನ್ನ ಧರ್ಮವನ್ನು ಮಾತ್ರ ಬಿಡದೆ ಪಾಲಿಸುತ್ತಿತ್ತು. ಶಾನುಭೋಗರು ಮರ ಹತ್ತಲು ಹೋಗಿ ಮುಗ್ಗರಿಸಿ ಜ್ಞಾನತಪ್ಪಿ ಬಿದ್ದಾಗಲೂ ಸಹ ಹುಲಿಗೆ ಬೆನ್ನು ಭಾಗ (ಹಿಂಭಾಗ) ಕಾಣಿಸುತ್ತಿದ್ದುದರಿಂದ ಅವರನ್ನು ಕೊಲ್ಲದೇ ಬಿಟ್ಟುಬಿಟ್ಟಿತು. ಹೀಗೆ ಹುಲಿ ಆಕ್ರಮಣ ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಅದರ ಧರ್ಮ. ಅದು ಕೂಡ “ಸ್ವಧರ್ಮ ನಿಧನಂ ಶ್ರೇಯಃ” ಈ ರೀತಿ ಹುಲಿಯ ಧರ್ಮ ಶ್ರದ್ದೆಯಿಂದ ಆ ಗುಣವನ್ನು ಹಾಡಿ ಹೊಗಳುವ ಭಾಗ್ಯ ತನ್ನ ಪಾಲಿಗೆ ಬಂದಿರುವುದಾಗಿ. ಲೇಖಕರು ತಿಳಿಸಿದ್ದಾರೆ.
2) ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.
ಶಾನುಭೋಗರು ತಿಳಿದಂತೆ ತನ್ನನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೆಂದ ಅವರು ನಂಬಿದ್ದಾರೆ. ಏಕೆಂದರೆ ಹುಲಿ ನೆಗೆದಂತೆ ಶಾನುಭೋಗರು ತಿರುಗಿ ತಿರುಗಿ ಆಯಾಸಗೊಂಡರು. ಅವರಿಗೆ ತಲೆ ತಿರುಗಿದಂತಾಯಿತು. ಕೊನೆಗೆ ತಮ್ಮಲ್ಲಿದ್ದ ಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ ರಾಚಿ ತಾನು ಮರಹತ್ತುದೆಂದು ಯೋಚಿಸಿ ತನ್ನ ಪ್ರಯತ್ನವನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದಾಗ ಕಲ್ಲು ಎಡವಿ ಮುಗ್ಗರಿಸಿ ಬಿದ್ದು ಮೂರ್ಛ ಹೋದರು. ಮೂರ್ಛಯಿಂದ ಎದ್ದಾಗ ಅಲ್ಲಿ ನಾಲೈದು ಜನ ರೈತರು ಇದ್ದು, ಹುಲಿ ಇಲ್ಲದಿರುವುದನ್ನು ಕಂಡು ಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ ಬೀಸಿ ಹೊಡೆದಿದ್ದರಿಂದ ಆ ಪುಸ್ತಕದ ಕಾರಣದಿಂದಲೇ ತಾನು ಬದುಕಿರುವುದಾಗಿ. ಪುಸ್ತಕವೇ ತನ್ನನ್ನು ರಕ್ಷಿಸಿತೆಂದು ತಿಳಿದರು.
ಆದರೆ ಹುಲಿಯ ಧರ್ಮ ಪ್ರಜ್ಞೆಯಿಂದ ಶಾನುಭೋಗರ ಪ್ರಾಣ ಉಳಿಯಿತು. ಹುಲಿಯು ಧರ್ಮ ಶ್ರದ್ಧೆಯಿದ್ದುದರಿಂದ ಶಾನುಭೋಗರನ್ನು ಹಿಂದಿನಿಂದ ಕೊಲ್ಲಲಿಲ್ಲ. ಮುಂದಿನಿಂದ ಹಾರಿ ನೆಗೆದು ಕೊಲ್ಲಲು ಪ್ರಯತ್ನಿಸಿತು. ಅಷ್ಟೇ ಅಲ್ಲದೆ ಶಾನುಭೋಗರು ಮೂರ್ಭೆ ಹೋದಾಗಲು ಹಸಿವಿನಿಂದ ಕಂಗಾಲಾಗಿದ್ದ ಹುಲಿ ಶಾನುಭೋಗರನ್ನು ತನ್ನ ಧರ್ಮಶ್ರದ್ದೆಯಿಂದಾಗಿ ಶಾನುಭೋಗರನ್ನು ಕೊಲ್ಲದೆ ಬಿಟ್ಟಿತು.
ಒಟ್ಟಾರೆ ಹೇಳುವುದಾದರೆ ಹುಲಿಯ ಧರ್ಮದಿಂದಲೇ ಶಾನುಭೋಗರು ಬದುಕಿದರು.
ಈ)ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ :
- “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ”.
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಎ.ಎನ್.ಮೂರ್ತಿರಾವ್’ ರವರು ರಚಿಸಿರುವ “ವ್ಯಾಘ್ರಗೀತೆ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಈ ವಾಕ್ಯವನ್ನು ಲೇಖಕರು, ಹುಲಿಯ ಧರ್ಮ ಶ್ರದ್ದೆಯ ಬಗ್ಗೆ ವಿವರಿಸುತ್ತಾ “ಪುಣ್ಯಕೋಟಿಯನ್ನು ತಿನ್ನದ ಈ ಹುಲಿರಾಯನ ಅಜ್ಜನ ಕಥೆಯನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಲೇಖಕರು ಇಲ್ಲಿ ಬರೆದಿದ್ದಾರೆ.
ವಿವರಣೆ: ‘ಪುಣ್ಯಕೋಟಿ’ ಹಸುವು ತನ್ನ ಕರುವಿಗೆ ಹಾಲು ಕೊಟ್ಟನು. ಪುನಃ ವ್ಯಾಘ್ರನ ಬಳಿ ಬಂದು “ತಾನು ನಿನಗಾಗಿ ಬಂದಿದ್ದೇನೆ, ನನ್ನ ಮಾಂಸಖಂಡ, ಗುಂಡಿಗೆ, ಬಿಸಿರಕ್ತ ಎಲ್ಲವೂ ನಿನಗಾಗಿಯೇ ಇದೆ. ತೆಗೆದುಕೋ” ಎಂದು ಹೇಳಿದ ವಾಕ್ಯ ಇದಾಗಿದೆ.
ವಿಶೇಷತೆ: ನೀತಿಯುಕ್ತ ವಾಕ್ಯ ಇದಾಗಿದೆ.
2) “ಸ್ವಧರ್ಮೇ ನಿಧನಂ ಶ್ರೇಯಃ”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಎ.ಎನ್.ಮೂರ್ತಿರಾವ್’ ರವರು ರಚಿಸಿರುವ “ವ್ಯಾಘ್ರಗೀತೆ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಹಸಿವಿನಿಂದ ಹಾಗೂ ಆಯಾಸದಿಂದ ಕಂಗಾಲಾಗಿದ್ದ ಹುಲಿ ಎದುರಿನಿಂದಲೇ ಆಕ್ರಮಣ ಮಾಡಲು ಪ್ರಯತ್ನಿಸಿ ನಿರಾಶನಾದಾಗ ಹಿಂದಿನಿಂದಲೇ ಆಕ್ರಮಿಸಲು ಒಂದು ಕ್ಷಣ ಯೋಚಿಸಿತು. ಆದರೆ ಆ ಕ್ಷಣ ಆ ಹುಲಿಗೆ ಭಗವದ್ಗೀತೆಯ ಈ ಸಾಲು ನೆನಪಿಗೆ ಬಂತು.
ವಿವರಣೆ: “ಸ್ವಧರ್ಮೇ ನಿಧನಂ ಶ್ರೇಯಃ” ಎಂದರೆ ಸ್ವಧರ್ಮವನ್ನು ಪಾಲಿಸುವುದರಿಂದ ಶ್ರೇಯಸ್ಸು ಉಂಟಾಗುವುದು” ಎಂಬುದೇ ಈ ವಾಕ್ಯದ ಅರ್ಥವಾಗಿದೆ.
ವಿಶೇಷತೆ: ವ್ಯಾಸರು ರಚಿಸಿದ ಈ ವಾಕ್ಯವನ್ನು ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದನು.
3) “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು’ಎ.ಎನ್.ಮೂರ್ತಿರಾವ್’ ರವರು ರಚಿಸಿರುವ “ವ್ಯಾಘ್ರಗೀತೆ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಶಾನುಭೋಗರು ಬೆಳದಿಂಗಳ ರಾತ್ರಿ ನಡೆದು ಬರಲು ಹಸಿದ ಹಾಗೂ ಆಯಾಸಗೊಂಡ ಹುಲಿಯೊಂದು ಹಿಂಬಾಲಿಸುತ್ತಿರುವುದು ಅವರಗೆ ಗೊತ್ತಾಯಿತು. ಬೆನ್ನಹಿಂದೆ ಬೀಳುವುದಿಲ್ಲ ಎಂದು ತಿಳಿದ ಶಾನುಭೋಗರು ಅದು ಮುಂದೆ ಜಿಗಿದಾಕ್ಷಣ ಹಿಂತಿರುಗಿ ಹೆಜ್ಜೆ ಹಾಕತೊಡಗಿದರು. ಈ ರೀತಿ ಹಿಂದು-ಮುಂದು ತಿರುಗಿ ಆಯಾಸಗೊಂಡು ಕೊನೆಗೆ ಹುಲಿಯ ಗಮನವನ್ನು ಬೇರೆಡೆ ಸೆಳೆಯಲು ಖಿರ್ದಿ ಪುಸ್ತಕದಿಂದ ಅದರ ಮುಖದ ಮೇಲೆ ಬಡಿದು ಈ ಮೇಲ್ಕಂಡ ವಾಕ್ಯವನ್ನು ಹೇಳುತ್ತಾನೆ.
ವಿವರಣೆ: ಹುಲಿಯಿಂದ ತಪ್ಪಿಸಿಕೊಳ್ಳಲು ಮರಹತ್ತಿ ಕುಳಿತರೆ, ಸ್ವಲ್ಪ ಹೊತ್ತಾದರೂ ನೆಮ್ಮದಿಯಿಂದ ಇರಬಹುದು ಎಂದು ಯೋಚಿಸಿ ಶಾನುಭೋಗರು ದೇವರಿಗೆ ಮರಹತ್ತುವಷ್ಟು ಅವಕಾಶ ಸಿಕ್ಕಿದರೆ ಸಾಕು ಎಂದು ಬೇಡಿಕೊಳ್ಳುವ ವಾಕ್ಯ ಇದಾಗಿದೆ.
ವಿಶೇಷತೆ: “ಸಂಕಟ ಬಂದಾಗ ವೆಂಕಟರಮಣ ಎಂಬಂತೆ” ಶಾನುಭೋಗರು ದೇವರ ಮೊರೆ ಹೊಕ್ಕ ಸನ್ನಿವೇಶ ಇದಾಗಿದೆ.
4) ‘ನಾನು ಮುಖ ಮೇಲಾಗಿ ಬಿದ್ದಿದ್ದೇನೆ?”
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಎ.ಎನ್.ಮೂರ್ತಿರಾವ್’ ರವರು ರಚಿಸಿರುವ “ವ್ಯಾಘ್ರಗೀತೆ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಮರಹತ್ತಲು ಹೋಗಿ ಕಲ್ಲು ಎಡವಿ ಮುಗ್ಗರಿಸಿ ಬಿದ್ದು ಮೂರ್ಛ ಹೋದ ಶಾನುಭೋಗರು, ರೈತರು ಅವರ ಮುಖಕ್ಕೆ ನೀರೆರಚಿ ಎಚ್ಚರಗೊಳಿಸಿದಾಗ ಶಾನುಭೋಗರು ಈ ಮಾತನ್ನು ಆ ರೈತರಿಗೆ ಕೇಳಿದನು.
ವಿವರಣೆ: ಮೂರ್ಛ ಬಿದ್ದಿದ್ದ ಶಾನುಭೋಗರು ತಾನು ಯಾವ ಅವಸ್ಥೆಯಲ್ಲಿದ್ದೆ ಎಂಬುದೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ಕೇಳುತ್ತಿದ್ದರು.
ವಿಶೇಷತೆ: ಆಶ್ಚರ್ಯಚಕಿತನಾದ ಮನುಷ್ಯನ ಸ್ಥಿತಿ ಇಲ್ಲಿ ವ್ಯಕ್ತವಾಗಿದೆ.
5) ‘ಹುಲಿ, ಈಗ ಎಷ್ಟು ಹಸಿದಿರಬೇಕು’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಎ.ಎನ್.ಮೂರ್ತಿರಾವ್’ ರವರು ರಚಿಸಿರುವ “ವ್ಯಾಘ್ರಗೀತೆ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಶಾನುಭೋಗರು ಮನೆಗೆ ಹೋಗಿ ಊಟ ಮಾಡುತ್ತಾ ಕುಳಿತಿರುವಾಗ, ಹುಲಿಯ ಬಗ್ಗೆ ಯೋಚಿಸುತ್ತಾ ಈ ವಾಕ್ಯವನ್ನು ಹೇಳಿದರು.
ವಿವರಣೆ: ಮೊದಲೇ ಹಸಿವಿನಿಂದ ಇದ್ದ ಹುಲಿ, ಶಾನುಭೋಗರನ್ನು ತಿನ್ನುವ ತವಕದಲ್ಲಿತ್ತು. ಆದರೆ ದೇವರು ಶಾನುಭೋಗರ ಮಾತು ಕೇಳಿ ತಥಾಸ್ತು ಎಂದುದರಿಂದ ಅವರ ಜೀವ ಉಳಿಯಿತು, ಆದರೆ ಪಾಪ ಹುಲಿ ಹಸಿದುಕೊಂಡಿರಬೇಕು? ಎಂಬುದಾಗಿ ಅದರ ಬಗ್ಗೆ ಯೋಚಿಸುತ್ತಾ ಈ ವಾಕ್ಯವನ್ನು ಹೇಳಿದರು.
ವಿಶೇಷತೆ: ಮನುಷ್ಯನ ಸಹಜ ಸ್ವಾಭಾವಿಕ ಗುಣವಾದಾಗ ಪ್ರಾಮಾಣಿಕತೆ, ದಯೆ, ಕರುಣೆ ಈ ವಾಕ್ಯವನ್ನು ಹುಲಿಯ ಬಗ್ಗೆ ವ್ಯಕ್ತವಾಗಿದೆ.
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
೧) ಮಂತ್ರಿತ್ವ ಹೋಗಿ ಕೇವಲ ________ಮಾತ್ರ ಉಳಿದಿತ್ತು.
೨) ಖಿರ್ದಿ ಪುಸ್ತಕ ________ಬ್ರಹ್ಮಾಸ್ತ್ರ.
೩) ನೆಲದಿಂದ ಮೇಲೆದ್ದು ಕೊಂಡಿದ್ದ _________ ಎಡವಿ ಶಾನುಭೋಗರು ಬಿದ್ದರು.
೪) ರೈತರು ತಿಂಗಳ ಬೆಳಕಿನಲ್ಲಿ ________ ಹೊಡೆಯುತ್ತಿದ್ದರು.
೫) ಶಾನುಭೋಗರು ಉಳಿದಿದ್ದು ________ ಪುಸ್ತಕದಿಂದಲ್ಲ
ಉತ್ತರಗಳು :
೧. ಶಾನುಭೋಗಿಕೆ | ೨. ಶಾನುಭೋಗರ, |
೩. ಕಲ್ಲನ್ನು | ೪. ಗಾಡಿ, |
೫. ಖಿರ್ದಿ |
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
ಕನ್ನಡ ಸಂಧಿಗಳೆಂದರೆ –
೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ
ಉದಾಹರಣೆ
೧. ಲೋಪ ಸಂಧಿ
೧. ಒಳ್ಳೆಯದು + ಅಲ್ಲ = ಒಳ್ಳೆಯದಲ್ಲ
೨. ದೇವರು + ಇಂದ = ದೇವರಿಂದ
೨. ಆಗಮ ಸಂಧಿ
೧. ಮನೆ + ಅಲ್ಲಿ = ಮನೆಯಲ್ಲಿ ಯಕಾರಾಗಮ ಸಂಧಿ
೨. ಗಿರಿ + ಅನ್ನು = ಗಿರಿಯನ್ನು ಯಕಾರಾಗಮ ಸಂಧಿ
೩. ಮಗು + ಅನ್ನು = ಮಗುವನ್ನು ವಕಾರಾಗಮ ಸಂಧಿ
೪. ಹೂ + ಇಂದ = ಹೂವಿಂದ ವಕಾರಾಗಮ ಸಂಧಿ
೩. ಆದೇಶ ಸಂಧಿ
೧. ಹೊಸ + ಕನ್ನಡ = ಹೊಸಗನ್ನಡ
೨. ಕಣ್ + ಪನಿ = ಕಂಬನಿ
೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಾಗಿ ವಿಂಗಡಿಸಿ ಬರೆಯಿರಿ.
ಸಂಸ್ಕೃತ ಸಂಧಿಗಳು :- ಸಂಸ್ಕೃತ ಸ್ವರ ಸಂಧಿಗಳು
೧. ಸವರ್ಣ ದೀರ್ಘ ಸಂಧಿ
೧. ಸುರ + ಅಸುರ = ಸುರಾಸುರ
ಅ + ಅ = ಆ
೨. ದೇವ + ಆಲಯ = ದೇವಾಲಯ
ಅ + ಅ = ಆ
೩. ಕವಿ + ಇಂದ್ರ = ಕವೀಂದ್ರ
ಇ + ಇ = ಈ
೪. ಗಿರಿ + ಈಶ = ಗಿರೀಶ
ಇ+ ಈ = ಈ
೫. ಲಕ್ಷ್ಮೀ + ಈಶ = ಲಕ್ಷ್ಮೀಶ
ಈ + ಈ= ಈ
೬. ಗುರು + ಉಪದೇಶ = ಗುರೂಪದೇಶ
ಉ + ಉ = ಊ
೨. ಗುಣ ಸಂಧಿ
೧. ದೇವ + ಇಂದ್ರ = ದೇವೇಂದ್ರ
ಅ + ಇ = ಏ
೨. ಮಹಾ + ಈಶ = ಮಹೇಶ
ಆ + ಈ = ಏ
೩. ಚಂದ್ರ + ಉದಯ = ಚಂದ್ರೋದಯ
ಅ + ಉ = ಓ
೪. ಮಹಾ + ಉತ್ಸವ = ಮಹೋತ್ಸವ
ಆ + ಉ = ಓ
೫. ರಾಜ + ಋಷಿ = ರಾಜರ್ಷಿ
ಅ + ಋ =ಅರ
೬. ಮಹಾ + ಋಷಿ = ಮಹರ್ಷಿ
ಆ + ಋ = ಅರ್
೩. ವೃದ್ಧಿ ಸಂಧಿ
೧. ಲೋಕ + ಏಕ = ಲೋಕೈಕ
ಅ + ಏ = ಐ
೨. ಜನ + ಐಕ್ಯ = ಜನೈಕ್ಯ
ಅ + ಐ = ಐ
೩. ಜಲ + ಓಘ = ಜಲೌಘ
ಅ + ಓ = ಔ
೪. ಮಹಾ + ಔದಾರ್ಯ = ಮಹೌದಾರ್ಯ
ಅ + ಔ = ಔ
೪. ಯಣ್ ಸಂಧಿ
೧. ಅತಿ + ಅಂತ = ಅತ್ಯಂತ
ಇ + ಅ = ಯ್
೨. ಕೋಟಿ + ಅಧೀಶ = ಕೋಟ್ಯಧೀಶ
ಇ + ಅ = ಯ್
೩. ಪ್ರತಿ + ಉತ್ತರ = ಪತ್ಯುತ್ತರ
ಇ + ಉ =ಯ್
೪. ಅತಿ + ಆಸೆ = ಅತ್ಯಾಶೆ
ಇ + ಆ = ಯ್
೫. ಗುರು + ಆಜ್ಞೆ = ಗುರ್ವಾಜ್ಞೆ
ಉ + ಆ = ವ್
೬. ಮನು + ಆದಿ = ಮನ್ವಾದಿ
ಉ + ಆ = ವ್
೭. ವಧೂ + ಅನ್ವೇಷಣೆ = ವಧ್ವನ್ವೇಷಣೆ
ಊ + ಅ = ವ್
೮. ಪಿತೃ + ಅರ್ಥ = ಪಿತ್ರರ್ಥ
ಋ + ಅ =ರ್
ಸಂಸ್ಕೃತ ವ್ಯಂಜನ ಸಂಧಿ
೧. ಜತ್ತ್ವ ಸಂಧಿ
೧. ದಿಕ್ + ಆಂತ = ದಿಗಂತ
( ಕ್ – ಗ್ ಆಗಿ ಬದಲಾಗಿದೆ )
೨. ಅಚ್ + ಅಂತ್ = ಅಜಂತ
(ಚ – ಜ ಆಗಿ ಬದಲಾಗಿದೆ)
೩. ಷಟ್ + ಆನನ = ಷಡಾನನ
(ಟ – ಡ ಆಗಿ ಬದಲಾಗಿದೆ)
೨. ಶ್ಚುತ್ವ ಸಂಧಿ
Ω. ಶರತ್ + ಚಂದ್ರ = ಶರಚ್ಚಂದ್ರ
ತ್ + ಕಾರಕ್ಕೆ ಚ್ – ಕಾರ
೨. ಜಗತ್ + ಜ್ಯೋತಿ = ಜಗಜ್ಯೋತಿ
ತ್ + ಜ್ = ಜ್
೩. ಸತ್ + ಜನ = ಸಜ್ಜನ
ತ್ + ಜ್ = ಜ
೩. ಅನುನಾಸಿಕ ಸಂಧಿ
Ω. ವಾಕ್ + ಮಯ = ವಾಙ್ಮಯ
ವಾಙ + ಮಯ
(ಕೆ ವ್ಯಂಜನಕ್ಕೆ ಙ ಅನುನಾಸಿಕ ಆದೇಶವಾಗಿ ಬರುತ್ತದೆ)
೨. ಷಟ್ + ಮುಖ = ಷಣ್ಮುಖ
ಷಣ್ + ಮುಖ (ಟ – ಣ ಆದೇಶ)
೩.ಸತ್ + ಮಾನ = ಸನ್ಮಾನ
ಸನ್ + ಮಾನ (ತ್ – ನ ಆದೇಶ)
೪. ಚಿತ್ + ಮಯ = ಚಿನ್ಮಯ
(ನ್ + ಮ = ಆದೇಶ)
ಚಿನ್ + ಮಯ
೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.
ಸುರಾಸುರ, ಬಲ್ಲೆನೆಂದು, ಸೂರ್ಯೋದಯ, ಮಳೆಗಾಲ, ಅಷ್ಟೆಶ್ವರ, ವೇದಿಯಲ್ಲಿ
೧. ಸುರಾಸುರ = ಸುರ + ಅಸುರ = ಸವರ್ಣ ದೀರ್ಘಸಂಧಿ
೨. ಬಲ್ಲೆನೆಂದು = ಬಲ್ಲೆನು + ಎಂದು = ಲೋಪಸಂಧಿ
೩. ಸೂರ್ಯೋದಯ = ಸೂರ್ಯ + ಉದಯ = ಗುಣಸಂಧಿ
೪. ಮಳೆಗಾಲ = ಮಳೆ + ಕಾಲ = ಆದೇಶ ಸಂಧಿ
೫. ಅಷ್ಟೆಶ್ವರ = ಅಷ್ಟ + ಐಶ್ವರ್ಯ = ವೃದ್ಧಿಸಂಧಿ
೬ ವೇದಿಯಲ್ಲಿ = ವೇದಿ + ಅಲ್ಲಿ = ಆಗಮಸಂಧಿ
೪. ಈ ಗದ್ಯದಲ್ಲಿ ಬಂದಿರುವ ಸಂಧಿ ಪದಗಳನ್ನು ಪಟ್ಟಿ ಮಾಡಿ.
೧. ಪುಸ್ತಕವನ್ನು | ೨. ದೃಷ್ಟಿಯಿಂದ |
೩. ಮರವನ್ನು | ೪. ಪುಣ್ಯ ಕೋಟಿಯನ್ನು |
೫. ಮಂದಾಸನ | ೬. ಅತ್ಯಾವಸರ |
೭. ನಿಷ್ಠೆಯಿಂದ | ೮. ಬೆಂಬತ್ತು |
೯. ಕೈಲಾದಷ್ಟು | ೧೦. ಮೂರ್ಛಯಲ್ಲಿ |
ಆ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.
೧. ಬೇಗ ಬೇಗ : ದ್ವಿರುಕ್ತಿ :: ಧೀರ ಶೂರ : ಜೋಡುನುಡಿ
೨. ಲೋಪ ಸಂಧಿ : ಸ್ವರ ಸಂಧಿ :: ಆದೇಶ ಸಂಧಿ : ವ್ಯಂಜನ ಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ :: ಮೊತ್ತ ಮೊದಲು : ಮೊದಲು ಮೊದಲು
೪. ಶರಶ್ಚಂದ್ರ : ಶ್ಚುತ್ವ ಸಂಧಿ : ದಿಗಂತ : ಜತ್ತ್ವ ಸಂಧಿ
ಇ. ಈ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.
೧) “ಕೈ ಕೆಸರಾದರೆ ಬಾಯಿ ಮೊಸರು”
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಈ ಗಾದೆಯು ಕಷ್ಟಪಡದೇ ಸುಖ ಸಿಗುವುದಿಲ್ಲ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕೈ ಕೆಸರಾಗುವುದು ದುಡಿಮೆಯನ್ನು ಸಂಕೇತಿಸಿದರೆ ಮೊಸರು ಎಂಬುದು ಅದರ ಪ್ರತಿಫಲವನ್ನು ಬಿಂಬಿಸುತ್ತದೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂದು ಮಾತು ಮೇಲಿನ ಗಾದೆಯನ್ನು ಪುಷ್ಟಿಕರೀಸುತ್ತದೆ.
೨) ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಸಾಕಷ್ಟು ಸಮಯ ಬಳಸಿ ಶ್ರಮವಹಿಸಿ ಮಾಡಿದ ಕೆಲಸವನ್ನು ಹಾಳು ಮಾಡಲು ಕೆಲವೇ ಕ್ಷಣಗಳು ಸಾಕು ಎನ್ನುವುದನ್ನು ಈ ಗಾದೆ ಕುಂಬಾರ, ದೊಣ್ಣೆಗಳ ಉದಾ ಹರಣೆಯ ಮೂಲಕ ನಿರೂಷಿಸುತ್ತದೆ.
ಮಡಿಕೆ ಮಾಡಲು ಕುಂಬಾರ ತುಂಬ ಶ್ರಮಪಡಬೇಕು
ಎರೆಮಣ್ಣನ್ನು ತಂದು, ಅದರಲ್ಲಿರುವ ಮರಳು-ಕಲ್ಲುಗಳನ್ನು ಬೇರ್ಪಡಿಸಿ ಹುಡಿ ಮಾಡಬೇಕು. ನೀರು ಹಾಕಿ ತುಳಿದು ಮೆತ್ತಿಕೊಳ್ಳಬೇಕು. ಹದವಾದ ಮಣ್ಣನ್ನು ತಿಗುರಿಯ ಮೇಲಿಟ್ಟು ತಿರುಗಿಸಿ, ಆಕಾರ ಕೊಡಬೇಕು. ನೀರಿನ ಪಸೆ ಆರಿದ ಮೇಲೆ ಅದನ್ನು ತಟ್ಟಿತಟ್ಟಿ ಬೇಕಾದ ರೂಪಕೊಟ್ಟು ಬಿಸಿಲಿನಲ್ಲಿ ಒಣಗಲು ಬಿಡಬೇಕು. ಆಮೇಲೆ ಆವಿಗೆಯಲ್ಲಿ ವ್ಯವಸ್ಥಿತವಾಗಿ ಕೂಡಿಟ್ಟು ಸುಡಬೇಕು. ಹದವಾಗಿ ಸುಟ್ಟು ಬಿಸಿ ಆರಿದ ಗಡಿಗೆ ಮಡಿಕೆಗಳನ್ನು ಎಚ್ಚರದಿಂದ ಹೊರತೆಗೆದು ಜೋಡಿಸಿಡಬೇಕು. ಇಷ್ಟೆಲ್ಲ ಕಷ್ಟಪಟ್ಟು ಕುಂಬಾರ ತಯಾರಿಸಿದ ಗಡಿಗೆಯನ್ನು ಪುಡಿ ಮಾಡಲು ದೊಣ್ಣೆಗೆ ಒಂದು ನಿಮಿಷವೂ ಬೇಕಾಗುವುದಿಲ್ಲ ಒಂದೇ ಏಟು ಜೋಡಿಸಿಟ್ಟ ಗಡಿಗೆಗಳನ್ನೆಲ್ಲ ಹಾಳು ಮಾಡಲು ಸಾಕು.
ಯಾವುದನ್ನಾದರೂ ಹಾಳುಗೆಡಿಸುವುದು ಸುಲಭ, ರೂಪಿಸುವುದು ಕಷ್ಟ. ಹಾಳು ಮಾಡುವ ಬುದ್ದಿ ಒಳ್ಳೆಯದಲ್ಲವೆಂದು ಈ ಗಾದೆ ಎಚ್ಚರಿಸುತ್ತದೆ.
ಈ. ವಿಷಯಗಳಿಗೆ ಪ್ರಬಂಧ ಬರೆಯಿರಿ.
೧. ಸ್ವಚ್ಛ ಭಾರತ ಅಭಿಯಾನ
ಪ್ರಸ್ತಾವನೆ : ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದು ನಮ್ಮ ಮನೆ ಪರಿಸರದಿಂದಲೇ ಪ್ರಾರಂಭಿಸಬೇಕು.
ವಿಷಯ ನಿರೂಪಣೆ : ‘ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿ ನಮ್ಮಲ್ಲಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ‘ಹಾಗೂ ಸ್ವಚ್ಛವಾದ ಪರಿಸರ ಅಗತ್ಯ. ಇದಕ್ಕಾಗಿಯೇ ನಮ್ಮ ಇಂದಿನ ಪ್ರಧಾನ ಮಂತ್ರಿಗಳು ಗಾಂಧೀಜಿಯವರ ಜನ್ಮದಿನವಾದ ೦೨.೧೦.೨೦೧೪ ರಂದು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು. ಗಾಂಧೀಜಿಯವರು ಹುಟ್ಟಿ ೧೫೦ ವರ್ಷ ಪೂರ್ಣಗೊಳ್ಳುವ ೦೨.೧೦.೨೦೧೯ಕ್ಕೆ ಈ ಯೋಜನೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಅವಧಿಯಲ್ಲಿ ಸಂಪೂರ್ಣವಾಗಿ ಸ್ವಚ್ಛ ಭಾರತ ನಿರ್ಮಾಣವಾಗಬೇಕು.
ಈ ದಿಸೆಯಲ್ಲಿ ಈಗಾಗಲೇ ಹಳ್ಳಿಗಳಲ್ಲಿ ನಗರಗಳಲ್ಲಿ ತಾವು ವಾಸಿಸುವ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ. ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿಯಾಗುತ್ತಿದ್ದು ಇನ್ನೂ ಉತ್ತಮಗೊಳ್ಳ ಬೇಕಿದೆ. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ಸಮೂಹ ಮಾಧ್ಯಮಗಳು ಇದನ್ನು ಯಶಸ್ವಿಗೊಳಿಸುವಲ್ಲಿ ಪೂರ್ಣ ಸಹಕಾರ ನೀಡುತ್ತಿವೆ. ದೇಶದಾದ್ಯಂತ ಈ ಅಭಿಯಾನವು ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿರುವುದು ಸಂತೋಷದ ವಿಷಯ.
೨. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
ಪ್ರಾಚ್ಯ ಸ್ಮಾರಕಗಳು ನಮ್ಮ ದೇಶದ ಆಸ್ತಿ. ಇದನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. ‘ಪ್ರಾಚ್ಯ’ ಎಂದರೆ ಪುರಾತನ, ಸ್ಮಾರಕಗಳು ಎಂದರೆ ಹಿಂದಿನ ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು, ಚರ್ಚೆಗಳು, ಅರಮನೆಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವುಗಳು, ಮೂರ್ತಿಗಳು ಇವುಗಳನ್ನೆಲ್ಲ ನಾವು ಪ್ರಾಚೀನ ಸ್ಮಾರಕಗಳು ಎನ್ನಬಹುದು. ಇವು ಇಂದು ಕೆಲವು ಭೂಗತವಾಗಿದೆ. ಕೆಲವು ಖಂಡ-ತುಂಡಗಳಾಗಿವೆ.
ಆ ಕಾಲದ ಹಿಂದಿನ ರಾಜಕೀಯ ವೈಭವ, ಸಾಂಸ್ಕೃತಿಕತೆ ಸಾಮಾಜಿಕತೆ, ಆರ್ಥಿಕ ಬೆಳವಣಿಗೆ ಇವೆಲ್ಲವನ್ನು ಅಭ್ಯಸಿಸಲು ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಅಂತ್ಯ ಎಂಬುದು ಅರಿವಾಗುತ್ತದೆ.
ವಿಜಯನಗರ ಸಾಮ್ರಾಜ್ಯವನ್ನು ಅಭ್ಯಸಿಸಲು ಆಧಾರ ವಾಗಿರುವ ಹಲವಾರು ಇತಿಹಾಸದ ಪುಸ್ತಕಗಳು ಲಭ್ಯ ವಿದ್ದರೂ ಅದಕ್ಕೆ ಆಧಾರವಾಗಿರುವುದು ಪ್ರಾಚ್ಯ ಸ್ಮಾರಕಗಳು, ಇಂದಿಗೂ ಹಂಪಿಯಲ್ಲಿನ ಕಮಲಮಹಲ್, ಮಹಾನವಮಿ ದಿಬ್ಬ, ದಾಸೋಹದ ಸ್ಥಳಗಳು ಉದಾಕರಿಸಬಹುದು.
ಬೇಲೂರು – ಹಳೇಬೀಡಿನ ವಾಸ್ತು ಶಿಲ್ಪ ಸುಂದರ ಮೂರ್ತಿಗಳು ಇದಕ್ಕೆ ಸಾಕ್ಷಿಯಾಗಿದೆ. ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಶ್ರೀರಂಗಪಟ್ಟಣದ ದರಿಯ ಕಾಲದ ಭಾಗದಲ್ಲಿ ಹೈದರ್, ಟಿಪ್ಪುಗಳ ಸಮಾಧಿಗಳ ಜೊತೆಗೆ ಅಂದಿನ ಅರಸರು ಉಪಯೋಗಿಸುತ್ತಿದ್ದ ಯುದ್ಧೋಪಕರಣಗಳು, ನಾಣ್ಯಗಳು ಉಡುಪುಗಳು ಇಂದಿಗೂ ಸಾಕ್ಷಿಯಾಗಿವೆ.
೩. ರಾಷ್ಟ್ರೀಯ ಭಾವೈಕ್ಯ
ನಮ್ಮ ದೇಶವು ವೈವಿಧ್ಯತೆಗೆ ಹೆಸರುವಾಸಿಯಾದ ದೇಶ, ಭೌಗೋಳಿಕವಾಗಿ, ರಾಜಕೀಯವಾಗಿ, ನೈಸರ್ಗಿಕ ಸಂಪತ್ತುಗಳು, ಹವಾಮಾನ, ಜನರು, ಅವರ ಉಡುಗೆ ತೊಡುಗೆ, ಆಹಾರ, ಸಂಸ್ಕೃತಿ-ಎಲ್ಲವೂ ವೈವಿದ್ಯಮಯ ವಾಗಿದೆ. ಆದುದರಿಂದ ಭಾರತವನ್ನು ‘ಉಪಖಂಡ’ ಎಂದು ಕರೆದಿದ್ದಾರೆ. ಇಷ್ಟೆಲ್ಲಾ ವೈವಿಧ್ಯತೆಗಳಿದ್ದರೂ ನಾವೆಲ್ಲಾ ಒಂದೇ ಎಂಬ ಭಾವನೆಯೇ ಭಾವೈಕ್ಯತೆ. ನಾವೆಲ್ಲರೂ ಭಾರತೀಯರು ಎಂಬ ಐಕ್ಯತೆಯೇ ರಾಷ್ಟ್ರೀಯ ಭಾವೈಕ್ಯತೆ.
ರಾಷ್ಟ್ರೀಯ ಭಾವೈಕ್ಯತೆಯು ಸಫಲವಾಗಬೇಕಾದರೆ ಕೆಲವು ಮೂಲಭೂತ ಅವಶ್ಯಕತೆಗಳು ಪೂರೈಕೆಯಾಗಬೇಕು. ಭಾರತವು ಒಂದು ಗಣರಾಜ್ಯ. ಇಲ್ಲಿ ಪ್ರಜಾಪ್ರಭುತ್ವ ವಿರುವುದರಿಂದ ಎಲ್ಲರೂ ಸಕ್ರಿಯವಾಗಿ ಒಂದಾಗುತ್ತಾರೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಮುದ್ರೆ ಇವು ಭಾವೈಕ್ಯತೆಯನ್ನು ಶಕ್ತಿಯುತಗೊಳಿಸುತ್ತದೆ. ರಾಷ್ಟ್ರೀಯ ಲಾಂಛನಗಳು ದೇಶದ ಸಾರ್ವಭೌಮತ್ವದ ಸಂಕೇತಗಳು. ಇವುಗಳನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ.
ಎಲ್ಲಾ ಪ್ರಜೆಗಳೂ ಸಮಾನರು ದೇಶದ ಯಾವುದೇ ಭಾಗದಲ್ಲಿದ್ದರೂ ಎಲ್ಲಾ ಪ್ರಜೆಗಳಿಗೂ ಒಂದೇ ರೀತಿಯ ರಾಷ್ಟ್ರ ಲಾಂಛನಗಳು, ನಾವೆಲ್ಲಾ ಭಾರತೀಯರು ಎಂಬ ಹೆಮ್ಮೆಯನ್ನು ಮೂಡಿಸುತ್ತದೆ. ನಮ್ಮಲ್ಲಿರುವ ಯಾವುದೇ ವೈವಿಧ್ಯಗಳೂ ನಮ್ಮ ರಾಷ್ಟ್ರೀಯ ಭಾವೈಕ್ಯತೆಗೆ ಅಡ್ಡಿ ಯಾಗಬಾರದು.
ಹೆಚ್ಚಿನ ಅಭ್ಯಾಸಕ್ಕಾಗಿ
1) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
1) ‘ವ್ಯಾಘ್ರಗೀತೆಯ’ ಕತ್ರ್ರು ಯಾರು?
‘ವ್ಯಾಘ್ರಗೀತೆಯ’ ಕತ್ರ್ರು “ಎಂ.ಎನ್. ಮೂರ್ತಿರಾವ್”
2) ಯಾರಿಗೆ ಧರ್ಮಶ್ರದ್ದೆಯ ಅರಿವಾಯಿತು?
ಹುಲಿಗೆ ಧರ್ಮಶ್ರದ್ದೆಯ ಅರಿವಾಯಿತು.
3)ಶಾನುಭೋಗರ ಬಳಿ ಇದ್ದ ಪುಸ್ತಕ ಯಾವುದು?
ಶಾನುಭೋಗರ ಬಳಿ ಇದ್ದ ಪುಸ್ತಕ ಖರ್ದಿ ಪುಸ್ತಕ,
4) ಇರಸಾಲು ಎಂದರೇನು?
ರೈತರಿಂದ ಸಂಗ್ರಹಿಸಿದ ಕಂದಾಯ ಮೊತ್ತವನ್ನು ಖಜಾನೆಗೆ ಕಟ್ಟುವುದನ್ನು ‘ಇರಸಾಲು’ ಎನ್ನುವರು.
5) ಪುಣ್ಯಕೋಟಿ ಯಾರು?
‘ಗೋವಿನ ಹಾಡು’ ಎಂಬ ಜನಪ್ರಿಯ ಜನಪದ ಕಥನ ಕಾವ್ಯದಲ್ಲಿ ಬರುವ ಹಸುವಿನ ಹೆಸರು.
6) ಶಾನುಭೋಗರು ಎಲ್ಲಿಗೆ, ಏಕೆ ಹೋಗಿದ್ದರು?
ಶಾನುಭೋಗರು, ಚಿಕ್ಕನಾಯಕನಹಳ್ಳಿಗೆ ಹೋಗಿದ್ದರು. ಅಲ್ಲಿನ ಖಜಾನೆಗೆ ಹಣಕಟ್ಟಿ, ಸ್ನೇಹಿತರನ್ನು ನೋಡಿ ಬರಲು ಹೋಗಿದ್ದರು.
2) ಸೂಕ್ತ ಪದಗಳಿಂದ ಈ ಕೆಳಗಿನ ವಾಕ್ಯಗಳನ್ನು ಪೂರ್ಣಗೊಳಿಸಿ.
1. ಎಂ.ಎನ್. ಮೂರ್ತಿರವರು _________ ಜಿಲ್ಲೆಯವರು.
ಅ) ಮಂಡ್ಯ ಆ) ಮೈಸೂರು
ಇ) ತುಮಕೂರು ಈ) ಬೆಂಗಳೂರು
2. ‘ಅಕ್ಕಿ ಹೆಬ್ಬಾಳ್’ ಎಂಬುದು __________ಜಿಲ್ಲೆಯಲ್ಲಿದೆ
ಅ) ಮೈಸೂರು ಆ) ಮಂಡ್ಯ
ಇ) ಹಾಸನ ಈ)ಬಳ್ಳಾರಿ
3. ಎಂ.ಎನ್. ಮೂರ್ತಿಯವರ _________ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ.
ಅ) ಹಗಲುಗನಸು ಆ) ಅಲೆಯುವ ಮನ
ಇ) ಚಂಡಮಾರುತ ಈ) ದೇವರು
4. ಲೇಖಕರಿಗೆ ಕಥೆಯನ್ನು ಹೇಳಿದವರು __________
ಅ) ರೈತರು ಆ) ತಂದೆ
ಇ) ನರಸಿಂಹ ಈ) ಕೃಷ್ಣಮೂರ್ತಿ
5. ಶಾನುಭೋಗರ ಸಂತತಿಯವರಿಂದ ಇಂದಿಗೂ ಪೂಜೆಗೊಳ್ಳುತ್ತಿರುವುದು.
ಅ) ಲೇಖನಿ ಆ) ಪುಸ್ತಕ
ಇ) ಖಿರ್ದಿ ಪುಸ್ತಕ ಈ) ಚಾಕು
ಉತ್ತರಗಳು :
1) ಮಂಡ್ಯ | 2) ಮಂಡ್ಯ |
3) ದೇವರು | 4) ಕೃಷ್ಣಮೂರ್ತಿ |
5) ಖರ್ದಿಪುಸ್ತಕ |
3) ಉತ್ತ, ಆದೆ, ಇಕೆ, ಟ, ಅ, ಪ್ರತ್ಯಯಗಳನ್ನು ಸೇರಿಸಿ ಪದಗಳನ್ನು ಬರೆಯಿರಿ.
ಉತ್ತ = ಮಾಡು + ಉತ್ತ = ಮಾಡುತ್ತ
ಅದೆ = ಮಾಡು + ಅದೆ = ಮಾಡದೆ
ಇಕೆ = ನಂಬು + ಇಕೆ = ನಂಬಿಕೆ
ಟ = ಓಡು + ಟ = ఓಟ
ಅ = ಓದು + ವ + ಅ = ಓದುವ
4) ಈ ಮಾತನ್ನು ಯಾರು ಯಾರಿಗೆ ಹೇಳಿದರು?
1) ‘ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ’
ಪುಣ್ಯಕೋಟಿ ಹಸು ಹುಲಿರಾಯನಿಗೆ ಹೇಳಿತು.
2) ಸ್ವಧರ್ಮೆ ನಿಧನಂ ಶ್ರೇಯಃ’
ಹುಲಿ ತನಗೆ ತಾನೇ ಭಗವದ್ಗೀತೆಯ ಸಾಲನ್ನು ನೆನಪಿಸಿಕೊಂಡಿತು.
3) “ದೇವರೇ, ಮರ ಹತ್ತುವಷ್ಟು ಅವಕಾಶ ಕರಣಿಸು”
ಈ ಮಾತನ್ನು ಶಾನುಭೋಗರು ದೇವರಲ್ಲಿ ಬೇಡಿಕೊಂಡರು.
4) “ನಾನು ಮುಖ ಮೇಲಾಗಿ ಬಿದ್ದಿದ್ದೇನೆ?”
ಶಾನುಭೋಗರು ಗಾಡಿಯವರನ್ನು ಕೇಳಿದರು.
5) ‘ಹುಲಿ ಈಗ ಎಷ್ಟು ಹಸಿದಿರಬೇಕು’
ಶಾನುಭೋಗರು ತಾವು ಊಟ ಮಾಡುತ್ತಾ, ಹುಲಿಯ ಬಗ್ಗೆ ಯೋಚಿಸುತ್ತಾ ಹೇಳಿದರು.
5) ಈ ಕೆಳಗಿನ ಪದಗಳನ್ನು ವಿವರಿಸಿ:
- ಖಿರ್ದಿ ಪುಸ್ತಕ,
- ಪಂಚೇಂದ್ರಿಯಗಳು,
- ತೋಟಾ,
- ಕುಲಾಲ ಚಕ್ರ
ಉತ್ತರಗಳು :
1) ಖಿರ್ದಿ ಪುಸ್ತಕ- ಕಂದಾಯ ವಿವಿರಗಳನ್ನೊಳಗೊಂಡ ಪುಸ್ತಕ.
2) ಪಂಚೇಂದ್ರಿಯಗಳು- ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವುಗಳನ್ನು ಪಂಚೇಂದ್ರಿಯಗಳು ಎನ್ನುವರು.
3) ತೋಟಾ – ಬಂದೂಕಿನಲ್ಲಿರುವ ಗುಂಡು.
4) ಕುಲಾಲ ಚಕ್ರ- ಮಡಕೆ ಮಾಡಲು ಕುಂಬಾರನು ಬಳಸುವ ಸಾಧನ.