SSLC Samajika Mattu Dharmika Sudharana Chaluvaligalu Social Science Notes Question Answer Guide Question Paper Pdf Download in Kannada Medium 2025,10ನೇ ತರಗತಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದ ನೋಟ್ಸ್ , 10th ಸಮಾಜ ವಿಜ್ಞಾನದ ಭಾಗ 1 ರ ಆದ್ಯಾಯ 5ರ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, SSLC 5th Chapter Social Science Notes Pdf guide 10th Std Social 5th Lesson Question And Answer, Samajika Mattu Dharmika Sudharane in Kannada 10th, 10th Social Science 5th Chapter Notes 10th Std social science 5th Lesson Notes Pdf, KSEEB Solutions for Class 10 Chapter 5 Notes in kannada karnataka Pdf

ಅಭ್ಯಾಸ
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
- 19ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ.
- ರಾಮ್ ಮೋಹನರಾಯರು ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾಂಭಿಸಿದರು.
- ಪ್ರಾರ್ಥನಾ ಸಮಾಜದ ಸ್ಥಾಪಕರು ಆತ್ಮಾರಾಂ ಪಾಂಡುರಂಗ
- ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಪ್ರಥಮ ಅವಶ್ಯಕತೆ ಎಂದು ಪ್ರತಿಪಾದಿಸಿದವರು ಜ್ಯೋತಿಭಾ ಪುಲೆ
- ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ರಾಮಕೃಷ್ಣ ಪರಮಹಂಸರು
- ಯುವಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೋ
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.
1.ಬ್ರಹ್ಮ ಸಮಾಜದ ಬೋಧನೆಗಳಾವುವು?
- ಬ್ರಹ್ಮಸಮಾಜವು ಹಿಂದೂ ಧರ್ಮದಲ್ಲಿದ್ದ ಆಚಾರ-ವಿಚಾರಗಳ ಸುಧಾರಣೆಗಾಗಿ ಪ್ರಯತ್ನಿಸಿತು.
- ವಿಗ್ರಹಾರಾಧನೆ ಮತ್ತು ಬಹುದೇವತಾ ಆರಾಧನೆಯನ್ನು ವಿರೋಧಿಸಿತು.
- ಏಕದೇವತಾ ಆರಾಧನೆಯನ್ನು ಪ್ರೋತ್ಸಾಹಿಸಿತು.
- ಯಜ್ಞಯಾಗಾದಿಗಳನ್ನು ಖಂಡಿಸಿತು.
- ಇಂಗ್ಲಿಷ್ ಶಿಕ್ಷಣದ ಮೂಲಕ ಭಾರತೀಯರು ಪಾಶ್ಚಾತ್ಯ ರಾಜಕೀಯ ಚಿಂತನೆಯನ್ನು ತಿಳಿಯಲು ಸಾಧ್ಯವಾಗಿ ಅದು ಭಾರತೀಯರಲ್ಲಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿ ಸಲು ಸಹಾಯಮಾಡಿತು.
2. ದಯಾನಂದ ಸರಸ್ವತಿಯವರ ವೇದಗಳಿಗೆ ಹಿಂದಿರುಗಿ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ.
ಆರ್ಯಸಮಾಜದ ಸ್ಥಾಪಕರಾದ ದಯಾನಂದ ಸರಸ್ವತಿಯವರು ದೇಶಾದ್ಯಂತ ಉಪನ್ಯಾಸ ನೀಡುತ್ತಾ ವೇದಗಳು ಸತ್ಯ ಮತ್ತು ಜ್ಞಾನದ ಮೂಲವೆಂದರು. ಈ ಹಿನ್ನೆಲೆಯಲ್ಲಿ ವೇದಗಳಿಗೆ ಹಿಂದಿರುಗಿ ಎನ್ನುವ ಘೋಷಣೆಯನ್ನು ಮಾಡಿದರು. ವಿಗ್ರಹಾರಾಧನೆ, ಜಾತಿಪದ್ಧತಿಯನ್ನು ಖಂಡಿಸಿದರು. ಜಾತಿಯು ಯೋಗ್ಯತೆಯಿಂದ ಹೊರತು, ಹುಟ್ಟಿನಿಂದಲ್ಲ ಎಂದು ಪ್ರತಿಪಾದಿಸಿದರು. ಅನೇಕ ಅರ್ಥಹೀನ ಪದ್ಧತಿಗಳನ್ನು ತಿರಸ್ಕರಿಸಿದರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಸ್ವದೇಶಿ ವಸ್ತುಗಳ ಬಳಕೆಗೆ ಕರೆನೀಡಿದರು.
3. ಸತ್ಯ ಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ.
- ಸತ್ಯಶೋಧಕ ಸಮಾಜವು ಪಾನನಿಷೇಧವನ್ನು ಒತ್ತಾಯಿಸಿತು.
- ಸ್ತ್ರೀಪುರುಷರ ಅಸಮಾನತೆ, ಮಾನವ ಹಕ್ಕುಗಳ ನಿರಾಕರಣೆ, ಜನರನ್ನು ಶೋಷಿಸುವುದು, ಅಸ್ಪೃಶ್ಯತಾ ಆಚರಣೆಗಳನ್ನು ವ್ಯಾಪಕವಾಗಿ ವಿರೋಧಿಸಿತು.
- ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿಯನ್ನು ನಡೆಸಿತು.
- ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಶಾಲೆ ತೆರೆಯಲಾಯಿತು.
- ಶೂದ್ರರು ಅನುಭವಿಸುತ್ತಿದ್ದ ಗುಲಾಮಗಿರಿಯನ್ನು ಹಾಗೂ ಅದಕ್ಕೆ ಕಾರಣರಾದವರನ್ನು ಉಗ್ರವಾಗಿ ಖಂಡಿಸಿತು.
- ಸಮಾಜದ ವ್ಯವಸ್ಥೆಯ ಸುಧಾರಣೆಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪ್ರತಿಪಾದಿಸಿತು.
4. ಆಲಿಘರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ.
ಮುಸಲ್ಮಾನರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ತಾತ್ವಿಕ ವಿಚಾರ ಗಳನ್ನು ಬದಲಿಸಿಕೊಂಡು ಪೂರ್ವಪಶ್ಚಿಮ ವಿಚಾರಗಳ ಸಂಗಮಕ್ಕೆ ಬೆಂಬಲಿಸುವುದು ಅಲಿಘರ್ ಚಳುವಳಿಯ ಉದ್ದೇಶವಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ ನೀಡುವುದು, ಪಾಶ್ಚಾತ್ಯ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವುದೂ ಈ ಚಳವಳಿಯ ಉದ್ದೇಶವಾಗಿತ್ತು.
5. ರಾಮಕೃಷ್ಣ ಮಿಷನ್ ದೃಷ್ಟಿಕೋನವನ್ನು ವಿವರಿಸಿ.
ರಾಮಕೃಷ್ಣ ಪರಮಹಂಸರ ಧೈಯಾದರ್ಶನಗಳನ್ನು ಪ್ರಚಾರ ಪಡಿಸಲು ಸ್ಥಾಪನೆಯಾದ ರಾಮಕೃಷ್ಣ ಮಿಷನ್ ಸರ್ವಧರ್ಮ ಸಮನ್ವಯ ತತ್ವವನ್ನು ಪ್ರಚಾರ ಮಾಡುವುದು ಮತ್ತು ಅನುಷ್ಠಾನಗೊಳಿಸುವುದು, ಜಾತಿವ್ಯವಸ್ಥೆ ಮತ್ತು ಅದರ ಶೋಷಣೆಯ ಮುಖಗಳು, ಬಡತನ, ಅನಕ್ಷರತೆ, ಅಜ್ಞಾನ ಮುಂತಾದ ಒಡಕುಗಳಿಂದ ತುಂಬಿದ ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡಬೇಕೆನ್ನುವುದು, ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಮತ್ತು ಆ ಮೂಲಕ ಅವರೇ ಸ್ಮಧಾರಣೆಯನ್ನು ಬಯಸುತ್ತಾರೆ. ಶಾಸನ ರೂಪಿಸುವ ಸಂಸ್ಥೆಗಳು ರೂಪುಗೊಳ್ಳಬೇಕು ಮತ್ತು ಅವುಗಳ ಮುಖಾಂತರ ಸಮಾಜ ಸ್ಮಧಾರಣಾ ಕಾನೂನುಗಳು ಜಾರಿಗೊಳ್ಳಬೇಕು ಎಂಬುದು ರಾಮಕೃಷ್ಣ ಮಿಷನ್ ದೃಷ್ಟಿಕೋನ.
6. ಆನಿಬೆಸೆಂಟರ ಸುಧಾರಣಾ ಕ್ರಮಗಳಾವುವು?
ಆನಿಬೆಸೆಂಟರು ಥಿಯಾಸಾಫಿಕಲ್ ಸೊಸೈಟಿಯ ಕಾರ್ಯಚಟುವಟಿಕೆಗಳನ್ನು ಭಾರತದಲ್ಲಿ ಆರಂಭಿಸಿ ಅದಕ್ಕೆ ನವ ಚೈತನ್ಯ ನೀಡಿದರು. ಉಪನ್ಯಾಸಗಳ ಮೂಲಕ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಭಿತ್ತಿದರು. ಸಮಾಜದಲ್ಲಿ ಸಮಾನತೆ ಮತ್ತು ವಿಶ್ವಸೋದರತೆಯನ್ನು ವೃದ್ಧಿಸುವುದು ಮತ್ತು ಸಾಮರಸ್ಯ ಸಾಧಿಸಲು ಪ್ರಯತ್ನಿಸಿದರು.
7. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ.
ಶ್ರೀ ನಾರಾಯಣಗುರು ತಮ್ಮ ಧರ್ಮ ಪರಿಪಾಲನಾ ಯೋಗಂ ಮೂಲಕ ಸಾಮಾಜಿಕ ಪ್ರತಿರೋಧದ ಚಳವಳಿಗಳನ್ನು ಪ್ರಾರಂಭಿಸಿದರು. ಮನುಷ್ಯನು ಘನತೆಯಿಂದ ಬದುಕುವ ಸಮಾಜದ ನಿರ್ಮಾಣವೇ ಈ ಸಂಘಟನೆಯ ಉದ್ದೇಶವಾಗಿತ್ತು. ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು.
8. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ.
- ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿದ್ಯ ಸಿಗಬೇಕೆಂದು ಹೋರಾಟವನ್ನು ಆರಂಭಿಸಿದರು.
- ಬ್ರಾಹ್ಮಣೇತರ ಸಮುದಾಯಗಳು ತಮ್ಮ ಮೇಲೆ ಹೇರಲಾಗಿದ್ದ ಸಾಮಾಜಿಕ ನಿರ್ಬಂಧಗಳನ್ನು ವಿರೋಧಿಸತೊಡಗಿದರು.
- ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿಧ್ಯ ಸಿಗಬೇಕೇಂದು ಹೋರಾಟವನ್ನು ಆರಂಭಿಸಿದರು.
- ತಮಿಳು ಭಾಷೆಯನ್ನು ದ್ರಾವಿಡರ ಭಾಷೆಯೆಂದರು.
- ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ ಇದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳವಳಿಯೆಂಬ ಜನಾಂಗೀಯ ಪರಿಕಲ್ಪನೆ ಕೇಂದ್ರೀಕೃತ ಚಳವಳಿಯನ್ನು ರೂಪಿಸತೊಡಗಿದರು.
- ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿಹಿಡಿದರು.
9. ಡಿರೇಜಿಯೋ ರವರು ಪ್ರತಿಪಾದಿಸಿದ ತತ್ವಗಳಾವುವು?
ಮೂಢನಂಬಿಕೆಗಳಿಂದ ತುಂಬಿದ್ದ ಸಾಮಾಜಿಕ ಮೌಡ್ಯಾಚಾರಗಳಲ್ಲೇ ಮುಳುಗಿದ್ದ ಸಮಾಜಕ್ಕೆ ಪರಿಹಾರವಿರುವುದು ಎಲ್ಲವನ್ನೂ ಎಲ್ಲರೂ ವೈಜ್ಞಾನವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಪ್ರಚುರಪಡಿಸುವ ಪ್ರಯತ್ನವನ್ನು ಮಾಡಿದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದು ಜಾತಿಪ್ರೇರಿತ ಶೋಷಣೆಯ ವಿರೋಧಿಯಾಗಿದ್ದರು.
10. ಸ್ವಾಮಿ ವಿವೇಕಾನಂದರು ಸಮಾಜಕ್ಕೆ ನೀಡಿದ ಕೊಡುಗೆಗಳಾವುವು?
ರಾಮಕೃಷ್ಣ ಪರಮಹಂಸರ ಧೈಯಾದರ್ಶನಗಳನ್ನು ಸರ್ವಧರ್ಮ ಸಮನ್ವಯ ತತ್ವವನ್ನು ಪ್ರಚಾರ ಮಾಡಲು ಮತ್ತು ಅನುಷ್ಠಾನಗೊಳಿಸುವ ಉದ್ದೇಶದಿಂದ ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಜೀವನ ಪ್ರೀತಿಯಲ್ಲಿರುವ ಮಹತ್ವವನ್ನು ತೆರೆದಿಟ್ಟು ಭಾರತೀಯರನ್ನು ಎಚ್ಚರಗೊಳಿಸಿದರು. ಮೋಕ್ಷಪ್ರಾಪ್ತಿಗಾಗಿ ಪ್ರಾರ್ಥನೆ, ಯೋಗ ಸಾಧನೆಗಳಲ್ಲದೆ ಸಮಾಜ ಸೇವೆಯು ಮುಖ್ಯವೆಂದರು. ಜಾತಿವ್ಯವಸ್ಥೆ ಮತ್ತು ಅದರ ಶೋಷಣೆಯ ಮುಖಗಳು, ಬಡತನ, ಅನಕ್ಷರತೆ, ಅಜ್ಞಾನ ಮುಂತಾದ ಒಡಕುಗಳಿಂದ ತುಂಬಿದ ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡಬೇಕೆಂದು ತಮ್ಮ ಜೀವಿತಾವಧಿ ಕಾಲದಲ್ಲಿ ಅವಿರತ ಪ್ರಯತ್ನ ಮಾಡಿದರು. ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಮತ್ತು ಆ ಮೂಲಕ ಅವರೇ ಸುಧಾರಣೆಯನ್ನು ಬಯಸುತ್ತಾರೆ. ಶಾಸನ ರೂಪಿಸುವ ಸಂಸ್ಥೆಗಳು ರೂಪುಗೊಳ್ಳಬೇಕು ಮತ್ತು ಅವುಗಳ ಮುಖಾಂತರ ಸಮಾಜ ಸುಧಾರಣಾ ಕಾನೂನುಗಳು ಜಾರಿಗೊಳ್ಳಬೇಕು ಎಂದು ಬಯಸಿದರು. ಪಾಶ್ಚಿಮಾತ್ಯರ ಅಂಧಾನುಕರಣೆಯನ್ನು ಬಿಡಬೇಕೆಂದರು. ಸರ್ವಧರ್ಮ ಸಹಿಷ್ಣುತೆ, ಸಕಲಧರ್ಮಗಳು ಸತ್ಯ ಎಂದು ಪ್ರತಿಪಾದಿಸಿ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದರು. ಹಿಂದೂ ಧರ್ಮವು ಹೇಗೆ ವಿಶ್ವಭ್ರಾತೃತ್ವವನ್ನು ಸಾರಿದೆ ಎಂಬುದನ್ನು ವಿವರಿಸಿ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದರು.
ಹೆಚ್ಚುವರಿ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1. ಧರ್ಮ ಪರಿಪಾಲನಾ ಯೋಗಂ ಆರಂಭಿಸಿದವರು:
ಎ) ಡಾ ಪಲ್ಟು
ಬಿ) ಕುಮಾರನ್ ಆಸನ್
ಸಿ) ಶ್ರೀ ನಾರಾಯಣಗುರು
ಡಿ) ಪೆರಿಯಾರ್
2. ಆರ್ಯ ಸಮಾಜದ ಸ್ಥಾಪಕರು:
ಎ) ರಾಮಕೃಷ್ಣ ಪರಮಹಂಸ
ಸಿ) ದಯಾನಂದ ಸರಸ್ವತಿ
ಬಿ) ಸ್ವಾಮಿ ವಿವೇಕಾನಂದ
ಡಿ) ಮಹದೇವ ಗೋವಿಂದ ರಾನಡೆ
3. ಭಾರತೀಯರಿಗೆ ಭಾರತ ಎಂಬ ಘೋಷಣೆಯನ್ನು ನೀಡಿದವರು:
ಎ) ಬಾಬಾಸಾಹೇಬ ಅಂಬೇಡ್ಕರ್
ಬಿ) ಅನಿಬೆಸೆಂಟ್
ಸಿ) ಸ್ವಾಮಿ ವಿವೇಕಾನಂದ
ಡಿ) ದಯಾನಂದ ಸರಸ್ವತಿ
4. ನ್ಯೂ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದವರು:
ಎ) ರಾಜಾ ರಾಮಮೋಹನ್‌ರಾಯರು
ಬಿ) ಅನಿಬೆಸೆಂಟ್
ಸಿ) ದಯಾನಂದ ಸರಸ್ವತಿ
ಡಿ) ಜ್ಯೋತಿಭಾ ಫುಲೆ
ರಿವೋಲ್ಡ್ ಪತ್ರಿಕೆಯನ್ನು ಹುಟ್ಟು ಹಾಕಿದವರು:
ಎ) ಹೆನ್ರಿ ವಿವಿಯನ್ ಡಿರೇಜಿಯೋ
ಬಿ) ಪೆರಿಯಾರ್
ಸಿ) ರಾಮ್ ಮೋಹನ್ ರಾಯ್
ಡಿ) ರಾನಡೆ
ಭಾರತೀಯ ನವೋದಯದ ಜನಕ:
ಎ) ರಾಮ್ ಮೋಹನ್ ರಾಯ್
ಬಿ) ದಯಾನಂದ ಸರಸ್ವತಿ
ಸಿ) ಡಾ.ಆತ್ಮಾರಾಮ್ ಪಾಂಡುರಂಗ
ಡಿ) ಜ್ಯೋತಿಭಾ ಫುಲೆ
ಯುವಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು:
ಎ) ಹೆನ್ರಿ ವಿವಿಯನ್ ಡಿರೇಜಿಯೋ
ಬಿ) ಕರ್ನಲ್ ಎಚ್.ಎಸ್.ಅಲ್ಕಾರ್ಟ್
ಸಿ) ಮ್ಯಾಡಮ್ ಬ್ಲಾವಟಿಸ್ಕಿ
ಡಿ) ಅನಿಬೆಸೆಂಟ್
ಜ್ಯೋತಿಭಾ ಫುಲೆಯವರ ಆಶಯಗಳಿಂದ ಪ್ರೇರಣೆ ಪಡೆದವರಲ್ಲಿ ಮುಖ್ಯರು:
ಎ) ಮ್ಯಾಡಮ್ ಬ್ಲಾವಟಿ
ಬಿ) ಎಂ.ಜಿ.ರಾನಡೆ
ಸಿ) ಅನಿಬೆಸೆಂಟ್
ಡಿ) ಬಾಬಾಸಾಹೇಬ ಅಂಬೇಡ್ಕರ್
II. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
- ನಾರಾಯಣಗುರು ಮತ್ತು ಅವರ ಅನುಯಾಯಿಗಳು ನಡೆಸಿದ ಶಿವ ಚಳವಳಿಯಲ್ಲಿ ಭಾಗವಹಿಸಿದ್ದವರು ಗಾಂಧೀಜಿ ಹಾಗೂ ಪೆರಿಯಾರ್
- ಆಂಗ್ಲೋ-ಒರಿಯಂಟಲ್ ಕಾಲೇಜನ್ನು ಪ್ರಾರಂಭಿಸಿದವರು ಸರ್ ಸಯ್ಯದ್ ಅಹಮದ್ ಖಾನ್
- ಸಾ.ಶ. 1917ರ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದವರು ಅನಿಬೆಸೆಂಟ್
- ವೇದಗಳಿಗೆ ಹಿಂದಿರುಗಿ ಎಂದು ಘೋಷಣೆ ಮಾಡಿದವರು ದಯಾನಂದ ಸರಸ್ವತಿ
- ಪುಲೆಯವರು ಶೋಷಣೆಯ ಬಗ್ಗೆ ತಿಳಿಸಿಕೊಟ್ಟ ಪುಸ್ತಕ ಗುಲಾಮಗಿರಿ
III. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1. ಸಂಪ್ರದಾಯವಾದಿ ಹಿಂದೂಗಳು ರಾಮ್ ಮೋಹನರಾಯರನ್ನು ಖಂಡಿಸಲು ಕಾರಣವೇನು?
ಮೂರ್ತಿ ಪೂಜೆಯನ್ನು ಪ್ರಶ್ನಿಸಿದ ರಾಯರು ತಮ್ಮ ಸಿದ್ಧಾಂತಗಳ ಪ್ರತಿಪಾದನೆಗಾಗಿ ಉಪನಿಷತ್ತುಗಳನ್ನು ಮುಂದು ಮಾಡಿದರು. ಆಧುನಿಕ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಣವು ಭಾರತದ ನವೀಕರಣಕ್ಕೆ ಅವಶ್ಯಕವೆಂದು ಪ್ರತಿಪಾದಿಸಿದರು. ಸ್ತ್ರೀ ಶೋಷಣೆಯನ್ನು ವಿರೋಧಿಸಿದರು. ಸತಿಪದ್ಧತಿ, ಬಾಲ್ಯವಿವಾಹಗಳ ವಿರುದ್ಧ ಸಂಘಟನಾತ್ಮಕವಾದ ಹೋರಾಟ ನಡೆಸಿದರು. ಇದರಿಂದಾಗಿ ಸಂಪ್ರದಾಯವಾದಿ ಹಿಂದೂಗಳು ಇವರನ್ನು ಖಂಡಿಸಿದರು.
2. ಆಂಗ್ಲೋ-ಒರಿಯಂಟಲ್ ಕಾಲೇಜನ್ನು ಪ್ರಾರಂಭಿಸಿದುದರ ಉದ್ದೇಶಗಳನ್ನು ತಿಳಿಸಿ.
ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ ನೀಡುವ ಉದ್ದೇಶದಿಂದ ಅಂಗ್ಲೋ-ಒರಿಯಂಟಲ್ ಕಾಲೇಜನ್ನು ಪ್ರಾರಂಭಿಸಲಾಯಿತು.
3. ಇಂದಿಗೂ ತಮಿಳು ನಾಡಿನ ರಾಜಕೀಯ ಕ್ಷೇತ್ರಗಳಲ್ಲಿ ಪೆರಿಯಾರರು ಸೈದ್ಧಾಂತಿಕವಾಗಿ ಉಳಿದ್ದಾರೆ ಎಂಬುದಕ್ಕೆ ಯಾವುದು ಸಾಕ್ಷಿಯಾಗಿದೆ?
ಇಂದಿಗೂ ತಮಿಳು ನಾಡಿನ ರಾಜಕೀಯ ಪಕ್ಷಗಳು ದ್ರಾವಿಡ ಎನ್ನುವ ಹೆಸರನ್ನು ತಮ್ಮ ಪಕ್ಷಗಳ ಹೆಸರಿನಲ್ಲಿ ಉಳಿಸಿಕೊಂಡಿರುವುದೇ ದೊಡ್ಡ ಸಾಕ್ಷಿಯಾಗಿದೆ.
4. ಸ್ವಾತಂತ್ರ್ಯ ಚಳುವಳಿಯಲ್ಲಿ ಆನಿಬೆಸೆಂಟರ ಪಾತ್ರವನ್ನು ವಿವರಿಸಿ.
ಆನಿಬೆಸೆಂಟರು ಸ್ವಾತಂತ್ರ್ಯ ಚಳುವಳಿಯನ್ನು ವ್ಯಾಪಕವಾಗಿ ಬೆಂಬಲಿಸಿದರು. ನ್ಯೂ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾ.ಶ. 1916ರಲ್ಲಿ ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದರು. ಸಾ.ಶ. 1917ರ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದರು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಅಪಾರ ಕೊಡುಗೆ ನೀಡಿದರು.
5. ಹೆನ್ರಿ ವಿವಿಯನ್ ಡಿರೇಜಿಯೋ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿಯಾಗಲು ಕಾರಣಗಳೇನು?
ಹೆನ್ರಿಯವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹವರ್ತಿಗಳಲ್ಲಿ ವೈಜ್ಞಾನಿಕ ಆಲೋಚನಾ ಕ್ರಮವನ್ನು ತುಂಬುವ ಪ್ರಯತ್ನವನ್ನು ಮಾಡಿದರು. ಹೊಸ ಶಿಕ್ಷಣ ಕ್ರಮವನ್ನು ಜಾರಿಗೊಳಿಸಲು ಬೇಕಾದ ಪಠ್ಯಪುಸ್ತಕಗಳನ್ನು ರೂಪಿಸುವಲ್ಲಿ ವಿಶೇಷ ಶ್ರಮ ವಹಿಸಿದರು. ಪ್ರಶ್ನಿಸುವ, ವೈಜ್ಞಾನಿಕ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳಲು ಬೇಕಾದ ಪ್ರೇರಣೆಯನ್ನು ಒದಗಿಸುವ ಪಠ್ಯಗಳನ್ನು ತಂದರು. ಈ ಕಾರಣಗಳಿಂದಾಗಿ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿಯಾದರು.
6. ಶ್ರೀ ನಾರಾಯಣಗುರು ಸಾಮಾಜಿಕ ಪ್ರತಿರೋಧದ ಚಳವಳಿಗಳನ್ನು ಪ್ರಾರಂಭಿಸಲು ಕಾರಣವಾದ ವಿಷಯಗಳು ಯಾವುವು?
ಸಮಾಜದಲ್ಲಿ ವ್ಯಾಪಕವಾಗಿದ್ದ ಜಾತಿ ಅಂತರಗಳ ಸಮಸ್ಯೆಗಳು, ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸಾಮಾಜಿಕ ನಿರ್ಬಂಧಗಳನ್ನು ಹೇರಲಾಗಿತ್ತು. ಆ ಕಾಲಘಟ್ಟದಲ್ಲಿ ಈ ಸಮುದಾಯಗಳು ಎಲ್ಲರೂ ಬಳಸಲು ಇದ್ದ ಕೆರೆ ಬಾವಿಗಳಲ್ಲಿ ನೀರನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ. ರಸ್ತೆಗಳ ಮೂಲಕ ಓಡಾಡಲಾಗುತ್ತಿರಲಿಲ್ಲ. ಚಪ್ಪಲಿಗಳನ್ನು ಹಾಕುವಂತಿರಲಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸುವಂತಿರಲಿಲ್ಲ. ಮಹಿಳೆಯರ ಉಡುಪುಗಳ ಮೇಲೂ ನಿರ್ಬಂಧಗಳನ್ನು ಹೇರಲಾಗಿತ್ತು. ಇಷ್ಟೇ ಅಲ್ಲದೆ ಶಾಲೆಗಳಿಗೂ ಇವರಿಗೆ ಪ್ರವೇಶವಿರಲಿಲ್ಲ. ಕನಿಷ್ಠ ಪ್ರಮಾಣದ ಮಾನವ ಹಕ್ಕುಗಳನ್ನೂ ಪಡೆಯದ ಈ ಸಮುದಾಯಗಳು ಉಸಿರುಗಟ್ಟಿ ಬದುಕಬೇಕಾದ ಪರಿಸ್ಥಿತಿ ಇತ್ತು. ಈ ವಿಷಯಗಳು ಶ್ರೀ ನಾರಾಯಣಗುರು ಸಾಮಾಜಿಕ ಪ್ರತಿರೋಧದ ಚಳವಳಿಗಳನ್ನು ಪ್ರಾರಂಭಿಸಲು ಕಾರಣವಾದವು.
7. ಭಾರತದ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಮಹನ್‌ಯರು ಯಾರು?
ರಾಮ್ ಮೋಹನರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದರಾನಡೆ, ಜ್ಯೋತಿಬಾಪುಲೆ, ಸ್ವಾಮಿ ವಿವೇಕಾನಂದ, ಆನಿಬೆಸೆಂಟ್, ಸೈಯದ್ ಅಹಮದ್‌ಖಾನ್, ನಾರಾಯಣ ಗುರು, ಪೆರಿಯಾರ್ ಮೊದಲಾದ ಮಹನೀಯರು ಭಾರತದ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು.
8. ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಪ್ರಾರ್ಥನಾ ಸಮಾಜದ ಪಾತ್ರವನ್ನು ವಿವರಿಸಿ.
- ಮಾನವನ ಸೇವೆಯೇ ಪರಮಾತ್ಮನ ಸೇವೆ ಎಂಬುದು ಇದರ ನೆಲೆಗಟ್ಟಾಗಿತ್ತು,
- ಶಿಕ್ಷಣ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನೀಡಿತು.
- ಡೆಕ್ಕನ್ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿತು.
- ವಿಧವಾ ವಿವಾಹ, ಸ್ತ್ರೀ ಶಿಕ್ಷಣ, ಅಂತರ್ಜಾತಿ ವಿವಾಹ, ಸಹಭೋಜನ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಬಾಲ್ಯ ವಿವಾಹ, ಜಾತಿಪದ್ಧತಿ, ವಿಗ್ರಹಾರಾಧನೆ, ಪರ್ಧಾಪದ್ಧತಿಯನ್ನು ವಿರೋಧಿಸಿತು.
- ಅನಾಥಾಲಯಗಳು, ರಾಷ್ಟ್ರೀಯ ಶಾಲೆಗಳು ಮತ್ತು ವಿಧವಾಶ್ರಮಗಳನ್ನು ಸ್ಥಾಪಿಸಲಾಯಿತು.
ಮುಖ್ಯಾಂಶಗಳು
- 19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಭಾರತೀಯ ಪುನರುಜ್ಜಿವನ ಹಾಗೂ ಸಮಾಜ ಸುಧಾರಣಾ ಕಾಲವೆಂದು ಕರೆಯಲಾಗಿದೆ.
- ಈ ಕಾಲಾವಧಿಯಲ್ಲಿ ಪಾಶ್ಚಾತ್ಯ ನಾಗರಿಕತೆಯ ಸಂಪರ್ಕ ಭಾರತೀಯರಿಗೆ ದೊರೆಯಿತು.
- ಇಂಗ್ಲೀಷ್ ವಿದ್ಯಾಭ್ಯಾಸದ ಸೌಲಭ್ಯ ದೊರೆಯಿತಲ್ಲದೆ ಪ್ರಜಾಪ್ರಭುತ್ವ ರಾಷ್ಟ್ರೀಯತೆ ಮುಂತಾದ ಪಾಶ್ಚಾತ್ಯ ಪರಿಕಲ್ಪನೆಗಳು ಪರಿಚಯವಾಗಲಾರಂಭಿಸಿದವು. ವೈಚಾರಿಕತೆಯ ಮನೋಭಾವ ಬೆಳೆಯಿತು. ಭಾರತೀಯ ಸಮಾಜದ ವಿಶ್ಲೇಷಣೆ ಹಾಗೂ ಸುಧಾರಣೆಯ ಆಸಕ್ತಿ ಬೆಳೆಯಿತು.
- ರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಭಾಫುಲೆ, ಸ್ವಾಮಿ ವಿವೇಕಾನಂದ, ಅನಿಬೆಸೆಂಟ್, ಸಯ್ಯದ್ ಅಹ್ಮದ್ ಖಾನ್, ನಾರಾಯಣ ಗುರು, ಪೆರಿಯಾರ್ ಮೊದಲಾದವರು ಸುಧಾರಣಾ ಚಳುವಳಿಯನ್ನು ರೂಪಿಸಿದ ಪ್ರಮುಖರು.
- ಬ್ರಹ್ಮಸಮಾಜ ಸಂಸ್ಥಾಪಕರಲ್ಲಿ ಪ್ರಮುಖರಾದ ರಾಮ್ ಮೋಹನರಾಯರನ್ನು ಭಾರತೀಯ ನವೋದಯದ ಜನಕ ಎಂದು ಕರೆಯಲಾಗಿದೆ.
- ಹತ್ತೊಂಬತ್ತನೇ ಶತಮಾನದಲ್ಲಿ ಕಲ್ಕತ್ತಾ ನಗರವು ಹೊಸ ಆಲೋಚನೆಗಳ ಕೇಂದ್ರ ಬಿಂದುವಾಗಿತ್ತು.
- ಸಾ. ಶ. 1820 ಮತ್ತು 1830ರ ದಶಕದಲ್ಲಿ ಹೊಸ ಚಳವಳಿಗಳು * ಹುಟ್ಟಿಕೊಳ್ಳತೊಡಗಿದವು.
- ಇದೇ ಕಾಲಘಟ್ಟದ ಮತ್ತೊಂದು ಚಳುವಳಿಯೆಂದರೆ ಯುವಬಂಗಾಳಿ ಚಳುವಳಿ, ಇವನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೋ.
- ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು ಸ್ಥಾಪಿಸಿದರು.
- ಡಾ. ಅತ್ಮಾರಾಮ್ ಪಾಂಡುರಂಗರವರು ಪ್ರಾರ್ಥನಾ ಸಮಾಜವನ್ನು ಮುಂಬೈನಲ್ಲಿ ಸ್ಥಾಪಿಸಿದರು.
- ಜ್ಯೋತಿಭಾ ಫುಲೆಯವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು.
- ಸರ್ ಸಯ್ಯದ್ ಅಹಮದ್ ಖಾನ್‌ರವರು ಅಲಿಫರ್ ಚಳವಳಿಯ ನಾಯಕತ್ವವನ್ನು ವಹಿಸಿದ್ದರು.
- ರಾಮಕೃಷ್ಣ ಪರಮಹಂಸರ ಚಿಂತನೆಯು ಭಾರತೀಯ ಸಂಸ್ಕೃತಿಯ ಆಧಾರವಾಗಿತ್ತು
- ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಧೈಯಾದರ್ಶಗಳನ್ನು ಪ್ರಚಾರ ಪಡಿಸಲು ರಾಮಕೃಷ್ಣ ಮಿಷನ್‌ನ್ನು ಸ್ಥಾಪಿಸಿದರು.
- ಮೇಡಂ ಬ್ಲಾವಟ್‌ಸ್ಕೆ ಮತ್ತು ಅಮೆರಿಕನ್ನರಾದ ಕರ್ನಲ್ ಎಸ್.ಎಸ್.ಅಲ್ಕಾಟ್ ಥಿಯಾಸಾಫಿಕಲ್ ಸೊಸೈಟಿಯ ಮೂಲ ಸ್ಥಾಪಕರು.
- ಐರ್ಲೆಂಡ್ ದೇಶದ ಮಹಿಳೆ ಅನಿಬೆಸೆಂಟ್ ರವರು ಥಿಯೊಸಾಫಿಕಲ್ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ಭಾರತದಲ್ಲಿ ಆರಂಭಿಸಿ ಅದಕ್ಕೆ ನವಚೈತನ್ಯ ನೀಡಿದರು.
- ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣದ ಉದ್ದೇಶದಿಂದ ಶ್ರೀ ನಾರಾಯಣಗುರು ಸುಧಾರಣ ಸಂಘಟನೆಯನ್ನು ಆರಂಭಿಸಿದರು.
- ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಆರಂಭಿಸಿದರು.
- ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿಯೆಂಬ ಹೊಸ ಬಗೆಯ ಚಳವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತು.
- ಜಸ್ಟೀಸ್ ಪಾರ್ಟಿಯ ಮೂಲಕ ಈ ಚಳವಳಿಯು ಹೊಸರೂಪವನ್ನು ಪಡೆಯಿತು.
- ಆ ಹೊಸರೂಪವೇ ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ನೇತೃತ್ವದಲ್ಲಿ ಆರಂಭಗೊಂಡ ಆತ್ಮಗೌರವ ಚಳವಳಿ.
- ಕಾಂಗ್ರೆಸ್ ಪಕ್ಷದಿಂದ ಹೊರಬಂದ ರಾಮಸ್ವಾಮಿಯವರು ರೆಸ್ಪೆಕ್ಟ್ ಲೀಗ್ ಅನ್ನು ಪ್ರಾರಂಭಿಸಿದರು. ಜನರು ಪ್ರೀತಿಯಿಂದ ಪೆರಿಯಾರ್ ಎಂದು ಕರೆದರು.
ಇತರೆ ವಿಷಯಗಳು :
ಮೈಸೂರಿನ ಒಡೆಯರು ಹಾಗೂ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಪಾಠದ ನೋಟ್ಸ್
10ನೇ ತರಗತಿ ಸಾರ್ವಜನಿಕ ಆಡಳಿತ ಒಂದು ಪರಿಚಯ ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್