ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳು, Sslc Question Papers Karnataka, Sslc Model Question Paper, SSLC Supplementary Exam Papers, 10th Previous Year Question Papers, 10th Class Model Question Paper, Kseeb Model Question Papers Sslc All Subject Question Paper 10ನೇ ತರಗತಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು Sslc ಮಾದರಿ ಪ್ರಶ್ನೆ ಪತ್ರಿಕೆಗಳು sslc madari prashne patrike kannada Sslc madari prashne patrike kannada question paper

I. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ 4 ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
1. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ
ಅ. 05
ಆ. 07
ಇ. 13
ಈ. 10
2. ‘ವಾಗ್ಲೆವಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಅ. ಆದೇಶ ಸಂಧಿ
ಆ. ಜತ್ತ್ವಸಂಧಿ
ಇ. ಶ್ಚುತ್ವಸಂಧಿ
ಈ. ಅನುನಾಸಿಕ ಸಂಧಿ
3. ತೃತೀಯಾ ವಿಭಕ್ತಿಯ ಕಾರಕಾರ್ಥ
ಅ. ಕರಣಾರ್ಥ
ಆ. ಕರ್ಮಾರ್ಥ
ಇ. ಸಂಪ್ರದಾನ
ಈ. ಸಂಬಂಧ
4. ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು.
ಅ. ಉದ್ದರಣ
ಆ. ವಾಕ್ಯವೇಷ್ಠನ
ಇ. ಅರ್ಧವಿರಾಮ
ಈ. ಪೂರ್ಣವಿರಾಮ
5. ‘ಕೊರೆತ’ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ.
ಅ. ಕೃದಂತನಾಮ
ಆ. ಕೃದಂತಭಾವನಾಮ
ಇ. ಕೃದಂತಾವ್ಯಯ
ಈ. ತದ್ಧಿತಾಂತ ಭಾವನಾಮ
6. ‘ಕಣ್ಣೆರೆ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಅ. ಅಂಶಿ ಸಮಾಸ
ಆ. ಕರ್ಮಧಾರಯ ಸಮಾಸ
ಇ. ಕ್ರಿಯಾ ಸಮಾಸ
ಈ. ಗಮಕ ಸಮಾಸ
II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧಿ ಪದವನ್ನು ಬರೆಯಿರಿ. 4×1=4
7.ಹಲವು : ಪರಿಮಾಣವಾಚಕ :: ತೆಂಕಣ : ದಿಗ್ವಾಚಕ
8. ಕೋಕಿಲಾ : ಕೋಗಿಲೆ :: ವರ್ಣ : ಬಣ್ಣ
9.ಜನಕಾ : ಜನಕ್ಕೆ :: ಇಸವಾಸ : ವಿಶ್ವಾಸ
10. ಕೆನೆಮೊಸರು : ಜೋಡುನುಡಿ :: ಸಾಕುಸಾಕು : ದ್ವಿರುಕ್ತಿ
III. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 7×1=7
11. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು?
ಉತ್ತರ: ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ʼಚೇರಿಂಗ್ ಕ್ರಾಸ್ʼ.
12. ಬೆಳ್ಗೊಡೆಯ ಅಡಿಯಲ್ಲಿ ಯಾವುದು ಕಾಣುವುದಿಲ್ಲ?
ಉತ್ತರ: ಬೆಳ್ಗೊಡೆಯ ಅಡಿಯಲ್ಲಿ ಪರಲೋಕ ಕಾಣುವುದಿಲ್ಲ.
13. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಬಿಸಿದ ಜಲವಿದ್ಯುತ್ ಯೋಜನೆ ಯಾವುದು?
ಉತ್ತರ: ಶಿವನಸಮುದ್ರ ಬಳಿಯ ಕಾವೇರಿ ನದಿಯಿಂದ ಉತ್ಪಾದಿಸಿದ ಜಲವಿದ್ಯುತ್ ಉತ್ಪದನಾ ಕೇಂದ್ರವು ಏಷ್ಯಾ ಖಂಡದಲ್ಲಿಯೇ ಮೊದಲ ಪ್ರಾರಂಭಿಸಿದ ಜಲವಿದ್ಯುತ್ ಯೋಜನೆಯಾಗಿದೆ.
14. ಧರ್ಮಬುದ್ದಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ಉತ್ತರ: ಧರ್ಮಬುದ್ದಿಯು ತನ್ನ ಬೆಳಗಿನ ಹೊತ್ತನ್ನು ದೇವಗುರು, ದ್ವಿಜರ ಪೂಜೆಯನ್ನು ಮಾಡುತ್ತಾ ಕಳೆದನು.
15. ಕವಿ ಜಿ.ಎಸ್ ಶಿವರುದ್ರಪ್ಪನವರು ಯಾವ ಎಚ್ಚರದೊಳು ಬದುಕಬೇಕಿದೆ ಎಂದು ಹೇಳಿದ್ದಾರೆ?
ಉತ್ತರ: ಕವಿ ಜಿ.ಎಸ್. ಶಿವರುದ್ರಪ್ಪನವರು ಮತಗಳೆಲ್ಲವೂ ಪಥಗಳು ಏನ್ನುವ ಹೊಸ ಎಚ್ಚರದಲ್ಲಿ ಬದುಕಬೇಕೆಂದು ಹೇಳಿದ್ದಾರೆ.
16. ಕವಿ ಕುವೆಂಪು ಅವರಿಗೆ ಹುಲ್ಲಿನ ಹಾಸು ಹೇಗೆ ಕಂಡಿದೆ?
ಉತ್ತರ: ಕವಿ ಕುವೆಂಪು ಅವರಿಗೆ ಹುಲ್ಲಿನ ಹಾಸು ಹೊಸ ಪಚ್ಚೆಯ ಜಮಖಾನೆಯಂತೆ ಕಂಡಿದೆ.
17. ‘ಬಿಲ್ಲಹಬ್ಬ’ವನ್ನು ರಚಿಸಿದ ಕವಿ ಯಾರು?
ಉತ್ತರ: ‘ಬಿಲ್ಲಹಬ್ಬ’ವನ್ನು ರಚಿಸದ ಕವಿ ಮೂಲ್ಕಿಯ ವಾಸುದೇವ ಪ್ರಭು.
IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ:
18. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಉತ್ತರ: ವಿ.ಕೃ. ಗೋಕಾಕ್ ಅವರು ಲಂಡನ್ನಿನ ಬೀದಿಯಲ್ಲಿ ತಿರುಗಾಡುತ್ತಿದ್ದ ಅಲ್ಲಿಯ ಹೆಣ್ಣುಮಕ್ಕಳ ಟೊಪ್ಪಿಗೆಗಳನ್ನು ಗಮನಿ ಸುತ್ತಾರೆ. ಒಂದು ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿಗೆಯಲ್ಲವೇ? ಒಬ್ಬ ಮನುಷ್ಯಳಂತೆ ಮತ್ತೊಬ್ಬಳಿಗೆ ಎಂದು ಅಲ್ಲಿನ ಟೊಪ್ಪಿಗೆಗಳ ವಿಶೇಷತೆಯನ್ನು ದಾಖಲಿಸಿದ್ದಾರೆ.
19. ನೆಹರೂ ಅವರು ವಿಶ್ವೇಶ್ವರಯ್ಯನವರನ್ನು ಕುರಿತು ಹೇಳಿದ ಮಾತುಗಳಾವುವು?
ಉತ್ತರ: “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವ ರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ನವರ ಜನ್ಮ ಶತಮಾನೋತ್ಸವದಂದು ನೆಹರೂರವರು ಹೇಳಿದ ಮಾತುಗಳಾಗಿವೆ.
20. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯನವರ ಅಭಿಪ್ರಾಯವೇನು? ತಿಳಿಸಿ.”
ಉತ್ತರ: ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ವಿಶ್ವೇಶ್ವರಯ್ಯನವರು ನಂಬಿದ್ದರು. ಅದಕ್ಕಾಗಿ ಶಿಕ್ಷಣವು ಸಂಜೀವಿನಿ ಎಂಬುದನ್ನು ಅರಿತು “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು” ಎಂದು ಮನಗಂಡು ಅವರು ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು.
21. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
ಉತ್ತರ: ಮಹಿಳೆಯ ಆರ್ತನಾದ ಕೇಳಿದ ರಾಹಿಲನ ಮನದಲ್ಲಿ “ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯ ಒಳಗೆ ಏನು ಸಂಭವಿಸುತ್ತಿದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗ ಬಹುದು? ಗಡಿಪ್ರದೇಶಗಳಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್‌ಔಟ್’ ನಿಯಮ ಪಾಲಿಸುತ್ತಿರುವ ಈ ಸಮಯದಲ್ಲಿ ಆ ಮನೆಯ ಒಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತದೆ?” ಎಂಬ ಪ್ರಶ್ನೆಗಳು ಮೂಡಿದವು.
22. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕೆಂದು ಜಿ.ಎಸ್.ಶಿವರುದ್ರಪ್ಪನವರು ಹೇಳಿದ್ದಾರೆ?
ಉತ್ತರ: ಮನುಷ್ಯ ಸಮಾಜದಲ್ಲಿ ಮೇಲು-ಕೀಳು, ಜಾತಿ-ಮತ, ಧರ್ಮ-ಭಾಷೆ ಇತ್ಯಾದಿಗಳಲ್ಲಿ ಮುಳುಗಿ ಹೋಗಿದ್ದಾನೆ. ಮನುಷ್ಯರನ್ನು ಸಂಪರ್ಕಿಸದಂತೆ ಗೋಡೆ ಕಟ್ಟಿಕೊಂಡಿ ದ್ದಾರೆ. ಈ ಗೋಡೆಗಳನ್ನು ಕೆಡವಿ, ಇವರ ಜೀವನದಲ್ಲಿ ಹೊಸ ಭರವಸೆ ಮೂಡಿಸಬೇಕು ಒಬ್ಬರನ್ನೊಬ್ಬರು ಸಂಪರ್ಕಿಸುವಂತೆ ಸೇತುವೆಗಳನ್ನು ನಿರ್ಮಿಸಬೇಕು. ಯಾವುದೇ ಸವಾಲುಗಳು ಎದುರಾದರೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಕವಿ ಜಿ.ಎಸ್. ಶಿವರುದ್ರಪ್ಪನವರು ಹೇಳಿದ್ದಾರೆ.
23. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು?
ಉತ್ತರ: ಕೃಷ್ಣನ ಆಮಿಷಗಳನ್ನು ಒಟ್ಟಿದಾಗ ಕ್ಷಣಕಾಲ ಏನನ್ನೂ ಉತ್ತರಿಸದ ಕರ್ಣ ನಂತರ ಕೃಷ್ಣನನ್ನು ಕುರಿತು ‘ಹುಚ್ಚು ಕೃಷ್ಣ, ನಾನು ಈ ರಾಜ್ಯದ ಸಿರಿಗೆ ಸೋಲುವವನಲ್ಲ. ಕೌರವರು ಪಾಂಡವರಿಂದ ಸೇವೆ ಮಾಡಿಸಿಕೊಳ್ಳಲು ಮನಸ್ಸಿಲ್ಲ ನನ್ನನ್ನು ಕಾಪಾಡಿದ ಒಡೆಯನಿಗೆ ಪಾಂಡವರ ಶಿರಗಳನ್ನು ಕಡಿದು ತಂದೊಪ್ಪಿಸಬೇಕೆಂಬ ಆತುರದಲ್ಲಿ ದ್ದಾಗ ನೀನು ನನ್ನ ಜನ್ಮ C ರಹಸ್ಯವನ್ನು ತಿಳಿಸಿ ಕೌರವೇಂದ್ರನನ್ನು ಕೊಂದೆ’ ಎಂದು ಹೇಳಿದರು.
24. ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯವಾಗಿದೆ?
ಉತ್ತರ: ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆಯೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮಖರಾಗ ಬೇಕು. ವೇದಾಂತದ ಸಂದೇಶವನ್ನು ಪ್ರತಿ ಮನೆಮನೆಗೂ ಸಾರಿ ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಬೇಕು. ಆನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ತೃಪ್ತಿ ದೊರೆವುದೆಂದು ವಿವೇಕಾನಂದರು ಹೇಳಿದ್ದಾರೆ.
25. ಭಗತ್‌ಸಿಂಗ್ ಹೇಗೆ ಅಮರನಾದನು?
ಉತ್ತರ: ಭಗತ್‌ಸಿಂಗ್ ಕ್ರಾಂತಿಕಾರಿಗಳ ಸಹಕಾರದಿಂದ ಮಾತೃಭೂಮಿಯನ್ನು ಗುಲಾಮಗಿರಿಯ ಸಂಕೋಲೆ ಯಿಂದ ಬಿಡಿಸಲು ಸ್ವಾತಂತ್ರ್ಯ ಹೋರಾಟದ ಪಥದಲ್ಲಿ ಮುನ್ನಡೆದನು. “ಇಂಕ್ವಿಲಾಬ್ ಜಿಂಗ ಜಿಂದಾಬಾದ್” ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವವನ್ನೇ ಅರ್ಪಿಸಿ ಮರಣ ದಂಡನೆಗೆ ಈಡಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಗುರಿಯನ್ನು ತೋರಿಸಿ ಕೊಟ್ಟು ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ತನ್ನ ತ್ಯಾಗ ಬಲಿದಾನದಿಂದ ಅಮರನಾದನು.
26. ‘ವಸಂತ ಮುಖ ತೋರಲಿಲ್ಲ’ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ’?
ಉತ್ತರ: ಒಡೆತನದ ಅಂಗಳದಲ್ಲಿದ್ದ ಮಾವಿನ ಮರಗಳು ಮೈತುಂಬಿ ನಿಂತಿವೆ. ಆಕಾಶದಲ್ಲಿ ಹಕ್ಕಿಗಳು ರೆಕ್ಕೆಬಿಚ್ಚಿ ಸ್ವಚ್ಛಂದವಾಗಿ ಹಾರಾಡುತ್ತಿವೆ. ಕೋಗಿಲೆಗಳು ಮನದುಂಬಿ ಹಾಡುತ್ತಿವೆ. ಕಡಲು ಉಕ್ಕಿ ಹರಿಯುತ್ತಿದೆ. ವಸಂತನ ಆಗಮನದ ಹಿನ್ನಲೆಯಲ್ಲಿ ಇಳೆಯು ಸಂಭ್ರಮಿಸುತ್ತಿದೆ. ಹೀಗೆ ‘ವಸಂತ ಮುಖ ತೋರಲಿಲ್ಲ’ ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.
27. ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಗಿತು?
ಉತ್ತರ: ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿ ಎಂಬ ಬೂದುಬಣ್ಣದ ಗಿಡದ ಏಳೆಯ ಕುಡಿಯನ್ನು ಸಂಗ್ರಹಿಸಿ, ಒಣಗಿಸಿ ಡಬ್ಬದಲ್ಲಿ ಶೇಖರಿಸಿ ನಂತರ ಎಣ್ಣೆಯಲ್ಲಿ ಅದ್ದಿ ದಾಗ ಹತ್ತಿಯಂತೆ ಹೀರಿಕೊಂಡು ದೀಪ ಉರಿಯಲು ಸಹಾಯಕವಾಗುತ್ತಿತ್ತು. ಇದನ್ನು ನಿತ್ಯ ಆರತಿಗೆ ಬಳಸುತ್ತಿ ದ್ದರು. ನಾಗಸಂಪಿಗೆ ಮರದ ಬೀಜಗಳನ್ನು ಕುಟ್ಟಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ದೀಪಾವಳಿ ಕಾರ್ತಿಕ ಮಾಸೆ ದಲ್ಲಿ ಉಳಿಸುತ್ತಿದ್ದರು. ಜವಾರಿ ಹತ್ತಿ ಗಿಡಗಳು ಬಿಡುತ್ತಿದ್ದ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು. ಹೀಗೆ ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಾಯಿತು.
V. ಕೆಳಗಿನ ಕವಿಗಳ / ಸಾಹಿತಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಬಿರುದು / ಪ್ರಶಸ್ತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.
28. ಸಾರಾ ಅಬೂಬಕ್ಕರ್
ಲೇಖಕಿ ಸಾರಾ ಅಬೂಬಕ್ಕರ್ ಅವರು ಸಾ.ಶ.1936 ಜೂನ್ 30ರಂದು ಕಾಸರಗೋಡಿನಲ್ಲಿ ಜನಿಸಿದರು. ಇವರು ‘ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು. ತಳ ಒಡೆದ ದೋಣಿಯಲಿ’-ಕಾಂದಂಬರಿಗಳನ್ನು, ‘ಚಪ್ಪಲಿಗಳು, ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು. ಪಯಣ’ ಎಂಬ ಕಥಾಸಂಕಲನಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಲಭಿಸಿದೆ.
29. ಕುವೆಂಪು:
‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳ್ಳಿಯಲ್ಲಿ ಸಾ.ಶ. 1904 ರ ಡಿಸೆಂಬರ್ 29 ರಂದು ಜನಿಸಿದರು. ಇವರು ‘ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ’-ಕವನಸಂಕಲನಗಳು, ‘ನನ್ನ ದೇವರು ಮತ್ತು ಇತರ ಕಥೆಗಳು, ಸನ್ಯಾಸಿ ಮತ್ತು ಇತರ ಕಥೆಗಳು’ ಕಥಾಸಂಕಲನಗಳು, ‘ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು, ‘ತಪೋನಂದನ, ರಸೋವೈಸಃ’ – ವಿಮರ್ಶಾ ಸಂಕಲನಗಳು. ‘ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ ಎಂಬ ಮಕ್ಕಳ ಪುಸ್ತಕಗಳು. ‘ಜಲಗಾರ, ಯಮನ ಸೋಲು, ಬೆರಳೆ ಕೊರಳ್’ – ನಾಟಕಗಳು, ‘ನೆನಪಿನ ದೋಣಿಯಲ್ಲಿ’ – ಆತ್ಮಕಥನ ‘ಶ್ರೀರಾಮಾಯಣ ದರ್ಶನಂ’ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಭಾರತೀಯ ಜ್ಞಾನಪೀಠ ಪ್ರಶಸ್ತಿ. ರಾಷ್ಟ್ರಕವಿ, ಪಂಪ ಪ್ರಶಸ್ತಿ, ಗೌರವ ಡಾಕ್ಟರೇಟ್ ಪುರಸ್ಕಾರಗಳು ದೊರೆತಿವೆ.

VII. ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು, ಸಮನ್ವಯಗೊಳಿಸಿ.
31. “ಮನೋರಮೆಯ ಹಣೆ ಬಾಲಚಂದ್ರನಂತೆ ಆಕರ್ಷಣೀಯವಾಗಿತ್ತು”,
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನ ಹೇಳುವುದೇ ಉಪಲಾಲಂಕಾರ.
ಸಮನ್ವಯ: ಉಪಮೇಯ: ಮನೋರಮೆಯ ಹಣೆ
ಉಪಮಾನ: ಬಾಲಚಂದ್ರ
ಉಪಮಾವಾಚಕ: ಅಂತೆ
ಸಮಾನಧರ್ಮ: ಆಕರ್ಷಣೀಯವಾಗಿರವುದು
ಇಲ್ಲಿ ಉಪಮೇಯವಾದ ʼಮನೋರಮೆಯ ಹಣೆಯನ್ನುʼ ಉಪಮಾನವಾದ ʼ ಬಾಲಚಂದ್ರʼ ನಿಗೆ ಹೋಲಿಸಲಾಗಿದೆ. ʼಅಂತೆʼ ಎಂಬ ಉಪಮಾವಾಚಕ ಪದವಿದ್ದು, ʼಆಕರ್ಷಣೀಯವಾಗಿರುವುದುʼ ಎಂಬ ಸಮಾನಧರ್ಮ ಇರುವುದರಿಂದ ಇದು ಉಪಮಾಲಂಕಾರ( ಪೂರ್ಣೋಪಮಾಲಂಕಾರ)ದ ಲಕ್ಷ್ಯವಾಗಿದೆ.
VIII. ಗಾದೆಯನ್ನು ವಿವರಿಸಿ ಬರೆಯುವುದು.
32. ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
ಸಾಕಷ್ಟು ಸಮಯ ಬಳಸಿ ಶ್ರಮವಹಿಸಿ ಮಾಡಿದ ಕೆಲಸವನ್ನು ಹಾಳು ಮಾಡಲು ಕೆಲವೇ ಕ್ಷಣಗಳು ಸಾಕು ಎನ್ನುವುದನ್ನು ಈ ಗಾದೆ ಕುಂಬಾರ, ದೊಣ್ಣೆಗಳ ಉದಾಹರಣೆ ಮೂಲಕ ನಿರೂಪಿಸುತ್ತದೆ.
ಮಡಿಕೆ ಮಾಡಲು ಕುಂಬಾರ ತುಂಬ ಶ್ರಮಪಡಬೇಕು. ಎರೆಮಣ್ಣನ್ನು ತಂದು, ಅದರಲ್ಲಿರುವ ಮರಳು-ಕಲ್ಲುಗಳನ್ನು ಬೇರ್ಪಡಿಸಿ ಹುಡಿ ಮಾಡಬೇಕು. ನೀರು ಹಾಕಿ ತುಳಿದು ತುಳಿದು ಹದ ಮಾಡಬೇಕು. ಕೈಕಾಲುಗಳಿಗೆ ಕೆಸರು ಮೆತ್ತಿಕೊಳ್ಳಬೇಕು. ಹದವಾದ ಮಣ್ಣನ್ನು ತಿಗುರಿಯ ಮೇಲಿಟ್ಟು ತಿರುಗಿಸಿ. ಆಕಾರ ಕೊಡಬೇಕು. ನೀರಿನ ಪಸೆ ಆರಿದ ಮೇಲೆ ಅದನ್ನು ತಟ್ಟಿತಟ್ಟಿ ಬೇಕಾದ ರೂಪಕೊಟ್ಟು ಬಿಸಿಲಿನಲ್ಲಿ ಒಣಗಲು ಬಿಡಬೇಕು. ಆಮೇಲೆ ಆವಿಗೆಯಲ್ಲಿ ವ್ಯವಸ್ಥಿತವಾಗಿ ಕೂಡಿಟ್ಟು ಸುಡಬೇಕು. ಹದವಾಗಿ ಸುಟ್ಟು ಬಿಸಿ ಆರಿದ ಗಡಿಗೆ- ಮಡಿಕೆಗಳನ್ನು ಎಚ್ಚರದಿಂದ ಹೊರತೆಗೆದು ಜೋಡಿಸಿಡಬೇಕು. ಇಷ್ಟೆಲ್ಲ ಕಷ್ಟಪಟ್ಟು ಕುಂಬಾರ ತಯಾರಿಸಿದ ಗಡಿಗೆಯನ್ನು ಪುಡಿ ಮಾಡಲು ದೊಣ್ಣೆಗೆ ಒಂದು ನಿಮಿಷವೂ ಬೇಕಾಗುವುದಿಲ್ಲ ಒಂದೇ ಏಟು ಜೋಡಿಸಿಟ್ಟ ಗಡಿಗೆಗಳನ್ನೆಲ್ಲ ಹಾಳು ಮಾಡಲು ಸಾಕು. ಯಾವುದನ್ನಾದರೂ ಹಾಳುಗೆಡಿಸುವುದು ಸುಲಭ, ರೂಪಿಸುವುದು ಕಷ್ಟ, ಹಾಳು ಮಾಡಲು ಬುದ್ದಿ ಒಳ್ಳೆಯದಲ್ಲವೆಂದು ಈ ಗಾದೆ ಎಚ್ಚರಿಸುತ್ತದೆ.
ಅಥವಾ
ಅತಿ ಆಸೆ ಗತಿಗೇಡು
ಗಾದೆ ವೇದಕ್ಕೆ ಸಮಾನ, ಗಾದೆಸುಳ್ಳದರೂ ವೇದ ಸುಳ್ಳಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
ಮನುಷ್ಯನಿಗೆ ಆಸೆ ಇರಬೇಕು. ಆಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆ ಇಲ್ಲದವ ಬದುಕಲಾರ. ಆಸೆಯೇ ಉತ್ಸಾಹದ ಜನನಿ. ಅದು ಜೀವನದ ಸಂಚಾಲನ ಶಕ್ತಿ. ಆಸೆಯು ಆಸರೆ ಇಲ್ಲದಿದ್ದರೆ ಮನುಷ್ಯ ಕಾಡುಪ್ರಣಿಯಂತೆ ಜೀವಿಸುತ್ತಿದ್ದ. ಆದರೆ ಆಸೆಯೂ ಹಿತಮಿತವಾಗಿರಬೇಕು. ಅತಿಯಾದ ಆಸೆ ದು:ಖಲ್ಲೆ ಮೂಲ ಎಂದು ಬುದ್ದ ಹೇಳಿದ್ದಾನೆ. ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ. ಅತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಪರತಿದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದರೆ ರೈತನೊಬ್ಬನು ಒಂದೆ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯು ಹೊತ್ತವನ್ನು ಸೀಳಿ ಒಂದೂ ಸಿಗದೇ ನಿರಾಸೆಯಾದನು.
ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ವರವನ್ನು ಪಡೆದ ಮೈದಾಸ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿಸಿ ದು:ಖಪಡುತ್ತಾನೆ. ಆಸೆಯೇನೆಂಬುದು ಬಹಳ ಕೆಟ್ಟದ್ದು. ಮನುಷ್ಯನು ಮುಪ್ಪಾನಪ್ಪಿದರು ಆಸೆಯೂ ಬಿಡದು. ಹೀಗೆ ಅತಿ ಆಸೆ ಯಾರಿಗೂ ಇಂದಿಗೂ ಒಳ್ಳೆಯದಲ್ಲ. ಆದ್ದರಿಂದ ಅತಿ ಆಸೆ ಇಲ್ಲವಾದರೆ ಅತಿ ಆಸೆ ಗತಿಕೆಡಿಸುತ್ತದೆ.
33. “ಗುರೂಪದೇಶ ಎಂದರೆ ತಲೆ ನೆರೆಯದೆ ಬರುವ ಮುಪ್ಪು.”
ಆಯ್ಕೆ: ಪ್ರಸ್ತುತ ವಾಕ್ಯವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ರಚಿಸಿರುವ ‘ಕಾಂದಬರಿ’ ಕೃತಿಯಿಂದ ಆಯ್ದ ‘ಶುಕನಾಶನ ಉಪದೇಶ’ ಎಂಬ `ಗದ್ಯಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಶುಕನಾಸನು ಯುವರಾಜನಾದ ಚಂದ್ರ ಪೀಡನಿಗೆ ಅತ್ಯಂತ ಜವಾಬ್ದಾರಿಯುತ ಮಂತ್ರಿಯಾಗಿ ಪ್ರಾಯೋ ಗಿಕ ಹಾಗೂ ಅನುಭವಗಮ್ಯವಾದ ಉಪದೇಶವನ್ನು ಹೇಳುತ್ತಾ, ಗುರೂಪದೇಶ ಎಂಬುದು “ನಿರಿಲ್ಲದ ಮೀಹ, ಬೊಜ್ಜು ಬೆಳೆಯದೆ ಬರುವ ಗುರುತ್ವ, ಬೆಲೆಬಾಳುವ ಕಿವಿಯೋಲೆ, ಪಂಜು ಇಲ್ಲದೆ ಬೆಳಗುವ ಬೆಳಕು, ಉದ್ವೇಗ ಬರಿಸದ ಜಾಗರಣೆ ಎಂದು ಗುರೂಪದೇಶ ಮಹತ್ತ್ವ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ʼ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿʼ ಎಂಬ ಮಾತಿನಂತೆ ಗುರೂಪದೇಶದಿಂದ ಬಾಳು ಬೆಳಗುತ್ತದೆ. ಧನಾತ್ಮಕ ಬದಲಾವಣೆಯಾಗುತ್ತದೆ ಎಂಬ ಮಹತ್ತ್ವ ಸಾರುವ ಈ ಸಾಲು ಅತ್ಯಂತ ಸ್ವಾರಸ್ಯಕರವಾಗಿ ಮೂಡಿಬಂದಿದೆ.
34. “ಅವಂತಿ ಸುಕುಮಾರನೆಂದು ಪೆಸರನಿಟ್ಟಂ”
ಆಯ್ಕೆ: ಪ್ರಸ್ತುತ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ವಡ್ಡಾರಾಧನೆ’ ಕೃತಿಯಿಂದ ಆಯ್ದ ‘ಸುಕುಮಾರಸ್ವಾಮಿಯ ಕಥೆ’ ಎಂಬ ಗದ್ಯಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ವ್ಯಾಪಾರಿಯೋರ್ವ ರತ್ನಗಂಬಳಿಯನ್ನು ಮಾರಲು ರಾಜನಾದ ವೃಷಭಾಂಕ ಮತ್ತು ರಾಣಿ ಜ್ಯೋತಿರ್ಮಾಲೆಯರ ಬಳಿಗೆ ಹೋಗಿ ಅದರ ಬೆಲೆ ಲಕ್ಷದೀನಾರಗಳು ಎಂದಾಗ ಆತ ಕೊಳ್ಳಲಾರದೆ ಕಳುಹಿಸುತ್ತಾನೆ. 5 ನಂತರ ಯಶೋಭದ್ರೆಯ ಬಳಿಗೆ ಹೋಗಿ ಆ ‘ರತ್ನಗಂಬಳಿಯನ್ನು ತೋರಿಸಿದಾಗ ಲಕ್ಷದೀನಾರ ಕೊಟ್ಟು ರತ್ನಗಂಬಳಿಯನ್ನು ಕೊಂಡು ಮೂವತ್ತೆರಡು ತುಂಡುಗಳಾಗಿ ಮಾಡಿ ತನ್ನ ಸೊಸೆಯರಿಗೆ ನೀಡಿದಳು. ಅವರು ತಮ್ಮ ಪಾದುಕೆಗಳಲ್ಲಿ ಸಿಕ್ಕಿಸಿಕೊಂಡ ವಿಷಯ ತಿಳಿದ ರಾಜ ಯಶೋಭದ್ರೆಯ ಮನೆಗೆ ಹೋಗಬೇಕೆಂದು ಇಚ್ಚಿಸಿದಾಗ, ರಾಜನನ್ನು ಆಹ್ವಾನಿಸಿ ಯಶೋಭದ್ರೆ ಸಕಲ ವೈಭೋಗದಿಂದ ಸತ್ಕರಿಸಿದಳು. ಸುಕುಮಾರಸ್ವಾಮಿಯ ಆ ವೈಭೋಗದಿಂದ ಕಂಡು ರಾಜ ಅವನನ್ನು ಹೊಗಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಸಕಲ ಸುಖ ವೈಭೋಗದಿಂದ ಮೆರೆಯುತ್ತಿ ರುವ ಸುಕುಮಾರಸ್ವಾಮಿ ಯನ್ನು ಕಂಡು ಇಂತಹ ಸೌಭಾಗ್ಯ ರಾಜನಾದ ತನ್ನ ಅರಮನೆಯಲ್ಲೂ ಇಲ್ಲ. ಸುಕುಮಾರಸ್ವಾಮಿ ಯಂತಹ ಭಾಗ್ಯವಂತ ಮತ್ತಾರೂ ಇಲ್ಲವೆಂದು ಹೋಗಳುವುದು ಸ್ವಾರಸ್ಯಕರವಾಗಿ ಮೂಡಿಬಂದಿದೆ.
35. ‘ಕಿಜೆದುಪೊನ್ನಂ ತೆಗೆದುಕೊಳ್ವಂ”
ಆಯ್ಕೆ: ಪ್ರಸ್ತುತ ವಾಕ್ಯವನ್ನು ದುರ್ಗಸಿಂಹ ಕವಿ ರಚಿಸಿರುವ ‘ಕರ್ಣಾಟಕ ಪಂಚತಂತ್ರಂ’ ಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ’ ಎಂಬ ಗದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ದುಷ್ಟಬುದ್ಧಿ ಧರ್ಮಬುದ್ಧಿಯವರಿಬ್ಬರೂ ವ್ಯಾಪಾರದಿಂದ ಸಂಪಾದಿಸಿಕೊಂಡು ಬಂದ ಹೊನ್ನನ್ನು ತಮಗೆ ವ್ಯಯಕ್ಕೆ ಬೇಕಾದಷ್ಟು ತೆಗೆದುಕೊಂಡು, ಉಳಿದ ಹೊನ್ನನ್ನು ವಟವೃಕ್ಷದ ಬುಡದಲ್ಲಿ ಹೂತಿಟ್ಟು ತಮ್ಮ ತಮ್ಮ ಮನೆಗೆ ತೆರಳಿದರು. ಕೆಲವು ದಿನಗಳ ನಂತರ ಧರ್ಮಬುದ್ಧಿಯನ್ನು ವಂಚಿಸಿ ದುಷ್ಟಬುದ್ಧಿ ಹೊನ್ನನ್ನು ಕದ್ದೊಯ್ಯುತ್ತಾನೆ. ನಂತರ ತಾನೇ ಧರ್ಮಬುದ್ಧಿಯಲ್ಲಿಗೆ ಬಂದು ಈ ಮೇಲಿನ ಮಾತನ್ನು ದುಷ್ಟಬುದ್ಧಿ ಹೇಳುತ್ತಾನೆ.
ಸ್ವಾರಸ್ಯ: ಆತ್ಮೀಯ ಗೆಳೆಯನಾದ ಧರ್ಮಬುದ್ಧಿಯನ್ನು ವಂಚಿಸುವ, ಮೋಸ ಮಾಡುವ, ದುಷ್ಟಬುದ್ಧಿಯ ಮಿಶ್ರದ್ರೋಹ, ವಿಶ್ವಾಸದ್ರೋಹ, ದುಷ್ಟತನ, ಅವನಲ್ಲಿರುವ ದುರ್ಗುಣಗಳು ಅವನ ಹೆಸರಿಗೆ ತಕ್ಕಂತೆ ಸ್ವಾರಸ್ಯವಾಗಿ ಮೂಡಿಬಂದಿದೆ.
36. “ಹರಿಯ ಹಗೆ ಹೊಗೆದೋರದುರುಹದೇ ಬರಿದೆ ಹೋಹುದೆ”
ಆಯ್ಕೆ: ಪ್ರಸ್ತತ ವಾಕ್ಯವನ್ನು ಕುಮಾರವ್ಯಾಸ ವಿರಚಿತ ‘ಕರ್ನಾಟಕ ಭಾರತ ಕಥಾಮಂಜರಿ’ ಕಾವ್ಯದಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ದಾನಶೂರ ಕರ್ಣನು ಯುದ್ಧದಿಂದ ವಿಮುಖನಾದರೆ ಪಾಂಡವರಿಗೆ ಜಯ ಸಾಧ್ಯ ಎಂಬುದನ್ನು ಅರಿತಿದ್ದ ಶ್ರೀಕೃಷ್ಣನು ಭೇದ ತಂತ್ರದ ಮೂಲಕ ಕರ್ಣನ ಜನ್ಮರಹಸ್ಯ ತಿಳಿಸಿ ಕರ್ಣನ ಬಲ ಕುಗ್ಗಿಸಿ ದುರ್ಯೋಧನನ ಶಕ್ತಿ ಕುಗ್ಗುವಂತೆ ಮಾಡುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
37. “ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು”
ಆಯ್ಕೆ: ಪ್ರಸ್ತು ವಾಕ್ಯವನ್ನು ರನ್ನ ಕವಿ ವಿರಚಿತ ‘ಸಾಹಸ ಭೀಮ ವಿಜಯಂ’ ಮಹಾಕಾವ್ಯದಿಂದ ಆಯ್ದ ‘ಛಲಮನೆ ಮೆಣಿವೆಂ’ ಎಂಬ ಪದ್ಯಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಬಾಳಲು ನೀಡಿದ ಭೀಷ್ಮರ ಸಲಹೆಯನ್ನು ತಿರಸ್ಕರಿಸಿದ ದುರ್ಯೋಧನ ತಾನು ನೆಲಕ್ಕಾಗಿ ಹೋರಾಡುತ್ತಿಲ್ಲ ಛಲಕ್ಕಾಗಿ ಹೋರಾಡುತ್ತೇನೆ. ಕರ್ಣನನ್ನು ಕೊಲ್ಲಿಸಿದ ಈ ಭೂಮಿ ನನಗೆ ಹಾಳು ಭೂಮಿ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ತನ್ನ ಸಹೋದರ ಮತ್ತು ಸ್ನೇಹಿತನನ್ನು ಕೊಂದ ಭೀಮಾರ್ಜುನರ ಮೇಲಿದ್ದ ಕೋಪ, ಯುದ್ಧವನ್ನು ಮಾಡಿಯೇ ತೀರಬೇರೆಂಬ ದುರ್ಯೋಧನನ ಛಲಗ ಗುಣ ಅವನ ಸ್ವಭಾವಕ್ಕೆ ತಕ್ಕುದಾಗಿ ಮೂಡಿ ಬಂದಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.
38. “ವಿದ್ಯಾಧನಮೆ ಧನಮಪ್ಪುದು”
ಆಯ್ಕೆ: ಪ್ರಸ್ತುತ ವಾಕ್ಯವನ್ನು ಆದಿಕವಿ ಪಂಪ ವಿರಚಿತ ವಿಕ್ರಮಾರ್ಜುನ ವಿಜಯಂʼ ಕಾವ್ಯದಿಂದ ಆಯ್ದ ʼಕೆಮ್ಮನೆ ಮೀಸೆವೊತ್ತೆನೇʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ದ್ರೋಣಾಚಾರ್ಯರಿಗೆ ಬಡತನ ಬಂದಿದ್ದರಿಂದ ಅಶ್ವತ್ಥಾಮನೊಂದಿಗೆ ಪರಶುರಾಮರ ಬಳಿಗೆ ಸಂಪತ್ತನ್ನು ಬೇಡಲು ಬರುತ್ತಾರೆ. ಆ ವೇಳೆಗೆ ಪರಶುರಾಮನು ತನ್ನಲ್ಲಿದ್ದ ಸಕಲವನ್ನೂ ಬೇಡಿದವರಿಗೆ ಮತ್ತು ಭೂಮಿಯನ್ನು ಗುರುಗಳಿಗೆ ದಾನಮಾಡಿ ಜಟಾಧಾರಿಯಾಗಿ ನಾರುಮಡಿಯನ್ನುಟ್ಟು ತಪೋವನಕ್ಕೆ ಹೋಗಲು ಸಿದ್ಧನಾಗಿದ್ದನು. ಈಗ ನನ್ನ ಬಳಿಯಿರುವುದು ಕೆವಲ ಬಿಲ್ಲು ಮತ್ತು ಬಾಣಗಳ ಸಮೂಹ ಮಾತ್ರ ಎಂದು ಹೇಳುತ್ತಾನೆ. ಈ ಸಂದರ್ಭದಲ್ಲಿ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಎಲ್ಲಾ ಸಂಪಾದನೆಗಿಂತ ಶ್ರೇಷ್ಠವಾದದ್ದು ವಿದ್ಯೆ. ವಿದ್ಯೆಯಿಂದ ಸಂಪತ್ತನುಗಳಿಸಬಹುದು. ಶ್ರೇಷ್ಠವಾದ ವಿದ್ಯೆಯನ್ನು ಸಂಪತ್ತು ಎಂದು ಭಾವಿಸಿ ಬೇಡಿರುವುದು ಔಚಿತ್ಯಪೂರ್ಣವಾಗಿ ಮೂಡಿಬಂದಿದೆ.
X. ಪದ್ಯಭಾಗ ಪೂರ್ಣ ಮಾಡುವುದು
39. ಹಕ್ಕಿ ಹಾರುತಿದೆ ನೋಡಿದಿರಾ?
ನೀಲಮೇಘಮಂಡಲ-ಸಮ ಬಣ್ಣ ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ?
ಅಥವಾ
ಯುಗ-ಯುಗಗಳ ಹಣೆ ಬರೆಹವ ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ ರೆಕ್ಕೆಯ ಬೀಸುತ ಚೇತನಗೊಳಿಸಿ ಹೊಸಗಾಲದ ಹಸುಮಕ್ಕಳ ಹರಸಿ ಹಕ್ಕಿ ಹಾರುತಿದೆ ನೋಡಿದಿರಾ?
XI. ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಮೌಲ್ಯವನ್ನಾದರಿಸಿ ಸಾರಾಂಶ ಬರೆಯುವುದು:
40. ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ!
ಬಿಗಿದು ಕದಳೀದ್ರುಮಕೆ ಕಟ್ಟಲೆ ಮುನಿಸುತರ್!
ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು|
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ।
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ
ನಗಡುತನದಿಂದ ಬಿಲ್ಲಿರುವನೇರಿಸಿ ತೀಡಿ ಜೇಗೈದು
ನಿಂತಿರ್ದನು||
ಪ್ರಸ್ತುತ ಪದ್ಯಭಾಗವನ್ನು ಲಕ್ಷ್ಮೀಶ ಕವಿ ರಚಿಸಿರುವ ‘ವೀರಲವ’ ಎಂಬ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಬ್ರಹ್ಮಹತ್ಯಾ ದೋಷದ ಪರಿಹಾರಕ್ಕಾಗಿ ಶ್ರೀರಾಮನು ಕೈಗೊಂಡ ಅಶ್ವಮೇಧುಯಾಗದ ಕುದುರೆ ದೇಶದೆಲ್ಲೆಡೆ ಸಂಚರಿಸುತ್ತಿರುವಾಗ ರಾಜ ಮಹಾರಾಜರೆಲ್ಲ ಅದನ್ನು ಕಟ್ಟಲಾದರೆ ನಮಿಸಿ ಕಳುಹಿಸುತ್ತಾರೆ. ವರುಣ ಲೋಕಕ್ಕೆ ತೆರಳುವ ಮುನ್ನ ವಾಲ್ಮೀಕಿ ಮಹರ್ಷಿಗಳು ಲವನನ್ನು ತೋಟದ ಕಾವಲಿಗೆ ನೇಮಿಸುತ್ತಾರೆ. ಲವ ತನ್ನ ಸ್ನೇಹಿತರೊಡನೆ ಆಟವಾಡುತ್ತಿದ್ದಾಗ ಕುದುರೆ ವಾಲ್ಮೀಕಿ ಋಷಿಯ ಆಶ್ರಮದ ತೋಟವನ್ನು ಚೆನ್ನಾಗಿ ತುಳಿಯುತ್ತಿರುವುದನ್ನು ಕಂಡು ಕುದುರೆಯ ಬಳಿಗೆ ಬಂದು ಕುದುರೆಯ ಹಣೆಯ ಮೇಲೆ ಹೊಳೆವ ಪಟ್ಟದ ಲಿಖಿತವನ್ನು ಕಂಡು ಓದಿಕೊಳ್ಳುತ್ತಾನೆ. ಸಮರ್ಥರಾವರು ಯಾರಾದರೂ ಇದ್ದರೆ ಕುದುರೆಯನು ತಡೆಯಿರಿ ಎಂದಿದ್ದ ಲೇಖನವನ್ನು ಓದಿ ಈ ರಾಮನ ಗರ್ವ ವನ್ನು ಬಿಡಿಸಬೇಕೆಂದು ತನ್ನ ಉತ್ತರೀಯದಿಂದ ಕುದುರೆಯ ಕುತ್ತಿಗೆಗೆ ಬಿಗಿದು ಬಾಳೆಗಿಡಕ್ಕೆ ಕಟ್ಟುತ್ತಾನೆ. ಇದನ್ನು ನೋಡಿದ ಋಷಿ ಪುತ್ರರು ಹೆದರಿ ನಡುಗಿ ಬೇಡಬೇಡ ಅರಸರ ಕುದುರೆಯನ್ನು ಬಿಡು ಇಲ್ಲದಿದ್ದರೆ ನಮ್ಮನ್ನು ಬಿಡಿವರು ಎಂದು ಹೇಳಿದಾಗ, ಲವನು ಪಾರ್ವರ ಮಕ್ಕಳ ಹೆದರಿದೆ ಜಾನಕೊಯ ಮಗನಿದಕ್ಕೆ ಹೆದರುವುದಿಲ್ಲ ನೀವು ಇಲ್ಲಿಂದ ಹೊರಟುಹೋಗಿ ಎಂದು ಶೌರ್ಯದಿಂದ ಬಿಲ್ಲನ್ನು ಸಿದ್ಧಪಡಿಸಿ ಜೈ ಎಂದು ನಿಲ್ಲುತ್ತಾನೆ.
ಲವನು ಹುಟ್ಟಿದ್ದು ಋಷ್ಯಾಶ್ರಮದಲ್ಲಾದರೂ ಸಹಜ ಕ್ಷಾತ್ರಗುಣ ವೀರತೆಯಿಂದ ಕುದುರೆಯನ್ನು ಕಟ್ಟುತ್ತಾನೆ ಕಷ್ಟ ಸವಾಲುಗಳು ಬಂದಾಗ ಚಿಕ್ಕವರು, ಅಸಮರ್ಥರು ಎಂದು ಕೂರದೆ ದಿಟ್ಟ ತನದಿಂದ ಎದರಿಸಬೇಕೆಂಬ ಬಾಲ್ಯಸಹಜ ಸಾಹಸ ಪ್ರವೃತ್ತಿ ಹಾಗೂ ಋಷಿ ಪುತ್ರರ ಸಾಧು ಸ್ವಾಭಾವ, ಲವನ ಕ್ಷಾತ್ರಗುಣ, ಸೀತೆ ಲವನನ್ನು ಬೆಳೆಸಿದ ರೀತಿ ಇಲ್ಲಿ ಅಡಕವಾಗಿರುವ ಮೌಲ್ಯವಾಗಿದೆ.
XII. ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸುವುದು:
41. ‘ತಾಳಿದವನು ಬಾಳಿಯಾನು’ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ? ವಿವರಿಸಿ.
ಮತಂಗಾಶ್ರಮದಲ್ಲಿ ವಾಸವಿದ್ದ ಪರಮ ರಾಮಭಕ್ತಿಯಾದ ಶಬರಿಯು ತಮ್ಮ ಗುರುಗಳ ಕಾಲಾನಂತರ ರಾಮನ ದರ್ಶನದ ನಿರೀಕ್ಷೆಯಲ್ಲಿ ಸದಾ ರಾಮ ಜಪ ಮಾಡುತ್ತಾ ಹಲವಾರು ವರ್ಷಗಳ ಕಾಲ ರಾಮನ ಬರುವಿಕೆಯ ಭರವಸೆಯಿಂದ ರಾಮನಿಗಾಗಿ ಪ್ರತಿನಿತ್ಯ ಹೂವು, ಹಣ್ಣು, ಮಧುಪರ್ಕ, ಮಾಲೆಯನ್ನು ಕಟ್ಟಿ ವೇದಿಯನ್ನು ಶೃಂಗರಿಸುತ್ತಾ ಸ್ವಲ್ಪವೂ ಬೇಸರಗೊಳ್ಳದೆ ಪ್ರತಿನಿತ್ಯ ಶ್ರದ್ದೆಯಿಂದ ರಾಮನಿಗಾಗಿ ಕಾತರಿಸಿ ಕಾಯುತ್ತಿದ್ದಳು. ಅತ್ಯಂತ ವೃದ್ಧಿಯಾದರೂ ರಾಮನ ಬರುವಿಕೆಯ ಭರವಸೆಯಿಂದ ರಾಮಧ್ಯಾನದಲ್ಲಿದ್ದಾಗ ವನವಾಸ ದಲ್ಲಿದ್ದ ಶ್ರೀರಾಮನು ಸೀತೆಯನ್ನು ಕಳೆದುಕೊಂಡು, ಆಕೆಯನ್ನು ಹುಡುಕುತ್ತಾ ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಕಬಂಧ ರಾಕ್ಷಸ ಅಡ್ಡ ಬಂದಾಗ ಆತನನ್ನು ಸಂಹರಿಸಿ ಮುಕ್ತಿ ನೀಡಿ ಆತನಿಂದ ಸುಗ್ರೀವ ಮತ್ತು ತಮಗಾಗಿ ಕಾಯುತ್ತಿರುವ ಶಬರಿಯ ಬಗ್ಗೆ ತಿಳಿದು ಶಬರಿಯನ್ನು ಅರಸಿ ಮತಂಗಾಶ್ರಮಕ್ಕೆ ಬರುತ್ತಾರೆ. ಅಲ್ಲಿ ರಾಮನ ಬರುವಿಕೆಯಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಶಬರಿಯನ್ನು ಕಂಡು ಅವಳಿಗೆ ದರ್ಶನವನ್ನು ನೀಡುತ್ತಾರೆ. ರಾಮಲಕ್ಷ್ಮಣರ ದರ್ಶನದಿಂದ ಪುನೀತಳಾದ ಶಬರಿಯು ರಾಮಲಕ್ಷ್ಮಣರನ್ನು ಅತ್ಯಂತ ಆದರದಿಂದ ಸತ್ಕರಿಸಿ ತನ್ನ ಮನದ ಬಯಕೆಯನ್ನು ಬಹುಕಾಲದ ಸಂಕಲ್ಪವನ್ನು ಪೂರೈಸಿಕೊಳ್ಳುತ್ತಾಳೆ. ಕೊನೆಗೆ ರಾಮಲಕ್ಷ್ಮಣರಿಂದ ಮುಕ್ತಿಯನ್ನು
ಪಡೆದುಕೊಳ್ಳುತ್ತಾಳೆ. ಹೀಗೆ ಶಬರಿಯು ‘ತಾಳಿದವನು ಬಾಳಿಯಾನು’ ಎಂಬ ಮಾತಿನಂತೆ ಸುದೀರ್ಘಕಾಲ ಕಾಯ್ದು ರಾಮನ ದರ್ಶನ ಪಡೆದದ್ದು ಅವಳ ತಾಳ್ಮೆ ಮತ್ತು ನಂಬಿಕೆಗೆ ಸಾಕ್ಷಿ ಎನ್ನುವಂತಿದೆ.
ಅಥವಾ
ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನ ನಿಮ್ಮ ಮಾತುಗಳಲ್ಲಿ ಬರೆಯಿರಿ.
‘ನಂಬಿ ಕೆಟ್ಟವರಿಲ್ಲ’ ಎಂಬ ಮಾತಿನಂತೆ ಅಯೋಧ್ಯಾ ಪುರುಷ ರಾಮನ ದರ್ಶನವೇ ಬಾಳಿನ ಅತಿದೊಡ್ಡ ಮತ್ತು ಅಂತಿಮ ಆಸೆಯೆಂದು ಕಾಯುತ್ತಿದ್ದ ಮತಾಂಗಾಶ್ರಮದ ವಾಸಿ ಪ್ರೇಮಶುದ್ದೆ ಶಬರಿಯು ಅನಂತ ಕಾಲದಿಂದ ಶ್ರೀರಾಮನ ದರ್ಶನಕ್ಕಾಗಿ ಕಾಯುತ್ತಿದ್ದಳು. ರಾಮಬಾರದೆ ನನಗೇನು ತೋರದೆ ಎನ್ನುತ್ತಾ ರಾಂಜಪವನ್ನು ನಿಷ್ಠೆಯಿಂದ ಭಜಿಸುತ್ತಿದ್ದಳು. ಒಮ್ಮೆ ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ. ಆಗ ಅಲ್ಲಿ ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ. ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆಧರಿಸಿ, ಆನಂದಿಸಿ ಮಾತೃಭಾವದಿಂದ ಸೇವೆಯನ್ನು ಮಾಡಿ ತೃಪ್ತಳಾಗಿ ತನ್ನ ಮನದ ಇಂಗತವನ್ನು ಪೂರೈಸಿಕೊಂಡು ಭಕ್ತಿಯ ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಿದ ಶಬರಿಯು * ‘ತಾಳಿದವರನು ಬಾಳಿಯಾನು’ ಎಂಬ ಮಾತಿನಂತೆ ತನ್ನ ಪರಿಶುದ್ಧ ಪ್ರೇಮ ಭಕ್ತಿಯಿಂದ ಮತಂಗ ಮುನಿಗಳು ಹೇಳಿದ ಮಾತಿನಂತೆ ರಾಮದರ್ಶನ ಮಾಡಿ ನಂತರ ಅವರಿಂದಲೇ ಮುಕ್ತಿಯನ್ನು ಪಡೆದ ಪರಿ ಗುರುಗಳ ಮೇಲಿದ್ದ ನಂಬಿಕೆ. ವಿಶ್ವಾಸ ಹುಸಿಯಾಗಲಿಲ್ಲ. ಎಂಬುದು ಶಬರಿ ಗೀತನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ. ಹೀಗೆ ಧನ್ಯತೆಯ ಭಾವನೆಯಿಂದ ಮುಕ್ತಿ ಬಯಸಿದ ಶಬರಿಯ ಚಿಂತೆ ಹಿಂಗಿಹೋಯಿತು.
42. ಹಲಗಲಿ ದಂಗೆಯ ಪರಿಣಾಮವೇನು? ವಿವರಿಸಿ.
ಸ್ವಾತಂತ್ರ್ಯ ವೀರ ಹೋರಾಟಗಾರರು. ಸ್ವಾಭಿಮಾನಿಗಳೂ ಅದ ಹಲಗಲಿ ಬೇಡರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಡಿಷರು ಭಾರತದ ಮೇಲೆ ‘ನಿಶ್ಯಸ್ತ್ರೀಕರಣ’ ಕಾಯ್ದೆಯನ್ನು ಜಾರಿಗೆ ತಂದರು. ಹನುಮ, ಬಾಲ, ಜಡಗ, ರಾಮ ಮುಂತಾದ ಹಲಗಲಿಯ ಪ್ರಮುಖ ಬೇಡರು ನಿಶ್ಯಸ್ತ್ರೀಕರಣ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ. ಸಿಪಾಯಿಗೆ ಕಪಾಳಕ್ಕೆ ಹೊಡೆದು ಕಳುಹಿಸುತ್ತಾರೆ. ಈ ದುಃಖದ ಸುದ್ದಿ ತಿಳಿದು ಬ್ರಿಟಿಷ್ ಅಧಿಕಾರಿ ಸಿಟ್ಟಿನಿಂದ ಕುದುರೆಯೊಂದಿಗೆ ಸೈನಿಕರನ್ನು ಹಲಗಲಿಯ ಮೇಲೆ ಕಳುಹಿಸುತ್ತಾರೆ. ಆ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಮತ್ತು ಹಲಗಲಿಯ ಹೋರಾಟಗಾರರ ನಡುವೆ ಭೀಕರ ಯುದ್ಧ ನಡೆಯುತ್ತದೆ. ಸಿಕ್ಕ ಸಿಕ್ಕ ಜನರ ಮೇಲೆ ಕರುಣೆಯಿಲ್ಲದ ಹಾಗೆ ಬ್ರಿಟಿಷ್ ಸೈನ್ಯ ಗುಂಡು ಹಾಡಿಸುತ್ತದೆ. ಹೆಬಲಕ್ ಸಾಹೇಬ ಬಂದು ಬುದ್ಧಿಮಾತು ಹೇಳುತ್ತಾನೆ. ಆದರೂ ಇವನ ಮಾತನ್ನು ನಂಬಲಿಲ್ಲ ಇವರು ಘಾತುಕರು ಎನ್ನುತ್ತಾ ಹೆಬಲಕ್ ಸಾಹೇಬರಿಗೆ ಗುಂಡು ಹೊಡೆದು ಕೊಲ್ಲುತ್ತಾರೆ. ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಈ ಕಾರಣದಿಂದ ಕಾರ ಸಾಹೇಬ ದೊಡ್ಡ ದುಂಡನ್ನು ಹಲಗಲಿಗೆ ಕರೆಸಿಕೊಂಡು ಹಲಗಲಿಯ ಮೇಲೆ ದಾಳಿ ಮಾಡಿಸುತ್ತಾನೆ. ಹಲಗಲಿಯ ಹೋರಾಟಗಾರರು ಮುನ್ನೂರು, ಐನುರು, ಸಾವಿರ ಮಂದಿಗೆ ಒಬ್ಬೊಬ್ಬರು ಎದುರಾಗಿ ನಿಲ್ಲುತ್ತಾರೆ. ಕುದುರೆಗಳನ್ನು ಕಡಿಯುತ್ತಾರೆ. ರಕ್ತದ ಕಾಲುವೆಯೇ ಹರಿಯುತ್ತದೆ. ಹೀಗೆ ಹೋರಾಡುತ್ತಲೇ ವೀರಮರಣ ಹೊಂದುತ್ತಾರೆ. ಬ್ರಿಟಿಷ್ ಸೈನ್ಯ ಸಿಕ್ಕದ್ದನ್ನೆಲ್ಲ ದೋಚಿಕೊಂಡು ಹಲಗಲಿಯನ್ನು ಸುಟ್ಟು ಗುರುತುಳಿಯದಂತೆ ಮಾಡುತ್ತಾರೆ.
ಅಥವಾ
ಹಲಗಲಿ ದಂಗೆಗೆ ಕಾರಣವಾದ ಅಂಶಗಳು ಮತ್ತು ಬ್ರಿಟಿಷ್ ಸರ್ಕಾರ ನಿಯಂತ್ರಿಸಿದ ಬಗೆಯನ್ನು ಕುರಿತು ಬರೆಯಿರಿ.
೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಸರಕಾರ ಭಾರತೀಯರ ಮೇಲೆ ‘ನಿಶ್ಯಸ್ತ್ರೀಕರಣ’ ಆದೇಶವನ್ನು ಹೊರಡಿಸಿತು. ಆಯುಧಗಳಿಲ್ಲದೆ ಬುಕು ನಡೆಸುವುದು ಕಷ್ಟ ತಮ್ಮ ಜೀವನಾಧಾರವಾಗಿದ್ದ ಆಯುಧ ಗಳನ್ನು ಕೊಡಲೊಪ್ಪದೆ ಪ್ರಮುಖವಾಗಿ ಬಆಲ, ಹನುಮ, ಜಡಗ, ಭೀಮ ಇವರು ಹಲಗಲಿಯ ಬೇಡರನ್ನೆಲ್ಲ ಒಟ್ಟೂ ಗೂಡಿಸಿ ತಾವೇ ಮುಂದೆ ನಿಂತು ಜೀವ ಹೋದರೂ ಶಸ್ತ್ರಾಸ್ತ್ರ ಒಪ್ಪಿಸೆವು ಎಂದು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ. ಆದೇಶ ತಂದ ಕಂಪನಿ ಸರಕಾರದ ಸಿಪಾಯಿಯನ್ನು ಬೇಡರು ಹೊಡೆ ಯುತ್ತಾರೆ. ಈ ಸುದ್ದಿ ಸಾಹೇಬರಿಗೆ ತಲುಪಿ ಕೋಪದಿಂದ ದಂಡು ಕಳಸಿಸ ಹಲಗಲಿಯ ಮೇಲೆ ಗುಂಡಿನ ಮಳೆಗರೆದರು. ಬೆನ್ನುಹತ್ತಿ ಹೊಡೆದರು. ನಿಷ್ಕರುಣೆಯಿಂದ ಕೊಂದು ಹಾಕುತ್ತಾರೆ. ಕೋಪಗೊಂಡ ಬ್ರಿಟಿಷ್ ಅಧಿಕಾರಿ ಹಲಗಲಿಯನ್ನು ಲೂಟಿ ಮಾಡಲು ಆದೇಶ ನೀಡುತ್ತಾನೆ. ಧೈರ್ಯದಿಂದ ಎದೆಗುಂದದೆ ಸಾವಿರ ಸಾವಿರ ಬ್ರಿಟಿಷರ ಸೈನಿಕರನ್ನು ಹಲಗಲಿಯ ಬೇಡರು” ಎದುರಿಸುತ್ತಾರೆ. ಧೈರ್ಯದಿಂದ ಎದೆಗುಂದದೆ ವೀರಾವೇಶ ದಿಂದ ಹೋರಾಡಿ ವೀರಮರಣ ಹೊಂದುತ್ತಾರೆ. ಇಷ್ಟೆ ಸುಮ್ಮನಾಗದ ಬ್ರಿಟಿಷ್ ಸೈನಿಕರು ಇನಬಳಕೆಯ ವಸ್ತುಗಳನ್ನು ಬಿಡದೆ ದೋಚಿಕೊಂಡು ಊರಿಗೆ ಕೊಳ್ಳಿ ಇಟ್ಟು ಹಲಗಲಿಯನ್ನು ಬೂದಿ ಮಾಡಿ ಬಿಡುತ್ತಾರೆ. ಹೀಗೆ ಬ್ರಿಟಿಷ್ ಸರ್ಕಾರ ಹಲಗಲಿ ಬೇಡರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು.
XIII. ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.1×4=4(2+2)
43. ವೇಳೆಯ ಅಪವ್ಯಯ ಅಂಬೇಡ್ಕರ್‌ರಿಗೆ ಅಪರಾಧವಾಗಿ ಕಾಣುತ್ತಿತ್ತು. ಒಂದು ಕ್ಷಣವನ್ನೂ ಅವರು ಅಪವ್ಯಯ ಮಾಡು ತ್ತಿರಲಿಲ್ಲ. ವ್ಯಾಪಾರಿಗೆ ವೇಳೆ ಎಂದರೆ ಹಣ ಅಂಬೇಡ್ಕರ್‌ರಿಗೆ ವೇಳೆ ಎಂದರೆ ಜ್ಞಾನಾರ್ಜನೆ. ತಮ್ಮ ಬದುಕಿನ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯದ ನಮ್ಮ ಕಾಲದ ಇಬ್ಬರು ಮಹನೀಯರೆಂದರೆ ಒಬ್ಬರು ಗಾಂಧೀಜಿ ಮತ್ತೊಬ್ಬರು ಅಂಬೇಡ್ಕರ್‌ರು. ಕಳೆದ ಕ್ಷಣ ಕಳೆದೇ ಹೋಗುತ್ತದೆಂಬ ಅರಿವು ಅವರದಾಗಿತ್ತು. ಅಮೆರಿಕದಲ್ಲಿ ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ ಹೇಗೋ ಹಾಗೆ ಹಿಂತಿರುಗಿ ಸಾರ್ವಜನಿಕ ಜೀವನದಲ್ಲಿ ತೊಡಗಿದ ಮೇಲೆಯೂ ತಮ್ಮ ಬಿಡುವನ್ನೆಲ್ಲ ಅವರು ಓದು ವುದಕ್ಕೆ ಮೀಸಲಾಗಿರಿಸುತ್ತಿದ್ದರು: ರಂಜನೆಗಾಗಿ ಓದುವವರು ಅವರಲ್ಲ ಪುಸ್ತಕ ಒದಗಿಸಬಲ್ಲ ಬೋಧನೆಯೇ ರಂಜನೆ ಎನ್ನುವುದು ಅವರ ಸೂತ್ರವಾಗಿತ್ತು. ಹೀಗಾಗಿ ಗ್ರಂಥ ಸಹವಾಸ ಅವರಿಗೆ ಅಪಾರ ಸಂತೋಷವನ್ನಲ್ಲದೆ ಬಯಸುತ್ತಿದ್ದ ಏಕಾಂತವನ್ನೂ ಒದಗಿಸುತ್ತಿತ್ತು. ಅನೇಕ ಸಲ ರಾತ್ರಿಯುದ್ದಕ್ಕೂ ಅವರು ಓದು ಬರಹಗಳಲ್ಲಿ ತೊಡಗಿಸುತ್ತಿದ್ದುದ್ದುಂಟು. ಅವರ ನೆಚ್ಚಿನ ನಾಯಿ ಬೆಳಗಿನ ನೇವರಿಕೆಗಾಗಿ ಬಂದು ಕಾಲಬಳಿ ಸುಳಿದಾಗಲೇ ರಾತ್ರಿ ಕಳೆದುಹೋದ ಅರಿವು ಅವರಿಗಾದದ್ದುಂಟು. ರಾತ್ರಿ ಮನೆಗೆ ಹೋಗುತ್ತೇನೆಂದು ಹೇಳಿ ಹೊರಟುಹೋದ ಕಾರ್ಯದರ್ಶಿ ಬೇಳಗಿನಲ್ಲಿ ಮತ್ತೆ ಬಂದಾಗ ಮನೆಗೇಕೆ ಇನ್ನೂ ಹೋಗಲಿಲ್ಲ ಎಂದು ಕೇಳಿದ್ದುಂಟು. ಅಂಥ ಏಕಾಗ್ರತೆಯ ಓದು ಬರಹ ಅವರದು. ಅವರ ಜ್ಞಾನದಾಹ ಪುರಾತನ ಕಾಲದ ಚಕ್ರವರ್ತಿಯೊಬ್ಬನ ಸಾಮ್ರಾಜ್ಯದಾಹದಂತಿತ್ತು. ದಟ್ಟಡ ವಿಯ ಮಧ್ಯದಲ್ಲಿ ಗ್ರಂಥಾಲಯ ಒಂದನ್ನು ನಿರ್ಮಿಸಿಕೊಂಡು ತಮ್ಮ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬೇಕೆಂಬ ಅಭಿಲಾಷೆ ಅವರದಾಗಿತ್ತು.
ಪ್ರಶ್ನೆಗಳು:
ಅ) ಅಂಬೇಡ್ಕರರ ಜ್ಞಾನದಾಹ ಹೇಗಿತ್ತು?
ಅಂಬೇಡ್ಕರರ ಜ್ಞಾನದಾಹ ಪುರಾತನ ಕಾಲದ ಚಕ್ರವರ್ತಿಯೊಬ್ಬನ ಸಾಮ್ರಾಜ್ಯದಾಹದಂತ್ತಿತ್ತು. ದಟ್ಟಡವಿಯ ಮಧ್ಯದಲ್ಲಿ ಗ್ರಂಥಾಲಯ ಒಂದನ್ನು ನಿರ್ಮಿಸಿಕೊಂಡು ತಮ್ಮ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬೇಕೆಂಬ ಅಭಿಲಾಷೆ ಅವರದಾಗಿತ್ತು.
ಬ) ಅಂಬೇಡ್ಕರರು ತಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತಿದ್ದರು?
ಅಂಬೇಡ್ಕರರು ತಮ್ಮ ಬಿಡುವನ್ನೆಲ್ಲ ಅವರು ಓದುವುದಕ್ಕೆ ಮೀಸಲಾಗಿರಿಸುತ್ತಿದ್ದರು. ರಂಜನೆಗಾಗಿ ಓದುವವರು ಅವರಲ್ಲ; ಪುಸ್ತಕ ಒದಗಿಸಬಲ್ಲ ಬೋಧನೆಯೇ ರಂಜನೆ ಎನ್ನುವುದು ಅವರ ಸೂತ್ರವಾಗಿತ್ತು. ಹೀಗಾಗಿ ಗ್ರಂಥ ಸಹವಾಸ ಅವರಿಗೆ ಅಪಾರ ಸಂತೋಷವನ್ನಲ್ಲದೆ ಬಯಸುತ್ತಿದ್ದ ಏಕಾಂತವನ್ನೂ ಒದಗಿಸುತ್ತಿತ್ತು. ಅನೇಕ ಸಲ ರಾತ್ರಿಯುದ್ದಕ್ಕೂ ಅವರು ಓದು ಬರೆಹಗಳಲ್ಲಿ ತೊಡಗಿರುತ್ತಿದ್ದುದ್ದುಂಟು.
XIV. ಪತ್ರಲೇಖನ ಬರೆಯುವುದು : 1×4=4 (2+2)
44. ನಿಮ್ಮನ್ನು ಧಾರವಾಡದ ನಿವಾಸಿ ‘ಹರ್ಷಿತಾ’ ಎಂದು ಭಾವಿಸಿಕೊಂಡು, ನಿಮ್ಮ ಬಡಾವಣೆಯಲ್ಲಿ ‘ಸಾರ್ವಜನಿಕ ಶೌಚಾಲಯ’ ನಿರ್ಮಿಸಿಕೊಡುವಂತೆ ಕೋರಿ
ಮಹಾನಗರ ಪಾಲಿಕೆಯ ಆಯುಕ್ತರಿಗೆ ಪತ್ರವನ್ನು ಬರೆಯಿರಿ.
ರವರಿಂದ,
ದಿನಾಂಕ: 12.04.2024
ಶ್ರೀಮತಿ, ಹರ್ಷಿತಾ
ಸಮಾಜ ಸೇವಕಿ
ನೆಹರು ಬಡಾವಣೆ
ಧಾರವಾಡ
ರವರಿಗೆ,
ಆಯುಕ್ತರು
ಮಹಾನಗರ ಪಾಲಿಕೆ
ಧಾರವಾಡ
ಮಾನ್ಯರೇ,
ವಿಷಯ : ತಮ್ಮ ಬಡಾವಣೆಗೆ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಕೊಡುವುದರ ಮೂಲಕ.
ನಮ್ಮ ಬಡಾವಣೆಯಲ್ಲಿ ಸಾಕಷ್ಟು ಮಂದಿ ದಿನಗೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಅವರಿಗೆ ಶೌಚಾಲಯದ ಕೊರತೆ ಇದೆ. ಅದರಲ್ಲಿ ಹೆಣ್ಣು ಮಕ್ಕಳಿಗೆ, ಹೆಂಗಸರಿಗೆ ಬಹಳ ತೊಂದರೆಯಾಗಿದೆ. ಆದ್ದರಿಂದ ನಮ್ಮ ನೆಹರು ಬಡಾವಣೆಯ ಜನರಿಗೆ ಬಹಳ ಅತ್ಯಾವಶ್ಯಕವಾಗಿ ಶೌಚಾಲಯದ ಅಗತ್ಯವಿರುವುದರಿಂದ ಸಾಧ್ಯವಾದಷ್ಟು ಬೇಗ ಒಂದು ಶೌಚಾಲಯವನ್ನು ನಿರ್ಮಿಸಿ ಕೊಡ ಬೇಕಾಗಿ ಕೋರುತ್ತೇನೆ.
ತಮ್ಮ ವಿಶ್ವಾಸಿನಿ,
ಸಹಿ
(ಹರ್ಷಿತಾ)
ಅಥವಾ
ನಿಮ್ಮನ್ನು ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯ ‘ಅಥರ್ವ’ ಎಂದು ಭಾವಿಸಿ ಕೊಂಡು, ‘ಶಾಲೆಯಲ್ಲಿ ಆಚರಿಸಿದ ವಾರ್ಷಿಕೋತ್ಸವ’ ಕಾರ್ಯಕ್ರಮವನ್ನು ವಿವರಿಸಿ, ಬೆಳಗಾವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ‘ಸಿದ್ಧಾಂತ್’ ಎಂಬ ಹೆಸರಿನ ಗೆಳೆಯನಿಗೆ ಪತ್ರವನ್ನು ಬರೆಯಿರಿ.
ಪ್ರೀತಿಯ ಆತ್ಮೀಯ ಗೆಳೆಯ,
ದಾವಣಗೆರೆ
ದಿನಾಂಕ: 12.04.2024
ಪ್ರೀತಿಯ ಆತ್ಮೀಯ ಗೆಳೆಯ ಸಿದ್ಧಾಂತನಿಗೆ,
ನಿನ್ನ ಆತ್ಮೀಯ ಗೆಳೆಯ ಅಥರ್ವನ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮ, ನಿನ್ನ ಹಾಗೂ ನಿನ್ನ ಮನೆಯವರೆಲ್ಲರ ಯೋಗಕ್ಷೇಮಕ್ಕೆ ಪತ್ರ ಬರೆಯಿರಿ.
ನಮ್ಮ ಶಾಲೆಯಲ್ಲಿ ಜನವರಿ 6, 2024 ರಂದು ವಾಷಿಕೋತ್ಸವ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ನಾಗತಿಹಳ್ಳಿ ಚಂದ್ರಶೇಖರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ನನಗೆ 200 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಬಹುಮಾನ ಹಾಗೂ ಉದ್ದ ಜಿಗಿತದಲ್ಲಿ ಎರಡನೇ ಬಹುಮಾನ ಬಂದಿತ್ತು. ಅದನ್ನು ಮುಖ್ಯ ಅತಿಥಿಗಳಿಂದ ಪಡೆಯುವಾಗ ನನಗೆ ತುಂಬಾ ಹೆಮ್ಮೆ ಎನಿಸಿತು. ಸಾಂಸ್ಕೃತಿಕ ಸಮಾರಂಭದಲ್ಲಿ ನಡೆದ ಜಾನಪದ ನೃತ್ಯದಲ್ಲಿಯೂ ನಾನು ಭಾಗವಹಿಸಿದ್ದೆ.
ಒಟ್ಟಾರೆ ನಮ್ಮ ವಾರ್ಷಿಕೋತ್ಸವ ಸಮಾರಂಭವು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು. ಹೇಳಲು ಬಹಳಷ್ಟು ಇದೆ. ನೀನು ವಾರ್ಷಿಕ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿ ಕೊಂಡಿರುವೆ? ನಾನು ಕೂಡ ಶ್ರಮವಹಿಸಿ ಓದುತ್ತಿದ್ದೇನೆ.
ಇಬ್ಬರು ಚೆನ್ನಾಗಿ ಓದಿ ಅಭ್ಯಾಸ ಮಾಡೋಣ. ಹೆಚ್ಚು ಹೆಚ್ಚು ಅಂಕ ಪಡೆಯೋಣ. ನಿಮ್ಮ ತಂದೆ – ತಾಯಿ, ಅಣ್ಣ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. ಪರೀಕ್ಷೆಯ ನಂತರ ದಾವಣಗೆರೆಗೆ ಬರುವೆ ತಾನೇ? ಆಗ ಎಲ್ಲಾ ವಿಷದವಾಗಿ ಮಾತಾಡೋಣ. ಪತ್ರ ಬರಿ. ನಿನ್ನ ಪತ್ರಕ್ಕಾಗಿ ಎದುರು ನೋಡುತ್ತಿರುವ ನಿನ್ನ ಆತ್ಮೀಯ ಗೆಳೆಯ.
ಇಂತಿ ನಮಸ್ಕಾರಗಳು,
ಸಹಿ
ಅಥರ್ವ
ರವರಿಗೆ,
ಸಿದ್ಧಾಂತ,
ಹತ್ತನೇ ತರಗತಿ
ಸರ್ಕಾರಿ ಪ್ರೌಢಶಾಲೆ
ಬೆಳಗಾವಿ
ಇಂದ
ಅಥರ್ವ
ಹತ್ತನೇ ತರಗತಿ
ಸರ್ಕಾರಿ ಪ್ರೌಢಶಾಲೆ
ದಾವಣಗೆರೆ
XV. ಪ್ರಬಂಧ ಬರವಣಿಗೆ
45. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆ
ಅಥವಾ
ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
ಪ್ರಸ್ತಾವನೆ:
ಪ್ರಾಚ್ಯ ಸ್ಮಾರಕಗಳು ನಮ್ಮ ದೇಶದ ಆಸ್ತಿ. ಇದನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. ʼಪ್ರಾಚ್ಯʼ ಎಂದರೆ ಪುರಾತನ, ಸ್ಮಾರಕಗಳು ಎಂದರೆ ಹಿಂದಿನ ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಾಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು ಚರ್ಚಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವುಗಳು. ಮೂರ್ತಿಗಳು ಇವುಗಳನ್ನೆಲ್ಲ ನಾವು ಪ್ರಾಚೀನ ಸ್ಮಾರಕಗಳು ಎನ್ನಬಹುದು. ಇವು ಇಂದು ಕೆಲವು ಭೂಗತವಾಗಿದೆ. ಕೆಲವು ಖಂಡತುಂಡಗಳಾಗಿವೆ.
ಆ ಕಾಲದ ಹಿಂದಿನ ರಾಜಕೀಯ ವೈಭವ, ಸಾಂಸ್ಕೃತಿಕತೆ ಸಾಮಾಜಿಕತೆ, ಆರ್ಥಿಕ ಬೆಳವಣಿಗೆ ಇವೆಲ್ಲವನ್ನು ಅಭ್ಯಸಿಸಲು ಪ್ರಾಚ್ಯ ಸ್ಮಾರಕಗಳ ಸಂರಕ್ಷಣತೆ ಅಂತ್ಯ ಎಂಬುದು ಅರಿವಾಗುತ್ತದೆ.
ವಿವರಣೆ: ವಿಜಯನಗರ ಸಾಮ್ರಾಜ್ಯವನ್ನು ಅಭ್ಯಸಿಸಲು ಆಧಾರವಾಗಿರುವ ಹಲವಾರು ಇತಿಹಾಸದ ಪುಸ್ತಕಗಳು ಲಭ್ಯವಿದ್ರೂ ಅದಕ್ಕೆ ಆಧಾರವಾಗಿರುವುದು ಪ್ರಾಚ್ಯ ಸ್ಮಾರಕಗಳು. ಇಂದಿಗೂ ಹಂಪಿಯಲ್ಲಿನ ಕಮಲಮಹಲ್, ಮಹಾನವಮಿ ದಿಬ್ಬ. ದಾಸೋಹದ ಸ್ಥಳಗಳು, ಉದಾಕರಿಸಬಹುದು.
ಬೇಲೂರು- ಹಳೇಬೀಡಿನ ವಾಸ್ತು ಶಿಲ್ಪ, ಸುಂದರ ಮೂರ್ತಿಗಳು ಇದಕ್ಕೆ ಸಾಕ್ಷಿಯಾಗಿವೆ. ತಾಜಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಶ್ರೀರಂಗಪಟ್ಟಣದ ದರಿಯ ಕಾಲದ ಭಾಗದಲ್ಲಿ ಹೈದರ್, ಟಿಪ್ಪುಗಳ ಸಮಾಧಿಗಳ ಜೊತೆಗೆ ಅಂದಿನ ಅರಸರು ಉಪಯೋಗಿಸುತ್ತಿದ್ದ ಯುದ್ಧೋಪಕರಣಗಳು, ನಾಣ್ಯಗಳು ಉಡುಪುಗಳು ಇಂದಿಗೂ ಸಾಕಿಯಾಗಿವೆ.
ನಿಷ್ಕರ್ಷೆ/ ಉಪಸಂಹಾರ:
ನಾವು ನಮ್ಮ ದೇಶದ ಪ್ರಾಚ್ಯ ಸ್ಮಾರಕಗಳು ಸಂರಕ್ಷಿಸಬೇಕು. ಈ ಪ್ರಾಚ್ಯ ವಸ್ತುಗಳು ನಮಗೆ ಮಾರ್ಗದರ್ಶನವು, ಒಳ್ಳೆಯ ಸಲಹೆ ಸಂದೇಶಗಳನ್ನು ನೀಡುತ್ತವೆ. ಅಷ್ಟೇ ಅಲ್ಲದೆ ಇವು ನಮ್ಮ ದೇಶದ ಆಸ್ತಿಯಾಗಿದ್ದು. ಇದನ್ನು ಸಂರಕ್ಷಿಸಿ ಕೊಟ್ಟು ಬೇಕಾದುದು ನಮ್ಮ ಆದ್ಯ ಕರ್ತವ್ಯವು ಆಗಿದೆ. ಇಲ್ಲದಿದ್ದರೆ ಅಮೂಲ್ಯವಾದ ಕೊಹೀನೂರ ವಜ್ರ ಪರಕೀಯರ ಪಾಲದಂತೆ ಒಂದೊಂದಾಗಿ ಎಲ್ಲವನ್ನು ಕಳೆದುಕೊಳ್ಳಬೇಕಾಗಬಹುದು.