10th Bharathadalli British Alvikeya Parinamagalu Social Notes | 10ನೇ ತರಗತಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಮಾಜ ನೋಟ್ಸ್

Bharathadalli British Alvikeya Parinamagalu

10th Bharathadalli British Alvikeya Parinamagalu Social Notes Question Answer Guide Question Paper Mcq Pdf Download in Kannada Medium Karnataka 2025, 10ನೇ ತರಗತಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಮಾಜ ನೋಟ್ಸ್ ಪ್ರಶ್ನೋತ್ತರಗಳು, 10th Std Social Science Chapter 3 Question And Answer, 10th Class third Chapter Social Notes Pdf kannada medium, 10th History Chapter 3 Notes part 1, KSEEB Solutions for Class 10 social‌ notes 3rd Lesson Notes, SSLC Notes Social Science 3rd Lesson Notes Karnataka State Syllabus.

Bharathadalli British Alvikeya Parinamagalu
Bharathadalli British Alvikeya Parinamagalu

i. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

  1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು ವಾರನ್ ಹೇಸ್ಟಿಂಗ್ಸ್
  2. ಸೂಪರಿಡೆಂಟೆಡ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನ್‌ವಾಲೀಸ್
  3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಸಾ.ಶ. 1793 ರಲ್ಲಿ ಜಾರಿಗೆ ತರಲಾಯಿತು.
  4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ರೈತವಾರಿ
  5. ಆಧುನಿಕ ಶಿಕ್ಷಣದ ವ್ಯವಸ್ಥೆಗೆ ಮೆಕಾಲೆಯು ನೀಡಿದ ವರದಿ ತಳಹದಿಯಾಯಿತು.
  6. ರೆಗ್ಯುಲೇಟಿಂಗ್ ಕಾಯ್ದೆ ಸಾ.ಶ. 1773 ರಲ್ಲಿ ಜಾರಿಗೆ ಬಂದಿತು.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

1.ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶದಲ್ಲಿ ಬ್ರಿಟಿಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ.

ವಾರನ್ ಹೇಸ್ಟಿಂಗ್ಸ್ ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ದಿವಾನಿ ಆದಾಲತ್ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ಫೌಜದಾರಿ ಅದಾಲತ್ ಎಂಬ ಅಪರಾಧ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು. ನಾಗರೀಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಅವರ ಶಾಸ್ತ್ರಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು. ಅಪರಾಧ ಪ್ರಕರಣಗಳು ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು. ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು. ನಾಗರಿಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಪರಾಧ ನ್ಯಾಯಾಲಯಗಳು ಕಾಜಿಗಳ ಅಧೀನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿಯೇ ಕಾರ್ಯನಿರ್ವಹಿಸ ಬೇಕಿತ್ತು.

2. ಬ್ರಿಟಿಷರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?

ಲಾರ್ಡ್ ಕಾರ್ನ್‌ವಾಲೀಸನು ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ಥಿತ್ವಕ್ಕೆ ತಂದನು. ಇವನು ಸೂಪರಿಡೆಂಟೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು. ಪ್ರತಿ ಜಿಲ್ಲೆಯನ್ನು ಠಾಣೆಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ಕೊತ್ವಾಲರ ಅಧೀನದಲ್ಲೂ, ಹಳ್ಳಿಗಳು ಚೌಕಿದಾರನ ಅಧೀನದಲ್ಲೂ ಇರುವಂತೆ ಮಾಡಿದನು. ಕೊತ್ವಾಲರುಗಳು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಸಾ.ಶ. 1770ರ ದಶಕದಲ್ಲಿ ಭೀಕರ ಕ್ಷಾಮಭೀತಿಯಿಂದ ಕಾನೂನು ವ್ಯವಸ್ಥೆ ವಿಷಮಗೊಳ್ಳತೊಡಗಿದಾಗ ಇಡೀ ವ್ಯವಸ್ಥೆಯನ್ನು ಬ್ರಿಟಿಷ್ ಅಧಿಕಾರಿಗಳ ಅಧೀನಕ್ಕೊಳಪಡಿಸಲಾಯಿತು. ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು. ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ಗಳ ಅಧೀನಕ್ಕೊಳಪಟ್ಟರು. ಪೊಲೀಸ್ ವ್ಯವಸ್ಥೆಯು ನಿರಂತರ ಬದಲಾವಣೆಗೆ ಒಳಗಾಯಿತು. ಸಾ.ಶ. 1861ರಲ್ಲಿ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಸಾ.ಶ. 1902ರ ಪೊಲೀಸ್ ಕಮಿಷನ್ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು.

3. ಬ್ರಿಟಿಷ್ ಭೂ ಕಂದಾಯ ನೀತಿಗಳಿಂದ ಭಾರತದ ರೈತರು ‘ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವಂತೆ ಆಯಿತು’ ಹೇಗೆ? ವಿಮರ್ಶಿಸಿ.

ಬ್ರಿಟಿಷ್ ಭೂ ಕಂದಾಯ ನೀತಿಗಳಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನ: ರೈತರಿಗಾಗಲಿಲ್ಲ. ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರರನ್ನು ಸೃಷ್ಟಿ ಮಾಡಿದರು. ರೈತರು ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು. ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು. ಆದ್ದರಿಂದ ಈ ಕಂದಾಯ ನೀತಿಗಳು ರೈತರನ್ನು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವಂತೆ ಮಾಡಿತು ಎಂದು ಹೇಳಬಹುದು.

4. ರೈತವಾರಿ ಪದ್ಧತಿಯು ಒಳಗೊಂಡಿದ್ದ ಪ್ರಮುಖಾಂಶಗಳು ಯಾವುವು?

ರೈತವಾರಿ ಪದ್ಧತಿಯ ಪ್ರಕಾರ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು. ಭೂಮಿ ಉಳುಮೆ ಮಾಡುತ್ತಿದ್ದವನನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯಮಾಡಿತು. ಅವನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು. ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು. ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು.

5. ಬ್ರಿಟಿಷರ ಕಂದಾಯ ನೀತಿಗಳಿಂದ ಉಂಟಾದ ಪರಿಣಾಮಗಳಾವುವು?

  • ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರಿ ಸಮುದಾಯ ಸೃಷ್ಟಿಯಾಯಿತು.
  • ಜಮೀನ್ದಾರರ ಶೋಷಣೆಗೆ ಒಳಗಾದ ರೈತರು ವಿವಿಧ ಬಗೆಯ ಸಂಕಷ್ಟಗಳಿಗೆ ಒಳಗಾದರು ಕ್ರಮೇಣ ನಿರ್ಗತಿಕರಾದರು.
  • ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರೆ ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.
  • ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಪರಭಾರೆ ಮಾಡಿದರು.
  • ಕೃಷಿ ಕ್ಷೇತ್ರವು ವಾಣಿಜ್ಯಕರಣಗೊಂಡು, ಇಂಗ್ಲೆಂಡಿನಲ್ಲಾದ ಕೈಗಾರಿಕಾಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.
  • ಹಣದ ಲೇವಾದೇವಿಗಾರಾರು ಬಲಿಷ್ಠರಾಗತೊಡಗಿದರು.

6. ಬ್ರಿಟಿಷ್ ಶಿಕ್ಷಣದಿಂದ ಉಂಟಾದ ಪರಿಣಾಮಗಳ ಪಟ್ಟಿ ಮಾಡಿ.

  • ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.
  • ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನಾ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.
  • ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.
  • ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು.
  • ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕೋ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.
  • ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.
  • ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

7. ರೆಗ್ಯುಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?

  • ಈ ಕಾಯ್ದೆಯು ಜಾರಿಗೆ ಬರುವ ಪೂರ್ವದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಪ್ರಾಂತ್ಯಗಳನ್ನು ಮೂರು ಪ್ರೆಸಿಡೆನ್ಸಿಗಳಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಬಂಗಾಳ, ಮುಂಬಯಿ ಮತ್ತು ಮದರಾಸು ಪ್ರೆಸಿಡೆನ್ಸಿಗಳು. ಅವುಗಳು ಪ್ರತ್ಯೇಕವಾಗಿಯೂ ಮತ್ತು ಸ್ವತಂತ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಈ ಕಾಯ್ದೆಯ ಪ್ರಕಾರ ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.
  • ಬಂಗಾಳದ ಗವರ್ನರನು ಮೂರು ಪ್ರಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.
  • ಗವರ್ನರ್ ಜನರಲ್‌ಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.
  • ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನವನ್ನು ನಡೆಸುವಂತಿಲ್ಲ. ತೀರ ತುರ್ತಾದ ಸಂದರ್ಭಗಳಲ್ಲಿ ಮಾತ್ರ ಇಂತಹ ನಿಬಂಧನೆಗಳಿಂದ ವಿನಾಯಿತಿ ಇತ್ತು.
  • ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ ಸುಪ್ರೀಂಕೋರ್ಟ್ ಅನ್ನು ಸ್ಥಾಪಿಸಲಾಯಿತು. ಈ ಕೇಂದ್ರ ನ್ಯಾಯಾಲಯದಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಜನ ಸಾಮಾನ್ಯ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದರು.

8. ಸಾ.ಶ. 1858ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

  • ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.
  • ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ ವೈಸ್‌ರಾಯ್ ಎಂಬ ಪದನಾಮವನ್ನು ನೀಡಿದರು. ವೈಸ್‌ರಾಯ್ ಆಗಿ ಲಾರ್ಡ್ ಕ್ಯಾನಿಂಗ್ ನೇಮಕಗೊಂಡನು.
  • ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು. ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.
  • ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ (ಕೌನ್ಸಿಲ್ ಆಫ್ ಇಂಡಿಯಾ) ಅಸ್ತಿತ್ವಕ್ಕೆ ಬಂದಿತು.

9. ಸಾ.ಶ. 1935ರ ಭಾರತ ಸರ್ಕಾರದ ಕಾಯ್ದೆ ‘ಭಾರತ ಸಂವಿಧಾನದ ಬುನಾದಿ’ ಸಮರ್ಥಿಸಿ.

ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನೇ ಆಧರಿಸಿ ರಚಿಸಲಾಗಿದೆ. ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತು. ಇದು ಬ್ರಿಟಿಷ್ ಭಾರತ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗದೆ ದೇಶೀಯ ಸಂಸ್ಥಾನಗಳಿಗೂ ಅನ್ವಯವಾಗುವ ಅಂಶಗಳನ್ನು ಒಳಗೊಂಡಿದ್ದಿತು. ಬ್ರಿಟಿಷ್ ಪ್ರಾಂತ್ಯಗಳ, ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು. ಕೇಂದ್ರದಲ್ಲಿ ದ್ವಿ ಸರಕಾರವನ್ನು ಸ್ಥಾಪಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು. ಪ್ರಾಂತ್ಯಗಳಲ್ಲಿ ದ್ವಿ ಸರಕಾರ ಪದ್ಧತಿಯನ್ನು ರದ್ದುಗೊಳಿಸಿ, ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು. ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಲಾಯಿತು.

10. ಸಾ.ಶ. 1919ರ ಕಾಯ್ದೆಯ ಪ್ರಮುಖಾಂಶಗಳು ಯಾವುವು?

  • ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ ಮತ್ತು ರಾಜ್ಯಗಳ ಪರಿಷತ್ತು ರಚಿಸಲಾಯಿತು.
  • ಪ್ರಾಂತ್ಯಗಳಲ್ಲಿ ದ್ವಿಸರಕಾರ ಪದ್ಧತಿಗೆ ಅವಕಾಶ ನೀಡಲಾಯಿತು.
  • ಭಾರತಕ್ಕೆ ಒಬ್ಬ ಹೈಕಮಿಷನರ್‌ನನ್ನು ನೇಮಕ ಮಾಡಲಾಯಿತು.
  • ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.
  • ಕೇಂದ್ರದ ಬಜೆಟ್‌ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.
  • ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್‌ರಿಗೆ ವಿಸ್ತರಿಸಲಾಯಿತು.

I. ಈ ಪ್ರಶ್ನೆಗಳಿಗೆ ಉತ್ತರಿಸಿ:

1.ಬ್ರಿಟನ್ನಿನ ಸಂಸತ್ತಿನಲ್ಲಿ ಮಾಂಟೆಗೋ ಮಾಡಿದ ಘೋಷಣೆ ಏನು?

ಭಾರತೀಯರಿಗೆ ಹಂತಹಂತವಾಗಿ ಜವಾಬ್ದಾರಿ ಸರಕಾರವನ್ನು ನೀಡುವುದೇ ಬ್ರಿಟಿಷ್ ಸರಕಾರದ ಗುರಿ.

2. ಸಾ.ಶ. 1861ರ ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

  • ವೈಸ್‌ರಾಯ್ ಕೌನ್ಸಿಲ್‌ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮಕರಣ ಮಾಡಲಾಯಿತು.
  • ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗವರ್ನರ್ ಜನರಲ್‌ಗೆ ನೀಡಲಾಯಿತು.

3. ಬ್ರಿಟಿಷ್ ಭೂಕಂದಾಯ ನೀತಿಯ ಬಗ್ಗೆ ಚಾರ್ಲ್ಸ್ ಮೆಟಕಾಫ್‌ನ್ ಹೇಳಿಕೆ ಏನು?

ಬ್ರಿಟಿಷ್ ಭೂ ಕಂದಾಯ ನೀತಿಗಳಿಂದ ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು.

4. ಬ್ರಿಟಿಷರು ಭಾರತದಲ್ಲಿ ತಾವು ಕಟ್ಟಿದ ರಾಜ್ಯ ವ್ಯವಸ್ಥೆಗೆ ಹೇಗೆ ಏಕರೂಪ ವನ್ನು ನೀಡಿದರು?

ನೂರಾರು ರಾಜಮನೆತನಗಳಲ್ಲಿ ಹಂಚಿಹೋಗಿದ್ದ ಭಾರತದ ಪರಿಸ್ಥಿತಿಯನ್ನು ಅವಲೋಕಿಸಿದ ಬ್ರಿಟಿಷರು ಆ ಪರಿಸ್ಥಿತಿಯನ್ನು ತಮ್ಮ ರಾಜಕೀಯ ಏಳಿಗೆಗೆ ಬಳಸಿಕೊಂಡರು. ಪರಸ್ಪರ ಕಚ್ಚಾಡುತ್ತಿದ್ದ ರಾಜರ ನಡುವೆ ಒಡೆದು ಆಳುವ ನೀತಿಯನ್ನು ಬಳಸಿಕೊಂಡು ಕ್ರಮೇಣ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಂಧಾನ ಮತ್ತು ಯುದ್ಧಗಳ ಮಾರ್ಗಗಳನ್ನು ಸಮರ್ಥವಾಗಿ ಬಳಸಿಕೊಂಡರು. ಭಾರತ ಒಂದು ದೇಶವೆಂಬ ಸಾಮೂಹಿಕ ಕಲ್ಪನೆಯು ಇಲ್ಲದಿದ್ದ ಆ ಸಂದರ್ಭದಲ್ಲಿ ವಿವಿಧ ರಾಜ್ಯಾಡಳಿತಗಳಲ್ಲಿ ಹರಿದು ಹಂಚಿಹೋಗಿದ್ದ ಅನೇಕ ರಾಜ್ಯಗಳನ್ನು ಒಂದು ಗೂಡಿಸಿ ಏಕರೂಪ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗೆ ಒಳಪಡಿಸಿದರು. ಶಿಕ್ಷಣ, ನ್ಯಾಯಾಂಗ ವ್ಯವಸ್ಥೆ, ಭೂ ಕಂದಾಯ, ವ್ಯಾಪಾರ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಹೊಸ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ತಾವು ಕಟ್ಟಿದ ರಾಜ್ಯ ವ್ಯವಸ್ಥೆಗೆ ಏಕರೂಪವನ್ನು ನೀಡಿದರು.

5. ಖಾಯಂ ಜಮೀನ್ದಾರಿ ಪದ್ಧತಿ ಎಂದರೇನು? ಈ ಪದ್ಧತಿಯು ಒಳಗೊಂಡಿದ್ದ ಪ್ರಮುಖಾಂಶಗಳು ಯಾವುವು?

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್‌ ವಾಲೀಸನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು. ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು. ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು. ಭೂ ಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು. ಏಕೆಂದರೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಸಲ್ಲಿಸಲಾಗದಿದ್ದರೆ ಬ್ರಿಟಿಷ್ ಸರಕಾರವು ಭೂಮಿಯ ಒಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.

6. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆ ಕೊಟ್ಟ ವರದಿಯ ಪ್ರಮುಖ ಅಂಶ ಯಾವುದು?

ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ, ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ ಹೊಸ ಭಾರತೀಯ ವಿದ್ಯಾವಂತರನ್ನು ಸೃಷಿಮಾಡುವುದು.

7. ಸಾ.ಶ. 1892ರ ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳಾವುವು?

  • ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ಹೆಚ್ಚುವರಿ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಲಾಯಿತು.
  • ಶಾಸನ ಸಭೆಯ ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್ ಬಗ್ಗೆ ಚರ್ಚಿಸುವ ಅಧಿಕಾರವನ್ನು ನೀಡಲಾಯಿತು.
  • ಆರು ದಿನಗಳ ಮುಂಚೆ ಮುನ್ಸೂಚನೆ ನೀಡಿ ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ನೀಡಲಾಯಿತು.

8. ಸಾ.ಶ. 1909ರ ಭಾರತೀಯ ಪರಿಷತ್ ಕಾಯ್ದೆಯ ಮೂಲಕ ಬ್ರಿಟಿಷರು ಭಾರತೀಯರನ್ನು ಒಡೆದು ಆಳುವ ನೀತಿ ತೋರಿದರು ದೃಢೀಕರಿಸಿ.

  • ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಹೆಚ್ಚಿಸಲಾಯಿತು.
  • ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
  • ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.
  • ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

9. ಸಾ.ಶ. 1784ರ ಪಿಟ್ಸ್ ಇಂಡಿಯಾ ಕಾಯ್ದೆಯ ಪ್ರಮುಖ ಉದ್ದೇಶವೇನಾಗಿತ್ತು?

ರೆಗ್ಯುಲೇಟಿಂಗ್ ಕಾಯ್ದೆಯಲ್ಲಿದ್ದ ಕೆಲವು ಅನಿಶ್ಚಿತತೆಗಳನ್ನು ನಿವಾರಿಸುವುದರ ಜೊತೆಗೆ ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಮತ್ತು ಕಂಪನಿ ಸರ್ಕಾರಕ್ಕಿದ್ದ ಅಧಿಕಾರದ ಮಿತಿಗಳನ್ನು ಸ್ಪಷ್ಟಪಡಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿತ್ತು.

10. ರೈತವಾರಿ ಪದ್ಧತಿಯು ರೈತರ ಮೇಲೆ ಯಾವ ಪರಿಣಾಮಗಳನ್ನುಂಟುಮಾಡಿತು?

ರೈತವಾರಿ ಪದ್ಧತಿಯು ಸಣ್ಣ ರೈತರಿಗೆ ತಮ್ಮ ಅಧೀನದಲ್ಲಿದ್ದ ಭೂಮಿ ಮೇಲಿನ ಹಕ್ಕನ್ನು ನೀಡಿತ್ತಾದರ ಭೂಕಂದಾಯವನ್ನು ಹೆಚ್ಚಿನ ವಾರ್ಷಿಕ ಮೊತ್ತಕ್ಕೆ ನಿಗದಿಪಡಿಸಿದ್ದರಿಂದ ರೈತರು ಸಂಕಷ್ಟಗಳಿಗೆ ಒಳಗಾದರು. ಕಂದಾಯ ವಸೂಲು ಮಾಡುವ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದರು. ಬೆಳೆಗಳು ಸರಿಯಾಗಿ ಫಸಲು ನೀಡದ ಸಂದರ್ಭದಲ್ಲಿ ರೈತರು ಹಣದ ಲೇವಾದೇವಿಗಾರರಿಂದ ಸಾಲ ತೆಗೆದುಕೊಂಡು ಮರುಪಾವತಿಸಲಾಗದೆ ಅವರಿಗಿದ್ದ ಸಣ್ಣಪುಟ್ಟ ಜಮೀನನ್ನು ಮಾರಾಟಮಾಡುವಂತಾಯಿತು. ರೈತರ ಒಳಿತಿಗಾಗಿ ಈ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದರೂ ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಪದ್ಧತಿಯಿಂದಲೇ ಎನ್ನುವುದು ವಿಪರ್ಯಾಸ.

11. ಸಾ.ಶ. 1909ರ ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

  • ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಹೆಚ್ಚಿಸಲಾಯಿತು.
  • ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
  • ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.
  • ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

12. ಪಿಟ್ಸ್ ಇಂಡಿಯಾ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

ನಿಯಂತ್ರಣ ಮಂಡಳಿ ಎನ್ನುವ ಆರು ಜನ ಕಮಿಷನರ್‌ಗಳನ್ನೊಳ ಗೊಂಡ ಹೊಸ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಈ ಹಿಂದೆ ಇದ್ದ ನಿರ್ದೇಶನ ಮಂಡಳಿಯ ಜಾಗದಲ್ಲಿ ನಿಯಂತ್ರಣ ಮಂಡಳಿ ಹುಟ್ಟಿಕೊಂಡಿತು. ಈ ಮಂಡಳಿಯು ನಾಗರಿಕ, ಮಿಲಿಟರಿ, ಕಂದಾಯದ ವಿಷಯಗಳಲ್ಲಿ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಪಡೆದಿತ್ತು. ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದೇ ಸ್ವಂತ ಹಕ್ಕಲ್ಲ ಎಂದು ಈ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸಿತು. ಈ ಕಾಯ್ದೆಯು ಭಾರತದಲ್ಲಿದ್ದ ಕಂಪನಿಯ ಅಧೀನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮನೆಂದು ಘೋಷಿಸಿತು.

13. ಸಾ.ಶ. 1813ರ ಚಾರ್ಟರ್ ಕಾಯ್ದೆಯು ಚಾರಿತ್ರಿಕವಾದದ್ದು ಏಕೆ?

  • ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಗೆ ಮುಂದಿನ 20 ವರ್ಷಗಳು ಭಾರತದಲ್ಲಿರುವ ಅಧಿಕಾರವನ್ನು ನೀಡಿತು. ಕಂಪನಿಗೆ ಮಾತ್ರವಲ್ಲದೆ ಇಚ್ಛೆಯುಳ್ಳವರೆಲ್ಲರಿಗೂ ವ್ಯಾಪಾರ ಮಾಡುವ ಅವಕಾಶವನ್ನು ಮುಕ್ತವಾಗಿಸಿತು. ಇದರ ಪರಿಣಾಮವಾಗಿ ಮುಕ್ತ ವ್ಯಾಪಾರದ ಹೊಸ ಶಕೆ ಆರಂಭಗೊಂಡಿತು.
  • ಅನುಮತಿ ಮತ್ತು ಪರವಾನಿಗೆಯ ಹೊಸ ಕಾಲ ಆರಂಭವಾಯಿತು.
  • ಗವರ್ನರ್ ಜನರಲ್ ಮತ್ತು ಸೇನೆಯ ಮಹಾಮುಖ್ಯಸ್ಥರನ್ನು ನಿರ್ದೇಶಕ ಮಂಡಳಿಯು ನೇಮಿಸುವ ಅಧಿಕಾರವನ್ನು ಹೊಂದಿತು.
  • ಚರ್ಚ್‌ಗಳಿಗೆ ಭಾರತಕ್ಕೆ ಪ್ರವೇಶಿಸುವ ಅಧಿಕೃತ ಅವಕಾಶವನ್ನು ನೀಡಲಾಯಿತು.
  • ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ ಹೆಚ್ಚಾಯಿತು.

14. ಸಾ.ಶ. 1861ರ ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

  • ವೈಸರಾಯ್ ಕೌನ್ಸಿಲ್‌ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನಾಮಕರಣ ಮಾಡಲಾಯಿತು.
  • ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗವರ್ನರ್ ಜನರಲ್‌ಗೆ ನೀಡಲಾಯಿತು.

II. ಬಹು ಆಯ್ಕೆಯ ಪ್ರಶ್ನೆಗಳು:

1.ಈ ಕಾಯ್ದೆಯ ಪ್ರಕಾರ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಯಾಯಿತು:

ಎ) ಪಿಟ್ಸ್ ಇಂಡಿಯಾ

ಬಿ) ರೆಗ್ಯುಲೇಟಿಂಗ್

ಸಿ) ಮಿಂಟೋ ಮಾರ್ಲೆ

ಡಿ) ಮಾಂಟೆಗೋ-ಚೆಮ್ಸ್‌ಫರ್ಡ್

2. ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು

ಎ) ಜೊನಾಥನ್ ಡಂಕನ್

ಬಿ) ಚಾರ್ಲ್ಸ್‌ಗ್ರಾಂಟ್

ಸಿ) ವಿಲಿಯಂ ಬಿಂಟಿಂಗ್

ಡಿ) ಮೆಕಾಲೆ

3. ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದವನು:

ಎ) ಥಾಮಸ್ ಮನ್ರಿ

ಬಿ) ಜೇಮ್ಸ್ ಥಾಟ್ಸನ್

ಸಿ) ಅಲೆಕ್ಸಾಂಡರ್ ರೀಡ್

ಡಿ) ಆರ್. ಎಮ್. ಬರ್ಡ್

4. ಚಾರಿತ್ರಿಕವಾದದ್ದು ಎಂದೆನಿಸಿದ ಕಾಯ್ದೆ:

ಎ) ಸಾ.ಶ. 1833ರ ಚಾರ್ಟರ್ ಕಾಯ್ದೆ

ಬಿ) ಸಾ.ಶ. 1793ರ ಚಾರ್ಟರ್ ಕಾಯ್ದೆ

ಸಿ) ಸಾ.ಶ. 1813ರ ಚಾರ್ಟರ್ ಕಾಯ್ದೆ

ಡಿ) ಸಾ.ಶ. 1853ರ ಚಾರ್ಟರ್ ಕಾಯ್ದೆ

5. ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ಅಪರಾಧ ತೆರಿಗೆ ಎಂದು ಟೀಕಿಸಿದವನು:

ಎ) ಲಾರ್ಡ್ ಕ್ಯಾನಿಂಗ್

ಬಿ) ಎಡ್ಮಂಡ್ ಬರ್ಕ್

ಸಿ) ಚಾಲ್ಸ್ ಗ್ರಾಂಟ್

ಡಿ) ಲಾರ್ಡ್ ಕ್ಯಾನಿಂಗ್

6. ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವನು:

ಎ) ವಾರನ್ ಹೇಸ್ಟಿಂಗ್ಸ್

ಬಿ) ಜೊನಾಥನ್ ಡಂಕನ್

ಸಿ) ವಿಲಿಯಂ ಬಿಂಟೆರೊ

ಡಿ) ಮೆಕಾಲೆ

7. ಭಾರತೀಯರನ್ನು ಒಡೆದು ಆಳಲು ಬ್ರಿಟಿಷರು ಬಳಸಿಕೊಂಡ ಕಾಯ್ದೆ:

ಎ) ಸಾ.ಶ. 1909 ಭಾರತೀಯ ಪರಿಷತ್ ಕಾಯ್ದೆ

ಬಿ) ಎಸ್.ಎಸ್. 1892 ಇಂಡಿಯನ್ ಕೌನ್ಸಿಲ್ ಆಕ್ಟ್

ಸಿ) ಸಾ.ಶ. 1858 ಭಾರತ ಸರ್ಕಾರದ ಕಾಯ್ದೆ

2) 2.5 1861 ಡಬ್ಲ್ಯೂ

II. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ:

1. ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು ಲಾರ್ಡ್ ಕಾರ್ನ್‌ ವಾಲೀಸ್

2. ಸಾ.ಶ. 1919ರ ಭಾರತೀಯ ಪರಿಷತ್ ಕಾಯ್ದೆಯನ್ನು ಮಾಂಟೆಗೋ-ಚೆಮ್ಸ್ ಫರ್ಡ್ ಸುಧಾರಣಾ ಕಾಯ್ದೆ ಎಂತಲೂ ಕರೆಯುವರು.

3. ಮಹಲ್‌ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಟ್ಸನ್.

4. ಸಾ.ಶ. 1792ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವು ಜೊನಾಥನ್ ಡಂಕನ್

5. ಬ್ರಿಟಿಷ್ ಸೈನ್ಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಸುಬೇದಾರ್

6. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದು ಹೇಳಿದವರು ಚಾರ್ಲ್ಸ್ ಮೆಟಕಾಫ್

7. ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬರಲು ಅವಕಾಶ ನೀಡಿದ ಕಾಯ್ದೆ ಸಾ.ಶ. 1813ರ ಚಾರ್ಟರ್ ಕಾಯ್ದೆ

8̤ ಸಾ.ಶ. 1909ರ ಕಾಯ್ದೆಯನ್ನು ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ ಕಾಯ್ದೆ ಎಂತಲೂ ಕರೆಯುವರು

9. ಮಹಲ್ ಎಂದರೆ ತಾಲ್ಲೂಕು ಎಂದರ್ಥ.

ಮುಖ್ಯಾಂಶಗಳು

  • ವಿವಿಧ ರಾಜ್ಯಾಡಳಿತಗಳಲ್ಲಿ ಹರಿದು ಹಂಚಿ ಹೋಗಿದ್ದ ಅನೇಕ ರಾಜ್ಯಗಳನ್ನು ವಿವಿಧ ಕಾರಣಗಳಿಂದ ಒಂದುಗೂಡಿಸಿ ಬ್ರಿಟಿಷರು ಏಕರೂಪ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ಒಳಪಡಿಸಿದರು.
  • ಲಾರ್ಡ್ ಕಾರ್ನ್‌ವಾಲೀಸನು ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು.
  • ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದರು.
  • ಲಾರ್ಡ್ ಕಾರ್ನ್‌ವಾಲೀಸನು ಪ್ರಥಮತ: ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು.
  • ಬ್ರಿಟಿಷರು ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಿದರು.
  • ಆರ್ಥಿಕ ಹಿತಾಸಕ್ತಿಗಳನ್ನು ಸುಸ್ಥಿರಗೊಳಿಸಿಕೊಳ್ಳುವ ಸಲುವಾಗಿ ಖಾಯಂ ಜಮೀನ್ದಾರಿ ಪದ್ಧತಿ, ಮಹಲ್ವಾರಿ ಪದ್ಧತಿ, ರೈತವಾರಿ ಪದ್ಧತಿ ಮುಂತಾದ ಹೊಸ ಬಗೆಯ ಕಂದಾಯ ನೀತಿಗಳನ್ನು ಜಾರಿಗೊಳಿಸಿದರು.
  • ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆ ಕೊಟ್ಟ ವರದಿ ಆಧುನಿಕ ಭಾರತದ .ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.
  • ಸರ್ ಚಾರ್ಲ್ಸ್ ವುಡ್ಸ್‌ನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಅಂದಿನ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್ ಹೌಸಿಯು ಕಲ್ಕತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದನು. ಇಲ್ಲಿಂದ ಶಿಕ್ಷಣವು ಸಾರ್ವತ್ರೀಕರಣಗೊಳ್ಳತೊಡಗಿತು.
  • ಭಾರತದಲ್ಲಿ ಬ್ರಿಟಿಷ್ ಆಡಳಿತ ಬೆಳೆದಂತೆ ಸಮಸ್ಯೆಗಳೂ ಬೆಳೆದವು. ಅವುಗಳ ನಿವಾರಣೆಗಾಗಿ ಆಡಳಿತ ಕ್ಷೇತ್ರದಲ್ಲಿ ಸುಧಾರಣೆ ತರುವ ಅಗತ್ಯತೆ ಇದ್ದುದರಿಂದ ಬ್ರಿಟಿಷರು ಕಾಲಕಾಲಕ್ಕೆ ವಿವಿಧ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರುವ ಪ್ರಯತ್ನ ನಡೆಸಿದರು. ಈ ರೀತಿಯ ಕಾಯ್ದೆಗಳು ಭಾರತದ ಸಾಂವಿಧಾನಿಕ ಬೆಳವಣಿಗೆಗೆ ಸಹಕಾರಿಯಾದವು.

ಇತರೆ ವಿಷಯಗಳು :

ಮೈಸೂರಿನ ಒಡೆಯರು ಹಾಗೂ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ನೋಟ್ಸ್

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ‌ ಸಮಾಜ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *