10th Standard Shukanasana Upadesha Kannada Notes Question Answer Summery Guide Extract Mcq Pdf Download in Kannada Medium Karnataka State Syllabus 2025 ಶುಕನಾಸನ ಉಪದೇಶ notes 10ನೇ ತರಗತಿ ಶುಕನಾಸನ ಉಪದೇಶ ಕನ್ನಡ ನೋಟ್ಸ್ ಪ್ರಶ್ನೋತ್ತರ ಶುಕನಾಸನ ಉಪದೇಶ ಸಾರಾಂಶ ಶುಕನಾಸನ ಉಪದೇಶ Kannada Notes Pdf 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು 10th kannada 6th lesson shukanasana upadesha notes 10th standard kannada notes kseeb solutions for class 10 kannada shukanasana upadesha

ಕೃತಿಕಾರರ ಪರಿಚಯ
“ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯ” ರವರು ಉಡುಪಿಯಲ್ಲಿ 1935ರ ಆಗಸ್ಟ 3 ರಂದು ಜನಿಸಿದರು ಇವರ ತಂದೆ ಪಡುಮನ್ನೂರು ನಾರಾಯಣ ಆಚಾರ್ಯ, ಮೂರು ದಶಕಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ ಡಾ ಬನ್ನಂಜೆ ಗೋವಿಂದಾಚಾರ್ಯರವರು ಕರ್ನಾಟಕ ಕಂಡ ಬಹು ದೊಡ್ಡ ಸಂಸ್ಕೃತ-ಕನ್ನಡ ವಿದ್ವಾಂಸರು. ಶ್ರೀಯುತರು ಸಂಸ್ಕೃತದಲ್ಲಿ 30, ಕನ್ನಡದಲ್ಲಿ 130 ಕೃತಿಗಳನ್ನು ರಚಿಸಿದ್ದಾರೆ. ವೇದೋಪನಿಷತ್ತುಗಳು ಹಾಗೂ ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಕುರಿತು 30,000 ಗಂಟೆಗಳಷ್ಟು ಉಪನ್ಯಾಸ (ಭಾಷಣ ಮಾಡಿದ್ದಾರೆ) ನೀಡಿದ್ದಾರೆ. “ವಿದ್ಯಾವಾಚಸ್ಪತಿ ಎಂಬುದು ಅವರ ಪಾಂಡಿತ್ಯಕ್ಕೆ ಸಂದ ಬಿರುದು.
ಇವರು ರಚಿಸಿದ ಇತರ ಕೃತಿಗಳೆಂದರೆ- “ಮಹಾಶ್ವೇತೆ” “ಭಗವಂತನ ನಾಲ್ಕುಡಿ”, “ಮುಗಿಲ ಮಾತು,” ಹೇಳದೆ ಉಳಿದದ್ದು “ನೆನಪಾದಳು ಶಕುಂತಲೆ”, “ಆವೆಯ ಮಣ್ಣಿನ ಆಟದ ಬಂಡಿ,” “ಋತುಗಳ ಹೆಣಿಗೆ”- ಇವು ಇವರ ಕೆಲವು ಸಾಹಿತ್ಯ ಕೃತಿಗಳು ಶ್ರೀಯುತರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
- ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
- ಡಾ॥ ಗೋವಿಂದಾಚಾರ್ಯರು ಅಖಿಲ ಭಾರತ ಸಂಸ್ಕೃತ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಭಾರತ ಸರಕಾರವು ಇವರಿಗೆ “ಪದ್ಮಶ್ರೀ ಪ್ರಶಸ್ತಿ” ಯನ್ನಿತ್ತು ಗೌರವಿಸಿದೆ.
ಪ್ರಸ್ತುತ ಪಾಠವನ್ನು “ಕಾದಂಬರಿ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಇದು ಬಾಣ ಭಟ್ಟನು ಸಂಸ್ಕೃತದಲ್ಲಿ ಬರೆದ “ಕಾದಂಬರಿ” ಕೃತಿಯ ಕನ್ನಡಾನು ವಾದವಾಗಿದೆ.
ಅಭ್ಯಾಸ
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1) ಯಾರಿಗೆ ಗುರುವಾಣಿ ಹೊರೆಯೆನಿಸುತ್ತದೆ?
ಮೂರ್ಖನಿಗೆ ಗುರುವಾಣಿ ಹೊರೆಯೆನಿಸುತ್ತದೆ.
2) ಯಾರ ಕಿವಿಗೆ ಉಪದೇಶ ನಾಟುವುದಿಲ್ಲ?
ರಾಜರ ಮನೆತನದಲ್ಲಿ ಹುಟ್ಟಿದವರಿಗೆ ಅಹಂಕಾರದಿಂದ ಅವರ ಕಿವಿ ಕಿವುಡಾಗಿ ಎಂತಹ ಉಪದೇಶವೂ ಅವರ ಕಿವಿಗೆ ನಾಟುವುದಿಲ್ಲ.
3) ದುಡ್ಡಿನ ಪೈತ್ಯ ಅಡರಿದವರಿಗೆ ಯಾವುದು ಕ್ಷುದ್ರವಾಗಿ ಕಾಣುತ್ತದೆ?
ದುಡ್ಡಿನ ಪೈತ್ಯ ಅಡರಿದವರಿಗೆ ಜಗತ್ತೆಲ್ಲ ಕ್ಷುದ್ರವಾಗಿ ಕಾಣುತ್ತದೆ.
4) ಗುರುಪದೇಶದ ಗುಣಗಳನ್ನು ಪಟ್ಟಿಮಾಡಿ.
ಗುರುಪದೇಶದ ಗುಣಗಳೆಂದರೆ
1) ನಿರ್ಮಲವಾದ ಮನಸ್ಸು
2) ಪರಿಶುದ್ಧತೆ
3) ಸಜ್ಜನರ ಕಿವಿಗೆ ಇದೊಂದು (ಗುರುಪದೇಶ) ಒಂದು ಆಭರಣ.
4) ಕತ್ತಲನ್ನು ಕಳೆಯುವ ಚಂದ್ರನಂತಿರುತ್ತದೆ.
5) ಚಂದನದ ಕೊರಡಿನಂತೆ
5) ರಾಜರ ಪ್ರಕೃತಿ ಹೇಗಿರುತ್ತದೆ?
ರಾಜರ ಪ್ರಕೃತಿ ದುರಂಕಾರದಿಂದ ಕೂಡಿದ್ದು ಕಿವಿ ಕಿವುಡಾಗಿರುತ್ತದೆ. ಅನಾದರ ಹೆಚ್ಚಾಗಿರುತ್ತದೆ. ಅಹಂಕಾರದ ದಾಹಜ್ವರ ತಲೆಗೇರಿ ಒಂದು ಬಗೆಯಲ್ಲಿ ಕತ್ತಲು ತುಂಬಿರುತ್ತದೆ. ದುಡ್ಡಿನ ದುರಾಭಿಮಾನ ಹೆಚ್ಚಾಗಿ ಜಗತ್ತೆಲ್ಲವನ್ನು ಕ್ಷುದ್ರವಾಗಿ ಕಾಣುವರು ಬುದ್ದಿ ಮಂಕಾಗಿ ಬಿಡುತ್ತದೆ.
6) ಗುರುಪದೇಶ ಯಾರಿಗೆ ಮೆಚ್ಚಿಗೆಯಾಗುವುದಿಲ್ಲ?
ಮೂರ್ಖರಿಗೆ ರಾಜಮನೆತನದಲ್ಲಿ ಹುಟ್ಟಿದವರಿಗೆ ದುಡ್ಡಿನ ದುರಾಭಿಮಾನಿಗಳಿಗೆ ಅಧಿಕಾರದ ಸೋಂಕು ತಾಗಿದವರಿಗೆ ನಿರ್ಮಲ ಮನಸ್ಸಿಲ್ಲದವರಿಗೆ ಗುರುಪದೇಶ ಮೆಚ್ಚುಗೆಯಾಗುವುದಿಲ್ಲ.