10th Standard Kannada Shabari Lesson Notes Question Answer Summery Guide Extract Mcq Pdf Download in Kannada Medium Karnataka State Syllabus 2025 Kseeb Solutions For Class 10 Kannada Chapter 6 Notes Shabari Lesson Notes in Kannada 10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್ ಪ್ರಶ್ನೆ ಉತ್ತರಗಳು ಶಬರಿ ಪಾಠದ ಪ್ರಶ್ನೋತ್ತರಗಳು pdf ಶಬರಿ ಪಾಠದ ಸಾರಾಂಶ Shabari lesson summary in kannada shabari poem 10th standard notes ಶಬರಿ ಪಾಠದ ಕೊಶನ್ ಆನ್ಸರ್ ಶಬರಿ ಪಾಠ 10ನೇ ತರಗತಿ shabari lesson in kannada 10th shabari lesson summary in kannada

10ನೇ ತರಗತಿ ಶಬರಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು
ಲೇಖಕರ ಪರಿಚಯ
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಪುರೋಹಿತ ತಿರುನಾರಾಯಣಯ್ಯಂಗಾರ್ -ನರಸಿಂಹಾಚಾರ್ಯ” ಇವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಇವರು ಜನಿಸಿದ್ದು ಕ್ರಿ..ಶ.1905 ರಲ್ಲಿ. ಶ್ರೀಯುತರು ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಪು.ತಿ.ನ. ರವರು ಗದ್ಯನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ‘ಗೀತನಾಟಕ’ ಶೈಲಿ ಇವರ ಕೃತಿಗಳ ವೈಶಿಷ್ಟ್ಯ. ಇವರು ರಚಿಸಿದ ರೂಪಕಗಳೆಂದರೆ – “ಅಹಲೈ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ” ಇದಲ್ಲದೆ ಇವರ ಪ್ರಸಿದ್ದ ಕೃತಿಗಳೆಂದರೆ ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ.” “ಹಣತೆ, ರಸಸರಸ್ವತಿ, ಗಣೇಶದರ್ಶನ,
“ಹಂಸದಮಯಂತಿ” ರೂಪಕ ಕೃತಿಗೆ “ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”, ಶ್ರೀಹರಿಚರಿತೆ” ಕಾವ್ಯಕೃತಿಗೆ “ಪಂಪ ಪ್ರಶಸ್ತಿ” ಲಭಿಸಿದೆ.
ಪದ ವಿಂಗಡಣೆ
ನೀನು + ಎಂದು + ಐತರುವೆ : ನಿನ್ನ + ಎಡೆಗೆ + ಐದುವೆ : ನಾನು + ಎರೆವೆ; ತೇಜಕೆ + ಎಡೆ, ಈಕೆಗೆ + ಎನ್ನಿಂದ : ಬೀಡು + ಇಲ್ಲಿ; ನಮ್ಮ + ಆಯೋಧ್ಯೆಯ + ಅರಮನೆಯೊಳು; ಇನಿತು + ಅದರೆ, ಎನಿತು + ಉದಾರ
ಪದಗಳ ಅರ್ಥ
ಅಣಿ – ಸಿದ್ಧತೆ | ಅಬ್ಬೆ – ತಾಯಿ |
ಅರಿ – ತಿಳಿ | ಅರ್ತಿ – ಪ್ರೀತಿ |
ಅಸುರ – ರಾಕ್ಷಸ | ಅಳಲು – ದುಃಖ |
ಆದರ – ಪ್ರೀತಿ | ಆನನ – ಮುಖ |
ಅನು – ತಾಳು | ಉಲ್ಕೆ – ಆಕಾಶದಿಂದ ಭೂಮಿಗೆ ಭೀಳುವ ತೇಜಃಪುಂಜವಾದ ಆಕಾಶಕಾಯ |
ಊಣೆಯ – ಕೊರತೆ | ಎಂಥರೋ – ಎಂತಹವರೋ |
ಎಡೆ – ಸ್ಥಳ | ಎರೆ – ಬೇಡು , ಪ್ರಾರ್ಥಿಸು |
ಐದಿ – ಹೋಗಿ | ಕಂಪು – ಸುವಾಸನೆ |
ಕಡು – ಅತಿ | ಕರ – ಕೈ |
ಕರುಕ – ಉರಿದಬತ್ತಿಯ ಕಪ್ಪು ಭಾಗ | ಚಿರ – ಶಾಶ್ವತ |
ಚೀರ – (ತ್ಸ) ಸೀರೆ (ದ್ಭ) – ನಾರು ಬಟ್ಟೆ | ತಣಿವು – ತೃಪ್ತಿ |
ತವಸಿ (ದ್ಭ) – ತಪಸ್ವಿ (ತ್ಸ) | ತುಸ – ಸ್ವಲ್ಪವೂ |
ತೃಷೆ – ಬಾಯಾರಿಕೆ | ತೇಜ – ಕಾಂತಿ |
ದಿಟ್ಟಿ (ದ್ಭ) – ದೃಟಿ (ತ್ಸ) | ಧೃತಿ – ದೈರ್ಯ |
ನಲ್ಮೆ – ಪ್ರೀತಿ | ನೆಚ್ಚು – ನಂಬು |
ನೆರವು – ಸಹಾಯ | ಪದ – ಪಾದ |
ಪೆರೆ – ಚಂದ್ರ | ಪೊಗಳು – ಹೊಗಳು |
ಬೆಂಬಲ – ಗುಂಪು | ಬನ್ನ – ಕಷ್ಟ, ತೊಂದರೆ |
ಬಯಕೆ – ಇಚ್ಚೆ | ಬಳಿ – ದಾರಿ |
ಬೆರಗು – ಆಶ್ಚರ್ಯ | ಬೇಗ – ದುಃಕವೆಂಬ ಬೆಂಕಿ |
ಮಧುಪರ್ಕ – ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ನೀರು. ಜೇನುತುಪ್ಪ ಸಕ್ಕರೆ ಮುಶ್ರಿತ ಪಾನೀಯ | ಮರುಳು – ಮೋಡಿ |
ರೇವು – ಬಂದರು | ಲೇಸು – ಉತ್ತಮ |
ವೇದಿ – ಹೋಮ ನಡೆಯುವ ಸ್ಥಳ | ಶ್ರಮಣಿ – ತಪಸ್ವಿನಿ |
ಸನಿಯ (ಹ) – ಸಮೀಪ | ಸವಿ – ಸಿಹಿ |
ಸಿದ್ಧ – ತಪಸ್ವಿ | ಸುರಭಿ – ಕಾಮಧೇನು |
ಹವಣು – ಸಿದ್ಧತೆ | ಹಳು – ಕಾಡು |
ಅ. ಕೊಟ್ಟಿರುವ ರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1) ಶ್ರೀರಾಮನ ತಂದೆಯ ಹೆಸರೇನು?
ಶ್ರೀರಾಮನ ತಂದೆಯ ಹೆಸರು “ದಶರಥ”.
2) ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಶಬರಿ ಶ್ರೀರಾಮನಿಗೆ ಸಮರ್ಪಿಸಲು ಶಬರಿ ಚೆನ್ನಾಗಿರುವ ಹೂ, ಹಣ್ಣು- ಹಂಪಲುಗಳನ್ನು ತರುವಳು.
3) ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ಸಿನಿ ಯಾರು ?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ‘ಶಬರಿ’.
4) ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ತಪಸ್ವಿಗಳಾದ “ದನು”.
5) “ಶಬರಿ” ಗೀತನಾಟಕದ ಕರ್ತೃ ಯಾರು?
“ಶಬರಿ” ಗೀತನಾಟಕದ ಕರ್ತೃ ಪು.ತಿ.ನ, (ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ)
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :
1) ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ರಾಮನು ಗಿರಿವನವನ್ನು – ಹೇ ! ಗಿರಿವನಗಳೇ ಭೂಮಿಜಾತೆ, ಸೀತೆ ಎನಗೆ ದೊರೆವಳೇ? ಎಲ್ಲಿರುವಳೆಂದು ಹೇಳಿ? ಆಕೆ ನನಗೆ ದೊರೆವಳೇ? ಅಥವಾ ದೊರೆಯಳೇ? ನಿಮ್ಮಗಳಿಗೆ ಬೇಡಿಕೊಳ್ಳುವೆ ಎಂದು ಬೇಡಿಕೊಳ್ಳುವನು.
2) ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಲಕ್ಷ್ಮಣನು ಅಣ್ಣನನ್ನು – ಅಣ್ಣ ತಾಳಿಕೋ ತೇಜಸ್ಸನ್ನು ಹೊಂದಿರುವ ಸೂರ್ಯನೇ ತೇಜಸ್ಸನ್ನು ಕಳೆದುಕೊಂಡರೆ ಹೇಗೆ? ಧೈರ್ಯಗೆಡಬೇಡ, ತಾನು ಆಕೆಯನ್ನು ಒಂಟಿಯಾಗಿ ಬಿಟ್ಟು ಬಂದುದೇ ತಪ್ಪಾಯಿತು. ಸೂರ್ಯನ ಸಮಾನನಾದ ರಾಮನೇ ಧೈರ್ಯಗೆಟ್ಟರೆ, ಸ್ಥೆರ್ಯ ಹೇಳುವವರು ಯಾರು? ತಾಳಿಕೋ ಅಣ್ಣಯ್ಯ “ತಾಳಿಕೋ” ಎಂದು ಲಕ್ಷ್ಮಣನು ಅಣ್ಣನನ್ನು ಸಂತೈಸಿದನು.
3) ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ದತೆಗಳೇನು?
ಶಬರಿ ಪ್ರತಿದಿನವೂ ವನಕ್ಕೆ ಹೋಗಿ ಒಳ್ಳೆಯ, ಪಕ್ವವಾದ ಹಣ್ಣುಗಳನ್ನು, ಕಂಪನ್ನು ಬೀರುವ ಹೂಗಳನ್ನು ಹುಡುಕಿ ಹುಡುಕಿ ತಂದು ರಾಮ ಬಾರಯ್ಯ ಎಂದು ದಾರಿ ಕಾಯುತ್ತಾ ತಾನು ತಂದ ಹೂ ಹಣ್ಣುಗಳನ್ನು ಜೋಡಿಸಿಟ್ಟು ರಾಮನ ಸ್ವಾಗತಕ್ಕಾಗಿ ಶಬರಿ ಸಿದ್ಧತೆ ಮಾಡಿಕೊಂಡಿದ್ದಳು.
4) ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಶಬರಿ ಬಹಳ ವರ್ಷಗಳಿಂದ ರಾಮನ ದರ್ಶನಕ್ಕಾಗಿ ಹಣ್ಣು-ಹೂವಿಟ್ಟು ದಾರಿ ಕಾಯುತ್ತಾ ಕುಳಿತಿದ್ದಳು, ರಾಮನು ದಾರಿಹೋಕನಾಗಿ ಆಶ್ರಯ ಕೇಳಿ ಬಂದು ತನ್ನ ಪರಿಚಯ ಮಾಡಿಕೊಂಡಾಗ ಶಬರಿಗಾದ ಸಂತೋಷ ಅಷ್ಟಿಷ್ಟಲ್ಲ. ಬಹಳ ಹಿಂದೆ ಮತಂಗ ಋಷಿಗಳು ‘ರಾಮಲಕ್ಷ್ಮಣರು’ ಈ ಆಶ್ರಮಕ್ಕೆ ಬಂದೇ ಬರುವರು ಎಂಬ ಮಾತು ಕೇಳಿದ ದಿನದಿಂದ ಶಬರಿ ಅವರಿಗಾಗಿ ಹಣ್ಣುಗಳನ್ನು ತಂದಿಟ್ಟು ಉಪಚರಿಸಲು, ಸತ್ಕರಿಸಲು ಕಾಯುತ್ತಿದ್ದಳು.
ಇಂದು ರಾಮ-ಲಕ್ಷ್ಮಣರು ಬಂದಾಗ ಸಂತೋಷದಿಂದ ಹೂಮಾಲೆಯನ್ನು ಕೊರಳಿಗಿಟ್ಟು ಹಿಗ್ಗಿ, ಇದು ರುಚಿಯಾದ ಹಣ್ಣೆಂದು ಇಷ್ಟೊಂದು ರುಚಿಯಾದ ಹಣ್ಣು ಜಗತ್ತಿನಲ್ಲಿಯೇ ಇಲ್ಲವೆಂದು, ತಮಗಾಗಿಯೇ ತಂದಿರುವೆನೆಂದು ಹೇಳಿ ಅವರಿಗೆ ಕೊಟ್ಟು ಉಪಚರಿಸಿ ಸತ್ಕರಿಸಿದಳು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
1) ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ತಪಸ್ವಿ ‘ದನು’ ವಿನ ಮಾತಿನಂತೆ ಕಾಡಿನಲ್ಲಿ ಅರಸುತ್ತಾ ಶಬರಿಯನ್ನು ಕಂಡು ರಾಮ-ಲಕ್ಷ್ಮಣರು ಆಕೆಯ ಬಳಿ ಬಂದು “ದಾರಿಹೋಕರಿಗೆ ಆಶ್ರಯ ದೊರಕುವುದೇ?” ಎಂದು ಕೇಳಲು ಶಬರಿ ಅವರನ್ನು ದಿಟ್ಟಿಸಿ ನೋಡಿ “ನೀ ರಾಮನೇ?” ಎಂದು ಕೇಳಲು ರಾಮನು – ಹೌದು ತಾಯಿ ತಾನೇ ರಾಮನು ಈತ ನನ್ನ ತಮ್ಮ ಸೌಮಿತ್ರಿ” ಎಂದಾಗ ಶಬರಿ ಆತನ ಕೈಯನ್ನು ಕಣ್ಣಿಗೊತ್ತಿಕೊಂಡು, ಆತನ ಕೊರಳಿಗೆ ಪರಿಮಳ ತುಂಬಿದ ಹೂಮಾಲೆ ಹಾಕಿ, ‘ ರುಚಿ ರುಚಿಯಾದ ಹಣ್ಣುಗಳನ್ನು ಕೊಟ್ಟು ಸತ್ಕರಿಸಿ,
“ಪಾನೀಯ ಸುಖಿ, ಪರಮ ಸುಖಿ” ಎನಗೆ ಇಂದು ಬಲು ಸಂತಸವಾಗಿದೆ. ಸಿದ್ದರು (ಮಾತಂಗ ಮುನಿಗಳು) ಅಂದು ನೀಡಿದ ವರ ಲಭಿಸಿದೆ. ತಾನೇ ಪುಣ್ಯವಂತೆ. ಇಂದಿಗೆ ಹಿಂಗಿ ಹೋಯಿತಲ್ಲ ಚಿಂತೆಯೆಲ್ಲ ಎಂದು ಹಿಗ್ಗಿ ಸುಖಿಸಿದಳು.
2) ಶಬರಿಯ ಸಡಗರ, ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ರಾಮ-ಲಕ್ಷ್ಮಣರನ್ನು ಕಂಡು ಶಬರಿ ಸಂತೋಷದಿಂದ ಸಡಗರ ಪಡುತ್ತಾಳೆ. ಅವಳ ಸಂತೋಷವನ್ನು ಕಂಡು ಮುಂದೆ ಮೇಳದವರು ಈ ರೀತಿ ಹಾಡುತ್ತಾರೆ.
“ಶಬರಿ ರಾಮನನ್ನು ಕಂಡು ಆಶ್ಚರ್ಯ ಸಂತೋಷದಿಂದ ಆತನ ಕೈ ಹಿಡಿದು ತನ್ನ ಕಣ್ಣುಗಳಿಗೆ ಒತ್ತಿಕೊಂಡಳು. ಬಗೆಬಗೆಯ ಕಂಪನಿಡುವ ವನಮಾಲೆಯನ್ನು ಕೊರಳಿಗೆ ಹಾಕಿ ಒಳೊಳ್ಳೆಯ ರುಚಿಯಾದ ಹಣ್ಣುಗಳನ್ನು ತಂದು, ಇಂತಹ ಹಣ್ಣುಗಳು ಈ ಜಗತ್ತಿನಲ್ಲಿಯೇ ಇಲ್ಲ. ನಿಮಗಾಗಿಯೇ ಆರಿಸಿ ತಂದಿದ್ದೇನೆ ಎಂದು ಉಪಚರಿಸಿ ಸತ್ಕರಿಸಿದಳು. ಇದರಿಂದ ರಾಜಕುಮಾರರು ಬಲು ಪ್ರಸನ್ನಗೊಂಡರು.
3) ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಅಂದು ಸಿದ್ದಗುರುಗಳಾದ ಮಾತಂಗ ಋಷಿಗಳು ಶಬರಿಗೆ – “ರಾಮಲಕ್ಷ್ಮಣರು ಇಲ್ಲಿಗೆ ಬಂದೇ ಬರುವರು, ನಿನ್ನ ಇಷ್ಟಾರ್ಥ ಖಂಡಿತ ನೆರವೇರುವುದು. ಸಹನೆಕಳೆದುಕೊಳ್ಳದೆ ತಾಳ್ಮೆಯಿಂದ ಕಾದಿರು” ಎಂದು ಹರಸಿ ವರವನ್ನು ಕೊಟ್ಟಿದ್ದರು. ಶಬರಿ ಅಂದಿನಿಂದ ತನ್ನ ವೃದ್ದಾಪ್ಯದವರೆಗೂ ರಾಮ ಬರುವನೆಂದು ಪ್ರತಿದಿನವೂ ಬನದಿಂದ ಉತ್ತಮವಾದ ಹೂ-ಹಣ್ಣುಗಳನ್ನು ಆಯ್ದು ತರುತ್ತಿದ್ದಳು. ರಾಮನಿಗಾಗಿ ಕಾಯುತ್ತಿದ್ದಳು, ಅಂತು ಅವಳಿಗೆ ನಿರಾಶೆ ಆಗಲಿಲ್ಲ. ಆದಿನ ಬಂದೇ ಬಂದಿತು. ಆಗ ಶಬರಿಗಾದ ಆನಂದ, ಸಂತೋಷ, ಉತ್ಸಾಹ ಅಷ್ಟಿಷ್ಟಲ್ಲ ತನ್ನ ಗುರುಗಳು ಹೇಳಿದ ಮಾತು ನಿಜವಾಯಿತೆಂದು ಹಿಗ್ಗಿದಳು. ಈ ರೀತಿ “ನಂಬಿ ಕೆಟ್ಟವರಿಲ್ಲ” ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.
ಈ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. ʼಆವುದೀ ಮರುಳು? ನಮ್ಮೆಡೆಗೆ ಬರುತಿಹುದುʼ.
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಶ್ರೀ ಪು.ತಿ.ನ. ರವರಿಂದ ರಚಿತವಾಗಿದೆ “ಶಬರಿ” ಎಂಬ ಗೀತನಾಟಕದಿಂದ ಆರಿಸಲಾಗಿದೆ.
ಸಂದರ್ಭ: ರಾಮಲಕ್ಷ್ಮಣರು ಸೀತೆಯನ್ನು ಅರಸುತ್ತಾ ಬನದಲ್ಲಿ ಸುತ್ತಾಡುತ್ತಾ ಮಾತಂಗ ಋಷಿಗಳ ಆಶ್ರಮದೆಡೆಗೆ ಬರುತ್ತಾರೆ. ಆಶ್ರಮದಲ್ಲಿ ವಾಸವಾಗಿದ್ದ ಶಬರಿ ಬನದಿಂದ ಹೂ ಹಣ್ಣುಗಳನ್ನು ಹೊತ್ತು ಪುನಃ ಆಶ್ರಮದೆಡೆಗೆ ಬರುವುದನ್ನು ಕಂಡ ರಾಮನು ಲಕ್ಷಣನಿಗೆ ಈ ಮಾತು ಹೇಳುತ್ತಾನೆ.
ವಿವರಣೆ : ವೃದ್ಧೆಯಾದ ಶಬರಿ ತಪಸ್ವಿನಿಯಂತೆ | ಕಾಣುತ್ತಿದ್ದಳು. ಅಷ್ಟು ವೃದ್ದೆಯಾದ ಈಕೆ ಕೈ ಹಣ್ಣು-ಹೂಗಳನ್ನು ತಲೆಯ ಮೇಲೆ ಕಂಕುಳಲ್ಲಿ ಹಿಡಿದು | ತರುವುದನ್ನು ಕಂಡು ಆಶ್ಚರ್ಯದಿಂದ ರಾಮನು – ಯಾರೀ ವೃದ್ಧ ತಪಸ್ಸಿನಿ, ತಾವು ಇರುವ ಕಡೆ ನಮ್ಮನ್ನೇ ಹುಡುಕಿ ಬರುತ್ತಿರುವಂತೆ ಕಾಣುತ್ತಿದೆಯಲ್ಲಾ ಎಂಬುದಾಗಿ ಆಶ್ಚರ್ಯದಿಂದ ಲಕ್ಷ್ಮಣನಿಗೆ ಹೇಳುತ್ತಾನೆ.
ವಿಶೇಷತೆ : ಶಬರಿಯ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡಲಾಗಿದೆ. ನಾಟಕೀಯ ಭಾಷಾ ಪ್ರಯೋಗ ವಿಶಿಷ್ಟವಾಗಿದೆ. ಆದರೂ ಸರಳವಾಗಿ ಮನೋಜ್ಞವಾಗಿ ಚಿತ್ರಿತವಾಗಿದೆ.
2) “ನಾಚುತಿಹೆನೀ ಪೂಜೆಯೀ ನಲುಮೆಯಿಂದ”
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಶ್ರೀ ಪು.ತಿ.ನ. ರವರಿಂದ ರಚಿತವಾಗಿರುವ “ಶಬರಿ” ಎಂಬ ಗೀತನಾಟಕದಿಂದ ಆರಿಸಲಾಗಿದೆ.
ಸಂದರ್ಭ : ಶಬರಿ ಬನದಿಂದ “ರಾಮ ಈ ದಿನ ಬರುವನೆಂದು” ಎಂದಿನಂತೆ ತಾಜಾ-ಸ್ವಚ್ಛ ಪರಿಮಳಭರಿತ ಹೂ-ಹಣ್ಣುಗಳನ್ನು ವೃದ್ದೆಯಾದ ಅವಳು ರಾಮನಿಗಾಗಿ ರಾಮ ಈ ದಿನವಾದರೂ ಬಾರಯ್ಯ, ಬಾ ಬಾ ರಾಮ ನಿನಗಾಗಿ ರುಚಿಯಾದ ಹಣ್ಣು ತಂದಿದ್ದೇನೆ. ನೀನು ಬಾರದೇ ನನಗೂ ಈ ಹಣ್ಣು ಸೇರದಯ್ಯ …… ಎಂದು ಹಲುಬುತ್ತಾ ಆಶ್ರಮದೊಳಗೆ ಹೋಗುವುದನ್ನು ಕಂಡ ರಾಮನಿಗೆ ಈಕೆ ಯಾರಿರಬಹುದು? ತನ್ನಿಂದ ಈಕೆಗೆ ಏನು ಉಪಕಾರವಾದೀತು ? ತನ್ನನ್ನು ನೋಡದೆಯೇ ಏತಕ್ಕೆ ತನ್ನ ಬರುವಿಕೆಗೆ ಈಕೆ ಹೀಗೆ ಕಾದಿರುವಳು? ಎಂಬುದಾಗಿ ಯೋಚಿಸುತ್ತಾ ಲಕ್ಷ್ಮಣನಿಗೆ ಈ ಮಾತನ್ನು ಹೇಳುವನು.
ವಿವರಣೆ : ಈಕೆಯ ಅಂದರೆ ಶಬರಿಯ ಪ್ರೀತಿಯ ಪೂಜ್ಯಭಾವನೆ ಕಂಡು ಅಂತರಾಳದ ಪ್ರೇಮಭಾವನೆ ಕಂಡು ಸಂಕೋಚವಾಗುತ್ತಿದೆ ಎಂಬುದಾಗಿ ರಾಮ ನುಡಿಯುತ್ತಾನೆ.
ವಿಶೇಷತೆ : ಪ್ರಸ್ತುತ ಈ ಸಾಲಿನಲ್ಲಿ ಶಬರಿಯ ಅನನ್ಯ ಭಕ್ತಿಭಾವ, ಪ್ರೇಮಭಾವನೆ ಮೂಡಿ ಬಂದಿದೆ. ಕಾವ್ಯಮಯ ಶೈಲಿ ಪಾತ್ರಕ್ಕೆ ಒಪ್ಪುವ ರೀತಿಯಲ್ಲಿದ್ದು ಭಾಷೆಯ ಸರಳತೆ ಕುತೂಹಲವನ್ನುಂಟು ಮಾಡುತ್ತದೆ.
3) “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಶ್ರೀ ಪು.ತಿ.ನ. ರವರಿಂದ ರಚಿತವಾಗಿರುವ “ಶಬರಿ” ಎಂಬ ಗೀತನಾಟಕದಿಂದ ಆರಿಸಲಾಗಿದೆ.
ಸಂದರ್ಭ : ಸೀತೆಗಾಗಿ ಅರಸುತ್ತಾ ಬಂದ ರಾಮ-ಲಕ್ಷ್ಮಣರು ಕಾಡೆಲ್ಲಾ ಸುತ್ತಿ ದಣಿದು ಮಾತಂಗ ಋಷಿಗಳ ಆಶ್ರಮದ ಬಳಿಬಂದು ವೃದ್ಧೆ ಶಬರಿಯನ್ನು ಕಾಣುತ್ತಾರೆ. ‘ಶಬರಿ’ ರಾಮಬಾರಯ್ಯ ಈ ದಿನವಾದರೂ ಬಾರಯ್ಯ ಎಂದು ಹಲುಬುವುದನ್ನು ಕೇಳಿ ಅವರಿಗೆ ಆಶ್ಚರ್ಯವಾಗುತ್ತದೆ. ನಂತರ ಆಶ್ರಮದ ಬಳಿಬಂದು ತಪಸ್ವಿಯಾದ ಶಬರಿಯನ್ನು ಕಂಡು ರಾಮನು ಈ ಮೇಲ್ಕಂಡ ಮಾತನ್ನು ಆಡುತ್ತಾನೆ.
ವಿವರಣೆ : “ತಾವು ದಾರಿಹೋಕರು, ಸೀತೆಯನ್ನು ಅರಸುತ್ತಾ ಬಂದು ದಣಿದೆವು, ಇಂದು ತಂಗಲು ಆಶ್ರಮದಲ್ಲಿ ಅವಕಾಶವಿರುವುದೇ? ಎಂಬುದಾಗಿ ರಾಮನು ಶಬರಿಯನ್ನು ಕೇಳುತ್ತಾನೆ.
ವಿಶೇಷತೆ : ರಾಮನ ವಿಧೇಯ ವ್ಯಕ್ತಿತ್ವ ಇಲ್ಲಿ ಮೂಡಿ ಬಂದಿದೆ.
ಗೀತನಾಟಕದ ಕಾವ್ಯಮಯ ಭಾಷಾ ಶೈಲಿ ಆಕರ್ಷಕವಾಗಿದೆ.
4) “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ”
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಶ್ರೀ ಪು.ತಿ.ನ. ರವರಿಂದ ರಚಿತವಾಗಿರುವ “ಶಬರಿ” ಎಂಬ ಗೀತನಾಟಕದಿಂದ ಆರಿಸಲಾಗಿದೆ.
ಸಂದರ್ಭ : ರಾಮಲಕ್ಷ್ಮಣರು, ತಪಸ್ವಿನಿ ಶಬರಿಯ ಆಶ್ರಮಕ್ಕೆ ಬಂದು ಆಕೆಯ ಉಪಚಾರವನ್ನು ಸ್ವೀಕರಿಸಿದಾಗ ಶಬರಿಗಾಗುವ ಆನಂದಕ್ಕೆ ಪಾರವೇ ಇರುವುದಿಲ್ಲ. ಅವಳ ಕಣ್ಣುಗಳು ಆನಂದದಿಂದ ಭಾಷ್ಪತರಲು ರಾಮನು “ನೀನು ನನ್ನ ತಾಯಿಯಂತೆ” ಎಂಬ ಮಾತನ್ನು ಕೇಳಿದ ಶಬರಿ, ರಾಮನ ಉದಾರಗುಣ ಹಾಗೂ ರೂಪವನ್ನು ಹೊಗಳುತ್ತಾ ಈ ವಾಕ್ಯವನ್ನು ಹೇಳುತ್ತಾಳೆ.
ವಿವರಣೆ : ರಾಮನು ನೋಡಲು ಎಷ್ಟು ರೂಪವಂತನೋ, ಅಷ್ಟೇ ಉದಾರಗುಣವುಳ್ಳವನು ಎಂಬ ಮಾತನ್ನು ಶಬರಿ, ರಾಮನ ಬಗ್ಗೆ ಆಡುತ್ತಾಳೆ.
ವಿಶೇಷತೆ : ರಾಮನ ವ್ಯಕ್ತಿತ್ವ ಮೂಡಿಬಂದಿದೆ. ಗೀತ ಶೈಲಿಯ ಭಾಷೆ ಸರಳವಾಗಿದೆ.
5) “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾನರು”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಶ್ರೀ ಪು.ತಿ.ನ. ರವರಿಂದ ರಚಿತವಾಗಿರುವ “ಶಬರಿ” ಎಂಬ ಗೀತನಾಟಕದಿಂದ ಆರಿಸಲಾಗಿದೆ.
ಸಂದರ್ಭ : ರಾಮ ಲಕ್ಷ್ಮಣರನ್ನು ಕಂಡು ಧನ್ಯಳಾದ ಶಬರಿ ತನಗೆ ಪುಣ್ಯಲೋಕ ಕೊಡಿಸೆಂದು, ಮುಕ್ತಿ ಕೊಡಿಸೆಂದು ಬೇಡಿದಾಗ ರಾಮನು ಆಕೆಯ ಪ್ರೀತಿ-ವಾತ್ಸಲ್ಯಕ್ಕೆ ಕಟ್ಟುಬಿದ್ದು “ಅಸ್ತು” ಎನ್ನುತ್ತಾನೆ. ಪಂಚಭೂತದಲ್ಲಿ ಲೀನಳಾದ ಶಬರಿಯ ಪ್ರೀತಿಯನ್ನು ಮಮತೆಯನ್ನು ಕಂಡ ಲಕ್ಷ್ಮಣ, ರಾಮನನ್ನು ಕುರಿತು ತಮ್ಮನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ಕಂಡಳು ಎನ್ನುತ್ತಿರುವಾಗ ರಾಮನು ‘ಶಬರಿ’ ಯ ಉದಾತ್ತ ಗುಣವನ್ನು ಉರಿದು ಬೆಳಕು ನೀಡುವ ಬತ್ತಿಗೆ ಹೋಲಿಸುತ್ತಾ ಈ ಮಾತನ್ನು ಹೇಳುತ್ತಾನೆ.
ವಿವರಣೆ : ಎಲ್ಲರೂ ಉರಿಯುವ ಬೆಳಕನ್ನು ಕಂಡು ಆನಂದ ಪಡುತ್ತಾರೆ. ಬತ್ತಿ ಉರಿದು ಕರಕಾದ ಮೇಲೆ ಯಾರೂ ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ, ಮನುಷ್ಯನ ಜನ್ಮವು ಅಂತೆಯೇ ಉರಿಯುವ ದೀಪದಂತೆ, ತಾವು ಬದುಕಿರುವವರೆಗೂ ಬೆಳಕು ಕೊಡುವ ರೀತಿಯಲ್ಲಿ ಉಪಕಾರ-ಸಹಾಯ ಮಾಡುತ್ತಾ ಬದುಕಬೇಕು. ಶಬರಿ ನಮ್ಮ ಪಾಲಿಗೆ ಬೆಳಕಾಗಿ ತಾನು ಉರಿದು ಕರಕಳಾದಳು ಎಂಬುದಾಗಿ ಹೋಲಿಸಿ ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ.
ವಿಶೇಷತೆ : ಶಬರಿಯ ಜೀವನವನ್ನು ಉರಿವ ದೀಪದ ಬತ್ತಿಗೆ ಹೋಲಿಸಲಾಗಿದೆ. ಕಾವ್ಯಮಯ ಭಾಷಾವಾದರೂ ಸರಳತೆಯಿಂದ ಕೂಡಿದೆ.
ಉ. ಹೊಂದಿಸಿ ಬರೆಯಿರಿ:
ಅ | ಬ |
---|---|
1) ಮತಂಗ | ಅ) ರಾಮ |
2) ಪು.ತಿ.ನ | ಆ) ಆಶ್ರಮ |
3) ದಶರಥ | ಇ) ಮೇಲುಕೋಟೆ |
4) ಚಿತ್ರಕೂಟ | ಈ) ಸೀತೆ |
5) ಭೂಮಿಜಾತೆ | ಉ) ಪರ್ವತಿ |
ಉತ್ತರ: 1) ಆ, 2) ಇ, 3) ಅ, 4) ಉ, 5) ಈ
ಊ. ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
1. ತಾಳಿದವನು ಬಾಳಿಯಾನು
“ತಾಳುವಿಕೆಗಿಂತ ತಪವು ಇಲ್ಲ” ಎನ್ನುವುದು ದಾಸರ ಉಪದೇಶ, ಎಂತಹ ಸಂದರ್ಭಗಳಲ್ಲಿಯೂ ತಾಳ್ಮೆಯನ್ನು, ಸಹನೆಯನ್ನು ಕಳೆದುಕೊಳ್ಳಬಾರದು. ಅಂಥಹವನಿಗೆ ಮುಂದೆ ಒಳ್ಳೆಯ ಬದುಕು ದೊರೆಯಬಹುದು ಎಂದು ಈ ಗಾದೆ ತಿಳಿಸಿ ಹೇಳುತ್ತದೆ.
ಮನುಷ್ಯನ ಜೀವನದಲ್ಲಿ ಸುಖದುಃಖಗಳು ಸಮುದ್ರದ ತೆರೆಗಳಂತೆ ಬಂದು ಹೋಗುತ್ತಿರುತ್ತವೆ. ಸುಖದುಃಖ, ಲಾಭನಷ್ಟಗಳನ್ನು ಸಮಾನವಾಗಿ ಭಾವಿಸು ಎಂದು ಭಗವದ್ಗೀತೆಯು ಉಪದೇಶಿಸುತ್ತದೆ. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೇ ಇರಬೇಕು. ಕಷ್ಟ ಬಂದಾಗ ತಾಳ್ಮೆಗೆಡಬಾರದು. ಆತುರದ ನಿರ್ಧಾರ ಮಾಡಬಾರದು. ಕಷ್ಟವನ್ನು ಸಹನೆಯಿಂದ ಎದುರಿಸಿದರೆ ಮುಂದೆ ಸುಖದ ದಿನಗಳು ಬಂದೇ ಬರುತ್ತವೆ. ಎಲ್ಲೆಲ್ಲೂ ಕಲ್ಲುಮುಳ್ಳುಗಳ ಏರು ದಾರಿಯೇ ಇರುವುದಿಲ್ಲ. ಸಮತಟ್ಟಾದ ಮೈದಾನದ ಹಾದಿಯೂ ಇರುತ್ತದೆ. ಮನುಷ್ಯನ ಬದುಕೂ ಹಾಗೆಯೇ ಸಾವಧಾನದಿಂದ, ಎಚ್ಚರಿಕೆಯಿಂದ ಸಾಗಿದರೆ ಸುಖದ ದರಿ ಸಿಕ್ಕಯೇ ಸಿಗುತ್ತದೆ” ಎಂಬುದು ಈ ಗಾದೆಯ ಸಾರಾಂಶವಾಗಿದೆ.
2. ಮನಸ್ಸಿದ್ದರೆ ಮಾರ್ಗ :
ಯಾವುದೇ ಸಾಧನೆಯನ್ನು ಸಾಧಿಸಬೇಕಾದರೂ ಮನಸ್ಸು ಮಾಡಬೇಕು. ಸಾಧಿಸಿಯೇ ತೀರುತ್ತೇನೆಂಬ ಛಲವಿರಬೇಕು. ಆಗ ಪ್ರಯತ್ನದ ಹಾದಿ ತೋರಿಯೇ ತೋರುತ್ತದೆ. ಒಂದು ಚಿತ್ರಗೀತೆಯ ಸಾಲು ಹೀಗಿದೆ. – ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಮಾಡಬಲ್ಲೆ ಎಂದು ಮನಸ್ಸು ಮಾಡುವವನು ಎಂಥ ಕೆಲವನ್ನಾದರೂ ಮಾಡಬಲ್ಲ. ನಿಘಂಟಿನಿಂದ ‘ಅಸಾಧ್ಯ’ ಎನ್ನುವ ಪದವನ್ನೇ ತೆಗೆದುಹಾಕಿ ಎಂದು.
ಭಾಷಾ ಚಟುವಟಿಕೆʻ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ತದ್ದಿತಾಂತಗಳೆಂದರೇನು?
ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಅಡಿಗ, ವಂತ, ಇಕ, ಗಾರ್ತಿ, ಕಾರ್ತಿ, ಇತವಂತೆ ಮುಂತಾದ ತದ್ದತ ಪ್ರತ್ಯಯಗಳು ಸೇರಿ ತದಿ ತದ್ದಿತಾಂತಗಳಾಗುತ್ತವೆ.
೨. ತದ್ದಿತಾಂತ ಭಾವನಾಮಗಳೆಂದರೇನು? ಉದಾರಣೆ ಸಹಿತ ವಿವರಿಸಿ.
ಸಾಮಾನ್ಯವಾಗಿ ಷಷ್ಠೀ ವಿಭಕ್ಯಂತ ನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ, ಇತ್ಯಾದಿ ತದ್ದಿತ ಪ್ರತ್ಯಯಗಳು ಸೇರಿ ತದ್ದಿತಾಂತ ಭಾವನಾಮಗಳೆ ನಿಸುತ್ತವೆ.
ಉದಾ :-
೧. ಜಾಣನ (ಭಾವ) ತನ – ಜಾಣತನ
೨. ಚೆಲುವಿನ (ಬಾವ) ಇಕೆ – ಚೆಲುವಿಕೆ
೩. ಕರಿ (ಇದರಭಾವ) ಪು ಕಪ್ಪು
೪. ಪಿರಿದ (ಇದರಭಾವ) ಮೆ – ಪೆರ್ಮೆ
ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೇಯ ಪದ ಬರೆಯಿರಿ :-
೧. ನದಿ ಪರ್ವತ : ರೂಢನಾಮ :: ವ್ಯಾಪಾರಿ, ವಿಜ್ಞಾನಿ : ಅನ್ವರ್ಥನಾಮ
೨. ನಾನು, ನೀ : ಪುರುಷಾರ್ಥಕ ಸರ್ವನಾಮ :: ಯಾರು? ಏನು? : ಪ್ರಶ್ನಾರ್ಥಕ ಸರ್ವನಾಮ
೩. ಅಷ್ಟು : ಪರಿಮಾಣ ವಾಚಕ :: ಹನ್ನೆರೆಡು : ಸಂಖ್ಯಾವಚಕ
೪. ಪೋಲ್ : ಪಟ್ಟಣ :: ಕಸವರ : ಬಂಗಾರ