10th Standard Sarvajanika Hanakasu Mattu Ayavyaya Social Science Notes Question Answer Guide Extract Mcq Pdf Download in Kannada Medium 2025,10ನೇ ತರಗತಿ ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, 10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್, 10th class social science chapter 31 question answer in kannada, kseeb solutions for class 10 social science chapter 31 notes,10th ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ notes question answer, sarvajanika hanakasu mattu adaya vyaya 10th class, 10th social science 31st chapter question answer, sslc social science 31 lesson question answer, sslc social science questions and answers.

10ನೇ ತರಗತಿ ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1.ಸರ್ಕಾರವು ಸಾರ್ವಜನಿಕ ಹಣಕಾಸನ್ನು ಕೋಶೀಯ ನೀತಿ ಮೂಲಕ ನಿರ್ವಹಿಸುತ್ತದೆ.
2. ಆಯ-ವ್ಯಯದಲ್ಲಿ ಸರ್ಕಾರದ ಆದಾಯವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಉಳಿತಾಯ ಆಯ-ವ್ಯಯ ಎಂದು ಕರೆಯುತ್ತಾರೆ.
3. ಕೇಂದ್ರ ಸರ್ಕಾರದ ಆಯವ್ಯಯವನ್ನು ಲೋಕ ಸಭೆಯಲ್ಲಿ ಮಂಡಿಸುವವರು ಹಣಕಾಸು ಸಚಿವರು
4. ಸರ್ಕಾರವು ಆಂತರಿಕ ಹಾಗೂ ವಿದೇಶಿ ಸಾಲಗಳ ಮೂಲಕ ಸಂಗ್ರಹಿಸುವ ಆದಾಯವನ್ನು ಬಂಡವಾಳ ಆದಾಯ ಎನ್ನುತ್ತಾರೆ.
5. ಜಿಎಸ್ಟಿ ಪದದ ವಿಸ್ತರಣೆ ಸರಕು ಮತ್ತು ಸೇವಾ ತೆರಿಗೆ
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.ಸಾರ್ವಜನಿಕ ಹಣಕಾಸಿನ ಅರ್ಥ ತಿಳಿಸಿ.
ಸರ್ಕಾರದ ಆದಾಯ, ಸರ್ಕಾರದ ವೆಚ್ಚ ಹಾಗೂ ಸರ್ಕಾರದ ಸಾಲ ಇವುಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು.
2. ಆಯವ್ಯಯ ಎಂದರೇನು?
ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯವ್ಯಯ ಎನ್ನುತ್ತಾರೆ.
3. ಕೊರತೆಯ ಆಯ-ವ್ಯಯದ ಅರ್ಥ ಬರೆಯಿರಿ.
ಆಯ-ವ್ಯಯ ಪತ್ರದಲ್ಲಿ ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುತ್ತಾರೆ.
4. ಪ್ರತ್ಯಕ್ಷ ತೆರಿಗೆ ಎಂದರೇನು?
ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ಹೊರೆಯನು ಹೊರುವಂತಿದ್ದರೆ, ಅಂತಹ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆ ಎನ್ನುತ್ತಾರೆ.
5. ವಿತ್ತೀಯ ಕೊರತೆಯನ್ನು ಸೂತ್ರ ರೂಪದಲ್ಲಿ ಬರೆಯಿರಿ.
ವಿತ್ತೀಯ ಕೊರತೆ = (ಕಂದಾಯ ಆದಾಯ + ಸಾಲೇತರ ಬಂಡವಾಳ ಆದಾಯ ಒಟ್ಟು ವೆಚ್ಚ.
III. ಮುಂದಿನ ಪ್ರಶ್ನೆಗಳಿಗೆ ಐದಾರು ವಾಕ್ಯದಲ್ಲಿ ಉತ್ತರಿಸಿ.
1.ಸಾರ್ವಜನಿಕ ಹಣಕಾಸು ಮತ್ತು ವೈಯಕ್ತಿಕ ಹಣಕಾಸು ನಡುವಿನ ಭಿನ್ನತೆಗಳನ್ನು ಗುರುತಿಸಿ.
ಕ್ರ. ಸಂ | ವೈಯಕ್ತಿಕ ಹಣಕಾಸು | ಸಾರ್ವಜನಿಕ ಹಣಕಾಸು |
---|---|---|
1 | ವೈಯಕ್ತಿಕ ಅಥವಾ ಖಾಸಗೀ ‘ಹಣಕಾಸು ಒಬ್ಬ ವ್ಯಕ್ತಿ ಅಥವಾ ಕುಟುಂಬದ ಆದಾಯ-ವೆಚ್ಚಗಳಿಗೆ ಸಂಬಂಧಿಸಿದೆ. | ಸಾರ್ವಜನಿಕ ಹಣಕಾಸು ಸರ್ಕಾರದ ಆದಾಯ-ವೆಚ್ಚಗಳಿಗೆ ಸಂಬಂಧಿಸಿದೆ. |
2 | ವೈಯಕ್ತಿಕ ಹಣಕಾಸಿನಲ್ಲಿ ವ್ಯಕ್ತಿಗಳು ಮೊದಲು ತಮ್ಮ ಆದಾಯವನ್ನು ಅಂದಾಜುಮಾಡಿ, ನಂತರ ಅದಕ್ಕೆ ಅನುಗುಣವಾಗಿ ವೆಚ್ಚ ಮಾಡುತ್ತಾರೆ. | ಸಾರ್ವಜನಿಕ ಹಣಕಾಸಿನಲ್ಲಿ ಸರ್ಕಾರವು ಮೊದಲು ತನ್ನ ವೆಚ್ಚವನ್ನು ಅಂದಾಜು ಮಾಡಿ, ಅದಕ್ಕೆ ತಕ್ಕಂತೆ ಆದಾಯವನ್ನು ಹೊಂದಿಸುತ್ತದೆ. |
3 | ವೈಯಕ್ತಿಕ ಹಣಕಾಸಿನ ವ್ಯವಹಾರಗಳನ್ನು ಆದಷ್ಟೂ ಗೌಪ್ಯವಾಗಿಡಲಾಗುತ್ತದೆ. | ಸಾರ್ವಜನಿಕ ಹಣಕಾಸನ್ನು, ಶಾಸನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ, ಅಲ್ಲದೆ ಮಾಧ್ಯಮಗಳಲ್ಲಿ ಎಲ್ಲರಿಗೂ ತಿಳಿಯುವಂತೆ ಪ್ರಚಾರ ಮಾಡಲಾಗುತ್ತದೆ. |
4 | ವ್ಯಕ್ತಿ ಅಥವಾ ಕುಟುಂಬ ಉಳಿತಾಯ ಮಾಡಿದರೆ ಅದು ಅವರ ಪ್ರಗತಿಗೆ ಪೂರಕವಾಗಿರುತ್ತದೆ. | ಸರ್ಕಾರ ಉಳಿತಾಯ ಮಾಡಿದರೆ ಅದು ಅಭಿವೃದ್ಧಿ ಪ್ರಗತಿ ಯನ್ನು ಆದುದರಿಂದ ಹೊಂದುತ್ತಿರುವ ದೇಶದ ಕುಂಠಿತ ಗೊಳಿಸುತ್ತದೆ. ಸರ್ಕರಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಅಭಿವೃದ್ಧಿ ಕೆಲಸಗಳಿಗಾಗಿ ವೆಚ್ಚ ಮಾಡಲು ಪ್ರಯತ್ನಿಸುತ್ತವೆ. |
2. ಸಾರ್ವಜನಿಕ ಹಣಕಾಸಿನ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.
ಸರ್ಕಾರವು ಕೋಶೀಯ ನೀತಿಯ ಮೂಲಕ ಸಾರ್ವಜನಿಕ ಹಣಕಾಸನ್ನು ನಿರ್ವಹಿಸುತ್ತದೆ, ಸಾರ್ವಜನಿಕ ಹಣಕಾಸು ದೇಶದ ಅಭಿವೃದ್ಧಿಯನ್ನು ಸೃಷ್ಟಿಯಲ್ಲಿಟ್ಟುಕೊಂಡು ನಿರ್ವಹಿಸಲ್ಪಡುತ್ತದೆ. ಸರ್ಕಾರವು ತನ್ನ ಕೋಶೀಯ ನೀತಿಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಿ, ಕೃಷಿ, ಸಣ್ಣ ಕೈಗಾರಿಕೆ, ಮೂಲಸೌಕರ್ಯ ಮೊದಲಾದ ಆದ್ಯತಾ ವಲಯಗಳಲ್ಲಿ ಬಂಡವಾಳ ಹೂಡಿಕೆಯು ಹೆಚ್ಚುವಂತೆ ಮಾಡುತ್ತದೆ. ಆ ಮೂಲಕ ಅರ್ಥವ್ಯವಸ್ಥೆಯ ಎಲ್ಲ ಕ್ಷೇತ್ರಗಳು ಸಮತೋಲನವಾಗಿ ಅಭಿವೃದ್ಧಿಹೊಂದುವಂತೆ ಕ್ರಮಕೈಗೊಳ್ಳುತ್ತದೆ. ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಹಾಗೂ ಆರ್ಥಿಕ ಏರಿಳಿತಗಳನ್ನು, ಬೆಲೆಗಳ ಏರಿಳಿತಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಹಾಗೂ ನಿಯಂತ್ರಣ ಮಾಡಿ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸಾರ್ವಜನಿಕ ಹಣಕಾಸು ನೀತಿಯನ್ನು ಅಸ್ತ್ರವನ್ನಾಗಿ ಬಳಸಲಾಗುತ್ತದೆ.
3. ಕೇಂದ್ರ ಸರ್ಕಾರದ ಯೋಜನಾ ವೆಚ್ಚಗಳನ್ನು ಪಟ್ಟಿ ಮಾಡಿರಿ.
- ಆರ್ಥಿಕ ಸೇವೆಗಳು: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ಕೈಗಾರಿಕೆ, ಸಾರಿಗೆ, ಸಂಪರ್ಕ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಇತ್ಯಾದಿ.
- ಸಾಮಾಜಿಕ ಸೇವೆಗಳು: ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಟುಂಬ ಕಲ್ಯಾಣ, ಕುಡಿಯುವ ನೀರು ಪೂರೈಕೆ, ಗೃಹ ನಿರ್ಮಾಣ, ಸಾಮಾಜಿಕ ಕಲ್ಯಾಣ ಇತ್ಯಾದಿ.
- ಸಾಮಾನ್ಯ ಸೇವೆಗಳು: ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮಾಡುವ ವೆಚ್ಚಗಳು.
4. ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯದ ಮೂಲಗಳನ್ನು ತಿಳಿಸಿ.
- ಭಾರತೀಯ ರಿಸರ್ವ್ ಬ್ಯಾಂಕು ಗಳಿಸುವ ವಿವ್ವಳ ಲಾಭ.
- ಭಾರತೀಯ ರೈಲ್ವೆ ಗಳಿಸುವ ವಿವ್ವಳ ಲಾಭ.
- ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ಆದಾಯ.
- ಸಾರ್ವಜನಿಕ ಉದ್ಯಮಗಳು ಗಳಿಸುವ ಆದಾಯ.
- ನಾಣ್ಯ ಮತ್ತು ಟಂಕಸಾಲೆಯಿಂದ ಬರುವ ಆದಾಯ.
- ವಿವಿಧ ರೀತಿಯ ಶುಲ್ಕಗಳು, ದಂಡಗಳು ಇತ್ಯಾದಿ.
5. ಕೊರತೆಯ ಹಣಕಾಸು ಎಂದರೇನು? ಅದರ ನಾಲ್ಕು ವಿಧಗಳನ್ನು ತಿಳಿಸಿ.
ಭಾರತ ಯೋಜನಾ ಆಯೋಗದ ವ್ಯಾಖ್ಯಾನದ ಪ್ರಕಾರ ಕೊರತೆಯ ಹಣಕಾಸು ಎಂದರೆ ಸರ್ಕಾರದ ಆಯ-ವ್ಯಯ ಪತ್ರದ ಕಾರ್ಯಾಚರಣೆ ಮೂಲಕ ಅರ್ಥವ್ಯವಸ್ಥೆಯ ನಿವ್ವಳ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸರ್ಕಾರವು ತನ್ನ ಆದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚು ಮಾಡುವುದನ್ನು ಕೊರತೆಯ ಹಣಕಾಸು ಎನ್ನುತ್ತಾರೆ. ಕೊರತೆಯ ಹಣಕಾಸಿನಲ್ಲಿ ವಿತ್ತೀಯ ಕೊರತೆ, ಆಯವ್ಯಯ ಕೊರತೆ, ಕಂದಾಯ ಕೊರತೆ ಮತ್ತು ಪ್ರಾಥಮಿಕ ಕೊರತೆ ಎಂಬ ನಾಲ್ಕು ವಿಧಗಳಿವೆ.
ಹೆಚ್ಚುವರಿ ಪ್ರಶ್ನೆಗಳು:
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ:
1.ಸರ್ಕಾರದ ಆದಾಯ ಮತ್ತು ವೆಚ್ಚವು ಸಮನಾಗಿದ್ದರೆ ಅದನ್ನು ಸಮತೋಲನ ಆಯ-ವ್ಯಯ ಎನ್ನುತ್ತಾರೆ.
2. ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮಾಡುವ ವೆಚ್ಚಗಳು ಸಾಮಾನ್ಯ ಸೇವೆಗಳು.
3. ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುತ್ತಾರೆ.
4. ಕೊರತೆಯನ್ನು ಋಣ(-) ಚಿಹ್ನೆಯಲ್ಲಿ ಗುರುತಿಸಲಾಗುತ್ತದೆ.
II. ಈ ಪ್ರಶ್ನೆಗಳಿಗೆ ಉತ್ತರಿಸಿ:
1.ಉಳಿತಾಯ ಆಯವ್ಯಯ ಎಂದರೇನು?
ಆಯ-ವ್ಯಯ ಪತ್ರದಲ್ಲಿ ಸರ್ಕಾರದ ಆದಾಯವು ಸರ್ಕಾರದ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಉಳಿತಾಯ ಆಯವ್ಯಯ ಎನ್ನುತ್ತಾರೆ.
2. ಆಯ-ವ್ಯಯ ಪತ್ರದ ಮೂರು ವಿಧಗಳು ಯಾವುವು?
ಉಳಿತಾಯ ಆಯವ್ಯಯ, ಕೊರತೆಯ ಆಯ-ವ್ಯಯ ಮತ್ತು ಸಮತೋಲನ ಆಯ-
3. ವೈಯಕ್ತಿಕ ಹಣಕಾಸು ಎಂದರೇನು?
ವ್ಯಕ್ತಿ ಅಥವಾ ಕುಟುಂಬದ ಆದಾಯ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ವೈಯಕ್ತಿಕ ಹಣಕಾಸು ಎನ್ನುತ್ತೇವೆ.
4. ಸಾರ್ವಕನಿಕ ವೆಚ್ಚ ಎಂದರೇನು?
ಸರ್ಕಾರವು ರಾಷ್ಟ್ರ ರಕ್ಷಣೆ, ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮದ ದೃಷ್ಟಿಯಿಂದ ವಿವಿಧ ಚಟುವಟಿಕೆಗಳಿಗೆ ಹಣವನ್ನು ವೆಚ್ಚಮಾಡುತ್ತದೆ ಇದನ್ನು ಸಾರ್ವಜನಿಕ ವೆಚ್ಚ ಎನ್ನುತ್ತಾರೆ.
5. ಕಂದಾಯ ಆದಾಯ ಎಂದರೇನು? ಇದರ ಎರಡು ವಿಧಗಳು ಯಾವುವು?
ಸರ್ಕಾರವು ವಿವಿಧ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ‘ಆದಾಯವನ್ನು ಕಂದಾಯ ಆದಾಯ ಎಂದು ಕರೆಯುತ್ತಾರೆ. ಇದು ಸರ್ಕಾರದ ವಾಸ್ತವ ಆದಾಯವಾಗಿರುತ್ತದೆ. ಇದರ ಎರಡು ವಿಧಗಳು ಯಾವುವೆಂದರೆ ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯ.
6. ಯೋಜನೇತರ ವೆಚ್ಚ ಎಂದರೇನು? ಪ್ರಮುಖ ಯೋಜನೇತರ ವೆಚ್ಚಗಳು ಯಾವುವು?
ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಆಡಳಿತ ನಿರ್ವಹಣೆ, ರಾಷ್ಟ್ರರಕ್ಷಣೆ, ಬಡ್ಡಿ ಪಾವತಿ ಮುಂತಾದ ಬಾಬುಗಳಿಗೆ ಮಾಡಲಾಗುವ ವೆಚ್ಚವನ್ನು ಯೋಜನೇತರ ವೆಚ್ಚ ಎನ್ನುತ್ತೇವೆ.
- ಪ್ರಮುಖ ಯೋಜನೇತರ ವೆಚ್ಚಗಳೆಂದರೆ ನಾಗರಿಕ ಆಡಳಿತ ವೆಚ್ಚ, ರಕ್ಷಣಾ ವೆಚ್ಚ, ಬಡ್ಡಿ ಪಾವತಿ ರಾಜ್ಯಗಳಿಗೆ ಯೋಜನೇತರ ಸಹಾಯ, ಸಹಾಯಧನದ ಮೇಲಿನ ವೆಚ್ಚ ಇತ್ಯಾದಿ.
7. ತೆರಿಗೆ ಎಂದರೇನು?
ಪ್ರಜೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ತೆರಿಗೆ ಎನ್ನುತ್ತೇವೆ.
8. ಪ್ರಮುಖ ಪರೋಕ್ಷ ತೆರಿಗೆಗಳು ಯಾವುವು?
ಕೇಂದ್ರ ಅಬಕಾರಿ ತೆರಿಗೆ, ಆಮದು-ರಫ್ತು ಸುಂಕಗಳು, ಸೇವಾ ತೆರಿಗೆ, ವಿದೇಶೀ ಪ್ರವಾಸಿಗರ ಮೇಲಿನ ತೆರಿಗೆ ಇತ್ಯಾದಿ ಪರೋಕ್ಷ ತೆರಿಗೆಗಳು,
9. ವಿತ್ತೀಯ ಕೊರತೆ ಎಂದರೇನು?
ಆಯವ್ಯಯದಲ್ಲಿ ಸರ್ಕಾರದ ಕಂದಾಯ ಆದಾಯ ಮತ್ತು ಸಾಲೇತರ ಬಂಡವಾಳ ಆದಾಯಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ, ಅದನ್ನು ವಿತ್ತೀಯ ಕೊರತೆ ಎನ್ನುತ್ತಾರೆ.
10. ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎಂದರೇನು?
ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ಆದಾಯ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿಗೆ, ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎನ್ನುತ್ತಾರೆ.
11. ಪ್ರಗತಿಪರ ತೆರಿಗೆ ನೀತಿ ಎಂದರೇನು?
ಸರ್ಕಾರವು ತೆರಿಗೆಗಳನ್ನು ವಿಧಿಸುವಾಗ ಹೆಚ್ಚು ಆದಾಯವುಳ್ಳವರ ಮೇಲೆ ಹೆಚ್ಚಿನ ತೆರಿಗೆಯನ್ನೂ, ಕಡಿಮೆ ಆದಾಯವುಳ್ಳವರ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುತ್ತಿದೆ. ಬಡವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದೆ. ಅದೇ ರೀತಿಯಲ್ಲಿ ಶ್ರೀಮಂತರು ಬಳಸುವ ಸರಕು-ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನೂ ಮತ್ತು ಸಾಮಾನ್ಯ ಜನರು ಬಳಸುವ ಸರಕು-ಸೇವೆಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುತ್ತಿದೆ. ಸರ್ಕಾರ ತೆರಿಗೆ ವಿಧಿಸುವಲ್ಲಿ ಅನುಸರಿಸುವ ಈ ನೀತಿಯನ್ನು ಪ್ರಗತಿಪರ ತೆರಿಗೆ ನೀತಿ ಎನ್ನುತ್ತಾರೆ.
12. ಆಂತರಿಕ ಸಾಲ ಮತ್ತು ವಿದೇಶಿ ಸಾಲಗಳಿಗಿರುವ ವ್ಯತ್ಯಾಸವೇನು?
ಆಂತರಿಕ ಸಾಲ | ವಿದೇಶಿ ಸಾಲ |
---|---|
ಆಂತರಿಕ ಸಾಲವು ದೇಶದಲ್ಲಿರುವ ಪ್ರಜೆಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಉದ್ಯಮ ಸಂಸ್ಥೆಗಳು ಮುಂತಾದವುಗಳಿಂದ ಸಂಗ್ರಹಿಸುವ ಸಾಲವಾಗಿರುತ್ತದೆ. | ವಿದೇಶಿ ಸಾಲವು ವಿದೇಶಿ ಸರ್ಕಾರಗಳು, ವಿದೇಶಿ ಹಣಕಾಸು ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲವಾಗಿರುತ್ತದೆ. |
13. ಬಂಡವಾಳ ವೆಚ್ಚ ಎಂದರೇನು?
ಕೃಷಿ, ಕೈಗಾರಿಕೆ, ಸಾರಿಗೆ, ವಿದ್ಯುತ್, ನೀರಾವರಿ ಯೋಜನೆಗಳು ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಮತ್ತು ಹೊಸ ಆಸ್ತಿಗಳ ನಿರ್ಮಾಣಕ್ಕಾಗಿ ಸರ್ಕಾರವು ಹೊಸದಾಗಿ ಬಂಡವಾಳ ಹೂಡಲು ಮುಂದಾಗುವ ವೆಚ್ಚವನ್ನು ಬಂಡವಾಳ ವೆಚ್ಚ ಎನ್ನುತ್ತಾರೆ.
14. ಪ್ರತ್ಯಕ್ಷ ತೆರಿಗೆಗಳಿಗೂ ಮತ್ತು ಪರೋಕ್ಷ ತೆರಿಗೆಗಳಿಗೂ ಇರುವ ವ್ಯತ್ಯಾಸಗಳೇನು?
ಪ್ರತ್ಯಕ್ಷ ತೆರಿಗೆ | ಪರೋಕ್ಷ ತೆರಿಗೆ |
---|---|
ಪ್ರತ್ಯಕ್ಷ ತೆರಿಗೆಯಲ್ಲಿ ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ತೆರಿಗೆಯನ್ನು ಹೊರಬೇಕಾಗುತ್ತದೆ. | ಪರೋಕ್ಷ ತೆರಿಗೆಯಲ್ಲಿ ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ತೆರಿಗೆಯನ್ನು ಹೊರಬೇಕಾಗಿಲ್ಲ. |
ಈ ತೆರಿಗೆಗಳ ಹೊರೆಯನ್ನು ಇತರರಿಗೆ ವರ್ಗಾಯಿಸಲು ಬರುವುದಿಲ್ಲ. | ಪರೋಕ್ಷ ತೆರಿಗೆಯಲ್ಲಿ ಸರ್ಕಾರವು ವಿಧಿಸುವ ತೆರಿಗೆಯ ಹೊರೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದೆ. |
ಇವು ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಗಳಿಸುವ ವರಮಾನ ಮತ್ತು ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳಾಗಿವೆ. | ಸಾಮಾನ್ಯವಾಗಿ ಈ ತೆರಿಗೆಯನ್ನು ಸರಕುಗಳು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತದೆ. |
15. ಬಂಡವಾಳ ಆದಾಯ ಎಂದರೇನು?
ಸರ್ಕಾರವು ಅರ್ಥವ್ಯವಸ್ಥೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಹೊಸ ಆಸ್ತಿಗಳನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ, ಹೊಸದಾಗಿ ಬಂಡವಾಳ ಹೂಡುವ ಸಲುವಾಗಿ ಸಂಗ್ರಹಿಸುವ ಆದಾಯವನ್ನು ಬಂಡವಾಳ ಆದಾಯ ಎನ್ನುತ್ತಾರೆ.
ಮುಖ್ಯಾಂಶಗಳು:
- ವ್ಯಕ್ತಿ ಅಥವಾ ಕುಟುಂಬದ ಆದಾಯ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ವೈಯಕ್ತಿಕ ಹಣಕಾಸು ಎನ್ನುತ್ತೇವೆ.
- ಸರ್ಕಾರವು ತನ್ನದೇ ಹಣಕಾಸನ್ನು ನಿರ್ವಹಿಸುವುದನ್ನು ಸಾರ್ವಜನಿಕ ಹಣಕಾಸು ಎನ್ನುತ್ತೇವೆ.
- ಸರ್ಕಾರವು ಕೋಶೀಯ ನೀತಿ ಅಥವಾ ವಿತ್ತೀಯ ನೀತಿಯ ಮೂಲಕ ಸಾರ್ವಜನಿಕ ಹಣಕಾಸನ್ನು ನಿರ್ವಹಿಸುತ್ತದೆ.
- ಸರ್ಕಾರವು ಪ್ರತಿ ವರ್ಷ ತನ್ನ ಹಣಕಾಸು ವರ್ಷದ ಆಯ-ವ್ಯಯವನ್ನು ಮಂಡಿಸುತ್ತದೆ.
- ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ.
- ಆಯವ್ಯಯ ಪತ್ರದಲ್ಲಿ ಉಳಿತಾಯ ಆಯ-ವ್ಯಯ, ಕೊರತೆಯ ಆಯ-ವ್ಯಯ ಮತ್ತು ಸಮತೋಲನ ಆಯ-ವ್ಯಯ ಎಂಬ ಮೂರು ವಿಧಗಳಿವೆ.
- ಭಾರತದಲ್ಲಿ ಕೇಂದ್ರ ಸರ್ಕಾರದ ಆಯ-ವ್ಯಯವನ್ನು ಕೇಂದ್ರ ಹಣಕಾಸು ಸಚಿವರು ಹಣಕಾಸು ಇಲಾಖೆಯ ಸಹಕಾರದೊಂದಿಗೆ ತಯಾರಿಸುತ್ತಾರೆ.
- ಸರ್ಕಾರವು ರಾಷ್ಟ್ರ ರಕ್ಷಣೆ, ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮದ ದೃಷ್ಟಿಯಿಂದ ವಿವಿಧ ಚಟುವಟಿಕೆಗಳಿಗಾಗಿ ಮಾಡುವ ವೆಚ್ಚವನ್ನು ಸಾರ್ವಜನಿಕ ವೆಚ್ಚ ಎನ್ನುತ್ತಾರೆ. ಅಂದರೆ ಸರ್ಕಾರವು ತನ್ನ ಪ್ರಜೆಗಳ ಹಿತದೃಷ್ಟಿಯಿಂದ ಮಾಡುವ ವೆಚ್ಚವೇ ಸಾರ್ವಜನಿಕ ವೆಚ್ಚ.
- ಕೇಂದ್ರ ಸರ್ಕಾರವು ತನ್ನ ಕಂದಾಯ ಆದಾಯದಿಂದ ಮಾಡುವ ವೆಚ್ಚವನ್ನು ಕಂದಾಯ ವೆಚ್ಚ ಎನ್ನುತ್ತಾರೆ.
- ಸರ್ಕಾರವು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು, ರಾಷ್ಟ್ರ ನಿರ್ಮಾಣ ಕಾರ್ಯಗಳು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಮಾಡುವ ವೆಚ್ಚವನ್ನು ಯೋಜನಾ ವೆಚ್ಚ ಎನ್ನುತ್ತಾರೆ.
- ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಆಡಳಿತ ನಿರ್ವಹಣೆ, ರಾಷ್ಟ್ರರಕ್ಷಣೆ, ಬಡ್ಡಿ ಪಾವತಿ ಮುಂತಾದ ಬಾಬುಗಳಿಗೆ ಮಾಡಲಾಗುವ ವೆಚ್ಚವನ್ನು ಯೋಜನೇತರ ವೆಚ್ಚ ಎನ್ನುತ್ತಾರೆ.
- ಕೃಷಿ, ಕೈಗಾರಿಕೆ, ಸಾರಿಗೆ, ವಿದ್ಯುತ್, ನೀರಾವರಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರವು ಹೊಸದಾಗಿ ಬಂಡವಾಳ ಹೂಡಲು ಮುಂದಾಗುತ್ತದೆ. ಇದನ್ನು ಬಂಡವಾಳ ವೆಚ್ಚ ಎನ್ನುತ್ತಾರೆ.
- ಸರ್ಕಾರವು ತನ್ನ ವೆಚ್ಚಗಳನ್ನು ಭರಿಸಲು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸುತ್ತದೆ ಇದನ್ನು ಸಾರ್ವಜನಿಕ ಆದಾಯ ಎನ್ನುತ್ತಾರೆ.
- ಕೇಂದ್ರ ಸರ್ಕಾರದ ಆದಾಯವನ್ನು ಕಂದಾಯ ಆದಾಯ ಮತ್ತು ಬಂಡವಾಳ ಆದಾಯ ಎಂದು ವಿಂಗಡಿಸಲಾಗಿದೆ.
- ಕೇಂದ್ರ ಸರ್ಕಾರವು ಪ್ರಜೆಗಳ ಮೇಲೆ ನಾನಾ ರೀತಿಯ ತೆರಿಗೆಗಳನ್ನು ವಿಧಿಸಿ ಆದಾಯವನ್ನು ಸಂಗ್ರಹಿಸುತ್ತಿದೆ.
- ಪ್ರಜೆಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ತೆರಿಗೆ ಎನ್ನುತ್ತೇವೆ.
- ತೆರಿಗೆಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂಬ ಎರಡು ವಿಧಗಳಿವೆ.
- ಸರ್ಕಾರವು ತೆರಿಗೆಗಳನ್ನು ಹೊರತುಪಡಿಸಿ ಇತರೆ ಮೂಲಗಳಿಂದಲೂ ಆದಾಯವನ್ನು ಸಂಗ್ರಹಿಸುತ್ತದೆ. ಇದಕ್ಕೆ ತೆರಿಗೆಯೇತರ ಆದಾಯ ಎನ್ನುತ್ತಾರೆ.
- ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸರ್ಕಾರದ ಆದಾಯಕ್ಕಿಂತ ಅದರ ವೆಚ್ಚಗಳು ಹೆಚ್ಚಾಗಿ ಕೊರತೆಯ ಹಣಕಾಸಿನ ಸನ್ನಿವೇಶಗಳು ಉದ್ಭವವಾಗುತ್ತಿವೆ.
- ಸರ್ಕಾರವು ತನ್ನ ಆದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚು ಮಾಡುವುದನ್ನು ಕೊರತೆಯ ಹಣಕಾಸು ಎನ್ನುತ್ತಾರೆ.
- ಕೊರತೆಯ ಹಣಕಾಸಿನಲ್ಲಿ ವಿತ್ತೀಯ ಕೊರತೆ, ಆಯವ್ಯಯ ಕೊರತೆ, ಕಂದಾಯ ಕೊರತೆ ಮತ್ತು ಪ್ರಾಥಮಿಕ ಕೊರತೆ ಎಂಬ ನಾಲ್ಕು ವಿಧಗಳನ್ನು ಗುರುತಿಸಲಾಗಿದೆ.
ಇತರೆ ವಿಷಯಗಳು :
ಗ್ರಾಮೀಣಾಭಿವೃದ್ಧಿ ಸಮಾಜ ವಿಜ್ಞಾನ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್