10th Standard Samuhika Vartane Mattu Pratibhatanegalu Chapter Social Notes‌ |10ನೇ ತರಗತಿ ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಪಾಠದ ನೋಟ್ಸ್

Samuhika Vartane Mattu Pratibhatanegalu

10th Standard Samuhika Vartane Mattu Pratibhatanegalu Social Science Notes Question Answer Guide Mcq Pdf Download in Kannada Medium 2025, 10ನೇ ತರಗತಿ ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಪಾಠದ ನೋಟ್ಸ್ ಪ್ರಶ್ನೋತ್ತರಗಳು, 10th Class Social Samuhika Vartane Mattu Pratibhatanegalu Chapter Question Answer, 10th Social Lesson 23 Notes Question Answer, SSLC Social Science Chapter 23 Question And Answer Karnataka Pdf, kseeb solutions for class 10 social science Chapter 23 Notes, ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಪ್ರಶ್ನೋತ್ತರಗಳು.

Samuhika Vartane Mattu Pratibhatanegalu

Samuhika Vartane Mattu Pratibhatanegalu

1.ಚಿಪ್ಕೋ ಚಳುವಳಿ ನಡೆದ ರಾಜ್ಯ ಉತ್ತರ ಪ್ರದೇಶ

2. ‘ನರ್ಮದಾ ಆಂದೋಲನ’ ದ ನೇತೃತ್ವ ವಹಿಸಿದ್ದವರು ಮೇಧಾಪಾಟ್ಕರ್

3. ಡಾ. ಶಿವರಾಮ ಕಾರಂತರು ಕೈಗಾ ದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು.

1.ಸಮೂಹ ವರ್ತನೆ ಎಂದರೇನು?

ಸಾಕಷ್ಟು ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ರೀತಿಯ ಆಲೋಚನೆ, ಭಾವನೆ ಹಾಗೂ ವರ್ತನೆಗೆ ಸಮೂಹ ವರ್ತನೆ ಎನ್ನಬಹುದು.

2. ಚಿಪ್ಕೋ ಚಳುವಳಿಯ ನೇತಾರ ಯಾರು?

ಚಿಪ್ಕೋ ಚಳುವಳಿಯ ನೇತಾರರು ಶ್ರೀ ಸುಂದರ್‌ಲಾಲ್‌ಬಹುಗುಣ.

3. ಸ್ವ-ಸಹಾಯ ಸಮೂಹ ಎಂದರೇನು?

ಸ್ವ-ಸಹಾಯ ಸಮೂಹ ಎಂಬುದು ಮಹಿಳೆಯರು ರೂಪಿಸಿಕೊಂಡಿರುವ ನಂಬಿಕೆ, ಸಹಕಾರ ಆಧಾರಿತ ಸ್ವ-ಸಹಾಯ ಸಮೂಹಗಳು.

4. ಕಾರ್ಮಿಕ ಚಳವಳಿ ಎಂದರೇನು?

ಕಾರ್ಮಿಕರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ಕಾರ್ಮಿಕ ಸಂಘಟನೆಗಳ ಮೂಲಕ ನಡೆಯುವ ಚಳವಳಿ.

1. ಸಮೂಹ ವರ್ತನೆಯ ಏನನ್ನು ಒಳಗೊಂಡಿದೆ?

ಸಮೂಹ ವರ್ತನೆಯು ಜನಮಂದೆ, ದೊಂಬಿ, ಪೊಳ್ಳುಸುದ್ದಿಗಳ ಪ್ರಚಾರ, ಸಾರ್ವಜನಿಕ, ಅಭಿಪ್ರಾಯ, ಕ್ರಾಂತಿ ಹಾಗೂ ಸಾಮಾಜಿಕ ಆಂದೋಲನವನ್ನು ಒಳಗೊಂಡಿರುತ್ತದೆ.

2. ಜನಮಂದೆ ಎಂದರೇನು? ಉದಾಹರಣೆ ಕೊಡಿ.

ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆ. ಜನಮಂದೆಯು ಒಂದು ಆಸಕ್ತಿಯ ಪ್ರಚೋದನೆಗೆ ಒಟ್ಟಾಗಿ ಪ್ರತಿಕ್ರಿಯಿಸುತ್ತಿರುವ ಜನರ ತಾತ್ಕಾಲಿಕ ಜನಸಚಿದಣಿ.ಉದಾಹರಣೆಗೆ: ಚಲನ ಚಿತ್ರ ಮಂದಿರದ ಹತ್ತಿರ ಟಿಕೆಟ್ ಪಡೆಯಲು ಮುತ್ತಿಗೆ ಹಾಕಿದಂತೆ ಸೇರಿರುವ ಜನಸ್ತೋಮ.

3. ಜನಮಂದೆಯ ಸ್ವರೂಪವನ್ನು ತಿಳಿಸಿ.

ಜನಮಂದೆಯು ತಾತ್ಕಾಲಿಕ ಸ್ವರೂಪದ ಸಮೂಹವಾಗಿರುತ್ತದೆ. ಇದರಲ್ಲಿ ಜನರು ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೌತಿಕವಾಗಿ ಒಟ್ಟಾಗಿ ಸೇರಿರುತ್ತಾರೆ. ಜನಮಂದೆಯ ಸದಸ್ಯರು ಪರಸ್ಪರ ಅಭಿಪ್ರಾಯ, ಭಾವನೆಗಳು ಮತ್ತು ಕ್ರಿಯೆಗಳ ಪ್ರಭಾವಕ್ಕೆ ಬಹುಬೇಗ ಒಳಗಾಗುತ್ತಾರೆ. ಕೆಲವೊಮ್ಮೆ ಇದರ ಮೂಲಕ ವ್ಯಕ್ತಿಯ ಅಂತರಾಳದಲ್ಲಿ ಹುದುಗಿರುವ ಭಾವನೆಗಳು ಪ್ರಕಟವಾಗುವುದುಂಟು. ಒಮ್ಮೊಮ್ಮೆ ಸ್ಪೋಟಗೊಳ್ಳುವುದುಂಟು.

4. ಪರಿಸರ ಮಾಲಿನ್ಯದ ಅರ್ಥ ಮತ್ತು ಸ್ವರೂಪವನ್ನು ತಿಳಿಸಿ.

ಭೂಮಿ, ಗಾಳಿ, ನೀರು ಮತ್ತು ಜೀವಮಂಡಲವನ್ನೊಳಗೊಂಡ ನಮ್ಮ ಸುತ್ತ ಮುತ್ತಲಿನ ಪರಿಸರವು ವಿಷಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತವಾಗುವುದನ್ನು ಪರಿಸರ ಮಾಲಿನ್ಯ ಎನ್ನಬಹುದು.

5. ಮಹಿಳಾ ಸ್ವ-ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.

ಮಹಿಳಾ ಸ್ವ-ಸಹಾಯ ಸ್ತ್ರೀಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುತ್ತವೆ. ಜೊತೆಗೆ ಅವರಿಗೆ ಸಮಾನಹಕ್ಕು, ಅವಕಾಶ, ಹೊಣೆಗಾರಿಕೆ ಹಾಗೂ ಅಧಿಕಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

  1. ಕರ್ನಾಟಕದಲ್ಲಿ 70ರ ದಶಕದಲ್ಲಿ ಸಾಮಾಜಿಕ ದುರ್ಬಲರ ವಿಮೋಚನೆಗೆ ಪೂರಕವಾದ ಶಾಸನಗಳನ್ನು ಜಾರಿಗೆ ತಂದವರು ಡಿ. ದೇವರಾಜ ಅರಸು
  2. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪ್ಪಿಕೋ ಚಳುವಳಿಯನ್ನು ನಡೆಸಿದವರು ಸಲ್ಯಾನಿ ಗ್ರಾಮದ ರೈತರು.
  3. ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಯನ್ನು 19ನೇ ಶತಮಾನದಲ್ಲಿಯೇ ಮಹಾರಾಷ್ಟ್ರದಲ್ಲಿ ಆರಂಭಿಸಿದವರು ಜ್ಯೋತಿರಾವ್ ಫುಲೆ
  4. ನಮ್ಮ ಸಾಂಘಿಕ ಜೀವನದ ಅವಿಭಾಜ್ಯ ಅಂಗ ಸಾಮೂಹಿಕ ವರ್ತನೆ
  5. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆ ಎನ್ನುವುದು ಮಾನವ ವಿರೋಧಿ ನಡವಳಿಕೆಯಾಗಿದೆ.
  6. ಉತ್ತರಾಖಂಡದ ತೆಹ್ರಿ-ಘರ್ವಾಲ್‌ ಜಿಲ್ಲೆಯಲ್ಲಿ ಸರ್ಕಾರವು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು.
  7. ಜನಮಂದೆ ವರ್ತನೆಯ ಮತ್ತೊಂದು ಮಾದರಿ ದೊಂಬಿ
  8. ದೊಂಬಿಗಳು ಸಾಮಾನ್ಯವಾಗಿ ನಗರ ಪಟ್ಟಣ ಗಳಲ್ಲಿ ಹೆಚ್ಚು ನಡೆಯುತ್ತವೆ.

1.ಜನಮಂದೆಯ ಪ್ರಭಾವವನ್ನು ತಿಳಿಸಿ.

ಜನಮಂದೆಯಲ್ಲಿರುವ ಜನರ ಅನಿಯಂತ್ರಿತ ನಡವಳಿಕೆಯು ಎಷ್ಟೋ ಬಾರಿ ಸಮಾಜದ ಲೋಪದೋಷಗಳನ್ನು ಸೂಚಿಸುವುದುಂಟು. ಇದು ಕೆಲವೊಮ್ಮೆ ಸಾಮಾಜಿಕ ಸಂಸ್ಥೆಗಳ ಕಾರ್ಯ ವಿಧಾನದ ಬಗೆಗಿರುವ ಜನರ ಅಸಂತೃಪ್ತಿಯನ್ನು ಪ್ರಕಟಿಸುವುದು. ಅಲ್ಲದೆ, ಇದು ಕೆಲವೊಮ್ಮೆ ಸರ್ಕಾರದ ಯೋಜನೆಗಳು, ಧೋರಣೆಗಳು ಮತ್ತು ನಿರ್ದಿಷ್ಟ ಕಾರ್ಯಕ್ರಮಗಳ ಬಗೆಗಿನ ಜನರ ಅಸಮಧಾನವನ್ನು ಪ್ರತಿನಿಧಿಸುವುದುಂಟು.

2. ಕರ್ನಾಟಕದ ಪರಿಸರವಾದಿಗಳು ಮಂಗಳೂರು ರಿಫೈನ್‌ ರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವಿರುದ್ಧ ಚಳವಳಿ ನಡೆಸಲು ಕಾರಣವೇನು?

ಕರ್ನಾಟಕದ ಕರಾವಳಿಯ ಮಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದ್ದ ತೈಲ ಕರ್ಯಾಗಾರದಿಂದ ಹೊರಬರುವ ರಾಸಾಯನಿಕ ಅಂಶಗಳಿಂದ ಪರಿಸರ ವಾಶವಾಗುತ್ತದೆ ಎಂದು ತಿಳಿದ ಕರ್ನಾಟಕದ ಪರಿಸರವಾದಿಗಳು ಮಂಗಳೂರು ಏಫೈನ್‌ರೀಸ್ ಮತ್ತು ಪೆಟ್ರೋಕೆಮಿಕಲ್ ಲಿಮಿಟೆಡ್ ವಿರುದ್ಧ ಚಳವಳಿ ನಡೆಸಿದರು.

3. ಸಾಮೂಹಿಕ ವರ್ತನೆ ಎಂದರೇನು?

ಸಮೂಹದಲ್ಲಿ ಇರುವಾಗ ಮಾಡುವ ಮಾನವನ ವರ್ತನೆಯೇ ಸಾಮೂಹಿಕ ವರ್ತನೆ.

4. ದೊಂಬಿಗೆ ಕಾರಣವಾಗುವ ಅಂಶಗಳು ಯಾವುವು?

ಪ್ರಚೋದಕ ಸನ್ನಿವೇಶ, ವ್ಯಕ್ತಿಗಳ ಅನಿಯಂತ್ರಿತ ವರ್ತನೆ, ಅನಾಗರಿಕ ನಡವಳಿಕೆ, ಕೆಲಹ ನಡೆಸುವರಲ್ಲಿರಬಹುದಾದ ಅಪರಾಧಿ ಗುಣ, ದೊಂಬಿಪರ ಮನೋಭಾವ ಮುಂತಾದವುಗಳೇ ದೊಂಬಿಗೆ ಕಾರಣಗಳಾಗಿವೆ.

5. ಮಹಿಳಾ ಚಳವಳಿ ಎಂದರೇನು?

ಪುರುಷ ಪ್ರಾಧಾನ್ಯ ಸಂಸ್ಕೃತಿಯ ದರ್ಪ, ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆಯೇ ಮಹಿಳಾ ಚಳವಳಿ,

6. ಅಸ್ಪೃಶ್ಯತಾ ಆಚರಣೆ ವಿರೋಧಿ ಚಳವಳಿ ಎಂದರೇನು?

ಅಸ್ಪೃಶ್ಯರು ಎನ್ನುವ ಕಾರಣಕ್ಕಾಗಿ ದಲಿತರ ಮೇಲೆ ನಡೆಯುವ ಹಲ್ಲೆ, ಜಾತಿ ಆಧಾರಿತ ಸಾಮಾಜಿಕ ದೌರ್ಜನ್ಯಗಳ ವಿರುದ್ಧ ನಡೆದ ಜನ ಚಳವಳಿಯೇ ಅಸ್ಪೃಶ್ಯತಾ ಆಚರಣೆ ವಿರೋಧಿ ಚಳವಳಿ.

7. ದೊಂಬಿಯ ಸ್ವರೂಪವನ್ನು ತಿಳಿಸಿ.

ಕನಿಷ್ಟ ಮಟ್ಟದ ಉದ್ದೇಶ, ಏಕತೆ ದೊಂಬಿಯಲ್ಲಿರುವುದಿಲ್ಲ. ದೊಂಬಿಯಲ್ಲಿ ಭಾಗವಹಿಸುವವರು ಎದುರಿಗೆ ಸಿಕ್ಕಿದ್ದೆಲ್ಲವನ್ನು ಹಾಳುಮಾಡುತ್ತಾ ಸಾಗುವರು ಗೊಂದಲವನ್ನು ಸೃಷ್ಟಿ ಮಾಡುವುದೇ ದೊಂಬಿಯ ಉದ್ದೇಶವಾಗಿರುತ್ತದೆ. ಕೆಲವೊಮೆ ಈ ದೊಂಬಿಗಳು ಅಪಾರವಾದ ಹಾನಿಯನ್ನುಂಟು ಮಾಡುತ್ತವೆ. ದೊಂಬಿಗಳಲ್ಲಿ ಭಾಗಿಗಳಾದವರಿಗೆ ತಾವು ಮಾಡಬಹುದಾದ ಆಕ್ರಮಣಕ್ಕೆ ನಿಶ್ಚಿತವಾದ ಗುರಿ ಇರುವುದಿಲ್ಲ. ದೊಂಬಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲುಗಳಾಗಿವೆ.

8. ನರ್ಮದಾ ಆಂದೋಲನಕ್ಕೆ ಕಾರಣಗಳೇನು?

ಗುಜರಾತ್ ರಾಜ್ಯದ ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ನರ್ಮದಾ ನದಿಗೆ ಕಟ್ಟಲಾದ ಅಣೆಕಟ್ಟು ನಿರ್ಮಾಣದಿಂದ ಅರಣ್ಯ ನಾಶ, ಪರಿಸರ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಮೇಧಾ ಪಾಟ್ಕರ್ ನರ್ಮದಾ ಆಂದೋಲನ ನಡೆಸಿದರು.

10. ದೊಂಬಿ ಎಂದರೇನು? ದೊಂಬಿಯನ್ನು ಹೇಗೆ ನಿಯಂತ್ರಿಸಬಹುದು?

ತೀರಾ ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ ಎನ್ನುತ್ತಾರೆ. ಅಧಿಕಾರಿಗಳ ಸಮಯಪ್ರಜ್ಞೆ, ಪೊಲೀಸ್, ರಕ್ಷಣಾ ಪಡೆ ಮತ್ತು ಕಾನೂನು ಮುಂತಾದ ಸಾಧನಗಳ ಮೂಲಕ ದೊಂಬಿಗಳನ್ನು ನಿಯಂತ್ರಿಸಬಹುದು.

11. ಕೈಗಾ ವಿರೋಧಿ ಚಳುವಳಿಗೆ ಕಾರಣಗಳೇನು?

ಕೈಗಾ ಅಣುಶಕ್ತಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಸ್ಥಾಪನೆಯಿಂದ ಅರಣ್ಯನಾಶ, ಅಣುವಿಕಿರಣದಿಂದ ಪರಿಸರ ಮಾಲಿನ್ಯ ಮುಂತಾದ ದುಷ್ಪರಿಣಾಮಗಳಿಂದ ಜೀವ ಪ್ರಭೇದಗಳ ಮೇಲೆ ಹಾನಿಕಾರಕ ಪರಿಣಾಮಗಳುಂಟಾಗುತ್ತವೆ ಎಂಬ ಉದ್ದೇಶದಿಂದ ಕೈಗಾ ವಿರೋಧಿ ಚಳುವಳಿಯನ್ನು ನಡೆಸಲಾಯಿತು.

  • ಸಮೂಹದಲ್ಲಿ ಇರುವಾಗ ಮಾನವ ಮಾಡುವ ವರ್ತನೆಯನ್ನು ಸಾಮೂಹಿಕ ವರ್ತನೆ ಎನ್ನಲಾಗುವುದು.
  • ಸಾಕಷ್ಟು ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ರೀತಿಯ ಆಲೋಚನೆ, ಭಾವನೆ ಹಾಗೂ ವರ್ತನೆಗೆ ಸಮೂಹ ವರ್ತನೆ ಎನ್ನಬಹುದು.
  • ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆ.
  • ತೀರಾ ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ ಎನ್ನುತ್ತಾರೆ.
  • ಸಮೂಹವರ್ತನೆಯು ಯೋಜನಾಬದ್ಧವಾಗಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಿದರೆ ಅದನ್ನು ಚಳವಳಿ ಎನ್ನಬಹುದು.
  • ಇಂತಹ ಅನೇಕ ಚಳವಳಿಗಳು ಭಾರತದಲ್ಲಿ ನಡೆದಿವೆ. ಅದಕ್ಕೆ ಉದಾಹರಣೆಯಾಗಿ ಚಿಪ್ಲೋ ಚಳುವಳಿ, ಅಪ್ಪಿಕೋ ಚಳುವಳಿ. ನರ್ಮದಾ ಆಂದೋಲನ, ಮೌನ ಕಣಿವೆ ಆಂದೋಲನ, ಕರ್ನಾಟಕ ಕರಾವಳಿತೀರದ ವಿವಿಧ ಸ್ಥಾವರಗಳ ವಿರೋಧಿ ಚಳುವಳಿ, ಕೈಗಾ ವಿರೋಧಿ ಮಹಿಳಾ ಚಳವಳಿಗಳು, ರೈತಚಳವಳಿಗಳು, ಕಾರ್ಮಿಕ ಚಳವಳಿಗಳು, ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಗಳನ್ನು ಹೆಸರಿಸಬಹುದು.

ಇತರೆ ವಿಷಯಗಳು :

ಜಾಗತಿಕ ಸಂಸ್ಥೆಗಳು ಪಾಠದ ನೋಟ್ಸ್

ಸಾಮಾಜಿಕ ಸವಾಲುಗಳು ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *