10th Stanadard Naisargika Vikopagalu Social Science Notes Question Answer Guide Extract Mcq Pdf Download in Kannada Medium Karnataka State Syllabus, 2025 Kseeb Solution For Class 10 Social Science Chapter 29 Notes in Kannada Medium, Class 10 Social Science Chapter 29 Notes, 10th ನೈಸರ್ಗಿಕ ವಿಕೋಪಗಳು ನೋಟ್ಸ್ Pdf, 10ನೇ ತರಗತಿ ನೈಸರ್ಗಿಕ ವಿಕೋಪಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, ನೈಸರ್ಗಿಕ ವಿಕೋಪಗಳು 10th Standard, sslc naisargika vikopagalu notes, 10th standard social 29th chapter question answer, 10th class social science 29 lesson question answer in kannada, 10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್ pdf, 10 class social science notes.

10ನೇ ತರಗತಿ ನೈಸರ್ಗಿಕ ವಿಕೋಪಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
1. ನೈಸರ್ಗಿಕ ವಿಕೋಪಗಳು ಎಂದರೇನು?
ಪ್ರಾಕೃತಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ-ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ನೈಸರ್ಗಿಕ ವಿಕೋಪಗಳೆಂದು ಕರೆಯುತ್ತಾರೆ.
2. ಚಂಡಮಾರುತಗಳ ಪರಿಣಾಮಗಳಾವುವು?
- ಚಂಡಮಾರುತ ಅಪ್ಪಳಿಸಿದ ಪ್ರದೇಶದ ಜನಜೀವನವೇ ಸಂಪೂರ್ಣ ಮಾರ್ಪಾಡು ಹೊಂದುವುದು.
- ಅಪಾರ ಸಾವು ನೋವು ಉಂಟಾಗುತ್ತದೆ.
- ಸಾಗರದ ಅಲೆಗಳು ಒಳನಾಡಿಗೆ ಚಾಚಿ ಜಲರಾಶಿಗಳು ಲವಣಯುಕ್ತವಾಗುತ್ತವೆ.
- ಬೆಳೆಗಳು ಸಂಪೂರ್ಣ ನಾಶವಾಗುತ್ತವೆ.
- ಸಾರಿಗೆ ಸಂಪರ್ಕ, ವಿದ್ಯುತ್ ಸೌಕರ್ಯ, ಜನಜೀವನ ಅಸ್ತವ್ಯಸ್ತವಾಗುವುದು.
- ಚಂಡಮಾರುತಗಳು ನಿಂತ ನಂತರ ಸಾಂಕ್ರಾಮಿಕ ರೋಗಗಳು ಅಪಾರ ಹಾನಿಯನ್ನುಂಟು ಮಾಡುತ್ತವೆ.
3. ಪ್ರವಾಹಗಳೆಂದರೇನು?
ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಹಿಮ ಕರಗಿದಾಗ ನದಿಗಳ ನೀರಿನ ಪ್ರಮಾಣವು ಅವುಗಳ ಪಾತ್ರದ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡೆಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯುವುದನ್ನು ಪ್ರವಾಹಗಳೆಂದು ಕರೆಯುತ್ತಾರೆ.
4. ಭೂ ಕುಸಿತ ಎಂದರೇನು?
ಪರ್ವತಗಳ ಅಥವಾ ಬೆಟ್ಟಗಳ ಮೇಲ್ಬಾಗದಿಂದ ಕಡಿದಾದ ಇಳಿಜಾರಿನಗುಂಟ ಕೆಳಕ್ಕೆ ಜಾರುವ ಭೂರಾಶಿಗೆ ಭೂಕುಸಿತಗಳೆನ್ನುವರು.
5. ಭೂಕಂಪ ಎಂದರೇನು?
ಭೂಮಿಯ ಒಳಗಿನ ಆಂತರಿಕಶಕ್ತಿಯಿಂದ ಅನಿರೀಕ್ಷಿತವಾಗಿ ಭೂಮಿಯ ಮೇಲ್ಪದರವು ಕಂಪಿಸುವುದನ್ನು ಭೂಕಂಪ ಎಂದು ಕರೆಯುವರು.
6. ಪ್ರವಾಹಗಳು ಉಂಟಾಗಲು ಕಾರಣಗಳು ಮತ್ತು ಭಾರತದಲ್ಲಿ ಪ್ರವಾಹಗಳಿಗೆ ಒಳಪಡುವ ಪ್ರದೇಶಗಳನ್ನು ಹೆಸರಿಸಿ.
ಕಾರಣಗಳು:
- ಮಾನ್ಸೂನ್ ಮಳೆ ಅನಿಶ್ಚಿತ. ಕೆಲವು ವೇಳೆ ಅತ್ಯಧಿಕ ಮಳೆ ಬೀಳುವುದರಿಂದ ಪ್ರವಾಹಗಳುಂಟಾಗುತ್ತವೆ.
- ನದಿಯ ಪಾತ್ರಗಳಲ್ಲಿ ಹೂಳು ತುಂಬಿ ನೀರು ಇಕ್ಕೆಲಗಳಲ್ಲಿಯೂ ಹರಿದು ಪ್ರವಾಹಗಳು ಉಂಟಾಗುತ್ತವೆ.
- ಅಣೆಕಟ್ಟು ಹಾಗೂ ಇತರೆ ಅಡ್ಡಗಟ್ಟೆಗಳು ಒಡೆದು ಒಮ್ಮೆಗೇ ಬಿಡುಗಡೆಯಾಗುವ ನೀರಿನಿಂದ ಪ್ರವಾಹಗಳು ಉಂಟಾಗುತ್ತವೆ.
- ನದಿಗಳು ಪಾತ್ರವನ್ನು ಬದಲಾಯಿಸುವುದರಿಂದಲೂ ಪ್ರವಾಹಗಳು ಉಂಟಾಗುತ್ತವೆ.
- ಚಂಡಮಾರುತಗಳಿಂದ ಅಪಾರ ಮಳೆ ಬೀಳುವುದೂ ಸಹ ಪ್ರವಾಹಗಳಿಗೆ ಕಾರಣವಾಗುವುದು.
- ಸಮುದ್ರಗಳ ಮಧ್ಯದಲ್ಲಿ ಭೂಕಂಪನಗಳು ಸಂಭವಿಸುವುದರಿಂದಲೂ ಪ್ರವಾಹಗಳುಂಟಾಗುತ್ತವೆ.
ಇವಿಷ್ಟೇ ಅಲ್ಲದೆ ಮಾನವಿಕ ಕಾರಣಗಳಾದ ಅರಣ್ಯನಾಶ, ಸರಿಯಾದ ರೀತಿಯಲ್ಲಿ ಕಟ್ಟಿರದ ಸೇತುವೆಗಳು, ಒಡ್ಡುಗಳು, ನದಿ ಪಾತ್ರ, ಅಕ್ರಮವಾಗಿ ಭೂ ಬಳಕೆಯಲ್ಲಾಗುತ್ತಿರುವ ಬದಲಾವಣೆ ಮುಂತಾದವುಗಳು ಪ್ರಮುಖವಾಗಿವೆ.
ಪ್ರವಾಹಗಳಿಗೆ ಒಳಪಡುವ ಪ್ರದೇಶಗಳು:
- ಗಂಗಾ ನದಿಯ ಉಪನದಿಗಳಾದ ಯಮುನಾ, ಗಂಡಕ್, ಕೋಸಿ, ಘಾಘ್ರ ನದಿಗಳು, ಉತ್ತರ ಪ್ರದೇಶ, ಬಿಹಾರ.
- ದಾಮೋದರ ಮತ್ತು ಸುವರ್ಣ ರೇಖಾ ನದಿಗಳು ಛತ್ತೀಸಘಡ ಮತ್ತು ಪಶ್ಚಿಮ ಬಂಗಾಳ
- ಬ್ರಹ್ಮಪುತ್ರ ಮತ್ತು ಇದರ ಉಪನದಿಗಳಾದ ದಿಹಾಂಗ, ದಿಬಾಂಗ, ಸುಬನ್ಸಿರಿ ಮತ್ತು ಊಹಿತ್-ಅಸ್ಸಂ ಕಣಿವೆ ನದಿಗಳಿಂದ ಅಸ್ಸಾಂನಲ್ಲಿ ಪ್ರವಾಹ ಉಂಟಾಗುತ್ತವೆ.
- ಹಿಮಾಲಯ ಪರ್ವತಗಳಲ್ಲಿ ಮೇಘಸ್ಪೋಟದಿಂದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂಗಳಲ್ಲಿ ಆಗಿಂದಾಗ್ಗೆ ಕ್ಷಿಪ್ರ ಪ್ರವಾಹಗಳುಂಟಾಗುತ್ತವೆ.
- ನರ್ಮದಾ, ತಪತಿ, ಸಬರಮತಿ ಮತ್ತು ಮಹಿ ನದಿಗಳು ವರ್ಷದ ಕೆಲವು ದಿನಗಳಲ್ಲಿ ಗುಜರಾತ್ ರಾಜ್ಯದಲ್ಲಿ ಪ್ರವಾಹ ಉಂಟುಮಾಡುತ್ತವೆ.
- ಕರ್ನಾಟಕದಲ್ಲಿ ಕೃಷ್ಣಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ದೋಣಿನದಿ, ಬೆಣ್ಣೆಹಳ್ಳ, ಮುಂತಾದವುಗಳು ಮಳೆಗಾಲದಲ್ಲಿ ರಭಸವಾಗಿ ಹರಿದು ಪ್ರವಾಹವನ್ನುಂಟು ಮಾಡುತ್ತವೆ.
7. ಕಡಲಕೊರೆತ ಎಂದರೇನು? ಅದರ ನಿರ್ವಹಣೆಯನ್ನು ತಿಳಿಸಿ.
ಸಮುದ್ರದ ಅಲೆಗಳು ನಿರಂತರವಾಗಿ ತೀರ ಪ್ರದೇಶಗಳಿಗೆ ಅಪ್ಪಳಿಸುತ್ತವೆ. ಇವುಗಳಿಂದ ತೀರ ಪ್ರದೇಶವು ಸವೆತಕ್ಕೀಡಾಗುವುದು. ಹೀಗೆ ಅಲೆಗಳಿಂದ ತೀರ ವಲಯವು ಸವೆಸಲ್ಪಡುವುದನ್ನು ತೀರ ಪ್ರದೇಶದ ಕೊರೆತ ಅಥವಾ ಸಾಮಾನ್ಯವಾಗಿ ಕಡಲಕೊರೆತ ಎಂದು ಕರೆಯುವರು.
ನಿರ್ವಹಣೆ:
- ತೀರ ಪ್ರದೇಶದಲ್ಲಿ ಮರಳು ತೆಗೆಯುವುದನ್ನು ನಿಯಂತ್ರಿಸುವುದು.
- ತೀರ ಪ್ರದೇಶದುದ್ದಕ್ಕೂ ಅಲೆಗಳು ಪ್ರಬಲವಾಗಿರುವ ಕಡೆ ತಡೆಗೋಡೆಯಯನ್ನು ನಿರ್ಮಿಸುವುದು.
- ತೀರದುದ್ದಕ್ಕೂ ದಪ್ಪ ಬಂಡೆಗಳ ರಾಶಿಹಾಕಿ ಅಲೆಗಳ ಪ್ರಭಾವವನ್ನು ನಿಯಂತ್ರಿಸುವುದು.
- ತೀರದುದ್ದಕ್ಕೂ ಮ್ಯಾಂಗ್ರೂವ್ ಅರಣ್ಯಗಳನ್ನು ಬೆಳೆಸುವುದು.
8. ಭೂಕಂಪದ ಪರಿಣಾಮಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ.
ಪರಿಣಾಮಗಳು:
- ಜನರ ಸಾವು ನೋವು ಮತ್ತು ಆಸ್ತಿ-ಪಾಸ್ತಿಗಳ ಹಾನಿ.
- ಸಾರಿಗೆ ಸಂಪರ್ಕ ಕಡಿತ.
- ರೋಗಗಳ ಹರಡುವಿಕೆ.
- ಸಾಗರದ ಅಲೆಗಳು ದಡಗಳಿಗೆ ಅಪ್ಪಳಿಸುವಿಕೆ.
- ಸುನಾಮಿ.
- ನದಿಯ ದಿಕ್ಕು ಬದಲಾಗುವಿಕೆ ಇತ್ಯಾದಿ.
ಮುನ್ನೆಚ್ಚರಿಕೆಯ ಕ್ರಮಗಳು:
- ಭೂಕಂಪನ ಸಂಭವನೀಯ ವಲಯಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ನಿಷೇಧಿಸುವುದು.
- ಈ ವಲಯಗಳಲ್ಲಿ ಕಟ್ಟಡಗಳನ್ನು ಹಗುರವಾದವಾದ ವಸ್ತುಗಳಿಂದ ನಿರ್ಮಿಸುವುದು.
- ಕಟ್ಟಡಗಳು ಸ್ಥಿತಿ ಸ್ಥಾಪಕತ್ವ ಗುಣವನ್ನು ಹೊಂದುವಂತೆ ನಿರ್ಮಿಸುವುದು.
- ಭೂಕಂಪ ಸಂಭವಿಸಿದಾಗ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು.
- ಭೂಕಂಪ ಸಂಭವಿಸಬಹುದಾದ ಪ್ರದೇಶಗಳಿಗೆ ಶೀಘ್ರ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.
ಹೆಚ್ಚಿನ ಪ್ರಶ್ನೆಗಳು:
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ.
1.ಭಾರತದಲ್ಲಿ ಚಂಡಮಾರುತಗಳು ಎರಡು ಅವಧಿಯಲ್ಲಿ ಹೆಚ್ಚು ಸಂಭವಿಸುತ್ತವೆ.
2. ಇತ್ತೀಚೆಗೆ ಜಾಗತಿಕ ತಾಪಮಾನ ಹೆಚ್ಚಳದಿಂದ ಅರಬ್ಬಿ ಸಮುದ್ರದಲ್ಲಿಯೂ ಚಂಡಮಾರುತಗಳು ಉಗಮಗೊಳ್ಳುತ್ತಿವೆ.
3. ಪ್ರಕೃತಿಯಲ್ಲಿ ಸಂಭವಿಸುವ ಹಲವಾರು ಘಟನೆಗಳು ಮಾನವಾತೀತ ವಾದವು.
4. ಭಾರತವು ಪ್ರತಿ ವರ್ಷ ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳಲ್ಲಿ ಪ್ರವಾಹಗಳು ಅತ್ಯಂತ ಅಪಾಯಕಾರಿಯಾಗಿದೆ.
II. ಈ ಪ್ರಶ್ನೆಗಳಿಗೆ ಉತ್ತರಿಸಿ.
1. ಭೂ ಕುಸಿತಕ್ಕೆ ಕಾರಣಗಳನ್ನು ತಿಳಿಸಿ.
- ಪರ್ವತ ಮತ್ತು ಸಮುದ್ರ ತೀರಗಳಲ್ಲಿ ಕ್ರಮವಾಗಿ ಹರಿಯುವ ನೀರು ಹಾಗೂ ಅಲೆಗಳು ಭೂಮಿಯನ್ನು ಕೊರೆದು ಇಳಿಜಾರನ್ನು ನಿರ್ಮಿಸಿ ಭೂಕುಸಿತವುಂಟಾಗಲು ಕಾರಣವಾಗುತ್ತವೆ.
- ಕಡಿದಾದ ಪರ್ವತ ವಲಯಗಳಲ್ಲಿ ರಸ್ತೆ, ರೈಲು ಮಾರ್ಗ, ಕಾಲುವೆ ಮೊದಲಾದವು ಗಳನ್ನು ನಿರ್ಮಿಸಿದಾಗ ಇಳಿಜಾರು ಮತ್ತಷ್ಟು ಕಡಿದಾಗಿ ಭೂಕುಸಿತಗಳುಂಟಾಗುತ್ತವೆ.
- ಜೇಡಿಮಣ್ಣಿನ ಪದರದ ಮೇಲೆ ಸಡಿಲವಾದ ಮಣ್ಣಿನ ಪದರವಿದ್ದಲ್ಲಿ, ಇಳಿಜಾರು ಉದಾಗಿದ್ದು ಭೂ ಕುಸಿತವುಂಟಾಗುವುದು.
- ಗಣಿಗಾರಿಕೆಯ ಪ್ರದೇಶದಲ್ಲಿ ಭೂಕುಸಿತಗಳು ಸಾಮಾನ್ಯ. ಆಳದಲ್ಲಿರುವ ಅದಿರಿನ ಕ್ಷೇಪದವರೆಗೆ ಗಣಿಗಳನ್ನು ತೆಗೆದಿದ್ದು ಇದರಿಂದ ಭೂಕುಸಿತಗಳುಂಟಾಗುತ್ತವೆ.
- ಅರಣ್ಯಗಳನ್ನು ಕಡಿಯುವುದರಿಂದ ಹಾಗೂ ಕಡಿದಾದ ಇಳಿಜಾರನ್ನು ಆಳವಾಗಿ ಉಳುಮೆ ಮಾಡುವುದರಿಂದ ಭೂಕುಸಿತಗಳುಂಟಾಗುತ್ತವೆ.
2. ಪ್ರವಾಹ ನಿಯಂತ್ರಣ ಕ್ರಮಗಳನ್ನು ತಿಳಿಸಿ.
- ಪ್ರವಾಹ ನಿಯಂತ್ರಣಕ್ಕೆ ನದಿಯ ಇಕ್ಕೆಲಗಳಲ್ಲಿ ಅಡ್ಡಗಟ್ಟೆಗಳನ್ನು ನಿರ್ಮಿಸುವುದು.
- ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಇತರ ಕಡೆಗಳಿಗೆ ನೀರನ್ನು ಹಾಯಿಸುವುದು.
- ಪ್ರವಾಹಗಳ ಮುನ್ಸೂಚನೆಯನ್ನು ನೀಡಲು ಕೇಂದ್ರಗಳನ್ನು ಸ್ಥಾಪಿಸುವುದು.
- ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಬೆಳೆಸುವುದು. ಇದರಿಂದ ಮಣ್ಣಿನ ಸವೆತವನ್ನು ನಿಯಂತ್ರಿಸಿ, ನದಿ ಹಾಗೂ ಜಲಾಶಯಗಳಲ್ಲಿ ಹೂಳು ತುಂಬುವುದನ್ನು ತಪ್ಪಿಸಿ ಪ್ರವಾಹಗಳನ್ನು ತಡೆಗಟ್ಟಬಹುದು.
3. ಪ್ರವಾಹಗಳಿಂದ ಉಂಟಾಗುವ ಪರಿಣಾಮಗಳನ್ನು ತಿಳಿಸಿ.
- ಪ್ರವಾಹಗಳು ಜನರ ಆಸ್ತಿ-ಪಾಸ್ತಿ, ಮನೆ, ಭೂಮಿ ಮತ್ತು ಬೆಳೆಗಳನ್ನು ಹಾನಿಗೀಡುಮಾಡುತ್ತವೆ.
- ದೂರ ಸಂಪರ್ಕ, ವಿದ್ಯುತ್ ಪೂರೈಕೆ, ಸಾರಿಗೆ ಸೌಲಭ್ಯ ಮುಂತಾದವುಗಳು ಅಸ್ತ್ರ-ವ್ಯಸ್ತಗೊಳ್ಳುತ್ತವೆ.
- ಪ್ರವಾಹಗಳ ಪರಿಣಾಮದಿಂದ ಫಲವತ್ತಾದ ಮಣ್ಣಿನ ಮೇಲ್ಬಾಗವು ಕೊಚ್ಚಿ ಹೋಗುತ್ತದೆ ಹಾಗೂ ಅನೇಕ ಗಿಡ ಮರಗಳು ಹಾನಿಗೊಳಗಾಗುತ್ತವೆ.
- ಪ್ರವಾಹಗಳಿಂದ ವಿಶಾಲವಾಗಿ ಹರಡಿದ ನೀರು ಅನೇಕ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ.
4. ಚಂಡಮಾರುತದ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಿ.
- ಅಪಾಯಕಾರಿ ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವುದು.
- ವಿದ್ಯುಜ್ಜನಕ ಯಂತ್ರಗಳು, ದೋಣಿಗಳು, ಹೆಲಿಕಾಪ್ಟರ್ ಮೊದಲಾದ ಸಾರಿಗೆಗಳನ್ನು ಸಜ್ಜಾಗಿರಿಸುವುದು.
- ರೈಲು-ಬಸ್ಸು ಮೊದಲಾದ ಮಾರ್ಗಗಳನ್ನು ಚಂಡಮಾರುತ ಪ್ರಭಾವದ ವಲಯದಿಂದ ಬದಲಾಯಿಸುವುದು.
- ಸಮೂಹ ಮಾಧ್ಯಮಗಳ ಮೂಲಕ ಚಂಡಮಾರುತಗಳ ಬಗ್ಗೆ ವಿವರಗಳನ್ನು ನಿರಂತರವಾಗಿ ಜನರಿಗೆ ನೀಡುವುದು.
- ಅಗತ್ಯವಿರುವ ಸೇನಾ ತುಕಡಿಗಳನ್ನು ಸಿದ್ದಗೊಳಿಸಿಡುವುದು.
- ಸಾಕಷ್ಟು ಸಿಹಿನೀರು ಹಾಗೂ ಉಡುಪುಗಳನ್ನು ಸಂಗ್ರಹಿಸಿಡುವುದು.
- ಔಷಧ ಹಾಗೂ ಇತರ ವೈದ್ಯಕೀಯ ನೆರವಿಗಾಗಿ ಸಿದ್ಧರಾಗಿರುವುದು.
5. ಭೂಕುಸಿತದ ಪರಿಣಾಮಗಳನ್ನು ತಿಳಿಸಿ.
- ಭೂಕುಸಿತದಿಂದಾಗಿ ಅನೇಕ ಚಿಕ್ಕ ನದಿಗಳು ಹರಿಯುವುದಕ್ಕೆ ಅಡ್ಡಿ ಉಂಟಾಗುತ್ತದೆ.
- ಸಾರಿಗೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ.
- ಹಳ್ಳಗಳು ಮತ್ತು ಅನೇಕ ಸಸ್ಯವರ್ಗಗಳು ಭೂಗತವಾಗುತ್ತವೆ.
- ಭೂಕುಸಿತಗಳು ಅನೇಕ ಜೀವಹಾನಿ ಮತ್ತು ಆಸ್ತಿ ಹಾನಿಯನ್ನುಂಟುಮಾಡುತ್ತವೆ.
6. ಚಂಡಮಾರುತಗಳು ಎಂದರೇನು?
ಭೂಮಿಯ ಮೇಲೆ ಸಂಭವಿಸುವ ನೈಸರ್ಗಿಕ ವಿಕೋಪಗಳಲ್ಲಿ ಆವರ್ತಗಾಳಿಗಳು ಅತ್ಯಂತ ಹಾನಿಕಾರಕ ಮತ್ತು ವಿನಾಶಕಾರಗಗಳಿವೆ. ಈ ಗಾಳಿಗಳನ್ನು ಚಂಡಮಾರುತಗಳೆಂದು ಕರೆಯಲಾಗುವುದು.
7. ಭೂಕಂಪಕ್ಕೆ ಕಾರಣಗಳೇನು?
- ಭೂಮಿಯ ಅಂತರಾಳದಲ್ಲಿರುವ ಶಿಲಾಫಲಕಗಳ ಚಲನೆ.
- ಶಿಲಾಗೋಳದ ಮೇಲ್ಮಯಲ್ಲಿರುವ ದ್ರವ ರೂಪದ ಮ್ಯಾಗ ಒಂದೆಡೆಯಿಂದ ಇನ್ನೊಂದೆಡೆಗೆ ಸರಿಯುವುದರಿಂದ.
- ನಗರೀಕರಣದಿಂದ ಭೂಮಿಯ ಒಡಲಲ್ಲಿ ಒತ್ತಡ ಹೆಚ್ಚಾಗಿ ಭೂಕಂಪನ ಸಂಭವಿಸುತ್ತದೆ.
- ಅರಣ್ಯನಾಶ, ಅಣೆಕಟ್ಟುಗಳ ನಿರ್ಮಾಣ, ಗಣಿಗಾರಿಕೆಗಳಿಂದಾಗಿ ಭೂಕಂಪನ ಸಂಭವಿಸುತ್ತದೆ.
ಮುಖ್ಯಾಂಶಗಳು
- ಪ್ರಾಕೃತಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ-ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ಪ್ರಾಕೃತಿಕ ವಿನಾಶಕಾರಗಳೆಂದು ಕರೆಯುತ್ತಾರೆ.
- ಭೂಕಂಪಗಳು, ಪ್ರವಾಹಗಳು, ಕ್ಷಾಮಗಳು, ಚಂಡಮಾರುತಗಳು, ಭೂ ಕುಸಿತ. ಕರಾವಳಿ ಕೊರೆತ, ಹಿಮಪಾತ ಮೇಘಸ್ಪೋಟ, ಉಷ್ಣಗಾಳಿ ಮೊದಲಾದವು ನೈಸರ್ಗಿಕ ವಿನಾಶಕಾರಕಗಳಾಗಿವೆ.
- ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಿದ್ಧಪಡಿಸಿದ ಆಹಾರ, ಆಹಾರದ ಹಂಚಿಕೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಔಷಧಿ ಹಂಚಿಕೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸುವುದು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವನ್ನು ಪಡೆಯುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಇತರೆ ವಿಷಯಗಳು :
ಭಾರತದ ಪ್ರಮುಖ ಕೈಗಾರಿಕೆಗಳು ಪಾಠದ ನೋಟ್ಸ್
ಗ್ರಾಮೀಣಾಭಿವೃದ್ಧಿ ಸಮಾಜ ವಿಜ್ಞಾನ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್