10th Standard Manavana Kannu Mattu Varnamaya Jagattu Science Notes Question Answer Guide Mcq Pdf Download Kannada Medium Karnataka State Syllabus 2025 10ನೇ ತರಗತಿ ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು Question Answer KSEEB Solution for Class 10 Science Chapter 11 Notes in Kannada Medium 10th std manavana kannu mattu varnamaya jagattu notes pdf 10th Class Science Chapter 11 Notes 10th class vigyan notes 10th science notes kannada medium

ಅಧ್ಯಾಯ 11 – ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
ಪ್ರಶ್ನೆಗಳು
1) ಕಣ್ಣಿನ ಹೊಂದಾಣಿಕೆ ಸಾಮರ್ಥ್ಯ ಎಂದರೇನು?
ಕಣ್ಣಿನ ಮಸೂರದ ವಕ್ರತೆಯ ಬದಲಾವಣೆಯಿಂದ ಅದರ ಸಂಗಮದೂರವನ್ನು ಬದಲಾಯಿಸಬಹುದು. ಸ್ನಾಯುಗಳು ವಿಶ್ರಾಂತಗೊಂಡಾಗ ಮಸೂರವು ತೆಳ್ಳಗಾಗುತ್ತದೆ ಮತ್ತು ಸಂಗಮದೂರ ಹೆಚ್ಚಾಗುತ್ತದೆ. ಇದರಿಂದ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಹತ್ತಿರದ ವಸ್ತುಗಳನ್ನು ನೋಡುವಾಗ ಕಣ್ಣಿನ ಸಿಲಿಯರಿ ಸ್ನಾಯುಗಳು ಕುಗ್ಗುತ್ತವೆ. ಇದರಿಂದ ಕಣ್ಣಿನ ಮಸೂರದ ವಕ್ರತೆ ಹೆಚ್ಚಾಗುತ್ತದೆ. ಆಗ ಕಣ್ಣಿನ ಮಸೂರವು ದಪ್ಪವಾಗುತ್ತದೆ. ಅದರ ಪರಿಣಾಮವಾಗಿ ಕಣ್ಣಿನ ಸಂಗಮದೂರ ಕಡಿಮೆಯಾಗುತ್ತದೆ. ಮತ್ತು ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರೀತಿ ಕಣ್ಣಿನ ಮಸೂರದ ಸಂಗಮದೂರವನ್ನು ಹೊಂದಾಣಿಕೆ ಮಾಡುವ ಕಣ್ಣಿನ ಮಸೂರದ ಸಾಮರ್ಥ್ಯವನ್ನು ‘ಕಣ್ಣಿನ ಹೊಂದಾಣಿಕೆಯ ಸಾಮರ್ಥ್ಯ’ ಎನ್ನುತ್ತಾರೆ.
2) ಸಮೀಪ ದೃಷ್ಟಿಯುಳ್ಳ ಒಬ್ಬ ವ್ಯಕ್ತಿಯು 1.2 ಮೀ. ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಈ ವ್ಯಕ್ತಿಯ ದೃಷ್ಟಿ ಪುನರ್ ಸ್ಥಾಪಿಸಲು ಬಳಸುವ ಸರಿಪಡಿಸುವ ಮಸೂರ ಯಾವುದು?

ಆ ಒಬ್ಬ ವ್ಯಕ್ತಿಯು ಸಮೀಪದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡುತ್ತಾನೆ. ಆದರೆ 1.2 ಮೀ.ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲದಿರುವುದರಿಂದ ಅವನ ಕಣ್ಣಿನ ದೋಷವನ್ನು ‘ಮಯೋಪಿಯ’ ಅಥವಾ ಸಮೀಪ ದೃಷ್ಟಿ ದೋಷ ಎನ್ನುತ್ತಾರೆ. ಸಮೀಪ ದೃಷ್ಟಿಯುಳ್ಳ ಈತನ ಕಣ್ಣಿನಲ್ಲಿ ದೂರದ ವಸ್ತುವಿನ ಪ್ರತಿಬಿಂಬವು ರೆಟಿನಾದ ಮೇಲೆ ರೂಪುಗೊಳ್ಳದೆ. ರೆಟಿನಾದ ಮುಂಭಾಗದಲ್ಲಿ ರೂಪುಗೊಳ್ಳುತ್ತದೆ. ಈ ದೋಷವು ಉಂಟಾಗಲು
- ಕಣ್ಣಿನ ಮಸೂರದ ವಿಪರೀತ ವಕ್ರತೆ, ಅಥವಾ
- ಕಣ್ಣುಗುಡ್ಡೆಯ ಸಹಜ ಸ್ಥಿತಿಗಿಂತ ಉದ್ದವಾಗಿರುವುದೇ ಕಾರಣವಾಗಿದೆ. ಮೇಲಿನ ಚಿತ್ರವನ್ನು ನೋಡಿ. ಸೂಕ್ತ ಸಾಮರ್ಥ್ಯ ಹೊಂದಿದ ನಿಮ್ಮ ಮಸೂರವನ್ನು ಉಪಯೋಗಿಸಿ ಈ ದೋಷವನ್ನು ನಿವಾರಿಸಬಹುದು. ಚಿತ್ರ 11.2 (ಸಿ) ಯಲ್ಲಿ ಇದನ್ನು ಸರಿಪಡಿಸಲಾಗಿದೆ. ನಿಮ್ಮ ಮಸೂರವು ಪ್ರತಿಬಿಂಬವನ್ನು ರೆಟಿನಾದ ಮೇಲೆ ಉಂಟು ಮಾಡುವುದರಿಂದ ದೋಷವು ನಿವಾರಣೆಯಾಗಿ ದೃಷ್ಟಿಯು ಸರಿಯಾಗುತ್ತದೆ.
3) ಸಾಮಾನ್ಯ ದೃಷ್ಟಿಯುಳ್ಳವರಿಗೆ ಸಮೀಪ ಬಿಂದು ಮತ್ತು ದೂರ ಬಿಂದುಗಳಾವುವು ?
ಸಾಮಾನ್ಯ ದೃಷ್ಟಿಯುಳ್ಳವರಿಗೆ ಒಂದು ವಸ್ತುವನ್ನು ಆರಾಮವಾಗಿ ಸ್ಪಷ್ಟವಾಗಿ ನೋಡಲು ವಸ್ತುವನ್ನು ಕಣ್ಣಿನಿಂದ 25 ಸೆಂ.ಮೀ. ಅಂತರದಲ್ಲಿ ಇರಬೇಕು. ಆಗ ಕಣ್ಣಿಗೆ ವಸ್ತುವು ಸ್ಪಷ್ಟವಾಗಿ ಹಾಗೂ ಒತ್ತಡ ರಹಿತವಾಗಿ ಕಾಣುವ ಈ ದೂರವನ್ನು ಕಣ್ಣಿನ ಕನಿಷ್ಟ ದೃಷ್ಟಿ ದೂರ ಅಥವಾ ‘ಕಣ್ಣಿನ ಸಮೀಪ ಬಿಂದು’ ಎಂದು ಕರೆಯುತ್ತಾರೆ. ಕಣ್ಣು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುವ ಅತಿ ಗರಿಷ್ಟ ದೂರವನ್ನು ಕಣ್ಣಿನ ಗರಿಷ್ಟ ದೂರುಬಿಂದು ಎನ್ನುತ್ತಾರೆ. ಇದು ಸಾಮಾನ್ಯ ಕಣ್ಣಿಗೆ ಅನಂತ ದೂರವಾಗಿದೆ. ಸಾಮಾನ್ಯ ಕಣ್ಣು 25 ಸೆಂ.ಮೀ. ಮತ್ತು ಅನಂತ ದೂರದ ನಡುವಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡುತ್ತದೆ.
4) ಕೊನೆಯ ಬೆಂಚಿನಲ್ಲಿ ಕುಳಿತಿರುವ ಒಬ್ಬ ವಿದ್ಯಾರ್ಥಿಯು ಕಪ್ಪುಹಲಗೆಯ ಬರಹವನ್ನು ಓದಲು ಕಷ್ಟಪಡುತ್ತಾನೆ. ಈ ಮಗುವು ಬಳಲುತ್ತಿರುವ ತೊಂದರೆ ಯಾವುದು ? ಅದನ್ನು ಹೇಗೆ ಸರಿಪಡಿಸಬಹುದು.
ಕೊನೆಯ ಬೆಂಚಿನಲ್ಲಿ ಕುಳಿತಿರುವ ವಿದ್ಯಾರ್ಥಿಗೆ ಕಪ್ಪು ಹಲಗೆಯ ಬರಹವನ್ನು ಓದಲು ಕಷ್ಟವಾಗುತ್ತಿದೆ ಎಂದರೆ ಆ ಮಗುವಿನ ದೃಷ್ಟಿ ದೋಷ ಮಯೋಪಿಯಾ ಅಥವಾ ಸಮೀಪ ದೃಷ್ಟಿದೋಷ. ಇದನ್ನು ಸೂಕ್ತವಾದ ನಿಮ್ಮ ಮಸೂರವನ್ನು ಉಪಯೋಗಿಸುವುದರಿಂದ ಸರಿಪಡಿಸಬಹುದು.
ಅಭ್ಯಾಸ
- ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮದೂರವನ್ನು ವಿವಿಧ ದೂರಗಳಲ್ಲಿರುವ ವಸ್ತುಗಳು ಕಾಣುವಂತೆ ಸರಿಹೊಂದಿಸಲು ಕಾರಣ
ಎ. ಪ್ರಿಸ್‌ಬಯೊಪಿಯಾ
ಬಿ. ಕಣ್ಣಿನ ಹೊಂದಾಣಿಕೆ
೩. ಸಮೀಪದೃಷ್ಟಿ
ಡಿ. ದೂರದೃಷ್ಟಿ
ಉ : ಬಿ. ಕಣ್ಣಿನ ಹೊಂದಾಣಿಕೆ
2 ಮಾನವನ ಕಣ್ಣು ವಸ್ತುವಿನ ಪ್ರತಿಬಿಂಬವನ್ನುಂಟು ಮಾಡುವ ಭಾಗ
ಎ. ಕಾರ್ನಿಯಾ
ಬಿ. ವರ್ಣಪಟಲ
ಸಿ. ಕಣ್ಣಿನ ಪಾಪೆ
ಡಿ. ರೆಟಿನಾ
ಉ : ಡಿ. ರೆಟಿನಾ
3. ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೃಷ್ಟಿದೂರ.
ಎ. 25 ಮೀ
ಬಿ. 2.5 ಸೆಂ. ಮೀ.
ಸಿ. 25 ಸೆಂ. ಮೀ.
ಡಿ. 2.5 ಮೀ.
ಉ: ಎ. 25 ಮೀ
- ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ.
ಎ. ಕಣ್ಣಿನ ಪಾಪೆ
ಬಿ. ರೆಟಿನಾ
ಸಿ. ಸಿಲಿಯೆರಿ ತಂತುಗಳು
ಡಿ. ವರ್ಣಪಟಲ
ಉ : ಸಿ. ಸಿಲಿಯರಿ ತಂತುಗಳು
- ಒಬ್ಬ ವ್ಯಕ್ತಿಯು ದೂರದೃಷ್ಟಿ ಸರಿಪಡಿಸಲು -5.5 ಡಯಾಪ್ಟರ್ ಸಾಮರ್ಥ್ಯ ಮಸೂರದ ಅವಶ್ಯಕತೆಯಿದೆ. ಅತ್ಯಂತ ಸಮೀಪದೃಷ್ಟಿ ಸರಿಪಡಿಸಲು +1.5 ಡಯಾಪ್ಟರ್ ಸಾಮರ್ಥ್ಯದ ಮಸೂರದ ಅವಶ್ಯಕತೆಯಿದೆ. ಹಾಗಾದರೆ ಯಾವ ಸಂಗಮದೂರವುಳ್ಳ ಮಸೂರವು ಈ ಕೆಳಗಿನ ದೋಷಗಳನ್ನು ಸರಿಪಡಿಸಲು ಬೇಕಾಗಿದೆ?
ಎ. ದೂರದೃಷ್ಟಿ ಮತ್ತು
ಬಿ. ಸಮೀಪದೃಷ್ಟಿ

= + 0.667 ಮೀ
ಸಮೀಪ ದೃಷ್ಟಿಯನ್ನು ಸರಿಪಡಿಸಲು ಉಪಯೋಗಿಸ ಬೇಕಾದ ಮಸೂರದ ಸಂಗಮದೂರ +0.667 ಮೀ
- ಸಮೀಪದೃಷ್ಟಿಯ ದೂರ ಬಿಂದುವು ಕಣ್ಣಿನ ಮುಂದಿನಿಂದ 80 ಸೆಂ.ಮೀ ಆಗಿದೆ. ಯಾವ ಸ್ವಭಾವದ, ಮತ್ತು ಯಾವ ಸಾಮರ್ಥ್ಯದ ಮಸೂರದಿಂದ ಈ ದೋಷ ಸರಿಪಡಿಸಬಹುದು?
ಸಮೀಪ ದೃಷ್ಟಿಯನ್ನು ನಿಮ್ಮ ಮಸೂರದ ಸಹಾಯದಿಂದ ಸರಿಪಡಿಸಬಹುದು. ಈ ದೋಷದಲ್ಲಿ ರೆಟಿನಾ ಮುಂದೆ ಪ್ರತಿಬಿಂಬವು ಮೂಡುತ್ತದೆ. ಇದನ್ನು ನಿಮ್ನ ಮಸೂರ ಉಪಯೋಗಿಸಿದಾಗ ಅದು ರೆಟಿನಾ ಮೇಲೆ ಮೂಡುತ್ತದೆ.


∴ ನಿಮ್ನ ಮಸೂರದ ಸಾಮರ್ಥ್ಯ -1.25 D ಇದನ್ನು ಉಪಯೋಗಿಸುವುದರಿಂದ ಮೇಲೆ ತಿಳಿಸಿದ ದೋಷವನ್ನು ಪರಿಹರಿಸಬಹುದು.
- ದೂರದೃಷ್ಟಿಯನ್ನು ಪರಿಹಾರ ಮಾಡುವ ರೇಖಾ ಚಿತ್ರ ಬರೆಯಿರಿ. ದೂರದೃಷ್ಟಿಯುಳ್ಳ ಕಣ್ಣಿನ ಸಮೀಪ ಬಿಂದು 1 ಮೀ. ಈ ದೋಷ ಪರಿಹರಿಸಲು ಬೇಕಾದ ಮಸೂರದ ಸಾಮರ್ಥ್ಯ ಎಷ್ಟು? ಸಾಮಾನ್ಯ ಕಣ್ಣಿನ ಕನಿಷ್ಠ ದೃಷ್ಟಿದೂರ 25 ಸೆಂ.ಮೀ. ಎಂದು ಭಾವಿಸಿ.

ದೂರದೃಷ್ಟಿಯನ್ನು ಪರಿಹಾರ ಮಾಡಲು ಪೀನಮಸೂರನ್ನು ಉಪಯೋಗಿಸಬೇಕು. ದೂರದೃಷ್ಟಿಯ ಈ ವ್ಯಕ್ತಿ ನೋಡಿದಾಗ ವಸ್ತುವಿನ ಪ್ರತಿಬಿಂಬ ‘N’ ಆಗಿದೆ.


∴ ಮೇಲಿನ ದೋಷವನ್ನು ಸರಿಪಡಿಸಲು +3.0 D ಸಾಮರ್ಥ್ಯವಿರುವ ಪೀನ ಮಸೂರವು ಬೇಕಾಗುತ್ತದೆ.
- ಸಾಮಾನ್ಯ ಕಣ್ಣುಗಳಿಂದ 25 ಸೆಂ.ಮೀ. ಗಿಂತ ಹತ್ತಿರದಲ್ಲಿ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಏಕೆ ಸಾಧ್ಯವಿಲ್ಲ?
ಸಾಮಾನ್ಯ ಕಣ್ಣುಗಳಿಂದ 25 ಸೆಂ.ಮೀ.ಗಿಂತ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಕಣ್ಣು ತನ್ನ ಮಸೂರದ ಸಂಗಮದೂರವನ್ನು ಒಂದು ಕನಿಷ್ಟ ಮಿತಿಗಿಂತ ಕಡಿಮೆ ಮಾಡಲು ಸಾಧ್ಯವಿಲ್ಲ. ಕನಿಷ್ಟ ಮಿತಿಯೇ 25 ಸೆಂ.ಮೀ. ಆಗಿರುವುದರಿಂದ ಇದು ಅಸಾಧ್ಯ.
9. ನಾವು ಕಣ್ಣಿನಿಂದ ವಸ್ತುವಿನ ದೂರವನ್ನು ಹೆಚ್ಚಿಸಿದಾಗ ಕಣ್ಣಿನಲ್ಲಿ ಅದರ ಪ್ರತಿಬಿಂಬ ದೂರ ಏನಾಗುತ್ತದೆ?
ನಾವು ಕಣ್ಣಿನಿಂದ ವಸ್ತುವಿನ ದೂರವನ್ನು ಹೆಚ್ಚಿಸಿದಾಗ ಕಣ್ಣಿನ ಮಸೂರದ ವಕ್ರತೆಯು ಬದಲಾಗಿ ಸಂಗಮದೂರ ಹೆಚ್ಚಾಗುತ್ತದೆ. ಸ್ನಾಯುಗಳು ವಿಶ್ರಾಂತಗೊಂಡು ಮಸೂರವು ತೆಳ್ಳಗಾಗುತ್ತದೆ. ವಸ್ತುವು ಕಣ್ಣಿನಿಂದ ಎಷ್ಟೇ ದೂರ ಹೋದರೂ, ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.
10. ನಕ್ಷತ್ರಗಳು ಮಿನುಗುವುದೇಕೆ?
ನಕ್ಷತ್ರಗಳ ಮಿನುಗುವಿಕೆಯು ವಾಯುಮಂಡಲದಲ್ಲಿ ನಕ್ಷತ್ರಗಳ ಬೆಳಕಿನ ವಕ್ರೀಭವನದಿಂದುಂಟಾಗುತ್ತದೆ.

ವಾಯುಮಂಡಲವು ನಕ್ಷತ್ರದ ಬಳಕನ್ನು ಲಂಬದ ಕಡೆ ಬಾಗಿಸುವುದರಿಂದ ನಕ್ಷತ್ರದ ತೋರಿಕೆಯ ಸ್ಥಾನವು ಅದರ ನೈಜ ಸ್ಥಾನಕ್ಕಿಂತ ಸ್ವಲ್ಪ ಬೇರೆಯಾಗಿರುತ್ತದೆ. ಭೂಮಿಯ ವಾಯುಮಂಡಲದ ಭೌತಿಕ ಪರಿಸ್ಥಿತಿಗಳು ಸ್ಥಿರವಾಗಿಲ್ಲದ ಕಾರಣ ನಕ್ಷತ್ರಗಳು ತುಂಬಾ ದೂರದಲ್ಲಿರುವುದರಿಂದ ಅವು ಅಂದಾಜು ಬಿಂದು ಗಾತ್ರದ ಬೆಳಕಿನ ಮೂಲಗಳಂತೆ ಕಾಣುತ್ತವೆ. ಬೆಳಕಿನ ಕಿರಣಗಳ ಹಾದಿಯು ಸ್ವಲ್ಪ ಮಟ್ಟಿಗೆ ಬದಲಾಗುವುದರಿಂದ ನಕ್ಷತ್ರಗಳ ತೋರಿಕೆಯ ಸ್ಥಾನದಲ್ಲಿ ಸ್ಥಿತ್ಯಂತರವಾಗುತ್ತದೆ ಮತ್ತು ಕಣ್ಣನ್ನು ಪ್ರವೇಶಿಸುವ ನಕ್ಷತ್ರಗಳ ಬೆಳಕು ಮಿನುಗುತ್ತದೆ. ನಕ್ಷತ್ರಗಳು ಕೆಲವೊಮ್ಮೆ ಪ್ರಕಾಶಮಾನವಾಗಿ ಮತ್ತು ಕೆಲವೊಮ್ಮೆ ಕಂದಿದಂತೆ ಕಾಣುತ್ತವೆ. ಈ ರೀತಿ ನಕ್ಷತ್ರಗಳು ಮಿನುಗುತ್ತವೆ.
- ಗ್ರಹಗಳು ಏಕೆ ಮಿನುಗುವುದಿಲ್ಲ ಎಂದು ವಿವರಿಸಿ.
ಗ್ರಹಗಳು ಭೂಮಿಗೆ ಹತ್ತಿರದಲ್ಲಿದೆ ಮತ್ತು ವಿಸ್ತರಿಸಿದ ಬೆಳಕಿನ ಮೂಲಗಳಂತೆ ಕಾಣುತ್ತವೆ. ನಾವು ಒಂದು ಗ್ರಹವನ್ನು ಹಲವಾರು ಬಿಂದು ಗಾತ್ರದ ಬೆಳಕಿನ ಮೂಲಗಳ ಒಂದು ಸಂಗ್ರಹ ಎಂದು ಭಾವಿಸಿದರೆ ಒಟ್ಟು ಎಲ್ಲಾ ಬಿಂದುಗಳಿಂದ ನಮ್ಮ ಕಣ್ಣನ್ನು ತಲುಪುವ ಬೆಳಕಿನ ವ್ಯತ್ಯಾಸವು ಎಲ್ಲಾ ಬಿಂದುಗಳ ಬೆಳಕಿನ ಸರಾಸರಿಗೆ ಹತ್ತಿರವಾಗುತ್ತದೆ ಈ ಸರಾಸರಿಯು ಶೂನ್ಯವಾಗಿರುವುದರಿಂದ ಗ್ರಹಗಳು ಮಿನುಗುವುದಿಲ್ಲ.
- ಸೂರ್ಯನು ಮುಂಜಾನೆ ಕೆಂಪಗಿರಲು ಕಾರಣವೇನು?

ಸೂರ್ಯನ ಬೆಳಕು ನಮ್ಮ ಕಣ್ಣನ್ನು ತಲುಪುವ ಮೊದಲು ದಿಗಂತದ ಸಮತಲದ ಸಮೀಪದಲ್ಲಿನ ಗಾಳಿಯ ದಪ್ಪ ಪದರದಲ್ಲಿ ಹಾಗೂ ಹೆಚ್ಚು ದೂರ ವಾಯುಮಂಡಲದಲ್ಲಿ ಹಾದು ಹೋಗುತ್ತದೆ. ದಿಗಂತದ ಬಳಿ ಇರುವ ಕಣಗಳಿಂದ ಹೆಚ್ಚಿ ಕಡಿಮೆ ತರಂಗವಿರುವ ನೀಲಿ ಬೆಳಕು ಮತ್ತು ಹೆಚ್ಚಿನ ತರಂಗ ದೂರವುಳ್ಳ ಕೆಂಪು ಬೆಳಕು ಚದುರುತ್ತದೆ. ಸೂರೋದಯದ ಮತ್ತು ಸೂರ್ಯಾಸ್ತದ ಕೆಲವು ಸಮಯ ಹೆಚ್ಚಿನ ತರಂಗವಿರುವ ಬೆಳಕು ನಮ್ಮ ಕಣ್ಣನ್ನು ತಲುಪುವುದು. ಆದ್ದರಿಂದ ಮುಂಜಾನೆ ಮತ್ತು ಸಂಜೆ ಸೂರ್ಯನು ಕೆಂಪಾಗಿ ಕಾಣುತ್ತಾನೆ.
- ಗಗನಯಾತ್ರಿಗೆ ಆಕಾಶವು ನೀಲಿಯಾಗಿ ಕಾಣದೆ ಕಪ್ಪಾಗಿ ಕಾಣಲು ಕಾರಣವೇನು?
ಭೂಮಿಗೆ ವಾಯುಮಂಡಲವಿಲ್ಲದಿದ್ದರೆ ಬೆಳಕು ಚದುರುತ್ತಿರಲಿಲ್ಲ. ಆಗ ಆಕಾಶ ಕಪ್ಪಾಗಿ ಕಾಣುತ್ತಿತ್ತು. ಗಗನಯಾತ್ರಿಗೆ ಆಕಾಶವು ನೀಲಿಯಾಗಿ ಕಾಣದೆ ಕಪ್ಪಾಗಿ ಕಾಣಲು ಇದೇ ಕಾರಣ ಎಂದರೆ ಅತಿ ಎತ್ತರದಲ್ಲಿ ವಾಯುಮಂಡಲವಿರುವುದಿಲ್ಲ. ಬೆಳಕು ಚದುರುವುದಿಲ್ಲ. ಅತಿ ಎತ್ತರದಲ್ಲಿ ಹಾರುತ್ತಿರುವ ಗಗನಯಾತ್ರಿಗೆ ಹಾಗೂ ಪ್ರಯಾಣಿಕರಿಗೆ ಯಾರಿಗೇ ಆಗಲಿ ಆಕಾಶವು ಕಪ್ಪಾಗಿಯೇ ಕಾಣುತ್ತದೆ.
ಹೆಚ್ಚುವರಿ ಪ್ರಶೋತ್ತರಗಳು
I. ಬಹು ಆಯ್ಕೆ ಪ್ರಶ್ನೆಗಳು
1. ಸೂರ್ಯನ ಬೆಳಕಿನ ರೋಹಿತವನ್ನು ಪಡೆಯಲು ಗಾಜಿನ ಪಟ್ಟಕವನ್ನು ಬಳಸಿದ ಮೊದಲಿಗರು
ಎ. ಸರ್ ಐಸಾಕ್ ನ್ಯೂಟನ್
ಬಿ. ಸ್ಟ್ಯಾನ್ಲಿ
ಸಿ. ಮೆಂಡಲ್
ಡಿ. ಜೋನ್
ಉ : ಎ. ಸರ್ ಐಸಾಕ್ ನ್ಯೂಟನ್
2. ವಯಸ್ಸಾದವರಿಗೆ ಕಣ್ಣಿನ ಸ್ಪಟಿಕ ಮೋಡ ಕವಿದಂತಾಗುವ ಸ್ಥಿತಿಯನ್ನು
ಎ. ಕಣ್ಣಿನ ಪೊರೆ
ಬಿ. ದೃಷ್ಟಿದೋಷ
ಸಿ. ಪ್ರಿಸ್ಟಿಯೋಪಿಯ
ಡಿ. ಸಮೀಪದೃಷ್ಟಿ
ಉ : ಎ. ಕಣ್ಣಿನ ಪೊರೆ
3. ಮಾನವನ ಬಹು ಮುಖ್ಯ ಜ್ಞಾನೇಂದ್ರಿಯ
ಎ. ಚರ್ಮ
ಬಿ. ಕಣ್ಣು
ಸಿ. ನಾಲಿಗೆ
ಡಿ. ಕಿವಿ
ಉ : ಬಿ.ಕಣ್ಣು
4. ಕಣ್ಣಿನ ಕನಿಷ್ಟ ದೃಷ್ಟಿದೂರ
ಎ. 25 ಮೀ
ಬಿ. 15 ಮೀ
ಸಿ. 25 ಸೆಂ. ಮೀ
ಡಿ. 50 ಸೆಂ. ಮೀ
ಉ: ಸಿ. 25 ಸೆಂ. ಮೀ
5. ಕಣ್ಣಿನ ವಕ್ರೀಭವನ ದೋಷವನ್ನು ಸರಿಪಡಿಸಬಹುದಾದ ಒಂದು ವಿಧಾನ
ಎ. ಪೀನ ಮಸೂರ
ಬಿ. ಒತ್ತು ಮಸೂರ
ಸಿ. ನಿಮ್ಮ ಮಸೂರ
ಡಿ. ದ್ವಿಸಂಗಮ ಮಸೂರ
ಉ : ಬಿ. ಒತ್ತು ಮಸೂರ (contact lens)
6. ದೂರದೃಷ್ಟಿ ಸರಿಪಡಿಸಲು ಉಪಯೋಗಿಸುವ ಮಸೂರ
ಎ. ಪೀನ ಮಸೂರ
ಬಿ. ನಿಮ್ಮ ಮಸೂರ
ಸಿ. ಒತ್ತುಮಸೂರ
ಡಿ. ಮಸೂರ
ಉ: ಎ. ಪೀನ ಮಸೂರ
7. ಬೆಳಕು ಕಣ್ಣಿನ ಯಾವ ಭಾಗದ ಮೂಲಕ ಪ್ರವೇಶಿಸುತ್ತದೆ.
ಎ. ಕಣ್ಣಿನ ಪಾಪೆ
ಬಿ. ವರ್ಣಪಟಲ
ಸಿ. ರೆಟಿನಾ
ಡಿ. ಕಾರ್ನಿಯಾ
ಉ: ಡಿ. ಕಾರ್ನಿಯಾ
8. ಬಿಳಿ ಬೆಳಕನ್ನು ವಿಭಜಿಸಿದಾಗ ಉಂಟಾಗುವ ಬಣ್ಣಗಳ ಸಂಕ್ಷಿಪ್ತರೂಪ
ಎ. VIBGYOR
ಬಿ. BIGYORG
ಸಿ. ROYBIGV
ಡಿ. BGYORIV
ಉ : ಎ. VIBGYOR
9. ಹೆಚ್ಚಿನ ತರಂಗದೂರವುಳ್ಳ ಬೆಳಕಿನ ಬಣ್ಣ
ಎ. ನಿಲಿ
ಬಿ. ಕಪ್ಪು
ಸಿ. ಕೆಂಪು
ಡಿ. ನೇರಳೆ
ಉ: ಸಿ. ಕೆಂಪು
10. ಮಳೆಯ ನಂತರ ಆಕಾಶದಲ್ಲಿ ಕಾಣುವ ನೈಸರ್ಗಿಕ ರೋಹಿತ
ಎ. ನಕ್ಷತ್ರ
ಬಿ. ನಕ್ಷತ್ರ ಪುಂಜ
ಸಿ. ಕಾಮನಬಿಲ್ಲು
ಡಿ. ಚಂದ್ರ
ಉ: ಸಿ. ಕಾಮನಬಿಲ್ಲು
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ
1. ಕಣ್ಣಿನ ದೋಷಗಳು ಎಷ್ಟು ಮತ್ತು ಅವು ಯಾವುವು?
ಸಾಮಾನ್ಯವಾಗಿ ಕಣ್ಣಿಗೆ ಮೂರು ಬಗೆಯ ವಕ್ರೀಭವನ ದೋಷಗಳಿವೆ. ಅವು ಯಾವುವೆಂದರೆ
- ಮಯೋಪಿಯಾ ಅಥವಾ ಸಮೀಪ ದೃಷ್ಟಿ.
- ಹೈಪರ್ ಮೆಟ್ರೋಪಿಯಾ ಅಥವಾ ದೂರದೃಷ್ಟಿ
- ಪ್ರೆಸ್ ಬಯೊಪಿಯಾ.
2. ದೃಷ್ಟಿ ದೌರ್ಬಲ್ಯವುಂಟಾಗಲು ಕಾರಣವೇನು?
ದೃಶ್ಯ ವ್ಯವಸ್ಥೆಯ ಯಾವುದೇ ಭಾಗಕ್ಕೆ ಹಾನಿಯಾದಾಗ ಅಥವಾ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದಾಗ ದೃಶ್ಯ ಕಾರ್ಯಕ್ಕೆ ನಷ್ಟವುಂಟಾಗುತ್ತದೆ. ಬೆಳಕಿನ ಪ್ರಸರಣದಲ್ಲಿ ಭಾಗಿಯಾಗುವ ಯಾವುದೇ ರಚನೆಯು ಅಂದರೆ ಕಾರ್ನಿಯಾ, ಕಣ್ಣಿನ ಪಾಪೆ, ಕಣ್ಣಿನ ಮಸೂರ, ಜಲರಸಧಾತು ಮತ್ತು ಕಾಚಕ ರಸದಾತು ಅಥವಾ ಬೆಳಕಿನ ಕಿರಣಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುವ ಅಕ್ಷಿಪಟಲ ಅಥವಾ ಸಂಕೇತಗಳನ್ನು ಮಿದುಳಿಗೆ ತಲುಪಿಸುವ ಚಾಕ್ಷುಕ್ಷ ನರಗಳಿಗೆ ಹಾನಿಯಾದರೆ ದೃಷ್ಟಿ ದೌರ್ಬಲ್ಯವುಂಟಾಗುತ್ತದೆ.
3. ಇತ್ತೀಚಿನ ದಿನಗಳಲ್ಲಿ ಕಣ್ಣಿನ ವಕ್ರೀಭವನದ ದೋಷಗಳನ್ನು ಹೇಗೆ ಸರಿಪಡಿಸುತ್ತಾರೆ?
ಕಣ್ಣಿನ ವಕ್ರೀಭವನ ದೋಷಗಳನ್ನು ಒತ್ತುಮಸೂರ (Contact lens)000 ದಿಂದ ಅಥವಾ ಶಸ್ತ್ರ ಚಿಕಿತ್ಸೆಗಳಿಂದ ಸರಿಪಡಿಸುತ್ತಾರೆ.
- ದೃಷ್ಟಿ ದೋಷ ಉಂಟಾಗಲು ಕಾರಣವೇನು?
ಕೆಲವೊಮ್ಮೆ ಕಣ್ಣು ಹೊಂದಾಣಿಕೆಯ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಮಾನವನು ವಸ್ತುಗಳನ್ನು ನಿಖರವಾಗಿ ಮತ್ತು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಕಣ್ಣಿನ ವಕ್ರೀಭವನ ದೋಷದಿಂದ ದೃಷ್ಟಿಯು ಮಸುಕಾಗುತ್ತದೆ.
5. ಕಣ್ಣಿನ ಮಸೂರದ ಬಗ್ಗೆ ಟಿಪ್ಪಣಿ ಬರೆಯಿರಿ.
ಕಣ್ಣಿನ ಮಸೂರವು ತಂತುಗಳು, ಜೆಲ್ಲಿಯಂತಹ ವಸ್ತುಗಳಿಂದ ಕೂಡಿದೆ. ಇದರ ವಕ್ರತೆಯನ್ನು ಸಿಲಿಯರಿ ಸ್ನಾಯುಗಳಿಂದ ಸ್ವಲ್ಪ ಮಟ್ಟಿಗೆ ಮಾರ್ಪಡಿಸಬಹುದು, ಕಣ್ಣಿನ ಮಸೂರದ ವಕ್ರತೆಯ ಬದಲಾವಣೆಯಿಂದ ಅದರ ಸಂಗಮದೂರವನ್ನು ಬದಲಾಯಿಸಬಹುದು.
6. ಕಣ್ಣಿನ ಈ ಭಾಗಗಳ ಕಾರ್ಯಗಳೇನು? ನಾವು ವಸ್ತುಗಳನ್ನು ಹೇಗೆ ನೋಡುತ್ತೇವೆ?
- ರಟಿನಾ : ಇದು ದ್ಯುತಿ ಸಂವೇದಿ ಪರದೆ. ಇದನ್ನು ಅಕ್ಷಿಪಟಲ ಎಂದೂ ಸಹ ಹೇಳುತ್ತಾರೆ. ಇದರ ಮೇಲೆಯೆ ಪ್ರತಿಬಿಂಬ ಮೂಡುವುದು.
- ಸ್ಪಟಿಕ ಮಸೂರ : ವಿವಿಧ ಅಂತರದಲ್ಲಿರುವ ವಸ್ತುಗಳನ್ನು ರೆಟಿನಾದ ಮೇಲೆ ಕೇಂದ್ರಿಕರಿಸಲು ಬೇಕಾದ ಸಂಗಮ ದೂರದ ಸೂಕ್ಷ್ಮ ಹೊಂದಾಣಿಕೆಯಷ್ಟನ್ನೇ ಒದಗಿಸುತ್ತದೆ.
- ಐರಿಸ್ (ವರ್ಣಪಟಲ) : ಇದು ಕಾರ್ನಿಯಾದ ಹಿಂಭಾಗದಲ್ಲಿದೆ. ಇದು ಕಡುಕಪ್ಪಾದ ಸ್ನಾಯುಗಳ ಒಂದು ಪದರವಾಗಿದ್ದು ಕಣ್ಣು ಪಾಪೆಯ ಗಾತ್ರವನ್ನು ನಿಯಂತ್ರಿಸುತ್ತದೆ.
- ಕಣ್ಣಿನ ಪಾಪೆ : ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.
- ಕಣ್ಣಿನ ಮಸೂರ : ಇದು ವಸ್ತುವಿನ ತಲೆಕೆಳಗಾದ ನೈಜ ಪ್ರತಿಬಿಂಬವನ್ನು ಆಕ್ಷಿಪಟಲದ ಮೇಲೆ ಉಂಟುಮಾಡುತ್ತದೆ.
- ಅಕ್ಷಿಪಟಲ : ಇದು ಅಗಾಧ ಸಂಖ್ಯೆಯ ಬೆಳಕಿನ ದೃಶ್ಯ ಗ್ರಾಹಕ ಕೋಶಗಳು ತೆಳುಪರದೆಯಾಗಿದೆ.
- ದೃಶ್ಯ ಗ್ರಾಹಕ ಕೋಶಗಳು : ಬೆಳಕಿನ ಕಿರಣಗಳ ಚೋದನೆಯಿಂದ ಸಕ್ರಿಯಗೊಳ್ಳುತ್ತವೆ ಮತ್ತು ವಿದ್ಯುತ್ ಸಂಕೇತಗಳನ್ನು ಸೃಷ್ಟಿಸುತ್ತವೆ.
ಕೊನೆಯಲ್ಲಿ ಈ ಸಂಕೇತಗಳನ್ನು ಚಾಕ್ಷುಷ ನರಗಳ ಮೂಲಕ ಮಿದುಳಿಗೆ ತಲುಪಿಸಲಾಗುತ್ತದೆ. ಅಂತಿಮವಾಗಿ ಮಿದುಳು ಈ ಸಂಕೇತಗಳನ್ನು ಅರ್ಥೈಸಿ, ಮಾಹಿತಿಗಳನ್ನು ಸಂಸ್ಕರಿಸುತ್ತದೆ. ಆಗ ನಾವು ವಸ್ತುಗಳು ಹೇಗಿವೆಯೋ ಹಾಗೆಯೇ ಗ್ರಹಿಸುತ್ತೇವೆ.
7 ಸಮೀಪ ದೃಷ್ಟಿ ದೋಷ ಹೇಗೆ ಉಂಟಾಗುತ್ತದೆ? ಇದನ್ನು ಹೇಗೆ ಸರಿಪಡಿಸಬಹುದು?

ಸಮೀಪದೃಷ್ಟಿ ದೋಷವನ್ನು ಮಯೋಪಿಂತು ಕರೆಯುತ್ತಾರೆ. ಈ ದೋಷವನ್ನು ಹೊಂದಿರುವ ವ್ಯಕ್ತಿ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಆದರೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಇವರ ಕಣ್ಣಿನಲ್ಲಿ ದೂರದ ವಸ್ತುವಿನ ಬಿಂಬವು ರೆಟಿನಾದ ಮೇಲೆ ರೂಪುಗೊಳ್ಳದೆ, ಅದರ ಮುಂಭಾಗದಲ್ಲಿ ರೂಪುಗೊಳ್ಳುತ್ತದೆ. ಈ ದೋಷವು ಕಣ್ಣಿನ ಮಸೂರದ ವಿಪರೀತ ವಕ್ರತೆ ಅಥವಾ ಕಣ್ಣು ಗುಡ್ಡೆಯು ಸಹಜ ಸ್ಥಿತಿಗಿಂತ ಉದ್ದವಾಗಿರುವುದೇ ಕಾರಣ. ಈ ದೋಷವನ್ನು ಸೂಕ್ತ ಸಾಮರ್ಥ್ಯವಿರುವ ನಿಮ್ನ ಮಸೂರವನ್ನು ಉಪಯೋಗಿಸಿ ನಿವಾರಿಸಬಹುದು.
8. ರೋಹಿತ ಎಂದರೇನು?
ಬೆಳಕಿನ ಕಿರಣದ ವರ್ಣಮಯ ಘಟಕಗಳ ಪಟ್ಟಿಯನ್ನು ರೋಹಿತವೆಂದು ಕರೆಯುತ್ತಾರೆ.
9. ಪ್ರಿಸ್ಟಿಯೋಪಿಯಾ ಎಂದರೇನು? ಇದನ್ನು ಹೇಗೆ ಸರಿಪಡಿಸಬಹುದು?
ಸಾಮಾನ್ಯವಾಗಿ ಕಣ್ಣಿನ ಹೊಂದಾಣಿಕೆಯ ಸಾಮರ್ಥ್ಯ ವಯಸ್ಸಾದಂತೆ ಕಡಿಮೆಯಾಗುತ್ತದೆ. ಕಣ್ಣಿನ ಸಮೀಪಬಿಂದುವು ಕ್ರಮೇಣ ದೂರ ಸರಿಯುತ್ತದೆ. ಇಂತಹವರು ಹತ್ತಿರದ ವಸ್ತುಗಳನ್ನು ಆರಾಮದಾಯಕವಾಗಿ, ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಈ ದೋಷವನ್ನು ಪ್ರಿಸ್ಟಿಯೋಪಿಯಾ ಎನ್ನುತ್ತಾರೆ. ಈ ದೋಷವುಂಟಾಗಲು ಕಾರಣ ಮಸೂರವು ತನ್ನ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುವುದು ಅಥವಾ ಕ್ರಮೇಣ ಸಿಲಿಯರಿ ಸ್ನಾಯುಗಳು ದುರ್ಬಲಗೊಳ್ಳುವುದು. ಕೆಲವೊಮ್ಮೆ ಕೆಲವರು ಸಮೀಪದೃಷ್ಟಿ ಮತ್ತು ದೂರದೃಷ್ಟಿ ಎರಡರಿಂದಲೂ ಬಳಲಬಹುದು. ಇಂತಹವರಿಗಾಗಿ ದ್ವಿಸಂಗಮ (bifocal) ಮಸೂರಗಳ ಅವಶ್ಯಕತೆಯಿರುತ್ತದೆ. ಈ ದ್ವಿಸಂಗಮ ಮಸೂರಗಳಲ್ಲಿ ಮೇಲ್ಬಾಗದಲ್ಲಿ ನಿಮ್ಮ ಮಸೂರವು, ಹಾಗೂ ಕೆಳಗಿನ ಭಾಗದಲ್ಲಿ ಪೀನಮಸೂರವು ಅವರ ದೃಷ್ಟಿಯನ್ನು ಸುಗಮಗೊಳಿಸುತ್ತದೆ.
10. ಗಾಜಿನ ಪಟ್ಟಕದ ಮೂಲಕ ಬೆಳಕಿನ ವರ್ಣ ವಿಭಜನೆಯನ್ನು ವಿವರಿಸಿ.

ಒಂದು ದಪ್ಪನಾದ ಕಾರ್ಡ್ ಬೋರ್ಡ್‌ನ ಶೀಟ್ ತೆಗೆದುಕೊಂಡು, ಅದರ ಮಧ್ಯದಲ್ಲಿ ಸಣ್ಣರಂಧ್ರ ಅಥವಾ ಕಿರಿದಾದ (slit) ಸೀಳು ಮಾಡಿರಿ. ಸೂರ್ಯನ ಕಿರಣವನ್ನು ಸೀಳಿನ ಮೇಲೆ ಬೀಳುವ ಹಾಗೆ ಮಾಡಿರಿ. ಇದರಿಂದ ಬಿಳಿಬಣ್ಣದ ಕಿರಿದಾದ ನೇರ ಕಿರಣವುಂಟಾಗುತ್ತದೆ.
ಪಟ್ಟಕವು ಪತನವಾದ ಬಿಳಿ ಬೆಳಕನ್ನು ಬಣ್ಣಗಳ ಗುಂಪನ್ನಾಗಿ ವಿಭಜಿಸಿದೆ. ಅದು ನೇರಳೆ, ಊದಾ. ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ನೋಡಬಹುದು
ಈ ರೀತಿ ಬಿಳಿಯ ಬಣ್ಣವು ಅದರ ವಿಭಿನ್ನ ಬಣ್ಣಗಳ ಘಟಕಗಳಾಗಿ ವಿಭಜನೆ ಹೊಂದುವುದನ್ನು ‘ಬೆಳಕಿನ ವರ್ಣವಿಭಜನೆ’ ಎನ್ನುತ್ತಾರೆ.
11. ನಿಜವಾದ ಸೂರ್ಯೋದಯ ಎಂದರೇನು?
ಸೂರ್ಯನು ದಿಗಂತದ ಸಮತಲವನ್ನು ದಾಟುವ ಸಮಯವನ್ನು ನಿಜವಾದ ಸೂರ್ಯೋದಯ ಎನ್ನುತ್ತಾರೆ.
12. ಟಿಂಡಾಲ್ ಪರಿಣಾಮ ಎಂದರೇನು?
ಕಲಿಲ ಪದಾರ್ಥಗಳಿಂದ ಬೆಳಕಿನ ಚದುರುವಿಕೆಯನ್ನು ಟಿಂಡಾಲ್ ಪರಿಣಾಮ ಎನ್ನುತ್ತಾರೆ. ಉದಾ : ದಟ್ಟ ಕಾಡಿನ ಮೇಲ್ಪದರದ (Canopy) ಮೂಲಕ ಸೂರ್ಯ ರಶ್ಮಿ ಹಾದು ಹೋದಾಗ ಟಿಂಡಾಲ್ ಪರಿಣಾಮವನ್ನು ಕಾಣಬಹುದು. ಇಲ್ಲಿ ಮಂಜಿನಲ್ಲಿರುವ ಸಣ್ಣ ನೀರಿನ ಹನಿಗಳು ಬೆಳಕನ್ನು ಚದುರಿಸುತ್ತವೆ.
13. ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲದಲ್ಲಿ ಸೂರ್ಯ ಹೇಗೆ ಕಾಣುತ್ತಾನೆ?’
ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲದಲ್ಲಿ ಸೂರ್ಯನ ದುಂಡಾಕಾರವು ತೋರಿಕೆಯ ಚಪ್ಪಟೆಯಾಗುವಿಕೆಗೂ ವಾಯುಮಂಡಲದಲ್ಲಿನ ವಕ್ರೀಭವನವೇ ಕಾರಣವಾಗಿದೆ.
14. ತ್ರಿಭುಜ ಪಾದ ಪಟ್ಟಕದ ಮೂಲಕ ಬೆಳಕಿನ ವಕ್ರೀಭವನದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ.

15. ದೂರದೃಷ್ಟಿ ದೋಷ ಹೇಗೆ ಉಂಟಾಗುತ್ತದೆ? ಇದನ್ನು ಹೇಗೆ ನಿವಾರಿಸಬಹುದು?

ದೂರದೃಷ್ಟಿ ದೋಷವನ್ನು ಹೈಪರ್ ಮೆಟ್ರೋಪಿಯಾ ಎಂದು ಕರೆಯುತ್ತಾರೆ. ಈ ದೋಷವಿರುವ ವ್ಯಕ್ತಿ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. ಆದರೆ ಸಮೀಪವಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಚಿತ್ರ (ಬಿ)ಯನ್ನು ನೋಡಿ. ಈ ದೋಷವಿರುವ ವ್ಯಕ್ತಿಗೆ ಹತ್ತಿರದ ವಸ್ತುವಿನಿಂದ ಬರುವ ಬೆಳಕಿನ ಕಿರಣಗಳು ರೆಟಿನಾದ ಹಿಂಭಾಗದಲ್ಲಿ ರೂಪುಗೊಳ್ಳುತ್ತದೆ. ಈ ದೋಷವುಂಟಾಗಲು ಕಾರಣ
- ಕಣ್ಣಿನ ಮಸೂರದ ಸಂಗಮದೂರವು ಉದ್ದವಾಗಿರುವುದು ಅಥವಾ
- ಕಣ್ಣುಗುಡ್ಡೆಯು ಅತಿ ಚಿಕ್ಕದಾಗಿರುವುದು.
ಈ ದೋಷವನ್ನು ನಿವಾರಿಸಲು ಸೂಕ್ತ ಸಾಮರ್ಥ್ಯವಿರುವ ಪೀನಮಸೂರವನ್ನು ಬಳಸಬೇಕು. ಚಿತ್ರ 11.3 (ಸಿ) ಕನ್ನಡಕಗಳು ಹೆಚ್ಚುವರಿ ಕೇಂದ್ರೀಕರಿಸುವಿಕೆಯಿಂದ ಪ್ರತಿಬಿಂಬವು ರೆಟಿನಾದ ಮೇಲೆ ರೂಪುಗೊಳ್ಳುತ್ತದೆ.
16. ದಿಕ್ಷಲ್ಲಟ ಕೋನ ಎಂದರೇನು?
ಪಟ್ಟಕದ ವಿಶೇಷ ಆಕಾರವು ನಿರ್ಗಮನ ಕಿರಣವನ್ನು ಪತನ ಕಿರಣದ ದಿಕ್ಕಿನಿಂದ ಬಾಗುವಂತೆ ಮಾಡಿದೆ. ಈ ಕೋನವನ್ನು ದಿಕ್ಷಲ್ಲಟ ಕೋನ ಎನ್ನುತ್ತಾರೆ.
(10ನೆಯ ಪ್ರಶ್ನೆಯ ಚಿತ್ರದಲ್ಲಿ 2D ದಿಕ್ಷಲ್ಲಟ ಕೋನವಾಗಿದೆ.)
17. ಬಿಳಿಬಣ್ಣದ ರೋಹಿತದ ಪುನರ್ ಸಂಯೋಜನೆಯನ್ನು ಚಿತ್ರ ಸಹಿತ ವಿವರಿಸಿ.

ಸರ್ ಐಸ್ಯಾಕ್ ನ್ಯೂಟನ್‌ರವರು ಸೂರ್ಯನ ಬೆಳಕಿನ ರೋಹಿತವನ್ನು ಪಡೆಯಲು ಗಾಜಿನ ಪಟ್ಟಕವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದವರು. ಚಿತ್ರದಲ್ಲಿ ತೋರಿಸಿರುವಂತೆ ಅವರು ಸಮರೂಪಿಯಾದ ಇನ್ನೊಂದು ಪಟ್ಟಕವನ್ನು ಮೊದಲಿನ ಪಟ್ಟಕದ ವಿರುದ್ಧ ದಿಕ್ಕಿನಲ್ಲಿ ತಲೆಕೆಳಗಾಗಿ ಚಿತ್ರದಲ್ಲಿ ತೋರಿಸಿರುವಂತೆ ಇರಿಸಿದರು. ಇದು ರೋಹಿತದ ಎಲ್ಲಾ ಬಣ್ಣಗಳು ತಲೆ ಕೆಳಗಾದ ಪಟ್ಟಕದ ಮೂಲಕ ಹಾದು ಹೋಗಲು ಅವಕಾಶ ಕಲ್ಪಿಸಿತು. ಎರಡನೇ ಪಟ್ಟಕದ ಮತ್ತೊಂದು ಕಡೆಯಿಂದ ನಿರ್ಗಮಿಸುವ ಬೆಳಕು ಬಿಳಿಯ ಬಣ್ಣದ್ದಾಗಿತ್ತು. ಈ ವೀಕ್ಷಣೆಯು ಸೂರ್ಯನ ಬೆಳಕು ಏಳು ಬಣ್ಣಗಳಿಂದ ಉಂಟಾಗಿದೆ ಎಂದು ತೀರ್ಮಾನಿಸಲು ನ್ಯೂಟನ್ನರಿಗೆ ಸುಳಿವು ನೀಡಿತು. ಸೂರ್ಯನ ರೋಹಿತದಂತಹ ರೋಹಿತವನ್ನು ನೀಡುವ ಬೆಳಕೆ ಬಿಳಿಯ ಬೆಳಕು.
18. ಮಾನವನ ಕಣ್ಣಿನ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ.

19. ನೈಸರ್ಗಿಕ ರೋಹಿತವನ್ನು ಹೆಸರಿಸಿ. ಇದು ಹೇಗೆ ಉಂಟಾಗುತ್ತದೆ?
ಕಾಮನ ಬಿಲ್ಲು ಮಳೆಯ ನಂತರ ಆಕಾಶದಲ್ಲಿ ಕಾಣುವ ನೈಸರ್ಗಿಕ ರೋಹಿತವಾಗಿದೆ. ಕಾಮನಬಿಲ್ಲು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಉಂಟಾಗುತ್ತದೆ. ಜಲಪಾತದ ಬಳಿ ಅಥವಾ ನೀರಿನ ಕಾರಂಜಿಯ ಬಳಿ ಸೂರ್ಯ ನಿಮ್ಮ ಹಿಂದಿರುವಂತೆ ನಿಂತರೆ ಕಾಮನಬಿಲ್ಲನ್ನು ನೋಡಬಹುದು.
- ಶುಭ್ರ ಆಕಾಶವು ನೀಲಿಯಾಗಿರಲು ಕಾರಣವೇನು?
ವಾಯುಮಂಡಲದಲ್ಲಿನ ಗಾಳಿಯ ಅಣುಗಳು ಮತ್ತು ಸಣ್ಣ ಕಣಗಳು ಗೋಚರ ಬೆಳಕಿನ ತರಂಗಾಂತರಕ್ಕಿಂತ ಸಣ್ಣದಾಗಿರುತ್ತದೆ. ಇವು ಬೆಳಕಿನಲ್ಲಿರುವ ಸಣ್ಣ ತರಂಗಾಂತರವುಳ್ಳ ನೀಲಿ ಅಂಚನ್ನು ಹೆಚ್ಚು ಪರಿಣಾಮಕಾರಿಯಾಗಿ ಚದುರಿಸುವುದರಿಂದ ಶುಭ್ರ ಆಕಾಶವು ನೀಲಿಯಾಗಿ ಕಾಣುತ್ತದೆ.
21. ಶೀಘ್ರ ಸೂರ್ಯೋದಯ ಮತ್ತು ವಿಳಂಬಿತ ಸೂರ್ಯಾಸ್ತವು ಏಕೆ?

ವಾಯು ಮಂಡಲದಲ್ಲಿನ ವಕೀಭವನದ ಸೂರ್ಯನು ವಾಸ್ತವ ಸೂರ್ಯೋದಯಕ್ಕಿಂತ ಎರಡು ನಿಮಿಷ ಮೊದಲು ಹಾಗೂ ವಾಸ್ತವ ಸೂರ್ಯಾಸ್ತದ ಎರಡು ನಿಮಿಷ ನಂತರ ನಮಗೆ ಗೋಚರವಾಗುವುದು.
ನೆನಪಿನಲ್ಲಿಡಬೇಕಾದ ಮುಖ್ಯಾಂಶಗಳು
- ಮಾನವನ ಕಣ್ಣು ಬೆಳಕನ್ನು ಬಳಸಿಕೊಂಡು ನಮ್ಮ ಸುತ್ತಲಿನ ವಸ್ತುಗಳನ್ನು ನೋಡಲು ನಮಗೆ ಸಹಕಾರಿಯಾಗಿದೆ.
- ಮಾನವನ ಕಣ್ಣು ಒಂದು ಅತ್ಯಮೂಲ್ಯವಾದ ಮತ್ತು ಅತಿ ಸೂಕ್ಷ್ಮವಾದ ಜ್ಞಾನೇಂದ್ರಿಯವಾಗಿದೆ. ಮಾನವನ ಕಣ್ಣು ಒಂದು ಕ್ಯಾಮರಾದಂತಿದೆ.
- ಕಣ್ಣಿನ ಮಸೂರವು ತಂತುಗಳು, ಚೆಲ್ಲಿಯಂತಹ ವಸ್ತುಗಳಿಂದ ಕೂಡಿದೆ. ಇದರ ವಕ್ರತೆಯನ್ನು ಸಿಲಿಯರಿ ಸ್ನಾಯುಗಳಿಂದ ಸ್ವಲ್ಪ ಮಟ್ಟಿಗೆ ಮಾರ್ಪಡಿಸಬಹುದು.
- ದೂರದ ಹಾಗೂ ಹತ್ತಿರದ ವಸ್ತುಗಳನ್ನು ದೃಷ್ಟಿಸುವಂತೆ ಕಣ್ಣು ತನ್ನ ಸಂಗಮದೂರವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವೇ ಕಣ್ಣಿನ ಹೊಂದಾಣಿಕೆ.
- ಕಣ್ಣು, ವಸ್ತುಗಳನ್ನು ಸ್ಪಷ್ಟವಾಗಿ, ಸರಾಗವಾಗಿ ನೋಡಲು ಸಾಧ್ಯವಿರುವ ಕನಿಷ್ಟ ಅಂತರವೇ ಕಣ್ಣಿನ ಸಮೀಪ ಬಿಂದು ಅಥವಾ ಸ್ಪಷ್ಟದೃಷ್ಟಿಯ ಕನಿಷ್ಠ ದೂರ ಎನ್ನುತ್ತೇವೆ. (ಸುಮಾರು 25 ಸೆಂ.ಮೀ. ಪ್ರಾಪ್ತ ವಯಸ್ಸಿನ ಯುವಕರಿಗೆ)
- ಕಾರ್ನಿಯಾ, ಕಣ್ಣಿನ ಪಾಪೆ, ಕಣ್ಣಿನ ಮಸೂರ, ಜಲ ರಸಧಾತು ಕಾಚಕರಸದಾತು ಅಥವಾ ಬೆಳಕಿನ ಕಿರಣಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುವ ಅಕ್ಷಿಪಟಲ ಅಥವಾ ಸಂಕೇತಗಳನ್ನು ಮಿದುಳಿಗೆ ತಲುಪಿಸುವ ಚಾಕ್ಷುಷ ನರಗಳಿಗೆ ಹಾನಿಯಾದರೆ ದೃಷ್ಟಿ ದೌರ್ಬಲ್ಯವುಂಟಾಗುತ್ತದೆ.
- ಕಣ್ಣಿನ ಸಾಮಾನ್ಯ ವಕ್ರೀಭವನದ ದೃಷ್ಟಿ ದೋಷಗಳೆಂದರೆ, ಸಮೀಪದೃಷ್ಟಿ, ದೂರದೃಷ್ಟಿ, ಪ್ರಿಸ್ ಬಯೊಪಿಯಾ. ಮಯೋಪಿಯಾ (ಸಮೀಪದೃಷ್ಟಿ – ದೂರದ ವಸ್ತುವಿನ ಪ್ರತಿಬಿಂಬವು ಅಕ್ಷಿಪಟಲದ ಮುಂಭಾಗದಲ್ಲಿ ಉಂಟಾಗುತ್ತದೆ) ಇದನ್ನು ಸೂಕ್ತ ಸಾಮರ್ಥ್ಯದ ನಿಮ್ಮ ಮಸೂರ ಉಪಯೋಗಿಸಿ ಸರಿಪಡಿಸಬಹುದು.
- ಹೈಪರ್ ಮೆಟ್ರೊಪಿಯಾ (ದೂರದೃಷ್ಟಿ – ಹತ್ತಿರದ ವಸ್ತುವಿನ ಪ್ರತಿಬಿಂಬವು ರೆಟಿನಾದ ಹಿಂಭಾಗದಲ್ಲಿ ಉಂಟಾಗುತ್ತದೆ) ಇದನ್ನು ಸೂಕ್ತ ಸಾಮರ್ಥ್ಯದ ಪೀನ ಮಸೂರದ ಬಳಕೆಯಿಂದ ಸರಿಪಡಿಸಬಹುದು.
- ಹಿರಿಯ ವಯಸ್ಸಿನಲ್ಲಿ ಕು ತನ್ನ ಹೊಂದಾಣಿಕೆ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
- ವಯಸ್ಸಾದವರಿಗೆ ಕಣ್ಣಿನ ಸ್ಪಟಿಕ ಮಸೂರವು ಹಾಲಿನಂತ ಬೆಳ್ಳಗೆ ಹಾಗೂ ಮೋಡ ಕವಿದಂತಾಗುತ್ತದೆ. ಈ ಸ್ಥಿತಿಯನ್ನು ಕಣ್ಣಿನ ಪೊರೆ (cataract) ಎನ್ನುತ್ತಾರೆ. ಇದು ಭಾಗಶಃ ಅಥವಾ ಪೂರ್ಣ ದೃಷ್ಟಿಯನ್ನು ನಷ್ಟ ಮಾಡುತ್ತದೆ. ಕಣ್ಣಿನ ಪೊರೆ ಶಸ್ತ್ರಕ್ರಿಯೆಯ ಮೂಲಕ ಕಣ್ಣಿನ ದೃಷ್ಟಿ ಪುನರ್ ಸ್ಥಾಪಿಸಲು ಸಾಧ್ಯವಿದೆ.
- ಮಾನವರಿಗೆ ಎರಡು ಕಣ್ಣುಗಳಿರುವುದರಿಂದ ಹಲವಾರು ಅನುಕೂಲಗಳಿವೆ.
- ವಿಶಾಲ ಕ್ಷೇತ್ರದ ವೀಕ್ಷಣೆಗೆ ಅವಕಾಶ ನೀಡುತ್ತದೆ.
- ಎರಡೂ ಕಣ್ಣುಗಳ ನೇರ ದೃಷ್ಟಿಗೆ 180° ನೋಟವಿದೆ.
- ಮಸುಕಾದ ವಸ್ತುಗಳನ್ನು ಗುರ್ತಿಸುವ ಸಾಮರ್ಥ್ಯವು ಎರಡು ಕಣ್ಣುಗಳಿಂದ ವರ್ಧಿಸುತ್ತದೆ.
- ನಮ್ಮ ಎರಡೂ ಕಣ್ಣುಗಳು ಹಣೆಯ ಮುಂಭಾಗದಲ್ಲಿ ಸ್ಥಾನವನ್ನು ಹೊಂದಿರುವುದರಿಂದ ನಮ್ಮ ದೃಷ್ಟಿಯ ಪರಿಧಿಯನ್ನು ಕಡಿಮೆಗೊಳಿಸುತ್ತದೆ. ಇದನ್ನು ‘ಸ್ಟಿರಿಯೋಪ್ಪಿಸ್‘ (Stereopsis) ಎನ್ನುತ್ತೇವೆ.
- ಪ್ರತಿ ಕಣ್ಣು ಮತ್ತೊಂದಕ್ಕಿಂತ ವಿಭಿನ್ನವಾದ ಪ್ರತಿಬಿಂಬವನ್ನು ನೋಡುತ್ತದೆ. ನಮ್ಮ ಮಿದುಳು ಎರಡೂ ಪ್ರತಿಬಿಂಬಗಳನ್ನು ಒಗ್ಗೂಡಿಸಿ ಏಕ ಪ್ರತಿಬಿಂಬವಾಗಿಸುತ್ತದೆ.
- ಈಗಿನ ದಿನಗಳಲ್ಲಿ ಕಣ್ಣಿನ ವಕ್ರೀಭವನ ದೋಷಗಳನ್ನು ಒತ್ತು ಮಸೂರ (contact . lens) ಅಥವಾ ಶಸ್ತ್ರ ಚಿಕಿತ್ಸೆಗಳಿಂದಲೂ ಸರಿಪಡಿಸಬಹುದು.
- ನಮ್ಮ ಮರಣಾನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಕುರುಡು ವ್ಯಕ್ತಿಯ ಬಾಳಿಗೆ ಬೆಳಕಾಗಬಹುದು.
- ಪಟ್ಟಕದ ವಿಶೇಷ ಆಕಾರವು ನಿರ್ಗಮನ ಕಿರಣವನ್ನು ಪತನ ಕಿರಣದ ದಿಕ್ಕಿನಿಂದ ಬಾಗುವಂತೆ ಮಾಡಿದೆ. ಈ ಕೋನವನ್ನು ‘ದಿಕ್ಷಲ್ಲಟದ ಕೋನ’ (Angle of deviation) ಎನ್ನುತ್ತಾರೆ. ಇದನ್ನು ZD ಎಂದು ಸೂಚಿಸುತ್ತೇವೆ.
- ಪಟ್ಟಕವು ಪತನವಾದ ಬಳಿ ಬೆಳಕನ್ನು ಬಣ್ಣಗಳ ಗುಂಪನ್ನಾಗಿ ವಿಭಜಿಸುತ್ತದೆ.
- ಸರ್ ಐಸ್ಯಾಕ್ ನ್ಯೂಟನ್‌ರವರು ಸೂರ್ಯನ ಬೆಳಕಿನ ರೋಹಿತವನ್ನು ಪಡೆಯಲು ಗಾಜಿನ ಪಟ್ಟಕವನ್ನು ಬಳಸಿದ ಮೊದಲಿಗರು.
- ಬಿಳಿಯ ಬೆಳಕು ಅದರ ಘಟಕ ಬಣ್ಣಗಳಾಗಿ ವಿಭಜೆನೆ ಹೊಂದುವುದನ್ನು ಬೆಳಕಿನ ವರ್ಣವಿಭಜನೆ ಎನ್ನುತ್ತೇವೆ.
- ಸೂರ್ಯನ ಬೆಳಕು ಏಳು ಬಣ್ಣಗಳಿಂದ ಉಂಟಾಗಿದೆ ಎಂದು ತೀರ್ಮಾನಿಸಲು ನ್ಯೂಟನ್ನರಿಗೆ ಸುಳಿವು ಸಿಕ್ಕಿತು.
- ಸೂರ್ಯನ ರೋಹಿತದಂತಹ ರೋಹಿತವನ್ನು ನೀಡುವ ಬೆಳಕೆ ಬಿಳಿಯ ಬೆಳಕು ಕಾಮನ ಬಿಲ್ಲು ಮಳೆಯ ನಂತರ ಆಕಾಶದಲ್ಲಿ ಕಾಣುವ ನೈಸರ್ಗಿಕ ರೋಹಿತವಾಗಿದೆ.
- ವಕ್ರೀಭವನ ಮಾಧ್ಯಮದ ಭೌತ ಪರಿಸ್ಥಿತಿಗಳು ಸ್ಥಿರವಲ್ಲದ ಕಾರಣ ಬಿಸಿಗಾಳಿಯ ಮೂಲಕ ನೋಡಿದಾಗ, ವಸ್ತುವಿನ ಸ್ಥಾನದಲ್ಲಿ ತೋರಿಕೆಯ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ವಾಯುಮಂಡಲದಲ್ಲಿನ ವಕ್ರೀಭವನದ ಪರಿಣಾಮಗಳು.
- ನಕ್ಷತ್ರಗಳ ಮಿನುಗುವಿಕೆಯು ವಾಯುಮಂಡಲದಲ್ಲಿ ನಕ್ಷತ್ರಗಳ ಬೆಳಕಿನ ವಕ್ರೀಭವನದಿಂದುಂಟಾಗಿದೆ.
- ವಾಯುಮಂಡಲವು ನಕ್ಷತ್ರದ ಬೆಳಕನ್ನು ಲಂಬದ ಕಡೆ ಬಾಗಿಸುವುದರಿಂದ ನಕ್ಷತ್ರದ ತೋರಿಕೆಯ ಸ್ಥಾನವು ಅದರ ನೈಜ ಸ್ಥಾನಕ್ಕಿಂತ ಸ್ವಲ್ಪ ಬೇರೆಯಾಗಿರುತ್ತದೆ. ದಿಗಂತದಿಂದ ವೀಕ್ಷಿಸಿದಾಗ ನಕ್ಷತ್ರವು ತನ್ನ ನೈಜ ಎತ್ತರಕ್ಕಿಂತ ಸ್ವಲ್ಪ ಎತ್ತರದಲ್ಲಿ ಕಾಣಿಸುತ್ತದೆ.

- ನಕ್ಷತ್ರಗಳ ತೋರಿಕೆಯ ಸ್ಥಾನದಲ್ಲಿ ಸ್ಥಿತ್ಯಂತರವಾಗುತ್ತದೆ ಮತ್ತು ಕಣ್ಣನ್ನು ಪ್ರವೇಶಿಸುವ ನಕ್ಷತ್ರಗಳ ಬೆಳಕು ಮಿನುಗುತ್ತದೆ. ನಕ್ಷತ್ರಗಳು ಕೆಲವೊಮ್ಮೆ ಪ್ರಕಾಶಮಾನವಾಗಿ ಮತ್ತು ಕೆಲವೊಮ್ಮೆ ಕಂದಿದಂತೆ ಕಾಣುತ್ತವೆ. ಇದೇ ನಕ್ಷತ್ರಗಳ ಮಿನುಗುವಿಕೆಯ ಪರಿಣಾಮ.
- ವಾಯುಮಂಡಲದಲ್ಲಿರುವ ವಕ್ರೀಭವನದ ಕಾರಣ ಸೂರ್ಯನು ವಾಸ್ತವ ಸೂರ್ಯೋದಯಕ್ಕಿಂತ ಎರಡು ನಿಮಿಷ ಮೊದಲು ಹಾಗೂ ವಾಸ್ತವ ಸೂರ್ಯಾಸ್ತದ ಎರಡು ನಿಮಿಷ ನಂತರ ನಮಗೆ ಗೋಚರಿಸುತ್ತಾನೆ.
- ನಿಜವಾದ ಸೂರ್ಯೋದಯವೆಂದರೆ ಸೂರ್ಯನು ದಿಗಂತದ ಸಮತಲವನ್ನು ದಾಟುವ ಸಮಯ.

- ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲದಲ್ಲಿನ ಸೂರ್ಯನ ದುಂಡಾಕಾರವು ತೋರಿಕೆಯ ಚಪ್ಪಟೆಯಾಗುವಿಕೆಗೂ ಸಹ ಇದೇ ವಿದ್ಯಮಾನ ಕಾರಣವಾಗಿದೆ.
- ಭೂಮಿಯ ವಾಯುಮಂಡಲವು ಕಿರಿದಾದ ವೈವಿಧ್ಯಮಯ ಕಣಗಳ ಮಿಶ್ರಣವಾಗಿದೆ.
- ಕಲಿಲ ಪದಾರ್ಥಗಳಿಂದ ಬೆಳಕಿನ ಚದುರುವಿಕೆಯ ವಿದ್ಯಮಾನವನ್ನು ‘ಟಿಂಡಾಲ್ ಪರಿಣಾಮ’ ಎನ್ನುತ್ತಾರೆ.
- ಭೂಮಿಗೆ ವಾಯುಮಂಡಲವಿಲ್ಲದಿದ್ದರೆ, ಯಾವುದೇ ಬೆಳಕಿನ ಚದುರುವಿಕೆಯಿರುತ್ತಿರಲಿಲ್ಲ. ಆಗ ಆಕಾಶ ಕಡು ಕತ್ತಲಾಗಿ ಕಾಣಿಸುತ್ತಿತ್ತು.
- ಅಪಾಯದ ಸಂಕೇತ ದೀಪಗಳು ಕೆಂಪು ಬಣ್ಣದಲ್ಲಿರುವ ಕಾರಣವೇನೆಂದರೆ ಕೆಂಪು ಬಣ್ಣವು ಮಂಜು ಮತ್ತು ಹೊಗೆಯಿಂದ ಕನಿಷ್ಠ ಚದುರುತ್ತದೆ. ಆದ್ದರಿಂದ ದೂರದಿಂದಲೂ ಅದೇ ಕೆಂಪು ಬಣ್ಣವನ್ನು ಕಾಣುವುದು ಸಾಧ್ಯವಾಗುತ್ತದೆ.
- ಮಧ್ಯಾಹ್ನದಲ್ಲಿ ನೆತ್ತಿಯ ಮೇಲಿನ ಸೂರ್ಯನ ಬೆಳಕು ಕಡಿಮೆ ದೂರ ಪ್ರಯಾಣಿಸುತ್ತದೆ. ಆದ್ದರಿಂದ ಸೂರ್ಯನು ಬೆಳ್ಳಗ್ಗೆ ಕಾಣುತ್ತಾನೆ. ಬೆಳಿಗ್ಗೆ ಮತ್ತು ಸಾಯಂಕಾಲ ನಮ್ಮ ಕಣ್ಣನ್ನು ತಲುಪುವ ಬೆಳಕು ಹೆಚ್ಚಿನ ತರಂಗ ದೂರವುಳ್ಳದ್ದಾಗಿದೆ. ಆದ್ದರಿಂದ ಸೂರ್ಯನು ಕೆಂಪು ಬಣ್ಣದಿಂದ ಕಾಣುತ್ತಾನೆ.
- ಆಕಾಶದ ನೀಲಿ ಬಣ್ಣ ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲದ ಸೂರ್ಯನ ಕೆಂಬಣ್ಣಕ್ಕೆ ಬೆಳಕಿನ ಚದುರುವಿಕೆಯೇ ಕಾರಣ.