10th Standard Mahayuddhagalu Hagu Bharatada Patra Chapter Social Science Notes Question Answer Guide Mcq Pdf Download in Kannada Medium 2025,10ನೇ ತರಗತಿ ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 10th ಮಹಾಯುದ್ಧಗಳು ಹಾಗೂ ಭಾರತದ ಪಾತ್ರ question answer,10th Class Mahayuddhagalu Hagu Bharatada Patra Lesson Notes, kseeb solutions for class 10 social science Chapter 20 Notes, state syllabus class 10 social science 20 lesson notes Pdf, 10th Std Social lesson 20 notes in Kannada

ಅಭ್ಯಾಸ
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ.
1.ಮೊದಲನೇ ಮಹಾಯುದ್ದವು 1918 ರಲ್ಲಿ ಅಂತ್ಯಗೊಂಡಿತು.
2. ವರ್ಸ್ಸೇಲ್ಸ್ ಒಪ್ಪಂದವು 1919 ರಲ್ಲಿ ಏರ್ಪಟ್ಟಿತು.
3. ಪ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದವನು ಮುಸೋಲಿನಿ
4. ಜರ್ಮನಿಯಲ್ಲಿ ನಾಜಿ ಪಕ್ಷದ ನಾಯಕನಾಗಿದ್ದವನು ಹಿಟ್ಲರ್
5. ಎರಡನೆಯ ಮಹಾಯುದ್ದವು 1939 ರಲ್ಲಿ ಆರಂಭವಾಯಿತು.
6. ಅಮೆರಿಕಾದ ನೌಕಾ ಕೇಂದ್ರವಾಗಿದ್ದ ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು.
7. ಮೈಸೂರು ಲ್ಯಾನ್ಸರ್ಗಳ ಮುಖ್ಯಸ್ಥರಾಗಿ ಕಳುಹಿಸಲಾಯಿತು ಬಿ.ಚಾಮರಾಜ ಅರಸುರವ ರನ್ನು ಯುದ್ಧಭೂಮಿಗೆ ಕಳುಹಿಸಲಾಯಿತು.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ, ಉತ್ತರಿಸಿ,
1.ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವನ್ನು ವಿವರಿಸಿ.
ಜುಲೈ 28 ರಂದು ಆಸ್ಟ್ರಿಯಾದ ರಾಜಕುಮಾರ ಆರ್ಕ್ ಡ್ಯೂಕ್ ಫ್ರಾನ್ಸ್ ಫರ್ಡಿನೆಂಡ್ ಹತ್ಯೆಯಾಯಿತು. ಈ ಘಟನೆಯು ಆತ್ಮೀಯ ಮತ್ತು ಪರ್ಷಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟನ್ನು ಸೃಷ್ಟಿಸುವುದರ ಮೂಲಕ ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವಾಯಿತು.
2. ‘ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು’ ಹೇಗೆ? ವಿವರಿಸಿ.
ಜಗತ್ತಿನಲ್ಲಿ ಶ್ರೇಷ್ಟವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ. ಜಗತ್ತನ್ನು ಆಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು, ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು. ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯೆಹೂದಿಗಳೇ ಕಾರಣ. ಇವರು ಬದುಕಲು ಯೋಗ್ಯರಲ್ಲ ಎಂಬ ನಾಜಿ ಸಿದ್ದಾಂತವು ಜರ್ಮನಿಯನ್ನು ಹಾಳುಮಾಡಿತು.
3. ಎರಡನೆಯ ಮಹಾಯುದ್ಧಕ್ಕೆ ಕಾರಣಗಳೇನು?
ಮೊದಲ ಮಹಾಯುದ್ಧದ ಸೋಲು, ಅವಮಾನಕರ ಒಪ್ಪಂದಗಳು, ಅಪಾರವಾದ ನಷ್ಟಗಳ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಷ್ಟ್ರೀಯವಾದದ ಉಗ್ರತೆ ತೀವ್ರಗೊಂಡಿತು. ಜರ್ಮನಿ ಮತ್ತು ಯುರೋಪಿನ ಇತರ ದೇಶಗಳಲ್ಲಿ ಬೃಹತ್ ಕೈಗಾರಿಕೋದ್ಯಮಿಗಳು ಉಗ್ರ ರಾಷ್ಟ್ರೀಯತೆಯನ್ನು ಬೆಳೆಸಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡಿದರು. ಇದನ್ನೇ ಬಳಸಿಕೊಂಡು ಸೇಡಿನ ಮತ್ತು ದುರಭಿಮಾನದ ಚಳವಳಿಗಳು ಬೆಳೆದವು. ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳು ಬೆಳೆದರು. ಜರ್ಮನಿಯು ಪೋಲೆಂಡಿನ ಮೇಲೆ ದಾಳಿ ಮಾಡುತ್ತಿದ್ದಂತೆ, ಬ್ರಿಟನ್ ಪೋಲೆಡಿನ ಮಿತ್ರ ರಾಷ್ಟ್ರವಾದ್ದರಿಂದ ಜರ್ಮನಿಯ ವಿರುದ್ಧ ಯುದ್ಧ ಸಾರಿತು.
4. ಮೈಸೂರಿನ ಮುಖ್ಯ ಕಮಾಂಡೆಂಟ್ಗಳನ್ನು ಹೆಸರಿಸಿ.
ಕಮಾಂಡೆಂಟ್ ಎ.ಟಿ. ತ್ಯಾಗರಾಜ್, ರಿಸಾಲ್ದಾರ್ಗಳಾದ ಎ. ಲಿಂಗರಾಜ ಅರಸ್, ಸುಬ್ಬರಾಜ ಅರಸ್, ಬಿ.ಪಿ. ಕೃಷ್ಣ ಅರಸ್, ವಿರ್ ತುರಾಕ್ ಆಲಿ, ಸರ್ದಾರ್ ಬಹಾದೂರ್, ಬಿ. ಚಾಮರಾಜ ಅರಸ್, ರೆಜಿಮೆಂಟ್ಾರ್ ಬಿ. ಚಾಮರಾಜ ಅರಸ್ ಹಾಗೂ ಕರ್ನಲ್ ಜೆ. ದೇಸಿರಾಜ ಅರಸ್.
5. ಎರಡನೇ ಮಹಾಯುದ್ಧದ ಪರಿಣಾಮಗಳೇನು?
ಮಾನವ ಚರಿತ್ರೆಯಲ್ಲೇ ಅತಿ ಹೆಚ್ಚಿನ ಸಾವು-ನೋವುಗಳು ಉಂಟಾದವು. ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯಲ್ಲಿ ಬದಲಾವಣೆಯುಂಟಾಯಿತು. ರಾಷ್ಟ್ರ ಸಂಘದ ಜಾಗದಲ್ಲಿ ವಿಶ್ವಸಂಸ್ಥೆ ರಚನೆಯಾಯಿತು. ಯುದ್ಧದ ವಿಜಯಿ ರಾಷ್ಟ್ರಗಳಾದ ಅಮೆರಿಕ ಸಂಯುಕ್ತ ಸಂಸ್ಥಾನ, ಸೋವಿಯತ್ ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯ ಖಾಯಂ ಸದಸ್ಯರಾದರು. ಸೋವಿಯತ್ ರಷ್ಯಾ ಮತ್ತು ಅಮೆರಿಕ ಪರಸ್ಪರ ವಿರೋಧಿಯಾದ ಶಕ್ತಿಶಾಲಿ ದೇಶಗಳಾದವು. ಶೀತಲ ಸಮರಕ್ಕೆ ಇದು ನಾಂದಿಯಾಯಿತು. ಏಷ್ಯಾ ಮತ್ತು ಆಫ್ರಿಕಾದ ವಸಾಹತುಗಳು ಸ್ವಾತಂತ್ರ್ಯ ಪಡೆಯಲು ವಾತಾವರಣ ಪೂರಕವಾಯಿತು. ಬ್ರಿಟನ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ತಮ್ಮ ಹಿಡಿತದಲ್ಲಿದ್ದ ಬಹುತೇಕ ವಸಾಹತುಗಳನ್ನು ಕಳೆದುಕೊಂಡವು. ಅಮೆರಿಕ ಅಣ್ವಸ್ತ್ರ ಪ್ರಯೋಗಿಸಿದ್ದರಿಂದ ಬೃಹತ್ ದೇಶಗಳ ನಡುವೆ ಅಣ್ವಸ್ತ್ರ ಪೈಪೋಟಿಗೆ ದಾರಿಯಾಯಿತು.
6. ತೀನ್ ಮೂರ್ತಿ ಚೌಕ ಎಲ್ಲಿದೆ?
ತೀನ್ ಮೂರ್ತಿ ಚೌಕ ದೆಹಲಿಯಲ್ಲಿದೆ.
7. ಭಾರತದ ಸಂಪನ್ಮೂಲಗಳನ್ನು ಬ್ರಿಟನ್ ಹೇಗೆ ಎರಡನೇ ಮಹಾಯುದ್ಧ ದಲ್ಲಿ ಉಪಯೋಗಿಸಿಕೊಂಡಿತು?
ಭಾರತೀಯ ಕೃಷಿ ವಸ್ತುಗಳನ್ನು, ಕೈಗಾರಿಕಾ ಪದಾರ್ಥಗಳನ್ನು ಉಪಯೋಗಿಸಿ ಕೊಂಡಿತು. ಹಾಗೂ ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನು ಉತ್ಪಾದಿಸಲು ಆರ್ಡಿನೆನ್ಸ್ ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸಿ, ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿತು. ಇದರಿಂದಾಗಿ ಭಾರತೀಯ ಸೇನೆಯು ಯುದ್ಧದ ಉತ್ತರ ಭಾಗದಲ್ಲಿ ಗುಣಾತ್ಮಕ ಹಾಗೂ ದೊಡ್ಡಗಾತ್ರದ ಉತ್ತಮ ಯುದ್ಧ ಸಾಮಗ್ರಿಗಳ ಉಪಯೋಗ ಪಡೆದುಕೊಂಡಿತು.
ಹೆಚ್ಚುವರಿ ಪ್ರಶ್ನೆಗಳು:
I. ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿಂದ ತುಂಬಿರಿ.
1. ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿ ಹುಟ್ಟಿಸಲು ಹಿಟ್ಲರ್ ರಚಿಸಿದ ಕ್ರೌರ್ಯಪಡೆ ಬೂದು ಅಂಗಿದಳ
2. ಮೊದಲನೆಯ ಮಹಾಯುದ್ಧವು ಆರಂಭಗೊಂಡ ಸಂದರ್ಭದಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕದಿಂದ ಬಂದಿದ್ದು ರಾಷ್ಟ್ರೀಯ ಚಳವಳಿಗೆ ಇಂಬು ನೀಡಿತು.
3. 1942 ರಲ್ಲಿ ಸ್ಟಾಲಿನ್ ಗ್ರಾಡ್ ಯುದ್ಧದಲ್ಲಿ ಜರ್ಮನ್ ಪಡೆಗಳನ್ನು ರಷ್ಯಾ ಸೋಲಿಸಿತು.
4. ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಮುಸೋಲಿನಿ
5. ನಾಜಿ ಪಕ್ಷ ಏಕೈಕ ಪಕ್ಷವೆಂದು ಘೋಷಿಸಿದವನು ಹಿಟ್ಲರ್
III. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1.ಮೊದಲನೆ ಮಹಾಯುದ್ಧವು ಆರಂಭಗೊಂಡ ಕೂಡಲೆ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೇರಿದ ದೇಶ ಮತ್ತು ಜನಾಂಗಗಳಿಗೆ ಇಂಗ್ಲೆಂಡಿಗೆ ಸಹಾಯಮಾಡುವಂತೆ ವಿನಂತಿಸಿಕೊಂಡವರು ಯಾರು?
ಇಂಗ್ಲೆಂಡಿನ ದೊರೆ ಮತ್ತು ಭಾರತ ಚಕ್ರವರ್ತಿ ಐದನೆ ಜಾರ್ಜ್,
2. ಮೂರು ಶಿಲ್ಪಗಳು ಎಂಬುದರ ಅರ್ಥವೇನು?
ಮೈಸೂರು, ಜೋದ್ಪುರ ಮತ್ತು ಹೈದರಾಬಾದಿನ ಸೈನಿಕರುಗಳು ಎಂದರ್ಥ
3. ಕದನ ಬಾಂಧವ್ಯತ್ರಯ ಮೈತ್ರಿಕೂಟವನ್ನು ರಚಿಸಿಕೊಂಡ ದೇಶಗಳು ಯಾವುವು?
ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಕದನ ಬಾಂಧವ್ಯತ್ರಯವನ್ನು ರಚಿಸಿಕೊಂಡ ದೇಶಗಳು.
4. ವರ್ಸಾ ಒಪ್ಪಂದದ ಪರಿಣಾಮಗಳೇನು?
ಆಸ್ಫೋ-ಹಂಗೇರಿ ಮತ್ತು ಆಟೋಮನ್ ಸಾಮ್ರಾಜ್ಯಗಳು ತಮ್ಮ ಅಸ್ಥಿತ್ವ ಕಳೆದುಕೊಂಡವು. ಜರ್ಮನಿ ತನ್ನ ಹೆಚ್ಚಿನ ಪ್ರದೇಶಗಳನ್ನು ಕಳೆದುಕೊಂಡಿತು. ಯೂರೋಪಿನ ಭೂಪಟವೇ ಬದಲಾಗಿ ಹೋಯಿತು. ಹಲವಾರು ಸಣ್ಣ ಸ್ವತಂತ್ರ ರಾಷ್ಟ್ರಗಳು ಅಸ್ಥಿತ್ವಕ್ಕೆ ಬಂದವು.
5. ಮೊದಲನೇ ಮಹಾಯುದ್ಧದ ಪರಿಣಾಮಗಳೇನು?
ಮೈತ್ರಿ ಕೂಟವು ಅತ್ಯಂತ ಅವಮಾನಕಾರಿಯಾದ ವರ್ಸೇಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಆಸ್ಫೋ-ಹಂಗೇರಿ ಮತ್ತು ಆಟೋಮನ್ ಸಾಮ್ರಾಜ್ಯಗಳು ತಮ್ಮ ಅಸ್ತಿತ್ವ ಕಳೆದುಕೊಂಡವು. ಜರ್ಮನಿ ತನ್ನ ಹೆಚ್ಚಿನ ಪ್ರದೇಶಗಳನ್ನು ಕಳೆದುಕೊಂಡಿತು. ಯುರೋಪಿನ ಭೂಪಟವೇ ಬದಲಾಗಿ ಹೋಯಿತು. ಹಲವಾರು ಸಣ್ಣ ಸ್ವತಂತ್ರ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು. ಮುಂದಿನ ದಿನಗಳಲ್ಲಿ ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ ರಾಷ್ಟ್ರಸಂಘ ರಚನೆಯಾಯಿತು.
6. ಹೊಲೊಕಾಸ್ಟ್ ಎಂದರೇನು?
ಹಿಟ್ಲರ್ ನಡೆಸಿದ ಸಾಮೂಹಿಕ ಕೊಲೆಗಳನ್ನು ಹೊಲೊಕಾಸ್ಟ್ ಎಂದು ಕರೆಯಲಾಗಿದೆ.
7. ಎರಡನೇ ಮಹಾಯುದ್ಧದಲ್ಲಿ ಶತ್ರು ಬಣದಲ್ಲಿದ್ದ ದೇಶಗಳು ಯಾವುವು?
ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು.
8. ಮೊದಲನೇ ಮಹಾಯುದ್ಧವು ಜರ್ಮನಿಯ ಮೇಲೆ ಉಂಟು ಮಾಡಿದ ಪರಿಣಾಮಗಳೇನು?
ಜರ್ಮನಿಯ ಮೇಲೆ ಹೇರಲಾದ ಯುದ್ಧನಷ್ಟ ಪರಿಹಾರ ಮತ್ತು ಇತರ ತೀರ್ಮಾನಗಳು ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದವು. ನಿರುದ್ಯೋಗ, ಬಡತನ, ಬೆಳವಣಿಗೆ ಕುಸಿತದಿಂದ ಉಂಟಾದ ಅತೃಪ್ತಿಯನ್ನು ಜರ್ಮನ್ ಕೈಗಾರಿಕೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡರು, ಎರಡನೆಯ ಪ್ರಪಂಚ ಯುದ್ಧಕ್ಕೆ ಕಾರಣವಾದ ಹಿಟ್ಲರ್ನಂತಹ ಸರ್ವಾಧಿಕಾರಿಯ ಬೆಳವಣಿಗೆಗೆ ಇದು ಸಹಾಯ ಮಾಡಿತು.
9. ಕಾನ್ಸಂಟ್ರೇಷನ್ ಕ್ಯಾಂಪ್ಸ್ ಎಂದರೇನು?
ಊಟ, ನೀರು ಯಾವುದನ್ನೂ ನೀಡದೆ ಗುಲಾಮರ ರೀತಿಯಲ್ಲಿ ದುಡಿಸಿಕೊಳ್ಳುವ ಕ್ಯಾಂಪ್ಸ್ಗಳು.
10. ಮಹಾನ್ ಆರ್ಥಿಕ ಕುಸಿತದಿಂದಾಗಿ ಉಂಟಾದ ಪರಿಣಾಮಗಳು ಯಾವುವು?
- ಯುರೋಪ್ ಮತ್ತು ಅಮೆರಿಕದಲ್ಲಿ ಸಂಕಷ್ಟದ ಪರಿಸ್ಥಿತಿಗಳು ನಿರ್ಮಾಣವಾದವು.
- ಜನರ ಜೀವನ ಮಟ್ಟ ತೀವ್ರವಾಗಿ ಕುಸಿಯಿತು.
- ಕೈಗಾರಿಕೆ ಮತ್ತು ಕೃಷಿ ಬೆಳವಣಿಗೆ ಸ್ಥಗಿತವಾಯಿತು. ನಿರುದ್ಯೋಗ ವಿಪರೀತವಾಯಿತು.
11. ಫ್ಯಾಸಿಸ್ಟ್ ವಾದದ ಲಕ್ಷಣಗಳಾವುವು?
ಉಗ್ರರಾಷ್ಟ್ರೀಯವಾದ, ಪರಕೀಯ ಶಕ್ತಿಗಳ ನಾಶ, ಹಿಂಸೆಯ ವೈಭವೀಕರಣ, ಜನಾಂಗೀಯ ಶ್ರೇಷ್ಟತೆ, ಸಾಮ್ರಾಜ್ಯವಾದದ ವಿಸ್ತರಣೆ, ನರಮೇಧಗಳಿಗೆ ಬೆಂಬಲ ಇವು ಫ್ಯಾಸಿಸ್ಟ್ವಾದದ ಲಕ್ಷಣಗಳು.
12. ಮೊದಲನೇ ಮಹಾ ಯುದ್ಧವು ಆರಂಭಗೊಂಡ ಕೂಡಲೇ ಸಹಾಯ ಮಾಡುವಂತೆ ವಿನಂತಿಸಿಕೊಂಡ ಇಂಗ್ಲೆಂಡಿಗೆ ಭಾರತ ಹೇಗೆ ಸಹಾಯ ಮಾಡಿತು?
ಬ್ರಿಟನ್ ಸಾಮ್ರಾಜ್ಯದ ಭಾಗವಾಗಿದ್ದ ಭಾರತ ಈ ಮಹಾಯುದ್ಧಗಳಿಗೆ ಸೈನಿಕವಾಗಿ, ಆರ್ಥಿಕವಾಗಿ ಮತ್ತು ವಸ್ತು ರೂಪದಲ್ಲಿ ಅಪಾರ ಸಹಾಯವನ್ನು ನೀಡಿತು. ಸುಮಾರು 15 ಲಕ್ಷ ಸಿಪಾಯಿಗಳು ಭಾರತದಿಂದ ಈ ಯುದ್ಧದಲ್ಲಿ ಭಾಗವಹಿಸಿದ್ದರು. ಅಲ್ಲದೆ 1,72,815 , 85,953 5, 10,781, 5061 ಗಾಡಿಗಳು, 65,398 ಕತ್ತೆಗಳು, 7 ಕೋಟಿಯಷ್ಟು ಯುದ್ಧ ಸಾಮಗ್ರಿಗಳು, 6 ಲಕ್ಷ ರೈಫಲ್ಗಳು, ಮುಂತಾದವುಗಳನ್ನು ಸರಬರಾಜು ಮಾಡಿತ್ತು. ಸುಮಾರು 4,19,20,223 ಬಟ್ಟೆಗಳು ಸರಬರಾಜಾಗಿತ್ತು. ಅಲ್ಲದೆ ಕಚ್ಚಾವಸ್ತುಗಳು, ಮ್ಯಾಂಗನೀಸ್ ಅಭ್ರಕ, ಚಹ, ರಬ್ಬರ್ ಮುಂತಾದ ವಸ್ತುಗಳನ್ನು ಭಾರತದಿಂದ ಸರಬರಾಜು ಮಾಡಲಾಗಿತ್ತು
ಮುಖ್ಯಾಂಶಗಳು:
- ಮೊದಲ ಮಹಾಯುದ್ಧವು ಯೂರೋಪಿಯನ್ ದೇಶಗಳನ್ನು ಕದ ಬಾಂಧವ್ಯತ್ರಯ ಮೈತ್ರಿ ಕೂಟ ಮತ್ತು ಕದನ ಸೌಹಾರ್ದತ್ರಯ ಮೈತ್ರಿಕೂಟ ಎಂಬ ಎರಡು ವಿರುದ್ಧ ಬಣಗಳನ್ನಾಗಿ ವಿಭಜಿಸಿತು.
- ಮೊದಲ ಮಹಾಯುದ್ಧವು ಸಾ.ಶ. 1914 ರಿಂದ ಸಾ.ಶ. 1918 ರವರೆಗೆ ನಡೆಯಿತು
- ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಂಭವಿಸಿ ಜರ್ಮನದೊಂದಿಗೆ ಯುದ್ಧ ನಲುಗಡೆ ಒಪ್ಪಂದವನ್ನು ಮಾಡಿಕೊಂಡು ಯುದ್ಧದಿಂದ ಹಿಂದೆ ಸರಿಯಿತು.
- ಮೈತ್ರಿ ಬಣದ ದಾಳಿಗಳಿಂದ ಜರ್ಜರಿತವಾದ ಜರ್ಮನಿ ಯುದ್ಧವನ ಮುಂದುವರಿಸಲಾಗದೆ ಸೋಲೊಪ್ಪಿಕೊಂಡಿತು.
- ಯುದ್ಧದ ಪರಿಣಾಮವಾಗಿ ಅಪಾರವಾದ ಸಾವುನೋವುಗಳು ಸಂಭವಿಸಿದವು.
- ಮುಂದಿನ ದಿನಗಳಲ್ಲಿ ಸಂಭವನೆಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ ರಾಷ್ಟ್ರಸಂಘ ರಚನೆಯಾಯಿತು.
- ಮೊದಲ ಮಹಾಯುದ್ಧದ ನಂತರ ಉಂಟಾದ ಪರಿಸ್ಥಿತಿಯು ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸೊಲಿನಿಯ ಸರ್ವಾಧಿಕಾರಗಳನ್ನು ಅಸ್ಥಿತ್ವಕ್ಕೆ ತಂದಿತು.
- ಜಗತ್ತನ್ನೇ ಗೆಲ್ಲಬೇಕೆಂಬ ಮತ್ತು ಆರ್ಯ ಜನಾಂಗೀಯ ಶ್ರೇಷ್ಠತೆಯನ ಜಾರಿಗೊಳಿಸಬೇಕೆಂಬ ಹಿಟ್ಲರನ ಮಹತ್ವಾಕಾಂಕ್ಷೆ ಎರಡನೆಯ ಮಹಾಯುದ್ಧತೆ ಮುಖ್ಯ ಕಾರಣಗಳಲ್ಲೊಂದಾಯಿತು.
- ಎರಡನೆಯ ಮಹಾಯುದ್ಧ 1939 ರಿಂದ 1945 ರವರೆಗೂ ನಡೆಯಿತು.
- ಶ್ರೀಮಂತ ದೇಶಗಳು ಮೊದಲನೆಯ ಮಹಾಯುದ್ಧದಲ್ಲಿ ಹಣ ವ್ಯಯ ಮಾಡಿದ್ದರ ಪರಿಣಾಮವಾಗಿ ಮಹಾನ್ ಆರ್ಥಿಕ ಕುಸಿತ ಉಂಟಾಯಿತು.
- ಎರಡನೆಯ ಮಹಾಯುದ್ಧದಲ್ಲಿ ಎರಡು ವಿರುದ್ಧವಾದ ಶತ್ರುಬಣ ಮತ್ತು ಮಿತ್ರಬಣ ರೂಪುಗೊಂಡವು.
- ಶತ್ರುಬಣದಲ್ಲಿ ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಇದ್ದವು.
- ಮಿತ್ರ ಬಣದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಮುಂತಾದ ದೇಶಗಳು ಇದ್ದವು.
- ಜರ್ಮನಿ ಪೂರ್ವ ಯುರೋಪ್ನಲ್ಲಿ ಸಾಲುಸಾಲು ಸೋಲುಗಳನ್ನು ಕಂಡಿತು.
- ಸಾ.ಶ. 1945ರಲ್ಲಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡನು. ಇದರೊಂದಿಗೆ ಯುರೋಪಿನಲ್ಲಿ ಯುದ್ಧ ಕೊನೆಗೊಂಡಿತು.
- ಮಾನವ ಚರಿತ್ರೆಯಲ್ಲೇ ಅತಿ ಹೆಚ್ಚಿನ ಸಾವು-ನೋವುಗಳನ್ನು ಕಂಡ ಎರಡನೆ ಜಾಗತಿಕ ಯುದ್ಧವು ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯನ್ನು ಬದಲಾವಣೆ ಮಾಡಿತು.
- ರಾಷ್ಟ್ರ ಸಂಘದ ಜಾಗದಲ್ಲಿ ವಿಶ್ವಸಂಸ್ಥೆ ರಚನೆಯಾಯಿತು.
- ಸೋವಿಯತ್ ರಷ್ಯಾ ಮತ್ತು ಅಮೆರಿಕ ಪರಸ್ಪರ ವಿರೋಧಿಯಾದ ಶಕ್ತಿಶಾಲಿ ದೇಶಗಳಾದವು. ಇದು ಶೀತಲ ಸಮರಕ್ಕೆ ನಾಂದಿಯಾಯಿತು.
- ಅಮೆರಿಕ ಅಣ್ವಸ್ತ್ರ ಪ್ರಯೋಗಿಸಿದ್ದರಿಂದ ಬೃಹತ್ ದೇಶಗಳ ನಡುವೆ ಅಣ್ವಸ್ತ್ರ ಪೈಪೋಟಿಗೆ ದಾರಿಯಾಯಿತು.
- ವಿಶ್ವದ ಎರಡು ಮಹಾಯುದ್ಧಗಳಲ್ಲಿ ಬ್ರಿಟನ್ ಭಾರತೀಯ ಸೇನೆಯ ಸಹಕಾರವಿಲ್ಲದೆ ಜಯಗೊಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಸೈನಿಕ ದಾಖಲೆಗಳು ಮತ್ತು ರಣಭೂಮಿಯಲ್ಲಿನ ಯುದ್ಧ ವರದಿಗಳು ಸಾಬೀತುಪಡಿಸಿವೆ.
- ಮೊದಲನೆ ಮಹಾಯುದ್ಧವು ಆರಂಭಗೊಂಡ ಕೂಡಲೆ ಇಂಗ್ಲೆಂಡಿನ ದೊರೆ ಮತ್ತು ಭಾರತ ಚಕ್ರವರ್ತಿ ಐದನೆ ಜಾರ್ಜ್ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೇರಿದ ದೇಶ ಮತ್ತು ಜನಾಂಗಗಳಿಗೆ ಇಂಗ್ಲೆಂಡಿಗೆ ಸಹಾಯಮಾಡುವಂತೆ ವಿನಂತಿಸಿಕೊಂಡರು. ಬ್ರಿಟನ್ ಸಾಮ್ರಾಜ್ಯವಾಗಿದ್ದ ಭಾರತ ಮತ್ತು ಅಲ್ಲಿನ ದೇಶೀಯ ಆಶ್ರಿತ ರಾಜರು ಈ ಮಹಾಯುದ್ಧಗಳಿಗೆ ಸೈನಿಕವಾಗಿ, ಆರ್ಥಿಕವಾಗಿ ಮತ್ತು ವಸ್ತುಸ್ವರೂಪದಲ್ಲಿ ಅಪಾರ ಸಹಾಯವನ್ನು ನೀಡಿದರು.
- ಜೋದ್ಪುರ ಹಾಗೂ ಹೈದರಾಬಾದ್ ಲ್ಯಾನ್ಸರ್ಸ್ ಈ ಯುದ್ಧದಲ್ಲಿ ಭಾಗಿಯಾಗಿದ್ದರು. ಇವರುಗಳ ಹೆಸರಿನಲ್ಲಿ ಬ್ರಿಟಿಷರು ದೆಹಲಿಯಲ್ಲಿ ಪ್ರಸಿದ್ಧ ತೀನ್ ಮೂರ್ತಿ ಭವನವನ್ನು ನಿರ್ಮಿಸಿದರು.
- ಆಧುನಿಕ ಜಗತ್ತಿನ ಇತಿಹಾಸದಲ್ಲಿ ಎರಡನೇ ವಿಶ್ವಸಮರವು ಸಾಮಾಜಿಕ ಮತ್ತು ರಾಜಕೀಯ ನಕ್ಷೆಯನ್ನು ವ್ಯಾಪಕವಾಗಿ ಬದಲಾಯಿಸಿತು. ಅದರಲ್ಲೂ ವಸಾಹತು ವಶದಲ್ಲಿದ್ದ ಭಾರತದಲ್ಲಿ ಮಹತ್ತರ ಬದಲಾವಣೆಯಾಯಿತು.
- ಭಾರತವು ಈ ಯುದ್ಧದಲ್ಲಿ ತನ್ನದೇ ರೀತಿಯಲ್ಲಿ ಭಾಗವಹಿಸಿತು. ಮಿಲಿಟರಿ ಸಮವಸ್ತ್ರವನ್ನು ಧರಿಸಿದ ಭಾರತವು ಅನೇಕ ರೀತಿಯ ಬದಲಾವಣೆಯನ್ನು ನೋಡಿತು.
- ರಾಷ್ಟ್ರೀಯ ಚಳವಳಿಗೆ ಈ ಯುದ್ಧದಲ್ಲಿ ಭಾಗಿಯಾಗುವುದರೊಂದಿಗೆ ಪಡೆದ ಅನುಭವವು ಭಾರತಕ್ಕೆ ಒಂದು ರೀತಿ ಪ್ರೋತ್ಸಾಹಕರವಾಗಿತ್ತು.
- ಭಾರತೀಯ ಸೇನೆಯ ಎರಡನೇ ಮಹಾಯುದ್ಧದಲ್ಲಿನ ಭಾಗವಹಿಸುವಿಕೆಯು ಜರ್ಮನಿಯ ಸೈನ್ಯವನ್ನು ಸೋಲಿಸುವುದರಲ್ಲಿ ಮುಖ್ಯ ಕಾರಣವಾಗಿ, ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟವಾಯಿತು.
- ಸಾ.ಶ. 1945ರಲ್ಲಿ ಎರಡನೇ ಮಹಾಯುದ್ಧವು ಕೊನೆಗೊಂಡಿತು. ಇದರಿಂದಾಗಿ `ಪ್ರಪಂಚದ ಅನೇಕ ಕಡೆಗಳಲ್ಲಿ ರಾಜಕೀಯ ಬದಲಾವಣೆಗಳಾದವು. ಬ್ರಿಟನ್ ಹಿಡಿತದಲ್ಲಿದ್ದ ಅನೇಕ ರಾಷ್ಟ್ರಗಳು ಸ್ವತಂತ್ರವಾದವು.
ಇತರೆ ವಿಷಯಗಳು :
ಸ್ವಾತಂತ್ರ್ಯೋತ್ತರ ಭಾರತ ಪಾಠದ ನೋಟ್ಸ್
ವಿದೇಶಾಂಗ ನೀತಿ ಹಾಗೂ ಜಾಗತಿಕ ಸವಾಲುಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್