10th Standard Londan Nagara Kannada Notes Question Answer Summery Guide Extract Mcq Pdf Download in Kannada Medium Karnataka State Syllabus 2025 10th kannada london nagara lesson pdf ಲಂಡನ್ ನಗರ question answer pdf ಲಂಡನ್ ನಗರ ಸಾರಾಂಶ Kseeb Solutions For Class 10 Kannada Chapter 7 Notes SSLC Kannada 7th Lesson Notes 10th Standard Londan Nagari Kannada Notes | 10ನೇ ತರಗತಿ ಲಂಡನ್ ನಗರ ಕನ್ನಡ ನೋಟ್ಸ್ ಲಂಡನ್ ನಗರ ಪಾಠದ ಸಾರಾಂಶ pdf ಲಂಡನ್ ನಗರ ಪಾಠದ ಸಾರಾಂಶ pdf ಲಂಡನ್ ನಗರ ಕ್ವೆಶ್ಚನ್ ಆನ್ಸರ್ 10th class london nagara summary in kannada london nagara 10th kannada, 10th kannada london nagara notes pdf.

ಲೇಖಕರ ಪರಿಚಯ :
ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ॥ ವಿನಾಯಕ ಕೃಷ್ಣ ಗೋಕಾಕ ಕ್ರಿ.ಶ. 1909 ರಲ್ಲಿ ಜನಿಸಿದರು. ಇವರು ಹಾವೇರಿ ಜಿಲ್ಲೆಯ ಸವಣೂರಿನವರು. ಪುಣೆಯ ಫಗ್ಯೂರ್‌ಸನ್ ಕಾಲೇಜು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ವಿ.ಕೃ.ಗೋಕಾಕ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಅವುಗಳೆಂದರೆ ಸಮುದ್ರ ಗೀತೆಗಳು, ಪಯಣ, ಉಗಮ, ಇಟ್ಟೋಡು, ಸಮರಸವೇ ಜೀವನ, ಭಾರತ ಸಿಂಧುರಶ್ಮಿ ಮೊದಲಾದವುಗಳು. ಇವರ ‘ದ್ಯಾವಾ ಪೃಥ್ವಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ ಲಭಿಸಿವೆ. ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತ ಸರ್ಕಾರ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ :
1) ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು?
ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ.
2) ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು.
ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು “ಟ್ರಾಫಲ್ಲಾರ್ ಸ್ಟ್‌ರ್” Trafalgar Square ಎನ್ನುವರು.
3) “ವೆಸ್ಟ್ ಮಿನ್‌ಸ್ಟರ್ ಅಬೆ” ಯಾರ ಸ್ಮಾರವಾಗಿದೆ?
“ವೆಸ್ಟ್ ಮಿನ್‌ಸ್ಟರ್ ಅಬೆ” ಎಂಬುದು ಸಂತರು, ಸಾರ್ವಭೌಮರು, ಕವಿಪುಂಗವರುಗಳ ಸಮಾಧಿಯಾಗಿದೆ.
4) ಆಂಗ್ಲ ಸಾಮ್ರಾಜ್ಯರ ವೈಭವ ಕಂಡು ಬರುವ ಓಣಿ ಯಾವುದು?
“ಚೇರಿಂಗ್ ಕ್ರಾಸ್” ಎಂಬ ಕಣಿ ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿಯಾಗಿದೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :
1) ವೂಲವರ್ಧ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
ವೂಲವರ್ಧದಲ್ಲಿ ಎಲ್ಲಾ ರೀತಿಯ ಸಾಮಾನುಗಳು ದೊರೆಯುತ್ತವೆ. ಇಲ್ಲಿನ ಸಾಮಾನುಗಳನ್ನು ಒಂದು ಪೆನ್ನಿಯಿಂದ ಆರು ಪೆನ್ನಿಯವರೆಗೆ ಮಾರುತ್ತಾರೆ. ಇಲ್ಲಿ ಬೂಟ್, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಪೋಟೋ ಅಡಿಗೆ ಪಾತ್ರೆ, ಇಲೆಕ್ಟಿಕ್ ದೀಪದ ಸಾಮಾನು ಅಡವಿಯ ಹೂವು ಯುದ್ಧ ಸಾಮಾಗ್ರಿ ಎಲ್ಲವೂ ಇಲ್ಲಿ ದೊರೆಯುತ್ತದೆ.
2) ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ?
ಟೈಪಿಸ್ಟ್, ಕಾರಕೂನ, ಸಿನಿಮಾ ಗೃಹದಲ್ಲಿಸೀಟು ಹಿಡಿದು ಕೊಡುವಳು, ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನಾಗಿ ಅಂಗಡಿಗಳಲ್ಲಿ, ಉಪಹಾರ ಗೃಹಗಳಲ್ಲಿಹೀಗೆ ಎಲ್ಲಾ ಕಡೆಗಳಲ್ಲಿಯೂ ಹೆಣ್ಣು ಮಕ್ಕಳು ಲಂಡನ್ನಿನಲ್ಲಿ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ.
3) ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ.
ಲಂಡನ್ನಿನಲ್ಲಿ ಎಲ್ಲರೂ ಟೊಪ್ಪಿಗೆಯನ್ನು ಧರಿಸುವರು;. ಇಲ್ಲಿ ಎಲ್ಲರೂ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಟೊಪ್ಪಿಗೆಯನ್ನು ಧರಿಸುತ್ತಾರೆ. ಎಲ್ಲರ ಟೊಪ್ಪಿಗೆಗಳು ಒಂದೇ ತೆರನಾಗಿ ಇರುವುದಿಲ್ಲ. ಅದರಲ್ಲಿಯೂ ಹೆಣ್ಣು ಮಕ್ಕಳ ಟೊಪ್ಪಿಗೆಯೂ ಬೇರೆ-ಬೇರೆಯಾಗಿದೆ. ಕೊಟ್ಯಾವರಿ ಟೊಪ್ಪಿಗೆಯನ್ನು ಇಲ್ಲಿ ಕಾಣಬಹುದು. ಲೇಖಕರು ಹೆಣ್ಣು ಮಕ್ಕಳ ಟೊಪ್ಪಿಗೆಯನ್ನು ಕುತೂಹಲದಿಂದ ನೋಡಿ ಅದರ ವಿಶೇಷತೆಯನ್ನು ತಿಳಿಸಿದರು.
4) ಪೂಯೆಟ್ ಕಾರ್ನ‌್ರನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ?
ಪೊಯೆಟ್ಸ್ ಕಾರ್ನರ್‌ನಲ್ಲಿ (poet’s corner)ನಲ್ಲಿ ‘ಅಲ್ಲಿನ ಪ್ರಸಿದ್ಧ ಕವಿಗಳೆಲ್ಲರ ಸಮಾಧಿ ಇದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ – “ಕಿಪ್ಲಿಂಗ್, ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಡ್ರಾಯಡನ್, ಜಾನ್ಸನ್, ವರ್ಕ್ಸವರ್ತ್ ಮುಂತಾದ ಕವಿಗಳು ಸಮಾಧಿಗಳೊಂದಿಗೆ ಡಾರ್ವಿನ್, ಹರ್ಶೆಲ್, ವ್ಯಾಪಾರಿಗಳು, ವಾಸ್ತುಶಿಲ್ಪಿಗಳು, ಸರದಾರರು, ಸೇನಾಪತಿಗಳ ಸಮಾಧಿಗಳು ಇವೆ.
5) ಸಾಮ್ರಾಟರ ರಾಜಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?
ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೊಡಬೇಕು. ಈ ಶಿಲೆಯನ್ನು ಳಗೊಂಡ ಸಿಂಹಾಸನವು ವೆಸ್ಟ್‌ಮಿನ್‌ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. “ಸ್ಟೋನ್ ಆಫ್ ಸ್ಕೋನ್” ಎಂದು ಇದರ ಹೆಸರು.
3ನೇ ಎಡ್ವರ್ಡನು ಸ್ಕಾಟಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದನೆಂಬ ಪ್ರತೀತಿ ಇದೆ. ಅಂದಿನಿಂದ ಎಲ್ಲಾ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ. ಅದರಲ್ಲಿ ಯಾವ ಸುದ್ದಿಯೋ, ಮಾಂತ್ರಿಕ ಶಕ್ತಿಯೋ ಇರಬಹುದೆಂದು ಅನುಮಾನ ಬಾರದೇ ಇರದು. ಏಕೆಂದರೆ ಇಂಗ್ಲೆಂಡಿನ ಅತುಲ ವೈಭವ ಇದನ್ನು ಪುರಸ್ಕರಿಸುತ್ತದೆ.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು / ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
1) ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು?
ಲೇಖಕರು, ಲಂಡನ್‌ನಗರ ವೀಕ್ಷಣೆಯಲ್ಲಿ ಹಲವಾರು ವಿಶೇಷತೆಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ –
ಭೂಗರ್ಭದಲ್ಲಿ ಗಾಡಿಗಳ ಓಡಾಟ, ಮೆಟ್ಟಿಲುಗಳನ್ನು ಹತ್ತು ಇಳಿಯಲು ಸುಲಭವಾಗುವಂತೆ ಎಸ್ಟೇಲೇಟ್ಸ್‌ಗಳ ಉಪಯೋಗ. ನಂತರ ‘ವೂಲವರ್ಧ’ ಎಂಬ ಸ್ಟೇಷನರಿ ಅಂಗಡಿ ಇಲ್ಲಿ ಎಲ್ಲಾ ರೀತಿಯ ಸಾಮಾನುಗಳನ್ನು ಒಂದು ಪೆನ್ನಿಯಿಂದ ಆರು ಪೆನ್ನಿಯವರೆಗೆ ಸಿಗುವ ಸಾಮಾನುಗಳನ್ನು ಕಂಡರು.
ಸ್ಟಾಂಡ್‌ದಲ್ಲಿಯ ಸ್ಯಾವೋಯ್ Fifty Shilline Tailors. ಅಂದರೆ ಐವತ್ತು ಶಿಲ್ಲಿಂಗನ ಸಿಂಪಿಗಳನ್ನು ಹಾಗೂ ಎಲ್ಲಾ ಕಡೆ ಅವರ ಶಾಖೆ ಇರುವುದನ್ನು ಕಂಡರು.
ಎಲ್ಲಾ ಕಡೆ ಹೆಣ್ಣು ಮಕ್ಕಳು ವಿವಿಧ ಟೋಪಿ ಧರಿಸಿ ಕೆಲಸ ಮಾಡುವುದನ್ನು ಅಲ್ಲಿಯ ಹೆಣ್ಣು ಮಕ್ಕಳನ್ನು ಸತ್ಕರಿಸುವುದನ್ನು ಕಂಡರು.
“ಚೇರಿಂಗ್ ಕ್ರಾಸ್” ಎಂಬ ಓಣಿಯಲ್ಲಿ ಅರಸರ ವೈಭವವನ್ನು ಟ್ರಾಫಲ್ಲಾರ್ ಸ್ಟೆರ್‌ನಲ್ಲಿ ನೆಲ್ಸನ್ನನ ಮೂರ್ತಿ, “ವೆಸ್ಟ್ಮಿನಿಸ್ಟರ್ ಅಬೆ” ಎಂಬ ಪ್ರಾರ್ಥನಾ ಮಂದಿರವನ್ನು ಇಲ್ಲಿ ಸಂತ, ಸಾರ್ವಭೌಮರ ಸಮಾಧಿಗಳನ್ನು ಕಂಡರು. “ಪೊಯೆಟ್ಸ್ ಕಾರ್ನರ್”ನಲ್ಲಿ (Poets corner)ನಲ್ಲಿ ವಿವಿಧ ಕವಿಗಳ, ವ್ಯಾಪಾರಿಗಳ ಸರದಾರರ, ಸೇನಾಪತಿಗಳ ಸಮಾಧಿಗಳನ್ನು ಲೇಖಕರು ಕಂಡರು.
2) “ವೆಸ್ಟ್ ಮಿನ್‌ಸ್ಟರ್ ಅಬೆ” ಪ್ರಾರ್ಥನಾ ಮಂದಿರದ ಒಂದು ವಿಶೇಷ ಸ್ಮಾರಕದ ಬಗ್ಗೆ ವಿವರಿಸಿ.
“ವೆಸ್ಟ್ ಮಿನ್‌ಸ್ಟರ್ ಅಬೆ” ಎಂಬ ಪ್ರಾರ್ಥನಾ ಮಂದಿರವು ಕನಿಷ್ಟ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರವಾಗಿದೆ. ಕೆಲವು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಇದು ಅಚ್ಚಳಿಯದೆ ಉಳಿದಿದೆ. ಇಲ್ಲಿ ಸಂತ, ಸಾರ್ವಭೌಮರು ಮಲಗಿರುವ, ಕವಿ ಪುಂಗವರು ಒದಗಿರುವರು. ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು.
“Mortality behold and fear what a litter of Tombs in here”
(ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳು ಇಲ್ಲಿವೆ ನೋಡಿ ಅಂಜು)
ಎಂಬುದಾಗಿ 300 ವರ್ಷಗಳ ಹಿಂದೆ ಬ್ಲೂಮಾಂಟ್ಂಬ ಕವಿಯ ಹಾಡಿದನು. ಗೋಲ್ಡ್ ಸ್ಮಿತ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು visit to West Minis ter Abbey (ವೆಸ್ಟ್ ಮಿನಿಸ್ಟರನ ಅಬೆಯ ಸಂದರ್ಶನ) ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ. ಇಂದಿಗೂ ಇದು ಕವಿಗಳ (ಕಬ್ಬಿಗರ) ಸ್ಫೂರ್ತಿಯ ತವರು ಮನೆಯಾಗಿದೆ.
ಇಲ್ಲಿ ಹೊರಗಿನಿಂದ ಉತ್ತಮವಾಗಿ ಶೃಂಗರಿಸಿದ ಸಣ್ಣ ಬಾಗಿಲು, ಆದರೆ ಒಳಗೆ ಭವ್ಯವಾದ ಕಟ್ಟಡವಿದೆ. ನೂರಾರು ಜನ ಪ್ರಾರ್ಥನೆಗಾಗಿ ಇಲಿ ಬಂದು ಸೇರುತ್ತಾರೆ. ಇಲ್ಲಿ ಆತ್ಮಗಳ ಆರೋಗ್ಯವನ್ನು ಕಾಪಾಡಲು “ಸರಕಾರಿ ವೈದಿಕರೂ” ಇರುತ್ತಾರೆ. ಪಾದ್ರಿಯ ಆಸನವು ಬಂಗಾರದ ಬಣ್ಣದಿಂದ ಕೂಡಿದ್ದು, ಉತ್ತಮವಾದ ಕೆತ್ತನೆಯ ಕೆಲಸದಿಂದ ಕೂಡಿದೆ.
ಇ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1. “ನಿಮ್ಮ ದೇಶದ ಗೌರವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ವಿ.ಕೃ ಗೋಕಾಕ್’ರವರು ರಚಿಸಿರುವ ‘ಲಂಡನ್ ನಗರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ಗೋಕಾಕ್‌ರವರ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ಲಂಡನ್ನ ನಗರದ ಮೂಲೆ – ಮೂಲೆಯನ್ನು ಪರಿಚಯಿಸುತ್ತಾ ವೆಲ್ಲಿಂಗ್ಟನ್ನನಶಿಲಾ ಪ್ರತಿಮೆ, ಇದ್ದು ಬೀದಿಬೀದಿಗೆ, ಮೂಲೆಮೂಲೆಗೆ ಇತಿಹಾಸ ಪ್ರಸಿದ್ಧ ಪುರುಷರು ಅವರ ಪ್ರತಿಮೆಯನ್ನು ಕಂಡಾಗ ಲೇಖಕರಿಗೆ ಉಂಟಾದ ಭಾವನೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.
ವಿವರಣೆ : ಪ್ರತಿಯೊಂದು ದೇಶದಲ್ಲಿಯೂ ದೇಶದ ನಾಯಕರು, ದೇಶಪ್ರೇಮಿಗಳು ಜನತೆಗೆ ಕೊಡುವ ಸಂದೇಶ ಒಂದೇ, ದೇಶವನ್ನು ಕಾಯಿರಿ, ದೇಶದ ಗೌರವವನ್ನು ಕಾಪಾಡಿ, ನಮ್ಮ ದೇಶ ದೊಡ್ಡದಾದ ರಾಷ್ಟ್ರ. ಇದನ್ನು ಮತ್ತಷ್ಟು ವಿಶಾಲತೆಯಿಂದ ಕಾಣಬೇಕು. ನೋಡಬೇಕು.
ವಿಶೇಷತೆ : ದೇಶ ಪ್ರೇಮದ ಸಂದೇಶ ಈ ವಾಕ್ಯದಲ್ಲಿ ಮೂಡಿ ಬಂದಿದೆ. ‘ಸರಳವಾದ ಸುಂದರವಾದ ಭಾಷೆಯಲ್ಲಿ ಮೂಡಿ ಬಂದಿದೆ.
2. “ಹೊತ್ತು ! ಹೊತ್ತು ! ಹೊತ್ತೇ ಹಣ”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ವಿ.ಕೃ ಗೋಕಾಕ್’ರವರು ರಚಿಸಿರುವ ‘ಲಂಡನ್‌ನಗರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ಗೋಕಾಕ್‌ರವರ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಸಂದರ್ಭ : ಲಂಡನ್ ದೇಶದಲ್ಲಿ ಲಕ್ಷಾನುಲಕ್ಷ ಜನರು ವಾಸವಾಗಿದ್ದು ಎಲ್ಲರೂ ಅವಸರವಸರವಾಗಿ ಓಡಾಡುವರೇ ಆಗಿದ್ದಾರೆ, ಅವರಿಗೆ Time, Time ಎಂಬುದೇ ಹಣ, ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಲಂಡನ್ನಿನ ಜನತೆಯ ಬಗ್ಗೆ ಹೇಳಿದ್ದಾರೆ.
ವಿವರಣೆ : ವಿಲಾಯಿತಿ ಜನ ಅಂದರೆ ಲಂಡನ್ನಿನ ಜನ ಸದಾಕಾಲ ಬಹಳ ಅವಸರವಸರವಾಗಿ ಓಡಾಡುತ್ತಿರುತ್ತಾರೆ. ಏಕೆಂದರೆ ಅವರಿಗೆ ಸಮಯ, ವೇಳೆ ಎಂಬುದು ಬಹು ಅಮೂಲ್ಯವಾದುದು. ಆದ್ದರಿಂದಲೇ ಅವರು “Time is Money’ ಅಂದರೆ ‘ಹೊತ್ತೇ ಹಣ’ ಎಂಬುದು ಅವರ ನಂಬಿಕೆ. ಆದ್ದರಿಂದ ಅವರು ಸಮಯವನ್ನು ವ್ಯರ್ಥ ಮಾಡದೆ ಸದಾಕಾಲ ಸಮಯದ ಸದುಪಯೋಗ ಪಡಿಸುತ್ತಾ ಕಾಲಹರಣ ಮಾಡದೆ ದುಡಿಯುತ್ತಿರುವರು ಎಂಬುದು ಈ ವಾಕ್ಯದ ಸ್ವಾರಸ್ಯ
ವಿಶೇಷತೆ : ವಿದೇಶದ ಜನರು ಹೇಗೆ ಅಭಿವೃದ್ಧಿ ಹೊಂದಿದ್ದಾರೆ ಎಂಬುದರ ಸುಳಿವು ಇಲ್ಲಿ ನೀಡಲಾಗಿದೆ. ಸರಳವಾದ ಭಾಷೆಯಲ್ಲಿ ಸಮಯದ ಮಹತ್ವವನ್ನು ಅರಿತ ವಿಲಾಯಿತಿಯರ ಗುಣವನ್ನು ತಿಳಿಸಲಾಗಿದೆ.
3) “ಯಾರನ್ನು ತುಳಿದರೇನು! ಇಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೇ ! ಮಣ್ಣು ! ಮಣ್ಣು!”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ವಿ.ಕೃ ಗೋಕಾಕ್’ರವರು ರಚಿಸಿರುವ ‘ಲಂಡನ್ ನಗರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ಗೋಕಾಕ್‌ರವರ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ‘Poets Corner’ ಗೆ ಬಂದು ಎಲ್ಲಾ ಮಹಾನ್ ಕವಿಗಳಿಗೆ ವಂದಿಸುತ್ತಾ, ನೆನಪಿಸುತ್ತಾ, ಮುಂದುವರೆದಾಗ ‘ಬೆನ್‌ಜಾನ್ಸನ್” ರವರು ಲೇಖಕರ ಕಾಲ್ತುಳಿತಕ್ಕೆ ಸಿಲುಕಿದಾಗ ಲೇಖಕರು ಈ ಮಾತನ್ನು ಹೇಳಿದ್ದಾರೆ.
ವಿವರಣೆ : ಕವಿಗಳಾದರೇನು? ಕಲಾಕಾರರಾದರೇನು? ಬದುಕಿರುವವರಿಗೆ, ಸತ್ತ ಮೇಲೆ ಎಲ್ಲಾ ಮಣ್ಣಿನೊಳಗೆ, ಎಲ್ಲರ ಕಾಲು ತುಳಿತಕ್ಕೆ ಸಿಗುವುದು. ಎಲ್ಲಾ ಹೆಜ್ಜೆ ಹಾಕಿದರೂ ಈಗ ಮಣ್ಣು ಎಂಬ ನಿರಾಸೆಯ ಧ್ವನಿ ಕಾಣ ಬರುತ್ತಿದೆ.
ವಿಶೇಷತೆ : ನಶ್ವರ ಜೀವನದ ಬಗ್ಗೆ ಸರಳವಾದ ಭಾಷೆಯಲ್ಲಿ ವಿವರಿಸಲಾಗಿದೆ. ಕೆಲವರು ಮಡಿದು ಅಮರರಾಗಿದ್ದಾರೆ. ಮಣ್ಣಿನಲ್ಲಿ ಬೆರೆತರು ಶಾಶ್ವತವಾದ ಕೊಡುಗೆಯನ್ನು ಕೊಟ್ಟು ಇಂದಿಗೂ ಜೀವಿಸಿದ್ದಾರೆ. ಸರಳವಾದ ಭಾಷೆಯೊಂದಿಗೆ ಲೇಖಕರು ವಿವರಿಸಿದ್ದಾರೆ.
4) “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ವಿ.ಕೃ ಗೋಕಾಕ್’ರವರು ರಚಿಸಿರುವ ‘ಲಂಡನ್ ನಗರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು ಗೋಕಾಕ್‌ರವರ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ತಮ್ಮ ಲಂಡನ್ ಪ್ರವಾಸದ ಬಗ್ಗೆ ವಿವರಿಸುತ್ತಾ “ದೇಶಸುತ್ತಿ ನೋಡು, ಕೋಶ ಓದಿ ನೋಡು” ಎಂಬ ತತ್ವವನ್ನು ಆಧರಿಸಿ ಪ್ರವಾಸ ಕಥನವನ್ನು ನಮ್ಮ ಮುಂದಿಟ್ಟಿದ್ದಾರೆ.
ವಿವರಣೆ : ಪುಸ್ತಕ ಓದುವುದರಿಂದ ಸಿಗುವ ಜ್ಞಾನ, ಪ್ರವಾಸದಿಂದಲೂ ಸಿಗುತ್ತದೆ, ಮತ್ತಷ್ಟು ಹೆಚ್ಚು – ಹೆಚ್ಚು ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಶಿಕ್ಷಣದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೆಚ್ಚು ಮಹತ್ವವಿದೆ. ಆದ್ದರಿಂದಲೇ ಇಂದಿಗೂ ಪ್ರಾಥಮಿಕ ಶಾಲೆಯಿಂದ ಕಾಲೇಜು-ಶಿಕ್ಷಣದವರೆಗೂ ಶಿಕ್ಷಣದಲ್ಲಿ ಪ್ರವಾಸವನ್ನು ಒಂದು ಭಾಗವಾಗಿದೆ.
ವಿಶೇಷತೆ : ಶೈಕ್ಷಣಿಕ ಪ್ರವಾಸದ ಮಹತ್ವದ ಬಗ್ಗೆ ಲೇಖಕರು ವಿವರಿಸಿದ್ದಾರೆ.
ಸರಳವಾದ ಭಾಷೆ, ಸಹಜವಾಗಿ ಮೂಡಿ ಬಂದಿದೆ.
ಉ) ಬಿಟ್ಟಿರುವ ಪದಗಳನ್ನು ಸರಿಯಾದ ಪದದಿಂದ ತುಂಬಿರಿ:
1) ಲಂಡನ್ ಪಟ್ಟಣವೆಂದರೆ ಒಂದು _________ ಜಗತ್ತು.
2) ವೂಲವರ್ಥ ಎಂಬುದು _________ ಅಂಗಡಿ.
3) ಮನೆ ಹಿಡಿದು ಇರುವ __________ ಬುದ್ದಿ ಮನೆಯ ಮಟ್ಟದ್ದೇ.
4) ಅಬೆಯಲ್ಲಿರುವ ಸಿಂಹಾಸನಕ್ಕೆ _________ ಹೆಸರು. ಎಂದು
5) ವೆಸ್ಟ್‌ಮಿನ್‌ಸ್ಟರ್ ಅಬೆ ಎಂಬುದು _________
ಉತ್ತರಗಳು :
- ಸ್ವತಂತ್ರ
- ಸ್ಟೇಷನರಿ
- ತರುಣನ
- ಸ್ಟೋನ್ ಆಫ್ ಸ್ಟೋನ್
- ಪ್ರಾರ್ಥನಾ ಮಂದಿರ
ಊ) ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ.
1) ಒಮ್ಮೊಮ್ಮೆ
ಒಮ್ಮೆ + ಒಮ್ಮೆ = ಒಮ್ಮೊಮ್ಮೆ = ಲೋಪಸಂಧಿ
2) ಜಾಗವನ್ನು
ಜಾಗ + ಅನ್ನು = ಜಾಗವನ್ನು = ಆಗಮಸಂಧಿ
3) ಅತ್ಯಾಧರ
ಅತಿ + ಆದರ = ಅತ್ಯಾದರ = ಯಣ್ ಸಂಧಿ
4) ವಾಚನಾಲಯ
ವಾಚನ + ಆಲಯ = ವಾಚನಾಲಯ = ಸವರ್ಣದೀರ್ಘಸಂಧಿ
5) ಸಂಗ್ರಹಾಲಯ
ಸಂಗ್ರಹ + ಆಲಯ = ಸಂಗ್ರಹಾಲಯ = ಯಣ್ ಸಂಧಿ
6) ಓಣಿಯಲ್ಲಿ
ಓಣಿ + ಅಲ್ಲಿ = ಓಣಿಯಲ್ಲಿ = ಆಗಮಸಂದಿ
ಋ) ಈ ಪದಗಳ ಅರ್ಥ ಬರೆದು ಅವುಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಉಪಯೋಗಿಸಿ.
1) ದಂಗುಬಡಿ : ಕಬ್ಬಡಿ ಆಟದಲ್ಲಿ ಕರ್ನಾಟಕ ತಂಡದವರ ಆಟ ನೋಡಿ ಆಂಧ್ರ ತಂಡದವರು ದಂಗು ಬಡಿದವರಂತೆ ನಿಂತು ಬಿಟ್ಟರು.
2) ಮನಗಾಣು : ತಂದೆ-ತಾಯಿಗಳು ತಮ್ಮ ಮಕ್ಕಳ ಅಂಕಗಳನ್ನು ಕಂಡು ತಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಮನಗಾಣುವಂತಾಯಿತು.
3) ಅಚ್ಚಳಿ : ಅಂದು ಕುವೆಂಪುರವರು ಕೊಟ್ಟ ವಿಶ್ವಮಾನವ ಸಂದೇಶ ಇಂದಿಗೂ ಜನರ ಮನದಲ್ಲಿ ಅಚ್ಚಳಿದು ಉಳಿದು ಕೊಂಡಿದೆ.
4) ದುರಸ್ತಿ : ಅಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
5) ಘನತರ : ವಿಶ್ವೇಶ್ವರಯ್ಯನವರು ಎಲ್ಲರೂ ಮೆಚ್ಚುವಂತಹ ಘನತರ ಕಾರ್ಯವನ್ನು ಮಾಡಿದ್ದಾರೆ.
6) ನಿಟ್ಟಿಸಿ ನೋಡು : ಭರತ – ಬಾಹುಬಲಿಯರಿಬ್ಬರು ದೃಷ್ಟಿ ಯುದ್ಧದಲ್ಲಿ ಒಬ್ಬರನೊಬ್ಬರು ನಿಟ್ಟಿಸಿ ನೋಡುತ್ತಿದ್ದರು.
7) ಮೂಲೆಗೊತ್ತು : ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಇತರ ರಾಜ್ಯದವರು ಮೂಲೆಗೊತ್ತು ಮಾಡಿದ್ದಾರೆ.
8) ದಿಕ್ಕುತಪ್ಪು : ಹುಡುಗರು, ಪೊಲೀಸರಿಗೆ ದಿಕ್ಕು ತಪ್ಪಿಸಿದರು.
9) ವಶೀಲಿ : ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ತಮ್ಮ ಜನಪ್ರಿಯ ಕಾರ್ಯಗಳಿಂದ ಸಾಕಷ್ಟು ವಶೀಲಿಯನ್ನು ಬೀರಿದ್ದಾರೆ.
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ :
1. ನಾಮಪದ ಎಂದರೇನು ? ಉದಾಹರಿಸಿರಿ
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದವನ್ನು ನಾಮಪದ ಎನ್ನುವರು.
ಉದಾ: ರಾಜನನ್ನು ಗೌರವಿಸಿದರು.
ರಾಜ – ನಾಮಪ್ರಕೃತಿ
ಅನ್ನು – ವಿಭಕ್ತಿ ಪ್ರತ್ಯಯ
ರಾಜನನ್ನು – ನಾಮಪದ
2. ನಾಮಧಾತುಗಳ ವಿಧಗಳನ್ನು ಪಟ್ಟಿ ಮಾಡಿರಿ
ನಾಮವಾಚಕಗಳ ವಿಧಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು. ಅವುಗಳೆಂದರೆ
1. ವಸ್ತುವಾಚಕ – ರೂಢನಾಮ – ನದಿ,
ಅಂಕಿತನಾಮ – ಪುರಂದರವಿಠಲ,
ಅನ್ವರ್ಥನಾಮ – ವ್ಯಾಪಾರಿ
2. ಗುಣವಾಚಕ – ಒಳ್ಳೆಯದು, ಕೆಟ್ಟದ್ದು, ದೊಡ್ಡದು
3. ಸಂಖ್ಯಾವಾಚಕ – ಹತ್ತು, ಐವತ್ತು, ನೂರು
4. ಸಂಖ್ಯೆಯವಾಚಕ – ಒಂದನೆಯ, ಎರಡನೆಯ, ಮುರನೆಯ
5. ಭಾವನಾಮ – ಹಿರಿಮೆ, ನೋಟ, ಮಾಡ
6. ಪರಿಮಾಣವಾಚಕ – ಅಷ್ಟು ಇಷ್ಟು, ಎಷ್ಟು
7. ದಿಗ್ವಾಚಕ – ಮೂಡನ, ವೆಂಕಣ, ಪಡುವಣ, ಇತ್ಯಾದಿ
2. ಕೃದಂತ ಎಂದರೇನು ? ಉದಾಹರಣೆ ಬರೆಯಿರಿ.
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮ ಪದಗಳೆನಿಸುತ್ತವೆ.
ಉದಾ:
ಮಾಡು + ದ + ಅ = ಮಾಡಿದ
ಹೋಗು + ವ + ಅ = ಹೋಗುವ
ಬರೆ + ಉವ + ಅ = ಬರೆಯುವ
4. ಕೊಟ್ಟಿರುವ ಪದಗಳನ್ನು ಕೃದಂತನಾಮ, ಕೃದಂತಭಾವನಾಮ, ಕೃದಂತಾವ್ಯಯಗಳಾಗಿ ವಿಂಗಡಿಸಿ ಬರೆಯಿರಿ.
- ಕೃದಂತನಾಮ – ಓಡಿದ, ನೋಡಿದ
- ಕೃದಂತಭಾವನಾಮ – ಮಾಟ, ಆಟ
- ಕೃದಂತಾವ್ಯಯಗಳು – ತಿಂದ, ನೋಡಿ
ಆ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆಯಿರಿ :
1) ವರ್ತಮಾನ ಕೃದಂತನಾಮಕ್ಕೆ ಈ ಪದವು ಉದಾಹರಣೆಯಾಗಿದೆ
ಅ) ಬರೆಯುವ
ಆ) ಬರೆದ
ಇ) ಬರೆಯದ
ಈ) ಬರಹ
2) ‘ನೋಟ’ ಎಂಬುದು ಈ ವ್ಯಾಕಾರಣಾಂಶವಾಗಿದೆ
ಅ) ಕೃದಂತನಾಮ
ಆ) ಕೃದಂತಭಾವನಾಮ
ಇ) ಕೃದಂತಾವ್ಯಯ
ಈ) ತದ್ವಿಕಾಂತ
3) ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ
ಅ) ತೊಡುಗೆ
ಆ) ತಿನ್ನುವಿಕೆ
ಇ) ನಡೆಯುವ
ಈ) ಮಾಡಲಿಕ್ಕೆ
4) ‘ಲೋಕದೊಳ್’ ಎಂಬುದು ಈ ವಿಭಕ್ತಿಯಲ್ಲಿದೆ
ಅ) ಪ್ರಥಮ
ಆ) ತೃತಿಯ
ಇ) ಪಂಚಮ
ಈ) ಸಪ್ತಮಿ
ಉತ್ತರಗಳು :
1) ಅ
2) ಆ
3) ಈ
4) ಈ
ಇ. ಗದ್ಯಭಾಗದಲ್ಲಿ ಬಂದಿರುವ ನಾಮಪದಗಳನ್ನು ಪಟ್ಟಿ ಮಾಡಿ.
ಲಂಡನ್, ನಗರ, ವೂಲವರ್ಥ, ಸ್ಟೇಷನರಿ, ಇಲೆಕ್ಟಿಕ್ ಗಾಡಿ, ಅಂಗಡಿಗಳು. ವೆಸ್ಟ್ ಮಿನ್‌ಸ್ಟರ್ ಅಬೆ. ಪ್ರಾರ್ಥನಾ ಮಂದಿರ, ಶಿಲಾಮೂರ್ತಿ, ಮನುಷ್ಯರು. ಟೊಪ್ಪಿಗೆ, ಚೇರಿಂಗ್ ಕ್ರಾಸ್, ಆಫೀಸ್, ಕಂಪನಿ, ಕಛೇರಿ, ಬೆನ್‌ಜಾನ್ಸನ್, ಡಾರ್ವಿನ್, ಹರ್ಶೆಲ್, ರಿಚರ್ಡ್ ಸಿಂಹಾಸನ, ಷೇಕ್ಸ್‌ಪಿಯರ್ ಇತ್ಯಾದಿ….
ಹೆಚ್ಚಿನ ಅಭ್ಯಾಸಕ್ಕಾಗಿ
1. ಟಿಪ್ಪಣಿ ಬರೆಯಿರಿ.
1) ಗೋಲ್ಡ್ ಸ್ಮಿತ್
2) ಜಾನ್ಸನ್
3) ರಿಚರ್ಡ್
4) ರಾಣಿ ಎಲಿಜೆಬತ್
5) ನ್ಯೂಟನ್
ಟಿಪ್ಪಣಿ ಶೀರ್ಷಿಕೆಯಲ್ಲಿ ಬರೆದಿರುವುದನ್ನು copy ಮಾಡಿ.
2. ಬಿಟ್ಟ ಸ್ಥಳಗಳನ್ನು ತುಂಬಿರಿ :
1) ಸ್ಟ್ರಾಂಡ್‌ದಲ್ಲಿನ___________ಸಿಂಪಿಗಳು ಪ್ರಸಿದ್ಧಿ ಹೊಂದಿದ್ದಾರೆ.
2) ಸ್ಟೇಷನರಿ ಅಂಗಡಿಯ ಹೆಸರು____________
3) ____________ಎಂಬ ಒಂದು ಸಂಸ್ಥೆಯ ಶಾಖೆಗಳೂ ಎಲ್ಲಾ ಕಡೆ ಇವೆ.
4) ಮೆಟ್ಟಿಲು ಹತ್ತು – ಇಳಿಯಲು___________ಗಳನ್ನು ಉಪಯೋಗಿಸುತ್ತಾರೆ.
5) ಪುರಾತನ ಪ್ರಾರ್ಥನಾ ಮಂದಿರದ ಹೆಸರು
ಉತ್ತರಗಳು :
1. ಸ್ಯಾವೊಯ್
2. ವೂಲವರ್ಥ
3. ಐವತ್ತು ಶೀಲಿಂಗಿನ ಸಿಂಪಿಗಳು
4. ಎಕ್ಕೆಲೇಟರ್ಸ್
5.ವೆಸ್ಟ್‌ಮಿನಿಸ್ಟರ್ ಅಬೆ
3. ಸೂಚನೆಯಂತೆ ಬದಲಾಯಿಸಿ.
೧. ಅಗಸನು ಬಟ್ಟೆಯನ್ನು ಒಗೆಯುತ್ತಿದ್ದಾನೆ (ಭವಿಷ್ಯತ್ ಕಾಲದಲ್ಲಿ ಬದಲಾಯಿಸಿ.
ಅಗಸನು ಬಟ್ಟೆಯನ್ನು ಒಗೆಯುವನು
೨. ರಾಮನು ಹಣ್ಣನು ತಿಂದನು (ವರ್ತಮಾನ ಕಾಲಕ್ಕೆ ಪರಿವರ್ತಿಸಿ)
ರಾಮನು ಹಣ್ಣನು ತಿನ್ನುತ್ತಿದ್ದಾನೆ.
೩. ಅಮ್ಮ ಅಡಿಗೆ ಮಾಡುವಳು (ಭೂತಕಾಲದಲ್ಲಿ ಬರೆಯಿರಿ)
ಅಮ್ಮ ಅಡಿಗೆ ಮಾಡುದಳು