10th Standard Kouravendrana Konde Neenu Kannada Notes | 10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಕನ್ನಡ ನೋಟ್ಸ್

Kouravendrana Konde Neenu

10th Standard Kannada Kouravendrana Konde Neenu Poem Notes Summary Question Answer Mcq Pdf Download Karnataka State Syllabus 2025, 10th class kouravendrana konde neenu question answer pdf, 10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಕನ್ನಡ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, sslc kouravendrana konde neenu notes in kannada pdf, 10th kannada kouravendrana konde neenu summary in kannada, class 10 kannada kouravendrana konde neenu summary, kseeb solutions for class 10 kannada poem 3 kouravendrana konde neenu, 10th class kouravendrana konde neenu poem saramsha in kannada, 10th kannada kouravendrana konde neenu notes, class 10th kannada kouravendrana konde neenu solutions,10th kannada 3rd poem question answer notes.

Kouravendrana Konde Neenu

10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಕನ್ನಡ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು

ಕುಮಾರವ್ಯಾಸನ ಸಮಯ ಕ್ರಿ.ಶ. 1430 ಎಂದೇ ಪ್ರಸಿದ್ದನಾಗಿರುವ ಗದುಗಿನ ನಾರಾಯಣಪ್ಪ ಗದಗ ಪ್ರಾಂತ್ಯದ ಕೋಳಿವಾಡದವನು. ಆದಿಕವಿ ಪಂಪನ ಅನಂತರ ವ್ಯಾಸರ ಮಹಾಭಾರತವನ್ನು ಕನ್ನಡದಲ್ಲಿ ಮೊದಲು ಹತ್ತು ಪರ್ವಗಳನ್ನು ರಚಿಸಿ ಪಂಡಿತರಿಗೆ ಮಾತ್ರವಲ್ಲದೇ ಪಾವರರಿಗೂ ಕಾಮಧೇನು ಎಂಬ ಗೌರವಕ್ಕೆ ಪಾತ್ರನಾದ “ಕುಮಾರವ್ಯಾಸ”, ಕನ್ನಡ ಭಾರತ’, ‘ಗದುಗಿನ ಭಾರತ’, ‘ಕುಮಾರ ಭಾರತ’ ಎಂಬ ಹೆಸರನ್ನು ಹೊಂದಿರುವ ‘ಕರ್ಣಾಟ ಭಾರತ ಕಥಾಮಂಜರಿ’, ಎಂಬ ಕಾವ್ಯವನ್ನು ಬರೆದು ಖ್ಯಾತನಾದ ಈತ ಐರಾವತ ಎಂಬ ಕೃತಿಯನ್ನೂ ರಚಿಸಿದ್ದಾನೆಂದು ತಿಳಿದುಬಂದಿದೆ.

‘ರೂಪಕಾಲಂಕರವನ್ನು ನಿರರ್ಗಳವಾಗಿ ಪ್ರಯೋಗಿಸಿ “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂಬ ವಿರುದನ್ನು ಪಡೆದಿದ್ದಾನೆ. ವೀರನಾರಾಯಣನ ಪರಮಭಕ್ತನಾದ ಈತ ಭಗವತ ಸಂಪ್ರದಾಯವನ್ನು ಸರಳ, ಸುಂದರ ಹಾಗೂ ರಂಜನೀಯವಾಗಿ ಪರಿಚಯಿಸಿ ಜನಪ್ರಿಯಗೊಳಿಸಿದ್ದಾನೆ. ನಡುಗನ್ನಡ ಕಾವ್ಯ ಪರಂಪರೆಯಲ್ಲಿ ಗದುಗಿನ ಭಾರತ ಅತ್ಯಂತ ಜನಪ್ರಿಯವಾದ ಮಹಾಕಾವ್ಯ. ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ಕಾವ್ಯ ಉದ್ಯೋಗಪರ್ವದಿಂದ ‘ಕೌರವೇಂದ್ರನ ಕೊಂದೆ ನೀನು’ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಅಡಿ – ಪಾದಕಡು – ಅತಿದನುಜ – ರಾಕ್ಷಸ
ಅನ್ವಯ – ವಂಶಕಿಂಕರ-ಸೇವಕದೃಗುಜಲ-ಕಣ್ಣನೀರು
ಅರುಹು – ಹೇಳುಕೈಯಾನು-ಕೈಚಾಚುಬಳಿ-ಅನಂತರ
ಅವಸರ – ಅಗತ್ಯದಕೈವಾರ-ಹೊಗಳಿಕೆಬಾಯ್ದಂಬುಲಕೆ-ಎಂಬಲಿಗೆ
ಇನ – ಸೂರ್ಯಗಡಣ-ಸಮೂಹಭೇದ-ವ್ಯತ್ಯಾಸ
ಉರವಣಿಸು – ಹೆಚ್ಚಾಗುಗದ್ದುಗೆ-ಪೀಠಮುರಾರಿ-ಕೃಷ್ಣ (ಮುರ+ಅರಿ)
ಋಣ – ಹಂಗುಗ್ಲಾನಿ-ತಲ್ಲಣಮೇದಿನಿ-ಭೂಮಿ
ಎನಿಸಲೊಲ್ಲದ – ಇಷ್ಟಪಡದಚಿತ್ತ-ಮನಸ್ಸುರಣ-ಯುದ್ಧ
ಕಡು – ಅತಿತನೂಜ-ಮಗಸುತ-ಮಗ
ರವಿ – ಸೂರ್ಯಲಲನೆ-ತರುಣಿಸೂನುಗಳು-ಮಕ್ಕಳು
ರವಿಸುತ – ಕರ್ಣಶೌರಿ-ಕೃಷ್ಣಹಗೆ-ಶತ್ರು
ರಾಜೀವಸಖ – ಸೂರ್ಯಶೌರಿಯ-ಶೌರ್ಯಹಸಾದ(ದ್ಭ)ಪ್ರಸಾದ(ತ)
ರಿಪು – ಶತ್ರುಸಂತತಿ-ವಂಶ

೧) ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಮೈದುನ ಎಂದು ಕರೆದನು?

ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಮೈದುನ ಎಂದು ಕರೆದನು

೨) ಕುಮಾರವ್ಯಾಸನ ಆರಾಧ್ಯದೈವ ಯಾರು?

ಕುಮಾರವ್ಯಾಸನ ಆರಾಧ್ಯದೈವ “ಗದುಗಿನ ವೀರನಾರಾಯಣ”

೩) ಅಶ್ವಿನಿದೇವತೆಗಳ ವರಬಲದಿಂದ ಜನಿಸಿದವರು ಯಾರು

ನಕುಲ ಮತ್ತು ಸಹದೇವರು ಅಶ್ವಿನಿದೇವತೆಗಳ ವರಬಲದಿಂದ ಜನಿಸಿದವರು

೪) ಕುಮಾರವ್ಯಾಸನಿಗಿರುವ ಬಿರುದು ಯಾವುದು?

ಕುಮಾರವ್ಯಾಸನಿಗಿರುವ ಬಿರುದೆಂದರೆ- “ರೂಪಕ ಚಕ್ರವರ್ತಿ”.

೫) ನಾರಾಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು?

ನಡುಗನ್ನಡದಲ್ಲಿ ವ್ಯಾಸ ಮಹಾಭಾರತವನ್ನು ರಚಿಸಿ, ಪಂಡಿತರಿಗೆ ಮಾತ್ರವಲ್ಲ ಪಾಮರರಿಗೂ ಕಾಮಧೇನು ಎಂಬ ಗೌರವಕ್ಕೆ ಪಾತ್ರನಾಗಿ ‘ಕುಮಾರವ್ಯಾಸ’ ಎಂಬ ಪ್ರಖ್ಯಾತಿ ಪಡೆದಿದ್ದಾರೆ.

1) ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?

ಕೃಷ್ಣನು ಕರ್ಣನನ್ನು ತನ್ನ ಬಳಿ ಬಹಳ ಹತ್ತಿರದಲ್ಲಿ ಎಳೆದು ಕೂರಿಸಿಕೊಂಡಿದ್ದು ಅಲ್ಲದೆ ಮೈದುನ ಎಂದು. ಕರೆದದ್ದು ಕರ್ಣನ ಮನದಲ್ಲಿ ಸ್ವಲ್ಪ ಮಟ್ಟಿಗೆ ಭಯವಾರಿಸಿತು. ಅಲ್ಲದೆ ಕೌರವರಲ್ಲಿ ಹಾಗೂ ಯಾದವರಲ್ಲಿ ಯಾವ ಭೇದವಿಲ್ಲ. ನೀನು ಈ ಮೇದಿನಿ (ಭೂಮಿ,ರಾಷ್ಟ್ರ) ಆದರೆ ಈ ವಿಷಯದ ಅರಿವಿಲ್ಲ ನಿನಗೆ, ನಡೆದ ಸಂಗತಿಯ ಬಗೆಗೆ ನಿನಗೇನು ತಿಳಿದಿಲ್ಲ, ಇಲ್ಲಿನ ನಿಜವಾದ ರಾಜ ನೀನೆ; ಎಂದಾಗ ಕರ್ಣನಿಗೆ ಆಶ್ಚರ್ಯಕ್ಕಿಂತ ಮನಸ್ಸಿನಲ್ಲಿ ಹೆಚ್ಚು ಭಯ ಆವರಿಸಿತು.

2) ಕುಂತಿ, ಮಾದ್ರಿಯರು ಯಾರಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?

ಕುಂತಿ ಸೂರ್ಯನ ಅನುಗ್ರಹದಿಂದ ಕರ್ಣನನ್ನು, ಯಮನಿಂದ ಯುಧಿಷ್ಠಿರನನ್ನು ವಾಯುದೇವನಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು, ಮಾದ್ರಿ ದೇವಿ ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದರು.

3) ಕೃಷ್ಣನು ಅಮಿಷಗಳನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು?

ಕೃಷ್ಣನು ಅಮಿಷಗಳನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಯೆಂದರೆ – “ಕೃಷ್ಣನ ಮಾತುಗಳನ್ನು ಕೇಳಿ ಅವನು ಬಹಳವಾಗಿ ನೊಂದನು. ತನ್ನ ಮನಸ್ಸಿನಲ್ಲಿ

ಅಕಟಾ! ಕುರುಪತಿಗೆ ಕೇಡಾಯಿತೆ? ಹರಿಯ ಹಗೆ ಹೊಗೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದೇ? ನನ್ನ ವಂಶವನ್ನು ತಿಳಿಸಿಕೊಂಡನು.” ಎಂಬುದಾಗಿ ಮನದಲ್ಲಿ ಅಳಲನ್ನು ತೋಡಿಕೊಂಡನು.

4) ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು?

ಕೃಷ್ಣನು ಕರ್ಣನನ್ನು ತನ್ನ ರಥದಲ್ಲಿ ಬಹಳ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ತನ್ನ ಜನ್ಮ ವೃತ್ತಾಂತವನ್ನು ತಿಳಿಸಿ ಹರಿಯ ಹಗೆ ಹೊಗೆಯ ರೂಪದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಯುತ್ತಾನೆ. ತನ್ನನ್ನು ಕೈಹಿಡಿದು ಕಾಪಾಡಿದ ದಾತಾರನಿಗೆ ಅವನ ಹಗೆಗಳ ಕತ್ತು ಕತ್ತರಿಸಿ, ಒಪ್ಪಿಸಿ ತೃಪ್ತಿ ಪಡಿಸುತ್ತೇನೆಂದು ತುಂಬಾ ಉತ್ಸಾಹದಿಂದಿದ್ದೆ ನಾನು, ಈಗ ನೀನು ನನ್ನ ಜನ್ಮ ವೃತ್ತಾಂತ ತಿಳಿಸಿ ನೀನು ಕೌರವೇಂದ್ರನನ್ನು ಕೊಂದುಬಿಟ್ಟೆ ಎಂಬುದಾಗಿ ನೊಂದು ಹೇಳಿದನು. ಪರೋಕ್ಷವಾಗಿ ಕರ್ಣನ ಮನಸ್ಥೆರ್ಯವನ್ನು ಕೊಂದುದರಿಂದ ಆತನ ಆತ್ಮೀಯ ಆತ್ಮದಂತಿದ್ದ ಕೌರವನನ್ನೇ ಕೊಂದಾಯಿತು. ಎಂಬುದಾಗಿ ಹೇಳಿದನು.

5) ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?

ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನ ದೃಢವಾಗಿತ್ತು. ಸ್ಪಷ್ಟವಾಗಿತ್ತು. ಆತನು ಯುದ್ಧದ ವಿಚಾರದಲ್ಲಿ ಕೃಷ್ಣನೊಂದಿಗೆ ಆಡಿದ ಮಾತುಗಳಿಂದ ಸ್ವಷ್ಟವಾಗುತ್ತದೆ. “ನನಗೆ ವೀರ ಕೌರವರಾಯನೇ ದಾಕಾರ, ಆತನ ಹಗೆಯೇ ನನಗೆ ಹಗೆ, ಆತನ ಪ್ರಶಂಸೆಯೇ ನನಗೆ ಪ್ರಶಂಸೆ, ಶೌರಿ ಕೇಳು; ನಾಳೆ ಪಾಂಡುತನಯರೊಡನೆ ನಡೆಯುವ ಸಮರದ ಸಾರದಲ್ಲಿ ತೋರಿಸುತ್ತೇನೆ. ನನ್ನ ಭುಜ ಬಲ ಪರಾಕ್ರಮದ ಸಂಪನ್ನತ್ವವನ್ನು” ನಾಳೆ ನಡೆಯುವ ಭಾರದ ಯುದ್ಧದಲ್ಲಿ ಮಾರಿಗೆ ಔತಣವಾಯಿತು. ಚತುರಂಗ ಬಲದಲ್ಲಿ ಕೌರವನ ಋಣ ಹಿಂಗುವಂತೆ ಹೋರಾಡುತ್ತೇನೆ. ನಿನ್ನ ವೀರರೈವರನ್ನು ನಾನು ನೋಯಿಸುವುದಿಲ್ಲ, ರಾಜೀವ ಸಖನಾಣೆ ಎಂಬುದಾಗಿ ತಿಳಿಸಿದನು.

1) ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು?

ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೆಂದರೆ ಶ್ರೀಕೃಷ್ಣನು ಕರ್ಣನಿಗೆ ಮೈದುನತನದ ಸರಸವನ್ನು ಮಾಡಿದನು. ರಥದಲ್ಲಿ ಅವನನ್ನು ಬರಸೆಳೆದು ಪೀಠದಲ್ಲಿ ಕುಳ್ಳಿರಿಸಿದನು. ಈ ಸಲುಗೆಯನ್ನು ಕಂಡು ಕರ್ಣನು ಅಳುಕಿದನು. ಅಳುಕಿ ಹಿಂದೆ ಸರಿದ ಕರ್ಣನನ್ನು ಕಂಡು ಇನ್ನು ಹತ್ತಿರಕ್ಕೆ ತೊಡೆ ಸೋಕುವಂತೆ ಕುಳಿತುಕೊಂಡನು ನಮ್ಮವರಿಗೂ ಅಂದರೆ ಯಾದವರಿಗೂ, ಕೌರವರೊಳಗೆ ಭೇದ ಇಲ್ಲ. ವಿಚಾರ ಮಾಡಿ ನೋಡಿದರೆ ವಂಶದ ಮೂಲ ಎರಡಿಲ್ಲ ನಿನ್ನಾಣೆ ನೀನು ಮೇದಿನೀಪತಿ. ಈ ವಿಷಯ ನಿನಗೆ ತಿಳಿದಿಲ್ಲ. ಸುಯೋಧನನಲ್ಲಿ ವ್ಯರ್ಥವಾಗಿ ಸೇವಕತನದಲ್ಲಿರುವುದು ಉಚಿತವಲ್ಲ.

ನೀನು ಕುಂತಿಯ ಜೇಷ್ಠ ಪುತ್ರ. ನಿನಗೆ ಈ ಹಸ್ತಿನಾಪುರದ ರಾಜ್ಯದ ಘನತೆಯನ್ನು ಮಾಡುತ್ತೇನೆ. ಪಾಂಡವರು, ಕೌರವರು ಇಬ್ಬರೂ ನೀನು ರಾಜನಾಗುವುದನ್ನು ಒಪ್ಪಿಕೊಳ್ಳುವರು. ಎರಡು ಸಂತತಿಯವರನ್ನು ಸೇವಕರನ್ನಾಗಿ ಇಟ್ಟುಕೊಳ್ಳುವುದನ್ನು ಬಿಟ್ಟು ಕೇವಲ ದುರ್ಯೋಧನನ ಬಾಯ್ದುಂಬುಲಕ್ಕೆ ಕೈಯೊಡ್ಡುವುದು ಸರಿಯೇ, ಇವರೆಲ್ಲರ ನಡುವೆ ನೀನು ಓಲಗದಲ್ಲಿ ಒಪ್ಪುತ್ತಿರುವ ಕಡುವಿಲಾಸವನ್ನು ನೆನೆಸಿಕೋ, ಅಂತಹ ವಿಲಾಸವನ್ನು ಬಿಸುಟು, ಕುರುಪತಿ ನುಡಿಸಿದೊಡನೆ ಜೀಯಾ, ಹಸಾದ ಎನ್ನುವುದು ನಿನಗೆ ಸರಿಯಲ್ಲ. ನೀನು ಧರಿಣಿಪತಿಯಾಗಿರುವವನು ಮಂಕಾಗಿ ಅಮಿಷವನ್ನು ಶ್ರೀಕೃಷ್ಣನು ಕರ್ಣನಿಗೆ ಒಡ್ಡಿದನು.

2) ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನೋಸ್ಥಿತಿಯನ್ನು ತಿಳಿಸಿ.

ಪಾಂಡವರು ಸೋದರರೆಂದು ತಿಳಿದಾಗ ಕರ್ಣನು ಮನಸ್ಥೆರ್ಯವನ್ನು ಕಳೆದುಕೊಳ್ಳುವ ಮನೋಸ್ಥಿತಿಯವ ‘ನಾಗುತ್ತಾನೆ. ಕೃಷ್ಣನ ಮಾತು ಕೇಳ ಕೇಳುತ್ತಾ ಕರ್ಣನ ಕೊರಳ ಸೆರೆ ಹಿಗ್ಗಿದವು. ಕಣ್ಣೀರು ಉಕ್ಕುಕ್ಕಿ ಬಂತು. ಭಾವೋದ್ವೇಗದಲ್ಲಿ ಬಹಳವಾಗಿ ನೊಂದನು. ಅಕಟಾ! ಕುರುಪತಿಗೆ ಕೇಡಾಯಿತೇ ಎಂದುಕೊಂಡನು. ತನ್ನ ಮನಸ್ಸಿನಲ್ಲಿಯೇ ಹರಿಯ ಹಗೆತನ ಹೊಗೆಯಾಡುತ್ತಿರುವುದೇ ಎಂಬ ಸಂಶಯವು ಬರತೊಡಗಿತು. ನನ್ನ ವಂಶವನ್ನು ಶ್ರೀ ಕೃಷ್ಣನು ತಿಳಿಸುತ್ತಾ ಕೊಂದನು, ಈಗ ಮಾತಾಡಿ ಪ್ರಯೋಜನವೇನು? ಎಂದು ಮೌನವಹಿಸಿದರು. ಆದರೂ ಕಪಟನಾಟಕ ಸೂತ್ರಧಾರಿ ಬಿಡುವನೇ? ಶ್ರೀಕೃಷ್ಣನಿಗೆ ಉತ್ತರಿಸುತ್ತಾ ಹೇ ಮರುಳು ಮಾಧವಾ! ನನಗೆ ರಾಜ್ಯದ

ಸಿರಿಯೂ ಬೇಕಿಲ್ಲ. ಕಾಂತೇಯರು ಸುಯೋಧನರು ತಾನು ಹೇಳಿದಂತೆ ಅವರು ಕೇಳಬೇಕೆಂಬ ಮನಸ್ಸು ನನ್ನದಲ್ಲ. ನನ್ನ ಕೈಹಿಡಿದ ದಾತಾರನಿಗೆ ಅವನ ಹಗೆಗಳ ಕತ್ತು ಕತ್ತರಿಸಿ ಒಪ್ಪಿಸಿ ತೃಪ್ತಿಪಡಿಸುತ್ತೇನೆಂದು ತುಂಬಾ ಉತ್ಸಾಹದಿಂದಿದ್ದೆ. ಈಗ ನೀನು ಕೌರವೇಂದ್ರನನ್ನು ಕೊಂದುಬಿಟ್ಟೆ ಎಂಬುದಾಗಿ ನೊಂದನು.

3) ಕರ್ಣನ ನಿರ್ಧಾರ ಸರಿ ಎನ್ನುವಿರಾ? ಏಕೆ?

ಹೌದು, ಕರ್ಣನ ನಿರ್ಧಾರ ಸರಿ ಎನಿಸುತ್ತದೆ. ಏಕೆಂದರೆ- ‘ಆಪತ್ತಿಗಾದವನೆ ನೆಂಟ’ ಎಂಬ ಹಿರಿಯರು ನುಡಿದಿರುವ ನುಡಿಮುತ್ತುಗಳಾಗಿವೆ. ಕರ್ಣನನ್ನು ಸೂತಪುತ್ರನೆಂದು ಸಮಾಜವೇ ಅವಮಾನಿಸಿ ತಿರಸ್ಕರಿಸಿದಾಗ ಯಾವುದೇ ಬಾಂಧವ್ಯ ತೋರಲು ಯಾರೂ ಇರಲಿಲ್ಲ. ಎಲ್ಲರ ತಿರಸ್ಕಾರದ ನುಡಿಗಳಿಂದ ಕುಗ್ಗಿಹೋದ ಕರ್ಣನಿಗೆ ಧೈರ್ಯ ಹೇಳಿ, ಆತ್ಮೀಯ ಗೆಳೆಯನ ಸ್ಥಾನವನ್ನು ಕೊಟ್ಟು ಗೌರವಿಸಿ, ಆತನನ್ನು ಸಾಮಂತರಾಜನ ಪದವಿಯನ್ನು ಕೊಟ್ಟು ಗೌರವಿಸಿ, ಆತನನ್ನು ಸಾಮಂತರಾಜನ ಪದವಿಯನ್ನು ಕೊಟ್ಟು ಆತನನ್ನು ಪುರಸ್ಕರಿಸಿದ ಏಕೈಕ ವ್ಯಕ್ತಿ ಎಂದರೆ ‘ಸುಯೋಧನ’, ಕರ್ಣನ ಉದಾರತೆ, ವೀರತೆ, ಸಾಹಸ, ಶೌರ್ಯವನ್ನು ಗುರ್ತಿಸಿದ ವ್ಯಕ್ತಿ ಸುಯೋಧನ.

ಆದರೆ ಯುದ್ಧದ ಸಂದರ್ಭ ಬಂದಾಗ ಆತನ ಜನ್ಮ ವೃತ್ತಾಂತ ತಿಳಿಸಿ ಆತನ ಮನೋಸ್ಥೆರ್ಯವನ್ನು ಕುಗ್ಗಿಸಲು ಶ್ರೀಕೃಷ್ಣನು ಆತನಿಗೆ ಅಮಿಷಗಳನ್ನು ಒಡ್ಡಿ ಪಾಂಡವರ ಪಕ್ಷ ಸೇರಲು ಮನವೊಲಿಸುತ್ತಾನೆ. ರಾಜ್ಯ ಸಿಂಹಾಸನದ ಆಸೆ ತೋರಿಸಿದರೆ ಕರ್ಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕರ್ಣನಿಗೆ ಬೇಕಾದುದು ರಾಜ್ಯ ಸಿಂಹಾಸನವಲ್ಲ, ಆತನಿಗೆ ಬೇಕಾದುದು ತನ್ನ ವೀರತೆ, ಚತುರತೆ, ಶೌರ್ಯಕ್ಕೆ ತಕ್ಕ ಗೌರವ ಮಾತ್ರ ಅದು ಅವನ ಉದಾತ್ತಗುಣ ಸ್ವಾಭಾವಿಕವಾಗಿಯೇ ಬಂದುದು. ಆದ್ದರಿಂದ ಕರ್ಣನು ಕೈಗೊಂಡ ನಿರ್ಧಾರ ‘ಸರಿ’ಯಾಗಿಯೇ ಇದೆ.

1) “ರವಿಸುತನ ಕಿವಿಯ ಬಿತ್ತಿದವನು ಭಯವ.”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕುಮಾರವ್ಯಾಸನು’ ರಚಿಸಿರುವ “ಕೌರವೇಂದ್ರನ ಕೊಂದೆ ನೀನು” ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಕರ್ಣಾಟಕ ಭಾರತ ಕಥಾ ಮಂಜರಿ” ಮಹಾಕಾವ್ಯದ ಉದ್ಯೋಗಪರ್ವದಿಂದ ಆರಿಸಲಾಗಿದೆ.

ಸಂದರ್ಭ: ಪ್ರಸ್ತುತ ವಾಕ್ಯವನ್ನು ಶ್ರೀಕೃಷ್ಣನು, ಕರ್ಣನ ಮನಸ್ಸಿಗೆ ನಾಟುವಂತೆ ಅವನ ಜೀವನ ವೃತ್ತಾಂತವನ್ನು ತಿಳಿಸುವ ಸಂದರ್ಭದಲ್ಲಿ ಕುಮಾರವ್ಯಾಸನು ಈ ಮಾತನ್ನು ಹೇಳಿದ್ದಾನೆ.

ವಿವರಣೆ: ಕವಿಯು ಕರ್ಣನ ಜನ್ಮ ವೃತ್ತಾಂತವನ್ನು ತಿಳಿಸುವ ಪೂರ್ವ ಪೀಠಿಕೆಯಾಗಿ ಕರ್ಣನನ್ನು ಸೂರ್ಯಪುತ್ರ ಎಂದು ಕರೆದು ರಹಸ್ಯವಾಗಿ ಕಿವಿಯಲ್ಲಿ ಆತನ ಜನ್ಮ ವೃತ್ತಾಂತವನ್ನು ಕೃಷ್ಣನು ತಿಳಿಸಿದನು.

ವಿಶೇಷತೆ: ಕರ್ಣನ ಜನ್ಮ ವೃತ್ತಾಂತದ ಘಟನೆಯನ್ನು ಕವಿ ನಡುಗನ್ನಡ ಭಾಷೆಯಲ್ಲಿ ಮನೋಜ್ಞವಾಗಿ ವರ್ಣಿಸಿದ್ದಾನೆ.

2) ‘ಬಾಯ್ದಂಬುಲಕ್ಕೆ ಕೈಯಾನುವರೆ’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕುಮಾರವ್ಯಾಸನು’ ರಚಿಸಿರುವ “ಕೌರವೇಂದ್ರನ ಕೊಂದೆ ನೀನು” ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಕರ್ಣಾಟಕ ಭಾರತ ಕಥಾ ಮಂಜರಿ” ಮಹಾಕಾವ್ಯದ ಉದ್ಯೋಗಪರ್ವದಿಂದ ಆರಿಸಲಾಗಿದೆ.

ಸಂದರ್ಭ: ಶ್ರೀಕೃಷ್ಣನು ಕರ್ಣನ ಮನವೊಲಿಸಲು ಹಲವಾರು ಅಮಿಷಗಳನ್ನು ಒಡ್ಡುವನು. ಮೂದಲಿಸಿ ಆತನನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳುವುದರ ಹುನ್ನಾರದ ಸಂದರ್ಭ ಇದಾಗಿದೆ.

ವಿವರಣೆ: ರಾಜ ಸಿಂಹಾಸನವೇ ಸಿಗುವಾಗ ಅದನ್ನು ಬಿಟ್ಟು ದುರ್ಯೋದನ ಬಾಯಲ್ಲಿರುವ ತಾಂಬೂಲಕ್ಕೆ ಕೈಯೊಡ್ಡುವುದು ಸರಿಯೇ, ಅಂದರೆ ಆತನ ಸಾಮಂತನಾಗಿ ಕೇವಲ ಬಾಯಿಯ ತಾಂಬೂಲಕ್ಕೆ ಕೈಯೊಡ್ಡುವುದು ಸರಿಯೇ? ಎಂಬುದಾಗಿ ಪ್ರಶ್ನಿಸುವ ದಾಟಿ ಇಲ್ಲಿದೆ.

ವಿಶೇಷತೆ: ಪ್ರಸ್ತುತ ಈ ವಾಕ್ಯವನ್ನು ಕರ್ಣನ ಸ್ಥಿತಿ, ಹಾಗೂ ಕೃಷ್ಣನ ಜಾಣತನ ನಡುಗನ್ನಡ ಭಾಷೆಯಲ್ಲಿ ಕವಿ ತಿಳಿಸಿದ್ದಾರೆ.

3) ‘ಜೀಯ ಹಸಾದವೆಂಬುದು ಕಷ್ಟ’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕುಮಾರವ್ಯಾಸನು’ ರಚಿಸಿರುವ “ಕೌರವೇಂದ್ರನ ಕೊಂದೆ ನೀನು” ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಕರ್ಣಾಟಕ ಉದ್ಯೋಗಪರ್ವದಿಂದ ಆರಿಸಲಾಗಿದೆ.

ಸಂದರ್ಭ: ಪ್ರಸ್ತುತ ಈ ವಾಕ್ಯವನ್ನು ಕೃಷ್ಣ, ಕರ್ಣನಿಗೆ ಜನ್ಮವೃತ್ತಾಂತವನ್ನು ತಿಳಿಸುವ ಸಂದರ್ಭದಲ್ಲಿ ಹೇಳಿದ್ದಾನೆ.

ವಿವರಣೆ : ರಾಜನಾಗಿ ಮೆರೆಯಬೇಕಾದವನು, ಸೇವಕ -ನಂತೆ ಬಾಳುವೆ ಮಾಡಬೇಕಾಗುವುದು ಅಸಹನೀಯ ಎಂಬುದನ್ನು ಶ್ರೀಕೃಷ್ಣನು ಕರ್ಣನಿಗೆ ತಿಳಿಸಿಕೊಡುತ್ತಿದ್ದಾನೆ.

ವಿಶೇಷತೆ : ಕರ್ಣನ ಮನವೊಲಿಸುವ ರೀತಿಯನ್ನು ಕೃಷ್ಣನ ಮನವೊಲಿಸುವ ರೀತಿಯನ್ನು ಕವಿ ನಡುಗನ್ನಡದ ಭಾಷೆಯಲ್ಲಿ ವಿವರಿಸಿದ್ದಾನೆ.

4) “ನಿನ್ನಪದೆಸೆಯ ಬಯಸುವನಲ್ಲ.”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕುಮಾರವ್ಯಾಸನು ರಚಿಸಿರುವ “ಕೌರವೇಂದ್ರನ ಕೊಂದೆ ನೀನು” ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಕರ್ಣಾಟಕ ಭಾರತ ಕಥಾ ಮಂಜರಿ” ಮಹಾಕಾವ್ಯದ ಉದ್ಯೋಗಪರ್ವದಿಂದ ಆರಿಸಲಾಗಿದೆ.

ಸಂದರ್ಭ: ಪ್ರಸ್ತುತ ಈ ವಾಕ್ಯವನ್ನು ಶ್ರೀಕೃಷ್ಣ ಕರ್ಣನ ಮನವೊಲಿಸುವ ಸಂದರ್ಭದಲ್ಲಿ ಹೇಳಿದ್ದಾನೆ.

ವಿವರಣೆ: ಶ್ರೀ ಕೃಷ್ಣನು ಕರ್ಣನ ಮನವೊಲಿಸುತ್ತಾ ಹೇ ಕರ್ಣ! ನಾನೆಂದು ನಿನ್ನ ಕೆಟ್ಟದನ್ನು ಬಯಸುವವನಲ್ಲ ಎಂಬುದಾಗಿ ಹೇಳುತ್ತಾನೆ.

ವಿಶೇಷತೆ: ಶ್ರೀಕೃಷ್ಣನ ಮನವೊಲಿಸುವ ರೀತಿಯನ್ನು ನಡುಗನ್ನಡ ಭಾಷೆಯಲ್ಲಿ ಕವಿ ವಿವರಿಸಿದ್ದಾನೆ.

5) “ಮಾರಿಗೌತಣವಾಯ್ತು ನಾಳಿನ ಭಾರತವು”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕುಮಾರವ್ಯಾಸನು’ ರಚಿಸಿರುವ “ಕೌರವೇಂದ್ರನ ಕೊಂದೆ ನೀನು” ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಕರ್ಣಾಟಕ ಭಾರತ ಕಥಾ ಮಂಜರಿ” ಮಹಾಕಾವ್ಯದ ಉದ್ಯೋಗಪರ್ವದಿಂದ ಆರಿಸಲಾಗಿದೆ.

ಸಂದರ್ಭ: ಪ್ರಸ್ತುತ ಈ ವಾಕ್ಯವನ್ನು ಕರ್ಣನು, ತನ್ನ ವಂಶದ ಬಗ್ಗೆ ತಿಳಿದಮೇಲೋ ತನ್ನ ದೃಢ ನಿಶ್ಚಯವನ್ನು ತಿಳಿಸುತ್ತಾ ಈ ವಾಕ್ಯವನ್ನು ಹೇಳುತ್ತಾನೆ.

ವಿವರಣೆ: ಮುಂದೆ ನಡೆಯುವ ಮಹಾಭಾರತದ ಯುದ್ದದಲ್ಲಿ ಮಾರಿಗೆ ಔತಣ ಎಂದರೆ ಯುದ್ಧಭೂಮಿಯಲ್ಲಿ ಕೌರವನ ಪಕ್ಷದಿಂದ ಹೋರಾಡಿ ದೇವಿಗೆ ಬಲಿ ಕೊಡುವೆ ಎಂಬುದಾಗಿ ಕರ್ಣನು ದೃಢ ಮನಸ್ಸಿನಿಂದ ಹೇಳುತ್ತಾನೆ.

ವಿಶೇಷತೆ: ಕರ್ಣನ ದೃಢ ನಿಶ್ಚಯ ಈ ನಡುಗನ್ನಡದ ಭಾಷೆಯಲ್ಲಿ ಮೂಡಿ ಬಂದಿದೆ.

1) ಕರ್ಣಾಟಭಾರತ ಕಥಾಮಂಜರಿಯನ್ನು _________ ರಚಿಸಿದನು.

2) ಗದುಗಿನ ಭಾರತವು _________ ಷಟ್ಟದಿಯಲ್ಲಿ ರಚಿತವಾಗಿದೆ.

3) ಅಶ್ವಿನೀ ದೇವತೆಗಳ ವರಬಲದಿಂದ ________ ಜನಿಸಿದರು.

4) ಕರ್ಣನು ________ ಅನುಗ್ರಹದಿಂದ ಜನಿಸಿದನು.

5) ಗದುಗಿನ ಸಮೀಪದ __________ ಕುಮಾರವ್ಯಾಸನು ಹುಟ್ಟಿದ ಸ್ಥಳ.

ಉತ್ತರ:

1) ಕುಮಾರವ್ಯಾಸನು

2) ಭಾಮಿನಿ,

3) ನಕುಲ-ಸಹದೇವ

4) ಸೂರ್ಯನ,

5) ಕೋಳಿವಾಡ.

ಮಾರಿಗೌತಣವಾಯ್ತು ನಾಳಿನ ಭಾರತವು.

ಮಾರಿಗೌತಣ – ರೂಪಕಲಂಕಾರ

ಭಾರತವನ್ನು ಮಾರಿಗೌತಣಕ್ಕೆ ಹೋಲಿಸಲಾಗಿದೆ. ಆದ್ದರಿಂದ ರೂಪಕಲಂಕಾರ.

ಇನತನೂಜ.

  1. ಇನ + ತನುಜ = ಇನತನೂಜ = ಕರ್ಮಧಾರೆಯ ಸಮಾಸ.
  1. ದನುಜರಿಪು = ದನುಜ + ರಿಪು = ಕರ್ಮಧಾರೆಯ ಸಮಾಸ.
  2. ಮರ ಎಂಬ ರಾಕ್ಷಸನನ್ನು ಕೊಂದವನು – ಕೃಷ್ಣ = ಬಹುವೀಹಿ ಸಮಾಸ.
  3. ಮೇದಿನೀಪತಿ = ಮೇದಿನಿ + ಪತಿ = ತತ್ಪುರುಷ ಸಮಾಸ.
  1. ಕೈಯಾನು = ಕೈ + ಅನ್ನು = ತತ್ಪುರುಷ ಸಮಾಸ.
  2. ಮಾದ್ರಮಾಗದಯಾದವರು = ಮಾದ್ರ + ಮಗಧ + ಯಾದವರು = ದ್ವಂದ್ವ ಸಮಾಸ.
  3. ಹೊಗೆದೋರು = ಹೊಗೆಯನ್ನು + ತೋರು = ತತ್ಪುರುಷ ಸಮಾಸ.
  1. ರಾಜೀವಸಖ = ರಾಜೀವ + ಸಖ = ಕರ್ಮಧಾರೆಯಸಮಾಸ.

-U — -U —

ಏನು ಹೇಳೈ ಕರ್ಣ ಚಿತ್ತ

-U -UU UUU —

ಗ್ಲಾನಿ ಯಾವುದು ಮನರೆ ಕುಂತೀ

-U UUUU -U -UU -U -UU-

ಸೂನು ಗಳಬೆಸ ಕೈಸಿಕೊಂಬುದು ಸೇರ ದೇನಿನ ಗೆ ಭಾಮಿನಿಷಟ್ಪದಿ

  1. ತನುಜ : ಮಗ : : ಸಖ : ಗೆಳೆಯ (ಮಿತ್ರ)
  2. ಯುದ್ಧ : ಜುದ್ದ : : ಪ್ರಸಾದ : ಹಸಾದ
  3. ಭೇದವಿಲ್ಲ : ಆಗಮಸಂಧಿ : : ನಿಮ್ಮಡಿಗಳು : ಸವರ್ಣದೀರ್ಘ
  4. ಕಂದ : ನಾಲ್ಕು ಸಾಲು : : ಷಟ್ಟದಿ : ಆರು ಸಾಲು

ಉತ್ತರ:

1) ಗೆಳೆಯ

2) ಹಸಾದ

3) ಸುವರ್ಣದೀರ್ಘ

4) ಆರು ಸಾಲು

ಅ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

1) ಕೊರಳ ಸೆರೆ ಹಿಗ್ಗಿದವು “ದೃಗುಜಲ

ಉರವಣಿಸಿ ಕಡು ನೊಂದನಕಟಾ

ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ ॥

ಹರಿಯ ಹಗೆ ಹೊಗೆದೋರದುರುಹದೆ

ಬರಿದೆ ಹೋಹುದೆ ತನ್ನ ವಂಶವ

ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ॥

1) ಕೊರಳ ಸೆರೆ ಹಿಗ್ಗಿದವು ಗುಜಲ

ಉರವಣಿಸಿ ಕಡು ನೊಂದನಕಟಾ

ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ ॥

ಹರಿಯ ಹಗೆ ಹೊಗೆದೋರದುರುಹದೆ

ಬರಿದೆ ಹೋಹುದೆ ತನ್ನ ವಂಶವ

ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ॥

2) ಮಾರಿಗೌತಣವಾಯ್ತು ನಾಳಿನ

ಭಾರತವು ಚತುರಂಗ ಬಲದಲಿ

ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು ॥

ತೀರಿಸಿಯೆ ಪತಿಯವಸರಕ್ಕೆ ಶ

ರೀರವನು ನೂಕುವೆನು ನಿನ್ನಯ

ವೀರರೈವರ ನೋಯಿಸೆನು ರಾಜೀವಸಖನಾಣೆ ॥

ಮರುಳು ಮಾಧವ ಮಹಿಯ ರಾಜ್ಯದ

ಸಿರಿಗೆ ಸೋಲುವವನಲ್ಲ ಕೌಂತೇ

ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ |

ಹೊರೆದ ದಾತಾರಂಗೆ ಹಗೆವರ

ಶಿರವನರಿದೊಪ್ಪಿಸುವೆನೆಂಬೀ

ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ॥

ಪ್ರಶ್ನೆಗಳು :

1. ಕರ್ಣನು ಕೃಷ್ಣನಿಗೆ ಯಾವುದಕ್ಕೆ ಸೋಲುವುದಿಲ್ಲ ಎನ್ನುತ್ತನೆ ?

ಕರ್ಣನು ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ.

2. ಕರ್ಣನು ತನಗೆ ಯಾವುದರಲ್ಲಿ ಮನಸ್ಸಿಲ್ಲವೆಂದು ಹೇಳೆತ್ತಾನೆ?

ಕೌಂತೇಯರು ಹಾಗೂ ಸುಯೋಧನರಿಂದ ಸೇವೆ ಮಾಡಿಸಿಕೊಳ್ಳುವಲ್ಲಿ ತನಗೆ ಮನಸ್ಸಿಲ್ಲವೆಂದು ಹೇಳುತ್ತಾನೆ.

3. ಕರ್ಣನು ಕೃಷ್ಣನನ್ನು ಕುರಿತು ಕೌರವೇಂದ್ರನನ್ನು ಕೊಂದೆ ಎನ್ನಲು ಕಾರಣವೇನು?

ಕರ್ಣನು ತನ್ನನ್ನು ಪೋಷಿಸಿದ ಒಡೆಯನಿಗೆ ಶತ್ರುಗಳ ಶಿರಸ್ಸನ್ನು ಕತ್ತರಿಸಿ ಒಪ್ಪಿಸುತ್ತೇನೆಂಬ ಉತ್ಸಾಹದಲ್ಲಿದ್ದನು. ಆದರೆ ಕೃಷ್ಣನು ಕರ್ಣನ ಜನ್ಮವೃತ್ತಾಂತವನ್ನು ತಿಳಿಸಿ ಕರ್ಣನ ಉತ್ಸಾಹಕ್ಕೆ ತಣ್ಣೀರೆರಚಿದ್ದಾನೆ. ಆದ್ದರಿಂದ ಕರ್ಣನು ಕೃಷ್ಣನನ್ನು ಕೌರವನ ಕೊಂದೆ ಎನ್ನುತ್ತಾನೆ.

4. ಈ ಪದ್ಯದಲ್ಲಿ ಕರ್ಣನ ಯಾವ ಗುಣವನ್ನು ಮೆಚ್ಚುತ್ತೀರಿ ?

ಕರ್ಣನ ಸ್ವಾಮಿನಿಷ್ಠೆ ದಾತಾರನ ಮೇಲಿಟ್ಟಿರುವ ಪ್ರೀತಿಗೌರವವನ್ನು ಮೆಚ್ಚುತ್ತೇವೆ.

(ವಿದ್ಯಾರ್ಥಿಯು ಪದ್ಯದಲ್ಲಿನ ಕರ್ಣನ ಯಾವುದೇ ಒಂದು ಗುಣವನ್ನು ಮೆಚ್ಚಿ ಬರೆಯಬಹುದು)

Leave a Reply

Your email address will not be published. Required fields are marked *