10th Class Dudime Mattu Artika Jeevana Social Science Notes Question Answer Mcq Pdf Download in Kannada Medium Karnataka State Syllabus 2025 10ನೇ ತರಗತಿ ದುಡಿಮೆ ಮತ್ತು ಆರ್ಥಿಕ ಜೀವನ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, ದುಡಿಮೆ ಮತ್ತು ಆರ್ಥಿಕ ಜೀವನ ಪ್ರಶ್ನೆ ಉತ್ತರ, 10th Std Dudime Mattu Artika Jeevana Notes in kannada, SSLC Social Science Chapter 9 Question Answer, kseeb solutions for class 10 social science kannada medium Lesson 9 Notes Key Answers, state syllabus class 10 social science 9th Lesson Question Answer.

10ನೇ ತರಗತಿ ದುಡಿಮೆ ಮತ್ತು ಆರ್ಥಿಕ ಜೀವನ ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ
1.ಶ್ರಮ ವಿಭಜನೆಯು ವಿಶೇಷ ಪರಿಣತಿ ಗೆ ಕಾರಣವಾಗುವುದು.
2. ವಿಶೇಷ ತರಬೇತಿ ಹೊಂದಿರದ ಕಾರ್ಮಿಕರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯುತ್ತಾರೆ.
3. ವಿಶೇಷ ತರಬೇತಿ, ಪರಿಣತಿ ಹೊಂದಿದ ಕಾರ್ಮಿಕರನ್ನು ಸಂಘಟಿತ ಕೆಲಸಗಾರರು ಎಂದು ಕರೆಯುತ್ತಾರೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.ಶ್ರಮ ವಿಭಜನೆ ಎಂದರೇನು?
ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣತಿ, ಕೌಶಲ್ಯ ಹಾಗೂ ಲಿಂಗ ಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಶ್ರಮ ವಿಭಜನೆ ಎನ್ನಲಾಗಿದೆ.
2. ಕೂಲಿ ಸಹಿತ ದುಡಿಮೆ ಎಂದರೇನು?
ಕೂಲಿ, ಸಂಬಳ ಅಥವಾ ಇನ್ನಾವುದೇ ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆಯ ಚಟುವಟಿಕೆಯು ಕೂಲಿ ಸಹಿತ ದುಡಿಮೆ ಎನ್ನಿಸಿಕೊಳುವುದು.
3. ನಿರುದ್ಯೋಗ ಎಂದರೇನು?
ನಿರುದ್ಯೋಗ ಎಂದರೆ ದುಡಿಯುವ ವಯಸ್ಸು, ಸಾಮರ್ಥ್ಯ, ಆಸಕ್ತಿ ಇದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ಎಂದರ್ಥ.
4. ನಿರುದ್ಯೋಗಕ್ಕೆ ಕಾರಣಗಳಾವುವು?
ಅತಿಯಾದ ಜನಸಂಖ್ಯೆ, ಯಾಂತ್ರೀಕರಣ, ಅತಿಯಾದ ಶ್ರಮವಿಭಜನೆ, ಸಾಮಾಜಿಕ ಅಸಮಾನತೆ, ಬಂಡವಾಳದ ಕೊರತೆ, ಅನಕ್ಷರತೆ ಮುಂತಾದವುಗಳು ನಿರುದ್ಯೋಗಕ್ಕೆ ಕಾರಣವಾಗಿವೆ.
5. ನಿರುದ್ಯೋಗ ಪರಿಣಾಮಗಳಾವುವು?
ನಿರುದ್ಯೋಗವು ಬಡತನ, ಅನಾರೋಗ್ಯ, ಭ್ರಷ್ಟಾಚಾರ, ಕೌಟುಂಬಿಕ ವಿಘಟನೆ, ಮೋಸ, ವಂಚನೆ, ಕಳ್ಳತನ, ವ್ಯಭಿಚಾರ ಮುಂತಾದ ಪರಿಣಾಮಗಳಿಗೆ ಕಾರಣವಾಗುತ್ತದೆ.
III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ:
1. ದುಡಿಮೆಯಲ್ಲಿನ ತಾರತಮ್ಯತೆಯ ಸ್ವರೂಪವನ್ನು ವಿವರಿಸಿ.
ಸ್ತ್ರೀ-ಪುರುಷರೀರ್ವರೂ ದುಡಿಮೆಯಲ್ಲಿ ತೊಡಗಿರಬಹುದಾದರೂ ಅವರ ಉದ್ಯೋಗಗಳು ಒಂದೇ ಸಮನಾಗಿಲ್ಲ. ಭಾರತವನ್ನೊಳಗೊಂಡಂತೆ ಜಗತ್ತಿನ ದೇಶಗಳಲ್ಲಿ ಪುರುಷರಿಗೆ ಉತ್ತಮ ಸ್ವರೂಪದ ಉದ್ಯೋಗಗಳನ್ನು ನೀಡಲಾಗುತ್ತಿದೆ. ಹಾಗೆಯೇ ಹೆಚ್ಚಿನ ಹೊಣೆಗಾರಿಕೆ ಮತ್ತು ಸಂಬಳವನ್ನು ನೀಡಲಾಗುತ್ತಿದೆ. ಆದರೆ ಸ್ತ್ರೀಯರಿಗೆ ಕಡಿಮೆ ಮಟ್ಟದ ಉದ್ಯೋಗ, ಹೊಣೆಗಾರಿಕೆ ಮತ್ತು ಸಂಬಳವನ್ನು ನೀಡಲಾಗುತ್ತಿದೆ. ಸ್ತ್ರೀ-ಪುರುಷರ ದುಡಿಮೆಗೆ ಸಂಬಂಧಿಸಿದಂತೆ ಇನ್ನೊಂದು ಬಗೆಯ ತಾರತಮ್ಯವಿದೆ. ಉದ್ಯೋಗಾವಕಾಶಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಸ್ತ್ರೀಯರು ಬಹು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ನೀಡಲಾಗುವ ಸಂಬಳದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಕೃಷಿಕ ಸಮಾಜವೂ ಕೂಡ ಲಿಂಗ, ವಯಸ್ಸು, ಸಾಮರ್ಥ್ಯಗಳ ಆಧಾರದ ಮೇಲೆ ಕೆಲಸಕಾರ್ಯಗಳನ್ನು ಅಸಮಾನ ರೀತಿಯಲ್ಲಿ ಹಂಚಿಕೆ ಮಾಡುತ್ತದೆ. ಹಾಗೂ ಕೂಲಿ ನೀಡುವುದರಲ್ಲಿ ಇಲ್ಲಿಯೂ ತಾರತಮ್ಯತೆಯಿದೆ.
2. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕ್ರಮಗಳಾವುವು? ವಿವರಿಸಿ.
ಜನಸಂಖ್ಯಾ ನಿಯಂತ್ರಣ ಕ್ರಮಗಳು, ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ, ಕೃಷಿ ಕ್ಷೇತ್ರದ ಅಭಿವೃದ್ಧಿ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ, ಶೈಕ್ಷಣಿಕ ಸುಧಾರಣಾ ಯೋಜನೆಗಳು, ಪಂಚವಾರ್ಷಿಕ ಯೋಜನೆಗಳು, ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಉದ್ಯೋಗ ಖಾತರಿ ಯೋಜನೆ, ಇತ್ಯಾದಿ.
3. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸಗಳೇನು?
- ಸಂಘಟಿತ ಕೆಲಸಗಾರನ ಕಾರ್ಯದ ಬಗ್ಗೆ ನಿಶ್ಚಿತ ನಿಯಮಗಳಿರುತ್ತವೆ.
- ಸಂಘಟಿತ ಕೆಲಸಗಾರರಿಗೆ ವಿಶೇಷ ಪರಿಣತಿ, ತರಬೇತಿ, ಪ್ರತಿಭೆ, ಅನುಭವ ಮತ್ತು ಶೈಕ್ಷಣಿಕ ಅರ್ಹತೆಗಳಿಗೆ ಅವಕಾಶಗಳಿರುತ್ತವೆ.
- ಇವರ ಕೆಲಸದ ಎಲ್ಲ ವ್ಯವಹಾರಗಳು ಬರಹ ರೂಪದಲ್ಲಿರುತ್ತವೆ.
- ಇವರಿಗೆ ನಿಗದಿತ ವೇತನ, ಭತ್ಯೆ, ವಿರಾಮ ವೇತನ, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಲ್ಲದೆ ವೈದ್ಯಕೀಯ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತದೆ.
- ಇವರು ದಿನವೊಂದರಲ್ಲಿ ನಿಗದಿತ ಸಮಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುವವರಾಗಿರುತ್ತಾರೆ.
- ಅಸಂಘಟಿತ ಕೆಲಸಗಾರರು ಯಾವುದೇ ನಿರ್ದಿಷ್ಟ ಕಾಯ್ದೆ-ಕಾನೂನು ಅಥವಾ ಸಂಘಟನೆಯ ನಿಯಂತ್ರಣಕ್ಕೆ ಒಳಪಡದೆ ಜೀವನ ನಿರ್ವಹಣೆಗಾಗಿ ತಮ್ಮ ಪಾಡಿಗೆ ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಂಡು ದಿನಗೂಲಿ ಅಥವಾ ಇನ್ನಿತರ ರೂಪದ ಆರ್ಥಿಕ ಪ್ರತಿಫಲ ಪಡೆಯುವವರಾಗಿರುತ್ತಾರೆ.
- ಇವರ ಕ್ಷೇತ್ರವು ಸರ್ಕಾರದ ನಿಯಂತ್ರಣಕ್ಕೊಳಪಡುವುದಿಲ್ಲ.
- ಮನೆಕೆಲಸಗಾರರು, ಗೃಹ ನಿರ್ಮಾಣದ ಕೂಲಿಕಾರರು, ಕೃಷಿ ಕಾರ್ಮಿಕರು, ಅಲ್ಲದೆ ತಾವೇ ಸ್ವತಃ ಬೀದಿಯಲ್ಲಿ ತರಕಾರಿ ಮಾರಾಟ, ವಸ್ತುಗಳ ಮಾರಾಟ, ವಾಹನಗಳ ರಿಪೇರಿ ಮಾಡುವವರು, ತಳ್ಳುವ ಗಾಡಿಗಳ ಮೇಲೆ, ತಲೆಯ ಮೇಲೆ ತರಕಾರಿ ಮತ್ತು ಇತರ ವಸ್ತುಗಳನ್ನು ಹೊತ್ತು ಮಾರಾಟ ಮಾಡುವವರ ಕ್ಷೇತ್ರಗಳಲ್ಲಿ ಅಸಂಘಟಿತ ಕೆಲಸಗಾರರನ್ನು ಗುರುತಿಸಬಹುದು.
ಹೆಚ್ಚುವರಿ ಪ್ರಶ್ನೆಗಳು:
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ:
- ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಮಾಹಿತಿ ಮತ್ತು ತಂತ್ರಜ್ಞಾನ ಕಂಡು ಬಂದಿದೆ.
- ವಾಹನಗಳ ರಿಪೇರಿ ಮಾಡುವುದು ಕೂಲಿ ಸಹಿತ ದುಡಿಮೆ ಎನ್ನಿಸಿಕೊಳ್ಳುವುದು.
- ಕೇಂದ್ರ ಸರ್ಕಾರವು ಸಮಾನ ವೇತನ ಕಾಯ್ದೆಯನ್ನು 1976 ರಲ್ಲಿ ಜಾರಿಗೆ ತಂದಿದೆ.
II. ಈ ಪ್ರಶ್ನೆಗಳಿಗೆ ಉತ್ತರಿಸಿ:
1.ಕೂಲಿ ರಹಿತ ದುಡಿಮೆ ಎಂದರೇನು? ಉದಾಹರಣೆ ಕೊಡಿ.
ಮನ:ಸಂತೋಷದ ದೃಷ್ಟಿಯಿಂದ ಮಾನವನು ತೊಡಗುವ ಕ್ರಿಯೆಗಳೇ ಕೂಲಿ ರಹಿತ ದುಡಿಮೆ.
ಉದಾ: ಕಲಾಕಾರನೊಬ್ಬನು ಆತ್ಮ ಸಂತೋಷಕ್ಕಾಗಿ ಚಿತ್ರವೊಂದನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿರುವುದು.
2. ನಿರುದ್ಯೋಗ ಮತ್ತು ನಿರುದ್ಯೋಗಿಗಳಿಗಿರುವ ವ್ಯತ್ಯಾಸ ತಿಳಿಸಿ.
ದುಡಿಯುವ ವಯಸ್ಸು, ಸಾಮರ್ಥ್ಯ, ಆಸಕ್ತಿ ಇದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ನಿರುದ್ಯೋಗ ಎನ್ನುತ್ತಾರೆ. ಕೆಲಸ ಮಾಡಲು ಇಷ್ಟವಿದ್ದು, ಮಡಿಯುವ ವಯಸ್ಸಿನಲ್ಲಿರುವ ಪುರುಷ ಹಾಗೂ ಸ್ತ್ರೀಯರು ಉದ್ಯೋಗ ಪಡೆಯುವಲ್ಲಿ ವಂಚಿತರಾದರೆ ಅವರನ್ನು ನಿರುದ್ಯೋಗಿಗಳು
ಮುಖ್ಯಾಂಶಗಳು
- ದುಡಿಮೆ ಎಂಬುದು ಉದ್ದೇಶವೊಂದರ ಸಾಧನೆಗಾಗಿ ನಡೆಸಲಾಗುವ ಕಾರ್ಯ.
- ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಅಥವಾ ಪರಿಶ್ರಮದಿಂದ ಆತನಿಗೆ ಆರ್ಥಿಕ ಅಥವಾ ಭೌತಿಕ ರೂಪದ ಪ್ರತಿಫಲ ಸಿಗುವುದಿದ್ದರೆ ಅದನ್ನು ದುಡಿಮೆ ಎನ್ನಬಹುದು.
- ದುಡಿಮೆಯು ನಮ್ಮ ಜೀವನದ ಮುಖ್ಯ ಅಂಗವಾಗಿದೆ.
- ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣತಿ, ಕೌಶಲ್ಯ ಹಾಗೂ ಲಿಂಗ ಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಶ್ರಮ ವಿಭಜನೆ ಎನ್ನಲಾಗಿದೆ.
- ಶ್ರಮ ವಿಭಜನೆಯು ವಿಶೇಷ ಪರಿಣತಿಗೆ ಕಾರಣವಾಗುವುದು.
- ವಿಶೇಷ ಪರಿಣತಿ ಎಂದರೆ, ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದು ಎಂದರ್ಥ.
- ಶ್ರಮ ವಿಭಜನೆಯು ವಿಶೇಷ ಪರಿಣತಿಗೆ ಕಾರಣವಾಗುವುದು.
- ವಿಶೇಷ ಪರಿಣತಿ ಎಂದರೆ, ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದು ಎಂದರ್ಥ.
- ದುಡಿಮೆಯಲ್ಲಿ ಕೂಲಿ ಸಹಿತ ಮತ್ತು ಕೂಲಿರಹಿತ ದುಡಿಮೆ ಎಂಬ ಎರಡು ವಿಧಗಳಿವೆ.
- ಕೂಲಿ, ಸಂಬಳ ಅಥವಾ ಇನ್ನಾವುದೇ ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆಯ ಚಟುವಟಿಕೆ ಕೂಲಿ ಸಹಿತ ದುಡಿಮೆ.
- ಮನ:ಸಂತೋಷದ ದೃಷ್ಟಿಯಿಂದ ಮಾನವನು ತೊಡಗುವ ಕ್ರಿಯೆಗಳೇ ಕೂಲಿ ರಹಿತ ದುಡಿಮೆ ಎನಿಸಿದೆ.
- ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಸ್ತ್ರೀ-ಪುರುಷರಲ್ಲಿ ಇರುವ ತಾರತಮ್ಯಗಳನ್ನು ತೊಡೆದು ಹಾಕಲು ಕೇಂದ್ರ ಸರ್ಕಾರವು ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದಿದೆ.
- ಭಾರತದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆಯೂ ಒಂದು.
- ನಿರುದ್ಯೋಗ ಎಂದರೆ, ದುಡಿಯುವ ವಯಸ್ಸು, ಸಾಮರ್ಥ್ಯ, ಆಸಕ್ತಿ, ಅರ್ಹತೆ ಇದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ಎಂದರ್ಥ.
- ಕೆಲಸ ಮಾಡಲು ಇಷ್ಟವಿದ್ದು, ದುಡಿಯುವ ವಯಸ್ಸಿನಲ್ಲಿರುವ ಪುರುಷ ಹಾಗೂ ಸ್ತ್ರೀಯರು ಉದ್ಯೋಗ ಪಡೆಯುವಲ್ಲಿ ವಂಚಿತರಾದರೆ ಅವರನ್ನು ‘ನಿರುದ್ಯೋಗಿಗಳು ಎನ್ನುತ್ತಾರೆ.
- ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ಹಮ್ಮಿಕೊಂಡಿದೆ.
- ಕೆಲಸಗಾರರಲ್ಲಿ ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರೆಂಬ ಎರಡು ವಿಧಗಳಿದ್ದು ಇವರ ನಡುವೆ ಅನೇಕ ವ್ಯತ್ಯಾಸಗಳಿವೆ.
- ಕಾನೂನು, ಕಾಯ್ದೆಗಳಿಗೆ ಬದ್ಧವಾದಂತಹ ನಿಗದಿತ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಸಂಘಟಿತ ಕೆಲಸಗಾರರು ಎಂದು ಕರೆಯುತ್ತಾರೆ.
- ಯಾವುದೇ ನಿರ್ದಿಷ್ಟ ಕಾಯ್ದೆ-ಕಾನೂನು ಅಥವಾ ಸಂಘಟನೆಯ ನಿಯಂತ್ರಣಕ್ಕೆ ಒಳಪಡದೆ ತಮ್ಮ ಪಾಡಿಗೆ ವಿವಿಧ ಕಸುಬುಗಳಲ್ಲಿ ತೊಡ ಗಿಸಿಕೊಂಡು ದಿನಗೂಲಿ ಅಥವಾ ಇನ್ನಿತರ ರೂಪದ ಆರ್ಥಿಕ ಪ್ರತಿಫಲ ಪಡೆಯುವ ಶ್ರಮಿಕರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯಬಹುದು.
ಇತರೆ ವಿಷಯಗಳು :
10ನೇ ತರಗತಿ ಸಾಮಾಜಿಕ ಸ್ತರವಿನ್ಯಾಸ ಪಾಠದ ನೋಟ್ಸ್
ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್