10th Standard Bharatada Pramuka Kaigarikegalu Social Science Notes Question Answer Extract Mcq Pdf Download in Kannada Medium Karnataka, 2025 10ನೇ ತರಗತಿ ಭಾರತದ ಪ್ರಮುಖ ಕೈಗಾರಿಕೆಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು pdf, 10th ಸಮಾಜ ವಿಜ್ಞಾನ ನೋಟ್ಸ್, 10th class Social all Chapter Notes, kseeb solutions for class 10 social science kannada medium chapter 28 Notes,10th Class Bharatada Pramuka Kaigarikegalu Lesson Question Answer in kannada Medium Karnataka, bharatada pramuka kaigarikegalu in kannada, 10th bharatada pramuka kaigarikegalu question answer, 10th social science chapter 28 notes pdf, 10th ಭಾರತದ ಪ್ರಮುಖ ಕೈಗಾರಿಕೆಗಳು notes.

10ನೇ ತರಗತಿ ಭಾರತದ ಪ್ರಮುಖ ಕೈಗಾರಿಕೆಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
1.ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಳದ ಕುಲ್ಟಿ ఎంబల్లి ಸ್ಥಾಪಿತಗೊಂಡಿತು.
2. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು ಜವಳಿ ಕೈಗಾರಿಕೆ ಎಂದು ಕರೆಯುವರು.
3. ಭಾರತದ ಮೊದಲ ಕಾಗದದ ಕೈಗಾರಿಕೆಯು ಹೂಗ್ಲಿ ನದಿಯ ದಡದಲ್ಲಿ ಸ್ಥಾಪನೆಗೊಂಡಿತು.
4. ಇಸ್ರೋ ಸ್ಥಾಪನೆಯಾದ ವರ್ಷ 1969
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
1.ಭಾರತದ ಪ್ರಮುಖ ಕೈಗಾರಿಕಾ ವಲಯಗಳ ಪಟ್ಟಿ ತಯಾರಿಸಿ.
- ಹೂಗ್ಲಿ ಪ್ರದೇಶ
- ಮುಂಬೈ-ಪೂನಾ ಪ್ರದೇಶ
- ಅಹಮದಾಬಾದ್-ವಡೋದರಾ ಪ್ರದೇಶ
- ದಾಮೋದರ್ ಕಣಿವೆ ಪ್ರದೇಶ
- ದಕ್ಷಿಣ ಕೈಗಾರಿಕಾ ಪ್ರದೇಶ
- ನ್ಯಾಷನಲ್ ಕ್ಯಾಪಿಟಲ್ ಪ್ರದೇಶ
- ವಿಶಾಖಪಟ್ಟಣ-ಗುಂಟೂರು ಪ್ರದೇಶ
- ಕೊಲ್ಲಂ-ತಿರುವನಂತಪುರ ಪ್ರದೇಶ.
2.ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವುವು?
- ಟಾಟಾ ಐರನ್ ಮತ್ತು ಸ್ಟೀಲ್ ಇಂಡಸ್ಟ್ರೀಸ್, ಜಮ್ಶೆಡ್‌ಪುರ (ಜಾರ್ಖಂಡ್).
- ಇಂಡಿಯನ್ ಐರನ್ ಮತ್ತು ಸ್ಟೀಲ್ ಕಂಪನಿ, ಬರ್ನಪುರ-ಪಶ್ಚಿಮಬಂಗಾಳ.
- ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಕಂಪನಿ, ಭದ್ರಾವತಿ, ಕರ್ನಾಟಕ,
- ಬಿಲಾಯಿ ಐರನ್ ಮತ್ತು ಸ್ಟೀಲ್ ಕಂಪನಿ, ಬಿಲಾಯಿ, ಛತ್ತೀಸ್ ಘಡ್
- ಐರನ್ ಮತ್ತು ಸ್ಟೀಲ್ ಕಂಪನಿ, ರೂರ್ಕೆಲ ಒರಿಸ್ಸಾ.
- ಐರನ್ ಮತ್ತು ಸ್ಟೀಲ್ ಕಂಪನಿ, ದುರ್ಗಾಪುರ-ಪಶ್ಚಿಮ ಬಂಗಾಳ.
3. ಗಂಗಾನದಿ ಬಯಲು ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಯು ಹೆಚ್ಚು ಕೇಂದ್ರೀಕೃತವಾಗಿದೆ. ಏಕೆ?
ಗಂಗಾನದಿಯ ಬಯಲು ಪ್ರದೇಶದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಸಕ್ಕರೆ ಕೈಗಾರಿಕೆಯು ಅಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ.
4. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
ಕಚ್ಚಾವಸ್ತುಗಳು, ಶಕ್ತಿ ಸಂಪನ್ಮೂಲಗಳು, ಮಾರುಕಟ್ಟೆ, ಸಂಚಾರ ಸೌಲಭ್ಯ, ಕಾರ್ಮಿಕರ ಪೂರೈಕೆ, ಬಂದರುಗಳ ಸೌಲಭ್ಯ ಮುಂತಾದ ಅಂಶಗಳು ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುತ್ತವೆ.
5. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು?
ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು, ಹುಲ್ಲು ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು.
6. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.
ಮಹಾರಾಷ್ಟ್ರ, ಗುಜರಾತ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು ಬಹುಪಾಲು ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿವೆ. ಇದಲ್ಲದೆ ನಾಗಪುರ, ಸೊಲ್ಲಾಪುರ, ಪಶ್ಚಿಮ ಬಂಗಾಳ, ಕೊಲ್ಕತ್ತಾ, ಉತ್ತರಪ್ರದೇಶದ ಕಾನ್ಸುರ, ಮಧ್ಯಪ್ರದೇಶದ ಇಂದೋರ್, ಗುಜರಾತಿನ ಸೂರತ್, ತಮಿಳುನಾಡಿನ ಕೊಯಿಮತ್ತೂರ, ಸೇಲಂ, ಚೆನ್ನೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರಗಳಾಗಿವೆ.
7. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು?
ಜೈವಿಕ ತಂತ್ರಜ್ಞಾನದಿಂದ ವ್ಯವಸಾಯದಲ್ಲಿ ದೊಡ್ಡ ಕ್ರಾಂತಿಯೇ ಜರುಗಲು ಪ್ರಾರಂಭಿಸಿತು. ಸಸ್ಯ, ಪ್ರಾಣಿ ಮೊದಲಾದವುಗಳಿಗೆ ಕಸಿ ಮಾಡುವಿಕೆಯಿಂದ ಹೊಸ ಹೊಸ ಬೀಜ, ಔಷಧ, ರಸಗೊಬ್ಬರ, ಜೈವಿಕ ಗೊಬ್ಬರ ಬಳಕೆಯಿಂದ ಸೋಯಾ ಅವರೆ, ಮೆಕ್ಕೆಜೋಳ, ಹತ್ತಿ, ಮೊದಲಾದ ಸಮ್ಮಿಶ್ರ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
8. ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಆದ ಬದಲಾವಣೆಗಳೇನು?
ಸುಧಾರಿತ ತಂತ್ರಜ್ಞಾನದ ಬಳಕೆಯಿಂದಾಗಿ ಟೆಲಿಫೋನ್, ಅಂತರ್‌ಜಾಲ ಸಂಪರ್ಕ, ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಫೋನ್, ಯುದ್ಧ ಸಾಮಗ್ರಿಗಳ ತಯಾರಿಕೆ, ಅಣುಬಾಂಬ್ ತಯಾರಿಕೆ, ಉಪಗ್ರಹ ಉಡಾವಣೆ, ಚಂದ್ರನ ಮೇಲೆ ಪಾದಾರ್ಪಣೆ, ಸರಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ-ಆಡಳಿತ, ಜಾಗತಿಕ ಆರ್ಥಿಕ ವ್ಯವಸ್ಥೆ ಸುಧಾರಣೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳಾಗಿವೆ.
9. ಇಸ್ರೋದ ಪ್ರಮುಖ ಸಾಧನೆಗಳು ಯಾವುವು?
- ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿ.
- ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಮೊದಲ ರಾಷ್ಟ್ರ ಭಾರತ, ಈ ಸಾಧನೆಯ ಮೂಲ ಕರ್ತೃ ಇಸ್ರೋ.
- ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶ ಭಾರತ. ಈ ಸಾಧನೆಯ ಹಿಂದಿನ ಶಕ್ತಿ ಇಸ್ರೋ ಸಂಸ್ಥೆಯಾಗಿದೆ.
III. ಹೊಂದಿಸಿ ಬರೆಯಿರಿ:
ಕ್ರಮ ಸಂಖ್ಯೆ | ಅ | ಬ | ಉತ್ತರಗಳು |
---|---|---|---|
1 | ಮುಂಬೈ | ಸಿಲಿಕಾನ್ ಕಣಿವೆ | ಭಾರತದ ಮ್ಯಾಂಚೆಸ್ಟರ್ |
2 | ಬೆಂಗಳೂರು | ಸಕ್ಕರೆ ಕೈಗಾರಿಕೆಗಳು | ಸಿಲಿಕಾನ್ ಕಣಿವೆ |
3 | ಭದ್ರಾವತಿ | ಭಾರತದ ಮ್ಯಾಂಚೆಸ್ಟರ್ | ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ |
4 | ಬೆಳಗಾವಿ ಜಿಲ್ಲೆ | ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ | ಸಕ್ಕರೆ ಕೈಗಾರಿಕೆಗಳು |
ಹೆಚ್ಚಿನ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1. ಸುದೀರ್ಘವಾದ ಇತಿಹಾಸವಿರುವ ಕೈಗಾರಿಕೆ:
ಎ) ಸಕ್ಕರೆ ಕೈಗಾರಿಕೆ
ಬಿ) ಹತ್ತಿ ಬಟ್ಟೆ ಕೈಗಾರಿಕೆ
ಸಿ) ಕಾಗದದ ಕೈಗಾರಿಕೆ
ಡಿ) ಅಲ್ಯೂಮಿನಿಯಂ ಕೈಗಾರಿಕೆ
2. 1886ರಲ್ಲಿ ಶೋಧಿಸಲ್ಪಟ್ಟ ಲೋಹ:
ಎ) ಅಲ್ಯೂಮಿನಿಯಂ
ಬಿ) ಮ್ಯಾಂಗನೀಸ್
ಸಿ) ಬಾಕ್ಸೈಟ್
ಡಿ) ಆಫ್ರಿಕ
3. ಮೂಲ ಕೈಗಾರಿಕೆ ಎಂದು ಕರೆಯಲ್ಪಡುವ ಕೈಗಾರಿಕೆ:
ಎ) ಅಲ್ಯೂಮಿನಿಯಂ ಕೈಗಾರಿಕೆ
ಬಿ) ಕಾಗದದ ಕೈಗಾರಿಕೆ
ಸಿ) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಡಿ) ಸಕ್ಕರೆ ಕೈಗಾರಿಕೆ
4. ಇಸ್ರೋದ ಪ್ರಧಾನ ಕಛೇರಿ ಇರುವುದು:
ಎ) ದೆಹಲಿ
b) ಮುಂಬೈ
ಸಿ) ಚೆನ್ನೈ
ಡಿ) ಬೆಂಗಳೂರು
II. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ:
1. ಮೈಸೂರು ರಾಜ ಸಂಸ್ಥಾನವು ದಿ ಮೈಸೂರ್ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಕೈಗಾರಿಕೆಯನ್ನು ಭದ್ರಾವತಿ ಯಲ್ಲಿ ಸ್ಥಾಪಿಸಿತು.
2. ದೇಶದ ಪ್ರಥಮ ಉಕ್ಕಿನ ಕೈಗಾರಿಕೆಯು ಕುಲ್ಟಿ ಎಂಬಲ್ಲಿ ಸ್ಥಾಪನೆಯಾಯಿತು.
3. ಇಸ್ರೋದ ಪ್ರಥಮ ಅಧ್ಯಕ್ಷರು ಡಾ. ವಿಕ್ರಮ್ ಸಾರಾಬಾಯ್
4. ಇಂದು ಕೃತಕ ಬುದ್ದಿಮತ್ತೆ ಬಳಕೆಯೊಂದಿಗೆ ಉನ್ನತ ತಂತ್ರಜ್ಞಾನವು ಹೊಸ ಮಜಲನ್ನು ಪಡೆದಿದೆ.
5. ಭಾರತವು ಉತ್ಪಾದಿಸುವ ಕಬ್ಬಿಣೇತರ ಲೋಹಗಳಲ್ಲಿ ಅಲ್ಯೂಮಿನಿಯಂ ಮುಖ್ಯವಾದುದು.
III. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1. ಕೈಗಾರಿಕಾ ವಲಯ ಎಂದರೇನು?
ಕೈಗಾರಿಕೆಗಳು ಹೆಚ್ಚು ಕೇಂದ್ರೀಕೃತವಾಗಿರುವ ಪ್ರದೇಶಗಳನ್ನು ಕೈಗಾರಿಕಾ ವಲಯಗಳೆಚಿದು ಕರೆಯುವರು.
2. ಕಾಗದ ತಯಾರಿಕೆಯಲ್ಲಿ ಬಳಸುವ ಪ್ರಮುಖ ಕಚ್ಚಾವಸ್ತುಗಳು ಯಾವುವು?
ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು, ಹುಲ್ಲು ಕಾಗದ ತಯಾರಿಕೆಯಲ್ಲಿ ಬಳಸುವ ಪ್ರಮುಖ ಕಚ್ಚಾವಸ್ತುಗಳು.
3. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆಯೆಂದು ಕರೆಯಲು ಕಾರಣಗಳೇನು?
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಯಂತ್ರೋಪಕರಣ, ರೈಲ್ವೆ, ಹಡಗು ನಿರ್ಮಾಣ, ವಿದ್ಯುತ್ ಯೋಜನೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣ, ಗೃಹ ನಿರ್ಮಾಣ ಮುಂತಾದ ಇನ್ನಿತರ ಹಲವಾರು ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಒದಗಿಸುವುದರಿಂದ ಇದನ್ನು ಮೂಲ ಕೈಗಾರಿಕೆ ಎಂದು ಕರೆಯುತ್ತಾರೆ.
4. ಕೈಗಾರಿಕೆ ಎಂದರೇನು?
ಕಚ್ಚಾವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ಉದ್ಯೋಗಗಳನ್ನು ಕೈಗಾರಿಕೆ ಎಂದು ಕರೆಯುತ್ತಾರೆ.
5. ಭಾರತ ಸರ್ಕಾರವು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕಗಳನ್ನು ಸ್ಥಾಪಿಸಲು ಕಾರಣವೇನು?
ಭಾರತ ಸರ್ಕಾರವು ಸಾಫ್ಟ್‌ವೇರ್ ಉದ್ಯಮ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ರಫ್ತನ್ನು ಉತ್ತೇಜಿಸಲು ಸಾಪ್ಟವೇರ್ ಟೆಕ್ನಾಲಜಿ ಪಾರ್ಕಗಳನ್ನು ಸ್ಥಾಪಿಸಿತು.
6. ಅಲ್ಯೂಮಿನಿಯಂ ಕೈಗಾರಿಕೆಯು ಅವಲಂಬಿಸಿರುವ ಪ್ರಮುಖ ಮೂರು ಅಂಶಗಳು ಯಾವುವು?
- ವಿದ್ಯುಚ್ಛಕ್ತಿಯ ದೊರೆಯುವಿಕೆ
- ಬಾಟ್‌ನ ಪೂರೈಕೆ
- ಇತರ ಲೋಹ ಮತ್ತು ಬಂಡವಾಳದ ಪೂರೈಕೆ.
7. ಜ್ಞಾನಾಧಾರಿತ ಕೈಗಾರಿಕೆಯೆಂದರೇನು?
ಮಾನವನ ಜ್ಞಾನವೇ ಆಧಾರವಾಗಿರುವ ಅತಿ ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯೇ ಜ್ಞಾನಾಧಾರಿತ ಕೈಗಾರಿಕೆ.
ಮುಖ್ಯಾಂಶಗಳು:
- ಮಾನವನ ಆಧುನಿಕ ಆರ್ಥಿಕ ಚಟುವಟಿಕೆಗಳಲ್ಲಿ ಕೈಗಾರಿಕೆಗಳು ಅತ್ಯಂತ ಮಹತ್ವದಾಗಿದ್ದು, ಯಾವುದೇ ದೇಶದ ಆರ್ಥಿಕ ಪ್ರಗತಿಯನ್ನು ನಿರ್ಧರಿಸಲು ಆ ದೇಶವು ಹೊಂದಿರುವ ಕೈಗಾರಿಯ ಅಭಿವೃದ್ಧಿಯನ್ನು ಸಹ ಪ್ರಧಾನವಾಗಿ ಪರಿಗಣಿಸಲಾಗುವುದು.
- ಸಾಮಾನ್ಯವಾಗಿ ಕಚ್ಚಾವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ಉದ್ಯೋಗಗಳನ್ನು ಕೈಗಾರಿಕೆ ಎಂದು ಕರೆಯುತ್ತಾರೆ.
- ಭಾರತದಲ್ಲಿ ಸ್ವಾತಂತ್ರ್ಯಾ ನಂತರದ ಅವಧಿಯ ಎಲ್ಲ ಪಂಚವಾರ್ಷಿಕ ಯೋಜನೆಗಳಲ್ಲಿಯೂ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಯಿತು.
- ಕಳೆದ ಐದು ದಶಕಗಳಲ್ಲಿ ಭಾರತವು ಕೈಗಾರಿಕೆ ಮತ್ತು ತಾಂತ್ರಿಕತೆಯ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಮಹತ್ವಪೂರ್ಣವಾದುದು.
- ದೇಶದ ಕೆಲವು ಭಾಗಗಳಲ್ಲಿ ಹೆಚ್ಚು ಕೈಗಾರಿಕೆಗಳು ಕೇಂದ್ರೀಕೃತವಾಗಿದ್ದು ಇಂತಹವುಗಳನ್ನು ಕೈಗಾರಿಕಾ ವಲಯಗಳೆಂದು ಕರೆಯುವರು.
- ಭಾರತದಲ್ಲಿ 8 ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ.
- ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ, ಹತ್ತಿಬಟ್ಟೆ ಕೈಗಾರಿಕೆ, ಸಕ್ಕರೆ ಕೈಗಾರಿಕೆ, ಅಲ್ಯೂಮಿನಿಯಂ ಕೈಗಾರಿಕೆ, ಕಾಗದದ ಕೈಗಾರಿಕೆ, ಜ್ಞಾನಾಧಾರಿತ ಕೈಗಾರಿಕೆಗಳು ಭಾರತದ ಪ್ರಮುಖ ಕೈಗಾರಿಕೆಗಳಾಗಿವೆ.
- ಜ್ಞಾನಾಧಾರಿತ ಕೈಗಾರಿಕೆಗಳಲ್ಲಿ ಮುಖ್ಯವಾದವುಗಳೆಂದರೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉನ್ನತ ತಂತ್ರಜ್ಞಾನ.
- ಇಂದು ಕೃತಕ ಬುದ್ಧಿಮತ್ತೆಯ ಬಳಕೆಯೊಂದಿಗೆ ಉನ್ನತ ತಂತ್ರಜ್ಞಾನವು ಹೊಸ ಮಜಲನ್ನು ಪಡೆದಿದೆ.
- ಇಸ್ರೋ-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ೧೯೬೯ ಆಗಸ್ಟ್ ೧೫ರಂದು ಅಸ್ತಿತ್ವಕ್ಕೆ ಬಂದಿತು. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ.
ಇತರೆ ವಿಷಯಗಳು :
ಭಾರತದ ಸಾರಿಗೆ ಹಾಗೂ ಸಂಪರ್ಕ ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್