SSLC ಭಾರತದ ಮಣ್ಣುಗಳು ಸಮಾಜ ವಿಜ್ಞಾನ ನೋಟ್ಸ್, 10th Standard Bharatada Mannugalu Social Science Notes Question Answer Guide Pdf Download in Kannada Medium,10ನೇ ತರಗತಿ ಭಾರತದ ಮಣ್ಣುಗಳು ಪಾಠದ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ,10th Std ಭಾರತದ ಮಣ್ಣುಗಳು Question Answer, Bharatada Mannugalu Notes in Kannada, SSLC Social Science Chapter 12 question answer kannada Medium, kseeb solutions for class 10 social science kannada medium Lesson 12 Notes Pdf Guide, State Syllabus Class 10 Social Science 12th Lesson Question Answer, ಭಾರತದ ಮಣ್ಣುಗಳು Question Answer, Bharatada Mannugalu in Kannada Question Answer.

10ನೇ ತರಗತಿ ಭಾರತದ ಮಣ್ಣುಗಳು ಸಮಾಜ ವಿಜ್ಞಾನ ನೋಟ್ಸ್,
ಅಭ್ಯಾಸ
I. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
1. ನದಿಗಳು ಪರ್ವತ ಪ್ರದೇಶಗಳಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಕರೆಯುವರು,
2. ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
3. ರಾಜಸ್ತಾನದಲ್ಲಿ ಮರುಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವುದು.
4. ಭಾರತದಲ್ಲಿ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಮಣ್ಣು ಮೆಕ್ಕಲು ಮಣ್ಣು
5. ರಾಗಿ ಮತ್ತು ಎಣ್ಣೆಕಾಳುಗಳನ್ನು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
II. ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
1. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ವಿಧಗಳು ಯಾವುವು?
- ಮೆಕ್ಕಲು ಮಣ್ಣು
- ಕಪ್ಪು ಮಣ್ಣು
- ಕೆಂಪು ಮಣ್ಣು
- ಜಂಬಿಟ್ಟಿಗೆ(ಲ್ಯಾಟರೈಟ್) ಮಣ್ಣು
- ಮರುಭೂಮಿ ಮಣ್ಣು
- ಪರ್ವತದ ಮಣ್ಣು
2. ಪರ್ವತ ಮಣ್ಣುಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿರಿ.
ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಫಲವತ್ತತೆಯನ್ನು ಕಾಪಾಡುವುದೇ ಮಣ್ಣಿನ ಸಂರಕ್ಷಣೆ.
ಅದರ ವಿಧಾನಗಳು:
- ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
- ಅಡ್ಡ ಬದುಗಳನ್ನು ನಿರ್ಮಿಸುವುದು.
- ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ.
- ಅರಣ್ಯ ನಾಶವನ್ನು ತಡೆಗಟ್ಟುವುದು.
- ಅರಣ್ಯಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು.
- ಮೇಯಿಸುವುದನ್ನು ನಿಯಂತ್ರಿಸುವುದು.
- ನೀರಿನ ಯೋಜಿತ ಬಳಕೆ.
- ಚೆಕ್ ಡ್ಯಾಮ್‌ಗಳ ನಿರ್ಮಾಣ ಇತ್ಯಾದಿ.
3. ಮಣ್ಣಿನ ಸವೆತ ಎಂದರೇನು? ಅದಕ್ಕೆ ಕಾರಣಗಳೇನು?
ಭೂ ಮೇಲ್ಮಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂ ಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತಕ್ಕೆ ಕಾರಣಗಳು:
- ಅರಣ್ಯಗಳ ನಾಶ
- ಹೆಚ್ಚು ಮೇಯಿಸುವುದು
- ಅವೈಜ್ಞಾನಿಕ ಬೇಸಾಯ
- ಅಧಿಕ ನೀರಾವರಿ ಬಳಕೆ ಮೊದಲಾದವು.
ಉದಾ: ಇಟ್ಟಿಗೆ, ಹೆಂಚು, ಮಡಿಕೆ ತಯಾರಿಕೆ ಮುಂತಾದವುಗಳಿಂದ ಮೇಲ್ಮಣ್ಣು ನಾಶವಾಗಿ ಅನುಪಯುಕ್ತವಾದ ಮಣ್ಣು ಉಳಿದುಕೊಳ್ಳುವುದು.
4. ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳನ್ನು ತಿಳಿಸಿ.
- ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
- ನದಿಯ ಪಾತ್ರದಲ್ಲಿ ಹೂಳು ತುಂಬುವುದರಿಂದ ನದಿಗಳು ತಮ್ಮ ಪಾತ್ರವನ್ನು ಬದಲಾಯಿಸುತ್ತವೆ.
- ಜಲಾಶಯ ಮತ್ತು ಕೆರೆಗಳಲ್ಲಿ ಹೂಳು ತುಂಬುವುದರಿಂದ ನೀರನ್ನು ಸಂಗ್ರಹಿಸುವ ಅವುಗಳ ಸಾಮರ್ಥ್ಯವು ಕಡಿಮೆಯಾಗುತ್ತದೆ.
- ಭೂ ಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಸ್ವಾಭಾವಿಕ ಚಿಲುಮೆಗಳು ಬತ್ತಿ ಹೋಗುತ್ತವೆ. ಭಾರತವು ವ್ಯವಸಾಯ ಪ್ರಧಾನವಾದ ರಾಷ್ಟ್ರವಾದ್ದರಿಂದ ವ್ಯವಸಾಯದ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುವುದು.
5. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು ಬರುವುದು?
ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಪರ್ವತ ಮಣ್ಣು ಕಂಡು ಬರುತ್ತದೆ. ಇದು ಸಾರಜನಕ ಮತ್ತು ಸಾವಯವ ಅವಶೇಷಗಳನ್ನು ಹೆಚ್ಚಾಗಿ ಒಳಗೊಂಡಿರುತ್ತದೆ.
ಹೆಚ್ಚುವರಿ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1. ಒಣ ಬೇಸಾಯಕ್ಕೆ ಸೂಕ್ತವಾದ ಮಣ್ಣು:
ಎ) ಮರುಭೂಮಿ ಮಣ್ಣು
ಬಿ) ಕೆಂಪು ಮಣ್ಣು
ಸಿ) ಜಂಬಿಟ್ಟಿಗೆ ಮಣ್ಣು
ಡಿ) ಕಪ್ಪು ಮಣ್ಣು
2. ಕಬ್ಬಿಣ ಸುಣ್ಣ ಮತ್ತು ಮೆನ್ನೇಶಿಯಂ ಕಾರ್ಬೋನೇಟ್ ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವ ಮಣ್ಣು:
ಎ) ಕಪ್ಪು ಮಣ್ಣು
ಬಿ) ಮರುಭೂಮಿ ಮಣ್ಣು
ಸಿ) ಕೆಂಪು ಮಣ್ಣು
ಡಿ) ಜೇಡಿ ಮಣ್ಣು
3. ಸಜ್ಜೆ ಕರ್ಜೂರಗಳನ್ನು ಬೆಳೆಯಲು ಸೂಕ್ತವಾದ ಮಣ್ಣು:
ಎ) ಮೆಕ್ಕಲು ಮಣ್ಣು
ಬಿ) ಪಶ್ಚಿಮ ಘಟ್ಟಗಳ ಮಣ್ಣು
ಸಿ) ಮರುಭೂಮಿ ಮಣ್ಣು
ಡಿ) ಜಂಭಿಟ್ಟಿಗೆ ಮಣ್ಣು
4. ಸಾರಜನಕ ಮತ್ತು ಸಾವಯವ ಅವಶೇಷಗಳನ್ನು ಹೆಚ್ಚಾಗಿ ಒಳಗೊಂಡಿರುವ ಮಣ್ಣು:
ಎ) ಜಂಭಿಟ್ಟಿಗೆ ಮಣ್ಣು
ಬಿ) ಮರುಭೂಮಿ ಮಣ್ಣು
ಸಿ) ಪರ್ವತ ಮಣ್ಣು
ಡಿ) ರೇಗೂರ್ ಮಣ್ಣು
5. ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಮಣ್ಣು:
ಎ) ಪರ್ವತ ಮಣ್ಣು
ಬಿ) ಕಪ್ಪು ಮಣ್ಣು
ಸಿ) ಮರುಭೂಮಿ ಮಣ್ಣು
ಡಿ) ರೇಗೂರ್ ಮಣ್ಣು
III. ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:
1.ಜಂಬಿಟ್ಟಿಗೆ ಮಣ್ಣು ಕೆಂಪು ಬಣ್ಣವನ್ನು ಹೊಂದಿರಲು ಕಾರಣವೇನು?
ಜಂಬಿಟ್ಟಿಗೆ ಮಣ್ಣು ಸಾಮಾನ್ಯವಾಗಿ 200 ಸೆಂ.ಮೀಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಿರ್ಮಿತಗೊಂಡಿದೆ. ಅಧಿಕ ಮಳೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು. ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೆಡ್ ಮತ್ತು ಅಲ್ಯುಮಿನಿಯಂಗಳು ಮಾತ್ರ ಮೇಲ್ಪದರಿನಲ್ಲಿ ಉಳಿದಿರುವುದರಿಂದ ಈ ಮಣ್ಣು ಕೆಂಪು ಬಣ್ಣವನ್ನು ಹೊಂದಿರುವುದು.
2. ಭಾರತವು ವಿವಿಧ ಬಗೆಯ ಮಣ್ಣುಗಳನ್ನು ಒಳಗೊಂಡಿರಲು ಕಾರಣಗಳೆನು?
ಭಾರತವು ವಿವಿಧ ಬಗೆಯ ಮಣ್ಣುಗಳನ್ನು ಒಳಗೊಂಡಿರಲು ಕಾರಣ ಅವುಗಳು ಉತ್ಪತ್ತಿಯಾಗಿರುವ ಮೂಲ ಶಿಲೆಗಳು ಮತ್ತು ವಾಯುಗುಣದ ವ್ಯತ್ಯಾಸ.
3. ಕಪ್ಪು ಮಣ್ಣು ಯಾವ ಬೆಳೆಗಳಿಗೆ ಹೆಚ್ಚು ಉಪಯುಕ್ತವಾಗಿದೆ?
ಕಪ್ಪು ಮಣ್ಣು ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು, ಎಣ್ಣೆಕಾಳು, ನಿಂಬೆ, ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಉಪಯುಕ್ತವಾಗಿದೆ.
4. ಮೆಕ್ಕಲು ಮಣ್ಣು ಕಂಡು ಬರುವ ಪ್ರದೇಶಗಳು ಯಾವುವು?
ಮೆಕ್ಕಲು ಮಣ್ಣು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಸಾ, ಪಂಜಾಬ, ಹರಿಯಾಣ, ಅಸ್ಸಾಂ ಕಣಿವೆಯ ಭಾಗಗಳಲ್ಲಿ ಕಂಡು ಬರುತ್ತದೆ.
5. ಕಪ್ಪು ಮಣ್ಣಿನ ಪ್ರಾಮುಖ್ಯತೆಯನ್ನು ತಿಳಿಸಿ.
ಕಪ್ಪು ಮಣ್ಣು ಅಗ್ನಿ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ. ಇದರಲ್ಲಿ ಜೇಡಿ ಮಣ್ಣಿನ ಕಣಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನಿಶಿಯಂ ಕಾರ್ಬೋನೇಟ್‌ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದ್ದು ಒಣಬೇಸಾಯಕ್ಕೆ ಸೂಕ್ತವಾಗಿದೆ.
6. ಮರುಭೂಮಿ ಮಣ್ಣಿನ ಹಂಚಿಕೆಯನ್ನು ತಿಳಿಸಿ.
ಮರುಭೂಮಿ ಮಣ್ಣು ಭಾರತದ ವಾಯುವ್ಯ ಭಾಗದ ರಾಜಸ್ತಾನ, ಪಂಜಾಬ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಪಶ್ಚಿಮದ ಗುಜರಾತಿನ ಕಥ್ ಪ್ರದೇಶ ಹಾಗೂ ಅರಾವಳಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ಹಂಚಿಕೆಯಾಗಿದೆ.
7. ಮಣ್ಣಿನ ನಿರ್ವಹಣೆ ಎಂದರೇನು?
ಮಣ್ಣಿನ ಫಲವತ್ತತೆ ಕಡಿಮೆಯಾಗದಂತೆ ಸುಸ್ಥಿರ ರೀತಿಯಲ್ಲಿ ಮಣ್ಣನ್ನು ಬಳಕೆಮಾಡಿ ನಿನಂತರವಾಗಿ ಬೆಳೆಗಳ ಉತ್ಪಾದನೆಯನ್ನು ಪಡೆಯುವುದೇ ಮಣ್ಣಿನ ನಿರ್ವಹಣೆಯಾಗಿದೆ.
8. ಕೆಂಪು ಮಣ್ಣಿನಲ್ಲಿ ಬೆಳೆಯಲಾಗುವ ಬೆಳೆಗಳು ಯಾವುವು?
ಕೆಂಪು ಮಣ್ಣಿನಲ್ಲಿ ರಾಗಿ, ಹೊಗೆಸೊಪ್ಪು ಮತ್ತು ಎಣ್ಣೆ ಕಾಳುಗಳನ್ನೂ ಹಾಗೂ ನೀರಾವರಿಯ ಸೌಲಭ್ಯವಿರುವ ಪ್ರದೇಶಗಳಲ್ಲಿ ಭತ್ತ, ಕಬ್ಬು, ಹತ್ತಿ ಮುಂತಾದ ಬೆಳೆಗಳನ್ನು ಬೆಳೆಯಲಾಗುವುದು.
9. ಕಪ್ಪು ಮಣ್ಣು ದೀರ್ಘದೀರ್ಘ ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಏಕೆ?
ಕಪ್ಪು ಮಣ್ಣು ಜೇಡಿ ಮಣ್ಣು ಮಿಶ್ರಿತವಾಗಿದ್ದು ಒತ್ತೊತ್ತಾದ ಕಣಗಳಿಂದ ರಚನೆಯಾಗಿರುವುದರಿಂದ ದೀರ್ಘದೀರ್ಘ ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಮುಖ್ಯಾಂಶಗಳು
- ಮಣ್ಣು ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದೆ.
- ಭಾರತವು ವಿವಿಧ ಬಗೆಯ ಮಣ್ಣುಗಳನ್ನು ಒಳಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಅವುಗಳು ಉತ್ಪತ್ತಿಯಾಗಿರುವ ಮೂಲ ಶಿಲೆಗಳು ಮತ್ತು ವಾಯುಗುಣಗಳ ವ್ಯತ್ಯಾಸ.
- ಭಾರತದಲ್ಲಿ ಕಂಡು ಬರುವ ಮಣ್ಣನ್ನು ಮೆಕ್ಕಲು ಮಣ್ಣು, ಕಪ್ಪು ಮಣ್ಣು, ಕೆಂಪು ಮಣ್ಣು, ಜಂಬಿಟ್ಟಿಗೆ ಮಣ್ಣು, ಮರುಭೂಮಿ ಮಣ್ಣು, ಪರ್ವತ ಮಣ್ಣು ಎಂದು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
- ಭೂ ಮೇಲ್ಕೆಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂ ಸವೆತ ಎಂದು ಕರೆಯುತ್ತಾರೆ.
- ಮಣ್ಣಿನ ಸವೆತವು ದೇಶದ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿದೆ.
- ಮಣ್ಣಿನ ಸವೆತವು ಅನೇಕ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಅದನ್ನು ತಡೆಗಟ್ಟುವುದು ಅಗತ್ಯವಾಗಿದೆ.
ಇತರೆ ವಿಷಯಗಳು :
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್