10th Standard Bharatada Bhu Balake hagu Krushi Chapter Social Notes | 10ನೇ ತರಗತಿ ಭಾರತದ ಭೂ ಬಳಕೆ ಹಾಗೂ ಕೃಷಿ ಪಾಠದ ನೋಟ್ಸ್

Bharatada Boo Balake hagu Krushi

10th Standard Bharatada Bhu Balake Hagu Krushi Social Science Notes Question Answer Guide Mcq Pdf Download in Kannada Medium Karnataka 2025,10ನೇ ತರಗತಿ ಭಾರತದ ಭೂ ಬಳಕೆ ಹಾಗೂ ಕೃಷಿ ಸಮಾಜ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, 10th Class Social Science Chapter 25 Question Answer in Kannada, 10th Class Bharatada Bhu Balake Hagu Krushi Lesson in Kannada, Kseeb Solutions for Class 10 Social Science Chapter 25 Notes Key Answers, SSLC Social Science 25th Lesson Question Answer, ಭಾರತದ ಭೂ ಬಳಕೆ ಹಾಗೂ ಕೃಷಿ Notes Pdf.

Bharatada Boo Balake hagu Krushi

10ನೇ ತರಗತಿ ಭಾರತದ ಭೂ ಬಳಕೆ ಹಾಗೂ ಕೃಷಿ ಸಮಾಜ ವಿಜ್ಞಾನ ನೋಟ್ಸ್‌

1. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

2. ಒಂದೇ ವ್ಯವಸಾಯದ ಭೂಮಿಯಲ್ಲಿ ಏಕಕಾಲದಲ್ಲಿ ಎರಡು-ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು.

3. ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಮಾತ್ರ ಬೆಳೆಯುವುದಕ್ಕೆ ಜೀವನಾಧಾರದ ಬೇಸಾಯ ಎಂದು ಕರೆಯುವರು.

4. ತೋಟಗಾರಿಕೆ ಬೇಸಾಯದಲ್ಲಾದ ಅಪಾರ ಪ್ರಗತಿಯನ್ನು ಸುವರ್ಣ ಕ್ರಾಂತಿ ಎಂದು ಕರೆಯುವರು.

5. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳ

6. ಬೇಸಿಗೆ ಅವಧಿಯ ಬೇಸಾಯವನ್ನು ಜೇಡ್ ಎನ್ನುವರು.

1. ಭೂ ಬಳಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವವು?

ಭೂ ಬಳಕೆಯ ಮೇಲೆ ಹಲವಾರು ಪ್ರಾಕೃತಿಕ ಆರ್ಥಿಕ ಹಾಗೂ ಸಾಮಾಜಿಕ ಅಂಶಗಳು ಪ್ರಭಾವ ಬೀರುತ್ತವೆ. ಭೂಸ್ವರೂಪಗಳು, ವಾಯುಗುಣ, ಮಣ್ಣಿನ ಲಕ್ಷಣಗಳು ಪ್ರಾಕೃತಿಕ ಅಂಶಗಳಾಗಿವೆ. ಭೂ ಹಿಡುವಳಿ, ಜನಸಂಖ್ಯೆ, ಮಾರುಕಟ್ಟೆ, ವ್ಯವಸಾಯೋತ್ಪನ್ನಗಳ ಬೇಡಿಕೆ, ಉದ್ಯೋಗ ಆರ್ಥಿಕ ಅಂಶಗಳಾಗಿವೆ. ಜನರ ಮನೋಭಾವ, ಸಾಮಾಜಿಕ ಪರಿಸ್ಥಿತಿ, ಮಾರುಕಟ್ಟೆ, ತಾಂತ್ರಿಕತೆ, ನೀರಾವರಿ ಸೌಲಭ್ಯ, ಮಾನವನ ಸಾಮರ್ಥ್ಯ, ಭೂ ಒಡೆತನ ಮೊದಲಾದ ಅಂಶಗಳು ಸಾಮಾಜಿಕ ಅಂಶಗಳಾಗಿವೆ.

2. ವ್ಯವಸಾಯ ಎಂದರೇನು? ವ್ಯವಸಾಯದ ವಿಧಗಳು ಯಾವುವು?

ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು.

ವ್ಯವಸಾಯದ ವಿಧಗಳು:

1.ಸಾಂದ್ರ ಬೇಸಾಯ

2. ಜೀವನಾಧಾರದ ಬೇಸಾಯ

3. ವಾಣಿಜ್ಯ ಬೇಸಾಯ

4. ಮಿಶ್ರ ಬೇಸಾಯ

5. ತೋಟಗಾರಿಕಾ ಬೇಸಾಯ.

3. ಖಾರೀಫ್ ಬೇಸಾಯ ಎಂದರೇನು?

ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವೇ ಮುಂಗಾರು ಬೇಸಾಯ ಅಥವಾ ಖಾರೀಫ್ ಬೇಸಾಯ.

4. ರಬಿ ಬೇಸಾಯ ಎಂದರೇನು?

ಚಳಿಗಾಲದಲ್ಲಿ ಮಳೆ ಪಡೆಯುವ ಪ್ರದೇಶಗಳ ಮುಖ್ಯ ಸಾಗುವಳಿಯ ಅವಧಿಯನ್ನು ರಬಿ ಬೇಸಾಯ ಎಂದು ಕರೆಯುತ್ತಾರೆ.

5. ಹತ್ತಿ ಬೆಳೆ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳಾವುವು?.

ಹತ್ತಿಯು ಉಷ್ಣ ವಲಯ ಮತ್ತು ಉಪ ಉಷ್ಣವಲಯದ ಬೆಳೆಯಾಗಿದ್ದು, ೨೦ಲಿ ರಿಂದ ೨೫ಲಿ ಸೆಲ್ಸಿಯಸ್‌ ಉಷ್ಣಾಂಶ ಅವಶ್ಯಕ. ಸುಮಾರು ೭೫ ರಿಂದ ೧೫೦ ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಬೆಳೆಯಬಲ್ಲವು. ಕಪ್ಪು ಮಣ್ಣು, ಮೆಕ್ಕಲು ಮಣ್ಣುಗಳಲ್ಲಿ ಬೆಳೆಯಬಲ್ಲವು. ಆದರೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಇದಕ್ಕೆ ಹೆಚ್ಚು ಸೂಕ್ತ.

1. ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರವು ಮಾರುಕಟ್ಟೆ ಕೇಂದ್ರವಾಗಿದೆ.

ಎ) ಹತ್ತಿ

ಬಿ) ಕಾಫಿ

ಸಿ) ಚಹಾ

2. ಅಧಿಕ ಜನಸಂಖ್ಯೆ ಇರುವ ಫಲವತ್ತಾದ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬೇಸಾಯ:

ಎ) ಜೀವನಾಧಾರ ಬೇಸಾಯ

ಸಿ) ಸ್ಥಿರ ಬೇಸಾಯ

ಡಿ) ಸ್ಥಳಾಂತರ ಬೇಸಾಯ

3. ಹೆಚ್ಚು ಹುಲ್ಲುಗಾವಲುಗಳನ್ನು ಹೊಂದಿರುವ ರಾಜ್ಯ:

ಎ) ಪಂಜಾಬ್

ಬಿ) ಹರಿಯಾಣ

ಡಿ) ಅಸ್ಸಾಂ

4. ನೈಸರ್ಗಿಕ ಸಂಪನ್ಮೂಲಗಳಲ್ಲಿ ಅತಿ ಪ್ರಮುಖವಾದುದು:

ಬಿ) ನೀರು

ಸಿ) ಗಾಳಿ

ಡಿ) ಬೆಳಕು

5. ಗೋಧಿ ಉತ್ಪನ್ನದಲ್ಲಿ ಪ್ರಥಮ ಸ್ಥಾನ ಡೆದಿರುವ ರಾಜ್ಯ:

ಎ) ಉತ್ತರಪ್ರದೇಶ

ಬಿ) ಪಂಜಾಬ್

ಡಿ) ಬಿಹಾರ

6. ಭಾರತದಲ್ಲಿ ಅತೀ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಬೇಸಾಯ:

ಎ) ಕಾಫಿ

ಬಿ) ಚಹ

ಡಿ) ಹೊಗೆಸೊಪ್ಪು

1. ಭಾರತವು ಚಹಾ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.

2. ಈ. ಭೂಮಿಯನ್ನು ಉಳುಮೆ ಮಾಡುವ ಕಲೆ ವ್ಯವಸಾಯ

3. ಗೋಧಿಯ ಕಣಜ ಪಂಜಾಬ್

4. ರಾಷ್ಟ್ರೀಯ ಅರಣ್ಯ ಯೋಜನೆ ಪ್ರಕಾರ ಪ್ರತಿಶತ 33 ರಷ್ಟು ಅರಣ್ಯವಿರಬೇಕು.

5. ವಾಣಿಜ್ಯ ಮಾದರಿಯ ಪುಷ್ಪ ಕೃಷಿ ಅಥವಾ ಬೇಸಾಯವನ್ನು ಫ್ಲೋರಿಕಲ್ಟರ್ ಎಂದು ಕರೆಯುವರು.

1. ಭೂ ಬಳಕೆಯ ಪ್ರಕಾರಗಳು ಯಾವುವು?

  • ನಿವ್ವಳ ಸಾಗುವಳಿ ಕ್ಷೇತ್ರ
  • ಅರಣ್ಯ ಭೂಮಿ
  • ವ್ಯವಸಾಯೇತರ ಭೂ ಬಳಕೆ
  • ಬೀಳುಭೂಮಿ
  • ಹುಲ್ಲುಗಾವಲು
  • ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ.

2. ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶಗಳು ಯಾವುವು?

ಯಾವುದೇ ಒಂದು ಪ್ರದೇಶದ ಬೆಳೆಯು ಅಲ್ಲಿರುವ ನೈಸರ್ಗಿಕ, ಆರ್ಥಿಕ, ಸಾಮಾಜಿಕ ಮತ್ತು ರೈತರ ಮನೋಭಾವ ಮುಂತಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.

3. ಸ್ಥಿರ ಬೇಸಾಯಕ್ಕೂ ಸ್ಥಳಾಂತರ ಬೇಸಾಯಕ್ಕೂ ಇರುವ ವ್ಯತ್ಯಾಸಗಳೇನು?

ಸ್ಥಿರ ಬೇಸಾಯದಲ್ಲಿ ಜನರು ಯಾವುದೇ ಒಂದು ಪ್ರದೇಶದಲ್ಲಿ ಶಾಶ್ವತವಾಗಿ ನೆಲೆಸಿ ಬೇಸಾಯವನ್ನು ಮಾಡುತ್ತಾರೆ. ಈ ಬೇಸಾಯವು ಸಾಂಪ್ರದಾಯಿಕವಾಗಿದ್ದು, ಚಿಕ್ಕ ಹಿಡುವಳಿಯನ್ನು ಹೊಂದಿರುತ್ತದೆ. ಸ್ಥಳಾಂತರ ಬೇಸಾಯದಲ್ಲಿ ಜನರು ಯಾವುದೇ ಒಂದು ಪ್ರದೇಶದಲ್ಲಿ ಸ್ಥಿರವಾಗಿ ನೆಲೆಸದೆ ಅಲ್ಲಿರುವ ಅರಣ್ಯಗಳನ್ನು ಕಡಿದು ಬೇಸಾಯ ಮಾಡುವರು. ಒಂದೆರಡು ವರ್ಷ ಬೇಸಾಯ ಮಾಡಿ ಅಲ್ಲಿನ ಮಣ್ಣಿನ ಫಲವತ್ತತೆ ಕಡಿಮೆಯಾದ ನಂತರ ಬೇರೆ ಪ್ರದೇಶಗಳಿಗೆ ಹೋಗಿ ಬೇಸಾಯ ಮಾಡುವರು. ಇಂದು ಇದನ್ನು ನಿಷೇದಿಸಲಾಗಿದೆ.

4. ಭೂ ಬಳಕೆ ಎಂದರೇನು?

ಭೂಮಿಯನ್ನು ಸಾಗುವಳಿ, ಅರಣ್ಯ, ಹುಲ್ಲುಗಾವಲು, ಬೀಳುಭೂಮಿ, ವ್ಯವಸಾಯೇತರ ಬಳಕೆ, ಹೀಗೆ ವಿವಿಧ ಉದ್ದೇಶಗಳಿಗೆ ಬಳಸುವುದನ್ನೇ ಭೂ ಬಳಕೆ ಎನ್ನುವರು.

5. ಮಿಶ್ರ ಬೇಸಾಯ ಎಂದರೇನು?

ಕೃಷಿ ಭೂಮಿಯನ್ನು ಬೆಳೆಗಳನ್ನು ಬೆಳೆಯುವುದಕ್ಕಷ್ಟೇ ಅಲ್ಲದೆ ದನಕರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹಂದಿ ಸಾಕಾಣಿಕೆ, ರೇಷ್ಮೆ ಕೃಷಿ ಮುಂತಾದ ಉದ್ದೇಶಗಳಿಗಾಗಿಯೂ ಬಳಸುವುದನ್ನು ಮಿಶ್ರ ಬೇಸಾಯ ಎನ್ನುವರು.

6. ಭತ್ತ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳು ಯಾವುವು?

ಭತ್ತದ ಬೇಸಾಯಕ್ಕೆ ೨೫ಲಿ ಸೆಲ್ಸಿಯಸ್ ಉಷ್ಣಾಂಶ ಮತ್ತು ೧೦೦ ರಿಂದ ೨೦೦ ಸೆಂ.ಮೀ ವಾರ್ಷಿಕ ಮಳೆ ಅವಶ್ಯಕ. ಫಲವತ್ತಾದ ಮೆಕ್ಕಲು ಮಣ್ಣು, ಜೇಡಿ ಮಣ್ಣು, ಭತ್ತದ ಬೆಳೆಗೆ ಸೂಕ್ತ. ಬೆಳೆಯು ಕೊಯ್ಲಿಗೆ ಬರುವವರೆಗೂ ಪೈರಿನ ತಳದಲ್ಲಿ ನೀರು ನಿಂತಿರಬೇಕಾದುದರಿಂದ ಸಮತಟ್ಟಾದ ಭೂಮಿ ಬೇಕಾಗುತ್ತದೆ. ಕಡಿಮೆ ಮಳೆ ಬೀಳುವ ಕಡೆಗಳಲ್ಲಿ ನೀರಾವರಿ ಅವಶ್ಯಕ.

7. ಗೋಧಿ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳು ಯಾವುವು?

ಗೋಧಿ ಬೆಳೆಗೆ ೧೦೦ ಯಿಂದ ೧೫ಲಿ ಸೆಲ್ಸಿಯಸ್ ಉಷ್ಣಾಂಶ ೫೦ ರಿಂದ ೭೦ ಸೆಂ.ಮೀ. ವಾರ್ಷಿಕ ಮಳೆ ಅವಶ್ಯಕ. ಮರಳು ಮಿಶ್ರಿತ ಜೇಡಿಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಗೋಧಿ ಚೆನ್ನಾಗಿ ಬೆಳೆಯುತ್ತದೆ.

8. ವಾಣಿಜ್ಯ ಬೇಸಾಯ ಎಂದರೇನು? ಉದಾಹರಣೆ ಕೊಡಿ.

ವ್ಯಾಪಾರದ ಉದ್ದೇಶದ ಸಲುವಾಗಿ ಕೈಗೊಳ್ಳುವ ಬೇಸಾಯವನ್ನು ವಾಣಿಜ್ಯ ಬೇಸಾಯ ಎಂದು ಕರೆಯುವರು. ಉದಾ: ಹೊಗೆಸೊಪ್ಪು, ಅಡಿಕೆ, ತೆಂಗು, ಕಬ್ಬು, ಹತ್ತಿ, ಚಹ, ಕಾಫಿ, ರಬ್ಬರ್ ಇತ್ಯಾದಿ.

9. ಭಾರತದಲ್ಲಿ ಕಂಡು ಬರುವ ವ್ಯವಸಾಯದ ಮೂರು ಅವಧಿಗಳು ಯಾವುವು?

ಭಾರತದಲ್ಲಿ ಮುಂಗಾರು ಅಥವಾ ಖರೀಫ್ ಬೇಸಾಯ. ಹಿಂಗಾರು ಅಥವಾ ರಬಿ ಬೇಸಾಯ. ಬೇಸಿಗೆ ಅಥವಾ ಜೇಡ್ ಬೇಸಾಯ ಎಂಬ ಮೂರು ವ್ಯವಸಾಯದ ಅವಧಿಗಳು ಕಂಡುಬರುತ್ತವೆ.

8. ಚಹ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳು ಯಾವುವು?

ಚಹ ಬೆಳೆಯಲು ಸರಾಸರಿ ಉಷ್ಣಾಂಶ ೨೧ಲಿ ಸೆಲ್ಸಿಯಸ್‌ ಉಪಯುಕ್ತ. ೧೫೦-೨೦೦ ಸೆಂ.ಮೀ ಮಳೆ ಅವಶ್ಯಕ. ಕೊಳೆತ ಜೈವಿಕಾಂಶವುಳ್ಳ ಹಾಗೂ ನೀರು ಸುಲಭವಾಗಿ ಬಸಿದು ಹೋಗುವಂತಹ ಮರಳು ಮಿಶ್ರಿತ ಜೇಡಿ ಮಣ್ಣು ಚಹದ ಬೇಸಾಯಕ್ಕೆ ಉತ್ಕೃಷ್ಟವಾದದ್ದರಿಂದ ಸುಮಾರು ೧೨೦೦ ರಿಂದ ೨೪೦೦ ಮೀ. ಎತ್ತರವುಳ್ಳ ಇಳಿಜಾರುಗಳಲ್ಲಿ ಬೆಳೆಯಲಾಗುವುದು.

10. ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸಿ.

ವ್ಯವಸಾಯವು ಭಾರತೀಯರ ಮುಖ್ಯ ಉದ್ಯೋಗವಾಗಿದೆ. ಇದು ದೇಶದ ಎಲ್ಲ ಭಾಗಗಳಲ್ಲಿಯೂ ವಿವಿಧ ರೂಪ ಹಾಗೂ ವಿವಿಧ ಉತ್ಪಾದನೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ದೇಶದ ಅಗಾಧ ಜನಸಂಖ್ಯೆಗೆ ವ್ಯವಸಾಯವು ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ವ್ಯವಸಾಯವು ಜೀವನಾಧಾರ ಉದ್ಯೋಗವಾಗಿದ್ದು, ಉಳಿದ ಎಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಭಾರತವು ಉತ್ಪಾದಿಸುವ ಹಲವಾರು ಬಗೆಯ ವ್ಯವಸಾಯೋತ್ಪನ್ನಗಳನ್ನು, ಕಚ್ಚಾ ವಸ್ತುವನ್ನಾಗಿ ಆಧರಿಸಿದ ಅಸಂಖ್ಯಾತ ಕೈಗಾರಿಕೆಗಳನ್ನು ಹೊಂದಿದೆ. ವ್ಯವಸಾಯವು ಪರೋಕ್ಷವಾಗಿಯೂ ಹಲವಾರು ಕೈಗಾರಿಕೆಗಳನ್ನು ಪೋಷಿಸುತ್ತದೆ. ಉದಾ: ರಾಸಾಯನಿಕ ಗೊಬ್ಬರ, ಕ್ರಿಮಿ-ಕೀಟನಾಶಕಗಳು, ಯಂತ್ರೋಪಕರಣ ಕೈಗಾರಿಕೆಗಳು ಇತ್ಯಾದಿ. ವ್ಯವಸಾಯವು ಸಂಚಾರ ಸಾರಿಗೆ ವ್ಯಾಪಾರ ಮೊದಲಾದ ಹಲವಾರು ತೃತೀಯ ಆರ್ಥಿಕ ಉದ್ಯೋಗಗಳನ್ನು ಪೋಷಿಸಿದೆ.

11. ಭಾರತವು ತೋಟಗಾರಿಕೆಯ ಕ್ಷೇತ್ರದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿದೆ. ವಿವರಿಸಿ.

ತೋಟಗಾರಿಕೆಯು ಹಣ್ಣು, ತರಕಾರಿ ಹಾಗೂ ಹೂಗಳ ಉತ್ಪಾದನೆಯನ್ನು ಒಳಗೊಂಡಿದೆ. ಇದು ಬಹುತೇಕ ಅಲ್ಪಕಾಲಿಕ ಅಥವಾ ನಿಯತಕಾಲಿಕವಾದ ಅಂದರೆ ನಿರ್ದಿಷ್ಟ ಅವಧಿಯಲ್ಲಿ ಫಸಲು ನೀಡುವ ಬೆಳೆಗಳನ್ನು ಒಳಗೊಂಡಿದೆ. ತೋಟಗಾರಿಕೆ ಬೇಸಾಯವು ಇತರೆ ಬೆಸಾಯ ಪದ್ಧತಿಗಳಿಗಿಂತ ಹೆಚ್ಚು ಸಾಂದ್ರಯುತ ಹಾಗೂ ವಾಣಿಜ್ಯ ಮಾದರಿಯಾಗಿದೆ. ಭಾರತವು ಮಾವು, ಬಾಳೆ, ಸಪೋಟ ಹಾಗೂ ನಿಂಬೆ ಜಾತಿಯ ಹಣ್ಣುಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇದರಿಂದ ಸರಕಾರವು ತೋಟಗಾರಿಕೆ ಬೇಸಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಈ ಕ್ಷೇತ್ರವು ಅಪಾರ ಪ್ರಗತಿಯನ್ನು ಸಾಧಿಸಿದೆ.

12. ಕಬ್ಬು ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳು ಯಾವುವು?

ಇದು ವಾರ್ಷಿಕ ಬೆಳೆಯಾಗಿದ್ದು ನೀರಾವರಿ ಪ್ರದೇಶದಲ್ಲಿ ಬೆಳೆಯುವ ಬೆಳೆಯಾಗಿದೆ. ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಹೊಂದಿರುವ ವಾಯುಗುಣ ಅವಶ್ಯಕ. ಇದಕ್ಕೆ ೨೧ಲಿ ರಿಂದ ೨೬ಲಿ ಸೆಲ್ಸಿಯಸ್ ಉಷ್ಣಾಂಶ, ೧೦೦ ರಿಂದ ೧೫೦ ಸೆಂ.ಮೀ. ವಾರ್ಷಿಕ ಮಳೆ ಬೇಕಾಗುವುದು. ಮೆಕ್ಕಲು ಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಕಬ್ಬು ಚೆನ್ನಾಗಿ ಬೆಳೆಯುತ್ತದೆ.

  • ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.
  • ಭಾರತದಲ್ಲಿ ಲಭ್ಯವಿರುವ ಭೂಮಿಯ ಬಳಕೆಯನ್ನು 1) ನಿವ್ವಳ ಸಾಗುವಳಿ ಕ್ಷೇತ್ರ, 2) ಅರಣ್ಯ ಭೂಮಿ, 3) ವ್ಯವಸಾಯೇತರ ಭೂ ಬಳಕೆ, 4) ಬೀಳು ಭೂಮಿ, 5) ಹುಲ್ಲುಗಾವಲು, 6) ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ ಇತ್ಯಾದಿ ವಿವಿಧ ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ.
  • ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನು ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಒಳಗೊಂಡಿದೆ.
  • ವ್ಯವಸಾಯದಲ್ಲಿ ಸಾಂದ್ರ ಬೇಸಾಯ, ಜೀವನಾಧಾರ ಬೇಸಾಯ, ವಾಣಿಜ್ಯ ಬೇಸಾಯ, ಮಿಶ್ರ ಬೇಸಾಯ ಮತ್ತು ತೋಟಗಾರಿಕಾ ಬೇಸಾಯ ಎಂಬ ವಿಧಗಳಿವೆ.
  • ]ಯಾವುದೇ ಒಂದು ಪ್ರದೇಶವು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಹಲವಾರು ಬೆಳೆಗಳಿಂದ ಆವರಿಸಿದ್ದು, ಇವುಗಳ ಅನುಪಾತವನ್ನು ಬೆಳೆ ಮಾದರಿ ಎಂದು ಕರೆಯುವರು.
  • ಬೆಳೆ ಮಾದರಿಯಲ್ಲಿ ಮುಖ್ಯವಾಗಿ ಆಹಾರ ಧಾನ್ಯಗಳು ಮತ್ತು ಆಹಾರೇತರ ಧಾನ್ಯಗಳು ಅಥವಾ ವಾಣಿಜ್ಯ ಬೆಳೆಗಳೆಂದು ಎರಡು ಬೆಳೆಗಳ ಅನುಪಾತವನ್ನು ಕಾಣಬಹುದು.
  • ಯಾವುದೇ ಒಂದು ಪ್ರದೇಶದ ಬೆಳೆಯು ಅಲ್ಲಿರುವ ನೈಸರ್ಗಿಕ, ಆರ್ಥಿಕ,
  • ಸಾಮಾಜಿಕ ಮತ್ತು ರೈತರ ಮನೋಭಾವ ಮುಂತಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.
  • ದೇಶದಲ್ಲಿ ಮುಂಗಾರು ಅಥವಾ ಖಾರೀಫ್ ಬೇಸಾಯ, ಹಿಂಗಾರು ಅಥವಾ ಚಳಿಗಾಲದ ಅಥವಾ ರಬಿ ಬೇಸಾಯ, ಬೇಸಿಗೆ ಅಥವಾ ಜೇಡ್ ಬೇಸಾಯ ಎಂಬ ಮೂರು ವ್ಯವಸಾಯದ ಅವಧಿಗಳು ಕಂಡು ಬರುತ್ತವೆ.
  • ಭಾರತವು ಉತ್ಪಾದಿಸುತ್ತಿರುವ ಬೆಳೆಗಳಲ್ಲಿ ಆಹಾರದ ಬೆಳೆಗಳು, ವಾಣಿಜ್ಯ ಬೆಳೆಗಳು, ನಾರಿನ ಬೆಳೆಗಳು ಮತ್ತು ಪಾನೀಯ ಬೆಳೆಗಳು ಪ್ರಮುಖವಾಗಿವೆ.
  • ವ್ಯವಸಾಯದಲ್ಲಿ ಸಾಂದ್ರ ಬೇಸಾಯ, ಜೀವನಾಧಾರ ಬೇಸಾಯ, ವಾಣಿಜ್ಯ ಬೇಸಾಯ, ಮಿಶ್ರ ಬೇಸಾಯ ಮತ್ತು ತೋಟಗಾರಿಕಾ ಬೇಸಾಯ ಎಂಬ ವಿಧಗಳಿವೆ.
  • ಪುಷ್ಪ ಬೇಸಾಯವು ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಕ್ಷೇತ್ರಗಳಲ್ಲಿ ಪ್ರಮುಖವಾದ ಆರ್ಥಿಕತೆಯನ್ನು ಹೊಂದಿವೆ. ಇವುಗಳು ರೈತರ ಆದಾಯ ವೃದ್ಧಿಸಲು ಪೂರಕವಾಗಿವೆ.

ಇತರೆ ವಿಷಯಗಳು :

ಸಾಮಾಜಿಕ ಸವಾಲುಗಳು ಪಾಠದ ನೋಟ್ಸ್

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *