10th Class Bharatada Aranyagalu Social Science Notes Question Answer Guide Mcq Pdf Download In Kannada Medium, 10ನೇ ತರಗತಿ ಭಾರತದ ಅರಣ್ಯಗಳು ನೋಟ್ಸ್ Question Answer, 10ನೇ ತರಗತಿ ಭಾರತದ ಅರಣ್ಯಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು,10th Std ಭಾರತದ ಅರಣ್ಯಗಳು Question Answer, Bharatada Aranyagalu Notes in Kannada, State Syllabus class 10 Social Science 13th Lesson Question Answer, Kseeb Solutions for Class 10 Social Science Chapter 13 Notes Pdf, SSLC Social Science Chapter 13 Question Answer Kannada Medium, ಭಾರತದ ಅರಣ್ಯಗಳು ಪ್ರಶ್ನೋತ್ತರಗಳು, Bharatada Aranyagalu in Kannada Question Answer.

10ನೇ ತರಗತಿ ಭಾರತದ ಅರಣ್ಯಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ
1.ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣದ ಅರಣ್ಯಗಳು ಆಗಿದೆ.
2. ಹಿಮಾಲಯದಲ್ಲಿ ಆಲ್ಪೈನ್ ಅರಣ್ಯಗಳು ಕಂಡು ಬರುತ್ತವೆ.
- ಗಂಗಾನದಿ ಮುಖಜ ಭೂಮಿ ಪ್ರದೇಶವನ್ನು ಸುಂದರ್ ಬನ ಎಂದು ಕರೆಯುತ್ತಾರೆ.
- ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಉತ್ತರಾಖಂಡ ರಾಜ್ಯದಲ್ಲಿದೆ.
- ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಅನುಕೂಲಕರ ಪರಿಸರವನ್ನು ಹೊಂದಲು ದೇಶದಲ್ಲಿ 33 ಶೇ. ರಷ್ಟು ಅರಣ್ಯವಿರಬೇಕು.
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
1.ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.
2. ಭಾರತವು ಹೊಂದಿರುವ ಅರಣ್ಯ ಪ್ರದೇಶದ ವಿಸ್ತೀರ್ಣವೆಷ್ಟು?
ಭಾರತವು 2021 ರ ಪ್ರಕಾರ 7,13,789 ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ.
3. ಭಾರತದಲ್ಲಿ ಕಂಡುಬರುವ ಅರಣ್ಯಗಳ ಪ್ರಕಾರಗಳು ಯಾವುವು?
- ನಿತ್ಯ ಹರಿದ್ವರ್ಣದ ಅರಣ್ಯಗಳು
- ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳು
- ಉಷ್ಣವಲಯದ ಹುಲ್ಲುಗಾವಲು ಅರಣ್ಯ
- ಮ್ಯಾಂಗ್ರೂವ್ ಅರಣ್ಯಗಳು
- ಮರುಭೂಮಿ ಅರಣ್ಯಗಳು ಮತ್ತು
- ಹಿಮಾಲಯದ ಆಲ್ಪೈನ್ ಅರಣ್ಯಗಳು ಎಂಬುದಾಗಿ ಆರು ಮುಖ್ಯ ಪ್ರಕಾರಗಳಾಗಿ ವಿಂಗಡಿಸಬಹುದು.
4. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ
ಭಾರತದಲ್ಲಿ ಈ ಪ್ರಕಾರದ ಅರಣ್ಯಗಳು ಅತಿಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ. ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ಇವು ಭಾರತದ ಶೇ 65.50 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಭಾರತವ ಮಾನ್ಸೂನ್ ವಾಯುಗುಣವನ್ನು ಹೊಂದಿರುವುದರಿಂದ ಈ ಬಗೆಯ ಅರಣ್ಯಗಳು ವ್ಯಾಪಕವಾಗಿ ಹಂಚಿಕೆಯಾಗಿವೆ. ಇವುಗಳು ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯುದುರಿಸುವುದನ್ನು ರೂಢಿಸಿಕೊಂಡಿರುತ್ತವೆ.
5. ಅರಣ್ಯಗಳ ಮಹತ್ವವನ್ನು ತಿಳಿಸಿ.
- ಶುದ್ಧ ವಾಯು, ಆಹಾರ ಹಾಗೂ ಮೇವನ್ನು ಪೂರೈಸುತ್ತವೆ.
- ಉತ್ತಮ ಮಳೆ ತರಲು ಸಹಾಯಕವಾಗಿದೆ.
- ಮಣ್ಣಿನ ಸವೆತವನ್ನು ನಿಯಂತ್ರಿಸುತ್ತವೆ.
- ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ.
- ಔಷಧಿಯ ಸಸ್ಯಗಳ ಆಗರವಾಗಿವೆ.
- ಪ್ರವಾಸಿಗರನ್ನು ಆಕರ್ಷಿಸುತ್ತವೆ.
- ಉದ್ಯೋಗವಕಾಶಗಳನ್ನು ಒದಗಿಸುತ್ತವೆ.
- ಜೈವಿಕ ಪರಿಸರ ಸಮತೋಲನವನ್ನು ಕಾಪಾಡುತ್ತದೆ.
6. ಅರಣ್ಯ ನಾಶಕ್ಕೆ ಕಾರಣಗಳನ್ನು ಪಟ್ಟಿ ಮಾಡಿ.
ವ್ಯವಸಾಯದ ವಿಸ್ತರಣೆ, ಹೈನುಗಾರಿಕೆ, ರಸ್ತೆಗಳು ಮತ್ತು ರೈಲುಮಾರ್ಗಗಳ ನಿರ್ಮಾಣ, ನೀರಾವರಿ ಯೋಜನೆಗಳ ನಿರ್ಮಾಣ, ಕಾಡ್ಡಿಚ್ಚು, ಗಣಿಗಾರಿಕೆ ಮುಂತಾದವುಗಳು ಅರಣ್ಯ ನಾಶಕ್ಕೆ ಮುಖ್ಯ ಕಾರಣಗಳಾಗಿವೆ.
7. ಅರಣ್ಯ ಸಂರಕ್ಷಣೆ ಎಂದರೇನು?
ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವುದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
8. ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ನಮ್ಮ ಸಲಹೆಗಳನ್ನು ನೀಡಿ.
- ಕಾಡ್ಗಿಚ್ಚು ಉಂಟುಮಾಡುವ ಘರ್ಷಿತ ಮರಗಳನ್ನು ತೆಗೆಯುವುದು.
- ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು.
- ಸಸಿಗಳನ್ನು ನೆಡುವುದು, ಬೀಜಗಳನ್ನು ಹರಡುವುದು.
- ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು.
- ಅರಣ್ಯಗಳಲ್ಲಿ ಸಾಕು ಪ್ರಾಣಿಗಳ ಮೇಯಿಸುವಿಕೆಯನ್ನು ನಿಯಂತ್ರಿಸುವುದು.
- ಸಾರ್ವಜನಿಕರನ್ನು ಗಿಡ ನೆಡಲು ಪ್ರೋತ್ಸಾಹಿಸುವುದು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವುದು.
- ಸಾಮಾಜಿಕ ಅರಣ್ಯ ಯೋಜನೆಯನ್ನು ತ್ವರಿತವಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸು ವುದು.
ಹೆಚ್ಚುವರಿ ಪ್ರಶ್ನೆಗಳು:
I. ಬಿಟ್ಟ ಸ್ಥಳಗಳನ್ನು ತುಂಬಿರಿ
1.ರಾಜ್ಯವಾರು ಅರಣ್ಯ ಕ್ಷೇತ್ರಗಳಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜ್ಯ ಹರಿಯಾಣ.
2. ಭಾರತದಲ್ಲಿ ಅತಿಹೆಚ್ಚು ವಿಸ್ತಾರವಾಗಿ ಹರಡಿರುವ ಅರಣ್ಯಗಳು ನಿತ್ಯ ಹರಿದ್ವರ್ಣದ ಅರಣ್ಯಗಳು
3. ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಜಿಮ್ ಕಾರ್ಬೆಟ್
4. ಕುರುಚಲು ಜಾತಿಯ ಸಸ್ಯವರ್ಗ ಹಾಗೂ ಮುಳ್ಳುಕಂಟಿಗಳಿಂದ ಕೂಡಿರುವ ಅರಣ್ಯಗಳು ಮರುಭೂಮಿ ಅರಣ್ಯಗಳು
5. ರಾಜ್ಯವಾರು ಅರಣ್ಯ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಮಧ್ಯಪ್ರದೇಶ
II. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1. ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡು ಬರಲು ಕಾರಣವೇನು?
ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವಪ್ರದೇಶದವರೆಗಿನ ವೈವಿಧ್ಯಮಯ ವಾಯುಗುಣವು ಈ ಪರ್ವತಗಳಲ್ಲಿ ಕಂಡುಬರುವುದರಿಂದ ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ.
2. ಭಾರತದಲ್ಲಿ ನಿತ್ಯ ಹರಿದ್ವರ್ಣದ ಅರಣ್ಯಗಳು ಎಲ್ಲೆಲ್ಲಿ ಕಂಡು ಬರುತ್ತವೆ?
ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು 250 ಸೆಂ.ಮೀ.ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ.ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತವೆ.
3. ಮ್ಯಾಂಗ್ರೂವ್ ಅರಣ್ಯಗಳು ಎಲ್ಲಿ ಕಂಡುಬರುತ್ತವೆ?
ಮ್ಯಾಂಗ್ರೂವ್ ಅರಣ್ಯಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡು ಬರುತ್ತವೆ. ಗಂಗಾನದಿ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜ ಭೂಮಿಯಲ್ಲಿ ಕಂಡುಬರುತ್ತವೆ.
4. ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳು ವ್ಯಾಪಕವಾಗಿ ಹಂಚಿಕೆ ಯಾಗಿರಲು ಕಾರಣವೇನು? ಅವುಗಳಿಗೆ ಈ ಹೆಸರು ಬರಲು ಕಾರಣವೇನು?
ಭಾರತವು ಮಾನ್ಸೂನ್ ವಾಯುಗುಣವನ್ನು ಹೊಂದಿರುವುದರಿಂದ ಈ ಬಗೆಯ ಅರಣ್ಯಗಳು ವ್ಯಾಪಕವಾಗಿ ಹಂಚಿಕೆಯಾಗಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯುದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುತ್ತಾರೆ.
5. ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳನ್ನು ಪಟ್ಟಿಮಾಡಿ.
- ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಅಸ್ಸಾಂ.
- ಸುಂದರಬನ್ ರಾಷ್ಟ್ರೀಯ ಉದ್ಯಾಯನವನ-ಪಶ್ಚಿಮ ಬಂಗಾಳ.
- ಹಜಾರಿಬಾಗ್ ರಾಷ್ಟ್ರೀಯ ಉದ್ಯಾಯನವನ- ಜಾರ್ಖಂಡ್,
- ಗಿರ್ ರಾಷ್ಟ್ರೀಯ ಉದ್ಯಾಯನವನ – ಗುಜರಾತ್,
- ಕನ್ಯಾ ರಾಷ್ಟ್ರೀಯ ಉದ್ಯಾನವನ- ಮಧ್ಯ ಪ್ರದೇಶ.
- ತಡೋಬಾ ರಾಷ್ಟ್ರೀಯ ಉದ್ಯಾನವನ-ಮಹಾರಾಷ್ಟ್ರ,
6. ಭಾರತದ ಜೀವಿಗೋಳ ಮೀಸಲು ಪ್ರದೇಶಗಳನ್ನು ಹೆಸರಿಸಿ.
ನೀಲಗಿರಿ, ನಂದಾದೇವಿ, ನೋಕ್ರೆಕ್, ಗ್ರೇಟ್‌ಕೋಬಾರ್, ಮನ್ನಾರ್, ಅಖಾತ, ಮನಾಸ್ ಸುಂದರಬನ, ಸಿಮಿಲಿಪಾಲ್, ಕಾಂಚನಗಂಗಾ, ಅಮರಕಂಟಕ, ಶೀತ ಮರುಭೂಮಿ, ಪನ್ನಾ ಮತ್ತು ಶೇಷಾಚಲಂ ನೀಲಗಿರಿ.
ಮುಖ್ಯಾಂಶಗಳು:
- ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.
- ಭಾರತವು ಹೊಂದಿರುವ ಪ್ರಾಕೃತಿಕ ಸಸ್ಯವರ್ಗವನ್ನು 1. ನಿತ್ಯ ಹರಿದ್ವರ್ಣದ ಆರಣ್ಯಗಳು 2. ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳು 3. ಉಷ್ಣವಲಯದ ಹುಲ್ಲುಗಾವಲು ಅರಣ್ಯ 4. ಮ್ಯಾಂಗ್ರೂವ್ ಅರಣ್ಯಗಳು 5. ಮರುಭೂಮಿ ಅರಣ್ಯಗಳು ಮತ್ತು 6. ಹಿಮಾಲಯದ ಅನ್ ಅರಣ್ಯಗಳು ಎಂಬುದಾಗಿ ಆರು ಮುಖ್ಯ ಪ್ರಕಾರಗಳಾಗಿ ವಿಂಗಡಿಸಬಹುದು.
- ರಾಜ್ಯವಾರು ಅರಣ್ಯಗಳ ಕ್ಷೇತ್ರವನ್ನು ವಿಶ್ಲೇಷಿಸಿದಾಗ ಮಧ್ಯಪ್ರದೇಶ ರಾಜ್ಯವು ಪ್ರಥಮ ಸ್ಥಾನದಲ್ಲಿದ್ದರೆ, ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು ಕರ್ನಾಟಕವು 13ನೇ ಸ್ಥಾನದಲ್ಲಿದೆ.
- ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವುದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
- ಭಾರತದಲ್ಲಿ ಅರಣ್ಯಗಳ ಕ್ಷೇತ್ರವು ಪಂತರವಾಗಿ ಇಳಿಮುಖವಾಗುತ್ತಿರುವುದರಿಂದ ಅರಣ್ಯಗಳನ್ನು ಸಂರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ.
- ವಿವಿಧ ಪ್ರಾಣಿಗಳನ್ನು ಅವುಗಳ ಮೂಲ ಸ್ಥಳದಲ್ಲಿಯೇ ಸಂರಕ್ಷಿಸಲು ವನ್ಯಜೀವಿ ಧಾಮಗಳನ್ನು ನಿರ್ಮಿಸಲಾಗಿದೆ.
- ಭಾರತದಲ್ಲಿ ಇಂದು 567 ವನ್ಯಜೀವಿ ಧಾಮಗಳಿವೆ.
- ಭಾರತವು ಸಸ್ಯ ಸಮೃದ್ಧತೆಯ ಜೊತೆಗೆ ಪ್ರಾಣಿ ಸಂಪತ್ತಿನ ವೈವಿಧ್ಯತೆಯನ್ನೂ ಒಳಗೊಂಡಿದೆ.
- ಜೈವಿಕ ವ್ಯವಸ್ಥೆಗಳನ್ನು ಕಾಪಾಡಲು ದೇಶದಲ್ಲಿ 18 ಜೀವಿಗೋಳ ಮೀಸಲು ಪ್ರದೇಶಗಳನ್ನು ಸಂರಕ್ಷಿಸಲಾಗುತ್ತಿದೆ.
ಇತರೆ ವಿಷಯಗಳು :
ಭಾರತದ ಜಲ ಸಂಪನ್ಮೂಲಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್