10th Standard Bhagya Shilpigalu Kannada Notes Question Answer Guide Summery Extract Mcq Pdf Download Kannada Medium Karnataka State Syllabus 2025 Kseeb Solutions For Class 10 Standard Kannada Chapter 3 Notes Bhagya Shilpigalu Kannada Question and Answer, 10th Standard Kannada Chapter 3 Notes, SSLC Kannada Lesson 3 Notes, 10th Kannada Bhagya Shilpigalu Notes Pdf Summery Mcq Download, 10ನೇ ತರಗತಿ ಭಾಗ್ಯಶಿಲ್ಪಿಗಳು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು ಭಾಗ್ಯಶಿಲ್ಪಿಗಳು ಪ್ರಶ್ನೋತ್ತರಗಳು ಭಾಗ್ಯಶಿಲ್ಪಿಗಳು mcq questions, bhagya shilpigalu kannada notes kseeb solutions bhagya shilpigalu kannada lesson summary.

ಲೇಖಕರ ಪರಿಚಯ :
ಡಿ.ಎಸ್.ಜಯಪ್ಪಗೌಡ ರವರು 1947ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯವರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣ ಹೆಸರು. ಇತಿಹಾಸ ಮತ್ತು ಭಾಷಾಂತರ ವಿಷಯದಲ್ಲಿ ಮಹತ್ವದ ಕೃತಿಗಳನ್ನು ರಚಿಸಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಶ್ರೀಯುತರ ಪ್ರಮುಖ ಕೃತಿಗಳೆಂದರೆ :
- ಕರ್ನಾಟಕ ಗ್ರಾಮೀಣ ಸಂಸ್ಥೆಗಳು
- ಕರ್ನಾಟಕದ ಕಡಲಾಚೆಯ ಸಂಪರ್ಕಗಳು
- ಮೈಸೂರು ಒಡೆಯರು
- ಜನಪದ ಆಟಗಳು
- ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು
ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೂ ಭಾಜನರಾಗಿದ್ದಾರೆ.
ಪ್ರಸ್ತುತ ಸರ್.ಎಂ.ವಿಶ್ವೇಶ್ವರಯ್ಯ ಪಾಠವನ್ನು ಡಿ.ಎಸ್.ಜಯಪ್ಪಗೌಡ ರವರು ರಚಿಸಿರುವ “ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ ಸಾಧನೆಗಳು” ಕೃತಿಯಿಂದ ಆರಿಸಲಾಗಿದೆ
ಕಠಿಣ ಪದಗಳ ಅರ್ಥ :
- ಅಸ್ತಿಭಾರ = ಬುನಾದಿ
- ಗಿರಿಣಿ = ಮಿಲ್ಲು
- ಕಾಮಗಾರಿ = ಕೆಲಸ
- ಗೊಮ್ಮಟ್ಟವ್ಯಕ್ತಿತ್ವ = ಉನ್ನತ ವ್ಯಕ್ತಿತ್ವ
- ತಾಂತ್ರಿಕ = ತಂತ್ರಜ್ಞಾನಕ್ಕೆ ಸಂಬಂಧಿಸಿದ
- ಶತಮಾನೋತ್ಸವ = ನೂರು ವರ್ಷ ತುಂಬಿದ ಸಂಭ್ರಮದಲ್ಲಿ ಆಚರಿಸುವ ಉತ್ಸವ
- ಸುಪರ್ದಿ = ವಶ
- ಸ್ಥೈರ್ಯ = ದೃಢತೆ
- ಹರಿಕಾರ = ಮುಂದಾಳು
- ದೂಷಣೆ = ನಿಂದನೆ
- ವೈಜ್ಞಾನಿಕ = ವಿಜ್ಞಾನಕ್ಕೆ ಸಂಬಂಧಿಸಿದ
- ಸಮುಚ್ಛಯ = ಸಮೂಹ
- ಸುಸಂಗತ = ಯೋಗ್ಯವಾದ
- ಹಂಬಲ = ಬಯಕೆ
ಟಿಪ್ಪಣಿ
1.ರೀಜೆಂಟ್ = ಪ್ರತಿನಿಧಿ
(ಇಂಗ್ಲಿಷ್ ಪದ)
2. ಸ್ಯಾನಿಟರಿ = ನಿರ್ಮಲೀಕರಣ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ
(ಇಂಗ್ಲಿಷ್ ಪದ)
3. ದಿವಾನ = ಸಚಿವ, ಮಂತ್ರಿ,
(ಪರ್ಷಿಯನ್ ಪದ) ಮುಖ್ಯಾಧಿಕಾರಿ
4. ಮನ್ವಂತರ = ಪರಿವರ್ತನೆಯ ಕಾಲ
(ಸಂಸ್ಕೃತ ಪದ)
ಅಭ್ಯಾಸದ ಪ್ರಶ್ನೆಗಳು
ಅ) ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಯಾವಾಗ ಪಟ್ಟಾಭಿಷಿಕ್ತರಾದರು?
ಕ್ರಿ.ಶ.1895ರಲ್ಲಿ ಪಟ್ಟಾಭಿಷಿಕ್ತರಾದರು. ಆದರೆ ಆಗ ಅವರು 10 ವರ್ಷದ ಬಾಲಕನಾದುದರಿಂದ 1902ರ ಆಗಸ್ಟ್ 8ನೇ ತಾರೀಖಿನಂದು ಅಧಿಕಾರವನ್ನು ಸ್ವೀಕರಿಸಿದರು.
2. ನಾಲ್ವಡಿ ಕೃಷ್ಣರಾಜ ಒಡೆಯರವರು ಯಾವುದಕ್ಕೆ ಕಂಕಣ ಬದ್ಧರಾದರು ?
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟರು.
3. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
1900 ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು.
4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು ?
ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ ‘ಸರ್’ ಎಂಬ ಪದವಿಯನ್ನು ನೀಡಿ ಗೌರವಿಸಿತು.
5. ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ನೇಮಿಸಿದವರು ಯಾರು?
ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ವಿಶ್ವೇಶ್ವರಯ್ಯನವರನ್ನು ದಿವಾರನ್ನಾಗಿ ನೇಮಿಸಿದರು.
6. ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ಆಚರಣೆಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?
ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಆಚರಣೆಗಾಗಿ ಎಂಜಿನಿಯರ್ಸನ ದಿನಾಚರಣೆಯನ್ನು ಮಾಡಲಾಗುತ್ತದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು ?
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ
- ಗ್ರಾಮ ನಿರ್ಮಲೀಕರಣ
- ವೈದ್ಯ ಸಹಾಯ
- ವಿದ್ಯಾ ಪ್ರಚಾರ
- ನೀರಿನ ಸೌಕರ್ಯ ಮತ್ತು
- ಪ್ರಯಾಣ ಸೌಲಭ್ಯ
ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1900 ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು. 1907ರಲ್ಲಿ ವಾಣಿವಿಲಾಸನಗರ (ಮಾರಿಕಣಿವೆ) ಕಟ್ಟಲ್ಪಟ್ಟಿತು. 1911ರಲ್ಲಿ ಕೃಷ್ಣರಾಜ ಸಾಗರದವನ್ನು ಕಟ್ಟಿದರು.
3. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯನವರು ಏನು ಹೇಳಿದ್ದಾರೆ ?
ವಿಶ್ವೇಶ್ವರಯ್ಯನವರು ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರ ಎಂದು ನಂಬಿದ್ದರು. ‘ಶಿಕ್ಷಣಕ್ಕಾಗಿ ಶಿಕ್ಷಣ ಇರಬೇಕು, ಅದು ಕೇವಲ ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮ ಸಿದ್ದ ಹಕ್ಕಾಗಬೇಕು’ ಎಂದು ಹೇಳಿದ್ದಾರೆ.
4. ನೆಹರುರವರು ಸರ್ ಎಂ.ವಿಶ್ವೇಶ್ವರಯ್ಯನವರ ಬಗ್ಗೆ ಏನೆಂದು ಹೇಳಿದ್ದಾರೆ ?
ನೆಹರು ರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ನವರ ಶತಮಾನೋತ್ಸವ ಸಮಾರಂಭದಲ್ಲಿ ಮಾತಾಡುತ್ತಾ ಅವರ ಬಗ್ಗೆ ಈ ರೀತಿ ನುಡಿದಿದ್ದಾರೆ. ‘ದುರಾದೃಷ್ಟ ವಶಾತ್ ಭಾರತೀಯರಾದ ನಾವು ಹೆಚ್ಚು ಮಾತಾಡುವವರು ಮತ್ತು ನುಡಿದಂತೆ ನಡಯಂತೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹು ದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ, ಹೆಚ್ಚು ಕೆಲಸ ಮಾಡಿದ್ದೀರಿ, ಅದನ್ನು ನಾವು ತಮ್ಮಿಂದ ಕಲಿಯೋಣ’ ಎಂದು ಹೇಳಿದ್ದಾರೆ.
5. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ರವರು ಭದ್ರ ಬುನಾದಿಯನ್ನು ಹಾಕಿದರು. ಇದಕ್ಕಾಗಿ 1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕೆ ಹೂಡಿಕೆ ಹಾಗೂ ಅಭಿವೃದ್ಧಿ ನಿಧಿಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಜೀವ ವಿಮಾ ಯೋಜನೆಯನ್ನು ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕ್‌ಗಳನ್ನು ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ ಹೆಚ್ಚು ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗಲು ಆಯವ್ಯಯಕ್ಕೆ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಮಾದರಿ ಮೈಸೂರು ರಾಜ್ಯ ಹೇಗಾಯಿತು ?
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಆಗಿನ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದರು.
- ಅರಸರು, ಜನತೆ ಆಡಳಿತದಲ್ಲಿ ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದರು. ಇದಕ್ಕಾಗಿ ಪ್ರಜಾಪ್ರತಿನಿಧಿಸಭೆ ವರ್ಷದಲ್ಲಿ ಎರಡು ಬಾರಿ ಕರೆದರು.
- ನ್ಯಾಯ ವಿಧಾಯಕ ಸಭೆಯನ್ನು ಸ್ಥಾಪಿಸಿದರು.
- ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಗ್ರಾಮ ಪಂಚಾಯತಿಗಳನ್ನು ಪ್ರಾರಂಭಿಸಿದರು.
- ನಗರ ನೈರ್ಮಲ್ಯಕರಣ, ವೈದ್ಯಕೀಯ ಸೇವೆ, ವಿದ್ಯಾಪ್ರಚಾರ, ನೀರಿನ ಸೌಕರ್ಯಪ್ರಯಾಣ ಸೌಲಭ್ಯಗಳನ್ನು ಸ್ವಯಂ ಆಡಳಿತ ಕ್ಷೇತ್ರಗಳೆಂದು ಘೋಷಿಸಿದರು.
- ಹಲವಾರು ರೈಲು ಮಾರ್ಗಗಳನ್ನು ಸ್ಥಾಪಿಸಿದರು.
- ಶಿವನ ಸಮುದ್ರ ಬಳಿ ಜಲವಿದ್ಯುತ್ ಯೋಜನೆ ಹಾಗೂ ವಾಣಿವಿಲಾಸಸಾಗರ, ಕೃಷ್ಣರಾಜ ಸಾಗರದ ಬಳಿ ಕಾವೇರಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಮೈಸೂರು ಬ್ಯಾಂಕಿನ ಸ್ಥಾಪನೆ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ.
2. ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಬರೆಯಿರಿ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ವಿಶ್ವೇಶ್ವರಯ್ಯನವರನ್ನು ಮೈಸೂರು ದಿವಾನರಾಗಿ ನೇಮಿಸಿದರು. ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಆಡಳಿತದಲ್ಲಿ ಹೊಸ ಸುಧಾರಣೆಯನ್ನು ತಂದರು. ಸಂಸ್ಥಾನದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗಗಳನ್ನು ಪ್ರತ್ಯೇಕಗೊಳಿಸಿದರು.
ಶಿಕ್ಷಣದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದರು. ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿ ಪರಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.
ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಬೆಂಕಿಕಡ್ಡಿ, ರಸಗೊಬ್ಬರಗಳ ಕಾರ್ಖಾನೆ, ಹೆಂಚಿನ ಕಾರ್ಖಾನೆ, ಗಂಧದ ಎಣ್ಣೆ, ಸಾಬೂನು ಈ ಎಲ್ಲಾ ಕೈಗಾರಿಕೆಗಳ ಜೊತೆಗೆ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ, ಕಾಗದದ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಿದರು. ಮೈಸೂರು ಬ್ಯಾಂಕ್, ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್, ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು. ರೈತರಿಗೆ, ಕರಕುಶಲಕರ್ಮಿಗಳಿಗೆ ಸಾಲ ಸೌಲಭ್ಯ, ಜೀವ ವಿಮಾ ಸೌಲಭ್ಯವನ್ನು ಒದಗಿಸಿಕೊಟ್ಟರು.
ಒಟ್ಟಾರೆ ಮೈಸೂರು ಸಂಸ್ಥಾನವನ್ನು ‘ಮಾದರಿ ಮೈಸೂರಾಗಿ’ ಪರಿವರ್ತಿಸಿದರು. ಹೀಗೆ ಮೈಸೂರು ಸಂಸ್ಥಾನವನ್ನು ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಅದರ ಸರ್ವೋತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದರು.
3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ರವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ರವರು ಸಲ್ಲಿಸಿರುವ ಕೊಡುಗೆ ಅಪಾರ. ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ಅದಕ್ಕಾಗಿ 1913ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು.
‘ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ’ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ. ‘ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮ ಸಿದ್ದ ಹಕ್ಕಾಗಬೇಕು’ ಎಂಬುದನ್ನು ಮನಗಂಡ ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಜೊತೆಗೆ ‘ಕನ್ನಡ ಸಾಹಿತ್ಯ ಪರಿಷತ್ತನ್ನು’ ಸ್ಥಾಪಿಸಿದ್ದು ಇವರ ಮತ್ತೊಂದು ಸಾಧನೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ :
1. ‘ಸಾಮಾಜಿಕ ಕಾನೂನುಗಳ ಹರಿಕಾರ’
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡರವರು ರಚಿಸಿರುವ ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ, ಸಾಮಾಜಿಕ ಅಭಿವೃದ್ಧಿಗಳ ಬಗ್ಗೆ ಇದ್ದ ಕಾಳಜಿಯ ಬಗ್ಗೆ ತಿಳಿಸಲಾಗಿದೆ.
ಭಾಷೆ ಸರಳ ಹಾಗೂ ಸಹಜ ಶೈಲಿಯಲ್ಲಿ ಮೂಡಿಬಂದಿದೆ.
2. ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡರವರು ರಚಿಸಿರುವ ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು. ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿದ ನಂತರ ಸುಕ್ಕೂರ್ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾದರು. ಪೂನಾದ ಮುಥಾ ಕಾಲುವೆಗೆ ಪೀಪ್ ಜಲಾಶಯಕ್ಕೆ ಸ್ವಯಂ ಚಾಲಕ ಬಾಗಿಲನ್ನು ಅಳವಡಿಸಿದಾಗ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿತು ಎಂಬುದಾಗಿ ಲೇಖಕರು ತಿಳಿಸುವ ಸಂದರ್ಭ ಇದಾಗಿದೆ.
ವಿಶೇಷತೆ : ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗುವ ಮೊದಲು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕರಾಗಿ ಹಲವಾರು ಜನಪಯೋಗಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ರವರು ಕೂಡ ಮುಕ್ತ ಕಂಠದಿಂದ ಹೊಗಳಿದರು. ಮುಥಾ ಕಾಲುವೆಯ ಪೀಪ್ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದ್ದು, ಇವರ ಅನ್ವೇಷಣೆಯ ಸಾಧನೆಯ ಕಿರೀಟದ ಸೌಂದರ್ಯಕ್ಕೆ ಮತ್ತೊಂದು ಗರಿ ಹಚ್ಚಿ ಅವರ ಸಾಧನೆ ಎಲ್ಲರ ಪ್ರಶಂಸೆಗೆ ಅರ್ಹರಾದರು.
ವಿಶೇಷತೆ : ಪ್ರಸ್ತುತ ಮೇಲ್ಕಂಡ ಸಾಲು, ವಿಶ್ವೇಶ್ವರಯ್ಯನವರ ಜಾಣ್ಮೆ ಹಾಗೂ ಬುದ್ದಿವಂತಿಕೆಗೆ ಸಾಕ್ಷಿಯಾಗಿದೆ.
3. ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ. ಈ ವಾಕ್ಯವನ್ನು ಡಿ.ಎಸ್. ಜಯಪ್ಪಗೌಡರಿಂದ ರಚಿತವಾದ ‘ಸರ್. ಎಂ. ವಿಶ್ವೇಶ್ವರಯ್ಯನವರು’ ಎಂಬ ಶೀರ್ಷಿಕೆಯಿಂದ ಆರಿಸಲಾಗಿದ್ದು, ಇದನ್ನು ‘ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು’ ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ : ವಿಶ್ವೇಶ್ವರಯ್ಯನವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ದಿವಾನರನ್ನಾಗಿ ನೇಮಿಸಿಕೊಂಡರು ಆ ಸಂದರ್ಭದಲ್ಲಿ ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನ ಗೊಳಿಸಿದ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯವನ್ನು ಲೇಖಕರು ತಿಳಿಸಿದ್ದಾರೆ.
ಸ್ವಾರಸ್ಯ : ವಿಶ್ವೇಶ್ವರಯ್ಯನವರು ದಿವಾನರಾದ ಮೇಲೆ ಮೈಸೂರು ಸಂಸ್ಥಾನದ ನಕ್ಷೆಯನ್ನೇ ಬದಲಾಯಿಸಿತು ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಛೇರಿ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಟೇ ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಇದರಿಂದಾಗಿ “ಮೈಸೂರು ಮಾದರಿ” ಎಂಬ ಹೊಸ ಆಡಳಿತ ಮಾದರಿ ಜನ್ಮ ತಾಳಿತು.
ವಿಶೇಷತೆ : ಮೈಸೂರು ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದೆ. ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದ್ದನ್ನೂ ಗಾಂಧೀಜಿಯವರು ಮುಕ್ತ ಕಂಠದಿಂದ ಹೊಗಳಿದರು.
4. ‘ತಾವು ಕಡಿಮೆ ಮಾತನಾಡಿದ್ದೀರಿ’, ಹೆಚ್ಚು ಕೆಲಸ ಮಾಡಿದ್ದೀರಿ
ಪ್ರಸ್ತಾವನೆ : ಪ್ರಸ್ತುತ ವಾಕ್ಯವನ್ನು ‘ಡಿ.ಎಸ್. ಜಯಪ್ಪಗೌಡ’ರಿಂದ ರಚಿತವಾದ “ಭಾಗ್ಯಶಿಲ್ಪಿಗಳು” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ. ಇದನ್ನು “ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು” ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ : ಪ್ರಸ್ತುತ ವಾಕ್ಯವನ್ನು ಪಂಡಿತ್ ವಾಹರಲಾಲ್ ನೆಹರು ರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯರವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರ ಬಗ್ಗೆ ಈ ರೀತಿ ನುಡಿದರು.
ಸ್ವಾರಸ್ಯ : ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವ ನೆಂಬ ದೂಷಣೆಗೆ ಒಳಗಾಗಿದ್ದೇವೆ. ಆದರೆ ತಾವು ಕಡಿಮೆ ಮಾತಾಡಿದ್ದೀರಿ, ಹೆಚ್ಚು ಕೆಲಸ ಮಾಡಿದ್ದೀರಿ. ಇದನ್ನು ನಾವು ತಮ್ಮಿಂದ ಕಲಿಯೋಣ ಎಂಬುದಾಗಿ ಪಂಡಿತ್ ಜವಾಹರ್‌ಲಾಲ್ ನೆಹರು ರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯರವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರ ಬಗ್ಗೆ ಈ ಮಾತುಗಳ ಮೂಲಕ ಮೆಚ್ಚುಗೆಯನ್ನು ಸೂಚಿಸಿದ್ದರು.
ಈ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ.
೧. ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಗೆ ರೀಜೆಂಟರಾಗಿ ಕಾರ್ಯನಿರ್ವಹಿಸಿದವರು___________
೨. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ _________ ನಿಷೇಧವಾಯಿತು.
೩. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ __________ ಆಗಿ ಸೇವೆ ಪ್ರಾರಂಭಿಸಿದರು.
೪. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ _________ ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು.
೫. ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ___________ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.
ಉತ್ತರಗಳು :
೧. ಮಹಾರಾಣಿ ವಾಣಿವಿಲಾಸರವರು
೨. ಜಾತಿ ಪರಿಗಣನೆ
೩. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್
೪. ಲಾರ್ಡ್ ಸಂಡ್ ಹರ್ಸ್ಟ್
೫. ಭಾರತ ರತ್ನ
ಸೈದ್ದಾಂತಿಕ ಭಾಷಾಭ್ಯಾಸ
ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ :-
೧. ಹಂಪಿಯಲ್ಲಿನ ದೇವಾಲಯ ನೋಡಿಕೊಂಡು ಬಂದೆವು (ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ)
ಹಂಪಿಯಲ್ಲಿನ ದೇವಾಲಯವನ್ನು ನೋಡಿಕೊಂಡು ಬರುವೆವು.
೨. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು (ವರ್ತಮಾನ ಕಾಲಕ್ಕೆ ಪರಿವರ್ತಿಸಿ)
ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಿದ್ದಾರೆ / ಅಥವಾ ಮಾಡುತ್ತಾರೆ.
೩. ಹೆಜ್ಜೆ ಹೆಜ್ಜೆಗೆ ಇತಿಹಾಸ ಅಡಿಗಲ್ಲುಗಳು ದೊರೆಯುತ್ತವೆ (ಭೂತಕಾಲಕ್ಕೆ ಪರಿವರ್ತಿಸಿ)
ಹೆಜ್ಜೆ ಹೆಜ್ಜೆ ಇತಿಹಾಸದ ಅಡಿಗಲ್ಲುಗಳು ದೊರೆತಿವೆ.
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳ ತತ್ಸಮ – ತದ್ಭವ ಬರೆಯಿರಿ :-
ತತ್ಸಮ | ತದ್ಭವ |
---|---|
Ω. ವಂಶ | ಬಂಚ |
೨. ಸ್ಥಾನ | ತಾಣ |
೩. ಯಶ | ಜಸ |
೪. ಪಟ್ಟಣ | ಪತ್ತನ |
೫. ಕಾರ್ಯ | ಕಜ್ಜು |
೨. ನೀಡಿರುವ ಪದಗಳಲ್ಲಿ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
ಡಿಪ್ಲೊಮಾ, ದಿವಾನ, ಪ್ರೌಢ, ಶಿಕ್ಷಣ, ನಡೆಸು, ಸೋಪು, ಕಾರ್ಖಾನೆ, ಕಾಗದ, ಕಚೇರಿ
ಅನ್ಯದೇಶ್ಯ ಪದಗಳು : ಡಿಪ್ಲೊಮಾ, ದಿವಾನ
೩. ಈ ಗದ್ಯದಲ್ಲಿ ಬಂದಿರುವ ಐದೈದು ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಪದಗಳನ್ನು ಪಟ್ಟಿ ಮಾಡಿ.
ರೂಢನಾಮ | ಅಂಕಿತನಾಮ | ಅನ್ವರ್ಥನಾಮ |
---|---|---|
೧.ಮಹಾರಾಜ | ನಾಲ್ವಡಿ ಕೃಷ್ಣರಾಜ ಒಡೆಯರ್ | ಮಾತುಗಾರ |
೨.ಜನರು | ಮೈಸೂರು | ಯೋಗಿ |
೩. ಸಾಮಾಜಿಕ ಕಾನೂನು | ಮೂಥಾ ಕಾಲುವೆ | ದಕ್ಷ |
೪. ಸಂಸ್ಥೆಗಳು | ಕಬ್ಬಿಣ | ರಾಜರ್ಷಿ |
೫. ಯೋಜನೆಗಳು | ತಿಗ್ರಜಲಾಶಯ | ವಿಜ್ಞಾನಿ |
೪. ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ಕೂಡಿ ಬಾಳಿದರೆ ಸ್ವರ್ಗ ಸುಖ
ಇದೊಂದು ಪ್ರಸಿದ್ಧ ಗಾದೆಯಾಗಿದೆ. ಹಿರಿಯರು, ಕಿರಿಯರಿಗೆ ಹೇಳಿರುವ ಕಿವಿ ಮಾತೂ ಸಹ ಆಗಿದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿದ್ದು ಮನೆ ತುಂಬ ಜನ ಇರುತ್ತಿದ್ದರು. ಅಜ್ಜ- ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಅವರು ಮಕ್ಕಳು, ಚಿಕ್ಕಮ್ಮ-ಚಿಕ್ಕಪ್ಪ ಅವರ ಮಕ್ಕಳು, ಅಣ್ಣ-ಅತ್ತಿಗೆ ಎಲ್ಲರೂ ಇರುತ್ತಿದ್ದರೂ ಇದರಿಂದ ಮನೆಯಲ್ಲಿ ಎಲ್ಲಾ ಕಷ್ಟ ಸುಖಗಳಲ್ಲಿಯೂ ಎಲ್ಲರೂ ಆತ್ಮೀಯವಾಗಿ ಪಾಲ್ಗೊಳ್ಳುತ್ತಿದ್ದರು. ಮದುವೆ, ಮುಂಜಿ, ಹಬ್ಬ-ಹರಿದಿನಗಳಲ್ಲಿಯಂತೂ ಆ ಸಂಭ್ರಮ ಹೇಳತೀರದು. ಆ ಕುಟುಂಬವು ಒಂದು ಜೇನಿನ ಗೂಡಿನಂತೆ ಇತ್ತು. ಹಾಡು-ಹಸೆ, ಸಂಭ್ರಮ, ಸುಖ, ಖುಷಿ ಎಲ್ಲವನ್ನು ನಾವು ಅಲ್ಲಿ ಕಾಣಬಹುದಿತ್ತು. ಮನೆಯ ಹೆಣ್ಣು ಮಕ್ಕಳು ರೇಷ್ಮೆ ಸೀರೆ ಉಟ್ಟು ಒಡವೆ ಧರಿಸಿ ಓಡಾಡುವುದು, ಮನೆ ಮಂದಿಯೆಲ್ಲ ಒಟ್ಟಿಗೆ ನಗುತ್ತಾ ಓಡಾಡುವುದು, ಕಂಡು ಹಿರಿಯರು ಹೇಳೀದ ಮಾತೇನೆಂದರೆ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂದು.
೨. ಮಾತೇ ಮುತ್ತು ಮಾತೃ ಮೃತ್ಯು
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದಿದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನ್ನೇ ಗೆಲ್ಲಬಹುದು. ಹಾಗೆಯೇ ಮಾತಿನಿಂದ ದ್ವೇಷ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯವು ಬರಬಹುದು. ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ.
ಹೆಚ್ಚಿನ ಅಭ್ಯಾಸಕ್ಕಾಗಿ
೧. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ವಿಶ್ವೇಶ್ವರಯ್ಯರವರ ಪೂರ್ವಜರು ಎಲ್ಲಿಯವರು?
ವಿಶ್ವೇಶ್ವರಯ್ಯ ರವರ ಪೂರ್ವಜರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡಂ’ ಅಗ್ರಹಾರಕ್ಕೆ ಸೇರಿದವರು.
೨. ವೆಂಕಟಲಕ್ಷ್ಮಿಯವರು ತಮ್ಮ ಕುಟುಂಬವನ್ನು ಚಿಕ್ಕ ಬಳ್ಳಾಪುರಕ್ಕೆ ಸ್ಥಳಾಂತರಿಸಲು ಕಾರಣವೇನು?
ಮಕ್ಕಳ ಅಭ್ಯಾಸಕ್ಕಾಗಿ ತಮ್ಮ ಕುಟುಂಬವನ್ನು ಚಿಕ್ಕ ಬಳ್ಳಾಪುರಕ್ಕೆ ಸ್ಥಳಾಂತರಿಸಿದರು.
೨. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಹೈದರಾಬಾದ್ ನಗರದಲ್ಲಿ ವಿಶ್ವೇಶ್ವರಯ್ಯನವರು ಸಲ್ಲಿಸಿದ ಸೇವೆ ಯಾವುದು?
ಹೈದರಾಬಾದ್ ನಗರದಲ್ಲಿ ವಿಶ್ವೇಶ್ವರಯ್ಯನವರು ಸಲ್ಲಿಸಿದ ಸೇವೆಯೆಂದರೆ – ಹೈದರಾಬಾದ್ ನಗರಕ್ಕೆ ‘ಈಸಿ’ ಮತ್ತು ‘ಮೂಸಿ’ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು. ಅದನ್ನು ತಡೆಯಲು ಎರಡು ನದಿ ಗಳಿಂದಲೂ ಪ್ರತ್ಯೇಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿದರು. ಹೈದರಾಬಾದ್ ನಗರವನ್ನು ಭಾರತದ ಸಂಯೋಜಿತ ನಗರಗಳ ಸಾಲಿಗೆ ಸೇರ್ಪಡೆ ಯಾಗುವಂತೆ ಮಾಡಿದರು.
೨. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯರವರು ಮಾಡಿದ ಮಾರ್ಪಾಡುಗಳಾವುವು?
ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯನವರು ಹಲ ವಾರು ಮಾಪಾಡುಗಳನ್ನು ಮಾಡಿದರು. ಅವುಗಳಲ್ಲಿ, ಪ್ರಮುಖವಾದವುಗಳೆಂದರೆ – ೧೯೧೩ರಲ್ಲಿ ಮೈಸೂರು ಬ್ಯಾಂಕ್‌ನ್ನು ಸ್ಥಾಪಿಸಿದರು. ಅನಂತರ ಉಳಿತಾಯ ಬ್ಯಾಂಕ್ ಗಳನ್ನು ಅಸ್ಥಿತ್ವಕ್ಕೆ ಬಂದವು, ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕೆ ಹೂಡಿಕೆ ಮತ್ತು ಅಭಿವೃದ್ಧಿ ನಿದಿಗಳು ರಚಿತಗೊಂಡವು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರು ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಬ್ಯಾಂಕ್‌ಗಳನ್ನು ಬಲಭದ್ರಗೊಳಿಸಿದರು. ಪ್ರಾಂಥೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗು ವಂತೆ ಆದಾಯ – ವ್ಯಯದಲ್ಲಿ ದೃಷ್ಟಿಕೋನವನ್ನು ಕೈಗೊಂಡರು.
3. ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
1. ಮುಂಬೈ ಮತ್ತು ಪೂನಾ ನಗರಗಳಲ್ಲಿ ವಿಶ್ವೇಶ್ವರಯ್ಯ ರವರು ಸಲ್ಲಿಸಿದ ಸೇವೆಯನ್ನು ವಿವರಿಸಿ.
ವಿಶ್ವೇಶ್ವರಯ್ಯನವರು ಮುಂಬೈ ಮತ್ತು ಪೂನಾ ನಗರದಲ್ಲಿ ಸಲ್ಲಿಸಿದ ಸೇವೆ ಅಪಾರ, ಅವುಗಳಲ್ಲಿ ಪ್ರಮುಖವಾದುದು-“ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಕಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸುಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.
ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂದ್ ಪ್ರಾಂತ್ಯದ “ಸುಕ್ಕೂರ್” ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಪೂನಾದ “ಮುಥಾ” ಕಾಲುವೆಗೆ ನೀರಿನ ನೆಲೆಯಾಗಿದ್ದ ‘ಪೀಪ್’ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದರು. ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯನರ ಸಾಧನೆಯ ಮತ್ತೊಂದು ಗರಿ, ಮುಂದಿನ ನಾಲ್ಕು ವರ್ಷಗಳ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಗೊಂಡರು, ಹಲವಾರು ಯೋಜನೆಗಳನ್ನು ಜಾರಿಗೆ ತಂದರು.
ಹೆಚ್ಚಿನ ಅಭ್ಯಾಸಕ್ಕಾಗಿ
1. ಕೆಳಗಿನ ವಾಕ್ಯಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ:
೧. ವಿಶ್ವೇಶ್ವರಯ್ಯನವರ ತಂದೆಯ ಹೆಸರು ________
(ಅ) ಶ್ರೀನಿವಾಸ ಶಾಸ್ತ್ರಿ
(ಆ) ಶ್ರೀನಿವಾಸ ಅಯ್ಯಂಗಾರ್
(ಇ) ಶ್ರೀನಿವಾಸಾಚಾರ್ಯ
(ಈ) ಶ್ರೀನಿವಾಸಗೌಡ.
೨. ‘ಕರ್ನೂಲು’ ಜಿಲ್ಲೆ ಇರುವುದು ________ ನಲ್ಲಿ.
(ಅ) ಕರ್ನಾಟಕ
(ಆ) ಆಂಧ್ರಪ್ರದೇಶ
(ಇ) ತಮಿಳುನಾಡು
(ಈ) ಮಹಾರಾಷ್ಟ್ರ
೩. ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ _________ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದರು.
(ಅ) ಉನ್ನತ
(ಆ), ಎಂಜಿನಿಯರಿಂಗ್
(ಇ) ಡಿಪ್ಲೊಮೊ
(ಈ) ಸ್ನಾತೊಕೋತ್ತರ
೪. ________ ವಿಶ್ವವಿದ್ಯಾನಿಲಯದ ಸ್ಥಾಪನೆ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಮತ್ತೊಂದು ಫಲಕೃತಿ,
(ಅ) ಕರ್ನಾಟಕ
(ఆ) ಕುವೆಂಪು
(ಇ) ಬೆಂಗಳೂರು
(ಈ) ಮೈಸೂರು
೫. ಮೈಸೂರು ಬ್ಯಾಂಕ್ ಸ್ಥಾಪನೆಯಾದುದು_________
(ಅ) 1910
(ಆ) 1911
(ಇ) 1912
(ಈ) 1913
ಉತ್ತರಗಳು: 1)-ಅ, 2)-ಆ, 3)-ಇ, 4)-ಈ, 5)-ಈ
2) ಹೊಂದಿಸಿ ಬರೆಯಿರಿ.
ಅ | ಆ |
---|---|
೧. ಭಾಗ್ಯಶಿಲ್ಪಿ | ಅ) ರಂಗಾಚಾರ್ಯ |
೨. ಮೋಕ್ಷಗೊಂಡಂ | ಆ) ಲಾರ್ಡ್ ಸಂಡ್ ಹರ್ಸ್ಟ್ |
೩. ಪಾಳೆಯಗಾರ | ಇ) ವಿಶ್ವೇಶ್ವರಯ್ಯನವರು |
೪. ಮುಂಬೈ ಪ್ರಾಂತ್ಯದ ಗವರ್ನರ್ | ಈ) ಅಗ್ರಹಾರ |
೫. ದಿವಾನರು | ಉ) ಭೈರೇಗೌಡ |
ಉತ್ತರಗಳು : 1)-ಇ, 2)- ಈ, 3)-ಉ, 4) -ಆ, 5)-ಅ
3) ಈ ಕೆಳಗಿನ ಪದಗಳಿಗೆ ಬೇರೆ-ಬೇರೆ ಅರ್ಥ ಬರೆಯಿರಿ.
೧. ದಿವಾನ = ಸಚಿವ, ಮಂತ್ರಿ, ಮರದಿಂದ ಮಾಡಿದ ಕುಳಿತು, ಮಲಗಲು ಇರುವ ಪೀಠೋಪಕರಣ
೨. ಕರ = ಕೈ, ಕಂದಾಯ
೩. ಅರಿವೆ = ತಿಳುವಳಿಕೆ, ಬಟ್ಟೆ
೪. ಭಾಷೆ = ವಚನ, (ಆಣೆ ಮಾಡುವುದು), ನುಡಿ.
4) ಈ ಕೆಳಗಿನ ಪದಗಳನ್ನು ವಿಗ್ರಹ ಮಾಡಿ, ಸಮಾಸದ ಹೆಸರನ್ನು ಹೆಸರಿಸಿ.
1) ಬೆಟ್ಟ + ತಾವರೆ = ಬೆಟ್ಟದಾವರೆ = ತತ್ಪುರುಷ ಸಮಾಸ
2) ಸಪ್ತ + ಸ್ವರಗಳು = ಸಪ್ತಸ್ವರಗಳು = ದ್ವಿಗು ಸಮಾಸ
3) ಹೊಸದು + ಕನ್ನಡ = ಹೊಸಗನ್ನಡ = ಕರ್ಮಧಾರೆಯ ಸಮಾಸ
4) ಕೈ + ಹಿಡಿ = ಕೈಹಿಡಿ = ಕ್ರಿಯಾಸಮಾಸ
5) ತಲೆಯ + ಮುಂದು = ಮುಂದಲೆ = ಅಂಶಿಸಮಾಸ