10th Standard Bank Vyavaharagalu Chapter Social Notes | 10ನೇ ತರಗತಿ ಬ್ಯಾಂಕ್ ವ್ಯವಹಾರಗಳು ಪಾಠದ ನೋಟ್ಸ್‌

Bank Vyavaharagalu

10th Class Bank Vyavaharagalu Social Science Notes Question Answer Guide Mcq Pdf Download in Kannada Medium 2025, SSLC ಬ್ಯಾಂಕ್ ವ್ಯವಹಾರಗಳು ಸಮಾಜ ನೋಟ್ಸ್, 10ನೇ ತರಗತಿ ಬ್ಯಾಂಕ್ ವ್ಯವಹಾರಗಳು ನೋಟ್ಸ್‌ ಪ್ರಶ್ನೋತ್ತರಗಳು,10th ಬ್ಯಾಂಕ್ ವ್ಯವಹಾರಗಳು ಪ್ರಶ್ನೋತ್ತರಗಳು, 10th Std Bank Vyavaharagalu Question Answer, 10th Class social Science Chapter 16 Question Answer in Kannada Medium, Kseeb Solutions for Class 10 Social Science Chapter 16 Notes State Syllabus, Bank Transactions Class 10 Notes, Bank Vyavahara 10th Class Important Question.

Bank Vyavaharagalu

10ನೇ ತರಗತಿ ಬ್ಯಾಂಕ್ ವ್ಯವಹಾರಗಳು ಸಮಾಜ ನೋಟ್ಸ್

1.ಬ್ಯಾಂಕ್ ಎಂಬ ಪದವು ಫ್ರೆಂಚಿನ ಬ್ಯಾಂಕ್ ಶಬ್ದದಿಂದ ಬಂದಿದೆ.

2. ಬ್ಯಾಂಕುಗಳ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಗಿದೆ.

3. ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

4. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಅಂಚೆ ಇಲಾಖೆಯು ನೀಡುತ್ತದೆ.

5. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ಚಾಲ್ತಿ ಖಾತೆ

6. ಠೇವಣಿಯನ್ನು ನಿಗಧಿತ ಅವಧಿಗೆ ನಿಶ್ಚಿತ ಠೇವಣಿ ಖಾತೆಯಲ್ಲಿ ಇಡಬಹುದಾಗಿದೆ.

1.ಬ್ಯಾಂಕ್ ಎಂದರೇನು?

ಬ್ಯಾಂಕ್ ಎಂಬ ಪದವು ಇಟಾಲಿಯನ್ “ಬ್ಯಾಂಕೊ” ಅಥವಾ ಫ್ರೆಂಚಿನ “ಬ್ಯಾಂಕ್” ಎಂಬ ಶಬ್ದಗಳಿಂದ ಬಂದಿದೆ. ಇವುಗಳ ಅರ್ಥ ‘ಬೆಂಚು’ ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್ ಆಗಿದೆ.

2. ಬ್ಯಾಂಕಿನ ವ್ಯವಹಾರಕ್ಕೆ ಸಂಭಂಧಿಸಿದಂತೆ ಗಮನಿಸಬಹುದಾದ ಗುಣಲಕ್ಷಣಗಳ ಪಟ್ಟಿ ಮಾಡಿ.

  • ಹಣದ ವಹಿವಾಟು.
  • ವ್ಯಕ್ತಿ/ಸಂಸ್ಥೆ/ಕಂಪನಿ
  • ಠೇವಣಿಗಳನ್ನು ಅಂಗೀಕರಿಸುತ್ತದೆ.
  • ಸಾಲಗಳನ್ನು ಕೊಡುವುದು.
  • ಪಾವತಿ ಮತ್ತು ಹಿಂದಕ್ಕೆ ಪಡೆಯುವುದು.
  • ಏಜೆಂಟ್ ಅಥವಾ ಏಜೆಂಟ್ ನಿಯೋಜನೆ ಮತ್ತು ಉಪಯುಕ್ತ ಸೇವೆಗಳು.
  • ಲಾಭ ಮತ್ತು ಸೇವಾ ಭಾವನೆ.
  • ನಿರಂತರ ವಿಸ್ತರಿಸುತ್ತಾ ಹೋಗುವ ಕಾರ್ಯಗಳು.
  • ಸಂಬಂಧ ಕಲ್ಪಿಸುವ ಕೊಂಡಿ.
  • ಬ್ಯಾಂಕಿಂಗ್ ವ್ಯವಹಾರ.
  • ಹೆಸರಿನ ಗುರುತು.

3. ಬ್ಯಾಂಕ್ ನಿರ್ವಹಿಸುವ ಕಾರ್ಯಗಳಾವುವು?

  • ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಅಂಗೀಕರಿಸುವುದು.
  • ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲಗಳನ್ನು ಕೊಡುವುದು.
  • ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು.
  • ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲು ಮಾಡುವುದು.
  • ಹುಂಡಿಗಳನ್ನು ಸೋಡಿ ಮಾಡುವುದು.
  • ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.
  • ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು.
  • ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿಗಳಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು.
  • ಸಾಲಪತ್ರಗಳನ್ನು ಮತ್ತು ಜವಾಬ್ದಾರಿ ಪತ್ರಗಳನ್ನು ಕೊಡುವುದು.
  • ಸರ್ಕಾರದ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು.

4. ಬ್ಯಾಂಕ್ ಮತ್ತು ಗ್ರಾಹಕರ ಸಂಬಂಧವನ್ನು ತಿಳಿಸಿ.

ಬ್ಯಾಂಕರನಿಗೂ ಅದರ ಗ್ರಾಹಕರಿಗೂ ಇರುವ ಸಂಬಂಧಗಳನ್ನು ಎರಡು ರೀತಿಗಳಲ್ಲಿ ವಿಂಗಡಿಸಬಹುದು.

  1. ಸಾಮಾನ್ಯ ಸಂಬಂಧ
  2. ವಿಶೇಷ ಸಂಬಂಧ

1.ಸಾಮಾನ್ಯ ಸಂಬಂಧ: ಇದು ಮೂರು ಮುಖ್ಯ ವಿಧಗಳಿಂದ ಕೂಡಿದೆ.

  • ಪ್ರಾಥಮಿಕ ಸಂಬಂಧ (ಸಾಲಿಗೆ ಮತ್ತು ಸಾಲಗಾರನ ಸಂಬಂಧದಂತೆ).
  • ಸಹಾಯಕ ಅಥವಾ ಉಪಕಾರ ಸಂಬಂಧ (ಧರ್ಮದರ್ಶಿ ಅಥವಾ ನಿಕ್ಷೇಪಧಾರಿ ಮತ್ತು ಪ್ರಯೋಜನಕಾರಿಯ ನಡುವಿನ ಸಂಬಂಧ).
  • ಕಾರಬಾರಿ ಅಥವಾ ನಿಯೋಗಿ ಮತ್ತು ಮುಖ್ಯಸ್ಥನ ಸಂಬಂಧ.

2. ವಿಶೇಷ ಸಂಬಂಧ:

  • ಚೆಕ್ಕುಗಳನ್ನು ಮನ್ನಣೆ ಮಾಡುವುದು.
  • ಗ್ರಾಹಕನ ಲೆಕ್ಕಗಳ ಗೋಪ್ಯತೆ ಕಾಪಾಡುವುದು.

5. ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಖಾತೆ ತೆರೆಯುವವರ ಸಂಖ್ಯೆ ಹೇರಳವಾಗಿರುತ್ತದೆ. ಕಾರಣ ಕೊಡಿ.

ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಂದ ಉಳಿತಾಯ ಖಾತೆ ತೆರೆಯಲ್ಪಡುತ್ತದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪಿಂಚಣಿದಾರರು ಕೂಡ ತೆರೆಯಲು ಅವಕಾಶವಿದೆ. ಈ ಖಾತೆಯು ಜನರು ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಉಳಿತಾಯ ಖಾತೆಯ ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ. ಬ್ಯಾಂಕಿನಿಂದ ಹಣ ಹಿಂದಕ್ಕೆ ಪಡೆಯಲು ಚೆಕ್ಕು ಪುಸ್ತಕ ಅಥವಾ ಹಣ ಹಿಂದಕ್ಕೆ ಪಡೆಯುವ ಚೀಟಿಯ ಮೂಲಕ ಸಾಧ್ಯವಿದೆ. ಈ ಎಲ್ಲ ಕಾರಣಗಳಿಂದ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಖಾತೆ ತೆರೆಯುವವರ ಸಂಖ್ಯೆ ಹೇರಳವಾಗಿರುತ್ತದೆ.

6. ಬ್ಯಾಂಕ್ ಖಾತೆ ತೆರೆಯುವುದರಿಂದಾಗುವ ಅನುಕೂಲಗಳಾವುವು?

  • ಬ್ಯಾಂಕು ಖಾತೆಯು ಹಣದ ಭದ್ರತೆ ಕಾಪಾಡುತ್ತದೆ.
  • ಬ್ಯಾಂಕು ಖಾತೆಯು ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ.
  • ಬ್ಯಾಂಕು ಖಾತೆಯು ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ.
  • ಬ್ಯಾಂಕು ಖಾತೆಯನ್ನು ಹೊಂದಿರುವವರು ಸಾಲ ಪಡೆಯಲು ಸಾಧ್ಯವಾಗುತ್ತದೆ.
  • ಬ್ಯಾಂಕು ಖಾತೆಯು ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯಮಾಡಿಕೊಡುತ್ತದೆ.
  • ಬ್ಯಾಂಕು ಖಾತೆದಾರರು ಭದ್ರತಾ ಕಪಾಟುಗಳನ್ನು ಪಡೆಯಬಹುದು.
  1. *ದೇಶದ ಕೇಂದ್ರ ಬ್ಯಾಂಕು ರಿಸರ್ವ್ ಬ್ಯಾಂಕ್
  2. ಈಗ ನಮ್ಮಲ್ಲಿ 46 ವಿದೇಶೀ ಬ್ಯಾಂಕುಗಳಿವೆ.
  3. ಹಣ ಪಾವತಿಗೆ ಒಂದು ನಮೂನೆ ಇದ್ದು ಇದನ್ನು ಚಲನ್ ಎಂದು ಕರೆಯುತ್ತೇನೆ
  4. ಬ್ಯಾಂಕು ಖಾತೆದಾರರು ಭದ್ರತಾ ಅಥವಾ ರಕ್ಷಣಾ ಕಪಾಟುಗಳನ್ನು ಪಡೆಯಬಹುದು.
  5. ಬ್ಯಾಂಕಿನಲ್ಲಿಯ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು ಬ್ಯಾಂಕಿಂಗ್ ಎನ್ನುತ್ತೇವೆ.

1.ಭಾರತೀಯ ಅಂಚೆ ಇಲಾಖೆ ನಿರ್ವಹಿಸುವ ಕಾರ್ಯಗಳಾವುವು?

ಅಂಚೆ ಇಲಾಖೆಯು ರಾಷ್ಟ್ರೀಯ ಉಳಿತಾಯ ಪತ್ರಗಳು, ಅಂಚೆ ಉಳಿತಾಯ ಖಾತೆಗಳು, ಕಿಸಾನ್ ವಿಕಾಸ ಪತ್ರಗಳು, ಮಹೆಯಾನ ತೀರು ಠೇವಣಿಗಳು, ಅಂಚೆ ವಿಮೆ, ನಿವೃತ್ತಿ ವೇತನ, ಹಣವನ್ನು ವರ್ಗಾಯಿಸುವುದು ಮುಂತಾದ ಅನೇಕ ಹಣಕಾಸಿನ ವ್ಯವಹಾರಗಳನ್ನು ಕೈಗೊಂಡಿದೆ.

2. ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಯಾವುದು?

ಅಂಚೆಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ.

3. ಬ್ಯಾಂಕು ವ್ಯವಹಾರಗಳೆಂದರೇನು?

ಯಾವುದೇ ಒಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಬ್ಯಾಂಕು ವ್ಯವಹಾರ ಎನ್ನುತ್ತೇವೆ.

4. ಕೆಲವು ಮುಖ್ಯ ಬ್ಯಾಂಕುಗಳ ವಿಧಗಳನ್ನು ಪಟ್ಟಿ ಮಾಡಿ.

  • ಕೇಂದ್ರ ಬ್ಯಾಂಕು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್.
  • ಪ್ರಸ್ತಾವನೆ ಅರ್ಜಿ-ಖಾತೆ ತೆರೆಯುವ ಲೆಕ್ಕದ ನಮೂನೆಯನ್ನು ತುಂಬುವುದು.
  • ಪರಿಚಿತರ ಉಲ್ಲೇಖವನ್ನು ಕೊಡುವುದು.
  • ಬ್ಯಾಂಕು ಖಾತೆಯನ್ನು ತೆಗೆಯುವ ನಮೂನೆಯನ್ನು ಬ್ಯಾಂಕಿಗೆ ಒಪ್ಪಿಸುವುದು.
  • ಅಧಿಕಾರಿಯ ಒಪ್ಪಿಗೆ.
  • ಪ್ರಾರಂಭಿಕ ಠೇವಣಿ,
  • ಬ್ಯಾಂಕ್ ಎಂಬ ಪದವು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಪಟ್ಟಿದೆ. ಇವು ಹಣಕಾಸಿನ ಸಂಸ್ಥೆಗಳಾಗಿದ್ದು ಗ್ರಾಹಕರು ಭದ್ರತೆಯ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ಇಟ್ಟು ಬೇಕಾದಾಗ ಹಿಂದಿರುಗಿ ಪಡೆಯಲು ಸಾಧ್ಯವಾಗಿದೆ.
  • ಬ್ಯಾಂಕ್ ಎಂಬ ಪದವು ಇಟಾಲಿಯನ್ ಬ್ಯಾಂಕೊ ಅಥವಾ ಫ್ರೆಂಚಿನ ಬ್ಯಾಂಕ್ ಎಂಬ ಶಬ್ದಗಳಿಂದ ಬಂದಿದೆ. ಇವುಗಳ ಅರ್ಥ ಬೆಂಚು ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್ ಆಗಿದೆ.
  • ಬ್ಯಾಂಕಿನಲ್ಲಿಯ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು ಬ್ಯಾಂಕಿಂಗ್ ಎನ್ನುತ್ತೇವೆ.
  • ಯಾವುದೇ ಒಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಬ್ಯಾಂಕು ವ್ಯವಹಾರಗಳೆನ್ನುತ್ತೇವೆ.
  • ಬ್ಯಾಂಕುಗಳು ಹಣಕಾಸಿನ ಸಂಬಂಧ ವ್ಯವಹಾರಗಳನ್ನು ನಿರ್ವಹಿಸುವ ಸಂಸ್ಥೆಗಳಾಗಿವೆ.
  • ಭಾರತದಲ್ಲಿ ಬ್ಯಾಂಕುಗಳ ಎಲ್ಲ ಚಟುವಟಿಕೆಗಳು ರಿಜರ್ವ್ ಬ್ಯಾಂಕಿನ ಹತೋಟಿಯಲ್ಲಿರುತ್ತದೆ.
  • ರಿಸರ್ವ್ ಬ್ಯಾಂಕನ್ನು ಬ್ಯಾಂಕುಗಳ ಬ್ಯಾಂಕು ಅಥವಾ ಬ್ಯಾಂಕುಗಳ ತಾಯಿ ಎಂದೂ ಕರೆಯಬಹುದು.
  • ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಎಂದರೆ ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು.
  • ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಉಳಿತಾಯ ಖಾತೆ, ಚಾಲ್ತಿ ಖಾತೆ, ಆವರ್ತ ಠೇವಣಿ ಖಾತೆ, ನಿಶ್ಚಿತ ಠೇವಣಿ ಖಾತೆ ಎಂಬ ನಾಲ್ಕು ವಿಧದ ಖಾತೆಗಳನ್ನು ತೆರೆಯಬಹುದು.
  • ಬ್ಯಾಂಕುಗಳ ಸೇವೆಗಳನ್ನು ಪಡೆಯಲು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆಗೆಯುವುದು ಅವಶ್ಯಕ.

ಇತರೆ ವಿಷಯಗಳು :

ಅರ್ಥವ್ಯವಸ್ಥೆ ಮತ್ತು ಸರಕಾರ ಪಾಠದ ನೋಟ್ಸ್

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857) ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *