10th Class Arthavyavaste Mattu Sarakara Social Science Notes Question Answer Mcq Pdf Download in Kannada Medium Karnataka State Syllabus 2025, 10ನೇ ತರಗತಿ ಅರ್ಥವ್ಯವಸ್ಥೆ ಮತ್ತು ಸರಕಾರ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ,10th Std ಅರ್ಥವ್ಯವಸ್ಥೆ ಮತ್ತು ಸರಕಾರ Question Answer, 10th Standard Social Science 15 Lesson Question Anda Answer Karnataka Pdf, Kseeb Solutions for Class 10 social science Chapter 15 Notes, SSLC Arthavyavaste Mattu Sarkara Notes.

ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
- 20ನೇ ಶತಮಾನದಲ್ಲಿ ಸರ್ಕಾರಗಳು ಆರ್ಥಿಕಾಭಿವೃದ್ಧಿಯ ತಂತ್ರವಾಗಿ ಆರ್ಥಿಕ ಯೋಜನೆಯ ನ್ನು ಜಾರಿಗೆ ತಂದವು.
- ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಸಂಸ್ಥೆ ರಾಷ್ಟ್ರೀಯ ಯೋಜನಾ ಆಯೋಗ
- ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲರನ್ನು ಒಳಗೊಂಡ ಬೆಳವಣಿಗೆ ಗೆ ಪ್ರಾಮುಖ್ಯತೆ ನೀಡಲಾಯಿತು.
- ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಂ.ಎಸ್. ಸ್ವಾಮಿನಾಥನ್
- ಪರಿಸರಸ್ನೇಹಿ ಹಾಗೂ ಸುಸ್ಥಿರ ಕೃಷಿಗಾಗಿ ಸರ್ಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
- ನೀತಿ ಆಯೋಗವು 2015 ಜನವರಿ 1 ರಂದು ಸ್ಥಾಪಿತವಾಯಿತು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.ಆರ್ಥಿಕ ಯೋಜನೆಯ ಅರ್ಥ ತಿಳಿಸಿ.
ಸರ್ಕಾರವು ಕೆಲವು ನಿರ್ಧಿಷ್ಟ ಧೈಯೋದ್ದೇಶಗಳೊಂದಿಗೆ ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಸುಖವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು, ಪ್ರಜ್ಞಾಪೂರ್ವಕವಾಗಿ ಮತ್ತು ವಿವೇಕಾಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರ್ಥಿಕ ಯೋಜನೆ ಎನ್ನುತ್ತೇವೆ.
2. ಭಾರತದ “ಆರ್ಥಿಕ ಯೋಜನೆಯ ಪಿತ’ ಯಾರು?
ಭಾರತದ ‘ಆರ್ಥಿಕ ಯೋಜನೆಯ ಪಿತ’ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು.
3. ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ಯಾವುದು?
ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ರಾಷ್ಟ್ರೀಯ ಯೋಜನಾ ಆಯೋಗ.
4. ಹಸಿರುಕ್ರಾಂತಿ ಎಂದರೇನು?
ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಪ್ರಗತಿಯನ್ನು ಹಸಿರು ಕ್ರಾಂತಿ ಎಂದು ಕರೆಯುತ್ತಾರೆ.
5. ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು?
ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನವನ್ನು ಸುಗ್ಗಿ ನಂತರದ ತಂತ್ರಜ್ಞಾನ ಎಂದು ಕರೆಯುತ್ತಾರೆ.
6. ನೀತಿ ಆಯೋಗದ ಈಗಿನ ಅಧ್ಯಕ್ಷರು ಯಾರು?
ದೇಶದ ಪ್ರಧಾನಮಂತ್ರಿಗಳು ನೀತಿ ಆಯೋಗದ ಈಗಿನ ಅಧ್ಯಕ್ಷರು.
III. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯದಲ್ಲಿ ಉತ್ತರಿಸಿ.
1.ಕಲ್ಯಾಣ ರಾಜ್ಯಗಳಲ್ಲಿ ಸರ್ಕಾರಗಳ ಕಾರ್ಯಕ್ಷೇತ್ರ ಹೇಗೆ ವಿಸ್ತಾರಣೆಗೊಂಡಿದೆ?
ಕಲ್ಯಾಣ ರಾಜ್ಯಗಳಲ್ಲಿ ಸರ್ಕಾರಗಳು ಎಲ್ಲ ಪ್ರಜೆಗಳಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ, ಸಂಪರ್ಕ ಮುಂತಾದ ಹಲವು ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾದವು. ಹಾಗಾಗಿ ಸರ್ಕಾರವು ಜನರ ಆರ್ಥಿಕ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಲು ಮುಂದಾಯಿತು. ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು.
2. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳನ್ನು ಬರೆಯಿರಿ.
- ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು.
- ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.
- ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದು.
- ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
- ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು ಇತ್ಯಾದಿ.
3. ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ಪಟ್ಟಿ ಮಾಡಿರಿ.
- ರಾಷ್ಟ್ರೀಯ ಆದಾಯದ ಬೆಳವಣಿಗೆಯ ವೇಗ ಕ್ರಮೇಣ ಹೆಚ್ಚಿದೆ. ಅದಕ್ಕೆ ತಕ್ಕಂತೆ ತಲಾ ಆದಾಯದ ಬೆಳವಣಿಗೆಯೂ ಹೆಚ್ಚಿದೆ.
- ರಾಷ್ಟ್ರೀಯ ಆದಾಯಕ್ಕೆ ಸೇವಾ ವಲಯದಿಂದ ಅತಿಹೆಚ್ಚು ಆದಾಯ ಬರುತ್ತಿದೆ.
- ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ.
- ಯೋಜನೆಗಳ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ.
- ಕೈಗಾರಿಕೆ ಮತ್ತು ಸೇವಾ ವಲಯಗಳ ವಿಸ್ತರಣೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ.
- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಾಧ ಪ್ರಗತಿ ಕಂಡುಬಂದಿದೆ.
- ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ.
- ರಫ್ತು ಕ್ಷೇತ್ರದಲ್ಲಿ ತಯಾರಿಕಾ ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತನ ಪ್ರಮಾಣ ಆಗಾಧವಾಗಿ ಹೆಚ್ಚಿದೆ.
- ಜನರ ನಿರೀಕ್ಷಿತ ಜೀವಿತಾವಧಿ ಮತ್ತು ಸಾಕ್ಷರತಾ ಪ್ರಮಾಣ ಹೆಚ್ಚುತ್ತಿದೆ.
- ಶಿಶು ಮರಣ ಮತ್ತು ತಾಯಂದಿರ ಮರಣದರಗಳು ಕಡಿಮೆಯಾಗುತ್ತಿವೆ.
- ಜನನ ಮತ್ತು ಮರಣ ದರಗಳೆರಡೂ ಕಡಿಮೆಯಾಗುತ್ತಿದ್ದು ಜನಸಂಖ್ಯಾ ಬೆಳವಣಿಗೆ ಧರ ಇಳಿಕೆಯಾಗುತ್ತಿದೆ.
4. ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳಾವುವು?
ಹಸಿರು ಕ್ರಾಂತಿಯು ಹೆಚ್ಚು ಇಳುವರಿ ಬೀಜಗಳ ಬಳಕೆಯ ಪರಿಣಾಮವಾಗಿದೆ. 1960ರ ಪ್ರಾರಂಭದಲ್ಲಿ ಡಾ. ನಾರ್ಮನ್ ಬೋರ್ಲಾಂಗ್ ಎಂಬ ಜರ್ಮನ್ ಕೃಷಿ ವಿಜ್ಞಾನಿ ಮೆಕ್ಸಿಕೋ ದೇಶದಲ್ಲಿ ನಡೆಸಿದ ಪ್ರಯೋಗದ ಫಲವಾಗಿ ಗೋಧಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಸಂಶೋಧನೆಯಾಯಿತು. ಈ ಬೀಜಗಳನ್ನು ಬಳಕೆಗೆ ತಂದ ಮೆಕ್ಸಿಕೋ ಮತ್ತು ತೈವಾನ್ ದೇಶಗಳು ಗೋಧಿಯ ಉತ್ಪಾದನೆಯಲ್ಲಿ ಅತಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದವು. 1965-66 ರ ಅವಧಿಯಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲದ ಪರಿಣಾಮವಾಗಿ ಕೃಷಿ ಉತ್ಪಾದನೆ ಅತ್ಯಂತ ಕಡಿಮೆಯಾಯಿತು. ಆಹಾರ ಧಾನ್ಯಗಳ ಕೊರತೆ ಅಗಾಧವಾಗಿ ಹೆಚ್ಚಿತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಭಾರತ ಸರ್ಕಾರವು 1966 ರಲ್ಲಿ ಗೋಧಿಯ ಹೆಚ್ಚು ಇಳುವರಿ ಬೀಜಗಳನ್ನು ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆಯ್ದ ಜಿಲ್ಲೆಗಳಲ್ಲಿ ಬಳಕೆಗೆ ತಂದಿತು. ಹೆಚ್ಚು ಇಳುವರಿ ಬೀಜಗಳ ಬಳಕೆಯ ಜೊತೆಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಕೆಗೆ ತರಲಾಯಿತು. ನೀರಾವರಿ ಸೌಲಭ್ಯಗಳನ್ನು ವಿಸ್ತರಿಸಲಾಯಿತು. ಇದರಿಂದ ಗೋಧಿಯ ಉತ್ಪಾದನೆ ಆಗಾಧವಾಗಿ ಹೆಚ್ಚಿತು. ಕೃಷಿ ಉತ್ಪಾದನೆಯಲ್ಲಿ ಬಳಸಲಾದ ಈ ಸುಧಾರಿತ ಸುಗ್ಗಿ ಪೂರ್ವ ತಂತ್ರಜ್ಞಾನ ಹಸಿರು ಕ್ರಾಂತಿಗೆ ಪ್ರೇರಣೆಯಾದವು.
5. ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು?
- ಸರ್ಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
- ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರ, ರಾಸಾಯನ ಕ್ರಿಮಿನಾಶಕಗಳಿಗೆ ಬದಲಾಗಿ ಜೈವಿಕ ಕ್ರಿಮಿನಾಶಕಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ.
- ಹೀಗೆ ಕೃಷಿಯಲ್ಲಿ ಎಲ್ಲ ರೀತಿಯ ಪರಸರ ಸ್ನೇಹಿ ತಂತ್ರಗಳನ್ನು ಬಳಸುವ ಮೂಲಕ, ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಪ್ರಯತ್ನಿಸಲಾಗಿತ್ತಿದೆ. ಇದನ್ನು ಎರಡನೇ ಹಸಿರು ಕ್ರಾಂತಿ ಅಥವಾ ಸದಾ ಹಸಿರು ಕ್ರಾಂತಿ ಎಂದು ಗುರುತಿಸಲಾಗುತ್ತಿದೆ.
- ಕೆಲವು ಉತ್ಸಾಹಿ ರೈತರು ಸಾವಯುವ ಕೃಷಿ, ಶೂನ್ಯ ಬಂಡವಾಳ ಕೃಷಿ ಮುಂತಾದ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಅನುಕೂಲ ಪಡೆಯುತ್ತಿದ್ದಾರೆ.
6. ನೀತಿ ಆಯೋಗದ ಧೈಯಗಳು ಯಾವುವು?
- ಭಾರತ ಸರಕಾರದ ಅತ್ಯುನ್ನತ ಸಾರ್ವಜನಿಕ ನೀತಿ ಚಿಂತಕರ ಛಾವಡಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಕಾರ್ಯವನ್ನು ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುವುದು.
- ಕೆಳಮಟ್ಟದಿಂದ ಸಂಪನ್ಮೂಲಗಳನ್ನು ಬಳಸಿಕೊಂಡು ಆರ್ಥಿಕ ನತಿ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತದ ರಾಜ್ಯ ಸರಕಾರಗಳ ಒಳಗೊಳ್ಳುವಿಕೆಯ ಮೂಲಕ ಸಹಕಾರಿ ಫೆಡರಿಲಿಸಂನ್ನು ಉತ್ತೇಜಿಸುತ್ತದೆ.
ಹೆಚ್ಚುವರಿ ಪ್ರಶ್ನೆಗಳು:
I. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಯೋಜನೆ ಎಂದರೇನು?
ಸರ್ಕಾರವು ಕೆಲವು ನಿರ್ದಿಷ್ಟ ಧೈಯೋದ್ದೇಶಗಳೊಂದಿಗೆ, ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಸುಖವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಪ್ರಜ್ಞಾಪೂರ್ವಕವಾಗಿ ಮತ್ತು ವಿವೇಕಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಯೋಜನೆ ಎನ್ನುತ್ತೇವೆ.
2. ಭಾರತದಲ್ಲಿ ಆರ್ಥಿಕ ಯೋಜನೆಗಳ ಮೂಲ ಉದ್ದೇಶವೇನು?
ಭಾರತದಲ್ಲಿ ಆರ್ಥಿಕ ಯೋಜನೆಗಳ ಮೂಲ ಉದ್ದೇಶ ಬಡತನ ನಿರ್ಮೂಲನೆ ಹಾಗೂ ಜನರ ಜೀವನ ಮಟ್ಟವನ್ನು ಸಾಧ್ಯವಾದಷ್ಟು ಗರಿಷ್ಟ ಮಟ್ಟಕ್ಕೆ ಹೆಚ್ಚಿಸುವುದು.
3. ನೀತಿ ಆಯೋಗದ ಲಕ್ಷಣಗಳು ಯಾವುವು?
ನೀತಿ ಆಯೋಗವು ವೇಗದಿಂದ ಕಾರ್ಯ ನಿರ್ವಹಿಸಲು ಸಂಶೋಧನೆ ಮತ್ತು ನಾವಿನ್ಯ ಉತ್ತೇಜಿಸಲು ಸರಕಾರಕ್ಕೆ ವ್ಯೂಹಾತ್ಮಕ ನೀತಿ ದೃಷ್ಟಿಕೋನವನ್ನು ಒದಗಿಸಲು ಮತ್ತು ಅನಿಯಂತ್ರಿತ ಸಮಸ್ಯೆಗಳನ್ನು ನಿಭಾಯಿಸಲು ಅನುವು ಮಾಡಿಕೊಡುವ ಅಗತ್ಯ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಕಲಾ ಸಂಪನ್ಮೂಲ ಕೇಂದ್ರವಾಗಿ ತನ್ನನ್ನು ತಾನು ಅಭಿವೃದ್ಧಿ ಪಡಿಸುತ್ತದೆ. ಆಟಲ್ ನಾವಿನ್ಯ ಮಿಷನ್ ಮತ್ತು ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆ, ಕಾರ್ಮಿಕ ಅರ್ಥಶಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಸಂಸ್ಥೆ ಎಂಬ ಎರಡು ಲಗತ್ತಿಸಿದ ಕಛೇರಿಗಳು ಇದನ್ನು ಬೆಂಬಲಿಸುತ್ತದೆ.
4. ಮುಂದುವರಿಯುತ್ತಿರುವ ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಯೆಗಳು ಯಾವುವು?
ಮುಂದುವರಿಯುತ್ತಿರುವ ದೇಶಗಳಲ್ಲಿ ಸಾಮಾನ್ಯವಾಗಿ ನಿರುದ್ಯೋಗ, ಬಡತನ, ಕೃಷಿಯ ಹಿಂದುಳಿದಿರುವಿಕೆ, ಆದಾಯ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯಂತಹ ಸಮಸ್ಯೆಗಳು ಕಂಡುಬರುತ್ತಿವೆ.
5. ಆರ್ಥಿಕ ಏರಿಳಿತ ಮತ್ತು ಆರ್ಥಿಕ ಸ್ಥಿರತೆಗಳಿಗಿರುವ ವ್ಯತ್ಯಾಸಗಳೇನು?
ಆರ್ಥಿಕ ಏರಿಳಿತಗಳಲ್ಲಿ ರಾಷ್ಟ್ರೀಯ ಆದಾಯ, ಉತ್ಪಾದನೆ, ಉದ್ಯೋಗ, ಹೂಡಿಕೆ, ಬೆಲೆ ಮುಂತಾದವುಗಳು ನಿರಂತರ ಏರಿಳಿಕೆಗಳಿಂದ ಕೂಡಿರುತ್ತವೆ. ಆರ್ಥಿಕ ಸ್ಥಿರತೆಯಲ್ಲಿ ಅರ್ಥವ್ಯವಸ್ಥೆಯು ಹೆಚ್ಚಿನ ಏರಿಳಿತಗಳಿಲ್ಲದೆ ಪ್ರಗತಿಯತ್ತ ಸಾಗುತ್ತದೆ.
6. ನೀತಿ ಆಯೋಗದ ಚಟುವಟಿಕೆಗಳು ಯಾವುವು?
- ನೀತಿ ಮತ್ತು ಕಾರ್ಯಕ್ರಮ ಚೌಕಟ್ಟು.
- ಸಹಕಾರಿ ಒಕ್ಕೂಟ ವ್ಯವಸ್ಥೆ.
- ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ.
- ಚಿಂತಕರ ಕೂಟ ಮತ್ತು ಜ್ಞಾನ ಮತ್ತು ನಾವಿನ್ಯ ಸಮೂಹ.
7. ಸಾಮಾಜಿಕ ನ್ಯಾಯ ಎಂದರೇನು?
ದೇಶದಲ್ಲಿ ಉತ್ಪಾದನೆಯಾಗುವ ಆದಾಯ ಮತ್ತು ಸಂಪತ್ತು ಬಡವ-ಬಲ್ಲಿದ, ನಗರ-ಗ್ರಾಮೀಣ ಎಂಬ ಯಾವುದೇ ತಾರತಮ್ಯವಿಲ್ಲದೆ ಸಮಾಜದ ಎಲ್ಲ ಜನರಲ್ಲಿ ಆದಷ್ಟು ಸಮಾನವಾಗಿ ಹಂಚಿಕೆಯಾಗಬೇಕಾಗುತ್ತದೆ. ಇದನ್ನೇ ಸಾಮಾಜಿಕ ನ್ಯಾಯ ಎನ್ನುತ್ತಾರೆ.
8. ರಾಷ್ಟ್ರೀಯ ಯೋಜನಾ ಆಯೋಗದ ಮುಖ್ಯ ಉದ್ದೇಶವೇನು?
ದೇಶದಲ್ಲಿರುವ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಮತ್ತು ಬಂಡವಾಳವನ್ನು ನಿಖರವಾಗಿ ಅಂದಾಜು ಮಾಡಿ, ಈ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಯೋಜನೆಗಳನ್ನು ತಯಾರಿಸುವುದು. ರಾಷ್ಟ್ರೀಯ ಯೋಜನಾ ಆಯೋಗದ ಮುಖ್ಯ ಉದ್ದೇಶ.
9. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರನ್ನು ಭಾರತದ ಆರ್ಥಿಕ ಯೋಜನೆಯ ಪಿತಾಮಹಾ ಎಂದು ಕರೆಯುತ್ತಾರೆ ಏಕೆ?
ಭಾರತದಲ್ಲಿ ಮೊಟ್ಟಮೊದಲು ಆಧುನಿಕ ಯೋಜನೆಯ ಬಗ್ಗೆ ಚಿಂತಿಸಿದವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು 1934 ರಲ್ಲಿ ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕವನ್ನು ಪ್ರಕಟಿಸಿ, ಭಾರತದ ಆರ್ಥಿಕ ಅಭಿವೃದ್ಧಿಗೆ ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದರು. ಹಾಗಾಗಿ ಅವರನ್ನು ಭಾರತದ ಆರ್ಥಿಕ ಯೋಜನೆಯ ಪಿತಾಮಹಾ ಎಂದು ಏಕೆ ಕರೆಯುತ್ತಾರೆ.
10. ಡಾ. ಎಂ.ಎಸ್. ಸ್ವಾಮಿನಾಥನ್ ಭಾರತದ ಹಸಿರು ಕ್ರಾಂತಿಯ ಪಿತಾಮಹ ಎನಿಸಿದ್ದಾರೆ. ಏಕೆ?
ಭಾರತದ ಕೃಷಿಯಲ್ಲಿ ಸುಧಾರಿತ ತಂತ್ರ ಜ್ಞಾನವನ್ನು ಬಳಕೆಗೆ ತರುವಲ್ಲಿ ಕೃಷಿ ವಿಜ್ಞಾನಿ ಡಾ. ಎಂ.ಎಸ್ ಸ್ವಾಮಿನಾಥನ್ರವರ ಪಾತ್ರ ಪ್ರಮುಖವಾದುದು. ಹಾಗಾಗಿ ಇವರು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎನಿಸಿದ್ದಾರೆ.
11. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಕಾರ್ಯವೇನು?
ರಾಷ್ಟ್ರೀಯ ಯೋಜನಾ ಆಯೋಗವು ತಯಾರಿಸಿದ ಪಂಚವಾರ್ಷಿಕ ಯೋಜನೆಯ ಕರಡಿಗೆ ಅನುಮೋದನೆ ನೀಡುವುದು ಹಾಗೂ ಎಲ್ಲ ರಾಜ್ಯಗಳು ಸಮತೋಲನವಾಗಿ ಅಭಿವೃದ್ಧಿಗೊಳ್ಳುವಂತೆ ಗಮನಹರಿಸುವುದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಕಾರ್ಯ.
II. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ:
1. ಭಾರತದ ಅರ್ಥವ್ಯವಸ್ಥೆಯ ಮೂಲ ಸಮಸ್ಯೆ ಬಡತನ
2. 1987ರಲ್ಲಿ ಸ್ವಾಮಿನಾಥನ್ರವರಿಗೆ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
3. ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಗಳಿಸಬೇಕಾದರೆ ಸಂಪನ್ಮೂಲ ಗಳನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ.
4. ಹಸಿರು ಕ್ರಾಂತಿಗೆ ಪ್ರೇರಕ ಅಂಶಗಳು ಸುಗ್ಗಿ ಪೂರ್ವ ಮತ್ತು ಸುಗ್ಗಿ ನಂತರದ ತಂತ್ರಜ್ಞಾನಗಳು.
5. ಸ್ವಾತಂತ್ರ್ಯಾನಂತರ ಭಾರತ ಸರಕಾರವು ರಾಷ್ಟ್ರೀಯ ಯೋಜನಾ ಆಯೋಗವನ್ನು 1950 ರಲ್ಲಿ ರಚಿಸಿತು.
6. ಹೆಚ್ಚು ಇಳುವರಿ ಬೀಜಗಳ ಬಳಕೆಯ ಪರಿಣಾಮ ಹಸಿರುಕ್ರಾಂತಿ
ಮುಖ್ಯಾಂಶಗಳು:
- ಮಾನವನ ಎಲ್ಲ ಆರ್ಥಿಕ ಚಟುವಟಿಕೆಗಳ ಒಂದು ಸಂಘಟಿತ ವ್ಯವಸ್ಥೆಯೇ ಅರ್ಥವ್ಯವಸ್ಥೆ. ಇದರ ಮೂಲ ಗುರಿ ಮಾನವನ ಕ್ಷೇಮಾಭಿವೃದ್ಧಿ.
- ಅರ್ಥವ್ಯವಸ್ಥೆಯಲ್ಲಿ ರಾಷ್ಟ್ರೀಯ ಆದಾಯ, ಉತ್ಪಾದನೆ, ಉದ್ಯೋಗ, ಹೂಡಿಕೆ, ಬೆಲೆ ಮುಂತಾದವುಗಳು ನಿರಂತರ ಏರಿಳಿಕೆಗಳಿಂದ ಕೂಡಿದ್ದು ಇಂತಹ ಏರಿಳಿತಗಳನ್ನು ಆರ್ಥಿಕ ಏರಿಳಿತಗಳು ಎನ್ನುತ್ತಾರೆ.
- 20ನೆಯ ಶತಮಾನದಲ್ಲಿ ಸರ್ಕಾರಗಳು ಶೀಘ್ರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಪ್ರಮುಖ ತಂತ್ರವಾಗಿ ಆರ್ಥಿಕ ಯೋಜನೆಗಳನ್ನು ಬಳಕೆಗೆ ತಂದವು.
- ಸೋವಿಯತ್ ರಷ್ಯಾ ಮೊಟ್ಟಮೊದಲು ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಶೀಘ್ರ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.
- ಎರಡನೆಯ ಮಹಾಯುದ್ಧದ ನಂತರ ವಿಶ್ವದ ಬಹುತೇಕ ದೇಶಗಳ ಸರ್ಕಾರಗಳು ಆರ್ಥಿಕ ಯೋಜನೆಗಳ ಮೊರೆ ಹೋದವು.
- ಸರ್ಕಾರವು ಕೆಲವು ನಿರ್ಧಿಷ್ಟ ಧೈಯೋದ್ದೇಶಗಳೊಂದಿಗೆ ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಸುಖವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು, ಪ್ರಜ್ಞಾಪೂರ್ವಕವಾಗಿ ಮತ್ತು ವಿವೇಕಾಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಯೋಜನೆ ಎನ್ನುತ್ತೇವೆ.
- ಭಾರತದಲ್ಲಿ ಮೊಟ್ಟಮೊದಲು ಆಧುನಿಕ ಯೋಜನೆಯ ಬಗ್ಗೆ ಚಿಂತಿಸಿದವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರನ್ನು ಭಾರತದ ಆರ್ಥಿಕ ಯೋಜನೆಯ ಪಿತಾಮಹ ಎನ್ನುತ್ತಾರೆ.
- ಸ್ವಾತಂತ್ರಾನಂತರ ಭಾರತ ಸರ್ಕಾರವು 1950 ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ರಚಿಸಿತು. ಈ ಆಯೋಗವು ಪಂಚವಾರ್ಷಿಕ ಯೋಜನೆಯನ್ನು ತಯಾರಿಸಿತು.
- ಭಾರತದಲ್ಲಿ ಮೊಟ್ಟಮೊದಲ ಪಂಚವಾರ್ಷಿಕ ಯೋಜನೆಯು ಏಪ್ರಿಲ್ 1. 1951 ರಲ್ಲಿ ಜಾರಿಗೆ ಬಂದಿತು. *
- ಇಲ್ಲಿಯವರೆಗೆ ಹನ್ನೆರಡು ಪಂಚವಾರ್ಷಿಕ ಯೋಜನೆಗಳು ಜಾರಿಗೊಂಡಿವೆ.
- 2015ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗದ ಬದಲು ನೀತಿ ಆಯೋಗವನ್ನು ಸ್ಥಾಪಿಸಲಾಯಿತು.
- ಪಂಚವಾರ್ಷಿಕ ಯೋಜನೆಗಳಿಂದಾಗಿ ರಾಷ್ಟ್ರೀಯ ಆದಾಯ, ತಲಾ ಆದಾಯದಲ್ಲಿ ಹೆಚ್ಚಳವಾಗಿದೆ. ಸೇವಾ ವಲಯದಿಂದ ಅತಿಹೆಚ್ಚು ಆದಾಯ ಬರುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ. ಕೈಗಾರಿಕೆ ಮತ್ತು ಸೇವಾ ವಲಯಗಳ ವಿಸ್ತರಣೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡುಬಂದಿದೆ.
- ಪಂಚವಾರ್ಷಿಕ ಯೋಜನೆಗಳ ಅತಿ ದೊಡ್ಡ ಸಾಧನೆಯೆಂದರೆ ಹಸಿರು ಕ್ರಾಂತಿ.
- 1967-70 ರ ಅವಧಿಯಲ್ಲಿ ಭಾರತದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಪ್ರಗತಿಯನ್ನು ಹಸಿರು ಕ್ರಾಂತಿ ಎಂದು ಗುರುತಿಸಲಾಗಿದೆ.
- ಹಸಿರು ಕ್ರಾಂತಿಗೆ ಸುಗ್ಗಿ ಪೂರ್ವ ಮತ್ತು ಸುಗ್ಗಿ ನಂತರದ ತಂತ್ರಜ್ಞಾನಗಳೆರಡೂ ಪ್ರೇರಕ ಅಂಶಗಳಾಗಿವೆ.
- ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆಯನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ 1, 2015 ರಲ್ಲಿ ಸ್ಥಾಪಿಸಲಾಗಿದೆ.
- ನೀತಿ ಆಯೋಗವು ತಳಮಟ್ಟದ ಮಾರ್ಗವನ್ನು ಉಪಯೋಗಿಸುತ್ತದೆ. ಅದರ ದ್ವೇಯಗಳು 15 ವರ್ಷಗಳ ಮಾರ್ಗ ನಕ್ಷೆ, 7 ವರ್ಷಗಳ ದೂರದರ್ಶಿತ್ವ ಯೋಜನೆ ಮತ್ತು ಕಾರ್ಯ ಯೋಜನೆಯನ್ನು ಒಳಗೊಂಡಿರುವುದು.
ಇತರೆ ವಿಷಯಗಳು :
ಭಾರತದ ಜಲ ಸಂಪನ್ಮೂಲಗಳು ಪಾಠದ ನೋಟ್ಸ್
ಬ್ಯಾಂಕ್ ವ್ಯವಹಾರಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್