10th Standard Vachanagalu Kannada Notes | 10ನೇ ತರಗತಿ ವಚನಗಳು ಕನ್ನಡ ನೋಟ್ಸ್

Vachanagalu

10th Standard Vachanagalu Kannada Notes Question Answer Summery Guide Extract Mcq Pdf Download in Kannada Medium Karnataka State State Syllabus 2025 10ನೇ ತರಗತಿ ವಚನಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು 10ನೇ ತರಗತಿ ವಚನಗಳು ಪದ್ಯದ ಸಾರಾಂಶ class 10th kannada vachanagalu question answer pdf download vachanagalu poem notes vachanagalu question answer kannada vachanagalu kannada notes class 10 kseeb solutions for class 10 kannada vachanagalu notes vachana poem in kannada class 10 10th kannada notes

Vachanagalu

ಅಕ್ಕಮಹಾದೇವಿಯ ಕಾಲ ಸಾ.ಶ.1160. ಅಂದರೆ 12ನೇ ಶತಮಾನದಲ್ಲಿದ್ದವಳು. ಈಕೆ ಶಿವಶರಣೆಯರಲ್ಲಿ ಪ್ರಮುಖಳು. ಈಕೆಯ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ, ಈಕೆ ಪ್ರಸಿದ್ಧ ವಚನಗಾರ್ತಿ ಹಾಗೂ ಕವಯಿತ್ರಿ, ಅಕ್ಕಮಹಾದೇವಿಯ ವಚನಗಳ ಅಂಕಿತ ಹಾಗೂ ಆರಾಧ್ಯದೈವ ‘ಚೆನ್ನ ಮಲ್ಲಿಕಾರ್ಜುನ’ ಈಕೆ ವಚನಗಳಲ್ಲದೆ ‘ಯೋಗಾಂಗ ತ್ರಿವಿಧಿ’, ‘ಸೃಷ್ಟಿವಚನ’ ಮತ್ತು ‘ಮಂತ್ರಗೋಪ್ಯ’ ಮೊದಲಾದ ಲಘು ಕೃತಿಗಳನ್ನು ರಚಿಸಿದ್ದಾಳೆ. 354 ವಚನಗಳು ಲಭ್ಯವಾಗಿವೆ.

1) ಅಕ್ಕ ಮಹಾದೇವಿಯ ವಚನಗಳ ಅಂಕಿತ ಯಾವುದು?

ಅಕ್ಕಮಹಾದೇವಿಯ ವಚನಗಳ ಅಂಕಿತ “ಚೆನ್ನ ಮಲ್ಲಿಕಾರ್ಜುನ”.

2) ಅಕ್ಕಮಹಾದೇವಿಯು ಯಾವುದನ್ನು ಹಾನಿ ಎಂದಿದ್ದಾಳೆ?

ತಾನು ಹಿಂದೆ ಮಾಡಿದ ಪಾಪಗಳನ್ನು ನಿನ್ನ ಮುಂದೆ ಇಟ್ಟರೆ, ಇದರಿಂದ ನಮ್ಮ ಮಾನಕ್ಕೆ ಹಾನಿ ಉಂಟಾಗುವುದು ಎಂದು ಅಕ್ಕ ಮಹಾದೇವಿ ಹೇಳಿದ್ದಾಳೆ.

3) ಅರಿಯದವರೊಡನೆ ಸಂಗ ಮಾಡಿದರೆ ಆಗುವ ಪರಿಣಾಮವೇನು?

ಅರಿಯದವರೊಡನೆ ಸಂಗ ಮಾಡಿದರೆ ಕಲ್ಲು ಹೊಡೆದು ಬೆಂಕಿ ಪಡೆದ ಹಾಗೆ ಆಗುತ್ತದೆ.

4) ಭಗವಂತನಲ್ಲಿ ಶರಣಾಗುವ ಭಾವ ಅಕ್ಕಮಹಾದೇವಿಯ ವಚನದಲ್ಲಿ ಹೇಗೆ ವ್ಯಕ್ತಗೊಂಡಿದೆ?

ಏನೇ ಆದರೂ ಸರಿ, ನೀನು ನನ್ನನ್ನು ಕೊಂದರೂ, ನಾನು ಮಾತ್ರ ನಿನಗೆ ಶರಣು ಎಂಬುದನ್ನು ಬಿಡುವುದಿಲ್ಲ. ಎಂಬುದಾಗಿ ಅಕ್ಕಮಹಾದೇವಿ ಭಗವಂತನಲ್ಲಿ ಶರಣಾಗುವ ಭಾವ ಆಕೆಯ ವಚನಗಳಲ್ಲಿ ವ್ಯಕ್ತವಾಗಿದೆ.

5) ಜ್ಞಾನಿ – ಅಜ್ಞಾನಿಗಳ ಸಂಗದ ಬಗೆಗಿನ ಅಕ್ಕಮಹಾ ದೇವಿಯ ಅಭಿಪ್ರಾಯವೇನು?

ಅರಿಯದ ಅಜ್ಞಾನಿಗಳ ಜೊತೆ ಸಂಗ ಮಾಡಿದರೆ, ಅದು ಕಲ್ಲು ಹೊಡೆದು ಕಿಡಿಯನ್ನು ಪಡೆದುಕೊಂಡ ಹಾಗೆ ಬಲಜ್ಞಾನಿಗಳ ಸ್ನೇಹ ಮಾಡಿದರೆ ಮೊಸರನ್ನು ಕಡೆದು

ಬೆಣ್ಣೆಯನ್ನು ಪಡೆದು ಕೊಂಡ ಹಾಗೆ. ಅಜ್ಞಾನಿಗಳ ಸ್ನೇಹದಿಂದ ಹಾನಿಯೇ ಪ್ರಯೋಜನವಿಲ್ಲ. ಜ್ಞಾನಿಗಳ ಸ್ನೇಹದಿಂದ ಮೊಸರಿನಿಂದ ಬೆಣ್ಣೆ ದೊರೆಯದಂತೆ ಉತ್ತಮ ಪ್ರಯೋಜನ ದೊರೆಯುತ್ತದೆ. ಆದರೆ ಶಿವಶರಣರ ಸಂಗ ಮಾಡಿದರೆ ಅಥವಾ ಅವರ ಸ್ನೇಹ ಮಾಡಿದರೆ ಕರ್ಪೂರದ ಗಿರಿಯನ್ನು

ಉರಿತಾಗಿದಂತೆ ಎಂದು ಅಕ್ಕ ಹೇಳುತ್ತಾಳೆ ಅಂದರೆ ಕರ್ಪೂರದ ಗಿರಿಗೆ ಬೆಂಕಿ ತಾಗಿದರೆ ಅದು ಉರಿದು ಇಲ್ಲವಾಗುತ್ತದೆ. ಹಾಗೇ ಶರಣರ ಸಂಗದಿಂದ ಲೌಕಿಕವಾದ ತನ್ನ ವ್ಯಕ್ತಿತ್ವವೇ ಇಲ್ಲವಾಗಿ ಶಿವನಲ್ಲಿ ಸೇರಿ ಹೋದಂತಾಗುತ್ತದೆ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯ.

1) ಅಕ್ಕ ಮಹಾದೇವಿಯ ವಚನಗಳ ಅಂಕಿತ ಯಾವುದು?

ಅಕ್ಕಮಹಾದೇವಿಯ ವಚನಗಳ ಅಂಕಿತ “ಚೆನ್ನಮಲ್ಲಿಕಾರ್ಜುನ”.

2) ಅಕ್ಕಮಹಾದೇವಿಯು ಯಾವುದನ್ನು ಹಾನಿ ಎಂದಿದ್ದಾಳೆ?

ತಾನು ಹಿಂದೆ ಮಾಡಿದ ಪಾಪಗಳನ್ನು ನಿನ್ನ ಮುಂದೆ ಇಟ್ಟರೆ, ಇದರಿಂದ ನಮ್ಮ ಮಾನಕ್ಕೆ ಹಾನಿ ಉಂಟಾಗುವುದು ಎಂದು ಅಕ್ಕ ಮಹಾದೇವಿ ಹೇಳಿದ್ದಾಳೆ.

3) ಅರಿಯದವರೊಡನೆ ಸಂಗ ಮಾಡಿದರೆ ಆಗುವ ಪರಿಣಾಮವೇನು?

ಅರಿಯದವರೊಡನೆ ಸಂಗ ಮಾಡಿದರೆ ಕಲ್ಲು ಹೊಡೆದು ಬೆಂಕಿ ಪಡೆದ ಹಾಗೆ ಆಗುತ್ತದೆ.

4) ಭಗವಂತನಲ್ಲಿ ಶರಣಾಗುವ ಭಾವ ಅಕ್ಕಮಹಾದೇವಿಯ ವಚನದಲ್ಲಿ ಹೇಗೆ ವ್ಯಕ್ತಗೊಂಡಿದೆ?

ಏನೇ ಆದರೂ ಸರಿ, ನೀನು ನನ್ನನ್ನು ಕೊಂದರೂ, ನಾನು ಮಾತ್ರ ನಿನಗೆ ಶರಣು ಎಂಬುದನ್ನು ಬಿಡುವುದಿಲ್ಲ. | ಎಂಬುದಾಗಿ ಅಕ್ಕಮಹಾದೇವಿ ಭಗವಂತನಲ್ಲಿ ಶರಣಾಗುವ ಭಾವ ಆಕೆಯ ವಚನಗಳಲ್ಲಿ ವ್ಯಕ್ತವಾಗಿದೆ.

5) ಜ್ಞಾನಿ – ಅಜ್ಞಾನಿಗಳ ಸಂಗದ ಬಗೆಗಿನ ಅಕ್ಕ ಮಹಾದೇವಿಯ ಅಭಿಪ್ರಾಯವೇನು?

ಅರಿಯದ ಅಜ್ಞಾನಿಗಳ ಜೊತೆ ಸಂಗ ಮಾಡಿದರೆ, ಅದು ಕಲ್ಲು ಹೊಡೆದು ಕಿಡಿಯನ್ನು ಪಡೆದುಕೊಂಡ ಹಾಗೆ ಬಲಜ್ಞಾನಿಗಳ ಸ್ನೇಹ ಮಾಡಿದರೆ ಮೊಸರನ್ನು ಕಡೆದು ಬೆಣ್ಣೆಯನ್ನು ಪಡೆದು ಕೊಂಡ ಹಾಗೆ. ಅಜ್ಞಾನಿಗಳ ಸ್ನೇಹದಿಂದ ಹಾನಿಯೇ ಪ್ರಯೋಜನವಿಲ್ಲ. ಜ್ಞಾನಿಗಳ ಸ್ನೇಹದಿಂದ ಮೊಸರಿನಿಂದ ಬೆಣ್ಣೆ ದೊರೆಯದಂತೆ ಉತ್ತಮ ಪ್ರಯೋಜನ ದೊರೆಯುತ್ತದೆ.

ಆದರೆ ಶಿವಶರಣರ ಸಂಗ ಮಾಡಿದರೆ ಅಥವಾ ಅವರ ಸ್ನೇಹ ಮಾಡಿದರೆ ಕರ್ಪೂರದ ಗಿರಿಯನ್ನು ಉರಿತಾಗಿದಂತೆ ಎಂದು ಅಕ್ಕ ಹೇಳುತ್ತಾಳೆ ಅಂದರೆ ಕರ್ಪೂರದ ಗಿರಿಗೆ ಬೆಂಕಿ ತಾಗಿದರೆ ಅದು ಉರಿದು ಇಲ್ಲವಾಗುತ್ತದೆ. ಹಾಗೇ ಶರಣರ ಸಂಗದಿಂದ ಲೌಕಿಕವಾದ ತನ್ನ ವ್ಯಕ್ತಿತ್ವವೇ ಇಲ್ಲವಾಗಿ ಶಿವನಲ್ಲಿ ಸೇರಿ ಹೋದಂತಾಗುತ್ತದೆ ಎಂಬುದು `ಅಕ್ಕಮಹಾದೇವಿಯ ಅಭಿಪ್ರಾಯ.

Leave a Reply

Your email address will not be published. Required fields are marked *