10th Standard Bharatada Jala Sampanmulagalu Social Notes | 10ನೇ ತರಗತಿ ಭಾರತದ ಜಲ ಸಂಪನ್ಮೂಲಗಳು ಪಾಠದ ನೋಟ್ಸ್

Bharatada Jala Sampanmulagalu

10th Standard Bharatada Jala Sampanmulagalu Social Science Notes Question Answer Guide Mcq Pdf Download in Kannada Medium Karnataka State Syllabus 2025, 10ನೇ ತರಗತಿ ಭಾರತದ ಜಲ ಸಂಪನ್ಮೂಲಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, 10th Std ಭಾರತದ ಜಲ ಸಂಪನ್ಮೂಲಗಳು Question Answer, SSLC Bharatada Jala Sampanmulagalu Notes in Kannada, Kseeb Solutions for Class 10 Social Science Chapter 14 Notes Pdf Guide, SSLC Social Science 14 Lesson Question Answer, State Syllabus Class 10 Social Science 14th Lesson Question Answer, 10th Std Bharatada Jala Sampanmulagalu in Kannada Question Answer

Bharatada Jala Sampanmulagalu
Bharatada Jala Sampanmulagalu

10ನೇ ತರಗತಿ ಭಾರತದ ಜಲ ಸಂಪನ್ಮೂಲಗಳು ಸಮಾಜ ವಿಜ್ಞಾನ ನೋಟ್ಸ್

1.ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ದಾಮೋದರ

2. ಬಿಹಾರದ ಕಣ್ಣೀರಿನ ನದಿ ಕೋಸಿ ನದಿ

4. ಕರ್ನಾಟಕದ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ

5. ಕಾವೇರಿ ನದಿಗೆ ಶಿವನಸಮುದ್ರ ನಿರ್ಮಿಸಲಾಗಿದೆ. ಎಂಬಲ್ಲಿ ಜಲವಿದ್ಯುಚ್ಛಕ್ತಿ ಯೋಜನೆಯನ್ನು

6. ಹಿರಾಕುಡ್ ಅಣೆಕಟ್ಟನ್ನು ಮಹಾ ನದಿಗೆ ನಿರ್ಮಿಸಲಾಗಿದೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

1. ನೀರಾವರಿ ಎಂದರೇನು? ನೀರಾವರಿಯ ವಿಧಗಳಾವುವು?

ನೀರಾವರಿ ಎಂದರೆ ವ್ಯವಸಾಯದ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ ಮತ್ತು ಕೆರೆಗಳಿಂದ ನೀರು ಸರಬರಾಜು ಮಾಡುವುದು. ನೀರಾವರಿಯ ವಿಧಗಳು ಯಾವುದೋ ಬಾವಿ ನೀರಾವರಿ, ಕಾಲುವೆ ನೀರಾವರಿ ಮತ್ತು ಕೆರೆ ನೀರಾವರಿ,

2. ವಿವಿಧೋದ್ದೇಶ ನದಿ ಕಣಿವೆ ಯೋಜನೆ ಎಂದರೇನು? ಅದರ ಉದ್ದೇಶಗಳಾವುವು?

ನದಿ ಕಣಿವೆಯಲ್ಲಿ ಅದರ ಉಪನದಿಗಳನ್ನು ಒಳಗೊಂಡಂತೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು, ಇದರಿಂದ ಆ ನದಿ ಕಣಿವೆಯಲ್ಲಿನ ಜಲ ಸಂಪತೀಕ ಗರಿಷ್ಠ ಪ್ರಮಾಣದ ಒಳಕೆಯು ಸಾಧ್ಯವಾಗುವುದು. ಇಂತಹ ಯೋಜನೆಗಳು ವ್ಯವಸಾಯ ನೀರನ್ನು ಒದಗಿಸುವುದಲ್ಲದೆ ಇನ್ನಿತರ ಹಲವಾರು ಉದ್ದೇಶಗಳನ್ನು ಹೊಂದಿರುತ್ತದೆ. ಇವುಗಳನ್ನು ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳೆಂದು ಕರೆಯುವರು.

ಉದ್ದೇಶಗಳು:

  • ನೀರಾವರಿ ಸೌಲಭ್ಯವನ್ನು ಒದಗಿಸುವುದು
  • ಜಲವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು.
  • ನದಿಗಳ ಪ್ರವಾಹವನ್ನು ನಿಯಂತ್ರಿಸುವುದು.
  • ನೌಕಾಯಾನದ ಸೌಲಭ್ಯವನ್ನು ಒದಗಿಸುವುದು.
  • ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ನೀರನ್ನು ಒದಗಿಸುವುದು.
  • ಮಣ್ಣಿನ ಸವಕಳಿಯನ್ನು ನಿಯಂತ್ರಿಸುವುದು.
  • ಮೀನುಗಾರಿಕೆಯ ಅಭಿವೃದ್ಧಿ ಮಾಡುವುದು
  • ಅರಣ್ಯ ಸಂಪತ್ತನ್ನು ವೃದ್ಧಿಸುವುದು.

3. ಕರ್ನಾಟಕದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.

ಶಿವನಸಮುದ್ರ, ತುಂಗಭದ್ರಾ, ಜೋಗ, ಭದ್ರಾ, ಆಲಮಟ್ಟಿ, ಕಾಳಿ ಇವು ಕರ್ನಾಟಕದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು.

4. ಮಳೆಕೊಯ್ದು ಅಥವಾ ಮಳೆ ಏರಿನ ಸಂಗ್ರಹಣೆ ಇಂದು ಕಡ್ಡಾಯವಾಗಿದೆ. ಏಕೆ?

ನೀರು ಅತಿ ಅಮೂಲ್ಯವಾದುದು. ಭಾರತವು ಜಲಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಒಳಗೊಂಡಿದ್ದರೂ ಅದರ ಹಂಚಿಕೆಯು ಹೆಚ್ಚು ತಾರತಮ್ಯಗಳಿಂದ ಕೂಡಿದೆ. ಅಲ್ಲದೆ ಮಳೆಗಾಲದ ಅವಧಿ ಕಡಿಮೆಯಾಗಿದ್ದು, ಹೆಚ್ಚು ಮಳೆ ಬೀಳುವ ಪ್ರದೇಶಗಳೂ ದೀರ್ಘವಾದ ಮಳೆರಹಿತ ಪ್ರದೇಶಗಳಾಗುತ್ತಿದ್ದು ಬೇಸಿಗೆಯಲ್ಲಿ ಇರಿನ ಕೊರತೆ ಕಂಡುಬರುತ್ತದೆ. ಆದ್ದರಿಂದ ಇದರ ಪರಿಹಾರಕ್ಕೆ ಮಳೆಕೊಯ್ದು ಕಡ್ಡಾಯವಾಗಿದೆ.

10. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು?

ಎಲ್ಲಾ ರಾಜ್ಯಗಳು ವರ್ಷದ ಎಲ್ಲಾ ಅವಧಿಯಲ್ಲಿಯೂ ಸಾಕಷ್ಟು ವಿದ್ಯುತ್ತಿನ ಪೂರೈಕೆಯನ್ನು ಹೊಂದಿರುವುದಿಲ್ಲ. ಇದರಿಂದ ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲು ಹಾಗೂ ವಿದ್ಯುತ್ತನ್ನು ಸಮರ್ಪಕವಾಗಿ ಪ್ರಸರಣ ಮಾಡಲು ನಿರ್ಮಿಸಲಾಗಿರುವ ಜಾಲವೇ ರಾಷ್ಟ್ರೀಯ ವಿದ್ಯುತ್ ಜಾಲ.

III. ಹೊಂದಿಸಿ ಬರೆಯಿರಿ

ಕ್ರ. ಸಂ.ಉತ್ತರಗಳು
1ಭಾಕ್ರಾ ಅಣೆಕಟ್ಟುಲಾಲ್‌ ಬಹದ್ದೂ‌ರ್ ಶಾಸ್ತ್ರಿ ಸಾಗರಗೋವಿಂದಸಾಗರ
2ತುಂಗಭದ್ರಾ ಅಣೆಕಟ್ಟು.ಬಸವಸಾಗರಪಂಪಸಾಗರ
3ಆಲಮಟ್ಟಿ ಅಣೆಕಟ್ಟುಪಂಪಸಾಗರಲಾಲ್‌ ಬಹದ್ದೂ‌ರ್ ಶಾಸ್ತ್ರಿ ಸಾಗರ
4ನಾರಾಯಣಪುರ ಅಣೆಕಟ್ಟುಗೋವಿಂದಸಾಗರಬಸವಸಾಗರ
ನರ್ಮದಾ ಸಾಗರ

1.ಭಾರತದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು:

ಎ) ನಾಗಾರ್ಜುನ ಸಾಗರ

ಸಿ) ನರ್ಮದಾ

ಡಿ) ಕೃಷ್ಣಾ ಮೇಲ್ದಂಡೆ

2. ಪ್ರಪಂಚದಲ್ಲಿ ಅತಿ ಹೆಚ್ಚು ನೀರಾವರಿಯ ಕ್ಷೇತ್ರವನ್ನು ಹೊಂದಿರುವ ದೇಶ:

ಎ) ಚೀನಾ

ಸಿ) ಪಾಕಿಸ್ತಾನ

ಡಿ) ಬಾಂಗ್ಲಾದೇಶ

3. ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟು:

ಎ) ಭಾಕ್ರಾನಂಗಲ್

ಬಿ) ಕೋಸಿ

ಸಿ) ದಾಮೋದರ

ಡಿ) ಹಿರಾಕುಡ್

4. ಪಂಪಸಾಗರ ಎಂಬುದು:

ಎ) ಅಣೆಕಟ್ಟು

ಸಿ) ನದಿ

ಡಿ) ಸರೋವರ

5. ಸ್ವತಂತ್ರ ಭಾರತದ ಮೊದಲ ವಿವಿಧೋದ್ದೇಶ ಯೋಜನೆ:

ಬಿ) ಭಾಕ್ರಾ-ನಂಗಲ್

ಸಿ) ಕೋಸಿ

ಡಿ) ಹಿರಾಕುಡ್

6. ಭಾರತ ಮತ್ತು ನೇಪಾಳ ರಾಷ್ಟ್ರಗಳ ಜಂಟಿ ಯೋಜನೆ:

ಎ) ಭಾಕ್ರಾನಂಗಲ್

ಸಿ) ಹಿರಾಕುಡ್

ಡಿ) ತುಂಗಭದ್ರಾ

7. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಿರುವ ನೀರಾವರಿ:

ಬಿ) ಕೆರೆ ನೀರಾವರಿ

ಸಿ) ಕೊಳವೆ ಬಾವಿ ನೀರಾವರಿ

ಡಿ) ಕಾಲುವೆ ನೀರಾವರಿ

1.ಪ್ರವಾಹ ಕಾಲುವೆಗಳು ಎಂದರೇನು?

ಯಾವುದೇ ರೀತಿಯ ಆಣೆಕಟ್ಟುಗಳನ್ನು ಕಟ್ಟದೆ ನದಿಗಳಿಂದ ನೇರವಾಗಿ ಕಾಲುವೆಗಳನ್ನು ತೋಡಲಾಗುವುದು. ನದಿಗಳು ತುಂಬಿ ಹರಿಯುವಾಗ ಈ ಕಾಲುವೆಗಳ ಮೂಲಕ ನೀರು ಹರಿಯುವುದು. ಇವುಗಳನ್ನು ಪ್ರವಾಹ ಕಾಲುವೆ ಎನ್ನುವರು.

2. ನೀರನ್ನು ಯಾವ ಯಾವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?

ನೀರನ್ನು ನೀರಾವರಿ, ಜಲವಿದ್ಯುಚ್ಛಕ್ತಿ ಉತ್ಪಾದನೆ, ಕೈಗಾರಿಕೆ, ಗೃಹಬಳಕೆ, ಜಲಸಾರಿಗೆ, ಮೀನುಗಾರಿಕೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

3. ಮಳೆಕೊಯ್ಲಿನ ಎರಡು ವಿಧಗಳಾವುವು?

ಮಳೆಕೊಯ್ಲಿನ ಎರಡು ವಿಧಗಳು ಯಾವುವೆಂದರೆ

  1. ಮಳೆಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವುದು.

ಉದಾ: ಮನೆಯ ಮೇಲ್ಬಾವಣೆಯಿಂದ

  1. ಮಳೆ ಬಿದ್ದ ನಂತರ ಹರಿಯುವ ನೀರನ್ನು ಸಂಗ್ರಹಿಸುವುದು

ಉದಾ: ಒಡ್ಡು ಕಟ್ಟಿ ನೀರನ್ನು ಸಂಗ್ರಹಿಸುವುದು.

4. ಸರ್ವಕಾಲಿಕ ಕಾಲುವೆ ಎಂದರೇನು?

ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿ, ಕೃಷಿ ಭೂಮಿಗೆ ನೀರನ್ನೊದಗಿಸಲು ತೋಡುವ ಕಾಲುವೆಗಳಿಗೆ ಸರ್ವಕಾಲಿಕ ಕಾಲುವೆಗಳೆಂದು ಕರೆಯುವರು.

5. ದಾಮೋದರ ನದಿಯನ್ನು ಕಣ್ಣೀರಿನ ಎಂದು ಕರೆಯಲು ಕಾರಣವೇನು?

ದಾಮೋದರ ನದಿಯು ಪಶ್ಚಿಮ ಬಂಗಾಳದಲ್ಲಿ ಪ್ರವಾಹಗಳಿಂದ ಅಪಾರ ಹಾನಿಯನ್ನುಂಟುಮಾಡುವುದರಿಂದ ಈ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ.

6. ಬಾವಿ ನೀರಾವರಿಯ ಮಹತ್ವವೇನು?

ಭಾರತದ ಪ್ರಮುಖ ನೀರಾವರಿ ಮೂಲಗಳಲ್ಲಿ ಬಾವಿ ನೀರಾವರಿಯು ಅತಿ ಮುಖ್ಯವಾದುದು. ಇದು ದೇಶದಲ್ಲಿ ಅತಿ ಹೆಚ್ಚು ಕೃಷಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ವಿಧಾನವಾಗಿದೆ. ಬಾವಿ ನೀರಾವರಿಯು ಕಡಿಮೆ ಮಳೆ ಬೀಳುವ ಭಾಗಗಳಲ್ಲಿ ಹೆಚ್ಚು ಉಪಯುಕ್ತವಾಗಿದೆ. ಬಾವಿಯ ನಿರ್ಮಾಣ ಮತ್ತು ನಿರ್ವಹಣೆ ಸುಲಭ. ಕೆರೆ ಮತ್ತು ಕಾಲುವೆ ಸೌಲಭ್ಯವಿಲ್ಲದ ಭಾಗಗಳಲ್ಲಿ ಬಾವಿ ನೀರಾವರಿ ಅವಶ್ಯಕ.

7. ಭಾರತದ ಕೆಲವು ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳನ್ನು ಹೆಸರಿಸಿ.

  • ದಾಮೋದರ ನದಿ ಕಣಿವೆ ಯೋಜನೆ
  • ಭಾಕ್ರಾ ನಂಗಲ್ ಯೋಜನೆ
  • ಕೋಸಿ ಯೋಜನೆ
  • ಹಿರಾಕುಡ್ ಯೋಜನೆ
  • ತುಂಗಭದ್ರಾ ಯೋಜನೆ
  • ನಾಗಾರ್ಜುನ ಸಾಗರ ಯೋಜನೆ
  • ಕೃಷ್ಣಾ ಮೇಲ್ದಂಡೆ ಯೋಜನೆ
  • ನರ್ಮದಾ ಕಣಿವೆ ಯೋಜನೆ

8. ಭಾರತದಲ್ಲಿ ನೀರಾವರಿಗಳನ್ನು ಅವಲಂಬಿಸಲು ಕಾರಣವೇನು?

ಭಾರತದಲ್ಲಿ ಮಳೆಯು ಅನಿಶ್ಚಿತ, ಅಸಮಾನ ಹಾಗೂ ನಿಯತಕಾಲಿಕವಾಗಿರುವುದರಿಂದ ವ್ಯವಸಾಯ ಮಾಡಲು ಕಾಲುವೆ, ಕೆರೆ ಹಾಗೂ ಬಾವಿ ನೀರಾವರಿಗಳನ್ನು ಅವಲಂಬಿಸಬೇಕಾಗಿದೆ.

9. ಕೆರೆಗಳು ಎಂದರೇನು?

ಝರಿ, ತೊರೆ ಮತ್ತು ಹಳ್ಳಗಳು ಹರಿಯುವ ಇಳಿಜಾರಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದೇ ಕೆರೆಗಳು.

  • ನೀರು ಒಂದು ಪ್ರಮುಖ ನೈಸರ್ಗಿಕ ಜಲಸಂಪನ್ಮೂಲವಾಗಿದೆ. ಇದು ಮಾನವನು ಮೂಲ ಬೇಡಿಕೆಯಾಗಿದ್ದು, ರಾಷ್ಟ್ರದ ಸಂಪತ್ತಾಗಿದೆ.
  • ನದಿಗಳು ಮತ್ತು ಸರೋವರಗಳು ಭೂಮಿಯ ಮೇಲಿನ ನೀರಿನ ಮೂಲಗಳಾದರೆ, ಬಾವಿ ಮತ್ತು ಚಿಲುಮೆಗಳು ಅಂತರ್ಜಲದ ಮೂಲಗಳಾಗಿವೆ.
  • ಭಾರತದಲ್ಲಿ ಮಳೆಯು ಅನಿಶ್ಚಿತ, ಅಸಮಾನ ಹಾಗೂ ನಿಯತಕಾಲಿಕವಾಗಿರುವುದರಿಂದ ವ್ಯವಸಾಯ ಮಾಡಲು ಕಾಲುವೆ, ಕೆರೆ ಹಾಗೂ ಬಾವಿ ನೀರಾವರಿಗಳನ್ನು ಅವಲಂಬಿಸಬೇಕಾಗಿದೆ.
  • ನೀರಾವರಿ ಎಂದರೆ ವ್ಯವಸಾಯದ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ ಮತ್ತು ಕೆರೆಗಳಿಂದ ನೀರು ಸರಬರಾಜು ಮಾಡುವುದು.
  • ಬಾವಿ ನೀರಾವರಿ, ಕಾಲುವೆ ನೀರಾವರಿ, ಕೆರೆನೀರಾವರಿ ನೀರಾವರಿಯ ವಿಧಗಳಾಗಿವೆ.
  • ಭಾರತದಲ್ಲಿ ರೂಢಿಯಲ್ಲಿರುವ ನೀರಾವರಿ ಪದ್ಧತಿಗಳಲ್ಲಿ ಕಾಲುವೆ ನೀರಾವರಿಯು ಪ್ರಮುಖವಾದುದು.
  • ಕಾಲುವೆ ನೀರಾವರಿಯಲ್ಲಿ ಪ್ರವಾಹ ಕಾಲುವೆ ಮತ್ತು ಸರ್ವಕಾಲಿಕ ಕಾಲುವೆ ಎಂಬ ಎರಡು ವಿಧಗಳಿವೆ.
  • ಭಾರತದಲ್ಲಿ ಕೆರೆ ನೀರಾವರಿಯು ಪುರಾತನ ಕಾಲದಿಂದಲೂ ರೂಢಿಯಲ್ಲಿದೆ.
  • ಝರಿ, ತೊರೆ ಮತ್ತು ಹಳ್ಳಗಳು ಹರಿಯುವ ಇಳಿಜಾರಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದೇ ಕೆರೆಗಳು.
  • ವ್ಯವಸಾಯಕ್ಕೆ ನೀರನ್ನು ಒದಗಿಸುವುದಲ್ಲದೆ ಇನ್ನಿತರ ಹಲವಾರು ಉದ್ದೇಶಗಳಿಗಾಗಿ ಜಲಸಂಪತ್ತಿನ ಗರಿಷ್ಠ ಪ್ರಮಾಣದ ಉಪಯೋಗವನ್ನು ಪಡೆಯಲು ವಿವಿಧೋದ್ದೇಶ ನದಿಕಣಿವೆ ಯೋಜನೆಗಳನ್ನು ಕೈಗೊಳ್ಳಲಾಗಿದೆ.
  • ಕೆಲವು ರಾಜ್ಯಗಳು ಜಲವಿದ್ಯುತ್‌ ಚ್ಛಕ್ತಿಯನ್ನು ಉತ್ಪಾದಿಸುವ ಕೇಂದ್ರಗಳನ್ನು ಹೊಂದಿವೆ.
  • ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲು ಹಾಗೂ ವಿದ್ಯುತ್ತನ್ನು ಸಮರ್ಪಕವಾಗಿ ಪ್ರಸರಣ ಮಾಡಲು ರಾಷ್ಟ್ರೀಯ ವಿದ್ಯುತ್ ಜಾಲವನ್ನು ನಿರ್ಮಿಸಲಾಗಿದೆ. ಇದರಿಂದ ದೇಶದ ಯಾವುದೇ ಭಾಗದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲ್ಪಟ್ಟಿದ್ದರೂ ಅದನ್ನು ಕೊರತೆಯಿರುವ ಪ್ರದೇಶಗಳಿಗೆ ಪೂರೈಸಬಹುದಾಗಿದೆ.
  • ದೇಶದಲ್ಲಿ ಕಂಡು ಬರುತ್ತಿರುವ ಜಲಕ್ಷಾಮದ ಪರಿಹಾರಕ್ಕೆ ಇರುವ ಸರಳ ಮಾರ್ಗವೆಂದರೆ ಮಳೆಕೊಯ್ದು ಅಥವಾ ಮಳೆ ನೀರಿನ ಸಂಗ್ರಹಣೆ.

ಇತರೆ ವಿಷಯಗಳು :

ಭಾರತದ ಅರಣ್ಯಗಳು ಪಾಠದ ನೋಟ್ಸ್‌

ಅರ್ಥವ್ಯವಸ್ಥೆ ಮತ್ತು ಸರಕಾರ ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *