10th Standard Kemmane Meesevottene Poem Kannada Notes | 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಕನ್ನಡ ನೋಟ್ಸ್

Kemmane Meesevottene

10th Standard Kannada Kemmane Meesevottene Poem Notes Question Answer Summary Guide ExtractMcq Pdf Download Kannada Medium Karnataka State Syllabus 2025 Kseeb Solutions For Class 10 Kannada Poem 8 Notes Kemmane Meesevottene Notes 10ನೇ ತರಗತಿ‌ ಕನ್ನಡ ಕೆಮ್ಮನೆ ಮೀಸೆವೊತ್ತೆನೇ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು Siri Kannada Text Book Class 10 Solutions Padya Chapter 8 Kemmane Meesevottane ಕೆಮ್ಮನೆ ಮೀಸೆವೊತ್ತೆನೇ ಸಾರಾಂಶ Pdf ಕೆಮ್ಮನೆ ಮೀಸೆವೊತ್ತೆನೇ 10ನೇ ತರಗತಿ notes ಕೆಮ್ಮನೆ ಮೀಸೆವೊತ್ತೆನೇ question answer 10th Kemmane meesevottane question answer in kannada Kemmane meesevottane summary in kannada pdf sslc Kemmane meesevottene in kannada.

Kemmane Meesevottene

10ನೇ ತರಗತಿ‌ ಕನ್ನಡ ಕೆಮ್ಮನೆ ಮೀಸೆವೊತ್ತೆನೇ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು

(ಕ್ರಿ. ಶ.. 941) ವೆಂಗಿ ಮಂಡಲದ ವೆಂಗಿಪಳು ಎಂಬ ಅಗ್ರಹಾರದವನು. ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವಿನ ಸ್ಥಳವಾದ ವೆಂಗಿಪಳು ನಿಸರ್ಗ ಸೌಂದರ್ಯದ ತಾಣ. ಚಾಲುಕ್ಯದ ಅರಿಕೇಸರಿಯ ಆಸ್ಥಾನಕವಿಯಾಗಿದ್ದ ಪಂಪ ಆದಿಪುರಾಣ ಮತ್ತು ವಿಕ್ರಮರ್ಜುನ ವಿಜಯಂ ಎಂಬ ಮಹಾಕಾವ್ಯಗಳ ಕರ್ತೃ. ವಿಕ್ರಮಾರ್ಜುನ ವಿಜಯ ಕಾವ್ಯಕ್ಕೆ ಪಂಪಭಾರತ ಎಂಬ ಮತ್ತೊಂದು ರತ್ನತ್ರಯರಲ್ಲಿ ಒಬ್ಬ ‘ಸರಸ್ವತೀ ಮಣಿಹಾರ’, ‘ಸಂಸಾರ ಸಾರೋದಯ’, ‘ಕವಿತಾಗುಣಾರ್ಣವ’ ಎಂಬ ಬಿರುದುಗಳನ್ನು ಪಡೆದಿದ್ದ ಕವಿ.

ವೇದವ್ಯಾಸರ ಮಹಾಭಾರತವನ್ನು ಆದರಿಸಿ ವಿಕ್ರಮಾರ್ಜುನ ವಿಜಯ ಎಂಬ ಕನ್ನಡ ಮಹಾಕಾವರವನ್ನು ಬರೆದ ಪಂಪ ಮಹಾಕವಿ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿದ್ದಾನೆ. ಇದೊಂದು ಲೌಕಿಕ ಕಾವ್ಯವೆಂದು ಘೋಷಿಸಿದ್ದಾನೆ.

ಅಡಸು – ಉಂಟಾಗುಅನಾಕುಳಂ – ನಿರಾಯಾಸವಾಗಿ
ಅರ್ಘ್ಯ – ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರುಅವನೀತಳ – ಭೂಮಂಡಲ
ಅಳವು – ಪರಾಕ್ರಮ ಆಂಬರಂ – ನನ್ನವರೆಗೂ
ಎರೆದಂ – ಬೇಡುವವನುಎಳೆದು ಕಲೆಯಿರಿ – ಹೊರಕ್ಕೆ ತಳ್ಳಿರಿ
ಏಳಿಸಿದ – ತಿರಸ್ಕರಿಸಿದಒಡಗೊಂಡು – ಜೊತೆಗೂಡಿ
ಒಡವೆ – ಐಶ್ವರ್ಯ, ಆಸ್ತಿಒತ್ತಂಬದಿಂದ – ಒತ್ತಾಯದಿಂದ
ಕಡುಸಿಗ್ಗು – ತೀವ್ರ ನಾಚಿಕೆಕನಕಪಾತ್ರ – ಚಿನ್ನದ ಪಾತ್ರೆ
ಕಳ್ಗುಡಿದವರಂದಮ್‌ – ಮದ್ಯಕುಡಿದವರರೀತಿಕೊಲಲ್ಕೆ – ಕೊಲ್ಲುವುದಕ್ಕೆ
ಕುಪ್ಪೆ – ಕಸದತಿಪ್ಪಚಪ್ಪರಿಂ – ಶಿಷ್ಯರಿಂದ
ಖಳ – ದುಷ್ಟತಡವಪ್ಪುದು – ತೊದಲುವುದು
ಜಟಾಕಲಾಪ – ಜಡೆಯ ಸಮೂಹದಿವ್ಯಶರಾಳಿ – ಶ್ರೇಷ್ಠ ದಾಣಗಳ ಸಮೂಹ
ಜಲಕ್ಕನೆ – ವಿಶದವಾಗಿನಾಣಿಲಿ – ನಾಚಿಕೆಯಿಲ್ಲದವನು
ತಳವೆಳಗಾಗೆ – ಗಾಬರಿಯಾಗುವಂತೆನೊಳವಿಂಗೆ – ನೊಣಕ್ಕೆ
ತೊಳಲ್ದು – ಅಲೆದಾಡಿಪೌರಂದರ – ಇಂದ್ರ
ದ್ವಿಜವಂಶಜಂ – ಬ್ರಾಹ್ಮಣಭಾರ್ಗವ – ಪರಶುರಾಮ
ನೂಂಕು – ನೂಕುಮಹೀಪತಿ – ರಾಜ
ಪಡಿಯಳ – ದ್ವಾರಪಾಲಕ, ಸೇವಕ (ಪ್ರತೀಹಾರಿ (ತ್ಸ) -ಪಡಿಯಜ (ತ್ಭ)ಮೃತ್ಪಾತ್ರ – ಮಣ್ಣಿನ ಪಾತ್ರೆ
ಪೋಲ್‌ – ಪಟ್ಟಣಮೊಳೆಯಂ – ಬಾಂಧವ್ಯವನ್ನು
ಬೆಳಿಗಿಂಗೆ – ಉತ್ಸಾಹಕ್ಕೆಸಂದೆಯ (ತ್ಭ) < ಸಂದೇಹ (ತ್ಸ)
ಮದಿರಾ – ಸುರಾಪಾನಸಾರ್ತರೆ – ಒದಗಿ ಬರಲು
ಮಾಲ್ಕೆಯೊಳ್ – ರೀತಿಯಲ್ಲಿಸಮಂತು – ಚೆನ್ನಾಗಿ
ಮೇಗಿಲ್ಲದೆ – ಉತ್ತಮತನವಿಲ್ಲದೆಸಾರ್ವುದು – ಬರುವುದು
ಮುಳುಕುಂ -ಶಾಸ್ತ್ರಪಾರಂಗತ

ವಲ್ಕಲಾವೃತಕಟಿತಟನುಂ – ನಾರುಮಡಿಯಿಂದ ಸುತ್ತಿದ ಸೊಂಟವುಳ್ಳವನು.

ಗರ್ವಗ್ರಹವ್ಯಗ್ರಚಿತ್ತನುಂ – ಗರ್ವವೆಂಬ ಗ್ರಹದಿಂದ ಪೀಡಿತವಾದ ಮನವುಳ್ಳವನಾಗಿಯೂ

1. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು?

ಉತ್ತರ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನು ಕರೆದುಕೊಂಡು ದೇಶ ದೇಶಗಳಲ್ಲೆಲ್ಲಾ ಸುತ್ತಿ ಪರುಶುರಾಮನ ಬಳಿಗೆ ಬಂದನು

2. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?

ಉತ್ತರ: ದ್ರೋಣನು ತನ್ನ ಪುತ್ರನಾದ ಅಶ್ವಥಾಮನೊಂದಿಗೆ ಪರುಶುರಾಮನ ಬಳಿಗೆ ಬಂದನು

3. ಪರುಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುದು?

ಉತ್ತರ: ವರುಣ, ವಾಯುವ್ಯ, ಆಗ್ನೆಯ ಐಂದ್ರಾದಿ ಅಸ್ತ್ರಗಳು ಪರಶುರಾಮರು ದ್ರೋಣರಿಗೆ ಕೊಟ್ಟ ಪ್ರಧಾನ ಅಸ್ತೆಗಳಾಗಿದ್ದವು.

4) ದ್ರುಪದನು ಪಡಿಯರಿನಿಗೆ ಏನೆಂದು ಹೇಳಿ ಕಳುಹಿಸಿದನು?

ಉತ್ತರ: ಬ್ರಾಹ್ಮಣ ಸ್ನೇಹಿತರಾರು ತನಗೆ ತಿಳಿದಿಲ್ಲ. ಅವನನ್ನೂ ಹೊರಕ್ಕೆ ತಳ್ಳು’ ಎಂದು ದ್ರುಪದನು ಪಡಿಯರನಿಗೆ (ದ್ವಾರಪಾಲಕನಿಗೆ ಹೇಳಿ ಕಳುಹಿಸಿದನು.

1) ಪರುಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಥ್ಯವನ್ನು ಕೊಡಲು ಕಾರಣವೇನು?

ಉತ್ತರ: ಪರಶುರಾಮನು, ದ್ರವ್ಯವನ್ನು ಬೇಡುವುದಕ್ಕಾಗಿ

ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳಿಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಥ್ಯವನ್ನು ಕೊಟ್ಟು ಪೂಜಿಸಿದನು. ಏಕೆಂದರೆ ಅವರ ಬಳಿ ಇದ್ದುದೆಲ್ಲವನ್ನು ಬೇಡಿದವರಿಗೆ ಕೊಟ್ಟಿದ್ದನ್ನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟನು. ಈಗ ಅವರ ಬಳಿ ದಿವ್ಯಾಸ್ತಗಳನ್ನು ಬಿಟ್ಟರೆ ಒಂದಡಕೆಯೂ ಇರಲಿಲ್ಲ.

2) ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು?

ಉತ್ತರ: ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತದವನಾಗಿ ರಾಜನಾದವನಿಗೆ, ಬ್ರಾಹ್ಮಣನು ಸ್ನೇಹಿತನೇ? ಅಂತಹವರಾರು ನನಗೆ ತಿಳಿದಿಲ್ಲ. ನೀನು ನನ್ನಲ್ಲಿ ಎಲ್ಲಿ ಕಂಡಿರುವೆಯೋ? ತಿಳಿಯದು. ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ಕಂಡಿಯೋ? ನಾಚಿಕೆಗೆಟ್ಟವನೇ ಎಂದು ಕಟು ಮಾತುಗಳಿಂದ ಹಿಯಾಳಿಸಿದನು.

3) ದ್ರುಪದನು ಮಾತಿಗೆ ದ್ರೋಣನಿಗೆ ಪ್ರತ್ಯುತ್ತರವೇನು?

ಉತ್ತರ: ದ್ರುಪದನ ಮಾತಿಗೆ ದ್ರೋಣನು ನೊಂದು ಈ ರೀತಿ ಹೇಳಿದನು – ” ಐಶ್ವರ್ಯ ಬರಲು ಮಧ್ಯಪಾನ ಮಾಡಿದವರಂತೆ ಮಾತು ತೊದಲುವುದು, ಮುಖದಲ್ಲಿ ವಕ್ರಚೇಷ್ಟೆ ಉಂಟಾಗುವುದು, ಮಾತುಗಳು ನಾಚಿಕೆಯಿಲ್ಲದಾಗುವುವು, ಸಂಬಂಧವನ್ನು ಮರೆಯುವಂತೆ ಮಾಡುವುದು, ಆದುದರಿಂದ ಐಶ್ವರ್ಯವು ಕಳ್ಳಿನೊಡೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆವು ಎಲೊ ಖಳನೇ? ನೊಣಕ್ಕೆ ಕಸವೇ ಶ್ರೇಷ್ಟವಾದುದು ಎನ್ನುವ ಗಾದೆ ನನ್ನ ಯೋಗ್ಯತೆ.

ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದವನೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೇ? ಎಂದು ಪ್ರತ್ಯುತ್ತರ ಕೊಡುತ್ತಾ ಶಪಥ ಮಾಡಿದನು.

1 ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ?

ಉತ್ತರ: ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತದವನಾಗಿ – ರಾಜನಾದವನಿಗೆ, ಬ್ರಾಹ್ಮಣನು ಸ್ನೇಹಿತನೇ? ಅಂತಹವರಾರು ನನಗೆ ತಿಳಿದಿಲ್ಲ. ನೀನು ನನ್ನಲ್ಲಿ ಎಲ್ಲಿ ಕಂಡಿರುವೆಯೋ? ತಿಳಿಯದು. ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ಕಂಡಿಯೇ? ನಾಚಿಕೆಗೆಟ್ಟವನೇ ಎಂದು ಕಟು ಮಾತುಗಳಿಂದ ಹಿಯಾಳಿಸಿದನು.

ದ್ರುಪದನ ಮಾತಿಗೆ ದ್ರೋಣನು ನೊಂದು ಈ ರೀತಿ ಹೇಳಿದನು – ” ಐಶ್ವರ್ಯ ಬರಲು ಮಧ್ಯಪಾನ ಮಾಡಿದವರಂತೆ ಮಾತು ತೊದಲುವುದು, ಮುಖದಲ್ಲಿ ವಕ್ರಚೇಷ್ಠೆ ಉಂಟಾಗುವುದು, ಮಾತುಗಳು

ನಾಚಿಕೆಯಿಲ್ಲದಾಗುವುವು, ಸಂಬಂಧವನ್ನು ಮರೆಯುವಂತೆ ಮಾಡುವುದು. ಆದುದರಿಂದ ಐಶ್ವರ್ಯವು ಕಳ್ಳಿನೊಡೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಇದೆವು ಎಲೊ ಖಳನೇ? ನೊಣಕ್ಕೆ ಕಸವೇ ಶ್ರೇಷ್ಟವಾದುದು ಎನ್ನುವ ಗಾದೆ ನನ್ನ ಯೋಗ್ಯತೆ. ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದವನೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೇ? ಎಂದು ಪ್ರತ್ಯುತ್ತರ ಕೊಡುತ್ತಾ ಶಪಥ ಮಾಡಿದನು.

2. ದ್ರೋಣನೂ ದ್ರುಪದನ ವಿರುದ್ಧ ಶಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ?

ಉತ್ತರ : ಉತ್ತರ: ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತದವನಾಗಿ – ರಾಜನಾದವನಿಗೆ, ಬ್ರಾಹ್ಮಣನು ಸ್ನೇಹಿತನೇ? ಅಂತಹವರಾರು ನನಗೆ ತಿಳಿದಿಲ್ಲ. ನೀನು ನನ್ನಲ್ಲಿ ಎಲ್ಲಿ ಕಂಡಿರುವೆಯೋ? ತಿಳಿಯದು. ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ಕಂಡಿಯೇ? ನಾಚಿಕೆಗೆಟ್ಟವನೇ ಎಂದು ಕಟು ಮಾತುಗಳಿಂದ ಹಿಯಾಳಿಸಿದನು.

ದ್ರುಪದನ ಮಾತಿಗೆ ದೋಣನು ನೊಂದು ಈ ರೀತಿ ಹೇಳಿದನು ಐಶ್ವರ್ಯ ಬರಲು ಮಧ್ಯಪಾನ ಮಾಡಿದವರಂತೆ ಮಾತು ತೊದಲುವುದು, ಮುಖದಲ್ಲಿ ವಕ್ರಚೇಷ್ಟೆ ಉಂಟಾಗುವುದು, ಮಾತುಗಳು ನಾಚಿಕೆಯಿಲ್ಲದಾಗುವುವು, ಸಂಬಂಧವನ್ನು ಮರೆಯುವಂತೆ ಮಾಡುವುದು, ಆದುದರಿಂದ ಐಶ್ವರ್ಯವು ಕಳ್ಳನೊಡೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆವು ಎಲೊ ಖಳನೇ? ನೊಣಕ್ಕೆ ಕಸವೇ ಶ್ರೇಷ್ಟವಾದುದು ಎನ್ನುವ ಗಾದೆ ನನ್ನ ಯೋಗ್ಯತೆ. ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದವನೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೇ? ಎಂದು ಪ್ರತ್ಯುತ್ತರ ಕೊಡುತ್ತಾ ಶಪಥ ಮಾಡಿದನು

1. “ಈಗಳೊಂದಡರೆಯಲಿಲ್ಲ ಕೈಯೊಳ್”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಪಂಪನು ರಚಿಸಿರುವ ಕೆಮ್ಮನೆ ಮೀಸೆವೊತ್ತೆನೇ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ. ಇದನು ಪಂಪ ಭಾರತದ ದ್ವಿತೀಯಾಶ್ವಸದಿಂದ ಆರಿಸಲಾಗಿದೆ.

ಸಂದರ್ಭ: ಪ್ರಸ್ತುತ ಈ ವಾಕ್ಯವನ್ನು ಗುರುಗಳಾದ ಪರಶುರಾಮನು ತಮ್ಮ ಶಿಷ್ಯರಾದ ದ್ರೋಣರಿಗೆ ಅವರು ತಮ್ಮ ಬಡತನದಿಂದಾಗಿ ಸಹಾಯ ಕೇಳಲು ಬಂದಾಗ ಹೇಳಿದರು.

ಭಾವಾರ್ಥ: ಬಡತನದಿಂದಾಗಿ ತಮ್ಮನ್ನು ಕಾಣಲು ಬಂದೆನು ಎಂದು ದ್ರೋಣರು ಹೇಳಿದಾಗ ಪರಶುರಾಮರು, ತನ್ನಲ್ಲಿದ್ದುದನ್ನೆಲ್ಲ ಬೇಡಿದವರೆಲ್ಲರಿಗೂ ಕೊಟ್ಟುಬಿಟ್ಟೆ. ಈಗ ತನ್ನ ಬಳಿ ಒಂದಡಕೆಯು ಕೈಯಲ್ಲಿ ಇಲ್ಲ” ಎಂದು ತಿಳಿಸಿದರು.

ವಿಶೇಷತೆ: ದ್ರೋಣಾಚಾರ್ಯರ ಬಡ ಸ್ಥಿತಿ, ಪರಶುರಾಮರು ತಮ್ಮ ಶಿಷ್ಯನ ಮೇಲೆ ತೋರಿದ ಕಳಪೆಯನ್ನು ಇಲ್ಲಿ ತಿಳಿಸಿದ್ದಾರೆ. ಗುರು-ಶಿಷ್ಯರ ಆತ್ಮೀಯ ಸಂಬಂಧ ಇಲ್ಲಿ ಮೂಡಿಬಂದಿದೆ.

2) “ವಿದ್ಯಾಧನಮಧನತ್ತಮ”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಪಂಪನು ರಚಿಸಿರುವ ‘ಕೆಮ್ಮನೆ ಮೀಸೆವೊತ್ತೇನೇ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ. ಇದನ್ನು ಪಂಪಭಾರತದ ದ್ವಿತೀಯಾಶ್ವಸನಂ ದಿಂದ ಆರಿಸಲಾಗಿದೆ.

ಸಂದರ್ಭ: ಈ ವಾಕ್ಯವನ್ನು ದ್ರೋಣರು ತಮ್ಮ ಗುರುಗಳಾದ ಭಾರ್ಗವ ಪರಶುರಾಮರಿಗೆ ಹೇಳಿದರು.

ಸ್ವಾರಸ್ಯ: ಪರಶುರಾಮರ ಬಳಿ ದ್ರೋಣರಿಗೆ ಕೊಡಲು ಕೆಲವು ದಿವ್ಯಾಸ್ತಗಳು ಬಿಟ್ಟರೆ ಏನೂ ಇರಲಿಲ್ಲ. ದ್ರೋಣರು ಒಬ್ಬ ಒಳ್ಳೆಯ ಶಿಕ್ಷರತಂತೆ ಎಲ್ಲಾ ಧನಗಳಿಗಿಂತ ವಿದ್ಯಾಧನವೇ ಶ್ರೇಷ್ಠವೆಂದು ನಂಬಿ ಅದನ್ನೇ ಬೇಡಿ ಪಡೆದರು.

ವಿಶೇಷತೆ: ವಿದ್ಯೆಯ ಮಹತ್ವವನ್ನು ತಿಳಿಸಲಾಗಿದೆ.

3) ‘ಎರಡು ನಾಣಿಲಿಗರಪುರೆ ಮಾನಸರ್’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಪಂಪನು ರಚಿಸಿರುವ ‘ಕೆಮ್ಮನೆ ಮೀಸೆವೊತ್ತನೇ’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ಪಂಪ ಭಾರತದಿಂದ ಎರಡನೇ ಆಶ್ವಾಸದಿಂದ ಆರಿಸಲಾಗಿದೆ.

ಸಂದರ್ಭ: ದ್ರುಪದನು ಸ್ನೇಹವನ್ನು ಬಯಸಿ ಬಂದ ದ್ರೋಣನಿಗೆ ಹೇಳಿದ ಮಾತು ಇದಾಗಿಹುದು

ಸ್ವಾರಸ್ಯ: ದ್ರೋಣನು ದ್ರುಪದನ ಸ್ನೇಹವನ್ನು ನೆನಪಿಸಿಕೊಂಡು ಅವರ ಅರಮನೆಗೆ ಬಂದು ಪರಿಚಯಿಸಿಕೊಂಡಾಗ ಅಹಂಕಾರದಿಂದ ದ್ರುಪದನು ಸ್ನೇಹ ಹೇಳಿ ಬಂದ ನಿನಗೆ ನಾಚಿಕೆಯಾಗುವುದಿಲ್ಲವೇ? ಎಂದು ಹೀಯಾಳಿಸಿದಾಗ ಮೂಡಿ ಬಂದ ಪ್ರಸಂಗವನ್ನು ಪಂಪ ಇಲ್ಲಿ ವರ್ಣಿಸಲಾಗಿದೆ.

4) ‘ಜನಕೃ ನೀಗಳರಕೆರೆಂ ಸಿರಿ ಕಳ್ಕೊಡಟ್ಟಿತೆಂಬುದಂ’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಪಂಪನು ರಚಿಸಿರುವ ‘ಕೆಮ್ಮನೆ ಮೀಸೆವೊತ್ತನೇ?’ ಎಂಬ ಪಠ್ಯ ಭಾಗದಿಂದ ಆರಿಸಲಾಗಿದ್ದು ಇದನ್ನು ಪಂಪ ಭಾರತದ ದ್ವಿತೀಯಾಶ್ವಾಸದಿಂದ ಆರಿಸಲಾಗಿದೆ.

ಸಂದರ್ಭ: ದ್ರುಪದನ ಮಾತನ್ನು ಕೇಳಿ ದ್ರೋಣನು ಕೆರಳಿ ಈ ವಾಕ್ಯವನ್ನು ತಿಳಿಸಿದನು.

ಸ್ವಾರಸ್ಯ: ದ್ರುಪದನ ಮಾತಿಗೆ ನೊಂದು ದ್ರೋಣನು, ‘ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದು ನಿಶ್ಚಯವಾಗಿದೆ. ಈಗ ಪ್ರತ್ಯಕ್ಷವಾಗಿ ತಿಳಿದೆನು’ ಎಂಬುದಾಗಿ ಮಾತಿನ ಚಾಟಿಯನ್ನೇ ಕೊಟ್ಟನು.

ವಿಶೇಷತೆ: ಐಶ್ವರ್ಯದೊಂದಿಗೆ ಮದವು ಏರುವುದು ಎಂಬ ಸ್ವಾರಸ್ಯಕರವಾಗಿದೆ.

5) ‘ನೊಳಲಿರೆ ತಪ್ಪೆ ವರಂ’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವು ಪಂಪನು ರಚಿಸಿರುವ ‘ಕೆಮ್ಮನೆ ಮೀಸೆವೊತ್ತೇನೆ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಇದನ್ನು ಪಂಪರ ಭಾರತದ ದ್ವಿತೀಯಾಶ್ವಾಸದಿಂದ ಆರಿಸಲಾಗಿದೆ.

ಸಂದರ್ಭ: ದ್ರೋಣನು ದ್ರುಪದನ ಮಾತಿಗೆ ಸಿಟ್ಟಿನಿಂದಲೇ ಉತ್ತರಿಸುತ್ತಾ ಈ ವಾಕ್ಯವನ್ನು ಹೇಳಿದನು.

ಸ್ವಾರಸ್ಯ: ನೊಣಕ್ಕೆ ತಿಪ್ಪನೇ ಪ್ರಿಯವಾದುದು. ಅಂತೆಯೇ ನೀನು ಕೂಡಾ ತಿಪ್ಪೆಯ ಮೇಲಿನ ನೊಣದಂತೆ ಐಶ್ವರ್ಯಕ್ಕೆ ಅಂಟುಕೊಂಡು ಸ್ನೇಹದ ಮೌಲ್ಯವನ್ನೇ ಮರೆತಿರುವೇ ಎಂದು ತಿಳಿಸಿದನು. ಇಲ್ಲಿ ದ್ರುಪದನನ್ನು ತಿಪ್ಪೆಯ ಮೇಲಿನ ನೊಣಕ್ಕೆ ಹೋಲಿಸಲಾಗಿದೆ.

ವಿಶೇಷತೆ: ದ್ರುಪದನಿಂದ ಅವಮಾನಿತನಾದ ದ್ರೋಣನು ಅವನಿಗೆ ತಕ್ಕ ಬುದ್ದಿ ಕಲಿಸಲು ಶಪಥ ಮಾಡಿದನು.

1) ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ

  1. ವಲ್ಯಲಾವೃತ = ವಲ್ಯಲ + ಆವೃತ = ಸವರ್ಣದೀರ್ಘಸಂಧಿ
  2. ದ್ರವ್ಯಾರ್ಥಿ = ದ್ರವ್ಯ + ಅರ್ಥಿ = ಸವರ್ಣದೀರ್ಘಸಂಧಿ
  3. ನಿಮ್ಮರಸ = ನಿಮ್ಮ + ಅರಸ = ಲೋಪಸಂಧಿ
  4. ಮದೋನ್ಮತ್ತ = ಮದ + ಉನ್ಮತ್ತ = ಗುಣಸಂಧಿ
  5. ಕಳ್ಳುಡಿ = ಕಳ್ + ಗುಡಿ = ಆದೇಶಸಂಧಿ

2) ಕೊಟ್ಟಿರುವ ಪದಗಳನ್ನು ವಿಗ್ರಹ ಮಾಡಿ ಸಮಾಸ ಹೆಸರಿಸಿ

. ನಾಣಿ + ಲಿ = ನಾಣಿಲಿ

. ದಿವ್ಯವಾದ + ಶರಾಣಳಿ = ದಿವ್ಯಶರಾಳಿ = ಕರ್ಮಧಾರೆಯ ಸಮಾಸ

. ಮಹೀಪತಿ = ಮಹಿಗೆ ಪತಿಯಾದವನು = ಬಹುವೀಹಿಸಮಾಸ

. ಕಳ್ಳು+ಕುಡಿದ + ಕಳ್ಳುಡಿದ = ತತ್ಪುರುಷ ಸಮಾಸ 

ನೊಳವಿಂಗೆ ತಪ್ಪೆ ವರವೆಂಬ ವೊಲಾಂಬರಮುಂಟೆ ನಿನ್ನದೊಂದಳವು?

ಉತ್ತರ : ಅರ್ಥಾಂತರನ್ಯಾಸಾಲಂಕಾರ

ಉಪಮೇಯ – ನೊಳವಿಂಗೆ ತಪ್ಪೆ ವರಮೆಂಬಂತೆ

ಉಪಮಾನ – ವೊಲಾಂಬರಮುಂಟೆ ನಿನ್ನ ದೊಂದಳವು

ಸಮನ್ವಯ – ನೊಳವಿಂದೆ ತಪ್ಪವರವೆಂಬಂತೆ ವೊಲಾಂಬರಮುಂಟೆ ನಿನ್ನ ದೊಂದಳವು

ಉಪಮಾನ ವಾಕ್ಯದಿಂದ ಉಪಮೇಯ ಸಮರ್ಥನೆ ಮಾಡುವುದರಿಂದ ಸಮನ್ವಯಗೊಳಿಸಲಾಗಿದೆ.

1) ಅಂತೆಂಬನಾರ್ಗೆ ಪಿರಿದುಂ

ಬ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ

ಚಿಂತನಗೆ ಕಳೆಯನೇ ನೊಂ

ಕಂತಪುನನವೆಯನೆಂಟು ಸಭೆಯೊಳ್ ನುಡಿಂ

2) ಒಡವೆ ಯನರ್ಥಿಗಿತ್ತನೆವನಿತಳಮಂ ಗುರುತ್ತೆ ನೀಗಳೊಂ

ದಡಕೆಯವಿಲ್ಲ ಕೈಯೊಳೆರೆದಂ ಶ್ರುತ ಪಾರಗನೆಂತು ಸಂತಸಂ

ಬಡಿಸುವೆನ್ನಿದೊಂದು ಧನುವಿರ್ದುದು ದಿವ್ಯ ಶರಾಳಿಯಿರ್ದುದಿ

ಲ್ಲೊಡಮೆ ಸಮಂತು ಪೇ ಳಿವರೊಳಾವುದನೀವುದೋ ಕುಂಭ ಸಂಭವ

Leave a Reply

Your email address will not be published. Required fields are marked *