10th Standard Bharatada Rutugalu Social Science Notes Question Answer Mcq Pdf Download in Kannada Medium Karnataka State Syllabus 2025, 10ನೇ ತರಗತಿ ಭಾರತದ ಋತುಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, 10th Social Science Bharatada Rutugalu Question Answer, Kseeb Solutions for Class 10 Social Science Chapter 11 Notes,10th Class Social Science 11 lesson Notes, ಭಾರತದ ಋತುಗಳು ಪ್ರಶ್ನೋತ್ತರಗಳು Pdf, Bharatada Rutugalu in Kannada Notes Key Answers, Bharatada Rutugalu SSLC in Kannada Notes.

10ನೇ ತರಗತಿ ಭಾರತದ ಋತುಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
- ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶ ರಾಜಸ್ಥಾನದ ಗಂಗಾನಗರ ಆಗಿದೆ.
- ಸ್ಥಳೀಯ ಉಷ್ಣಾಂಶ ಹಾಗೂ ಪ್ರಚಲನ ಪ್ರವಾಹಗಳಿಂದ ಉಂಟಾಗುವ ಮಳೆ ಪರಿಸರಣ ಮಳೆ
- ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರೂಯ್ಲಿ
- ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಮಾಸಿನ್‌ರಾಮ್
II. ಈ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
1.ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.
2. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದಲ್ಲಿ ಭಾರತದಲ್ಲಿ ಆವರ್ತ ಮಾರುತಗಳುಂಟಾಗಲು ಕಾರಣವೇನು?
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದಲಿ ಭೂಮಿ ಮತ್ತು ಸಾಗರ ಭಾಗಗಳ ನಡುವಿನ ಉಷ್ಣಾಂಶ ಹಾಗೂ ಒತ್ತಡದಲ್ಲಿನ ವ್ಯತ್ಯಾಸದಿಂದಾಗಿ ಭಾರತದಲ್ಲಿ ಆವರ್ತ ಮಾರುತಗಳುಂಟಾಗುತ್ತವೆ.
3. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
ಅಕ್ಷಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಸಾಗರಗಳಿಂದ ಇರುವ ದೂರ, ಮಾರುತಗಳ ದಿಕ್ಕು, ಪರ್ವತ ಸರಣಿಗಳು ಹಬ್ಬಿರುವ ರೀತಿ, ಸಾಗರ ಪ್ರವಾಹಗಳು ಮುಂತಾದವು ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ.
4. ಭಾರತದ ವ್ಯವಸಾಯವು ‘ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ’ ಚರ್ಚಿಸಿರಿ.
ನೈರುತ್ಯ ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ. ಈ ಮಳೆ ವಿಫಲವಾದರೆ ಬರಗಾಲ ಬರುವುದು. ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣ ಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದಲೇ ಭಾರತದ ವ್ಯವಸಾಯವನ್ನು ಮಾನ್ಸೂನ್ ಮಾರುತಗಳ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.
III. ಹೊಂದಿಸಿ ಬರೆಯಿರಿ:
ಕ್ರ.ಸಂ. | ಅ | ಆ | ಉತ್ತರಗಳು |
---|---|---|---|
1 | ಕಾಲಬೈಸಾಕಿ | ಉತ್ತರ ಪ್ರದೇಶ | ಪಶ್ಚಿಮ ಬಂಗಾಳ |
2 | ಆಂಧೀಸ್ | ಕರ್ನಾಟಕ | ಉತ್ತರ ಪ್ರದೇಶ |
3 | ಕಾಫಿ ತುಂತುರು | ಕೇರಳ | ಕರ್ನಾಟಕ |
4 | ಮಾವಿನ ಹೊಯ್ಲು | ರಾಜಸ್ಥಾನ | ಕೇರಳ |
ಪಶ್ಚಿಮ ಬಂಗಾಳ |
ಹೆಚ್ಚುವರಿ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1.ಭಾರತದಲ್ಲಿ ಚಳಿಗಾಲ ಡಿಸೆಂಬರ್ ಇಂದ-ಫೆಬ್ರುವರಿವರೆಗೆ ಇದ್ದರೆ ಬೇಸಿಗೆ ಕಾಲ:
ಎ) ಜನವರಿಯಿಂದ-ಮಾರ್ಚ್‌ವರೆಗೆ
ಬಿ) ಮಾರ್ಚ್ನಿಂದ-ಮೇವರೆಗೆ
ಸಿ) ಮೇಯಿಂದ-ಅಕ್ಟೋಬರ್‌ವರೆಗೆ
ಡಿ) ಅಕ್ಟೋಬರ್‌ನಿಂದ-ಡಿಸೆಂಬರ್‌ವರೆಗೆ
2. ನೈಋತ್ಯ ಮಾನ್ಸೂನ್ ಮಾರುತಗಳ ಕಾಲವನ್ನು ಎಂತಲೂ ಕರೆಯುತ್ತಾರೆ.
ಎ) ಮುಂಗಾರು ಮಳೆಗಾಲ
ಬಿ) ಹಿಂಗಾರು ಮಳೆಗಾಲ
ಸಿ) ಚಳಿಗಾಲದ
ಡಿ) ನಿರ್ಗಮನ ಕಾಲ
3. ಪಶ್ಚಿಮ ಘಟ್ಟಗಳ ಪೂರ್ವ ಭಾಗವು ಪಶ್ಚಿಮ ಭಾಗದಷ್ಟು ಮಳೆ ಪಡೆಯುವುದಿಲ್ಲ ಏಕೆಂದರೆ:
ಎ) ಅವು ದಕ್ಷಿಣ ಭಾಗದಲ್ಲಿದೆ
ಬಿ) ಮಳೆ ನೆರಳಿನ ಪ್ರದೇಶದಲ್ಲಿವೆ
ಸಿ) ಹೆಚ್ಚು ಹಿಮಪಾತವಾಗುತ್ತದೆ
ಡಿ) ಅಲ್ಲಿ ಹೆಚ್ಚು ದಟ್ಟ ಅರಣ್ಯವಿದೆ
4. ಸಾಧಾರಣ ಮಳೆ ಪಡೆಯುವ ಪ್ರದೇಶದ ಮಳೆಯ ಪ್ರಮಾಣ:
ಎ) 50 ಸೆಂ.ಮೀ.ಗಳಿಗಿಂತ ಕಡಿಮೆ
ಬಿ) 150 ಸೆಂ.ಮೀ.ಗಳಿಗಿಂತ ಹೆಚ್ಚು
ಸಿ) 50 ರಿಂದ 200 ಸೆಂ. ಮೀ.
ಡಿ) 50 ರಿಂದ 250 ಸೆಂ. ಮೀ.
5. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.
ಎ) ಎರಡು
ಬಿ) ನಾಲ್ಕು
ಸಿ) ಮೂರು
ಡಿ) ಐದು
6. ಭಾರತದ ಸರಾಸರಿ ಮಳೆಯ ಪ್ರಮಾಣ:
ಎ) 118 ಸೆಂ. ಮೀ.
ಬಿ) 200 ಸೆಂ. ಮೀ.
ಸಿ) 150 ಸೆಂ. ಮೀ.
ಡಿ) 128 ಸೆಂ. ಮೀ.
II. ಈ ಪ್ರಶ್ನೆಗಳಿಗೆ ಉತ್ತರಿಸಿ:
1.ಸಾಧಾರಣ ಮಳೆ ಪಡೆಯುವ ಪ್ರದೇಶಗಳು ಯಾವುವು?
ರಾಜಸ್ತಾನದ ಥಾರ ಮರುಭೂಮಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪಂಜಾಬ, ಹರಿಯಾಣ, ಗುಜರಾತಿನ ಕಬ್ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದ ಪೂರ್ವಭಾಗ, ಕರ್ನಾಟಕದ ಒಳನಾಡು ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿವೆ.
2. ನೈಋತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್‌ನಿಂದ ಹಿಂದೆ ಸರಿಯಲು ಪ್ರಾರಂಭ ಮಾಡುತ್ತವೆ. ಕಾರಣವೇನು?
ಅಕ್ಟೋಬರ ತಿಂಗಳ ಕೊನೆಯ ಭಾಗದ ಒಳಗಾಗಿ ಭಾರತದ ಉಪಖಂಡದಲ್ಲಿ ಮಳೆ ಸುರಿದ ಪರಿಣಾಮವಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ. ಅಲ್ಲದೆ ಸೂರ್ಯನ ಕಿರಣಗಳು ಕೂಡಾ ಈ ಅವಧಿಯಲ್ಲಿ ದಕ್ಷಿಣಾರ್ಧ ಗೋಳಾರ್ಧದಲ್ಲಿ ಲಂಬವಾಗಿ ಬೀಳುತ್ತವೆ ಇದರಿಂದ ಉತ್ತರಾರ್ಧಗೋಳದಲ್ಲಿ ಉಷ್ಣಾಂಶವು ಕಡಿಮೆಯಾಗುತ್ತದೆ. ಪರಿಣಾಮವಾಗಿ ಆ ಪ್ರದೇಶವು ಹೆಚ್ಚು ಒತ್ತಡ ಪ್ರದೇಶವಾಗಿ ಪರಿವರ್ತನೆಯಾಗುತ್ತದೆ. ಅದಕ್ಕಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್‌ನಿಂದ ಹಿಂದೆ ಸರಿಯಲು ಪ್ರಾರಂಭ ಮಾಡುತ್ತವೆ.
3. ಕಡಿಮೆ ಮಳೆಯ ಪ್ರದೇಶಗಳು ಯಾವುವು?
ರಾಜಸ್ತಾನದ ಥಾರ ಮರುಭೂಮಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪಂಜಾಬ, ಹರಿಯಾಣ, ಗುಜರಾತಿನ ಕಟ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದ ಪೂರ್ವಭಾಗ, ಕರ್ನಾಟಕದ ಒಳನಾಡು ಕಡಿಮೆ ಮಳೆ ಬೀಳುವ ಪ್ರದೇಶಗಳು.
4. ಭಾರತದಲ್ಲಿನ ಮಳೆಯ ಹಂಚಿಕೆಯನ್ನು ಕುರಿತು ಬರೆಯಿರಿ.
ಭಾರತದಲ್ಲಿ ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ. ಭಾರತವು ವರ್ಷದ ಎಲ್ಲಾ ಅವಧಿಗಳಲ್ಲಿಯೂ ಮಳೆಯನ್ನು ಪಡೆಯುತ್ತದೆ. ದೇಶದ ಸರಾಸರಿ ಮಳೆಯ ಪ್ರಮಾಣ 118 ಸೆಂ.ಮೀ.ಗಳು ಆದರೆ ವಿವಿಧ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬೀಳುವುದು. ಅಲ್ಲದೇ ಮಳೆಯ ಪ್ರಮಾಣವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುವುದು.
5. ಅಧಿಕ ಮಳೆ ಪಡೆಯುವ ಪ್ರದೇಶಗಳು ಯಾವುವು?
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ, ಅಸ್ಸಾಂ ಹಾಗೂ ಇತರ ಪೂರ್ವ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ ಅಧಿಕ ಮಳೆ ಪಡೆಯುವ ಪ್ರದೇಶಗಳು,
6. ನೈರುತ್ಯ ಮಾನ್ಸೂನ್ ಮಾರುತಗಳು ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆಯನ್ನು ಸುರಿಸಲು ಕಾರಣವೇನು?
ನೈಋತ್ಯ ಮಾನ್ಸೂನ್ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ. ಅವುಗಳೆಂದರೆ ಅರಬ್ಬಿ ಸಮುದ್ರ ಶಾಖೆ ಹಾಗೂ ಬಂಗಾಳಕೊಲ್ಲಿಯ ಶಾಖೆ. ಅರಬ್ಬಿ ಸಮುದ್ರ ಶಾಖೆಯು ಪಶ್ಚಿಮ ಘಟ್ಟಗಳಿಂದ ತಡೆಯಲ್ಪಟ್ಟು ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆ ಸುರಿಸುತ್ತವೆ.
7. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗಲು ಕಾರಣವೇನು?
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗಲು ಕಾರಣ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹ.
8. ಚಳಿಗಾಲವು ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಅವಧಿಯಾಗಿರಲು ಕಾರಣಗಳೇನು?
ಚಳಿಗಾಲದ ಅವಧಿಯಲ್ಲಿ ಭಾರತದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುವ್ಯದರಿಂದ ಉಷ್ಣಾಂಶ ಕಡಿಮೆಯಿರುತ್ತದೆ. ಉತ್ತರದ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರದ ಮೈದಾನ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶವು ಕಂಡು ಬರುತ್ತದೆ. ಕೆಲವು ಕಡೆಗಳಲ್ಲಿ ಉಷ್ಣಾಂಶವು ನೀರು ಹೆಪ್ಪುಗಟ್ಟುವ ಬಿಂದುವಿಗಿಂತಲೂ ಕಡಿಮೆ ಇರುವುದು. ದಕ್ಷಿಣ ಭಾರತದಲ್ಲಿ ಉಷ್ಣಾಂಶವು ಸಾಧಾರಣವಾಗಿದ್ದು ಹವಾಮಾನವು ಹಿತಕರವಾಗಿರುತ್ತದೆ. ಭಾರತವು ತನ್ನ ವಾರ್ಷಿಕ ಮಳೆಯ ಶೇ.2 ರಷ್ಟನ್ನು ಮಾತ್ರ ಈ ಅವಧಿಯಲ್ಲಿ ಪಡೆಯುವುದು. ಆದುದರಿಂದ ಚಳಿಗಾಲವು ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಅವಧಿಯಾಗಿದೆ.
9. ಬಂಗಾಳಕೊಲ್ಲಿಯ ಶಾಖೆಯಿಂದ ಮಳೆ ಪಡೆಯುವ ಪ್ರದೇಶಗಳು ಯಾವುವು?
ಬಂಗಾಳ ಕೊಲ್ಲಿ ಶಾಖೆಯಿಂದ ಮಯನ್ಮಾರ್, ಬಾಂಗ್ಲಾದೇಶ, ಭಾರತದ ಈಶಾನ್ಯ ಭಾಗ, ಹಿಮಾಲಯದ ತಪ್ಪಲು ಮತ್ತು ಉತ್ತರದ ಮೈದಾನಗಳು ಮಳೆಯನ್ನು ಪಡೆಯುತ್ತವೆ.
ಮುಖ್ಯಾಂಶಗಳು
- ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.
- ಭಾರತದಲ್ಲಿ ಕಂಡು ಬರುವ ವಾರ್ಷಿಕ ವಾಯುಗುಣವನ್ನು. 1. ಬೇಸಿಗೆ ಕಾಲ 2. ನೈಋತ್ಯ ಮಾನ್ಸೂನ್ ಕಾಲ ಅಥವಾ ಮುಂಗಾರು ಮಳೆಗಾಲ 3. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಹಿಂಗಾರು ಮಳೆಗಾಲ 4. ಚಳಿಗಾಲ ಎಂಬುದಾಗಿ ನಾಲ್ಕು ಋತುಮಾನಗಳನ್ನಾಗಿ ವಿಂಗಡಿಸಬಹುದು.
- ಭಾರತದಲ್ಲಿ ಬೇಸಿಗೆಕಾಲವು ಮಾರ್ಚ್ ತಿಂಗಳ ಮೊದಲವಾರದಲ್ಲಿ ಪ್ರಾರಂಭವಾಗಿ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುತ್ತದೆ.
- ಈ ಅವಧಿಯಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುವುದರಿಂದ ಭಾರತದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ.
- ಭಾರತದಲ್ಲಿ ನೈಋತ್ಯ ಮಾನ್ಸೂನ್ ಎಂದರೆ ಮಳೆಗಾಲವೆಂದರ್ಥ. ಇವುಗಳನ್ನು ಮುಂಗಾರು ಮಳೆಗಾಲದ ಮಾರುತಗಳೆಂದು ಕರೆಯುತ್ತಾರೆ. ಇವು ಜಲಾಂಶಪೂರಿತ ಮಾರುತಗಳಾಗಿದ್ದು ಭಾರತದ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತವೆ.
- ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದ ಅವಧಿಯಲ್ಲಿ ಭಾರತವು ಶೇ 13 ರಷ್ಟು ಮಳೆಯನ್ನು ಪಡೆಯುತ್ತದೆ.
- ಭಾರತದಲ್ಲಿ ಚಳಿಗಾಲದ ಅವಧಿಯು ಡಿಸೆಂಬರ್‌ನಿಂದ ಆರಂಭವಾಗಿ ಫೆಬ್ರವರಿಯ ಕೊನೆಯವರೆಗೂ ಮುಂದುವರೆಯುವುದು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತವನ್ನು ಕಡಿಮೆ ಮಳೆಯ ಪ್ರದೇಶ, ಸಾಧಾರಣ ಮಳೆ ಪಡೆಯುವ ಪ್ರದೇಶ, ಅಧಿಕ ಮಳೆಯ ಪ್ರದೇಶ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಬಹುದು.
- ಕಡಿಮೆ ಮಳೆಯ ಪ್ರದೇಶದಲ್ಲಿ ವಾರ್ಷಿಕ 50 ಸೆಂ. ಮೀ ಗಳಿಗಿಂತ ಕಡಿಮೆ ಮಳೆ ಬೀಳುತ್ತದೆ.
- ಸಾಧಾರಣ ಮಳೆ ಬೀಳುವ ಪ್ರದೇಶದಲ್ಲಿ ಸುಮಾರು 50 ರಿಂಧ 250 ಸೆಂ. ಮೀ. ಮಳೆ ಬೀಳುತ್ತದೆ.
- ಅಧಿಕ ಮಳೆಯಾಗುವ ಪ್ರದೇಶದಲ್ಲಿ ವಾರ್ಷಿಕ ಸುಮಾರು 250 ಸೆಂ. ಮೀ. ಗಳಿಗಿಂತ ಹೆಚ್ಚು ಮಳೆ ಬೀಳುತ್ತದೆ.
- ಭಾರತದಲ್ಲೇ ಅತ್ಯಧಿಕ ಮಳೆ ಬಿಳುವ ಪ್ರದೇಶ ಮಾಸಿನ್‌ರಾಮ್.
ಇತರೆ ವಿಷಯಗಳು :
ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್