10th Standard Naisargika Sampanmulagala Sustira Nirvahane Science Notes | 10ನೇ ತರಗತಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ವಿಜ್ಞಾನ ನೋಟ್ಸ್‌

Naisargika Sampanmulagala Sustira Nirvahane

10th Standard Naisargika Sampanmulagala Sustira Nirvahane Science Notes Question Answer Guide Extract Mcq Pdf Download in Kannada Medium 2025 10ನೇ ತರಗತಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ವಿಜ್ಞಾನ ನೋಟ್ಸ್‌ Kseeb Solution For Class 10 Science Chapter 16 Notes 10 Class science Chapter 16 Notes Question Answer naisargika sampanmula galu susthira nirvahane 10th standard 10ನೇ ತರಗತಿ ವಿಜ್ಞಾನ ನೋಟ್ಸ್ 10th standard science 16th lesson notes kannada medium 10th science question and answer in kannada pdf karnataka state syllabus

Naisargika Sampanmulagala Sustira Nirvahane

10ನೇ ತರಗತಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ವಿಜ್ಞಾನ ನೋಟ್ಸ್‌

1) ನೀವು ಹೆಚ್ಚು ಪರಿಸರ ಸ್ನೇಹಿಯಾಗಲೂ ನಿಮ್ಮ ಹವ್ಯಾಸಗಳಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳೇನು?

ನಾವು ಹೆಚ್ಚು ಹೆಚ್ಚು ಪರಿಸರದ ಸ್ನೇಹಿಯಾಗಿ ಬದುಕುವ ಅವಶ್ಯಕತೆ ಇಂದು ಹೆಚ್ಚಾಗಿದೆ. ನಾವೆಲ್ಲರೂ ದೃಢ ಮನಸ್ಸಿನಿಂದ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು. ಇದು ನಮ್ಮ ಕರ್ತವ್ಯವಾಗಬೇಕು. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರವು ನಮ್ಮನ್ನು ರಕ್ಷಿಸುತ್ತದೆ. ನಮ್ಮ ಉಳಿವಿಗಾಗಿ ಪರಿಸರವು ಅತ್ಯಗತ್ಯ ಅದಕ್ಕಾಗಿ ನಾವು ನಮ್ಮೆಲ್ಲರ ಜೀವನದಲ್ಲಿ ಈ ಕೆಲವು ನಿಯಮಗಳನ್ನು ಸಾಧ್ಯವಾದಷ್ಟು ಆಚರಿಸಬಹುದಲ್ಲವೇ? ನನ್ನ ಒಬ್ಬನಿಂದ ಏನಾಗುತ್ತದೆ? ಎಂದು ಯೋಚಿಸದೆ ನನ್ನಿಂದಲೇ ಈ ಪ್ರಯತ್ನ ಪ್ರಾರಂಭವಾಗುತ್ತಿದೆ ಎಂಬ ಹೆಮ್ಮೆಯಿಂದ ಇದನ್ನು ಇಂದಿನಿಂದಲೇ ಪಾಲಿಸೋಣ. ನಾವು ಈ ಕೆಳಗಿನ ನಿಯಮವನ್ನು ಆಚರಣೆಗೆ ತರಬೇಕು.

ನಮ್ಮ ಜೀವನದಲ್ಲಿ ನಿರಾಕರಣೆ, ಮಿತಬಳಕೆ, ಮರುಬಳಕೆ, ಮರು ಉದ್ದೇಶ ಮತ್ತು ಮರುಚಕ್ರೀಕರಣವನ್ನು ಪ್ರಾಮಾಣಿಕವಾಗಿ ಗರಿಷ್ಟ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬೇಕು.

  • ನಾವು ಉಪಯೋಗಿಸದೆ ಇದ್ದಾಗ ಅನಗತ್ಯವಾಗಿ ದೀಪ ಹಾಗೂ ಫ್ಯಾನ್‌ಗಳ ಸ್ವಿಚ್ಚನ್ನು ಆರಿಸಬೇಕು.
  • ಪ್ಲಾಸ್ಟಿಕ್ ಮುಂತಾದ ಪರಿಸರ ಮಾಲಿನ್ಯವನ್ನುಂಟು ಮಾಡುವ ವಸ್ತುಗಳ ಉಪಯೋಗವನ್ನು ಕಡಿಮೆ ಮಾಡಬೇಕು.
  • ನೀರನ್ನು ಮಿತವಾಗಿ ಬಳಸಬೇಕು.
  • ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು.
  • ಯಾವ ನೈಸರ್ಗಿಕ ಸಂಪನ್ಮೂಲಗಳನ್ನೂ ಹಾಳುಮಾಡಬಾರದು.
  • ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು. ಆದಷ್ಟು ಗಿಡಗಳನ್ನು ಬೆಳಸಬೇಕು.

2) ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ಆಗಬಹುದಾದ ಅನುಕೂಲಗಳೇನು ?

ಅಲ್ಪಾವಧಿ ಗುರಿಗಳೊಂದಿಗೆ ಪರಿಸರವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದರಿಂದ ತುಂಬಾ ಅನುಕೂಲವಾಗುತ್ತದೆ. ಇಂದಿನ ಪೀಳಿಗೆಯವರ ಹಣಕಾಸಿನ ಬೆಳವಣಿಗೆ ಅತಿ ಬೇಗ ಬೆಳೆಯುವುದು.

3) ಈ ಅನುಕೂಲಗಳು ನಮ್ಮ ನಮ್ಮ ಸಂಪನ್ಮೂಲಗಳ ನಿರ್ವಹಣೆಯಲ್ಲಿ ದೀರ್ಘಾವಧಿ ದೃಷ್ಟಿಕೋನವನ್ನು ಬಳಸುವುದರಿಂದ ಉಂಟಾಗುವ ಅನುಕೂಲಗಳಿಗಿಂತ ಹೇಗೆ ಭಿನ್ನವಾಗಿವೆ?

ನಾವು ಅಲ್ಪಾವಧಿ ಗುರಿಯೊಂದಿಗೆ ಸಂಪನ್ಮೂಲಗಳನ್ನು ಉಪಯೋಗಿಸುವುದರಿಂದ ಇಂದಿನ ಪೀಳಿಗೆಯವರು ಆ ಸಂಪನ್ಮೂಲಗಳನ್ನು ಅವರ ಬೆಳವಣಿಗೆ ಮತ್ತು ಅಭಿವೃದ್ಧಿಗಳಿಗಾಗಿ ಸೂಕ್ತವಾಗಿ ಉಪಯೋಗಿಸಿ ಕೊಳ್ಳಬಹುದು. ಆದರೆ ಆ ಸಂಪನ್ಮೂಲಗಳನ್ನು ದೀರ್ಘಾವಧಿಯ ದೃಷ್ಟಿಕೋನವನ್ನಿಟ್ಟುಕೊಂಡು ಬಳಸಿದಾಗ ಆ ಸಂಪನ್ಮೂಲಗಳು ಮುಂದಿನ ಸಂತತಿಯವರಿಗೂ ದೊರೆಯುವುದು,

ಆದ್ದರಿಂದ ಎಲ್ಲರೂ ದೀರ್ಘಾವಧಿಯ ದೃಷ್ಟಿಯನ್ನಿಟ್ಟು ಕೊಂಡೇ ಸಂಪನ್ಮೂಲಗಳನ್ನು ಬಳಸಬೇಕು. ಇದರಿಂದ ಇಂದಿನ ಪೀಳಿಗೆಯವರ ಜೊತೆ ಮುಂದಿನ ಪೀಳಿಗೆಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಜೊತೆ – ಜೊತೆಯೇ ಉಳಿಸಿ, ಬೆಳಸಿ, ಸಂರಕ್ಷಿಸಬೇಕು. ಎಷ್ಟೋ ನೈಸರ್ಗಿಕ ಸಂಪನ್ಮೂಲಗಳು ಮುಗಿದು ಹೋಗುವ ಸಂಪನ್ಮೂಲಗಳಾಗಿರುವುದರಿಂದ ಅದರ ಸಂರಕ್ಷಣೆ ಅಗತ್ಯ

4) ಸಂಪನ್ಮೂಲಗಳು ನ್ಯಾಯಸಮ್ಮತವಾಗಿ ಹಂಚಿಕೆಯಾಗ ಬೇಕೆಂದು ನೀವೇಕೆ ಭಾವಿಸುತ್ತೀರಿ? ನಮ್ಮ ಸಂಪನ್ಮೂಲಗಳು ನ್ಯಾಯ ಸಮ್ಮತ ಹಂಚಿಕೆಯ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು?

ನೈಸರ್ಗಿಕ ಸಂಪನ್ಮೂಲಗಳು ನಿಸರ್ಗದ ಕೊಡುಗೆ ಇದನ್ನು ಅನುಭವಿಸಲು ಎಲ್ಲಾ ಮಾನವರಿಗೂ ಹಕ್ಕಿದೆ. ಎಲ್ಲರಿಗೂ ಅವರವರ ಪಾಲನ್ನು ಅನುಭವಿಸುವಂತೆ ಎಲ್ಲರೂ ಅದನ್ನು ಹಂಚಿಕೊಳ್ಳಬೇಕು. ನ್ಯಾಯ ಸಮ್ಮತ ಹಂಚಿಕೆಯಾಗಬೇಕು.

ಆದರೆ ಇದರ ವಿರುದ್ಧ ಕೆಲಸ ಮಾಡುವುದು ಮಾನವರ ದುರಾಸೆ, ಸ್ವಾರ್ಥ, ಲಂಚಗುಳಿತನ ಮತ್ತು ಲಾಭ, ಮನುಷ್ಯರ ಈ ಸ್ವಾರ್ಥ ಮತ್ತು ದುರಾಸೆಗಳಿಂದ ಅಧಿಕಾರಯುಕ್ತ, ಶ್ರೀಮಂತರಿಂದ ನ್ಯಾಯ ಸಮ್ಮತ ಹಂಚಿಕೆಯ ವಿರುದ್ಧ ಕೆಲಸ ನಡೆಯುತ್ತಿದೆ.


1) ನಾವು ಅರಣ್ಯ ಹಾಗೂ ವನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು ? ನಾವು ಅರಣ್ಯ ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಬೇಕಾದ ಕಾರಣಗಳು :

  • ಅರಣ್ಯಗಳು ಉಪಯುಕ್ತವಾದ ವಸ್ತುಗಳನ್ನು ಕೊಡುವುದು.
  • ಪ್ರಕೃತಿಯ ಸಮತೋಲನವನ್ನು ಕಾಪಾಡುವುದು.
  • ಮಳೆ ಬರಲು ಕಾರಣವಾಗುವುದು ಹಾಗೂ ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ.
  • ಪ್ರಾಣಿಗಳಿಗೆ ಅಗತ್ಯವಾದ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ.
  • ವನ್ಯ ಜೀವಿಗಳಿಗೆ ಆಶ್ರಯ ನೀಡುವುದು.
  • ಅರಣ್ಯಗಳಲ್ಲಿ ಹೇರಳವಾಗಿ ಜೀವಿ ವೈವಿಧ್ಯಗಳು ಇವೆ.
  • ಅರಣ್ಯ ಹಾಗೂ ವನ್ಯ ಜೀವಿಗಳಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉಪಯೋಗಗಳಿವೆ.
  • ಈ ಎಲ್ಲಾ ಕಾರಣಗಳಿಂದ ನಾವು ಆರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಬೇಕು.

2) ಕಾಡುಗಳ ಸಂರಕ್ಷಣೆಗೆ ಕೆಲವು ಸಲಹೆಗಳನ್ನು ನೀಡಿ.

1) ಅರಣ್ಯನಾಶವನ್ನು ತಡೆಗಟ್ಟಬೇಕು.

2) ಕಾಡುಗಳ ಉತ್ಪನ್ನ, ಪ್ರಾಣಿಗಳು ಮೇಯುವಿಕೆ. ಇವುಗಳನ್ನು ನ್ಯಾಯಯುತವಾಗಿ ಮಾಡಬೇಕು.

3) ಮರಗಳನ್ನು ಕತ್ತರಿಸುವುದು, ಅರಣ್ಯ ಜೀವಿಗಳ ಬೇಟೆಯಾಡುವುದು, ಇತರ ಯಾವುದೇ ನ್ಯಾಯಯುತವಲ್ಲದ ಚಟುವಟಿಕೆಗಳನ್ನು ತಡೆಯಬೇಕು.

4) ಎಲ್ಲೆಲ್ಲಿ ಸೂಕ್ತವೋ ಅಲ್ಲಿ, ಕಾಡುಗಳನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಪರಿವರ್ತಿಸಬೇಕು.

5) ಅರಣ್ಯಗಳ ಸಂರಕ್ಷಣೆಗೆ ನಿಸರ್ಗ ಪ್ರಿಯರನ್ನು ಸಂರಕ್ಷಣಾಕಾರರ ಬೆಂಬಲವನ್ನು ತೆಗೆದುಕೊಳ್ಳಬೇಕು.

6) ಸ್ಥಳೀಯರನ್ನು ಅರಣ್ಯಗಳ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.

7) ಅನಗತ್ಯವಾಗಿ ರಸ್ತೆ, ಅಣೆಕಟ್ಟು, ಕಾರ್ಖಾನೆಗಳನ್ನು ನಿರ್ಮಿಸಲು ಕಾಡನ್ನು ಕಡಿಯಬಾರದು.

8) ವನ್ಯಜೀವಿ ಸಪ್ತಾಹದಂತೆ ಕಾಡಿನ ಪ್ರಾಣಿಗಳಿಗೆ ರಕ್ಷಣೆ ಕೊಟ್ಟು, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು.


1) ನಿಮ್ಮ ಪ್ರದೇಶದಲ್ಲಿನ ಜಲಕೊಯ್ದು ನಿರ್ವಹಣೆಯ ಸಾಂಪ್ರದಾಯಿಕ ವಿಧಾನಗಳನ್ನು ಕಂಡುಕೊಳ್ಳಿ.

ಜಲಕೊಯ್ಲು ನಿರ್ವಹಣೆಯು ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಹೊಂದುತ್ತದೆ. ಮುಖ್ಯವಾದ ಸಾಂಪ್ರಾದಾಯಿಕ ವಿಧಾನಗಳು ಎಂದರೆ ಕೆರೆ, ಬಾವಿ, ಕಟ್ಟೆಗಳ ನಿರ್ಮಾಣ ಮಾಡಿ ನೀರನ್ನು ಸಂಗ್ರಹಿಸಿಡುತ್ತಾರೆ. ನದಿ ತೀರವಾದರೆ ಕಾಲುವೆಗಳ ನಿರ್ಮಾಣ ಮಾಡುತ್ತಾರೆ. ಇತ್ತೀಚೆಗೆ ಮಳೆಕೊಯ್ಲು ಎಂದರೆ ಮಳೆ ನೀರನ್ನು ಸಂಗ್ರಹಿಸುತ್ತಿದ್ದಾರೆ.

2) ಮೇಲಿನ ವಿಧಾನಗಳನ್ನು ಬೆಟ್ಟಿ/ಪರ್ವತ ಪ್ರದೇಶಗಳು ಅಥವಾ ಸಮತಟ್ಟಾದ ಪ್ರದೇಶ ಅಥವಾ ಪ್ರಸ್ಥಭೂಮಿ ಪ್ರದೇಶಗಳಲ್ಲಿನ ಸಂಭವನೀಯ ವಿಧಾನಗಳ ಜೊತೆಗೆ ಹೋಲಿಸಿ

ಬೆಟ್ಟ ಗುಡ್ಡ ಮತ್ತು ಪರ್ವತ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಹರಿಯುವ ನೀರಿನ ಆಕರಗಳಿಂದ ನೀರನ್ನು ಸಂಗ್ರಹಿಸಿ, ಬೇಕಾದ ಕಡೆಗೆ ಸಾಗಿಸುವರು. ನೀರಿನಕೊಯ್ದು ಒಂದೊಂದು ಜಾಗದಲ್ಲಿ ಒಂದೊಂದು ರೀತಿ ಇರುವ ಸಂಭವವಿದೆ, ಎಂದರೆ ಪ್ರದೇಶನಿಷ್ಟವಾಗಿರುತ್ತದೆ. ಹೆಚ್ಚು ಸಮತಟ್ಟಾಗಿರುವ ಭೂಭಾಗಗಳಲ್ಲಿ ಅರ್ಧ ಚಂದ್ರಾಕಾರದ ರೂಪದಲ್ಲಿದ್ದು ಮಣ್ಣಿನಿಂದ ನಿರ್ಮಿತವಾದ ಒಡ್ಡುಗಳ ಕೆಳಮಟ್ಟದಲ್ಲಿರುತ್ತವೆ. ಮಳೆಗಾಲದಲ್ಲಿ ಇವುಗಳಿಗೆ ತಡೆ ಗೋಡೆಗಳನ್ನು ಕಟ್ಟಿ ನೀರನ್ನು ಸಂಗ್ರಹಿಸುತ್ತಾರೆ. ಇದರ ಮುಖ್ಯ ಉದ್ದೇಶ ಮೇಲೆ ನೀರನ್ನು ಹಿಡಿದಿಡುವುದಕ್ಕಿಂತ ನೆಲದೊಳಗೆ ನೀರನ್ನು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸುವುದು. ಇದರಿಂದ ಅನೇಕ ಉಪಯೋಗಗಳಿವೆ.

3) ನಿಮ್ಮ ಪ್ರದೇಶ/ಸ್ಥಳದಲ್ಲಿರುವ ನೀರಿನ ಆಕರಗಳನ್ನು ಕಂಡುಕೊಳ್ಳಿ, ಆ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರಿಗೆ ಈ ಆಕರಗಳಿಂದ ನೀರು ದೊರಕುತ್ತಿದೆಯೇ ?

ನಮ್ಮ ಪ್ರದೇಶವು ಪಟ್ಟಣ ಮತ್ತು ನಗರಗಳಾಗಿರುವುದರಿಂದ ಇಲ್ಲಿ ನಮಗೆ ನೀರಿನ ಆಕರ ಮುನಿಸಿಪಾಲಿಟಿ ಮತ್ತು ನಗರಸಭೆಯವರು ನಲ್ಲಿಗಳ ಮೂಲಕ ಸರಬರಾಜು ಮಾಡುವ ನೀರು ಮುಖ್ಯವಾಗಿರುತ್ತದೆ. ಅಲ್ಲಲ್ಲಿ ನೀರಿನ ಕೊಳವೆ ಬಾವಿಗಳುಂಟು. ಅದರಲ್ಲಿ ಹ್ಯಾಂಡ್ ಪಂಪ್ ಸಹಾಯದಿಂದ ನೀರನ್ನು ಪಡೆಯುತ್ತಿದೆ. ಸರಿಸುಮಾರಾಗಿ ಎಲ್ಲರಿಗೂ ನೀರು ದೊರಕುತ್ತಿದೆ, ಆದರೆ ಪ್ರಮಾಣದಲ್ಲಿ ವ್ಯತ್ಯಾಸವಿದೆ.


1) ಪರಿಸರ ಸ್ನೇಹಿಯಾಗಿರುವಂತೆ ನಿಮ್ಮ ಮನೆಯಲ್ಲಿ ಯಾವ ಬದಲಾವಣೆಗಳಾಗಬೇಕೆಂದು ನೀವು ಸಲಹೆ ನೀಡುವಿರಿ?

  • ಪರಿಸರ ಸ್ನೇಹಿಯಾಗುವಂತೆ ನಮ್ಮ ಮನೆಯಲ್ಲಿ ಮಾಡಬಹುದಾದ ಬದಲಾವಣೆಗಳು:-
  • ನಮ್ಮ ಮನೆಯ ತ್ಯಾಜ್ಯವಸ್ತುವನ್ನು ಜೈವಿಕ ವಿಘಟನೆ ಹೊಂದುವ ಜೈವಿಕ ವಿಘಟನೆ ಹೊಂದದ ವಸ್ತುಗಳೆಂದು ಪ್ರತ್ಯೇಕಿಸಬೇಕು.
  • ಮನೆಯೊಳಗೆ ಹೊರಗೆ ಸುತ್ತಮುತ್ತ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಬೇಕು.
  • ಕಿಟಕಿ ಬಾಗಿಲುಗಳನ್ನು ತೆರೆದಿರಿಸಿ. ಲೈಟ್ ಫ್ಯಾನ್ ಮುಂತಾದುವುಗಳಿಗಾಗಿ ಉಪಯೋಗಿಸುವ ವಿದ್ಯುಚ್ಛಕ್ತಿಯನ್ನು ಮಿತಗೊಳಿಸಬೇಕು.
  • ನೀರನ್ನು ಮಿತವಾಗಿ ಬಳಸಬೇಕು.
  • ಆಹಾರ ಪದಾರ್ಥಗಳನ್ನು ಪೋಲುಮಾಡಬಾರದು.
  • ಮಳೆನೀರಿನ ಕೊಯ್ದು ಮಾಡಿಕೊಳ್ಳುವ ಅನುಕೂಲವಿದ್ದರೆ ಖಂಡಿತಾ ಮಾಡಿಕೊಳ್ಳಬೇಕು.
  • ಮನೆಯ ಸುತ್ತಮುತ್ತ ಪರಿಧಿಯಲ್ಲಿ ಸಸ್ಯತ್ಯಾಜ್ಞಾವಸ್ತುಗಳನ್ನು ಹಾಕಲು ಗುಂಡಿಮಾಡಬೇಕು.
  • ಆದಷ್ಟು ಸೋಲಾರ್ ಉಪಕರಣಗಳನ್ನು ಬಳಸಬೇಕು.

2) ನಿಮ್ಮ ಶಾಲೆಯಲ್ಲಿ ಪರಸರ ಸ್ನೇಹಿಯಾಗಿಸಲು ನೀವು ಕೆಲವು ಬದಲಾವಣೆಗಳನ್ನು ಸೂಚಿಸುವಿರಾ ?

  • ಶಾಲೆಯ ಕಾರಿಡಾರ್‌ಗಳಲ್ಲಿ ಸುತ್ತಮುತ್ತಲೂ ಆದಷ್ಟು ಗಿಡಗಳನ್ನು ಬೆಳೆಸಬೇಕು. ಗಿಡಗಳನ್ನು ಕುಂಡಗಳಲ್ಲಿ ಬೆಳೆಸಬಹುದು ಜಾಗವಿದ್ದರೆ ಮರಗಳನ್ನು ಬೆಳೆಸಬಹುದು.
  • ಮಳೆನೀರಿನ ಕೊಯ್ದು ಮಾಡಲೇಬೇಕು.
  • ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯ ಕ್ರಮಗಳನ್ನು ಮಾಡಿಸಿ, ಜಾಗೃತಿ ಮೂಡಿಸಬೇಕು.
  • ಶಾಲೆಯಲ್ಲಿ ಕಾಗದವನ್ನು ಹೆಚ್ಚಾಗಿ ಹಾಳುಮಾಡದಂತೆ ಎಚ್ಚರಿಕೆ ನೀಡಬೇಕು.
  • ಅಂತಹ ಕಾಗದಗಳಿಂದ ಅವರಿಗೆ ಕ್ರಾಫ್ಟ್ ವರ್ಕ್‌ನ್ನು ಕಲಿಸಬಹುದು.
  • ವಿದ್ಯಾರ್ಥಿಗಳು ನೀರು ಪೋಲು ಮಾಡುವುದನ್ನು ತಪ್ಪಿಸಬೇಕು.

3) ಈ ಅಧ್ಯಾಯನದಲ್ಲಿ ಅರಣ್ಯ ಮತ್ತು ವನ್ಯ ಜೀವಿಗಳ ವಿಷಯ ಬಂದಾಗ ನಾಲ್ಕು ಮುಖ್ಯ ಪಾಲುದಾರ ರಿರುವುದನ್ನು ನಾವು ನೋಡಿದೆವು. ಇದರಲ್ಲಿ ಅರಣ್ಯ ಉತ್ಪನ್ನಗಳ ನಿರ್ವಹಣೆಯನ್ನು ನಿರ್ಧರಿಸುವ ಅಧಿಕಾರ ವನ್ನು ಯಾರು ಹೊಂದಿದ್ದಾರೆ? ನೀವು ಹಾಗೇಕೆ ಭಾವಿಸುವಿರಿ?

ನಮ್ಮ ದೇಶದಲ್ಲಿ ಅರಣ್ಯ ಮತ್ತು ವನ್ಯಜೀವಿಗಳನ್ನು ನೋಡಿಕೊಳ್ಳಲು ಅರಣ್ಯ ಇಲಾಖೆ ಇರುವುದರಿಂದ, ಅವರೇ ಅರಣ್ಯ ಹಾಗೂ ವನ್ಯಜೀವಿಗಳನ್ನು ಪೋಷಿಸಿ, ರಕ್ಷಣೆ ಕೊಡಬೇಕು, ಇದು ಅವರ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಅವರು ತಮ್ಮ ಕಾರ್ಯ ನಿರ್ವಹಣೆಗಾಗಿ ಸ್ಥಳೀಯ, ಪರಿಸರ ಪ್ರೇಮಿಗಳೊಂದಿಗೆ ಒಂದಾಗಿ ಕೈ ಜೋಡಿಸಬಹುದು. ಸರ್ಕಾರದ ನೇತೃತ್ವದಲ್ಲಿ ಇವರ ಸಹಭಾಗಿತ್ವದಿಂದ ಒಳ್ಳೆಯ ಪರಿಣಾಮ ಖಂಡಿತಾ ಉಂಟಾಗುತ್ತದೆ. ಆದಷ್ಟು ಅರಣ್ಯಾಧಿಕಾರಿಗಳು ದಕ್ಷರು, ಪ್ರಾಮಾಣಿಕರೂ ಆಗಿ ನಿಷ್ಠೆಯಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು. ಸ್ಥಳೀಯರನ್ನು ಸೇರಿಸಿಕೊಳ್ಳುವುದು ಮತ್ತು ಅವರ ಅಭಿಪ್ರಾಯಗಳಿಗೆ ಬೆಂಬಲ ಕೊಡುವುದು ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರ ಜನಾಸಕ್ತಿ ಪೂರಕವಾಗಿರಬೇಕು.

4) ಒಬ್ಬ ವ್ಯಕ್ತಿಯಾಗಿ ಈ ಕೆಳಗಿನವುಗಳ ನಿರ್ವಹಣೆಯಲ್ಲಿ ನೀವು ಯಾವ ಕೊಡುಗೆ ಅಥವಾ ಬದಲಾವಣೆ ಮಾಡುವಿರಿ.

ಎ) ಅರಣ್ಯಗಳು ಮತ್ತು ವನ್ಯ ಜೀವಿಗಳು.

ಬಿ) ನೀರಿನ ಸಂಪನ್ಮೂಲಗಳು.

ಸಿ) ಕಲ್ಲಿದ್ದಲು ಮತ್ತು ಪೆಟ್ರೋಲಿಯಂ.

ಎ) ಅರಣ್ಯಗಳು ಮತ್ತು ವನ್ಯ ಜೀವಿಗಳು:-

  • ವ್ಯಕ್ತಿಯಾಗಿ ಅರಣ್ಯದ ಮರಗಳನ್ನು ಕಡಿಯುವುದಕ್ಕೆ ಬಿಡುವುದಿಲ್ಲ (ಅರಣ್ಯನಾಶ) ಮರಗಳ ನಾಶದ ವಿರುದ್ಧ ಸಿಡಿದೇಳುತ್ತೇವೆ.
  • ಅರಣ್ಯ ಸಂರಕ್ಷಣೆಯನ್ನು ಪ್ರೋತ್ಸಾಹಿಸುತ್ತೇವೆ.
  • ಆರಣ್ಯ ಜೀವಿಗಳ ಬೇಟೆಯಾಡುವುದನ್ನು ನಿಷೇಧಿಸುತ್ತೇವೆ.
  • ಅರಣೋತ್ಪನ್ನವನ್ನು ಕೊಂಡುಕೊಳ್ಳುತ್ತೇವೆ, ಪರೋಕ್ಷವಾಗಿ ಅವುಗಳು ಬೆಳೆಯುವಂತೆ ಪ್ರೋತ್ಸಾಹಿಸುತ್ತೇವೆ.

ಬಿ) ನೀರಿನ ಸಂಪನ್ಮೂಲಗಳು:-

  • ಸಾರ್ವಜನಿಕ ನೀರಿನ ಆಕರವನ್ನು ಕಲುಷಿತಗೊಳಿಸದೆ ಶುದ್ಧವಾಗಿಟ್ಟುಕೊಳ್ಳಲು ನನ್ನ ಕಾಣಿಕೆಯನ್ನು ನೀಡುತ್ತೇನೆ.
  • ನೀರನ್ನು ಮಿತವಾಗಿ ಬಳಸುತ್ತೇನೆ.
  • ಮಳೆ ನೀರಿನ ಕೊಯ್ಲನ್ನು ಮಾಡಿಸುತ್ತೇನೆ.

ಸಿ) ಕಲ್ಲಿದ್ದಲು ಮತ್ತು ಪೆಟ್ರೋಲಿಯಂ:-

  • ಸೋಲಾರ್ ಉಪಕರಣಗಳನ್ನು ಬಳಸುತ್ತೇನೆ.
  • ಕಾಲ್ನಡಿಗೆಯಿಂದ ಸಾಧ್ಯವಾದ ಕಡೆಗಳಿಗೆ ಹೋಗುತ್ತೇನೆ.
  • ಸ್ವಂತವಾಹನವನ್ನು ಇಟ್ಟು ಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುತ್ತೇನೆ.

5) ಒಬ್ಬ ವ್ಯಕ್ತಿಯಾಗಿ ವಿವಿಧ ನೈಸರ್ಗಿಕ ಸಂಪನ್ಮೂಲಗಳ ನಿಮ್ಮ ಬಳಕೆಯನ್ನು ಕಡಿಮೆ ಮಾಡಲು ನೀವು ಏನು ಮಾಡುವಿರಿ ?

ಎ) ವೈಯಕ್ತಿಕವಾಗಿ ನಾನು ನನ್ನ ಕೈಲಾದ ಕಡೆಗಳಲ್ಲೆಲ್ಲಾ ಗಿಡಮರಗಳನ್ನು ನೆಟ್ಟು, `ಪೋಷಿಸಲು ಸ್ಫೂರ್ತಿ ಕೊಟ್ಟು ಇತರರನ್ನು ಪ್ರೇರೇಪಿಸುತ್ತೇನೆ.

ಬಿ) ನಮ್ಮ ಮನೆಯಲ್ಲಿ ಸಾಕಷ್ಟು ಗಿಡಮರಗಳನ್ನು ಬೆಳೆಸುತ್ತೇನೆ.

ಸಿ) ವಿದ್ಯುಚ್ಛಕ್ತಿಯನ್ನು ಮಿತವಾಗಿ ಬಳಸುತ್ತೇನೆ.

ಡಿ) ಕಾಗದ, ಪ್ಲಾಸ್ಟಿಕ್ ಮುಂತಾದ ವಸ್ತುಗಳ ಮರುಚಕ್ರೀಕರಣಗೊಳಿಸುತ್ತೇನೆ.

ಇ) ನೀರನ್ನು ಪೋಲು ಮಾಡುವುದಿಲ್ಲ.

ಎಫ್) ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಉಳಿಸಿ, ಬೆಳೆಸುವ ಮನೋಭಾವವನ್ನು ನನ್ನೆಲ್ಲ ಮಿತ್ರರಿಗೂ ತಿಳಿಸಿ. ಅವರಿಗೆ ಜಾಗೃತಿ ಮೂಡಿಸುತ್ತೇನೆ.

6) ಕಳೆದ ಒಂದು ವಾರದಲ್ಲಿ ಈ ಕೆಳಗಿನವುಗಳ ಕುರಿತು ನೀವು ಕೈಗೊಂಡ ಐದು ಕ್ರಮಗಳನ್ನು ಪಟ್ಟಿಮಾಡಿ.

ಎ) ನಮ್ಮ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ :

ಬಿ) ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚಿಸುವುದು.

ಎ) ನಮ್ಮ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ನಾನು ಕಳೆದ ವಾರವೊಂದರಲ್ಲಿ ಕೈಗೊಂಡ ಕ್ರಮಗಳು :

  • ಯಾವ ವಾಹನವನ್ನೂ ಬಳಸದೆ, ನಡಿಗೆಯಲ್ಲಿ ಮತ್ತು ಬೈಸಿಕಲ್‌ನಲ್ಲಿ ಸಂಚರಿಸಿದ್ದೇನೆ.
  • ಕಿಟಕಿಯನ್ನು ತೆರೆದಿಟ್ಟುಕೊಂಡು, ಫ್ಯಾನ್‌ನ್ನು ಉಪಯೋಗಿಸಲಿಲ್ಲ.
  • ಮನರಂಜನೆಯ ವಿದ್ಯುತ್ ಉಪಕರಣಗಳನ್ನು ಮತ್ತು ಲಿಪ್ಟನ್ನು ಬಳಸಲಿಲ್ಲ.
  • ಬಿಸಿನೀರಿಗಾಗಿ ಸೋಲಾರ್ ಹೀಟರ್ ಮತ್ತು ಸೋಲಾರ್ ದೀಪಗಳನ್ನು ಬಳಸಿದ್ದೇನೆ.

ಬಿ) ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಹೆಚ್ಚಿಸುವ ಯಾವ ಕಾರ್ಯಗಳನ್ನು ನಾನು ಮಾಡಲಿಲ್ಲ. ಆದರೆ ನಾನು ನೋಡಿದ ಐದು ಕ್ರಮಗಳನ್ನು ತಿಳಿಸುತ್ತೇನೆ.

  • ಸ್ವಂತವಾಗಿ ಒಬ್ಬರೊಬ್ಬರೇ ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸಿದರು.
  • ಅವಶ್ಯಕತೆಯಿಲ್ಲದಿದ್ದರೂ, ಹಗಲಿನಲ್ಲಿಯೂ ಲೈಟ್ ಹಾಗೂ ಫ್ಯಾನ್ ಆನ್ ಆಗಿತ್ತು.
  • ನೀರು ನಲ್ಲಿಯಲ್ಲಿ ಸೋರಿ ಹೋಗುತ್ತಿತ್ತು.
  • ವಿನೋದಕೂಟವೆಂದು ಹೇಳಿ ಅಪಾರವಾದ ಆಹಾರವನ್ನು ಹಾಳು ಮಾಡಿದರು.
  • ಕೆರೆಗಳಲ್ಲಿ ಜನರು ಸ್ನಾನ, ಬಟ್ಟೆ ಒಗೆಯುವುದು, ಪ್ರಾಣಿಗಳ ಮೈ ತೊಳೆಯುವುದು ಇತ್ಯಾದಿಗಳಿಂದ ಕೆರೆಯ ನೀರನ್ನು ಕಲುಷಿತಗೊಳಿಸುತ್ತಿದ್ದರು.

7) ಈ ಅಧ್ಯಾಯದಲ್ಲಿ ಪ್ರಸ್ತಾಪಿಸಿದ ಸಮಸ್ಯೆಗಳ ಆಧಾರದ ಮೇಲೆ ನಮ್ಮ ಸಂಪನ್ಮೂಲಗಳ ಸಮರ್ಪಕ ಬಳಕೆ ಮಾಡುವುದರ ಕಡೆ ನಮ್ಮ ಜೀವನ ಶೈಲಿಯಲ್ಲಿ ಯಾವ ಬದಲಾವಣೆಗಳನ್ನು ನೀವು ಅಳವಡಿಸಿಕೊಳ್ಳುವಿರಿ.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ನೈಸರ್ಗಿಕ ಸಂಪನ್ಮೂಲಗಳಿಲ್ಲದೆ ನಾವು ಬದುಕಲಾರೆವು. ನಮ್ಮ ಉಳಿವಿಗಾಗಿ ನಾವು ಅದನ್ನು ಸಂರಕ್ಷಿಸಲೇ ಬೇಕು. ಈ ಅಧ್ಯಾಯದಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳ ಆಧಾರದ ಮೇಲೆ (ಪ್ರತಿಯೊಬ್ಬರೂ) ನನ್ನ ಜೀವನ ಶೈಲಿಯಲ್ಲಿ ನಾನು ಮಾಡಿಕೊಳ್ಳುವ ಬದಲಾವಣೆಗಳು:

  • ಪೆಟ್ರೋಲಿಯಂ ಉತ್ಪನ್ನಗಳು ಕೆಲವೇ ವರ್ಷದಲ್ಲಿ ಮುಗಿದು ಹೋಗುವುದರಿಂದ ನಾ(ವು)ನು ಆದಷ್ಟು ಸಾರ್ವಜನಿಕ ಸಾರಿಗೆಯಲ್ಲಿಯೇ ಸಂಚರಿಸುತ್ತೇನೆ.
  • ಸೌರಫಲಕ, ಸೌರಕೋಶಗಳನ್ನು ಉಪಯೋಗಿಸುತ್ತೇನೆ, ಎಂದರೆ చాలారావాటరా. ఒంటరో. గౌరకుక్నరా మత్తు గౌరది। వగళన్ను ಉಪಯೋಗಿಸುತ್ತೇನೆ.
  • ನೀರನ್ನು, ಆಹಾರವನ್ನು ಮತ್ತು ವಿದ್ಯುಚ್ಛಕ್ತಿಯನ್ನು ಮಿತವಾಗಿ ಬಳಸುತ್ತೇನೆ.
  • ಆಹಾರವನ್ನು ಪೋಲು ಮಾಡುವುದಿಲ್ಲ.
  • ತ್ಯಾಜ್ಯಾವಸ್ತುಗಳ ನಿರ್ಮೂಲನದಿಂದ ಪರಿಸರವನ್ನು ಹಾಳು ಮಾಡುವುದಿಲ್ಲ.
  • ಜೈವಿಕ ವಿಘಟನಕಾರಿ ತ್ಯಾಜ್ಯ ಮತ್ತು ವಿಘಟನಕಾರಿಯಲ್ಲದ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ವಿಸರ್ಜಿಸುತ್ತೇನೆ.”
  • ಚಳಿಗಾಲದಲ್ಲಿ ಹೀಟರ್‌ಗಳನ್ನು ಬಳಸದೆ ಸೈಟರ್ ಧರಿಸುತ್ತೇನೆ.
  • ಸಾಕಷ್ಟು ಗಿಡಮರಗಳನ್ನು ಬೆಳೆಸುತ್ತೇನೆ.
  • ಮಳೆನೀರಿನ ಸಂಗ್ರಹಣೆ ಮಾಡುತ್ತೇನೆ.
  • ಮರುಚಕ್ರೀಕರಣ ಮಾಡುವ ವಸ್ತುಗಳನ್ನೇ ಬಳಸುತ್ತೇನೆ.ಹಾಗೂ ಪ್ರೋತ್ಸಾಹಿಸುತ್ತೇನೆ.
  • ಪ್ಲಾಸ್ಟಿಕ್‌ನಂಥ ವಸ್ತುಗಳ ಬಳಕೆಯನ್ನು ಬಿಡುತ್ತೇನೆ.
  • ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಉಪಯೋಗಿಸಿ ಪುನಃ ಅದನ್ನು ಮರುಬಳಕೆ ಮಾಡುತ್ತೇನೆ.

ನಾನು(ನಾವು) ಪರಿಸರದಲ್ಲಿ ವಾಸಿಸುತ್ತಿದ್ದೇನೆ, ಪರಿಸರ ನನಗೆ ಅಗತ್ಯ ಆದ್ದರಿಂದ ಪರಿಸರ ಸಂರಕ್ಷಣೆ ನನ್ನ ಜವಾಬ್ದಾರಿ ಎಂದು ತಿಳಿದು ನನ್ನ ಜೀವನ ಶೈಲಿಯಲ್ಲಿ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಪಾಲಿಸುತ್ತೇನೆ.


1. ‘ನಮಾಮಿ ಗಂಗೆ’ ಕಾರ್ಯಕ್ರಮದ ಬಗ್ಗೆ ತಿಳಿಸಿ?

ನಮಾಮಿ ಗಂಗೆ ಕಾರ್ಯಕ್ರಮವು ಒಂದು ಸಮಗ್ರ ಸಂರಕ್ಷಣಾ ಕಾರ್ಯವಾಗಿದ್ದು ಕೇಂದ್ರ ಸರ್ಕಾರದಿಂದ ಜೂನ್ 2014ರಂದು ಒಂದು ಪ್ರಮುಖ ಕಾರ್ಯಕ್ರಮವಾಗಿ ಅನುಮೋದಿಸಲ್ಪಟ್ಟಿದೆ. ಈ ಕಾರ್ಯಕ್ರಮದ ಎರಡು ಉದ್ದೇಶಗಳೆಂದರೆ 1. ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುವುದು ಮತ್ತು 2. ಗಂಗಾನದಿಯನ್ನು ಪುನಃಶ್ಚತನಗೊಳಿಸುವುದು.

2. ಗಂಗಾನದಿಯ ನೀರು ಮಲಿನಗೊಂಡಿರುವುದು ಹೇಗೆ ತಿಳಿದು ಬಂದಿತು?

1985 ರಲ್ಲಿ ಗಂಗಾ ಕಾರ್ಯ ಯೋಜನೆ ಕೈಗೆತ್ತಿಕೊಂಡಾಗ ಗಂಗಾನದಿಯ ನೀರು ತೀರಾ ಕಳಪೆಯಾಗಿತು. ಕೋಲಿಫಾರ್ಮ್ (Coliform) ಎಂಬ ಬ್ಯಾಕ್ಟಿರಿಯಾ ಗುಂಪು ಮಾನವನ ಸಣ್ಣ ಕರುಳಿನಲ್ಲಿ ಕಂಡು ಬಂದಿತು. ಯಾವುದೇ ನೀರಿನಲ್ಲಿ ಈ ಬ್ಯಾಕ್ಟಿರಿಯಾ ಉಪಸ್ಥಿತವಿದ್ದರೆ ಆ ನೀರು ಮಲಿನಗೊಂಡಿದೆ ಎಂದು ತಿಳಿಯಬಹುದು. ಗಂಗಾನದಿಯ ನೀರಿನಲ್ಲಿ ಈ ರೋಗಕಾರಕ ಸೂಕ್ಷ್ಮ ಜೀವಿಗಳು ಉಪಸ್ಥಿತವಿದ್ದವು. ಆದ್ದರಿಂದ ಗಂಗಾನದಿಯ ನೀರು ಮಲಿನಗೊಂಡಿರುವುದು ಎಂದು ತಿಳಿದು ಬಂದಿತು.

3. ನೀರಿನ ಮಾಲಿನ್ಯವನ್ನು ಹೇಗೆ ತಿಳಿಯಬಹುದು?

ಮಾಲಿನ್ಯದಲ್ಲಿ ಅಪಾಯಕಾರಿ ವಸ್ತುಗಳಿರುತ್ತವೆ. ಇವು ಅತಿ ಕಡಿಮೆ ಪ್ರಮಾಣದಲ್ಲಿದ್ದರೂ ಆರೋಗ್ಯದ ಮೇಲೆ ಇವುಗಳ ಪರಿಣಾಮ ಜಾಸ್ತಿ. ಇದನ್ನು ಆಳೆಯಲು ಅತ್ಯಾಧುನಿಕವಾದ ಸಾಧನಗಳು ಬೇಕು. ಆದರೆ ನಾವು ಸಾರ್ವಜನಿಕ ಸೂಚಕವನ್ನು ಬಳಸಿ ನೀರಿನ pH ಮೌಲ್ಯವನ್ನು ಸುಲಭವಾಗಿ ಕಂಡು ಹಿಡಿಯಬಹುದು.

4. ಗಂಗಾನದಿಯ ಮಾಲಿನ್ಯಕ್ಕೆ ಕಾರಣಗಳಾವುವು?.

ಪ್ರತಿನಿತ್ಯ ಶುದ್ದೀಕರಿಸದ ಚರಂಡಿ ನೀರು ಅತಿ ಹೆಚ್ಚಿನ ಪ್ರಮಾಣದಲ್ಲಿ ಗಂಗೆಯನ್ನು ಸೇರುತ್ತದೆ. ಇದರ ಜೊತೆಗೆ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಶವಸಂಸ್ಕಾರದ ಬೂದಿ ಹಾಕುವುದು, ಅರೆ ಬೆಂದ ಶವಗಳನ್ನು ಮುಳುಗಿಸುವುದು, ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯಾಗಳನ್ನು ನದಿಗೆ ಸೇರಿಸುವುದು- ಈ ರೀತಿ ಹಲವಾರು ಕಾರಣಗಳಿಂದ ಗಂಗೆಯ ನೀರು ವಿಷಯುಕ್ತವಾಗುತ್ತಿತ್ತು.

5. ಪ್ರಕೃತಿಯೊಂದಿಗೆ ಹೇಗೆ ಬದುಕಬೇಕೆಂದು ನಮ್ಮ ಹಿರಿಯರು ತಿಳಿಸಿದ್ದಾರೆ?

ಪ್ರಕೃತಿಯಲ್ಲಿ ಸಾಮರಸ್ಯದಿಂದ ಬದುಕುವುದನ್ನು ನಮಗೆ ನಮ್ಮ ಹಿರಿಯರು ವೇದಗಳ ಕಾಲದಿಂದಲೂ ತಿಳಿಸುತ್ತಾ ಬಂದಿದ್ದಾರೆ. ‘ಸಮಸ್ತ ನೈಸರ್ಗಿಕ ಪ್ರಪಂಚವು ಸಾಮರಸ್ಯದಿಂದ ಇರಲಿ‘ ಎಂಬುದು ನಮ್ಮೊಳಗೆ ಬೇರು ಬಿಟ್ಟ ತಂತ್ರಜ್ಞಾನವಾಗಿದೆ. ʻವಸುದೈವ ಕುಟುಂಬಕಮ್‘ ಎಂದರೆ ಇಡೀ ಭೂಮಿಯು ಒಂದೇ ಕುಟುಂಬ ಎಂಬ ನುಡಿಗಟ್ಟನ್ನು ನಮ್ಮ ಉಪನಿಷತ್ತಿನಲ್ಲಿ ಉಲ್ಲೇಖಿಸಿದ್ದಾರೆ.

6. ನಾವು ವಸ್ತುಗಳನ್ನು ಆಯ್ಕೆ ಮಾಡುವಾಗ ನಮ್ಮ ಮನಸ್ಸಿನಲ್ಲಿ ಯಾವ ಅಂಶವಿರಬೇಕು?

ಯಾವುದೇ ವಸ್ತು ಅಥವಾ ದೈನಂದಿನ ಆಯ್ಕೆಗಳನ್ನು ಮಾಡುವ ಸಂದರ್ಭದಲ್ಲಿ ಪರಿಸರ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಮ್ಮ ಆಯ್ಕೆ ಪರಿಸರದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಿ ನಿರ್ಧರಿಸಬೇಕು. ಇವು ತಕ್ಷಣದ ಅಥವಾ ದೀರ್ಘಾವಧಿಯ ಅಥವಾ ಸುದೀರ್ಘ ವ್ಯಾಪ್ತಿಯ ಪರಿಣಾಮಗಳಾಗಿರಬಹುದು.

7. ಗಂಗಾನದಿಯ ಬಗ್ಗೆ ವಿವರವಾಗಿ ತಿಳಿಸಿ?

ಗಂಗಾನದಿಯು ಹಿಮಾಲಯದ ಗಂಗೋತ್ರಿಯಿಂದ ಬಂಗಾಳಕೊಲ್ಲಿಯ ಗಂಗಾಸಾಗರದ ತನಕ ಸುಮಾರು 2500 ಕಿ.ಮಿಗಿಂತಲೂ ಹೆಚ್ಚು ದೂರ ಹರಿಯುತ್ತದೆ. ಇದು ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಸುಮಾರು ಒಂದು ನೂರಕ್ಕೂ ಹೆಚ್ಚು ಪಟ್ಟಣ ಮತ್ತು ನಗರಗಳ ಮೂಲಕ ಹರಿಯುತ್ತದೆ.

8. ಪರಿಸರದ ಸಮಸ್ಯೆಯ ನಿವಾರಣೆಗೆ ಯಾವ ಸಂಸ್ಥೆಗಳಿವೆ?

ಪರಿಸರ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಕಾನೂನು ಹಾಗೂ ನಿಯಮಗಳು ನಮ್ಮದೇ ಆದ ಕಾನೂನು ಹಾಗೂ ಕಾಯಿದೆಗಳಿವೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ಪರಿಸರದ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿವೆ.

9. ಪರಿಸರವನ್ನು ರಕ್ಷಿಸಲು ನಾವು ಅನುಸರಿಸಬೇಕಾದ SR ಗಳನ್ನು ವಿವರಿಸಿ.

ನಿರಾಕರಣೆ (Refuse) :- ನಮಗೆ ಅಗತ್ಯವಿಲ್ಲದ, ಪರಿಸರವನ್ನು ಹಾಳು ಮಾಡುವ ಪ್ಲಾಸ್ಟಿಕ್‌ನಂತಹ ಸಂಶ್ಲೇಷಿತ ವಸ್ತುಗಳನ್ನು ನಿರಾಕರಿಸಿ.

ಮಿತಬಳಕೆ (Reduce):- ಎಷ್ಟು ಅವಶ್ಯಕವೋ ಅಷ್ಟನ್ನೇ ಎಂದರೆ ಮಿತವಾಗಿ ಬಳಸಬೇಕು ಕಡಿಮೆ ಬಳಕೆ ಮಾಡಿ. ಉಳಿತಾಯ ಮಾಡಬೇಕು.

ಮರುಬಳಕೆ (Reuse) :- ಇದು ಮರುಚಕ್ರೀಕರಣಕ್ಕಿಂತ ಉತ್ತಮ, ಬಳಸಿದ ವಸ್ತುಗಳನ್ನೇ ಪುನಃ ಬಳಕೆ ಮಾಡುವುದರಿಂದ ಸಂಪನ್ಮೂಲಗಳ ಉಳಿತಾಯವಾಗುತ್ತದೆ.

ಮರುಉದ್ದೇಶ (Repurpose) :- ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದಿದ್ದರೆ, ಸಾಧ್ಯವಾಗುವ ಬೇರೆ ಉದ್ದೇಶಕ್ಕಾಗಿ ಬಳಸುವುದು.

ಮರು ಚಕ್ರೀಕರಣ (Recycle) :- ಉಪಯೋಗಿಸಿದ ಮತ್ತು ಪುನಃ ಉಪಯೋಗಿಸಲು ಸಾಧ್ಯವಾಗದ ಕಾಗದ, ಪ್ಲಾಸ್ಟಿಕ್, ಗಾಜು ಮತ್ತು ಲೋಹಗಳನ್ನು ಮರುಚಕ್ರೀಕರಣಗೊಳಿಸಿ ಅಗತ್ಯ ವಸ್ತುಗಳನ್ನು ತಯಾರಿಸುವುದು.

10. ನಮ್ಮ ಸಂಪನ್ಮೂಲಗಳನ್ನು ಏಕೆ ಎಚ್ಚರಿಕೆಯಿಂದ ಬಳಸಬೇಕು?

ಸಂಪನ್ಮೂಲಗಳಲ್ಲಿ ಎರಡು ವಿಧ. ಅವು

  1. ನವೀಕರಿಸುವ ಅಥವಾ ಮುಗಿದು ಹೋಗದ ಸಂಪನ್ಮೂಲ.
  2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಸಂಪನ್ಮೂಲ.

ಮುಗಿದು ಹೋಗುವ ಸಂಪನ್ಮೂಲಗಳನ್ನು ಸಂರಕ್ಷಿಸಬೇಕಾದ ಅಗತ್ಯವಿದೆ.ಏಕೆಂದರೆ ಪುನಃ ಅದನ್ನು ಪ್ರತಿಷ್ಠಾಪಿಸಲು ಸಾವಿರಾರು ವರ್ಷಗಳು ಬೇಕು. ಅದನ್ನು ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಬಳಸಿದರೆ ಮಾತ್ರ ಮುಂದಿನ ಪೀಳಿಗೆಯವರಿಗೆ ಅದರ ಲಭ್ಯತೆಯುಂಟು, ಅದಕ್ಕಾಗಿ ನಾವು ಕೆಲವು ಮುಂಜಾಗ್ರತೆ ಕ್ರಮಗಳನ್ನು ಅವಶ್ಯವಾಗಿ ಅನುಸರಿಸಬೇಕಾಗಿದೆ.

11. ಅರಣ್ಯದ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಕಾರ್ಖಾನೆಗಳಾವುವು?

ಮರದ ಕೈಗಾರಿಕೆ, ಗಂಧದೆಣ್ಣೆ ತಯಾರಿಕಾ ಕಾರ್ಖಾನೆ, ಕಾಗದದ ಕೈಗಾರಿಕೆ, ಅರಗಿನ ಕೈಗಾರಿಕೆ, ಕ್ರೀಡಾಸಾಮಾಗ್ರಿಗಳ ಕೈಗಾರಿಕೆ ಇತ್ಯಾದಿ ಅನೇಕ ಕೈಗಾರಿಕೆಗಳು ಕಚ್ಚಾವಸ್ತುಗಳಿಗಾಗಿ ಅರಣ್ಯದ ಉತ್ಪನ್ನಗಳನ್ನು ಅವಲಂಬಿಸಿದೆ.

12. ನಾವು ಸಂಪನ್ಮೂಲಗಳನ್ನು ನಿರ್ವಹಿಸುವ ಅಗತ್ಯವಿದೆಯೇ?

ಹೌದು, ನಾವು ನಮ್ಮ ಎಲ್ಲಾ ಬೇಡಿಕೆಗಳ ಪೂರೈಕೆಗಾಗಿ ಸಂಪನ್ಮೂಲಗಳನ್ನು ಅವಲಂಬಿಸಿದ್ದೇವೆ. ರಸ್ತೆಗಳು, ಕಟ್ಟಡಗಳು, ಆಹಾರ, ಬಟ್ಟೆ, ಪುಸ್ತಕಗಳು, ಗೊಂಬೆಗಳು, ಪೀಠೋಪಕರಣಗಳು, ವಾಹನಗಳು ಇತ್ಯಾದಿ ಎಲ್ಲವೂ ಸಂಪನ್ಮೂಲಗಳಿಂದಲೇ ಬರುವಂತಹುದು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಎಲ್ಲರ ಅಗತ್ಯಗಳ ಪೂರೈಕೆಗಾಗಿ ನಾವು ಸಂಪನ್ಮೂಲಗಳನ್ನು ಸುಸ್ಥಿರ ನಿರ್ವಹಣೆ ಮಾಡುವ ಅಗತ್ಯವಿದೆ.

13. ಜೀವ ವೈವಿಧ್ಯತೆಯ ಮಾಪನ ಯಾವುದು?

ಅರಣ್ಯಗಳು ‘ಜೀವ ವೈವಿಧ್ಯತೆಯ ಸೂಕ್ತತಾಣಗಳು‘ ಒಂದು ಪ್ರದೇಶದಲ್ಲಿ ಕಂಡು ಬರುವ ಜೀವಿಪ್ರಭೇದಗಳ ಸಂಖ್ಯೆಯು ಆ ಪ್ರದೇಶದ ಜೀವ ವೈವಿಧ್ಯತೆಯ ಮಾಪನವಾಗಿದೆ.

14. ನಾವು ಹೊರಗಿನಿಂದ ಪಡೆಯುವ ಸಂಪನ್ಮೂಲ ಯಾವುದು?

ನಾವು ಹೊರಗಿನಿಂದ ಪಡೆಯುವ ಏಕೈಕ ಸಂಪನ್ಮೂಲ ಸೌರಶಕ್ತಿ. ಇದು ಸೂರ್ಯನಿಂದ ಪಡೆಯುತ್ತೇವೆ. ಉಳಿದೆಲ್ಲ ಸಂಪನ್ಮೂಲಗಳು ಭೂಮಿಯ ಕೊಡುಗೆ.

15. ಪರಿಸರದ ಸಂರಕ್ಷಣೆಯ ಬಗ್ಗೆ ಪುರಾತನ ಸಾಹಿತ್ಯ ಏನನ್ನು ತಿಳಿಸಿದೆ?

ನಿಸರ್ಗ ಸಂರಕ್ಷಣೆಯು ನಮ್ಮ ದೇಶದ ಸುದೀರ್ಘ ಸಂಪ್ರದಾಯ ಮತ್ತು ಅದರ ತತ್ವಗಳು ಪುರಾತನ ಭಾರತದಲ್ಲಿ ಚೆನ್ನಾಗಿ ರೂಢಿಯಲ್ಲಿದ್ದವು. ಪುರಾತನ ಸಾಹಿತ್ಯವು ಪರಿಸರದೆಡೆಗಿನ ಮನುಷ್ಯರ ಕಾಳಜಿ ಮತ್ತು ಮೌಲ್ಯಗಳು ಹಾಗೂ ಎಷ್ಟು ಉತ್ತಮವಾಗಿ ಸುಸ್ಥಿರ ನಿರ್ವಹಣೆಯ ತತ್ವಗಳನ್ನು ಅಳವಡಿಸಿಕೊಳ್ಳಲಾಗಿತ್ತು ಎಂಬುದನ್ನು ಅಥರ್ವವೇದ ಹಾಗೂ ಉಪನಿಷತ್ತುಗಳಲ್ಲಿ ಹೇಳಿದ್ದಾರೆ.

16. ಜೀವ ವೈವಿಧ್ಯತೆಯ ಪಾತ್ರವೇನು?

ಅನುವಂಶೀಯವಾಗಿ ಪಡೆದುಕೊಂಡಿರುವ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ವೈವಿಧ್ಯತೆಯ ನಾಶವು ಪರಿಸರ ಸಮತೋಲನದ ನಾಶಕ್ಕೆ ಕಾರಣವಾಗಬಹುದು ಎಂದು ಪ್ರಯೋಗಗಳು ಮತ್ತು ಕ್ಷೇತ್ರ ಅಧ್ಯಯನಗಳು ತಿಳಿಸುತ್ತವೆ

17. ಅರಣ್ಯಗಳ ನಾಶದಿಂದ ಆಗುವ ಪರಿಣಾಮವೇನು?

ಅರಣ್ಯಗಳ ಉತ್ಪನ್ನಗಳು ಕೊನೆಗೊಳ್ಳುತ್ತವೆ. ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತವೆ. ಮರಗಳಿಲ್ಲದೆ ಮಳೆ ಬರುವುದು ಕಡಿಮೆಯಾಗಿ ನೀರಿನ ಆಕರಗಳ ಮೇಲೆಯೂ ಪರಿಣಾಮವುಂಟಾಗುತ್ತದೆ. ಹೆಚ್ಚಾಗಿ ಪ್ರಕೃತಿಯ ಸಮತೋಲನ ಹಾಳಾಗಿ ವನ್ಯಮೃಗಗಳಿಗೆ ಆಶ್ರಯ ದೊರೆಯದೆ ಅವುಗಳ ಸಂತತಿ ನಾಶವಾಗುತ್ತದೆ.

18. ಸ್ಥಳೀಯ ಜನರು ಅರಣ್ಯ ಸಂರಕ್ಷಣೆಗಾಗಿ ಕೆಲಸ ಮಾಡಿದ ನಿದರ್ಶನಗಳನ್ನು ಕೊಡಿ?

ರಾಜಾಸ್ಥಾನದ ಬಿಷ್ನೋಯಿ ಸಮುದಾಯದ ಪ್ರಕರಣ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯು ಅವರಿಗೆ ಒಂದು ಧಾರ್ಮಿಕ ಸಿದ್ಧಾಂತವಾಗಿದೆ. ಎಲ್ಲಾ ಜೀವಿಗಳು ಬದುಕುವ ಹಾಗೂ ಸಂಪನ್ಮೂಲಗಳನ್ನು ಸಮನಾಗಿ ಹಂಚಿಕೊಳ್ಳುವ ಹಕ್ಕನ್ನು ಹೊಂದಿವೆ ಎಂಬ ಮೂಲತತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

19. ಅರಣ್ಯಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರವೇನು?

ಸ್ಥಳೀಯ ಜನರನ್ನು ಹೊರಗಿಟ್ಟು ಅಥವಾ ಶಕ್ತಿಯನ್ನು ಉಪಯೋಗಿಸಿ ಸುರಕ್ಷಿತ ಪ್ರದೇಶಗಳ ನಿರ್ವಹಣೆಯು ದೀರ್ಘಕಾಲೀನ ಅವಧಿಯಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಸ್ಥಳೀಯರಿಗೆ ಆರಣ್ಯವು ತಮ್ಮದೆಂಬ ಭಾವನೆಯಿರುವುದರಿಂದ ಮತ್ತು ಅದರ ಅವಲಂಬನೆ ಯಿರುವುದರಿಂದ ಅರಣ್ಯವನ್ನು ಸಂರಕ್ಷಿಸುತ್ತಾರೆ. ಸ್ಥಳೀಯ ಜನರ ಭಾಗವಹಿಸುವಿಕೆಯು ಅರಣ್ಯಗಳ ಸಮರ್ಥ ನಿರ್ವಹಣೆಗೆ ಎಡೆ ಮಾಡಿಕೊಡುತ್ತದೆ. ಮಿಡ್ನಾಪುರ ಜಿಲ್ಲೆಯ ಅರಬಾರಿ ಅರಣ್ಯದಲ್ಲಿ ನಡೆದ ರಕ್ಷಣಾ ಕಾರ್ಯದಲ್ಲಿ ಗ್ರಾಮಸ್ಥರು ಮತ್ತು ಸ್ಥಳೀಯ ಸಮುದಾಯದವರ ಸಕ್ರಿಯ ಹಾಗೂ ಆಸಕ್ತಿದಾಯಕ ಭಾಗವಹಿಸುವಿಕೆಯಿಂದ ನಿಷ್ಟ್ರಯೋಜಕವಾಗಿದ್ದ ಆರಣ್ಯದ ಮೌಲ್ಯವು 12.5 ಕೋಟಿಗೆ ಏರಿತು. ಅರಣ್ಯಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಹಿರಿದು ಮತ್ತು ಮಹತ್ತರವಾದುದು.

20. ಅಮೃತಾದೇವಿ ಬಿಷ್ನೋಯಿ ರವರ ಸಾಧನೆಯೇನು?

ಇವರು 1731 ರಲ್ಲಿ ಇತರ 363 ಜನರೊಂದಿಗೆ ರಾಜಸ್ಥಾನದ ಜೋಧಪುರದ ಸಮೀಪದಲ್ಲಿನ ಖೇಜ್ರಾಲಿ ಹಳ್ಳಿಯಲ್ಲಿನ ಖೇಜಿ ಮರಗಳ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಸರ್ಕಾರವು ಇತ್ತೀಚೆಗೆ ಅವರ ಸ್ಮರಣಾರ್ಥ ವನ್ಯಜೀವಿ ಸಂರಕ್ಷಣೆಗಾಗಿ ಅಮೃತಾದೇವಿ ಬಿಷ್ಟೋಯಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

21. ಚಿಪ್ಕೋ ಆಂದೋಲನದ ಬಗ್ಗೆ ತಿಳಿಸಿ.

ಈ ಆಂದೋಲನವು ವಲಸಿಗ ಜನರನ್ನು ಬೇರು ಮಟ್ಟದಿಂದ ಹೊರಹಾಕುವುದನ್ನು ಕೊನೆಗೊಳಿಸಲು ಮಾಡಿದ ಪ್ರಯತ್ನದ ಫಲವಾಗಿದೆ. 1970 ರಲ್ಲಿ ಹಳ್ಳಿಯ ಹೆಂಗಸರು ಮರಕಡಿಯಲು ಬಂದಿದ್ದ ಗುತ್ತಿಗೆದಾರರ ಕೆಲಸದವರನ್ನು ತಡೆದು ಹೋರಾಡಿದ ಪ್ರಸಂಗ, ಎಲ್ಲಾ ಹೆಂಗಸರು ಮರವನ್ನು ಅಪ್ಪಿಕೊಂಡು. ಮರವನ್ನು ಕಡಿಯುವುದನ್ನು ತಡೆದರು. ಈ ರೀತಿ ಅರಣ್ಯವನ್ನು ಸಂರಕ್ಷಣೆ ಮಾಡಿದರು.

22. ಕಾಡುಗಳ ಸಂರಕ್ಷಣೆಯನ್ನು ಪರಿಗಣಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಪಾಲುದಾರರು ಯಾರು ಯಾರು?

  • ಮುಖ್ಯವಾಗಿ ನಾಲ್ಕು ವರ್ಗದ ಗುಂಪಿನ ಜನರು ಪಾಲುದಾರರಾಗುತ್ತಾರೆ ಅವರುಗಳು
  • ತಮ್ಮ ಜೀವನದ ಅನೇಕ ಅವಶ್ಯಕತೆಗಳಿಗಾಗಿ ಕಾಡಿನೊಳಗೆ ಮತ್ತು ಅದರ ಸುತ್ತಮುತ್ತ ವಾಸಿಸುವ ಜನರು.
  • ಸರ್ಕಾರದ ಅರಣ್ಯ ಇಲಾಖೆ – ಅರಣ್ಯದ ಸಂಪನ್ಮೂಲಗಳನ್ನು ನಿಯಂತ್ರಿಸುವವರು.
  • ತೆಂಡು ಎಲೆಗಳನ್ನು ಬಳಸಿ ಬೀಡಿಕಟ್ಟುವವರಿಂದ ಹಿಡಿದು ಕಾರ್ಖಾನೆ ಮಾಲೀಕರವರೆಗಿನ ಜನರು. [ಇವರುಗಳು ಒಂದೇ ಅರಣ್ಯದ ಮೇಲೆ ಅವಲಂಬಿತರಾಗಿಲ್ಲ].
  • ವನ್ಯಜೀವಿ ಮತ್ತು ನಿಸರ್ಗವನ್ನು ಪ್ರೀತಿಸುವ ಉತ್ಸಾಹಿಗಳು.

1) ಗಂಗಾನದಿಯ ನೀರಿನಲ್ಲಿ ದೊರೆತ ಬ್ಯಾಕ್ಟಿರಿಯಾ

ಎ) ಕೋಲಿಫಾರ್ಮ್

ಬಿ) ವಿಬ್ರಿಯೋ

ಸಿ) ಕ್ಲೋಸ್ಟ್ರಿಡಿಯಂ

ಡಿ) ಬ್ಯಾಸಿಲಸ್

ಉ : ಎ) ಕೋಲಿಫಾರ್ಮ್

2) ವಿಶ್ವ ಅರಣ್ಯದಿನವನ್ನು ಎಂದು ಆಚರಿಸುತ್ತಾರೆ?

ಎ) ಜೂನ್ 5

ಬಿ) ಸೆಪ್ಟೆಂಬರ್ 4

ಸಿ) ಮಾರ್ಚ್ 21

ಡಿ) ಡಿಸೆಂಬರ್ 12

ಉ : ಸಿ) ಮಾರ್ಚ್ 21

3) ‘ವಿಶ್ವ ಜಲದಿನ’ವನ್ನು ಎಂದು ಆಚರಿಸುತ್ತಾರೆ

ಎ) ಮಾರ್ಚ್ 22

ಬಿ) ಜನವರಿ 10

ಸಿ) ಅಕ್ಟೋಬರ್ 2

ಡಿ) ನವೆಂಬರ್ 1

ಉ: ಎ) ಮಾರ್ಚ್ 22

4) ಮಿತಬಳಕೆ ಎಂದರೆ________ ಬಳಸಬೇಕು ಎಂದರ್ಥ

ಎ) ಜಾಸ್ತಿ

ಸಿ) ನಿರಂತರ

ಬಿ) ಕಡಿಮೆ

ಡಿ) ಯಾವಾಗಲೂ

ಉ : ಬಿ) ಕಡಿಮೆ

5) ನಾವು ಭೂಮಿಯಿಂದ ಹೊರಗೆ ಎಂದರೆ ಹೊರಗಿನಿಂದ ಪಡೆಯುವ ಏಕೈಕ ಸಂಪನ್ಮೂಲ

ಎ) ನೀರು

ಸಿ) ಶಾಖ

ಬಿ) ಗಾಳಿ

ಡಿ) ಶಕ್ತಿ(ಸೌರಶಕ್ತಿ)

ಉ : ಬಿ) ಕಡಿಮೆ

6) ಅರಣ್ಯ ಸಂರಕ್ಷಣೆಯ ಪಾಲುದಾರರಲ್ಲೊಬ್ಬರು

ಎ) ಹಳ್ಳಿಗ

ಬಿ) ಸರ್ಕಾರದ ಅರಣ್ಯ ಇಲಾಖೆ

ಸಿ) ನಾಗರೀಕ

ಡಿ) ಪಟ್ಟಣವಾಸಿ

ಉ : ಬಿ) ಸರ್ಕಾರದ ಅರಣ್ಯ ಇಲಾಖೆ

7) ಹಸಿರು ಮನೆ ಅನಿಲ

ಎ) ಇಂಗಾಲ

ಬಿ) ಆಮ್ಲಜನಕ

ಸಿ) ಕಾರ್ಬನ್ ಡೈ ಆಕ್ಸೈಡ್

ಡಿ) ಹೈಡ್ರೋಜನ್

ಉ : ಸಿ) ಕಾರ್ಬನ್ ಡೈ ಆಕ್ಸೈಡ್

8) ಮುಂದಿನ 40 ವರ್ಷಗಳವರೆಗೆ ಮಾತ್ರ ಸಾಕಾಗುವ ಸಂಪನ್ಮೂಲ .

ಎ) ನೀರು

ಬಿ) ಗಾಳಿ

ಸಿ) ಕಲ್ಲಿದ್ದಲು

ಡಿ) ಪೆಟ್ರೋಲಿಯಂ

ಉ : ಡಿ) ಪೆಟ್ರೋಲಿಯಂ

9) _______ಭೂಮಿಯ ಮೇಲೆ ಕಂಡು ಬರುವ ಎಲ್ಲಾ ಜೀವಿಗಳ ಮೂಲಭೂತ ಅಗತ್ಯ

ಎ)ಆಹಾರ

ಬಿ) ನೀರು

ಸಿ) ಉಡುಪು

ಡಿ) ವಸತಿ

ಉ : ಬಿ) ನೀರು

10) ಶಕ್ತಿಯ ಬಹುಮುಖ್ಯ ಸಂಪನ್ಮೂಲ

ಎ) ಪ್ರಾಣಿಗಳು

ಬಿ) ಸಸ್ಯಗಳು

ಸಿ) ಕಲ್ಲದ್ದಲು ಮತ್ತು ಪೆಟ್ರೋಲಿಯಂ

ಡಿ) ಮಾನವರು

ಉ : ಸಿ) ಕಲ್ಲಿದ್ದಲು ಮತ್ತು ಪೆಟ್ರೋಲಿಯಂ


II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :

1. ನವೀಕರಿಸುವ ಮತ್ತು ನವೀಕರಿಸಲಾಗದ ಸಂಪನ್ಮೂಲಗಳನ್ನು ಹೆಸರಿಸಿ

ಸೌರಶಕ್ತಿ, ಪವನಶಕ್ತಿ, ಭೂಉಷ್ಣಶಕ್ತಿ, ಜಲಶಕ್ತಿ- ಇವು ನವೀಕರಿಸುವ ಸಂಪನ್ಮೂಲಗಳು

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಖನಿಜಗಳು ಇತ್ಯಾದಿ – ಇವು ನವೀಕರಿಸಲಾಗದ ಸಂಪನ್ಮೂಲ.

2. ಅರಣ್ಯಗಳನ್ನು ಸಂರಕ್ಷಿಸುವ ಎರಡು ವಿಧಾನಗಳು ಯಾವುವು?

  • ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು.
  • ಮರಗಳನ್ನು ಕಡಿಯುವುದು ಮತ್ತು ಬೇಟೆ ಯಾಡುವುದನ್ನು ನಿಷೇಧಿಸುವುದು.
  • ಅರಣ್ಯಗಳು ನಾಶವಾಗದಂತೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುವುದು.

3. ಅಂತರ್ಜಲ ಕಡಿಮೆಯಾಗಲು ಕಾರಣವೇನು?

  • ಸಸ್ಯಗಳ ಸಂಖ್ಯೆ ಕಡಿಮೆಯಾಗಿರುವುದು.
  • ಕಾಂಕ್ರೀಟ್ ಕಾಡು ಹೆಚ್ಚಾಗಿರುವುದು.
  • ಕೈಗಾರಿಕೆಗಳ ತ್ಯಾಜ್ಯವಸ್ತು.

4. ವನ್ಯ ಜೀವಿಗಳು ಎಂದರೇನು? ಇವು ನಮಗೆ ಏಕೆ ಅಗತ್ಯ.

ಮನುಷ್ಯರ ಪ್ರಯತ್ನವಿಲ್ಲದೆ, ನಿಸರ್ಗವೇ ಸೃಷ್ಟಿಸಿರುವ ಅರಣ್ಯಗಳಲ್ಲಿ ವಾಸಿಸುವ ಸಸ್ಯಗಳು ಮತ್ತು ಪ್ರಾಣಿಗಳನ್ನು ವನ್ಯ ಜೀವಿಗಳೆಂದು ಕರೆಯುತ್ತಾರೆ, ವನ್ಯ ಜೀವಿಗಳಿಂದ

  • ಪರಿಸರದ ಸಮತೋಲನ ಉಂಟಾಗುತ್ತದೆ
  • ಅರಣ್ಯಗಳಿಂದ ಮಳೆ ಉಂಟಾಗುವುದು.

5. ಪುರಾತನ ನೀರು ಕೊಯ್ಲಿನ ವಿಧಾನಗಳಾವುವು?

ಪುರಾತನ ಕಾಲದಿಂದಲೂ ನೂರಾರು ದೇಶೀಯ ವಿಧಾನಗಳಲ್ಲಿ ನೀರನ್ನು ಸಂಗ್ರಹಿಸಿಡುತ್ತಿದ್ದರು. ಸಣ್ಣ ಹೊಂಡಗಳು, ಕೆರೆಗಳು ಮಣ್ಣಿನ ಸಣ್ಣ ಅಣೆಕಟ್ಟು, ಕಟ್ಟೆ, ಕಂದಕ ನಿರ್ಮಾಣ, ಸುಣ್ಣದ ಕಲ್ಲಿನಿಂದ ನಿರ್ಮಿಸಿದ ಜಲಾಶಯಗಳು ಇತ್ಯಾದಿ.

6. ಬೃಹತ್ ಅಣೆಕಟ್ಟುಗಳು ಕಟ್ಟ ಬೇಕಾದರೆ ಉಂಟಾಗುವ ಸಮಸ್ಯೆಗಳು ಯಾವುವು?

  • ಸಾಮಾಜಿಕ ಸಮಸ್ಯೆಗಳು
  • ಆರ್ಥಿಕ ಸಮಸ್ಯೆಗಳು
  • ಪರಿಸರದ ಸಮಸ್ಯೆಗಳು

7. ನೆಲದೊಳಗೆ (ಅಂತರ್ಜಲ) ನೀರನ್ನು ಸಂಗ್ರಹಿಸುವುದರಿಂದ ಪ್ರಯೋಜನಗಳಾವುವು?

  • ಈ ನೀರು ಆವಿಯಾಗುವುದಿಲ್ಲ.
  • ನೀರು ವಿಸರಣೆಗೊಂಡು ಬಾವಿಗಳನ್ನು ಮರುಪೂರಣ ಮಾಡುತ್ತವೆ (ಬಾವಿಗೆ ನೀರು ಬರುವುದು).
  • ಭೂಮಿಯ ಮೇಲಿರುವ ಸಸ್ಯಗಳಿಗೆ ತೇವಾಂಶವನ್ನು ಒದಗಿಸುತ್ತವೆ.
  • ಪ್ರಾಣಿಗಳ ತ್ಯಾಜ್ಯದಿಂದ ಮಲಿನಗೊಳ್ಳುವುದಿಲ್ಲ.
  • ಅಗತ್ಯವಿದ್ದಾಗ ಬಾವಿ ತೋಡಿ ನೀರನ್ನು ಪಡೆಯಬಹುದು.

8. ಭಾರತದ ವಿವಿಧ ರಾಜ್ಯಗಳಲ್ಲಿ ನೀರಿನ ಕೊಯ್ಲನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?

ನೀರಿನ ಕೊಯ್ಲು ವಿಧಾನವು ಭಾರತದಲ್ಲಿ ಖಾದಿನ್. ಮಹಾರಾಷ್ಟ್ರದಲ್ಲಿ ಬಾಂದಾರಾ ಮತ್ತು ತಾಲ್, ಮಧ್ಯ ಪ್ರದೇಶದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬುಂಧೀಸ್‌ಗಳು, ಬಿಹಾರದಲ್ಲಿ ಆಹರ್‌ಗಳು ಮತ್ತು ಪೈನ್‌ಗಳು, ಹಿಮಾಚಲ ಪ್ರದೇಶಗಳಲ್ಲಿ ಕುಪ್ಪೆಗಳು, ಜಮ್ಮುವಿನ ಕಂದಿಪಟ್ಟಿಯಲ್ಲಿನ ಕೊಳಗಳು ಮತ್ತು ತಮಿಳುನಾಡಿನಲ್ಲಿ ಎರಿ(ಕೆರೆ) ಗಳು, ಕೇರಳದಲ್ಲಿ ಸುರಂಗಗಳು, ಕರ್ನಾಟಕದಲ್ಲಿ ಕಟ್ಟೆಗಳು ಎಂಬ ವಿವಿಧ ಹೆಸರಿನಿಂದ ಕರೆಯುತ್ತಾರೆ.

9. ಪಳೆಯುಳಿಕೆ ಇಂಧನಗಳಾದ ಕಲ್ಲದ್ದಲು ಮತ್ತು ಪೆಟ್ರೋಲಿಯಂನ ಸಂರಕ್ಷಣೆ ಅಗತ್ಯವೇ? ಏಕೆ?

ಇವು ನವೀಕರಿಸಲಾಗದ ಇಂಧನಗಳು ನೂರಾರು ವರ್ಷಗಳಿಂದ ಉಪಯೋಗಿಸುತ್ತಿರುವುದರಿಂದ ಇವುಗಳ ಆಕರ ಕಡಿಮೆಯಾಗುತ್ತಿದೆ. ಇವು ನಿರ್ಮಾಣವಾಗಲು ಸಾವಿರಾರು ವರ್ಷಗಳು ಬೇಕು. ಆದ್ದರಿಂದ ಇವುಗಳನ್ನು ಸಂರಕ್ಷಿಸುವುದು ಅವಶ್ಯಕವಾಗಿದೆ.


ನೆನಪಿನಲ್ಲಿಡಬೇಕಾದ ಅಂಶಗಳು

  • ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಹೇಗೆ ಮಾಡಬೇಕೆಂಬುದನ್ನು ನಾವೆಲ್ಲರೂ ಯೋಚಿಸಬೇಕಾಗಿದೆ
  • ಏನನ್ನೂ ಯೋಚಿಸಿದೆ ನಮ್ಮ ಸಂಪನ್ಮೂಲಗಳನ್ನು ದುರ್ಬಳಕೆ ಮಾಡುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಜಾಗೃತಿ ಉಂಟಾಗುತ್ತಿರುವುದು ನಿಜವಾಗಿಯೂ ಹೊಸ ಮತ್ತು ಪ್ರಮುಖ ವಿದ್ಯಮಾನವಾಗಿದೆ
  • ಅರಣ್ಯಗಳು ವನ್ಯಜೀವಿಗಳು ನೀರು ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಂಥ ನಮ್ಮ ಸಂಪನ್ಮೂಲಗಳನ್ನು ಸಮರ್ಪಕ ರೋಈತಿಯಲ್ಲಿ ಬಳಸಬೇಕಾದ ಅಗತ್ಯವಿದೆ
  • 1985 ರಲ್ಲಿ ಗಂಗಾ ಕಾರ್ಯ ಯೋಜನೆಯ ಜಾರಿಗೆ ಬಂದಿತ್ತು
  • ಗಂಗಾ ನದಿಯ ನೀರಿನಿಂದ ಕೋಲಿಫಾರ್ಮ್‌ ಎಂಬ ಬ್ಯಾಕ್ಟೀರಿಯಾ ಗುಂಪು ಮಾನವನ ಸಣ್ಣ ಕರುಳಿನಲ್ಲಿ ಕಂಡು ಬಂದಿತ್ತು.
  • ಗಂಗಾನದಿಯು ಅನೇಕ ಕಾರಣಗಳಿಂದ ಅತಿ ಹೆಚ್ಚಾಗಿ ಮಲಿನಗೊಂಡಿತ್ತು.
  • ನಮಾಮಿಗಂಗೆ ಕಾರ್ಯ ಕ್ರಮವು ಎರಡು ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಪ್ರಾರಂಭವಾಯಿತು
  • ಆ ಎರಡು ಉದ್ದೇಶಗಳು ಗಂಗಾನದಿಯ 1. ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುವುದು ಮತ್ತು 2. ಗಂಗಾನದಿಯನ್ನು ಪುನಃಶ್ಚೇತನಗೊಳಿಸುವುದು.
  • ನೈಸರ್ಗಿಕ ಸಂಪನ್ಮೂಗಳ ಸುಸ್ಥಿರ ನಿರ್ವಹಣೆಗಾಗಿ ಮತ್ತು ಪರಿಸರವನ್ನು ರಕ್ಷಿಸಲು ನಾವು ಐದು ʻRʻ ಗಳನ್ನು ಅನುಸರಿಸಬೇಕು
  • ಆ ಐದು ʻRʻ ಗಳು

Refuse – ನಿರಾಕರಣೆ

Reduce – ಮಿತಬಳಕೆ

Reuse – ಮರುಬಳಕೆ

Repurpose – ಮರುಉದ್ದೇಶ

Recycle – ಮರು ಚಕ್ರೀಕರಣ

  • ನಮ್ಮ ಜೀವನದಲ್ಲಿ ನಿರಾಕರಣೆ, ಮಿತಬಳಕೆ, ಮರು ಉದ್ದೇಶ ಮತ್ತು ಮರು ಚಕ್ರೀಕರಣವನ್ನು ಪ್ರಾಮಾಣಿಕವಾಗಿ ಗರಿಷ್ಟ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವುದರಿಂದ ಪರಿಸರದ ಮೇಲಿನ ಒತ್ತಡವನ್ನು ನಾವು ಕಡಿಮೆ ಮಾಡಬಹುದು
  • ದೈನಂದಿನ ಆಯ್ಕೆಗಳನ್ನು ಮಾಡುವ ಸಂದರ್ಭದಲ್ಲೂ, ನಾವು ಪರಿಸರ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
  • ನಾವು ನಮ್ಮ ನೈಸರ್ಗಿಕ ಸಂಪನ್ಮೂಗಳನ್ನು ನಿರ್ವಹಣೆಗೆ ದೀರ್ಘಾವಧಿಯ ದೃಷ್ಟಿಕೋನವನ್ನು ಇಟ್ಟುಕೊಳ್ಳುವ ಅಗತ್ಯವಿದೆ, ಸಂಪನ್ಮೂಲಗಳ ನ್ಯಾಯಸಮ್ಮತ ಹಂಚಿಕೆಯನ್ನು ಈ ನಿರ್ವಹಣೆಯು ಖಚಿತಪಡಿಸಬೇಕು. ನಾವು ನಮ್ಮ ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು
  • ತ್ಯಾಜ್ಯಗಳ ವಿಲೇವಾರಿಗೂ ನಾವು ಯೋಜನೆಯನ್ನು ರೂಪಿಸಬೇಕೆಂದು ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯನ್ನು ಒತ್ತಾಯಿಸುತ್ತದೆ.
  • ಪುರಾತನ ಭಾರತದಲ್ಲಿ ಸಂರಕ್ಷಣೆಯ ತತ್ವಗಳು ಮತ್ತು ಸುಸ್ಥಿರ ನಿರ್ಹಣಾ ವಿಧಾನಗಳು ಚೆನ್ನಾಗಿ ರೂಢಿಯಲ್ಲದ್ದವು.
  • ವೇದಗಳ ಕಾಲದಲ್ಲಿ ಅರಣ್ಯದ ಸಸ್ಯವರ್ಗಗಳ ಉತ್ಪಾದಕತೆ ಮತ್ತು ಸಂರಕ್ಷಣೆ ಎರಡೂ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗಿತ್ತು
  • ಅರಣ್ಯಗಳು ‘ಜೀವ ವೈವಿಧ್ಯತೆಯ ಸೂಕ್ಷ್ಮತಾಣಗಳು
  • ವೈವಿಧ್ಯತೆಯ ನಾಶವು ಪರಿಸರ ಸಮತೋಲನದ ನಾಶಕ್ಕೆ ಕಾರಣವಾಗಬಹುದು.
  • ಸ್ಥಳೀಯ ಜನರು ಅರಣ್ಯಗಳ ಸಂರಕ್ಷಣೆಗಾಗಿ ಸಾಂಪ್ರದಾಯಿಕವಾಗಿ ಕೆಲಸ ಮಾಡುತ್ತಿರುವುದರ ನಿದರ್ಶನವಾಗಿ ರಾಜಸ್ಥಾನದ ಬಿಷ್ನೋ ಯಿ ಸಮುದಾಯದ ಪ್ರಕರಣವನ್ನು ನೋಡಬಹುದು.
  • ಪರಿಸರ ಪ್ರೇಮಿ ಜನರು ಶತಮಾನಗಳಿಂದಲೂ ಸಸ್ಯ ಹಾಗೂ ಪ್ರಾಣಿ ವರ್ಗಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು ಪರಿಸರ ಸಂರಕ್ಷಣೆಗಾಗಿ ಜೀವವನ್ನು ತ್ಯಾಗ ಮಾಡುವ ಹಂತಕ್ಕೂ ಹೋಗಬಲ್ಲರು.
  • ಸರ್ಕಾರವು ಇತ್ತೀಚೆಗೆ ‘ವನ್ಯ ಜೀವಿ ಸಂರಕ್ಷಣೆಗಾಗಿ ಅಮೃತಾದೇವಿ ಬಿಷ್ನೋ ಯಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಸ್ಥಾಪಿಸಿದೆ.
  • ಮಾನವನ ಹಸ್ತಕ್ಷೇಪವು ಅರಣ್ಯ ಪ್ರದೇಶದ ಭೂ ದೃಶ್ಯದಲ್ಲಿ ಒಂದು ಬಹುಮುಖ್ಯ ಭಾಗವಾಗಿದೆ.
  • ಅರಣ್ಯ ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಯಾಗದಂತೆಯೂ ಹಾಗೂ ಸಾಕಷ್ಟೂ ಅಭಿವೃದ್ಧಿ ಸಾಧಿಸುವಂತೆಯೂ ಇರುವ ರೀತಿಯಲ್ಲಿ ಬಳಸಬೇಕು.
  • ಪರಿಸರವನ್ನು ಸಂರಕ್ಷಿಸುವಂತೆಯೇ ಅದರ ನಿಯಂತ್ರಿತ ಉಪಯೋಗದಿಂದಾಗುವ ಲಾಭವು ಸ್ಥಳೀಯ ಜನರಿಗೆ ದೊರಕುವಂತಿರಬೇಕು. ಇಲ್ಲಿ ವಿಕೇಂದ್ರೀಕೃತ ಆರ್ಥಿಕ ಬೆಳವಣಿಗೆಯಾಗಿ ಅಭಿವೃದ್ಧಿ ಹೊಂದಬೇಕು.
  • ಕಾಡಿನ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಪಾಲುದಾರರ ಗುರಿಗಳು ಒಂದೇ ಆಗಿದ್ದರೆ ಅದನ್ನು ಪರಿಗಣಿಸಬೇಕು.
  • ಅರಣ್ಯ ಸಂಪನ್ಮೂಲಗಳ ನಿರ್ವಹಣೆಯು ವಿವಿಧ ಪಾಲುದಾರರ ಹಿತಾಸಕ್ತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ.
  • ಸ್ಥಳೀಯ ಜನರ ಭಾಗವಹಿಸುವಿಕೆಯು ನಿಜವಾಗಿಯೂ ಅರಣ್ಯಗಳ ಸಮರ್ಥ ನಿರ್ವಹಣೆಗೆ ಎಡೆ ಮಾಡಿಕೊಡುತ್ತದೆ.
  • ಸ್ಥಳೀಯ ಸಮುದಾಯದವರ ಸಕ್ರಿಯ ಹಾಗೂ ಆಸಕ್ತಿದಾಯಕ ಭಾಗವಹಿಸುವಿಕೆಯಿಂದ ಅರಬಾರಿಯ ಸಾಲ್ ಅರಣ್ಯಗಳು 1983 ರಲ್ಲಿ ಗಮನಾರ್ಹವಾಗಿ ಚೇತರಿಸಿಕೊಂಡವು ಮೊದಲು ನಿಷ್ಟ್ರಯೋಜಕವಾಗಿದ್ದ ಅರಣ್ಯದ ಮೌಲ್ಯವು ಈಗ 12.5ಕೋಟಿ ರೂಪಾಯಿಗಳಾಗಿತ್ತು.
  • ನೀರು ಭೂಮಿಯ ಮೇಲೆ ಕಂಡು ಬರುವ ಎಲ್ಲಾ ಜೀವಿಗಳ ಒಂದು ಮೂಲಭೂತ ಅಗತ್ಯವಾಗಿದೆ.
  • ಮಾನವನ ಹಸ್ತಕ್ಷೇಪವು ಅನೇಕ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಕೂಡಾ ಬದಲಾಯಿಸಿದೆ.
  • ನೀರಿನ ಬೃಹತ್ ಯೋಜನೆಗಳು ಸ್ಥಳೀಯ ನೀರಾವರಿ ವಿಧಾನಗಳ ಅವಗಣನೆಗೆ ಎಡೆ ಮಾಡಿಕೊಟ್ಟಿತು.
  • ಆಣೆ ಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರಿನ ಸಂಪನ್ಮೂಲಗಳ ಸಂರಕ್ಷಣೆಯು ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಸಮಸ್ಯೆಗಳನ್ನು ಒಳಗೊಂಡಿದೆ. ಬೃಹತ್ ಆಣೆಕಟ್ಟುಗಳಿಗೆ ಪರ್ಯಾಯಗಳಿವೆ. ಇವು ಸ್ಥಳೀಯವಾಗಿ ನಿರ್ದಿಷ್ಟವಾಗಿವೆ ಮತ್ತು ಸ್ಥಳೀಯ ಜನರ ನಿಯಂತ್ರಣಕ್ಕೆ ಅವರ ಸ್ಥಳೀಯ ಸಂಪನ್ಮೂಲಗಳನ್ನು ಕೊಡುವ ಮೂಲಕ ಅಭಿವವೃದ್ಧಿ ಪಡಿಸಬಹುದಾಗಿದೆ.
  • ಬೃಹತ್ ಆಣೆಕಟ್ಟುಗಳ ಕುರಿತಾದ ಟೀಕೆಯು ನಿರ್ದಿಷ್ಟವಾಗಿ ಮೂರು ಸಮಸ್ಯೆಗಳನ್ನು ಸೂಚಿಸುತ್ತದೆ. ಅವುಗಳು
    • ಸಾಮಾಜಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ಪರಿಸರದ ಸಮಸ್ಯೆ
  • ಜಲಾನಯನ ಪ್ರದೇಶದ ನಿರ್ವಹಣೆಯು ಜೀವರಾಶಿಯ ಉತ್ತಾದನೆಯನ್ನು ಹೆಚ್ಚಿಸುವ ಸಲುವಾಗಿ ಮಣ್ಣು ಮತ್ತು ನೀರಿನ ವೈಜ್ಞಾನಿಕ ಸಂರಕ್ಷಣೆಗೆ ಪ್ರಾಧಾನ್ಯತೆ ನೀಡುತ್ತದೆ.
  • ಭಾರತದ ನೀರಿನ ಮನುಷ್ಯ ಎನ್ನಿಸಿಕೊಂಡಿರುವ ಡಾ. ರಾಜೇಂದ್ರ ಸಿಂಗ್‌ನವರು ಎರಡು ದಶಕಗಳ ಕಾಲ ಪರಿಶ್ರಮ ಪಟ್ಟು 8600 ಚೊಹಾಡ್‌ಗಳು ಮತ್ತು ಇತರ ರಚನೆಗಳನ್ನು ರಾಜಾಸ್ಥಾನದಲ್ಲಿ ಕಟ್ಟಲಾಯಿತು ಮತ್ತು 1000 ಹಳ್ಳಿಗಳಿಗೆ ನೀರನ್ನು ಪುನಃ ತರಲಾಯಿತು ಇವರು 2015 ರಲ್ಲಿ ‘ಸ್ಟಾಕ್ ಹೋಮ್‌ ನ ಜಲಪಾರಿತೋಷಕ’ವನ್ನು ಗೆದ್ದುಕೊಂಡರು.
  • ನೀರಿನ ಕೊಯ್ಲು ವಿಧಾನವು ಭಾರತದಲ್ಲಿ ಒಂದು ಅತ್ಯಂತ ಹಳೆಯ ಪರಿಕಲ್ಪನೆಯಾಗಿದೆ ಭೂಮಿಯ ಅಂತರ್ಜಲವನ್ನು ಮರುಬರ್ತಿ ಮಾಡುವುದರಿಂದ ಅನೇಕ ಉಪಯೋಗಗಳಿವೆ.
  • ಅರಣ್ಯಗಳು ವನ್ಯಜೀವಿಗಳು, ನೀರು ಇವುಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಜೊತೆಗೆ ಪ್ರಮುಖವಾಗಿ ಸಂಪನ್ಮೂಲ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಇವು ನಮಗೆ ಶಕ್ತಿಯ ಬಹುಮುಖ್ಯ ಸಂಪನ್ಮೂಲಗಳಾಗಿದೆ.
  • ಕೆಲವು ಸರಳ ಆಯ್ಕೆಗಳು ನಮ್ಮ ಶಕ್ತಿಯ ಬಳಕೆಯ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನುಂಟು ಮಾಡುತ್ತವೆ.
  • ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಯು ಕಷ್ಟಕರದ ಕೆಲಸವಾದರೂ ಮಾಡಲೇ ಬೇಕಾದ ಅನಿವಾರ್ಯತೆ ಇದೆ.
  • ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಮೀರಿ ಯೋಚಿಸಬೇಕು. ಅಭಿವೃದ್ಧಿಯ ಪ್ರಯೋಜನಗಳು ಈಗ ಪ್ರತಿಯೊಬ್ಬರಿಗೂ ಮತ್ತು ಮುಂಬರುವ ಎಲ್ಲಾ ಪೀಳಿಗೆಯವರಿಗೂ ತಲುಪುವಂತೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಮ್ಮ ಅವಶ್ಯಕತೆಗಳನ್ನು ಕಡಿತಗೊಳಿಸುವ ಅಗತ್ಯವಿದೆ.
  • ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳು ಅಂತಿಮವಾಗಿ ಮುಗಿದು ಹೋಗುತ್ತವೆ. ಮತ್ತು ಅವುಗಳ ದಹನವು ನಮ್ಮ ಪರಿಸರವನ್ನು ಮಲಿನಗೊಳಿಸುವುದರಿಂದ ಈ ಸಂಪನ್ಮೂಲಗಳನ್ನು ನಾವು ಎಚ್ಚರಿಕೆಯಿಂದ ಬಳಸುವ ಅಗತ್ಯವಿದೆ.

Leave a Reply

Your email address will not be published. Required fields are marked *