10th Standard Bharata: Bhougolika Stana Hagu Prakrutika Lakshanagalu Social Notes | 10ನೇ ತರಗತಿ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಪಾಠದ ನೋಟ್ಸ್

Bharata Bhougolik Stan Hagu Prakrutika Lakshanagalu

10th Standard Bharatada Bougolika Stana Hagu Prakrutika Lakshanagalu Social Notes Question Answer Guide Mcq Pdf Download in kannada Medium Karnataka State Syllabus 2025 10th Class Bharatada Bougolika Lakshanagalu in Kannada Question Answer, 10ನೇ ತರಗತಿ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, ಭಾರತದ ಭೌಗೋಳಿಕ ಲಕ್ಷಣಗಳು pdf, SSLC Social Science Chapter 10 Question Answer, Kseeb Solutions for Class 10 Social Science Chapter 10 Notes Key Answers, 10th Std Social 10 Lesson Notes, State Syllabus Class 10 social Science 10th Lesson Question Answer

Bharata Bhougolik Stan Hagu Prakrutika Lakshanagalu

10ನೇ ತರಗತಿ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಸಮಾಜ ವಿಜ್ಞಾನ ನೋಟ್ಸ್

  1. ಇಂಡಿಯಾ ಎಂಬ ಹೆಸರು ಸಿಂಧೂ ನದಿಯಿಂದ ಬಳಕೆಗೆ ಬಂದಿದೆ.
  2. ಭಾರತವು ಒಟ್ಟು 32,87,263 ಚದರ ಕಿ.ಮೀಗಳಷ್ಟು ವಿಸ್ತಾರವಾಗಿದೆ.
  3. ಭಾರತದ ಮಧ್ಯಭಾಗದಲ್ಲಿ 23% ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
  4. ಭಾರತದ ಮುಖ್ಯ ಭೂಭಾಗವು ಹೊಂದಿರುವ ಕರಾವಳಿಯು 1600 ಗಳಷ್ಟು ಆಗಿದೆ.
  5. ಭಾರತದ ಭೂಸ್ವರೂಪವನ್ನು 23% ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.
  6. ಮಹಾ ಹಿಮಾಲಯವನ್ನು ಹಿಮಾದ್ರಿ ಎಂದೂ ಕರೆಯುವರು.
  7. ಪ್ರಪಂಚದಲ್ಲಿಯೇ ಮೌಂಟ್ ಎವರೆಸ್ಟ್ ಅತ್ಯುನ್ನತ ಶಿಖರವಾಗಿದೆ.
  8. ಉತ್ತರ ಭಾರತದ ಮೈದಾನವು ಸಂಚಯನ ಮಣ್ಣಿನಿಂದ ನಿರ್ಮಾಣವಾಗಿದೆ.
  9. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಎಂದು ಕರೆಯುವರು.

1. ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?

ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.

2. ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿದೆ?

ಭಾರತವು ಭೂಮಿಯ ಉತ್ತರಾರ್ಧ ಗೋಳಾರ್ಧದಲ್ಲಿದೆ.

3. ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?

ನಿಕೋಬಾರ್ ದ್ವೀಪದ 6° 45′ ಉತ್ತರ ಅಕ್ಷಾಂಶದಲ್ಲಿರುವ ಇಂದಿರಾಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.

4. ಇಂದಿರಾಪಾಯಿಂಟ್ ಯಾವ ದ್ವೀಪದಲ್ಲಿದೆ?

ಇಂದಿರಾಪಾಯಿಂಟ್ ನಿಕೋಬಾರ್ ದ್ವೀಪದಲ್ಲಿದೆ.

4. ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಯಾವುದು?

ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಶಿವಾಲಿಕ್ ಶ್ರೇಣಿ.

5. ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?

ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಶಿವಾಲಿಕ್ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.

6. ಹಿಮಾಲಯ ಪರ್ವತಶ್ರೇಣಿಗಳಿಂದಾಗುವ ಪ್ರಯೋಜನಗಳು ಯಾವುವು?

ಹಿಮಾಲಯ ಪರ್ವತ ಶ್ರೇಣಿಗಳು ಭಾರತದ ಜನಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರುತ್ತವೆ. ಇವು ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ. ಉತ್ತರ ಏಷ್ಯಾದಿಂದ ಬೀಸುವ ಶೀತಗಾಳಿಗಳನ್ನು ತಡೆಹಿಡಿಯುತ್ತವೆ. ನದಿಗಳ ಉಗವು ಪ್ರದೇಶವಾಗಿವೆ. ಜಲವಿದ್ಯುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ. ಇದು ವಿಶಾಲವಾದ ಮೈದಾನಗಳನ್ನು ನಿರ್ಮಿಸಿವೆ. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿವೆ ಹಾಗು ಪ್ರವಾಸೋದ್ದಿಮೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಪ್ರಾಮುಖ್ಯತೆಯನ್ನು ಪಡೆದಿದೆ.

7. ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.

ಪ್ರಸ್ಥಭೂಮಿಯು ಸಟ್ಲಜ್‌ ಗಂಗಾ ಮೈದಾನದ ದಕ್ಷಿಣದಲ್ಲಿ ಹಿಂದೂಮಹಾಸಾಗರದವರೆಗೂ ಚಾಚಿಕೊಂಡಿದೆ. ಇದರ ಒಟ್ಟು ಕ್ಷೇತ್ರ ಸುಮಾರು 15 ಲಕ್ಷ ಚ.ಕಿ.ಮೀ. ಇದು ಉತ್ತರದಲ್ಲಿ ಅರಾವಳಿ ಪರ್ವತದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಹರಡಿದೆ. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಜಾರ್ಖಂಡ್‌ನ ರಾಜಮಹಲ್ ಬೆಟ್ಟಗಳವರೆಗೆ ಸುಮಾರು 1400 ಕಿ.ಮೀ ಅಗಲವಾಗಿದೆ. ಈ ಪರ್ಯಾಯ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಪೂರ್ವದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳನ್ನು ಇದು ಒಳಗೊಂಡಿದೆ.

8. ಶಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.

ಶಿವಾಲಿಕ್ ಶ್ರೇಣಿಯು ಹಿಮಾಲಯ ಪರ್ವತಗಳಲ್ಲಿ ಇತ್ತೀಚೆಗೆ ನಿರ್ಮಿತವಾದುದು. ಇದು ಅತ್ಯಂತ ದಕ್ಷಿಣದಲ್ಲಿರುವ ಸರಣಿ ಹಾಗೂ ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದ ಬೆಟ್ಟಗಳು ಎಂದೂ ಸಹ ಕರೆಯುವರು. ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ. ಈ ಮೈದಾನಗಳನ್ನು ಡೂನ್‌ಗಳು ಎಂದು ಕರೆಯುವರು. ಉದಾ: ಡೆಹರಾ ಡೂನ್, ಕೋಟಾ, ಪಾಟ್ಟಿ, ಚೌಕಾಂಬಾ, ಉದಾಂಪುರ ಮತ್ತು ಕೋಟ್ಟಾ. ಇವು ಸಮುದ್ರದಿಂದ 600-1500 ಮಿ.ಗಳಷ್ಟು ಎತ್ತರವಾಗಿವೆ.

9. ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ ಏಕೆ?

ಉತ್ತರದ ಮೈದಾನವು ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವುದರಿಂದ ಈ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ.

10. ಪಶ್ಚಿಮ ಘಟ್ಟಗಳು – ಪೂರ್ವ ಘಟ್ಟಗಳಿಗಿರುವ ವ್ಯತ್ಯಾಸಗಳನ್ನು ತಿಳಿಸಿ.

ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ ಮತ್ತು ನಿರಂತರವಾಗಿಯೂ ಇಲ್ಲ. ಈ ಘಟ್ಟಗಳು ನದಿ ಕಣಿವೆಗಳಿಂದ ಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಪಶ್ಚಿಮ ಘಟ್ಟಗಳು ಹೆಚ್ಚು ಎತ್ತರವಾಗಿವೆ ಮತ್ತು ನಿರಂತರವಾಗಿವೆ.

1.ದಕ್ಷಿಣ ಭಾರತಲ್ಲಿಯೇ ಅತ್ಯುನ್ನತ ಪ್ರದೇಶ:

ಬಿ) ಮೈಕಲ ಶ್ರೇಣಿ

ಸಿ) ರಾಜಮಹಲ ಬೆಟ್ಟಗಳು

ಡಿ) ಅಮರಕಂಟಕ ಬೆಟ್ಟಗಳು

2. ಭಾರತ ಏಷ್ಯಾ ಖಂಡದ:

ಬಿ) ದ್ವೀಪ

ಸಿ) ಪರ್ಯಾಯ ಪ್ರಸ್ಥಭೂಮಿ

ಡಿ) ಪರ್ಯಾಯ ದ್ವೀಪ

3. ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿರುವ ಶಿಖರ:

ಎ) ಕಾಂಚನ ಗಂಗಾ

ಬಿ) ಮೌಂಟ್ ಗಾಲ್ವಿನ್ ಆಸ್ಟಿನ್

ಸಿ) ಗೌರಿಶಂಕರ

4. ಭಾರತೀಯ ಆದರ್ಶ ಕಾಲಮಾನವು ಈ ರೇಖಾಂಶವನ್ನಾಧರಿಸಿದೆ:

ಎ) 68’7′ ಪೂರ್ವ ರೇಖಾಂಶ

ಸಿ) 37*6′ ಉತ್ತರ ಅಕ್ಷಾಂಶ

ಡಿ) 23.30′ ಉತ್ತರ ಅಕ್ಷಾಂಶ

5. ಭಾರತವು ಹೊಂದಿರುವ ಭೂಗಡಿಯ ಉದ್ದ:

ಎ) 15,300 ಕಿ.ಮೀ.

ಬಿ) 15,600 ಕಿ.ಮೀ.

ಡಿ) 15,400 ಕಿ.ಮೀ.

1.ಒಡಿಶಾದಲ್ಲಿರುವ ಉಪ್ಪು ನೀರಿನಿಂದ ಸರೋವರ ಚಿಲ್ಕಾ.

2. ಭಾರತದ 9 ರಾಜ್ಯಗಳು ಕರಾವಳಿ ತೀರವನ್ನು ಹೊಂದಿವೆ.

3. ಪೂರ್ವಘಟ್ಟಗಳು ಪಶ್ಚಿಮ ಘಟ್ಟಗಳನ್ನು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.

4. ಭಾರತವನ್ನು ಇಂಡಿಯಾ ಹಾಗೂ ಹಿಂದೂಸ್ಥಾನ ಎಂದು ಕರೆಯುತ್ತಾರೆ.

5. ಗಂಗಾನದಿಯ ಉಗಮ ಸ್ಥಾನ ಗಂಗೋತ್ರಿ

6. ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಪರ್ಯಾಯ ಪ್ರಸ್ಥಭೂಮಿ

7. ಭಾರತವೆಂಬ ಹೆಸರು ಭರತ ಎಂಬ ಪುರಾತನ ಚಕ್ರವರ್ತಿಯ ಹೆಸರಿನಿಂದ ಬಂದಿದೆ.

8. ಉತ್ತರ ಭಾರತದ ಮಹಾ ಮೈದಾನವನ್ನು ಸಟ್ಲೇಜ್‌ ಗಂಗಾ ಮೈದಾನವೆಂತಲೂ ಕರೆಯುತ್ತಾರೆ.

9. ಪಶ್ಚಿಮ ಕರಾವಳಿಯನ್ನು ಕೇರಳದಲ್ಲಿ ಮಲಬಾರ್ ತೀರ ಎಂದು ವಿಂಗಡಿಸಲಾಗಿದೆ.

10. ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದಲ್ಲೇ ಏಳನೆಯ ದೊಡ್ಡ ರಾಷ್ಟ್ರ.

1.ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯಲು ಕಾರಣವೇನು?

ಮಹಾ ಹಿಮಾಲಯವು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದರಿಂದ ಇದನ್ನು ಹಿಮಾದ್ರಿ ಎಂದು ಕರೆಯುತ್ತಾರೆ.

2. ಹಿಮಾಚಲದಲ್ಲಿರುವ ಪ್ರಸಿದ್ಧ ಕಣಿವೆಗಳನ್ನು ಹೆಸರಿಸಿ.

ಪೀರ್‌ಪಂಜಾಲ, ಮಹಾಭಾರತಶ್ರೇಣಿ, ನಾಗತಿಬ್ಬ, ಮಸ್ಟೋರಿ ಇತ್ಯಾದಿ. ಕಂಗ್ರಾ, ಕುಲು ಇವು ಪ್ರಸಿದ್ಧ ಕಣಿವೆಗಳಾಗಿವೆ.

3. ಹಿಮಾಚಲದಲ್ಲಿರುವ ಪ್ರಸಿದ್ಧ ಗಿರಿಧಾಮಗಳನ್ನು ಹೆಸರಿಸಿ.

ತಿಮ್ಮಾ, ಮನ್ಸೂರಿ, ನೈನಿತಾಲ್, ರಾಣಿಖೇಟ್, ಚಕ್ರಾತ ಮತ್ತು ಡಾರ್ಜಿಲಿಂಗ್ ಇತ್ಯಾದಿ ಗಿರಿಧಾಮಗಳಿವೆ.

4. ಭಾರತಕ್ಕೆ ಸೇರಿರುವ ದ್ವೀಪಗಳ ಕುರಿತು ಬರೆಯಿರಿ.

ಭಾರತಕ್ಕೆ ಸೇರಿರುವ ಒಟ್ಟು 247 ದ್ವೀಪಗಳಿವೆ. ಅವುಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ. ಮನ್ನಾರ್ ವಾರಿಯಲ್ಲಿ ಕೆಲವು ಹವಳದ ದ್ವೀಪಗಳಿವೆ. ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿದೆ. ಲಕ್ಷದ್ವೀಪಗಳು ಹವಳದ ದ್ವೀಪಗಳಾಗಿವೆ. ಭಾರತದ ದಕ್ಷಿಣದ ತುದಿಯು ನಿಕೋಬಾರ ದ್ವೀಪದ ದಕ್ಷಿಣ ತುದಿಯಲ್ಲಿದೆ. ಇದನ್ನು ಇಂದಿರಾ ಪಾಯಿಂಟ್ ಎಂದು ಕರೆಯುತ್ತಾರೆ.

5. ಪಶ್ಚಿಮ ಕರಾವಳಿಯಲ್ಲಿನ ಮುಖ್ಯ ಬಂದರುಗಳು ಯಾವುವು?

ಮುಂಬೈ, ಮರ್ಮಗೋವಾ, ಕೊಚ್ಚಿನ್, ಕಾಂಡ್ಲಾ, ಕಾರವಾರ, ಮಂಗಳೂರು.

6. ಭಾರತದ ಆಕ್ಷಾಂಶ ಮತ್ತು ರೇಖಾಂಶೀಯ ವಿಸ್ತರಣೆಯನ್ನು ತಿಳಿಸಿ.

ಭಾರತದ ಪ್ರಧಾನ ಭೂಭಾಗವು 8* 4′ ರಿಂದ 37* 6′ ಉತ್ತರ ಅಕ್ಷಾಂಶ ಹಾಗೂ * 7′ ರಿಂದ 97* 3′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ. ಭಾರತದ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ (23½”ಉ) ವು ಹಾಯ್ದು ಹೋಗಿದೆ ಮತ್ತು 82%’ ಪೂರ್ವ ರೇಖಾಂಶವು ದೇಶದ ಮಧ್ಯದಲ್ಲಿ ಹಾಯ್ದು ಹೋಗಿರುವುದು. ಇದು ಭಾರತದ ಮಧ್ಯ ರೇಖಾಂಶವಾಗಿದ್ದು ಭಾರತೀಯ ಆದರ್ಶಕಾಲಮಾನವು ಈ ರೇಖಾಂಶವನ್ನಾಧರಿಸಿದೆ.

7. ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರಲು ಕಾರಣಗಳೇನು?

ಈ ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಏಕೆಂದರೆ ಇಲ್ಲಿ ಅಪಾರವಾದ ಖನಿಜ ಸಂಪನ್ಮೂಲಗಳಿವೆ. ಇಲ್ಲಿನ ನದಿಗಳು ಜಲಪಾತಗಳಿಂದ ಕೂಡಿರುವುದರಿಂದ ಜಲವಿದ್ಯುಚ್ಛಕ್ತಿಯ ಉತ್ಪಾದನೆಗೆ ಅನುಕೂಲವಾಗಿವೆ.

8. ಭಾರತವನ್ನು ಉಪಖಂಡವೆಂದು ಏಕೆ ಕರೆಯಬಹುದಾಗಿದೆ?

ವಿವಿಧ ರೀತಿಯ ಮೇಲೆ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿಧ್ಯತೆಗಳನ್ನು ಗಮನಿಸಿದಾಗ ಭಾರತವನ್ನು ಉಪಖಂಡವೆಂದು ಏಕೆ ಕರೆಯಬಹುದಾಗಿದೆ.

  • ಭಾರತವು ಏಷ್ಯಾಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ.
  • ಇದನ್ನು ಇಂಡಿಯಾ ಹಾಗೂ ಹಿಂದೂಸ್ಥಾನ ಎಂದು ಕರೆಯುತ್ತಾರೆ.
  • ಇಂಡಿಯಾ ಎಂಬ ಹೆಸರು ಸಿಂಧೂ ನದಿಯಿಂದ ಬಳಕೆಗೆ ಬಂದಿದೆ.
  • ಭಾರತವು ಒಟ್ಟು 32,87,263 ಚದರ ಕಿ.ಮಿಗಳಷ್ಟು ವಿಸ್ತಾರವಾಗಿದೆ.
  • ಭಾರತದಲ್ಲಿ ಒಟ್ಟು 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ.
  • ಭಾರತವು 2011 ರ ಜನಗಣತಿಯ ಪ್ರಕಾರ 121 ಕೋಟಿ ಜನಸಂಖ್ಯೆಯನ್ನು ಒಳಗೊಂಡಿದೆ.
  • ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ಎಂದು ಕರೆಯಲಾಗಿದೆ.
  • ಭಾರತವು ಭೌಗೊಳಿಕವಾಗಿ ಉತ್ತರ ಗೋಳಾರ್ಧ ಹಾಗೂ ಪೂರ್ವ ಗೊಳಾರ್ಧದ ಮಧ್ಯದಲ್ಲಿ ನೆಲೆಸಿದೆ. ಇದು ದಕ್ಷಿಣ ಏಷ್ಯಾದ ಒಂದು ಪ್ರಮುಖ ಪರ್ಯಾಯ ದ್ವೀಪವಾಗಿದೆ.
  • ಭಾರತದ ಪ್ರಧಾನ ಭೂಭಾಗವು 8° 4′ ರಿಂದ 37° 6′ ಉತ್ತರ ಅಕ್ಷಾಂಶ ಹಾಗೂ 68° 7′ ರಿಂದ 97° 3′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.
  • ಉತ್ತರದ ಲಡಾಕ್‌ನಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಒಟ್ಟು 3214 ಕಿ.ಮೀ. ಉದ್ದವಾಗಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇನ್ನೂ ದಕ್ಷಿಣಕ್ಕೆ ವಿಸ್ತರಿಸಿವೆ.
  • ನಿಕೋಬಾರ್ ದ್ವೀಪದ 6° 45′ ದಕ್ಷಿಣ ಅಕ್ಷಾಂಶದಲ್ಲಿರುವ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
  • ದಕ್ಷಿಣ ಅಕ್ಷಾಂಶದಲ್ಲಿರುವ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.
  • ಜಮ್ಮು ಮತ್ತು ಕಾಶ್ಮೀರದ ಇಂದಿರಾಕೋಲ್ ಭಾರತದ ಅತ್ಯಂತ ಉತ್ತರ ತುದಿಯಾಗಿದೆ.
  • ಭಾರತದ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಯ್ದು ಹೋಗಿದೆ ಮತ್ತು 82 1/2 * ಪೂರ್ವ ರೇಖಾಂಶವು ದೇಶದ ಮಧ್ಯದಲ್ಲಿ ಹಾಯ್ದು ಹೋಗಿದೆ.
  • ಇದು ಭಾರತದ ಮಧ್ಯ ರೇಖಾಂಶವಾಗಿದ್ದು ಭಾರತೀಯ ಆದರ್ಶ ಕಾಲಮಾನವು ಈ ರೇಖಾಂಶವನ್ನಾಧರಿಸಿದೆ.
  • ಭಾರತವು ಒಂದು ಪರ್ಯಾಯ ದ್ವೀಪವಾಗಿದ್ದು ಇದು ಭೂ ಮತ್ತು ಜಲ ಮೇರೆಗಳೆರಡನ್ನೂ ಒಳಗೊಂಡಿದೆ.
  • ಭಾರತವು 15,200 ಕಿ.ಮೀ. ಭೂಗಡಿ ಹಾಗೂ 6,100 ಕಿ.ಮೀ ಕರಾವಳಿಯನ್ನು ಹೊಂದಿದೆ.
  • ಭಾರತವು ಏಳು ರಾಷ್ಟ್ರಗಳೊಡನೆ ಭೂಗಡಿಯನ್ನು ಹಂಚಿಕೊಂಡಿದೆ.
  • ಭಾರತವು ವಿವಿಧ ಬಗೆಯ ಭೂಸ್ವರೂಪಗಳನ್ನು ಒಳಗೊಂಡಿದೆ.
  • ಮೇಲ್ಮ ಲಕ್ಷಣಗಳನ್ನಾಧರಿಸಿ ಭಾರತವನ್ನು 1. ಉತ್ತರದ ಪರ್ವತಗಳು 2. ಉತ್ತರದ ಮೈದಾನಗಳು 3. ಪರ್ಯಾಯ ಪ್ರಸ್ಥಭೂಮಿ 4. ಕರಾವಳಿ ಮೈದಾನ ಮತ್ತು ದ್ವೀಪಗಳು ಎಂಬುದಾಗಿ 4 ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು.
  • ಉತ್ತರದ ಪರ್ವತ ಶ್ರೇಣಿಯು ಜಗತ್ತಿನಲ್ಲಿಯೇ ಅತಿ ಎತ್ತರವಾದ ಶಿಖರಗಳನ್ನು, ಆಳವಾದ ಕಣಿವೆಗಳನ್ನು, ಹಿಮನದಿ, ಮುಂತಾದವುಗಳನ್ನು ಹೊಂದಿದೆ.
  • ಹಿಮಾಲಯ ಪರ್ವತ ಶ್ರೇಣಿಗಳು ಸಿವಾಲಿಕ್ ಶ್ರೇಣಿ, ಹಿಮಾಚಲ ಮಹಾ ಹಿಮಾಲಯ ಎಂಬ ಮೂರು ಶ್ರೇಣಿಗಳನ್ನು ಒಳಗೊಂಡಿದೆ.
  • ಶಿವಾಲಿಕ್‌ ಶ್ರೇಣಿಯು ಇತ್ತೀಚೆಗೆ ನಿರ್ಮಿತವಾದುದು. ಇದನ್ನು ಹಿಮಾಲಯದ ಪಾದ ಬೆಟ್ಟಗಳು ಎಂದೂ ಕರೆಯುತ್ತಾರೆ.
  • ಹಿಮಾಚಲವು ಮಹಾ ಹಿಮಾಲಯ ಮತ್ತು ಶಿವಾಲಿಕ್ ಬೆಟ್ಟಗಳ ನಡುವೆ ಇದೆ.
  • ಮಹಾ ಹಿಮಾಲಯವು ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತಗೊಂಡಿರುವ ಸರಣಿಯಾಗಿದೆ. ಇದು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದರಿಂದ ಇದನ್ನು ಹಿಮಾದ್ರಿ ಎಂದು ಕರೆಯುತ್ತಾರೆ.
  • ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿದೆ. ಗಾಡ್ತಿನ್‌ ಆಸ್ಟಿನ್ ಅಥವಾ K2 ಎಂಬುದು ಭಾರತದಲ್ಲಿ ಅತಿ ಎತ್ತರವಾದ ಶಿಖರವಾಗಿದೆ.
  • ಉತ್ತರ ಭಾರತದ ಮಹಾ ಮೈದಾನವನ್ನು ಸಟ್ಲಜ್ ಗಂಗಾ ಮೈದಾನವೆಂತಲೂ ಕರೆಯುವರು. ಈ ಮೈದಾನವು, ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವ ಸಂಚಯನ ಮೈದಾನವಾಗಿದೆ.
  • ಪರ್ಯಾಯ ಪ್ರಸ್ಥಭೂಮಿಯು ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು,
  • ಈ ಪರ್ಯಾಯ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಪೂರ್ವದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳನ್ನು ಒಳಗೊಂಡಿದೆ.
  • ಭಾರತದ ಕರಾವಳಿ ಮೈದಾನವನ್ನು ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
  • ಪಶ್ಚಿಮ ಕರಾವಳಿ ಮೈದಾನವು ಪಶ್ಚಿಮ ಘಟ್ಟ ಮತ್ತು ಅರಬ್ಬಿ ಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಕಟ್ರಿನಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ.
  • ಪೂರ್ವ ಕರಾವಳಿ ಮೈದಾನವು ಪೂರ್ವಘಟ್ಟ ಹಾಗೂ ಬಂಗಾಳಕೊಲ್ಲಿಯ ನಡುವೆ ಇದೆ.
  • ಭಾರತದಲ್ಲಿ 247 ದ್ವೀಪಗಳಿವೆ. ಅವುಗಳಲ್ಲಿ 204 ಬಂಗಾಳಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರಗಳಲ್ಲಿವೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ.
  • ಲಕ್ಷದ್ವೀಪಗಳು ಅರಬ್ಬಿ ಸಮುದ್ರದಲ್ಲಿದ್ದು ಹವಳದ ದ್ವೀಪಗಳಾಗಿವೆ.

ಇತರೆ ವಿಷಯಗಳು :

ಭಾರತದ ಋತುಗಳು ಪಾಠದ ನೋಟ್ಸ್‌

ದುಡಿಮೆ ಮತ್ತು ಆರ್ಥಿಕ ಜೀವನ ಪಾಠದ ನೋಟ್ಸ್‌

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *