10th Standard Bhagat Singh Kannada Notes Question Answer Summery Extract Mcq Pdf Download Kannada Medium Karnataka State Syllabus 2025,10ನೇ ತರಗತಿ ಕನ್ನಡ ಭಗತ್ಸಿಂಗ್ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, bhagat singh notes kannada class 10, kannada bhagat singh question answer, 10th kannada puraka pata notes, kseeb solutions for class 10 kannada puraka pata 2, bhagat singh class 10 kannada notes, class 10 kannada bhagat singh question answer, bhagat singh kannada class 10 textbook pdf, sslc bhagat singh kannada notes, 10th kannada puraka pata 2nd chapter notes.

10ನೇ ತರಗತಿ ಕನ್ನಡ ಭಗತ್ಸಿಂಗ್ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು
ಕೃತಿಕಾರರ ಪರಿಚಯ:
ಶ್ರೀ. ಚಿದಾನಂದಮೂರ್ತಿ, ಜಿ.ಎಸ್
ಶ್ರೀ ಚಿದಾನಂದಮೂರ್ತಿ ಜಿ.ಎಸ್ ರವರು ಸಾ.ಶ.1970 ರಲ್ಲಿ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೋಕ್, ಗೊಪ್ಪೇನಹಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಸ್ನಾತಕೊತ್ತರ ಶಿಕ್ಷಣ ಹಾಗೂ ಇಂಗ್ಲೀಷ್ ಎಂ.ಎ. ಮಾಡಿರುತ್ತಾರೆ. 2015 ರಿಂದ ತಮ್ಮ ಹುಟ್ಟೂರಿನಲ್ಲಿ ಪೂರ್ಣ ಪ್ರಮಾಣದ ರೈತನಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಪಾಠವನ್ನು ಜಿ.ಎಸ್.ರವರು ಬರೆದಿರುವ “ಜೀವನ ಸಾಧನೆ ಮಾಲಿಕೆ’ಯ ಭಗತ್ಸಿಂಗ್ ಜೀವನ | ದಿನ ಚರಿತ್ರೆ ಕೃತಿಯಲ್ಲಿ ಆರಿಸಿಕೊಳ್ಳಲಾಗಿದೆ.
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:-
1) ಜಲಿಯನ್ ವಾಲಾಬಾಗ್ ಶಾಂತಿಯುತ ಸಭೆಯಾದಾಗ ನಡೆಯಿತು?
1919 ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್ನಲ್ಲಿ ಸಭೆ ನಡೆಯಿತು.
2) ಭಗತ್ಸಿಂಗ್, ಜಲಿಯನ್ ವಾಲಾಬಾಗ್ನ ಮಣ್ಣಿನ ಕುರಿತು ತನ್ನ ತಂಗಿಗೆ ಏನೆಂದು ಹೇಳುತ್ತಾನೆ?
ಭಗತ್ಸಿಂಗ್, ಜಲಿಯನ್ವಾಲಾಬಾಗ್ನ ಮಣ್ಣನ್ನು ತನ್ನ ಡಬ್ಬಿಯಲ್ಲಿ ತಂದು, ತಂಗಿಗೆ “ಇದು ಬಹಳ ಪೂಜ್ಯನೀಯವಾದ ಮಣ್ಣು, ಜಲಿಯನ್ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ರಕ್ತದಿಂದ ಮಣ್ಣು ಒದ್ದೆಯಾಗಿದೆ” ಎಂದು ಹೇಳುತ್ತಾರೆ.
3) ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗರೆದ ಅಧಿಕಾರಿಯ ಹೆಸರೇನು?
ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗೆರೆದ ಅಧಿಕಾರಿ ಲೆಫ್ಟಿನೆಂಟ್ ಗೌರರ್ ಜನರಲ್ ಡಯರ್.
4) ಭಗತ್ಸಿಂಗ್ ಜಲಿಯನ್ ವಾಲಾಬಾಗ್ ಮಾರಣ ಹೋಮದಿಂದ ತೆಗೆದು ಕೊಂಡ ನಿರ್ಧಾರವೇನು?
“ಒಂದಲ್ಲ ಒಂದು ದಿನ ಕ್ರೂರ ಬ್ರಿಟಿಷರ ದಮನಕಾರಿ ಆಳ್ವಿಕೆಯ (ಪ್ರಭುತ್ವವನ್ನು) ಧ್ವಂಸ ಮಾಡಲು ಏನನ್ನಾದರೂ ಮಾಡಿಯೇ ತೀರುತ್ತೇನೆಂದೂ” ಭಗತ್ಸಿಂಗ್, ನಿರ್ಧಾರ ತೆಗೆದು ಕೊಂಡನು.