10th Standard Samajika Stara Vinyasa Chapter Social Notes | 10ನೇ ತರಗತಿ ಸಾಮಾಜಿಕ ಸ್ತರವಿನ್ಯಾಸ ಪಾಠದ ನೋಟ್ಸ್

Samajika Stara Vinyasa

10th Class Samajika Stara Vinyasa Social Science Notes Question Answer Guide Mcq Pdf download in Kannada Medium Karnataka State Syllabus 2025, 10ನೇ ತರಗತಿ ಸಾಮಾಜಿಕ ಸ್ತರವಿನ್ಯಾಸ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು,10th std ಸಾಮಾಜಿಕ ಸ್ತರ ವಿನ್ಯಾಸ Question Answer, Samajika Stara Vinyasa Notes in Kannada, SSLC Social Science Chapter 8 Question Answer, Kseeb solutions for class 10 Social Science Chapter 8 Notes Pdf Key Answers, State Syllabus Class 10 Social Science 8th Lesson Question Answer, 10th Standard Samajika Stara Vinyasa Question Answer Kannada.

Samajika Stara Vinyasa

10ನೇ ತರಗತಿ ಸಾಮಾಜಿಕ ಸ್ತರವಿನ್ಯಾಸ ಸಮಾಜ ವಿಜ್ಞಾನ ನೋಟ್ಸ್

ಅಭ್ಯಾಸ

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

1.ಮಾನವಕುಲ ತಾನೊಂದೇ ವಲಂ ಎಂದು ಹೇಳಿದವರು ಆದಿಕವಿ ಪಂಪ

2. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು ಮಹಾತ್ಮ ಗಾಂಧೀಜಿ

3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ 17ನೇ ವಿಧಿಯು ಘೋಷಿಸಿದೆ.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ:

1.ಸಾಮಾಜಿಕ ಸ್ತರ ವಿನ್ಯಾಸ ಎಂದರೇನು?

ಸಾಮಾಜಿಕ ಸ್ತರವಿನ್ಯಾಸವೆಂದರೆ ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಆಧಾರದ ಮೇಲೆ ಮೇಲು-ಕೀಳು ಎಂದು ವಿಂಗಡಿಸುವುದಾಗಿದೆ.

2. ಸಾಮಾಜಿಕ ಸ್ತರ ವಿನ್ಯಾಸವು ಹೇಗೆ ಉಂಟಾಗಿದೆ?

ಸ್ತರವಿನ್ಯಾಸವು ಸಮಾಜದಿಂದ ನಿರ್ಮಿಸಲ್ಪಟ್ಟಿದೆ. ಉದಾಹರಣೆಗೆ, ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಉತ್ತಮವಾದ ಪೌಷ್ಠಿಕ ಆಹಾರ, ಶಾಲೆ, ಉದ್ಯೋಗ ದೊರಕುವ ಅವಕಾಶಗಳು ಹೆಚ್ಚಾಗಿರುತ್ತವೆ. ಆದರೆ ಬಡವರ ಮಕ್ಕಳಿಗೆ ಮೇಲಿನ ಅವಕಾಶಗಳು ಕಡಿಮೆ. ಶ್ರೀಮಂತರು, ಬಡವರು ಎಂದು ಸಮಾಜವು ವರ್ಗೀಕರಣವಾಗಿ ರುವುದಕ್ಕೆ ಮಕ್ಕಳು ಕಾರಣವಲ್ಲ. ಆದರೆ ಸಮಾಜ ಮಾಡಿರುವ ಸ್ತರವಿನ್ಯಾಸದ ಕೆಟ್ಟ ಪರಿಣಾಮಗಳನ್ನು ಶೋಷಿತರು ಅನುಭವಿಸುತ್ತಾರೆ.

3. ಪೂರ್ವಾಗ್ರಹ ಎಂದರೇನು?

ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದವರ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧಾರಿತ ಮನೋಭಾವನೆಯೇ ಪೂರ್ವಾಗ್ರಹ ಎನಿಸಿಕೊಳ್ಳುವುದು.

4. ಅಸ್ಪೃಶ್ಯತಾ ನಿವಾರಣೆಯ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳಾವುವು? ವಿವರಿಸಿ.

ಸಂವಿಧಾನದ 17ನೆಯ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ. ಭಾರತ ಸರ್ಕಾರ ಅಸ್ಪೃಶ್ಯತಾ ಅಪ ರಾಧಗಳ ಕಾಯ್ದೆಯನ್ನು 1955ರಲ್ಲಿ ಜಾರಿಗೊಳಿಸಿದೆ. ಇದರಲ್ಲಿ ಕಂಡುಬಂದ ಕೆಲವು ಲೋಪ ದೋಷಗಳನ್ನು ತಿದ್ದು ಪಡಿಮಾಡಿ ನಾಗರಿಕ ಹಕ್ಕುಗಳ ಅಲ್ಲದೆ ಸಂಧಿ ಧಾನಾತ್ಮಕವಾಗಿ ಸಾರ್ವತ್ರಿಕ ಮತದಾನದ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡಲಾಗಿದೆ. ವಿಶೇಷವಾಗಿ ಪರಿಶಿಷ್ಟರನ್ನೊಳಗೊಂಡಂತೆ ಹಿಂದುಳಿದ ಜಾತಿಯವರಿಗೆ ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿಗಳನ್ನು ಕಲ್ಪಿಸಲಾಗಿದೆ. 1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆಟ್ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಹೀಗೆ, ಸ್ವತಂತ ಭಾರತವು ಅಸ್ಪೃಶ್ಯತೆಯ ನಿವಾರಣೆಗಾಗಿ ವಿಶೇಷ ಆಸಕ್ತಿ ವಹಿಸಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸುತ್ತಾ ಬಂದಿದೆ.

5. ಅಸ್ಪೃಶ್ಯತಾ ಆಚರಣೆಯಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ನಿಮ್ಮ ಸಲಹೆಗಳೇನು?

ಅಸ್ಪೃಶ್ಯತಾ ಆಚರಣೆಯಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಅನುಕೂಲ ಮತ್ತು ಅವಕಾಶಗಳನ್ನು ದೊರಕಿಸಿಕೊಡಬೇಕು. ಮನುಷ್ಯನನ್ನು ಹುಟ್ಟಿನಿಂದ ಅಳೆಯದೆ ಯೋಗ್ಯತೆಯಿಂದ ಅಳೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಮಾನವಾದ ಅವಕಾಶಗಳು ಸಿಗಬೇಕು. ಅಸ್ಪೃಶ್ಯತಾ ಆಚರಣೆಯಂತಹ ಸಾಮಾಜಿಕ ಪಿಡುಗುಗಳಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೂಹ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾನವರೆಲ್ಲಾ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಹೆಚ್ಚುವರಿ ಪ್ರಶ್ನೆಗಳು:

I. ಈ ಪ್ರಶ್ನೆಗಳಿಗೆ ಉತ್ತರಿಸಿ:

1. ಭಾರತದಲ್ಲಿ ಸ್ತರವಿನ್ಯಾಸ ವ್ಯವಸ್ಥೆಯನ್ನು ಜಾತಿ-ಪದ್ಧತಿಯಲ್ಲಿ ಗುರು ತಿಸಬಹುದಾಗಿದೆ. ಹೇಗೆ?

ಭಾರತದಲ್ಲಿನ ಜನ ಸಾವಿರಾರು ಜಾತಿ ಸಮೂಹಗಳಲ್ಲಿ ಹಂಚಿಹೋಗಿದ್ದಾರೆ. ಈ ಜಾತಿಗಳಲ್ಲಿ ಕೆಲವು ಮೇಲು ಜಾತಿಗಳು ಎನಿಸಿಕೊಂಡರೆ ಕೆಲವು ಕೀಳು ಜಾತಿಗಳು ಎನಿಸಿಕೊಂಡಿವೆ. ಜಾತಿಯ ಸ್ತರವಿನ್ಯಾಸದಲ್ಲಿ ಅಸ್ಪೃಶ್ಯರನ್ನು ಸಮಾಜವು ಕಡೆಯ ಹಂತದವರೆಂದು ಪರಿಗಣಿಸಲ್ಪಟ್ಟಿತ್ತು.

2. ಪೂರ್ವಾಗ್ರಹಕ್ಕೆ ಕಾರಣವೇನು?

ಮನುಷ್ಯರು ಸೃಷ್ಟಿಸಿಕೊಂಡಿರುವ ಅನೇಕ ನಿರ್ಮಿತಗಳಾದ ಜಾತಿ ತಾರತಮ್ಮ, ಲಿಂಗತಾರತಮ್ಯ, ಪಾದೇಶಿಕ ತಾರತಮ್ಯ, ಬಡವ-ಬಲ್ಲಿದ ಮೊದಲಾದ ರೀತಿಯ ತಾರತಮ್ಯಗಳು ಪೂರ್ವಾಗ್ರಹಕ್ಕೆ ಕಾರಣವಾಗಿವೆ.

3. ತಾರತಮ್ಯದಿಂದ ಉಂಟಾಗುವ ಪೂರ್ವಗ್ರಹದ ಪರಿಣಾಮಗಳೇನು?

ತಾರತಮ್ಯದಿಂದ ಉಂಟಾದಂತಹ ಪೂರ್ವಾಗ್ರಹವು ಆಸಹನೆ, ತಿರಸ್ಕಾರ, ಆಗೌರವ, ದ್ವೇಷ ಮುಂತಾದ ಭಾವನೆಗಳನ್ನು ಬೆಳೆಸಿಕೊಳ್ಳಲು ಆಸ್ಪದ ಮಾಡಿ ಕೊಡುತ್ತದೆ. ಇದರಿಂದ ಸಾಮಾಜಿಕ ಅಂತರ ಹೆಚ್ಚಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುತ್ತದೆ.

ಮುಖ್ಯಾಂಶಗಳು

  • ಸಾಮಾಜಿಕ ಸ್ತರವಿನ್ಯಾಸವೆಂದರೆ ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಆಧಾರದ ಮೇಲೆ ಮೇಲು-ಕೀಳು ಎಂದು ವಿಂಗಡಿಸುವುದಾಗಿದೆ.
  • ಸ್ತರವಿನ್ಯಾಸವು ಸಮಾಜದಿಂದ ನಿರ್ಮಿಸಲ್ಪಟ್ಟಿದೆ.
  • ಸಾಮಾಜಿಕ ಸ್ತರವಿನ್ಯಾಸವು ಎಲ್ಲಾ ಸಮಾಜಗಳಲ್ಲಿ ಕಂಡುಬರುತ್ತದೆ.
  • ಸಾಮಾಜಿಕ ಸ್ತರ ವಿನ್ಯಾಸದ ವ್ಯವಸ್ಥೆಯು ಅಸಮಾನತೆಯನ್ನು ಭಿನ್ನತೆಯನ್ನು ಉಂಟು ಮಾಡುತ್ತದೆ. ಕೀಳು ಎಂದು ವರ್ಗೀಕರಿಸಲ್ಪಟ್ಟಿರುವ ಜನರನ್ನು ಅವಮಾನಿಸುತ್ತದೆ.
  • ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದವರ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧಾರಿತ ಮನೋಭಾವನೆಯೇ ಪೂರ್ವಾಗ್ರಹ ಎನಿಸಿಕೊಳ್ಳುವುದು.
  • ಭಾರತದಲ್ಲಿ ಸ್ತರವಿನ್ಯಾಸ ವ್ಯವಸ್ಥೆಯನ್ನು ಜಾತಿ-ಪದ್ಧತಿಯಲ್ಲಿ ಗುರುತಿಸಬಹುದಾಗಿದೆ.
  • ಅಸ್ಪೃಶ್ಯತೆ ನಮ್ಮ ಸಮಾಜದ ಅಮಾನುಷವಾದ ಆಚರಣೆ.
  • ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದು ಹೇಳಿದ್ದಾರೆ.
  • ಅಸ್ಪೃಶ್ಯತೆಯನ್ನು ತಡೆಯಲು ಕಾನೂನುಗಳನ್ನು ಜಾರಿ ಮಾಡಲಾಗಿದೆ.
  • ಸಂವಿಧಾನದ 17ನೆಯ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.

ಇತರೆ ವಿಷಯಗಳು :

ದುಡಿಮೆ ಮತ್ತು ಆರ್ಥಿಕ ಜೀವನ ಪಾಠದ ನೋಟ್ಸ್‌

ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *