10th Standard Anuvamshiyate Mattu Jeeva Vikasa Science Notes Question Answer Guide Mcq Pdf Download in Kannada Medium Karnataka State Syllabus 2025 10th Science Anuvamshiyate question answer 10th class science chapter 10 question answer in kannada anuvanshiyate notes anuvanshiyate 10th class 10th vigyan notes 10ನೇ ತರಗತಿ ಅನುವಂಶೀಯತೆ ಮತ್ತು ಜೀವವಿಕಾಸ ವಿಜ್ಞಾನ ನೋಟ್ಸ್ kseeb solutions for class 10 chapter 10 notes 10ನೇ ತರಗತಿ ವಿಜ್ಞಾನ ನೋಟ್ಸ್ 10th science notes in kannada Class 10th Science Chapter 9th Notes in Kannada.

ಅಧ್ಯಾಯ 09 – ಅನುವಂಶೀಯತೆ ಮತ್ತು ಜೀವವಿಕಾಸ
ಪ್ರಶ್ನೆಗಳು
1) ಒಂದು ಗುಣ ‘A’ ಅಲೈಂಗಿಕವಾಗಿ ಪುನರುತ್ಪಾದನೆ ನಡೆಸುವ ಪ್ರಭೇದವೊಂದರ ಜೀವಿಸಂದಣಿಯ 10%ರಷ್ಟಿರುತ್ತದೆ, ಮತ್ತೊಂದು ಗುಣ ‘B’ ಅದೇ ಸಮೂಹದ 60% ರಷ್ಟಿದೆ, ಯಾವ ಗುಣ ಮೊದಲು ಹುಟ್ಟಿಕೊಂಡಿರಬಹುದು?
‘B’ ಗುಣವು ಮೊದಲು ಹುಟ್ಟಿಕೊಂಡಿರಬಹುದು. ಏಕೆಂದರೆ ಅಲೈಂಗಿಕವಾಗಿ ಪುನರುತ್ಪಾದನೆ ನಡೆಸುವ ಪ್ರಭೇದವೊಂದರ ಗುಣವು ಮುಂದಿನ ಪೀಳಿಗೆಗೆ ಅತ್ಯಂತ ಕಡಿಮೆ ಭಿನ್ನತೆಯಿಂದ ವರ್ಗಾವಣೆಯಾಗುವುದು. ‘B’ ಗುಣವು ಹೆಚ್ಚಿನ ಶೇಕಡಾಂಶ ಹೊಂದಿರುವುದರಿಂದ ‘A’ ಗುಣಕ್ಕಿಂತ ಮೊದಲೇ ಹುಟ್ಟಿಕೊಂಡಿರಬಹುದು.
2) ಪ್ರಭೇಧಗಳಲ್ಲಿನ ಭಿನ್ನತೆಗಳ ಸೃಷ್ಟಿ ಅವುಗಳ ಉಳಿವನ್ನು ಹೇಗೆ ಪ್ರೋತ್ಸಾಹಿಸುತ್ತವೆ ?
ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬ್ಯಾಕ್ಟಿರಿಯಾಗಳ ನಡುವೆ ಡಿ.ಎನ್.ಎ. ಪ್ರತೀಕರಣದಲ್ಲಿನ ಸಣ್ಣ ತಪ್ಪುಗಳ ಕಾರಣದಿಂದ ಚಿಕ್ಕ ವ್ಯತ್ಯಾಸಗಳು ಉಂಟಾಗುತ್ತವೆ. ಲೈಂಗಿಕ ಸಂತಾನೋತ್ಪತ್ತಿಯಾದರೆ ಇನ್ನೂ ಹೆಚ್ಚಿನ ವೈವಿಧ್ಯತೆ ಉಂಟಾಗುತ್ತವೆ. ವೈವಿಧ್ಯತೆಯ ಸ್ವರೂಪವನ್ನು ಅವಲಂಬಿಸಿ, ವಿವಿಧ ಜೀವಿಗಳು ವಿಭಿನ್ನ ರೀತಿಯ ಅನುಕೂಲಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಶಾಖವನ್ನು ತಡೆದುಕೊಳ್ಳುವ ಬ್ಯಾಕ್ಟಿರಿಯಾ ಉಷ್ಣ ತರಂಗಗಳಲ್ಲೂ ಉಳಿದುಕೊಂಡಿರುತ್ತದೆ. ಹೀಗೆ ಪರಿಸರದಿಂದ ಆಯ್ಕೆಯಾಗುವ ಭಿನ್ನತೆಗಳು ಜೀವವಿಕಾಸ ಪ್ರಕ್ರಿಯೆಗಳನ್ನು ರೂಪಿಸುತ್ತವೆ. ಈ ಈತಿ ಪ್ರಭೇದಗಳಲ್ಲಿನ ಭಿನ್ನತೆಗಳ ಸೃಷ್ಟಿ ಅವುಗಳ ಉಳಿವನ್ನು ಪ್ರೋತ್ಸಾಹಿಸುತ್ತವೆ.
1) ಗುಣಗಳು ಪ್ರಬಲ ಅಥವಾ ದುರ್ಬಲ ಎಂಬುದನ್ನು ಮೆಂಡಲ್‌ರ ಪ್ರಯೋಗಗಳು ಹೇಗೆ ತೋರಿಸುತ್ತವೆ?


ಮೆಂಡಲ್‌ರವರು ತಮ್ಮ ಪ್ರಯೋಗಗಳಿಗಾಗಿ ಬಟಾಣಿ ಸಸ್ಯವನ್ನು ಆರಿಸಿಕೊಂಡು, ಅದರಲ್ಲಿ ಗಿಡಗಳ ಎತ್ತರವನ್ನು ಪ್ರಯೋಗಿಕವಾಗಿ ಪರೀಕ್ಷಿಸಲು ನಿರ್ಧರಿಸಿದರು. ಎತ್ತರದ ‘ಮತ್ತು ಕುಬ್ಬ ಸಸ್ಯವನ್ನು ತೆಗೆದುಕೊಂಡು ಅವುಗಳಿಂದ ಸಂತತಿಯನ್ನು ಉತ್ಪಾದಿಸಿದರು. ಮೊದಲನೆಯ ಪೀಳಿಗೆಯಲ್ಲಿ ಬಂದ ಎಲ್ಲಾ ಸಸ್ಯಗಳೂ ಎತ್ತರವಾಗಿದ್ದವು. F1 ಸಂತತಿಯರಡು ಸಸ್ಯವನ್ನು ತೆಗೆದುಕೊಂಡು ಸ್ವಕೀಯ ಪರಾಗಸ್ಪರ್ಶದಿಂದ F2 ಸಂತತಿಯನ್ನು ಬೆಳೆಸಿದರು. F2 ಸಂತತಿಯಲ್ಲಿ 75% ಎತ್ತರವಾದ ಮತ್ತು 25% ಕುಬ್ಬ ಸಸ್ಯಗಳು ಬಂದವು. ಎಂದರೆ F1 ಪೀಳಿಗೆಯಲ್ಲಿ ಎಲ್ಲಾ ಎತ್ತರದ ಗಿಡಗಳಿದ್ದರೂ ಅವುಗಳಲ್ಲಿ ಕುಬ್ಬ ಗುಣವೂ ಇತ್ತು. ಅವರ ತೀರ್ಮಾನದ ಪ್ರಕಾರ ಎತ್ತರದ ಗುಣ ಪ್ರಬಲ ಮತ್ತು ಕುಬ್ಬ ಗುಣ ದುರ್ಬಲವಾಗಿದೆ ಎಂದು ತೋರಿಸಿಕೊಟ್ಟರು.
2) ಗುಣಗಳು ಸ್ವತಂತ್ರವಾಗಿ ಅನುವಂಶೀಯವಾಗುತ್ತವೆ ಎಂದು ಮೆಂಡಲ್‌ರ ಪ್ರಯೋಗಗಳು ಹೇಗೆ ತೋರಿಸುತ್ತವೆ?
ಮೆಂಡಲ್‌ರು ತಮ್ಮ ಪ್ರಯೋಗಕ್ಕೆ ಒಂದರ ಬದಲಿಗೆ ಎರಡು ವಿಭಿನ್ನವಾದ ಗುಣಗಳನ್ನು ತೆಗೆದುಕೊಂಡು ಸಂತಾನೋತ್ಪತ್ತಿ ನಡೆಸಿದರು. ಆ ಗುಣಗಳು ದುಂಡಾದ ಬೀಜಗಳುಳ್ಳ ಎತ್ತರವಾದ ಸಸ್ಯ (TTRR) ಹಾಗೂ ಸುಕ್ಕುಗಟ್ಟಿದ ಬೀಜಗಳುಳ್ಳ ಕುಬ್ಬ ಸಸ್ಯ (ttrr).
ಎತ್ತರವಾದ ಸಸ್ಯದ ಗುಣ = TT
ದುಂಡಾದ ಬೀಜದ ಗುಣ = RR TTRR = ದುಂಡಾದ ಬೀಜಗಳುಳ್ಳ ಎತ್ತರವಾದ ಸಸ್ಯ
ಕುಬ್ಬವಾದ ಸಸ್ಯದ ಗುಣ = tt
ಸುಕ್ಕುಗಟ್ಟಿದ ಬೀಜದ ಗುಣ = rr ttre = ಸುಕ್ಕುಗಟ್ಟಿದ ಬೀಜಗಳುಳ್ಳ ಕುಬ್ಬವಾದ ಸಸ್ಯ.
ಮೊದಲ ಸಂತತಿಯಲ್ಲಿ ಎಲ್ಲಾ ಸಸ್ಯಗಳೂ ಎತ್ತರವಾದ ದುಂಡಾದ ಬೀಜಗಳನ್ನು ಹೊಂದಿತ್ತು. ನಂತರ ಆ ಸಸ್ಯಗಳಲ್ಲಿ ಪುನಃ ಸಂತಾನೋತ್ಪತ್ತಿ ನಡೆಸಿದಾಗ F2 ಪೀಳಿಗೆಯಲ್ಲಿ ನಾಲ್ಕು ತರಹದ ಭಿನ್ನ ಪ್ರಭೇದಗಳು ಬಂದವು. ಅವು ಎತ್ತರವಾದ ದುಂಡು ಬೀಜಗಳುಳ್ಳ ಸಸ್ಯಗಳು, ಎತ್ತರವಾದ ಸುಕ್ಕುಗಟ್ಟಿದ ಬೀಜವುಳ್ಳ ಸಸ್ಯಗಳು, ಕುಬ್ಬವಾದ ದುಂಡು ಬೀಜಗಳುಳ್ಳ ಸಸ್ಯಗಳು ಮತ್ತು ಕುಬ್ಬವಾದ ಸುಕ್ಕುಗಟ್ಟಿದ ಬೀಜಗಳುಳ್ಳ ಸಸ್ಯಗಳು.
ಈ ಪ್ರಯೋಗದಿಂದ ಗುಣಗಳು ಸ್ವತಂತ್ರವಾಗಿ ಅನುವಂಶೀಯವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಹೆಚ್ಚಿನ ಕಲಿಕೆಗಾಗಿ

TTRR. TtIRr, ttRr, ttrr
F2 ಪೀಳಿಗೆಯ ಅನುಪಾತ 9 : 3 : 3 : 1

( Note : ವಿದ್ಯಾರ್ಥಿಗಳು ಇದೇ ರೀತಿ ಎರಡೆರಡು ಗುಣಗಳನ್ನು ತೆಗೆದುಕೊಂಡು ಚೆಕರ್ ಬೋರ್ಡ್ ಹಾಕಿ ಚೆನ್ನಾಗಿ ಅರ್ಥೈಸಿಕೊಳ್ಳಬಹುದು).
3) A ರಕ್ತದ ಗುಂಪು ಹೊಂದಿರುವ ಗಂಡಸು, O ರಕ್ತದ ಗುಂಪಿನ ಮಹಿಳೆಯನ್ನು ಮದುವೆಯಾಗುತ್ತಾನೆ. ಅವರ ಮಗಳು ರಕ್ತದ ಗುಂಪನ್ನು ಹೊಂದಿದ್ದಾಳೆ. ಈ ಮಾಹಿತಿಯು ನಿಮಗೆ ರಕ್ತದ A ಅಥವಾ O ಗುಣಗಳಲ್ಲಿ ಯಾವುದು ಪ್ರಬಲ ಎಂದು ಹೇಳಲು ಸಾಕಾಗುತ್ತದೆಯೇ? ಹೌದಾದರೆ ಏಕೆ ಇಲ್ಲವಾದರೆ ಏಕಲ್ಲ?
ಇಲ್ಲ. ಈಗ ಕೊಟ್ಟಿರುವ ಮಾಹಿತಿಯಿಂದ ‘A’ ಅಥವಾ ‘O’ ರಕ್ತದ ಗುಂಪಿನಲ್ಲಿ ಯಾವುದು ಪ್ರಬಲ ಎಂದು ಹೇಳಲು ಸಾಧ್ಯವಿಲ್ಲ. ಕಾರಣವೇನೆಂದರೆ ‘A’ ಗುಂಪಿನ ರಕ್ತದ ಜೀನೋಟೈಪ್ ‘AA’ ಅಥವಾ ‘AO’ ಎಂಬುದು ಗೊತ್ತಾಗಿಲ್ಲ. ಮಾಹಿತಿ ಅಪೂರ್ಣವಾಗಿರುವುದರಿಂದ ಯಾವುದು ಪ್ರಬಲ ತಿಳಿಯುವುದಿಲ್ಲ.
4) ಮಾನವರಲ್ಲಿ ಮಗುವಿನ ಲಿಂಗವು ಹೇಗೆ ನಿರ್ಧರಿತವಾಗುತ್ತದೆ ?
ಮಾನವರಲ್ಲಿ ಹೆಣ್ಣಿನ (ತಾಯಿಯ) ಕ್ರೋಮೋಜೋಮ್ XX ಮತ್ತು ಗಂಡಿನ
(ತಂದೆಯ) ಕ್ರೋಮೋಜೋಮ್ XY. ಮಗುವಿನ ತಾಯಿಯಿಂದ X ಮತ್ತು ತಂದೆಯಿಂದ X ಬಂದಾಗ ಹೆಣ್ಣು ಮಗು ಮತ್ತು ತಂದೆಯಿಂದ Y ಬಂದಾಗ ಗಂಡು ಮಗುವಾಗುತ್ತದೆ.
1) ನಿರ್ದಿಷ್ಟ ಗುಣವಿರುವ ಜೀವಿಗಳು ಜೀವಿಸಮೂಹವೊಂದರಲ್ಲಿ ಹೆಚ್ಚಾಗುವ ವಿವಿಧ ರೀತಿಗಳಾವುವು?
ನಿರ್ದಿಷ್ಟ ಗುಣವಿರುವ ಜೀವಿಗಳು ಜೀವಿ ಸಮೂಹದಲ್ಲಿ ಹೆಚ್ಚಾಗುವ ವಿವಿಧ ರೀತಿಗಳು
- ನೈಸರ್ಗಿಕ (ನಿಸರ್ಗದ) ಆಯ್ಕೆ : ಒಂದು ನಿದರ್ಶನವಾಗಿ ಜೀರುಂಡೆಯ ಗುಂಪನ್ನು ತೆಗೆದುಕೊಂಡಾಗ ಹಸಿರು ಬಣ್ಣದ ಜೀರುಂಡೆಯು ಪೊದೆಗಳ ಹಸಿರು ಎಲೆಗಳಿಂದಾಗಿ ಶತ್ರುಗಳ ದಾಳಿಗೆ ಸಿಗದೆ ಹಾಗೆಯೇ ಉಳಿದು ಜೀವಿ ಸಮೂಹದಲ್ಲಿ ಹೆಚ್ಚಾಯಿತು. ಕೆಂಪು ಜೀರುಂಡೆಗಳು ನಿರಂತರವಾಗಿ ಕಾಗೆಗಳಿಂದ ತಿನ್ನಲ್ಪಟ್ಟು ಕಡಿಮೆಯಾಯಿತು. ಇಲ್ಲಿ ಭಿನ್ನತೆಯು ಬದುಕುಳಿಯುವಿಕೆಗೆ ಅನುಕೂಲವಾಗಿದ್ದರಿಂದ ಜೀವಿಗಳು ಹೆಚ್ಚಾಯಿತು ಎಂದರೆ ಇದು ನೈಸರ್ಗಿಕವಾಗಿ ಆಯ್ಕೆಯಾಯಿತು.
- ಅನುವಂಶೀಯ ದಿಕ್ಖುತಿ : ಇನ್ನೊಂದು ನಿದರ್ಶನದಲ್ಲಿ ಕೆಂಪು ಮತ್ತು ನೀಲಿನ ಬಣ್ಣದ ಜೀರುಂಡೆಗಳ ಸಮೂಹ ವಿಸ್ತರಿಸಿದಾಗ ಆನೆಯೊಂದು ಬಂದು ಜೀರುಂಡೆಗಳ ಬಹು ಭಾಗವನ್ನು ಕೊಲ್ಲುತ್ತದೆ. ಆಕಸ್ಮಿಕವಾಗಿ ಉಳಿದುಕೊಂಡ ಜೀರುಂಡೆಗಳು ನಿಧಾನವಾಗಿ ಹೆಚ್ಚಾಗುತ್ತವೆ. ಇಲ್ಲಿ ಭಿನ್ನತೆಯು ಬದುಕುಳಿಯುವ ಪ್ರಯೋಜನವನ್ನು ನೀಡದಿದ್ದರೂ, ಸಮೂಹದಲ್ಲಿನ ಅವಘಡಗಳು ಕೆಲವು ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಬಹುದು. ಇದು ಯಾವುದೇ ಹೊಂದಾಣಿಕೆಗಳಿಲ್ಲದೆ ವೈವಿಧ್ಯತೆಯನ್ನು ಒದಗಿಸುವ ಅನುವಂಶೀಯ ದಿಕ್ಷುತಿಯ ಕಲ್ಪನೆಯಾಗಿದೆ.
2) ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಸಿಕೊಂಡ ಗುಣಲಕ್ಷಣಗಳು ಅನುವಂಶೀಯವಾಗುವುದಿಲ್ಲ. ಏಕೆ?
ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶೀಯವಾಗುವುದಿಲ್ಲ. ಏಕೆಂದರೆ ಈ ಗುಣಗಳು ಲಿಂಗಾಣು ಕೋಶಗಳ ಡಿ.ಎನ್.ಎ ನಲ್ಲಿ ಬದಲಾಗುವುದಿಲ್ಲ. ಜೀವಿಯ ಜೀವಿತಾವಧಿಯ ದೈಹಿಕ ಗುಣ ಎಂದರೆ ದೇಹದ ಕಡಿಮೆ ತೂಕ. ಇಲಿಯ ಬಾಲ ಕತ್ತರಿಸಿ ಮೊಟಕು ಮಾಡುವ ಗುಣ ಇವ್ಯಾವುದೂ ಲಿಂಗಾಣುಕೋಶದ ಡಿ.ಎನ್.ಎಗೆ ವರ್ಗಾವಣೆಯಾಗುವುದಿಲ್ಲವಾದ್ದರಿಂದ ಈ ಗುಣಗಳು ಅನುವಂಶೀಯವಾಗಿರುವುದಿಲ್ಲ.
3) ಕಡಿಮೆ ಸಂಖ್ಯೆಯ ಹುಲಿಗಳು ಬದುಕುಳಿದಿರುವುದು ತಳಿಶಾಸ್ತ್ರದ ದೃಷ್ಟಿ ಕೋನದಿಂದ ಚಿಂತೆಗೆ ಕಾರಣವಾಗಿದೆ ಏಕೆ?
ಕಡಿಮೆ ಸಂಖ್ಯೆಯ ಹುಲಿಗಳು ಬದುಕುಳಿ ಯುತ್ತಿರುವುದು ತಳಿಶಾಸ್ತ್ರದ ದೃಷ್ಟಿಕೋನದಿಂದ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಒಂದು ನಿರ್ದಿಷ್ಟ ಪರಿಸರದಲ್ಲಿ ಬದುಕಲು ಬೇಕಾದ ವಂಶವಾಹಿಗಳು ಹುಲಿಯಲ್ಲಿರುತ್ತದೆ. ಅದು ಬಹಳ ವರ್ಷಗಳಿಂದ ವಿಕಾಸವಾಗಿ ಬಂದಿರುತ್ತದೆ. ಈಗ ಅದು ಸಂಖ್ಯೆಯಲ್ಲಿ ಕಡಿಮೆಯಾಗುತ್ತಾ ನಿರ್ನಾಮವಾದರೆ ಅದರಲ್ಲಿರುವ ಬದುಕುಳಿಯುವ ಜೀನ್‌ಗಳೂ ಸಹ ನಾಶವಾಗುತ್ತದೆ. ಇದರಿಂದ ಅದರ ಮುಂದಿನ ಸಂತತಿಗೆ ಅದು ಎನೂ ಕೊಡುಗೆಯಾಗಿ ಕೊಡಲು ಸಾಧ್ಯವಿಲ್ಲ.
ಹುಲಿಗಳ ಸಂತತಿ ಕಡಿಮೆಯಾದರೆ ಪರಿಸರದಲ್ಲಿ ಸಮತೋಲನ ತಪ್ಪುತ್ತದೆ. ಏಕೆಂದರೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಪರಿಸರದಲ್ಲಿ ಅಸಮತೋಲನವುಂಟಾಗುತ್ತದೆ.
1) ಹೊಸ ಪ್ರಭೇದವೊಂದರ ಉಗಮಕ್ಕೆ ಕಾರಣವಾಗುವ ಅಂಶಗಳು ಯಾವುವು ?
ಹೊಸ ಪ್ರಭೇದವೊಂದು ರೂಪುಗೊಳ್ಳಲು ಅಥವಾ ಉಗಮವಾಗಲು ನಿಸರ್ಗದ ಆಯ್ಕೆ, ಅನುವಂಶೀಯ ದಿಕ್ಚ್ಯುತಿ ಮತ್ತು ಜೀವಿಗಳು ಪಡೆದುಕೊಂಡ ಹೊಸಗುಣಗಳು ಇವೆಲ್ಲವುಗಳಿಂದ ಹೊಸ ಪ್ರಭೇದದ ಸೃಷ್ಟಿಯಾಗುತ್ತದೆ. ಇಷ್ಟೇ ಅಲ್ಲದೆ ರೂಪಾಂತರ ಪ್ರಕ್ರಿಯೆ, ಪರಿಸರದ ಅಂಶಗಳು, ಸ್ಥಳೀಯ ಅಂಶಗಳು, ಇವೂ ಸಹ ಕಾರಣವಾಗುತ್ತವೆ.
2) ಸ್ವಕೀಯ ಪರಾಗಸ್ಪರ್ಶ ಹೊಂದುವ ಸಸ್ಯಪ್ರಭೇದಗಳ ಪ್ರಭೇದೀಕರಣದಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುತ್ತದೆಯೇ ? ಹೌದಾದರೆ ಏಕೆ ಇಲ್ಲವಾದರೆ ಏಕಲ್ಲ?
ಭೌಗೋಳಿಕ ಬೇರ್ಪಡುವಿಕೆಯಿಂದ ಸ್ವಕೀಯ ಪರಾಗಸ್ಪರ್ಶ ಹೊಂದುವ ಸಸ್ಯಗಳಲ್ಲಿ ಪರಾಗಸ್ಪರ್ಶವು ಬೇರೆ ಸಸ್ಯಗಳೊಡನೆ ಏರ್ಪಡಲಾಗುವುದಿಲ್ಲ. ಆ ಸಸ್ಯಗಳ ಹೂವಿನಿಂದ ಅದೇ ಸಸ್ಯದ ಹೂವಿನೊಡನೆ ಪರಾಗಸ್ಪರ್ಶ ನಡೆಸಬೇಕಾಗುತ್ತದೆ. ಇಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಪ್ರಭೇದೀಕರಣವನ್ನು ತಡೆಗಟ್ಟಲು ಸಾಧ್ಯವಿಲ್ಲ.
3) ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳ ಪ್ರಭೇದೀಕರಣದಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುತ್ತದೆಯೆ ? ಹೌದಾದರೆ ಏಕೆ ಇಲ್ಲವಾದರೆ ಏಕಲ್ಲ?
ಇಲ್ಲ. ಏಕೆಂದರೆ ಭೌಗೋಳಿಕ ಬೇರ್ಪಡುವಿಕೆಯು ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳ ಮೇಲೆ ಪ್ರಭಾವ ಬೀರುವುದಿಲ್ಲ. ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳಲ್ಲಿ ಪೋಷಕ ಜೀವಿಯಿಂದ DNA ಮುಖಾಂತರ ಗುಣಗಳು ಮುಂದಿನ ಪೀಳಿಗೆಗೆ ಬರುವುದರಿಂದ ಪ್ರಭೇದೀಕರಣದ ಪ್ರಶ್ನೆಯೇ ಇಲ್ಲ. ಆದರೂ ಭೌಗೋಳಿಕ ಬೇರ್ಪಡುವಿಕೆ ಪರಕೀಯ ಪರಾಗಸ್ಪರ್ಶ ಮಾಡುವ ಸಸ್ಯಗಳಲ್ಲಿ ಪ್ರಮುಖ ಅಂಶವಾಗುತ್ತದೆ. ಭೌಗೋಳಿಕವಾಗಿ ಬೇರ್ಪಟ್ಟ ಎರಡು ಜೀವಿಗಳಲ್ಲಿ ಭಿನ್ನತೆಯು ಸೇರುತ್ತಾ ಹೋಗುತ್ತದೆ.
1) ಜೀವ ವಿಕಾಸೀಯ ನಿಯಮಗಳನುಸಾರ ಎರಡು ಪ್ರಭೇದಗಳು ಎಷ್ಟು ಹತ್ತಿರವಾಗಿವೆ ಎಂದು ತಿಳಿಸುವ ಗುಣಗಳಿಗೆ ಒಂದು ಉದಾಹರಣೆ ಕೊಡಿ.
ಜೀವ ವಿಕಾಸೀಯ ನಿಯಮಗಳಿಗನುಸಾರ ಎರಡು ಪ್ರಭೇದಗಳು ತುಂಬಾ ಹತ್ತಿರವಾಗಿವೆ ಎಂದು ತಿಳಿಸುವ ಗುಣಗಳಿಗೆ ಒಂದು ನಿದರ್ಶನವೆಂದರೆ – ಗರಿಗಳು ಹಕ್ಕಿಗಳ ದೇಹವನ್ನು ಚಳಿಯಿಂದ ರಕ್ಷಿಸಲೆಂದೇ ಶುರುವಾದವು. ಆದರೆ ನಂತರದಲ್ಲಿ ಗರಿಗಳು ಹಕ್ಕಿಗಳಿಗೆ ಹಾರಲು ಉಪಯುಕ್ತವಾದವು. ಕೆಲವೊಂದು ಡೈನೋಸಾರ್‌ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂದಿದ್ದವು. ಹಕ್ಕಿಗಳು ಕಾಲಾನಂತರದಲ್ಲಿ ಗರಿಗಳನ್ನು ಬಳಸಿ ಹಾರಲು ಹೊಂದಿಕೊಂಡಂತೆ ಕಾಣುತ್ತದೆ. ಡೈನೋಸಾರ್‌ಗಳು ಸರೀಸೃಪಗಳಾಗಿದ್ದರಿಂದ ಹಕ್ಕಿಗಳು ಖಂಡಿತವಾಗಿ ಸರೀಸೃಪಗಳ ಅತಿ ಹತ್ತಿರದ ಸಂಬಂಧಿಗಳಾಗಿವೆ.
2) ಚಿಟ್ಟೆಯ ರೆಕ್ಕೆ ಹಾಗೂ ಬಾವಲಿಯ ರೆಕ್ಕೆಗಳನ್ನು ಸಮರೂಪಿ ಅಂಗಗಳೆಂದು ಪರಿಗಣಿಸಬಹುದೆ? ಹೌದಾದರೆ ಏಕೆ ಇಲ್ಲವಾದರೆ ಏಕಲ್ಲ?
ಚಿಟ್ಟೆಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ ಎರಡೂ ಒಂದೇ ರೀತಿಯ ಕಾರ್ಯವನ್ನು ಮಾಡುತ್ತದೆ. ಎರಡೂ ತಮ್ಮ ರೆಕ್ಕೆಗಳಿಂದ ಹಾರುತ್ತವೆ. ಆದರೆ ಎರಡೂ ರೆಕ್ಕೆಗಳ ವಿನ್ಯಾಸ, ರಚನೆ ಹಾಗೂ ಘಟಕಗಳು ಬಹಳ ಭಿನ್ನವಾಗಿವೆ. ಎರಡೂ ಸಮರೂಪಿ ಅಂಗಗಳನ್ನು ಹೊಂದಿಲ್ಲ.
3) ಪಳೆಯುಳಿಕೆಗಳು ಎಂದರೇನು? ಅವು ಜೀವವಿಕಾಸ ಪ್ರಕ್ರಿಯೆಯ ಕುರಿತು ನಮಗೇನು ತಿಳಿಸುತ್ತವೆ?
ಸಾಮಾನ್ಯವಾಗಿ ಜೀವಿಗಳು ಸತ್ತಾಗ ಅವುಗಳ ಇಡೀ ದೇಹ ಅಥವಾ ಕೆಲವು ಭಾಗಗಳು ಸುರಕ್ಷಿತವಾಗಿ ಸಂರಕ್ಷಿಸಲ್ಪಟ್ಟಿರುತ್ತದೆ. ಈ ರೀತಿ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ‘ಪಳೆಯುಳಿಕೆ’ ಎನ್ನುವರು. ಪಳೆಯುಳಿಕೆಗಳ ಅಂಗರಚನೆಯ ವಿಶ್ಲೇಷಣೆಯು ಜೀವ ವಿಕಾಸೀಯ ಸಂಬಂಧಗಳು ಎಷ್ಟು ಹಿಂದಿನದೆಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಪಳೆಯುಳಿಕೆಗಳು ನಮಗೆ ಸರಳವಾದ ರಚನೆಗಳಿಂದ ಹೇಗೆ ಸಂಕೀರ್ಣ ರಚನೆಯ ಜೀವಿಗಳಾಯಿತೆಂಬುದನ್ನು ತಿಳಿಸುತ್ತದೆ. ಉದಾ : ಕಾಡು ಎಲೆಕೋಸಿನ ವಿಕಾಸ, ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಕಾಡುಕೋಸಿನಿಂದ ಒತ್ತೊತ್ತಾದ ಎಲೆಗಳ ಕೋಸು, ಹೂಕೋಸು, ಗೆಡ್ಡೆಕೋಸು ಮತ್ತು ಅಗಲ ಎಲೆಗಳ ತಳಿಗಳಿಂದ ಕೇಲ್ ಈ ರೀತಿ ಅಭಿವೃದ್ಧಿ ಪಡಿಸಿದ್ದಾರೆ.
1) ನೋಡಲು ಪರಸ್ಪರ ವಿಭಿನ್ನವಾಗಿರುವ ಗಾತ್ರ, ಬಣ್ಣ ಮತ್ತು ರೂಪ ಹೊಂದಿರುವ ಮಾನವ ಜೀವಿಗಳೆಲ್ಲರೂ ಒಂದೇ ಪ್ರಭೇದಕ್ಕೆ ಸೇರಿದವರೆಂದು ಹೇಳಲಾಗುತ್ತದೆ ?
ಭೂಗ್ರಹದ ಉದ್ದಗಲಕ್ಕೂ ಮಾನವನ ರೂಪ ಹಾಗೂ ಲಕ್ಷಣಗಳಲ್ಲಿ ಆಗಾಧವಾದ ವೈವಿಧ್ಯತೆಯಿದೆ. ಇವರ ಗಾತ್ರ ಹಾಗೂ ಬಣ್ಣಗಳಲ್ಲಿಯೂ ವೈವಿಧ್ಯತೆಯಿದೆ. ಇದು ಇವರು ವಾಸಿಸುವ ಪರಿಸರದ ಪ್ರಭಾವ ಎಲ್ಲಾ ಮಾನವರ ಪ್ರಭೇದವು ಒಂದೇ ಆಗಿದೆ. ಎಲ್ಲಾಮಾನವರಲ್ಲೂ ಪ್ರಭೇದದ ಗುಣಲಕ್ಷಣಗಳು ಒಂದೇ ಆಗಿವೆ. ಎಲ್ಲಾ ಅಂಗಗಳ ಕಾರ್ಯವೂ, ರಚನೆಯೂ ಒಂದೇ ಆಗಿರುವುದರಿಂದ ಮಾನವ ಜೀವಿಗಳೆಲ್ಲ ಒಂದೇ ಪ್ರಭೇದಕ್ಕೆ ಸೇರಿದವರೆಂದು ಹೇಳಬಹುದು.
2) ಜೀವವಿಕಾಸೀಯ ನಿಯಮಗಳನುಸಾರ ಬ್ಯಾಕ್ಟಿರಿಯಾ, ಜೇಡ, ಮೀನು ಹಾಗೂ ಚಿಂಪಾಜಿಗಳಲ್ಲಿ ಯಾವುದು ಉತ್ತಮ ದೇಹವಿನ್ಯಾಸ ಹೊಂದಿದೆ? ಏಕೆ ಮತ್ತು ಏಕಲ್ಲ?
ಜೀವವಿಕಾಸೀಯ ನಿಯಮಗಳಿಗನುಸಾರ ಈ ಎಲ್ಲಾ ಜೀವಿಗಳ ದೇಹವಿನ್ಯಾಸ ಅವುಗಳು ಪರಿಸರದಲ್ಲಿ ಜೀವಿಸಲು ಯೋಗ್ಯವಾದಷ್ಟನ್ನು ಪಡೆದುಕೊಂಡಿದ್ದವು. ಚಿಂಪಾಂಜಿಯು ಶಕ್ತಿಯುತವಾದ ಕಾಲುಗಳನ್ನು ಹೆಚ್ಚಿನ ಕೆಲಸಗಳಿಗಾಗಿ ಪಡೆದಿದ್ದರೆ, ಬ್ಯಾಕ್ಟಿರಿಯಾವು ಅತಿ ಹೆಚ್ಚಿನ ಉಷ್ಣತೆಯಲ್ಲೂ ಜೀವಿಸುವ ಗುಣವನ್ನು ಹೊಂದಿತ್ತು.
ಅಭ್ಯಾಸ
- ಮೆಂಡಲರ ಪ್ರಯೋಗವೊಂದರಲ್ಲಿ ನೇರಳೆ ಹೂ ಬಿಡುವ ಎತ್ತರದ ಸಸ್ಯಗಳೊಂದಿಗೆ ಬಿಳಿ ಹೂ ಬಿಡುವ ಕುಬ್ಬ ಸಸ್ಯಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಿಂದ ಪಡೆದ ಸಂತತಿಯೆಲ್ಲವು ನೇರಳೆ ಹೂಗಳನ್ನು ಹೊಂದಿವೆ. ಆದರೆ, ಅರ್ಧದಷ್ಟು ಕುಬ್ಧವಾಗಿವೆ. ಇದರಿಂದ ನಾವು ಎತ್ತರ ಸಸ್ಯದ ತಳಿಗುಣವನ್ನು ಹೀಗೆ ಸೂಚಿಸಬಹುದು?
ಎ. TTWW
ಬಿ. TTww
ಸಿ. TtWW
ಡಿ. TtWw
ಉ : ಬಿ. Ttww
- ಸಮರೂಪಿ ಅಂಗಗಳಿಗೆ ಉದಾಹರಣೆಯೆಂದರೆ,
ಎ. ನಮ್ಮ ತೋಳು ಮತ್ತು ನಾಯಿಯ ಮುಂಗಾಲು
ಬಿ. ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು
ಸಿ. ಆಲೂಗೆಡ್ಡೆ ಮತ್ತು ಹುಲ್ಲಿನ ಉಪಕಾಂಡಗಳು
ಡಿ. ಮೇಲಿನ ಎಲ್ಲವೂ
ಉ : ಬಿ. ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು
- ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ನಾವು ಹೆಚ್ಚು ಸಂಬಂಧಿಸಿರುವುದು
ಎ. ಒಬ್ಬ ಚೀನೀ ಶಾಲಾ ಬಾಲಕ
ಬಿ. ಒಂದು ಚಿಂಪಾಂಜಿ
ಸಿ. ಒಂದು ಜೇಡ
ಡಿ. ಒಂದು ಬ್ಯಾಕ್ಟಿರಿಯಾ
ಉ : ಎ. ಒಬ್ಬ ಚೀನೀ ಶಾಲಾ ಬಾಲಕ
4 ಅಧ್ಯಯನವೊಂದರ ಪ್ರಕಾರ ತಿಳಿಬಣ್ಣದ ಕಣ್ಣುಗಳಿರುವ ಮಕ್ಕಳು ತಿಳಿಗಣ್ಣಿನ ಪೋಷಕರನ್ನು ಹೊಂದಿರುತ್ತಾರೆಂದು ತಿಳಿದು ಬಂದಿದೆ. ಇದನ್ನಾಧರಿಸಿ ತಿಳಿಗಣ್ಣಿಗೆ ಕಾರಣವಾದ ಗುಣ ಪ್ರಬಲವೇ ಅಥವಾ ದುರ್ಬಲವೇ? ಏಕೆ ಅಥವಾ ಏಕಲ್ಲ?
ಇಲ್ಲಿ ಕೊಟ್ಟಿರುವ ಮಾಹಿತಿ ಅಪೂರ್ಣವಾಗಿದೆ. ಏಕೆಂದರೆ ಯಾವ ಗುಣವೇ ಆಗಲಿ ಅದು ಪ್ರಬಲವೋ ದುರ್ಬಲವೋ ಎಂದು ತಿಳಿಯಬೇಕಾದರೆ ಮೂರು ಪೀಳಿಗೆಯ ಮಾಹಿತಿ ಕೊಡಬೇಕು. ಇಲ್ಲಿ ಕೇವಲ ಎರಡೇ ಪೀಳಿಗೆಯ ಮಾಹಿತಿ ಇರುವುದರಿಂದ ತಿಳಿಗಣ್ಣಿಗೆ ಕಾರಣವಾದ ಗುಣ ಪ್ರಬಲವೋ, ದುರ್ಬಲವೋ ಹೇಳುವುದು ಸಾಧ್ಯವಿಲ್ಲ.
ಅಥವಾ
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಕ್ಕಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದೂ ಎಲ್ಲರೂ ತಿಳಿಗಣ್ಣಿನವರೇ ಆಗಿರುವುದರಿಂದ ಈ ಗುಣವು ಪ್ರಬಲವಾಗಿರಬಹುದು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಕ್ಕಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲರೂ ತಿಳಿಗಣ್ಣಿನವರೇ ಆಗಿರುವುದರಿಂದ ಈ ಗುಣವು ಪ್ರಬಲವಾಗಿರಬಹುದು.
5 ಅಧ್ಯಯನ ಕ್ಷೇತ್ರಗಳಾದ – ಜೀವವಿಕಾಸ ಹಾಗೂ ವರ್ಗೀಕರಣ ಹೇಗೆ ಅಂತರ್ ಸಂಬಂಧಿಸಿದೆ?
ಜೀವವಿಕಾಸವೆಂದರೆ ಸರಳ ವಿನ್ಯಾಸಗಳನ್ನು ಉಳಿಸಿ ಬೆಳೆಸುತ್ತಲೇ ಸಂಕೀರ್ಣವಾದ ವಿನ್ಯಾಸಗಳಿಗೆ ದಾರಿ ಮಾಡಿ ಕೊಡುವ ಪ್ರಕ್ರಿಯೆ. ವರ್ಗೀಕರಣದಲ್ಲಿ ಬಹುತೇಕ ಗುಣಗಳನ್ನು ಜೀವಿಗಳು ಹಂಚಿಕೊಳ್ಳುತ್ತವೆ ಆದರೆ ಎಲ್ಲವನ್ನೂ ಅಲ್ಲ. ವರ್ಗೀಕರಣ ಗುಂಪುಗಳನ್ನು ಮಾಡಲು ಅನುಕೂಲವಾಗುವಂತೆ ಪ್ರಭೇದಗಳ ಶ್ರೇಣೀಕರಣ ಉಂಟಾಗುತ್ತದೆ. ಎರಡು ಪ್ರಭೇದಗಳ ಸಾಮಾನ್ಯ ಲಕ್ಷಣಗಳು ಹೆಚ್ಚಿದಂತೆಲ್ಲಾ ಅವುಗಳ ನಡುವಿನ ಸಂಬಂಧವೂ ನಿಕಟವಾಗುತ್ತದೆ. ನಿಕಟ ಸಂಬಂಧವಿದ್ದಷ್ಟೂ ಇತ್ತೀಚಿನ ಸಾಮಾನ್ಯ ಪೂರ್ವಜರನ್ನು ಹೊಂದಿರುತ್ತದೆ. ಉದಾಹರಣೆ: ಒಬ್ಬ ಸಹೋದರ ಸಹೋದರಿಯರು ನಿಕಟ ಸಂಬಂಧಿಗಳು, ಒಂದು ಪೀಳಿಗೆಯ ಹಿಂದೆ ಅವರು ತಮ್ಮ ಪೋಷಕರನ್ನು ಸಾಮಾನ್ಯ ಪೂರ್ವಜರಾಗಿ ಹೊಂದಿರುತ್ತಾರೆ. ಆ ಹುಡುಗಿ ಹಾಗೂ ಸೋದರ ಸಂಬಂಧಿಗಳು ಸಂಬಂಧಿಕರೇ ಆದರೂ ಅವಳ ಸಹೋದರನಷ್ಟು ನಿಕಟವಲ್ಲ. ಏಕೆಂದರೆ ಸೋದರ ಸಂಬಂಧಿಗಳ ಸಾಮಾನ್ಯ ಪೂರ್ವಜರಾದ ಅಜ್ಜ- ಅಜ್ಜಿಯರು ಅವರಿಗಿಂತ ಎರಡು ಪೀಳಿಗೆಗಳ ಹಿಂದಿನವರು. ಮೊದಲ ಪೀಳಿಗೆಯವರಲ್ಲ. ಆದ್ದರಿಂದ ಜೀವ ವಿಕಾಸೀಯ ಸಂಬಂಧಗಳ ಪ್ರತಿಬಿಂಬವೇ ಪ್ರಭೇದಗಳ ವರ್ಗೀಕರಣವೆಂದು ನಾವೀಗ ತಿಳಿದು ಪ್ರಶಂಸಿಸಬಹುದು.
- ರಚನಾನುರೂಪಿ ಹಾಗೂ ಕಾರ್ಯಾನುರೂಪಿ ಅಂಗಗಳನ್ನು ಉದಾಹರಣೆಯೊಂದಿಗೆ ವಿವರಿಸಿ.
ರಚನಾನುರೂಪಿ ಅಂಗಗಳು ಎಂದರೆ ಒಂದೇ ರೀತಿಯ ರಚನೆಯನ್ನು ಹೊಂದಿದೆ. ವಿವಿಧ ರೀತಿಯ ಕೆಲಸವನ್ನು ಮಾಡುತ್ತವೆ. ಉದಾಹರಣೆಗೆ ಹಕ್ಕಿಗಳು, ಸರೀಸೃಪಗಳು. ಉಭಯವಾಸಿಗಳು, ಸ್ತನಿಗಳಿಗೂ ನಾಲ್ಕು ಕಾಲುಗಳಿವೆ.


ಕಾರ್ಯಾನುರೂಪಿ ಅಂಗಗಳು ಎಂದರೆ ಒಂದೇ ರೀತಿಯ ಕಾರ್ಯವನ್ನು ಮಾಡಿದರೂ ಅವುಗಳ ವಿನ್ಯಾಸ, ರಚನೆ ಹಾಗೂ ಘಟಕಗಳು ಬಹಳ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಬಾವಲಿಯ ರೆಕ್ಕೆ ಮತ್ತು ಹಕ್ಕಿಯ ರೆಕ್ಕೆ ಇವು ಹಾರಾಡಲು ಬಳಕೆಯಾಗುವುದರಿಂದ ಒಂದೇ ರೀತಿ ಕಂಡರೂ ಅವುಗಳ ಮೂಲ ಒಂದೇ ಅಲ್ಲ.
7. ನಾಯಿಯೊಂದರ ಕೂದಲಬಣ್ಣದ ಪ್ರಬಲತೆಯನ್ನು ಕಂಡುಹಿಡಿಯುವ ಗುರಿ ಇರುವ ಯೋಜನೆಯೊಂದನ್ನು ರೂಪಿಸಿ:
ನಾಯಿಯೊಂದರ ಕೂದಲ ಬಣ್ಣ ಕಪ್ಪು ಮತ್ತು ಕಂದು ಬಣ್ಣವಾಗಿರಲಿ. ಕಪ್ಪು ಬಣ್ಣದ ಜೀನ್ BB ಮತ್ತು ಕಂದು ಬಣ್ಣದ ಜೀನ್ bb ಮೊದಲ ಪೀಳಿಗೆಯಲ್ಲಿ ಇವೆರಡರ ಸಂತತಿ

- ಜೀವವಿಕಾಸೀಯ ಸಂಬಂಧಗಳನ್ನು ನಿರ್ಧರಿಸುವಲ್ಲಿ ಪಳೆಯುಳಿಕೆಗಳ ಪ್ರಾಮುಖ್ಯತೆಯನ್ನು ವಿವರಿಸಿ?
ಪಳೆಯುಳಿಕೆಗಳ ಅಂಗರಚನೆಯ ವಿಶ್ಲೇಷಣೆಯು ಜೀವ ವಿಕಾಸೀಯ ಸಂಬಂಧಗಳು ಎಷ್ಟು ಹಿಂದಿನದೆಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಪಳೆಯುಳಿಕೆಗಳು ಸರಳವಾದ ರಚನೆಗಳಿಂದ ಹೇಗೆ ಸಂಕೀರ್ಣ ರಚನೆಯು ಉಂಟಾಯಿತೆಂಬುದನ್ನು ತಿಳಿಸುತ್ತದೆ. ಪಳೆಯುಳಿಕೆಗಳ ಅಭ್ಯಾಸದಿಂದ ಪ್ರಭೇದಗಳ ಮಧ್ಯೆ ಇರುವ ಸಂಬಂಧ ತಿಳಿಯುತ್ತದೆ. ಪಳೆಯುಳಿಕೆಗಳು ಹೊಸ ಪ್ರಭೇದವು ಹಳೆ ಪ್ರಭೇದದಿಂದ ಹೇಗೆ ಉಂಟಾಯಿತೆಂಬುದನ್ನು ಸೂಚಿಸುತ್ತದೆ. ಈ ರೀತಿ ಪಳೆಯುಳಿಕೆಗಳು ಜೀವ ವಿಕಾಸೀಯ ಸಂಬಂಧಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತವನ್ನು ವಹಿಸುತ್ತದೆ.
- ನಿರ್ಜೀವ ದ್ರವ್ಯಗಳಿಂದ ಜೀವನ ಉಗಮವಾಗಿದೆ ಎಂಬುದಕ್ಕೆ ನಮ್ಮ ಬಳಿ ಇರುವ ಸಾಕ್ಷ್ಯಾಧಾರಗಳೇನು?
ಜೆ.ಬಿ. ಎಸ್. ಹಾಲ್ವೇನ್ ಎಂಬ ಬ್ರಿಟಿಷ್ ವಿಜ್ಞಾನಿ ಭೂಮಿಯು ರೂಪುಗೊಂಡ ನಂತರದಲ್ಲಿ ಕಂಡು ಬಂದ ನಿರವಯವ ಅಣುಗಳಿಂದ (ನಿರ್ಜೀವ ದ್ರವ್ಯಗಳಿಂದ) ಜೀವದ ಉಗಮ ಪ್ರಾರಂಭವಾಗಿರಬಹುದೆಂದು ಸೂಚಿಸಿದರು. ಈಗಿರುವುದಕ್ಕಿಂತಲೂ ವಿಭಿನ್ನವಾಗಿದ್ದ ಆ ಸಮಯದಲ್ಲಿ ಭೂಮಿಯ ಮೇಲಿದ್ದ ಪರಿಸ್ಥಿತಿಯು ಬಹುಶಃ ಜೀವದ ಉಗಮಕ್ಕೆ ಅಗತ್ಯವಾಗಿದ್ದ ಸಾವಯವ ಅಣುಗಳ ಉತ್ಪಾದನೆಗೆ ಸಹಾಯಕವಾಗಿರಬಹುದೆಂದು ಊಹಿಸಿದರು. ಹೀಗೆ ಮುಂದುವರಿದು ರಾಸಾಯನಿಕ ಸಂಶ್ಲೇಷಣೆಗಳಿಂದ ಪ್ರಾರಂಭಿಕ ಪ್ರಾಚೀನ ಜೀವಿಗಳು ಉಂಟಾಗಿರಬಹುದು.
ಸ್ಪ್ಯಾನಿ ಎಲ್. ಮಿಲ್ಲರ್ ಮತ್ತು ಹೆರಾಲ್ಡ್ ಸಿ. ಯೂರಿಯವರು 1953ರಲ್ಲಿ ಪ್ರಯೋಗವೊಂದನ್ನು ನಡೆಸಿ ಉತ್ತರಿಸಿದರು. ಪ್ರಾಚೀನ ಭೂಮಿಯ ಮೇಲಿದ್ದ ಪರಿಸ್ಥಿತಿಯನ್ನು ಅದೇ ವಾತಾವರಣವನ್ನು ನೀರಿನ ಮೇಲೆ ನಿರ್ಮಿಸಿದರು. ಇದನ್ನು 100° C ಗಿಂತ ಕಡಿಮೆ ತಾಪದಲ್ಲಿಟ್ಟರು. ಮಿಂಚಿನ ರೀತಿಯ ವಿದ್ಯುತ್ ಕಿಡಿಗಳನ್ನು ಅನಿಲದೊಳಗೆ ಹಾಯಿಸಿದರು. ಒಂದು ವಾರದ ನಂತರ ಮಿಥೇನ್‌ನಲ್ಲಿದ್ದ 15% ಕಾರ್ಬನ್ ಸರಳ ಸಾವಯವ ಸಂಯುಕ್ತಗಳಾಗಿ ಪರಿವರ್ತನೆಯಾಗಿದ್ದವು. ಇದರಲ್ಲಿ ಪ್ರೋಟಿನ್ ಅಣುಗಳ ರಚನೆಗೆ ಅಗತ್ಯವಾಗಿದ್ದ ಅಮೈನೋ ಆಮ್ಲಗಳು ಉಂಟಾಗಿದ್ದವು. ಈ ರೀತಿ ಭೂಮಿಯ ಮೇಲೆ ಜೀವಿಗಳ ಉಗಮವಾಗಿದೆ.
- ಅಲೈಂಗಿಕ ಸಂತಾನೋತ್ಪತ್ತಿಯಿಂದಾದ ವಿಭಿನ್ನತೆಗಳಿಗಿಂತ ಲೈಂಗಿಕ ಸಂತಾನೋತ್ಪತ್ತಿಯಿಂದಾದ ಭಿನ್ನತೆಗಳು ಹೆಚ್ಚು ಸಮರ್ಥವಾಗಿರುತ್ತವೆ ಎಂಬುದನ್ನು ವಿವರಿಸಿ?

ಜೀವಿಯೊಂದರ ಆಲೈಂಗಿಕ ಸಂತಾನೋತ್ಪತ್ತಿಯ ಪರಿಸ್ಥಿತಿಯನ್ನು ಮೇಲಿನ ಚಿತ್ರ ಪ್ರತಿನಿಧಿಸುತ್ತಿದೆ. ಒಂದು ಬ್ಯಾಕ್ಷೀಯಾ ವಿಭಜನೆಯಾದರೆ ಅದರ ಫಲಿತವಾದ ಎರಡು ಬ್ಯಾಕ್ಟಿರಿಯಾಗಳು ಪರಸ್ಪರ ತುಂಬಾ ಹೋಲುತ್ತವೆ. ಅವುಗಳ ನಡುವೆ ಡಿ.ಎನ್.ಎ ಪ್ರತೀಕರಣದಲ್ಲಿನ ಸಣ್ಣ ತಪ್ಪುಗಳ ಕಾರಣದಿಂದ ಬಹಳ ಚಿಕ್ಕ ಭಿನ್ನತೆಗಳು ಮಾತ್ರ ಉಂಟಾಗುತ್ತದೆ.
ಆದರೆ ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಇನ್ನೂ ಹೆಚ್ಚಿನ ಭಿನ್ನತೆಗಳನ್ನು ಉಂಟಾಗುತ್ತವೆ. ಒಂದು ಮಗು ಮಾನವನ ಎಲ್ಲಾ ಮೂಲಭೂತ ಗುಣಗಳನ್ನು ಹೊಂದಿದ್ದರೂ ಪೋಷಕರ ಪಡಿಯಚ್ಚಿನಂತೆ ಕಾಣುವುದಿಲ್ಲ. ಬಹಳಷ್ಟು ಭಿನ್ನತೆಗಳಿರುತ್ತವೆ.
ಇದಕ್ಕೆ ಕಾರಣಗಳು
- ತಂದೆ ಮತ್ತು ತಾಯಿ ಎಂದರೆ ಎರಡು ಪೋಷಕರಿಂದ ಬರುವ ಅನುವಂಶೀಯ ಗುಣಗಳಲ್ಲಿ ಆಗುವ ವಿನಿಮಯ ಜೋಡಣೆ
- ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಲ್ಲಿ ಆಗುವ ಭಿನ್ನತೆ
- ನೈಸರ್ಗಿಕ ಎಂದರೆ ನಿಸರ್ಗದ ಆಯ್ಕೆ
ಇವೆಲ್ಲವುಗಳಿಂದ ಅಲೈಂಗಿಕ ಸಂತಾನೋತ್ಪತ್ತಿಯಿಂದಾಗುವ ವಿಭಿನ್ನತೆಗಿಂತ ಲೈಂಗಿಕ ಸಂತಾನೋತ್ಪತ್ತಿಯಿಂದಾಗುವ ವಿಭಿನ್ನತೆಗಳು ಹೆಚ್ಚು ಸಮರ್ಥವಾಗಿರುತ್ತವೆ ಎಂದು ಹೇಳಬಹುದು.
11 ಒಂದು ಸಂತತಿಯಲ್ಲಿ ಗಂಡು ಮತ್ತು ಹೆಣ್ಣು ಪೋಷಕರ ಸಮಾನ ಅನುವಂಶೀಯ ಕೊಡುಗೆಯನ್ನು ಹೇಗೆ ಖಚಿತಪಡಿಸಿಕೊಳ್ಳುವಿರಿ?
ಗಂಡು ಮತ್ತು ಹೆಣ್ಣು ಪೋಷಕರು ತಮ್ಮ ಸಂತತಿಗೆ ಸಮಾನ ಪ್ರಮಾಣದ ಕೊಡುಗೆಯನ್ನು ಕೊಡುತ್ತಾರೆ. ಪ್ರತಿಯೊಂದು ಜೀವಕೋಶವು ವರ್ಣತಂತುವೊಂದರ ಎರಡು ಪ್ರತಿಗಳನ್ನು ಹೊಂದಿರುತ್ತದೆ. ಈ ಎರಡು ಪ್ರತಿಗಳಲ್ಲಿ ಒಂದು ಪ್ರತಿಯನ್ನು ಗಂಡು ಮತ್ತು ಇನ್ನೊಂದು ಪ್ರತಿಯನ್ನು ಹೆಣ್ಣು ಪೋಷಕ ಜೀವಿಗಳಿಂದ ಪಡೆದಿರುತ್ತದೆ. ಪ್ರತಿಯೊಂದು ಲಿಂಗಾಣು ಕೋಶವು ತಂದೆಯ ಅಥವಾ ತಾಯಿಯ ವರ್ಣತಂತುವಿನ ಪ್ರತಿ ಜೋಡಿಯಿಂದ ಒಂದು ಪ್ರತಿಯನ್ನು ಪಡೆದುಕೊಳ್ಳುತ್ತದೆ. ಈ ರೀತಿ ಗಂಡು ಒಂದು ಮತ್ತು ಹೆಣ್ಣು ಒಂದು ಜೊತೆ ಸೇರಿ ಎರಡು ಲಿಂಗಾಣು ಕೋಶಗಳು ಸಂಯೋಗಗೊಂಡು ಪೀಳಿಗೆಯಲ್ಲಿ ನಿರ್ದಿಷ್ಟ ಸಂಖ್ಯೆಯ ವರ್ಣತಂತುಗಳನ್ನು ಪುನಃ ಸ್ಥಾಪಿಸಿ ಪ್ರಭೇದವೊಂದರ ಡಿ.ಎನ್.ಎ.ಯ ಸ್ಥಿರತೆಯನ್ನು ಖಾತರಿಪಡಿಸಿಕೊಳ್ಳುತ್ತದೆ. ಈ ಬಗೆಯ ಕಾರ್ಯ ವಿಧಾನ ಮೆಂಡಲ್‌ರ ಪ್ರಯೋಗಗಳ ಫಲಿತಾಂಶಗಳು ವಿವರಿಸುತ್ತದೆ. ಇದನ್ನು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಎಲ್ಲಾ ಜೀವಿಗಳು ಬಳಸುತ್ತವೆ. ಈ ರೀತಿ ಒಂದು ಸಂತತಿಯಲ್ಲಿ ಗಂಡು ಮತ್ತು ಹೆಣ್ಣು ಪೋಷಕರ ಸಮಾನ ಅನುವಂಶೀಯ ಕೊಡುಗೆಯಿರುತ್ತದೆ.
- ಜೀವಿಯೊಂದಕ್ಕೆ ಬದುಕುಳಿಯುವ ಅರ್ಹತೆ ಒದಗಿಸುವ ಭಿನ್ನತೆಗಳು ಮಾತ್ರ ಜೀವಿಸಮೂಹದಲ್ಲಿ ಉಳಿಯುತ್ತವೆ, ನೀವು ಈ ಹೇಳಿಕೆಯನ್ನು ಸಮರ್ಥಿಸುತ್ತೀರಾ? ಹೌದಾದರೆ ಏಕೆ ಇಲ್ಲವಾದರೆ ಏಕಿಲ್ಲ?
ಜೀವಿಯೊಂದಕ್ಕೆ ಬದುಕುಳಿಯುವ ಅರ್ಹತೆ ಒದಗಿಸುವ ಭಿನ್ನತೆಗಳು ಮಾತ್ರ ಜೀವಿ ಸಮೂಹದಲ್ಲಿ ಉಳಿಯುತ್ತವೆ. ಹೌದು ಈ ಹೇಳಿಕೆ ನಿಜವಾದುದು. ಜೀವಿಗಳಲ್ಲಾಗುವ ಭಿನ್ನತೆಗಳು ನಿಸರ್ಗದ ಆಯ್ಕೆಯಾದಾಗ ಅದು ಉಳಿಯುತ್ತದೆ. ಆದರೆಕೆಲವೊಮ್ಮೆ ಭಿನ್ನತೆಗಳು ಜೀವಿಗಳ ಉಳಿವಿಗೆ ಪ್ರಯೋಜನವನ್ನು ನೀಡದಿದ್ದರೂ, ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಬಹುದು. ಇದು ಯಾವುದೇ ಹೊಂದಾಣಿಕೆಗಳಿಲ್ಲದೆ ವೈವಿಧ್ಯತೆಯನ್ನು ಒದಗಿಸುವ ಅನುವಂಶೀಯ ದಿಕ್ಖುತಿಯ (genetic drift) ಕಲ್ಪನೆಯಾಗಿದೆ.
ಹೆಚ್ಚುವರಿ ಪ್ರಶೋತ್ತರಗಳು
I. ಬಹು ಆಯ್ಕೆ ಪ್ರಶ್ನೆಗಳು
1. ಮಾನವ ಪ್ರಭೇದದ ಪ್ರಾರಂಭದ ಸದಸ್ಯ
ಎ. ಹೋಮೋ ಆಫ್ರಿಕನ್
ಬಿ. ಹೋಮೋ ಸೇಫಿಯನ್ಸ್
ಸಿ. ಹೋಮೋಏಷ್ಯನ್
ಡಿ. ಹೋಮೋರಷ್ಯನ್
ಉ: ಬಿ ಹೋಮೋ ಸೇಫಿಯನ್ಸ್
2. ಬಟಾಣಿ ಸಸ್ಯಗಳಲ್ಲಿ ಯಾವ ಜೀನ್ ಪ್ರಬಲವಾದುದು
ಎ. ಎತ್ತರ
ಬಿ. ಕುಬ್ಜ
ಸಿ. ದುಂಡಾದ ಬೀಜ
ಡಿ. ಸುಕ್ಕಾದ ಬೀಜ
ಉ : ಎ. ಎತ್ತರ ಮತ್ತು ಸಿ. ದುಂಡಾದ ಬೀಜ
3. ಜೀವ ವಿಕಾಸ ಸಿದ್ಧಾಂತದ ಪ್ರತಿಪಾದಕ
ಎ. ಮೆಂಡೆಲ್
ಬಿ. ಹಾಲ್ವೇನ್
ಸಿ. ಸ್ಟ್ಯಾನ್ಲಿ
ಡಿ. ಡಾರ್ವಿನ್
ಉ: ಡಿ. ಡಾರ್ವಿನ್
4. ಮೆಂಡಲ್ ತನ್ನ ಪ್ರಯೋಗಕ್ಕಾಗಿ ಆರಿಸಿಕೊಂಡ ಸಸ್ಯಗಳು
ಎ. ಕಡಲೆ
ಬಿ. ತೊಗರಿ
ಸಿ. ಬಟಾಣಿ
ಡಿ. ಹುರುಳಿ
ಉ: ಸಿ. ಬಟಾಣಿ
5. ಅನುವಂಶೀಯ ನಿಯಮಗಳು ಯಾರ ಕೊಡುಗೆ?
ಎ. ಮೆಂಡಲ್
ಬಿ. ಡಾರ್ವಿನ್
ಸಿ. ಅರಿಸ್ಟಾಟಲ್
ಡಿ. ಪ್ಲುಟೋ
ಉ: ಎ. ಮೆಂಡಲ್
- ತಂದೆ ತಾಯಿಯಿಂದ ಅನುವಂಶೀಯವಾಗುವ ವರ್ಣತಂತು ಗಂಡು ಮಗುವಾದಾಗ
ಎ. XX
ಬಿ. XY
ಸಿ. YY
ಡಿ. YX
ಉ: ಬಿ. XY
7. ಮಾನವ ಪ್ರಭೇದದ ಮೊದಲ ಸದಸ್ಯ ಪತ್ತೆಯಾದ ದೇಶ
ಎ. ಅಫ್ರಿಕಾ
ಬಿ. ಏಷ್ಯಾ
ಸಿ. ಪಶ್ಚಿಮ ಏಷ್ಯಾ
ಡಿ. ಮಧ್ಯ ಏಷ್ಯಾ
ಉ : ಎ. ಆಫ್ರಿಕಾ
- ವರ್ಣತಂತು ಕೆಳಗಿನ ಯಾವ ವಸ್ತುಗಳಿಂದ ಆಗಿದೆ
ಎ. ಪ್ರೋಟೀನ್
ಬಿ. ನ್ಯೂಕ್ಲಿಯಿಕ್ ಆಮ್ಲ
ಸಿ. ಪ್ರೋಟಿನ್ ಮತ್ತು ನ್ಯೂಕ್ಲಿಯಿಕ್
ಡಿ. ಪ್ರೋಟಾನ್ ಮತ್ತು ನ್ಯೂಟ್ರಾನ್
ಉ : ಸಿ. ಪ್ರೋಟಿನ್ ಮತ್ತು ನ್ಯೂಕ್ಲಿಯಿಕ್
8. ದ್ವಿತಳೀಕರಣದ ಪೀಳಿಗೆಯಿಂದ ಬರುವ ಅನುಪಾತ
ಎ..3:1
ಬಿ. 9:3:3:1
ಸಿ. 1:2
ಡಿ. 2:4
ಉ: ಬಿ. 9:3:3:1
9. ಯಾವುದೇ ಹೊಂದಾಣಿಕೆಗಳಿಲ್ಲದೆ ವೈವಿಧ್ಯತೆಯನ್ನು ಒದಗಿಸುವ ಅನುವಂಶೀಯ
ಎ. ದಿಕ್ಷ್ಯುತಿ
ಬಿ. ನಿಸರ್ಗದ ಆಯ್ಕೆ
ಸಿ. ತಳಿವಿಜ್ಞಾನ
ಡಿ. ಪ್ರಬಲತೆ
ಉ: ಎ. ದಿಕ್ಷ್ಯುತಿ
10. ಮನುಷ್ಯರಲ್ಲಿ ಎಷ್ಟು ಜೊತೆ ಕ್ರೋಮೋಜೋಮ್ ಗಳಿರುತ್ತವೆ?
ಎ. 22
ಬಿ. 23
ಸಿ. 24
ಡಿ. 21
ಉ: ಬಿ. 23
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ
- ತಳಿ ವಿಜ್ಞಾನ ಅಥವಾ ತಳಿಶಾಸ್ತ್ರ ಎಂದರೇನು?
ಅನುವಂಶೀಯತೆ, ಭಿನ್ನತೆ ಮತ್ತು ಅವುಗಳಿಗೆ ಕಾರಣವಾದ ಅಂಶಗಳ ಬಗ್ಗೆ ಕ್ರಮಬದ್ಧವಾಗಿ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆಯನ್ನು ತಳಿಶಾಸ್ತ್ರ ಅಥವಾ ತಳಿವಿಜ್ಞಾನ ಎನ್ನುತ್ತಾರೆ.
2. ಅನುವಂತೀಯ ದಿಕ್ಚ್ಯುತಿ ಎಂದರೇನು?
ಯಾವುದೇ ಹೊಂದಾಣಿಕೆಗಳಿಲ್ಲದ ಭಿನ್ನತೆಯನ್ನು ಒದಗಿಸುವ ಪ್ರಕ್ರಿಯೆಯನ್ನು ಅನುವಂಶೀಯ ದಿಕ್ಚ್ಯುತಿ ಎನ್ನುತ್ತಾರೆ
3. ಡಿ.ಎನ್.ಎ ಯ ಸ್ವಪ್ರತೀಕರಣ ಎಂದರೇನು? ಅದರ ಮಹತ್ವವೇನು?
ಕೋಶ ವಿಭಜನೆಯ ಸಂದರ್ಭದಲ್ಲಿ ತನ್ನನ್ನು ತಾನೇ ನಕಲುಗೊಳಿಸಿಕೊಂಡು ಎರಡು ಪ್ರತಿ ರೂಪಗಳಾಗುವ ಡಿ.ಎನ್.ಎಯ ವಿಶೇಷ ಗುಣವನ್ನು ಸ್ವಪ್ರತೀಕರಣ ಎನ್ನುತ್ತಾರೆ.
ಡಿ.ಎನ್.ಎ ತನ್ನ ಸ್ವಪ್ರತೀಕರಣದಂತಹ ವಿಶೇಷ ಗುಣದಿಂದ ಮುಂದಿನ ಸಂತಾನಗಳಿಗೆ ಒಂದೇ ರೀತಿಯ ಅನುವಂಶೀಯ ವಸ್ತುವನ್ನು ಸಮನಾಗಿ ಹಂಚುತ್ತದೆ. ಹೀಗೆ ಅನುವಂಶೀಯತೆಗೆ ಕಾರಣವಾಗಿದೆ.
4. ಮಾನವರಲ್ಲಿ ಲಿಂಗ ನಿರ್ಧರಣೆಯಾಗುವ ಚಿತ್ರವನ್ನು ಬರೆಯಿರಿ.


5. ಜೀವ ವಿಕಾಸೀಯ ಸಂಬಂಧಗಳನ್ನು ಪತ್ತೆ ಮಾಡಲು ಬಳಸುವ ಸಾಧನಗಳಾವುವು?
ಜೀವ ವಿಕಾಸೀಯ ಸಂಬಂಧಗಳನ್ನು ಪತ್ತೆ ಮಾಡಲು ಬಳಸುವ ಸಾಧನಗಳು ಉತ್ಪನನ, ಕಾಲ ನಿರ್ಣಯ, ಪಳೆಯುಳಿಕೆಗಳ ಅಧ್ಯಯನಗಳ ಜೊತೆಗೆ ಡಿ.ಎನ್.ಎ. ಅನುಕ್ರಮಣಿಕೆಗಳನ್ನು ಸಹ ಬಳಸುತ್ತಾರೆ.
6. ಅನುವಂತೀಯತೆ ಎಂದರೇನು?
ತಾಯಿ ತಂದೆಯರಿಂದ ಅಥವಾ ಪೋಷಕ ಜೀವಿಯಿಂದ ವಂಶ ಪಾರಂಪರ್ಯವಾಗಿ ಮುಂದಿನ ಪೀಳಿಗೆಗೆ (ಮಕ್ಕಳಿಗೆ) ಬರುವ ಗುಣಗಳನ್ನು ಅನುವಂಶೀಯತೆ ಎನ್ನುತ್ತಾರೆ.
7. ಜೀವ ವಿಕಾಸದ ಮೂಲಭೂತ ಪ್ರಕ್ರಿಯೆ ಯಾವುದು?
ಸಂತಾನೋತ್ಪತ್ತಿಯ ಸಮಯದಲ್ಲಿ ಡಿ.ಎನ್.ಎ ಯಲ್ಲಾಗುವ ಬದಲಾವಣೆಗಳೇ ಜೀವವಿಕಾಸದ ಮೂಲಭೂತ ಪ್ರಕ್ರಿಯೆಯಾಗಿದೆ.
8. ಆಧುನಿಕ ತಳಿ ವಿಜ್ಞಾನದ ಪಿತಾಮಹ ಯಾರು?
ಗ್ರೆಗರ್ ಜೋಹಾನ್ ಮೆಂಡಲ್ ರವರು ತಳಿ ವಿಜ್ಞಾನದ ಪಿತಾಮಹ.
9. ಕೆಳಜೀವಿಗಳಲ್ಲಿ ಲಿಂಗ ನಿರ್ಧರಣೆ ಹೇಗೆ ಆಗುತ್ತದೆ ?
ವಿವಿಧ ಪ್ರಭೇದಗಳು ವಿಶಿಷ್ಟ ವಿಭಿನ್ನ ತಂತ್ರಗಳನ್ನು ಬಳಸುತ್ತವೆ. ಕೆಲವು ಸಂಪೂರ್ಣವಾಗಿ ಪರಿಸರದ ಸೂಚನೆಗಳನ್ನು ಅವಲಂಬಿಸಿರುತ್ತವೆ. ಕೆಲವು ಪ್ರಾಣಿಗಳಲ್ಲಿ ನಿಶೇಚನ ಹೊಂದಿದ ಮೊಟ್ಟೆಗಳನ್ನು ಯಾವ ತಾಪಮಾನ+-ದಲ್ಲಿಡಲಾಗಿದೆ ಎಂಬ ಅಂಶವು ಆ ಮೊಟ್ಟೆಗಳು ಹೆಣ್ಣಾಗಿ ಅಭಿವರ್ಧನೆಗೊಳ್ಳುತ್ತವೋ ಅಥವಾ ಗಂಡಾಗಿಯೋ ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಬಸವನ ಹುಳುವಿನಲ್ಲಿ ಜೀವಿಗಳು ಲಿಂಗವನ್ನು ಬದಲಿಸುವುದು ಎಂದರೆ ಲಿಂಗವು ತಳೀಯವಾಗಿ ನಿರ್ಧಾರಿತವಾಗುವುದಿಲ್ಲ ಎಂಬುದ ನ್ನು ಸೂಚಿಸುತ್ತದೆ.
10. ಮಾನವರ ಉಗಮವನ್ನು ವಿಕಾಸ ಅಧ್ಯಯನವು ಹೇಗೆ ಸೂಚಿಸುತ್ತದೆ?
ಭೂ ಗ್ರಹದ ಉದ್ದಗಲಕ್ಕೂ ಮಾನವನ ರೂಪ, ಬಣ್ಣ, ಗಾತ್ರ ಎಲ್ಲದರಲ್ಲೂ ಆಗಾಧ ವೈವಿಧ್ಯವಿದೆ. ಅನೇಕ ಮಾನವ ಜನಾಂಗಗಳಿದ್ದರೂ, ಇವರೆಲ್ಲರೂ ವಿಭಿನ್ನವಾಗಿ ವಿಕಾಸ ಹೊಂದಿಲ್ಲ. ಎಲ್ಲರೂ ಒಂದೇ ಪ್ರಭೇದಕ್ಕೆ ಸೇರಿದವರಾಗಿದ್ದಾರೆ. ಈಗ ನಾವೆಲ್ಲೇ ವಾಸಿಸುತ್ತಿದ್ದರೂ, ಎಲ್ಲರೂ ಆಫ್ರಿಕಾ ಖಂಡದಿಂದಲೇ ಬಂದಿದ್ದೇವೆ. ಕಾರಣವೇನೆಂದರೆ ಮಾನವ ಪ್ರಭೇದದ ಪ್ರಾರಂಭದ ಸದಸ್ಯನಾದ ಹೋಮೋಸೇಪಿಯನ್ಸ್‌ನ ಮೂಲವು ಆಫ್ರಿಕಾದಲ್ಲಿಯೇ ಪತ್ತೆಯಾಗಿರುವುದು. ಆದ್ದರಿಂದ ನಾವೆಲ್ಲರೂ ಆಫ್ರಿಕಾದಲ್ಲಿ ಉಗಮವಾಗಿ ಭೂಮಿಯೆಲ್ಲೆಡೆ ಹರಡಿದ ಒಂದೇ ಪ್ರಭೇದಕ್ಕೆ ಸೇರಿದವರಾಗಿದ್ದೇವೆ.
11. ವಂಶವಾಹಿ ಎಂದರೇನು? ಅದರ ಕಾರ್ಯವೇನು?
ಒಂದು ಪ್ರೋಟೀನ್ ತಯಾರಿಕೆಗೆ ಬೇಕಾದ ಮಾಹಿತಿಯನ್ನು ಒದಗಿಸುವ ಡಿ.ಎನ್.ಎ ಘಟಕವನ್ನು ಆ ಪ್ರೋಟೀನ್ ವಂಶವಾಹಿ (gene) ಎಂದು ಕರೆಯಲಾಗುತ್ತದೆ. ಇವು ಗುಣಗಳು ಮತ್ತು ಲಕ್ಷಣಗಳನ್ನು ನಿಯಂತ್ರಿಸುತ್ತವೆ. ಮತ್ತು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸುತ್ತದೆ.
- ಮೆಂಡಲ್‌ನ ಎರಡು ನಿಯಮಗಳನ್ನು ತಿಳಿಸಿ.
- ಪ್ರತ್ಯೇಕತೆಯ ನಿಯಮ :
ಸಂತಾನೋತ್ಪತ್ತಿಯಲ್ಲಿ ಲಿಂಗಾಣುಗಳು ಉತ್ಪತ್ತಿಯಾಗುವಾದ ವ್ಯತಿರಿಕ್ತ (ವಿಭಿನ್ನ). ಲಕ್ಷಣಗಳಿಗೆ ಕಾರಣವಾದ ಅಂಶಗಳು ಸಮ ಪ್ರಮಾಣದಲ್ಲಿ ಪ್ರತ್ಯೇಕವಾಗುತ್ತದೆ. ವ್ಯತಿರಿಕ್ತ ಲಕ್ಷಣಗಳಲ್ಲಿ ಒಂದು ಮಾತ್ರ ಲಿಂಗಾಣುಗಳಲ್ಲಿ ಇರುತ್ತದೆ. ಈ ರೀತಿ ಅಂಶಗಳು ಪ್ರತ್ಯೇಕವಾಗಿ ಮುಂದಿನ ಪೀಳಿಗೆಗೆ ಸಾಗುತ್ತದೆ.
- ಸ್ವತಂತ್ರ ವಿಂಗಡಣೆಯ ನಿಯಮ :
ಒಂದಕ್ಕಿಂದಲೂ ಹೆಚ್ಚು ಜೋಡಿ ಲಕ್ಷಣಗಳಿರುವಾಗ, ಪ್ರತಿ ಜೋಡಿ ಲಕ್ಷಣವೂ ಲಿಂಗಾಣುಗಳಾಗುವಾಗ ಇತರ ಜೋಡಿಗಳಿಂದ ಸ್ವತಂತ್ರವಾಗಿ ಚಲಿಸುತ್ತವೆ. ಇದರಿಂದಾಗಿ ಪಿತೃವಿನಲ್ಲಿಲ್ಲದ ಗುಣ ಸಂಯುಕ್ತಗಳು ಮುಂದಿನ ಪೀಳಿಗೆಯ ಜೀವಿಗಳಲ್ಲಿ ಕಾಣಿಸಿಕೊಳ್ಳುತ್ತವ ಸಾಧ್ಯತೆಗಳಿವೆ.
13. ಪ್ರಭೇದೀಕರಣ ಹೇಗೆ ಉಂಟಾಗುತ್ತದೆ?
ಭಿನ್ನತೆಗಳು ಭೌಗೋಳಿಕ ಬೇರ್ಪಡುವಿಕೆಯೊಂದಿಗೆ ಜೊತೆಗೂಡಿದಾಗ ಪ್ರಭೇದೀಕರಣವುಂಟಾಗುವುದು.
14. ಜೀವವಿಕಾಸವೆಂದರೇನು?
ಜೀವ ವಿಕಾಸವೆಂದರೆ ಕೆಳಹಂತದಿಂದ ಉನ್ನತ ಹಂತಕ್ಕೆ ಪ್ರಗತಿ ಹೊಂದುವಿಕೆ ಮಾತ್ರವಲ್ಲ, ಬದಲಿಗೆ ಸರಳ ವಿನ್ಯಾಸಗಳನ್ನು ಉಳಿಸಿ ಬೆಳೆಸುತ್ತಲೇ ಸಂಕೀರ್ಣವಾದ ವಿನ್ಯಾಸಗಳಿಗೆ ದಾರಿ ಮಾಡಿ ಕೊಡುವ ಪ್ರಕ್ರಿಯೆಯಾಗಿದೆ.
ನೆನಪಿನಲ್ಲಿಡಬೇಕಾದ ಮುಖ್ಯಾಂಶಗಳು
- ಸಂತಾನೋತ್ಪತ್ತಿ ಪ್ರಕ್ರಿಯೆಗಳಿಂದ ಸಾಮ್ಯತೆಯಿರುವ ಹೊಸ ಜೀವಿಗಳು ಉಂಟಾಗುತ್ತವೆಯಾದರೂ ಸೂಕ್ಷ್ಮವಾದ ಭಿನ್ನತೆಯೂ ಸಹ ಕಂಡು ಬರುತ್ತವೆ. ಅಲೈಂಗಿಕ ಸಂತಾನೋತ್ಪತ್ತಿ ಸಮಯದಲ್ಲಿ ಕೂಡಾ ಭಿನ್ನತೆಗಳು ಉಂಟಾಗುತ್ತದೆ.
- ಲೈಂಗಿಕ ಸಂತಾನೋತ್ಪತ್ತಿ ಮಾಡುವ ಮಾನವರು ಸೇರಿದಂತೆ ಅನೇಕ ಪ್ರಾಣಿಗಳಲ್ಲಿ ವಿವಿಧ ಜೀವಿಗಳ ನಡುವೆ ಬಹಳ ವಿಭಿನ್ನವಾದ ವ್ಯತ್ಯಾಸಗಳು ಗೋಚರಿಸುತ್ತವೆ.
- ಅನುವಂಶೀಯತೆಯು ಮುಂದಿನ ಪೀಳಿಗೆಗೆ ಸಾಮಾನ್ಯವಾದ ಮೂಲಭೂತ ವಿನ್ಯಾಸ ಮತ್ತು ಅದರಲ್ಲಿನ ಸೂಕ್ಷ್ಮ ಬದಲಾವಣೆಗಳು ಎರಡನ್ನೂ ಒದ ಸುತ್ತದೆ. ಅನುವಂಶೀಯವಾಗಿ ಪಡೆದ ವ್ಯತ್ಯಾಸಗಳ ಜೊತೆಗೆ ಹೊಸದಾಗಿ ಉಂಟಾದ ವ್ಯತ್ಯಾಸಗಳೂ ಇರುತ್ತವೆ.
- ಸಂತಾನೋತ್ಪತ್ತಿ ಸಮಯದಲ್ಲಿ ಉಂಟಾಗುವ ವಿಭಿನ್ನತೆಗಳು ಅನುವಂಶೀಯವಾಗಬಲ್ಲದು.
- ಈ ವಿಭಿನ್ನತೆಗಳು ಜೀವಿಗಳು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು.
- ಮಗು ಮಾನವನ ಎಲ್ಲಾ ಮೂಲಭೂತ ಗುಣಗಳನ್ನು ಹೊಂದಿದ್ದರೂ ಪೋಷಕರ ಪಡಿಯಚ್ಚಿನಂತೆ ಇರದೆ, ಬಹಳಷ್ಟು ಭಿನ್ನತೆಗಳನ್ನು ಹೊಂದಿರುತ್ತದೆ.
- ಮೆಂಡಲ್ ವಿಜ್ಞಾನ ಮತ್ತು ಗಣಿತಶಾಸ್ತ್ರದ ಕುರಿತಾದ ಅವರ ಜ್ಞಾನವನ್ನು ಸಂಯೋಜಿಸಿ ಪ್ರತಿ ಪೀಳಿಗೆಯಲ್ಲಿ ನಿರ್ದಿಷ್ಟ ಗುಣವನ್ನು ಪ್ರದರ್ಶಿಸುವ ಜೀವಿಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡಿದ ಮೊದಲಿಗರು.
- ಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳಲ್ಲಿ ಒಂದು ಗುಣಕ್ಕೆ ಸಂಬಂಧಿಸಿದ ವಂಶವಾಹಿಯ ಎರಡು ಪ್ರತಿಗಳಿರುತ್ತವೆ. ಎರಡು ಪ್ರತಿಗಳು ಒಂದೇ ರೀತಿ ಇರದಿದ್ದಾಗ ವ್ಯಕ್ತವಾಗುವ ಗುಣವನ್ನು ಪ್ರಾಬಲ್ಯ ಗುಣ ಹಾಗೂ ವ್ಯಕ್ತವಾಗದಿರುವುದನ್ನು ದುರ್ಬಲ ಗುಣ ಎನ್ನುವರು.
- ಜೀವಕೋಶದಲ್ಲಿ ಪ್ರೋಟೀನ್ ಗಳನ್ನು ತಯಾರಿಸಲು ಕೋಶೀಯ ಡಿ.ಎನ್.ಎ.ಯು ಮಾಹಿತಿಯ ಮೂಲವಾಗಿದೆ.
- ವಂಶವಾಹಿಗಳು ಗುಣಗಳು ಅಥವಾ ಲಕ್ಷಣಗಳನ್ನು ನಿಯಂತ್ರಿಸುತ್ತದೆ.
- ಜೀವಿಯೊಂದರಲ್ಲಿರುವ ಪ್ರತಿ ಗುಣಗಳು ಪ್ರತ್ಯೇಕವಾಗಿ ಅನುವಂಶೀಯವಾಗಬಲ್ಲವು. ಇದರಿಂದ ಲೈಂಗಿಕ ಸಂತಾನೋತ್ಪತ್ತಿಯ ಮೂಲಕ ಜನಿಸುವ ಸಂತತಿಯಲ್ಲಿ ಗುಣಗಳ ಹೊಸ ಸಂಯೋಜನೆ ಕಂಡುಬರುತ್ತದೆ.
- ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಎರಡು ಲಿಂಗಗಳು ಅನೇಕ ಕಾರಣಗಳಿಗಾಗಿ ಪರಸ್ಪರ ವಿಭಿನ್ನವಾಗಿರಬೇಕು.
- ಪ್ರಾಣಿಗಳಲ್ಲಿ ನಿಶೇಚನ ಹೊಂದಿದ ಮೊಟ್ಟೆಗಳನ್ನು ಯಾವ ತಾಪಮಾನದಲ್ಲಿಡಲಾಗಿದೆ. ಎಂಬ ಅಂಶವು, ಆ ಮೊಟ್ಟೆಗಳು ಹೆಣ್ಣಾಗಿ ಅಭಿವರ್ಧನೆಗೊಳ್ಳುತ್ತವೋ ಅಥವಾ ಗಂಡಾಗಿಯೋ ಎಂಬುದನ್ನು ನಿರ್ಧರಿಸುತ್ತದೆ.
- ಬಸವನ ಹುಳುವಿನಲ್ಲಿ ಜೀವಿಗಳು ಲಿಂಗವನ್ನು ಬದಲಿಸಬಹುದು ಎಂಬುದು ಲಿಂಗವು ತಳೀಯವಾಗಿ ನಿರ್ಧರಿತವಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
- ಮಾನವರಲ್ಲಿ ಲಿಂಗವು ಹೆಚ್ಚಾಗಿ ತಳೀಯವಾಗಿಯೇ ನಿರ್ಧರಿಸಲ್ಪಡುತ್ತದೆ.
- ಬಹುತೇಕ ಪ್ರಭೇದಗಳಲ್ಲಿ ಲಿಂಗವು ವಿಭಿನ್ನ ಅಂಶಗಳಿಂದ ನಿರ್ಧರಿತವಾಗುತ್ತದೆ. ಮನುಷ್ಯರಲ್ಲಿ ಮಗುವಿನ ಲಿಂಗವು ತಂದೆಯಿಂದ ಪಡೆದ ವರ್ಣತಂತುವು X (ಹುಡುಗಿಯರಿಗೆ) ಆಗಿದೆಯೋ ಅಥವಾ Y (ಹುಡುಗರಿಗೆ) ಆಗಿದೆಯೋ ಎಂಬುದರ ಮೇಲೆ ಅವಲಂಬಿಸಿದೆ.
- ತಂದೆಯಿಂದ ಅನುವಂಶೀಯವಾಗುವ ವರ್ಣತಂತುವಿನಿಂದ ಮಕ್ಕಳ ಲಿಂಗವು ನಿರ್ಧರಿಸಲ್ಪಡುತ್ತದೆ. ತಂದೆಯಿಂದ ‘X’ ವರ್ಣತಂತು ಪಡೆದ ಮಗು ಹುಡುಗಿಯಾಗಿ ಮತ್ತು ‘Y’ ವರ್ಣತಂತುವನ್ನು ಪಡೆದ ಮಗು ಹುಡುಗನಾಗುತ್ತದೆ.
- ಪ್ರಭೇದಗಳಲ್ಲಿನ ಭಿನ್ನತೆಗಳು ಬದುಕುಳಿಯುವ ಅನುಕೂಲಗಳನ್ನು ಅನುಗ್ರಹಿಸಬಹುದು ಅಥವಾ ಕೇವಲ ಅನುವಂಶೀಯ ದಿಕ್ಯುತಿಗೆ ಕಾರಣವಾಗಬಹುದು.
- ವಂಶವಾಹಿಗಳು ಗುಣಗಳನ್ನು ನಿಯಂತ್ರಿಸುವುದರಿಂದ ಪೀಳಿಗೆಯಿಂದ ಪೀಳಿಗೆಗೆ ನಿರ್ದಿಷ್ಟ ವಂಶವಾಹಿಯ ಪುನರಾವರ್ತನೆಯ ಪ್ರಮಾಣ ಬದಲಾಯಿತು. ಇದು ಜೀವವಿಕಾಸದ ಪರಿಕಲ್ಪನೆಯ ಮೂಲತತ್ವವಾಗಿದೆ.
- ಭಿನ್ನತೆಯು ಬದುಕುಳಿಯುವಿಕೆಗೆ ಅನುಕೂಲವಾಗಿದ್ದರಿಂದ ಸಾಮಾನ್ಯ ಗುಣವಾಯಿತು ಅಂದರೆ ಅದು ನೈಸರ್ಗಿಕವಾಗಿ ಆಯ್ಕೆಯಾಯಿತು. ನೈಸರ್ಗಿಕ ಆಯ್ಕೆಯು ಜೀರುಂಡೆ ಸಮೂಹದಲ್ಲಿ ಜೀವವಿಕಾಸವನ್ನು ನಿರ್ದೇಶಿಸುತ್ತದೆ.
- ಪಾರಿಸರಿಕ ಅಂಶಗಳಿಂದ ಅಲೈಂಗಿಕ ಅಂಗಾಂಶಗಳಲ್ಲಿ ಉಂಟಾದ ಬದಲಾವಣೆಗಳು ಅನುವಂಶೀವಾಗುವುದಿಲ್ಲ.
- ಜೀವಿತಾವಧಿಯಲ್ಲಿ ಜೀವಿಯು ಪಡೆದ ಅನುಭವಗಳನ್ನು ಅದರ ಸಂತತಿಗೆ ವರ್ಗಾಯಿಸಲು ಸಾಧ್ಯವಿಲ್ಲ ಮತ್ತು ಜೀವವಿಕಾಸವನ್ನು ನಿರ್ದೇಶಿಸಲು ಸಾಧ್ಯವಿಲ್ಲ.
- ಭಿನ್ನತೆಗಳು ಭೌಗೋಳಿಕ ಬೇರ್ಪಡುವಿಕೆಯೊಂದಿಗೆ ಜೊತೆಗೂಡಿದಾಗ ಪ್ರಬೇಧೀಕರಣ ಉಂಟಾಗಬಹುದು.
- “ನಿಸರ್ಗದ ಆಯ್ಕೆಯ ಮೂಲಕ ಪ್ರಭೇದಗಳು ಉಂಟಾಗುತ್ತದೆ” ಎಂಬ ಸಿದ್ಧಾಂತವನ್ನು ಡಾರ್ವಿನ್‌ರು ಮಂಡಿಸಿದ್ದಾರೆ.
- ವರ್ಗೀಕರಣದಿಂದ ಜೀವಿಗಳ ಜೀವವಿಕಾಸೀಯ ಸಂಬಂಧಗಳನ್ನು ಪತ್ತೆಮಾಡಬಹುದು.
- ಜೀವಕೋಶವು ಎಲ್ಲಾ ಜೀವಿಗಳ ಮೂಲ ಘಟಕವಾಗಿದೆ.
- ಎರಡು ಪ್ರಭೇದಗಳ ಸಾಮಾನ್ಯ ಲಕ್ಷಣಗಳು ಹೆಚ್ಚಿದಂತೆಲ್ಲಾ ಅವುಗಳ ನಡುವಿನ ಸಂಬಂಧವೂ ನಿಕಟವಾಗುತ್ತದೆ.
- ಜೀವಿಗಳು ಸತ್ತಾಗ ಅವುಗಳ ಇಡೀ ದೇಹ ಅಥವಾ ಕೆಲವು ಭಾಗಗಳ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ‘ಪಳೆಯುಳಿಕೆ’ಗಳು ಎನ್ನುವರು.
- ಜೀವವಿಕಾಸವನ್ನು ಜೀವಂತ ಪ್ರಬೇಧಗಳೇ ಅಲ್ಲದೆ, ಪಳೆಯುಳಿಕೆಗಳ ಅಧ್ಯಯನದಿಂದಲೂ ತಿಳಿಯಬಹುದು.
- ಪಳೆಯುಳಿಕೆಗಳ ಅಂಗರಚನೆಯ ವಿಶ್ಲೇಷಣೆಯು ಜೀವ ವಿಕಾಸೀಯ ಸಂಬಂಧಗಳು ಎಷ್ಟು ಹಿಂದಿನವೆಂದು ನಿರ್ಧರಿಸಲು ಸಹಾಯ ಮಾಡುತ್ತವೆ.
- ಸಂತಾನೋತ್ಪತ್ತಿಯ ಸಮಯದಲ್ಲಿ ಡಿ.ಎನ್.ಎಯಲ್ಲಾಗುವ ಬದಲಾವಣೆಗಳೇ ಜೀವವಿಕಾಸದ ಮೂಲಭೂತ ಪ್ರಕ್ರಿಯೆಯಾಗಿದೆ.
- ಜೀವವಿಕಾಸದ ಪರಿಕಲ್ಪನೆಯಲ್ಲಿ ನಿಜವಾದ ‘ಪ್ರಗತಿ’ ಎಂಬುದಿಲ್ಲ, ಸರಳವಾಗಿ ಹೇಳುವುದಾದರೆ ಜೀವವಿಕಾಸವು ವೈವಿಧ್ಯತೆಗಳ ಉತ್ಪಾದನೆ ಮತ್ತು ನಿಸರ್ಗದಿಂದ ವೈವಿಧ್ಯತೆಗಳ ಆಯ್ಕೆ ಉಂಟಾಗುವ ಪ್ರಕ್ರಿಯೆಯಾಗಿದೆ.
- ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ ನಾವು ಸಾಮಾನ್ಯ ಪೂರ್ವಜರನ್ನು ಹೊಂದಿದ್ದೆವು ಎಂಬಲ್ಲಿಗೆ ತಲುಪಿದಾಗ, ಜೀವವು ನಿರವಯವ ವಸ್ತುಗಳಿಂದಾಗಿರಬಹುದೆಂದು ನಮಗೆ ಹೊಳೆಯುತ್ತದೆ.
- ಜೀವ ವಿಕಾಸದಲ್ಲಿ ಏಕಮಾತ್ರ ಪ್ರವೃತ್ತಿಯೆಂದರೆ ಕಾಲ ಕಳೆದಂತೆ ಹೆಚ್ಚು ಹೆಚ್ಚು ಸಂಕೀರ್ಣವಾದ ದೇಹ ವಿನ್ಯಾಸಗಳ ಹೊರಹೊಮ್ಮುವಿಕೆ ಮಾತ್ರ ಹಳೆಯ ವಿನ್ಯಾಸಗಳು ಅದಕ್ಷವಾಗಿದ್ದವು ಎಂದುಕೊಳ್ಳಬಾರದು. ಹಲವು ಪ್ರಾಚೀನ ಹಾಗೂ ಸರಳ ವಿನ್ಯಾಸಗಳು ಇಂದಿಗೂ ಬದುಕುಳಿದಿವೆ.
- ಸಂಕೀರ್ಣ ಅಂಗಗಳು ಜೀವಿಗಳ ಬದುಕುಳಿಯುವಿಕೆಗೆ ಅನುಕೂಲಕರವಾಗುವುದರಿಂದ ಮಧ್ಯಂತರ ಹಂತಗಳಿಂದಲೇ ವಿಕಾಸಗೊಂಡಿರಬಹುದು.
- ಅಂಗ ಅಥವಾ ಗುಣಲಕ್ಷಣಗಳು ವಿಕಾಸದ ಹಾದಿಯಲ್ಲಿ ಹೊಸ ಕಾರ್ಯಗಳಿಗನುಗುಣವಾಗಿ ಮಾರ್ಪಾಡಾಗಿರಬಹುದು. ಉದಾಹರಣೆಗೆ, ಚಳಿಯಿಂದ ರಕ್ಷಣೆ ಕೊಡಲು ವಿಕಾಸ ಹೊಂದಿದ ಹಕ್ಕಿಯ ಗರಿಗಳು ನಂತರ ಹಾರಲು ಅನುಕೂಲವಾಗುವಂತೆ ಮಾರ್ಪಾಡಾದವು.
- ಜೀವಿಗಳು ವಿಕಾಸ ಹೊಂದುತ್ತಿರುವ ಜೀವಸಂಕುಲಗಳ ಸಾಲಿನಲ್ಲಿ ಮಾನವರು ಮತ್ತೊಂದು ಪ್ರಭೇದವಷ್ಟೇ ಹೊರತು ವಿಕಾಸದ ಪರಾಕಾಷ್ಠೆಯಲ್ಲ.
- ಜೀವ ವಿಕಾಸೀಯ ಸಂಬಂಧಗಳನ್ನು ಪತ್ತೆಮಾಡಲು ಬಳಸುವ ಸಾಧನಗಳಾದ ಉತ್ಪನನ, ಕಾಲನಿರ್ಣಯ ಮತ್ತು ಪಳೆಯುಳಿಕೆಗಳ ಅಧ್ಯಯನಗಳ ಜೊತೆಗೆ ಡಿ.ಎನ್.ಎ. ಅನುಕ್ರಮಣಿಕೆಗಳು ಸಹಾ ಮಾನವ ವಿಕಾಸದ ಅಧ್ಯಯನದಲ್ಲಿ ಬಳಕೆಯಾಗುತ್ತಿವೆ.
- ಜೀವವಿಕಾಸವೆಂದರೆ ‘ಕೆಳಹಂತ‘ದಿಂದ ‘ಉನ್ನತಹಂತ‘ಕ್ಕೆ ಪ್ರಗತಿ ಹೊಂದುವಿಕೆ ಎಂದು ಹೇಳಲಾಗುವುದಿಲ್ಲ. ಬದಲಿಗೆ ಸರಳ ವಿನ್ಯಾಸಗಳನ್ನು ಉಳಿಸಿ ಬೆಳೆಸುತ್ತಲೇ ಸಂಕೀರ್ಣವಾದ ವಿನ್ಯಾಸಗಳಿಗೆ ದಾರಿ ಮಾಡಿಕೊಡುವ ಪ್ರಕ್ರಿಯೆಯಾಗಿದೆ.
- ಮಾನವನ ವಿಕಾಸದ ಅಧ್ಯಯನವು ನಾವೆಲ್ಲರೂ ಆಫ್ರಿಕಾದಲ್ಲಿ ಉಗಮವಾಗಿ ಭೂಮಿಯೆಲ್ಲೆಡೆ ಹರಡಿದ ಒಂದೇ ಪ್ರಭೇದಕ್ಕೆ ಸೇರಿದವರೆಂದು ಸೂಚಿಸುತ್ತದೆ.
- ಮಾನವ ಪ್ರಭೇದದ ಪ್ರಾರಂಭದ ಸದಸ್ಯನಾದ ಹೋಮೋ ಸೇಫಿಯನ್ಸ್ ಮೂಲವೂ ಕೂಡ ಆಫ್ರಿಕಾ ಖಂಡದಲ್ಲೇ ಪತ್ತೆಯಾಗಿದೆ.
- ಎಲ್ಲಾ ಮಾನವರೂ ಒಂದೇ ಪ್ರಭೇದಕ್ಕೆ ಸೇರಿದವರಾಗಿದ್ದಾರೆ.