10th Std Bharatakkiruva Savalugalu Hagu Avugala Pariharopayagalu Social Science Notes Question Answer Guide Mcq Pdf Download in Kannada Medium Karnataka State Syllabus 2025 10ನೇ ತರಗತಿ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, 10th Standard Kannada Medium Bharatakkiruva Savalugalu Hagu Avugala Pariharopayagalu Lesson Notes, SSLC Social Science Notes, SSLC Social Science Chapter 7th Question Answer, Kseeb Solutions for Class 10 Social Science Chapter 7 Notes, 10th Class Social Science 7th Lesson Notes Key Answers.

10ನೇ ತರಗತಿ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1.ರಾಜ್ಯದೊಳಗಿನ ವಿವಿಧ ಪ್ರದೇಶಗಳಲ್ಲಿರುವ ಪ್ರಾದೇಶಿಕವಾದವನ್ನು ಉಪಪ್ರಾದೇಶಿಕವಾದ ಎಂದು ಕರೆಯಬಹುದು.
2. ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತಂದ ವರ್ಷ 2005
3. 2011ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ ಶೇ. 74.04
4. ಭಾರತದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ:
1.ಕೋಮುವಾದವನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳು ಯಾವುವು?
ಎಲ್ಲ ರಂಗಗಳಲ್ಲಿಯೂ ಜಾತ್ಯಾತೀತ ತತ್ವವನ್ನು ಬಲಪಡಿಸುವುದು. ಸರ್ವಧರ್ಮ ಸಮಭಾವವನ್ನು ಪ್ರೇರೇಪಿಸುವ ಜಾತ್ಯಾತೀತ ರಾಷ್ಟ್ರೀಯ ವಾದವನ್ನು ಬೆಳೆಸುವುದು. ಎಲ್ಲಾ ನಾಗರಿಕರನ್ನು ಸಮಾನ ದೃಷ್ಟಿಯಿಂದ ಕಾಣುವುದು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು. ಶಿಕ್ಷಣದಲ್ಲಿ ಜಾತ್ಯತೀತ ತತ್ವವನ್ನು ಅಳವಡಿಸುವುದು. ಕ್ರಮಬದ್ಧ ಕಾನೂನು ವ್ಯವಸ್ಥೆಯ ಜಾರಿ. ಸದೃಢ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸುವುದು. ಸಾರ್ವಜನಿಕರಲ್ಲಿ ಕೋಮು ಸೌಹಾರ್ದತೆಯ ಬಗ್ಗೆ ಜಾಗೃತಿ ಮೂಡಿಸುವುದು. ರಾಷ್ಟ್ರೀಯ ಚಿಂತನೆಗಳಿಗೆ ಹೆಚ್ಚು ಒತ್ತು ನೀಡುವುದು.
2. ಅನಕ್ಷರತೆಯನ್ನು ಹೋಗಲಾಡಿಸಲು ಕೈಗೊಂಡಿರುವ ಕ್ರಮಗಳಾವುವು?
- ಭಾರತ ಸರ್ಕಾರವು 1988ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪಿಸಿದೆ.
- 2001 ರಲ್ಲಿ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಇದರಲ್ಲಿ ದಿವ್ಯಾಂಗ ಮಕ್ಕಳ ಶಿಕ್ಷಣ, ಮಹಿಳಾ ಶಿಕ್ಷಣ ಹಾಗೂ ಮಹಿಳಾ ಜಾಗೃತಿಗೆ ಕೂಡ ಆದ್ಯತೆ ನೀಡಲಾಗಿತ್ತು.
- ಸಂವಿಧಾನದ 21A ವಿಧಿಯನ್ವಯ 6-14 ವರ್ಷ ವಯೋಮಾನದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ.
- 2009 ರಲ್ಲಿ ದೇಶದಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
- 2009ರಲ್ಲಿ ಸಾಕ್ಷರ ಭಾರತ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
- 2018ರಲ್ಲಿ ಸಮಗ್ರ ಶಿಕ್ಷಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
- ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
3. ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು?
ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಕೇಂದ್ರ ಹಾಗೂ ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಹಿಳಾ ಆಯೋಗಗಳನ್ನು ಸ್ಥಾಪಿಸಲಾಗಿದೆ. ರಾಜ್ಯಗಳಲ್ಲಿ ಮಹಿಳಾ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಸಹಿ ಒನ್ ಸ್ಟಾಪ್ ಸೆಂಟರ್ಗಳನ್ನು ಆರಂಭಿಸಲಾಗಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯನ ರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಗಿದೆ. ದುಡಿಯುವ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ ೫೦ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮಹಿಳಾ ಸಹಾಯವಾಣಿ 1091 ಸೌಲಭ್ಯ ಕಲ್ಪಿಸಲಾಗಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸಲು ನಾರಿಶಕ್ತಿ ವಂದನಾ ಅಧಿನಿಯಮವನ್ನು ಸಂಸತ್ತು ಅಂಗೀಕರಿಸಿದೆ.
4. ಜನಸಂಖ್ಯಾ ಸ್ಫೋಟದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಯಾವುವು?
ಅಕ್ಷರ ಪ್ರಸರಣ, ತಾಂತ್ರಿಕ ಶಿಕ್ಷಣ, ಕೃಷಿ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ರಫ್ತು ಹೆಚ್ಚಳ, ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ,
5. ಲಿಂಗತ್ವ ಅಲ್ಪ ಸಂಖ್ಯಾತರು ಎಂದರೆ ಯಾರು? ಅವರಿಗಾಗುವ ತಾರತಮ್ಯವನ್ನು ಹೋಗಲಾಡಿಸಲು ಕೈಗೊಂಡಿರುವ ಉಪಕ್ರಮಗಳು ಯಾವುವು?
ತಾವು ಜನಿಸುವಾಗ ಇದ್ದ ಲಿಂಗಕ್ಕಿಂತ ಭಿನ್ನವಾದ ಶಾರೀರಿಕ ಮತ್ತು ಸಾಮಾಜಿಕ ವರ್ತನೆಯನ್ನು ಹೊಂದಿರುವವರೇ ಲಿಂಗತ್ವ ಅಲ್ಪಸಂಖ್ಯಾತರು. ಸ್ತ್ರೀಯರ ಮತ್ತು ಪುರುಷರ ಮನೋದೈಹಿಕ ಲಕ್ಷಣಗಳುಳ್ಳ ವ್ಯಕ್ತಿಗಳನ್ನೊಳಗೊಂಡ ಸಮುದಾಯ ಇದಾಗಿದೆ. 2014ರಲ್ಲಿ ಸರ್ವೋಚ್ಛ ನ್ಯಾಯಾಲಯವು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಇದನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಉಪಕ್ರಮಗಳನ್ನು ಕೈಗೊಂಡಿವೆ. ಭಾರತ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ-2019ನ್ನು ಜಾರಿಗೆ ತಂದಿದೆ.
ಯಾರೊಬ್ಬರೂ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಅವರ ಕುಟುಂಬದಿಂದ ಬೇರ್ಪಡಿಸುವಂತಿಲ್ಲ ಹಾಗೂ ಮನೆ, ಸಮುದಾಯ ಮತ್ತು ಗ್ರಾಮದಿಂದ ಹೊರ ಹೋಗುವಂತೆ ಅವರನ್ನು ಒತ್ತಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು ಸ್ಟೈಲ್ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಲ್ಯಾಣಕ್ಕಾಗಿ ಸಮಗ್ರ ಪುನರ್ವಸತಿ ಎಂಬ ಉಪಪಯೋಜನೆಯನ್ನು ಜಾರಿಗೊಳಿಸಿದೆ. ಲಿಂಗತ್ವ ಅಲ್ಪ ಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಪರಿಷತ್ತನ್ನು ರಚಿಸಲಾಗಿದೆ. ನ್ಯಾಷನಲ್ ಪೋರ್ಟಲ್ ಫಾರ್ ಟ್ರಾನ್ಸ್ಜೆಂಡರ್ಸನ್ನು ರೂಪಿಸಲಾಗಿದೆ. ಗರೀಮಾಗೃಹ ಎಂಬ ಹೆಸರಿನ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಕರ್ನಾಟಕ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯನೀತಿ 2017ನ್ನು ಜಾರಿಗೆ ತಂದಿದೆ. ಇವರಿಗಾಗಿ ಶಿಕ್ಷಣ ಪಡೆಯುವ, ಸರ್ಕಾರಿ ಉದ್ಯೋಗಕ್ಕೆ ಸೇರುವ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ನೀಡುವ ಜೊತೆಗೆ ರಾಜ್ಯ ಸರ್ಕಾರಿ ಹುದ್ದೆಗಳ ಉದ್ಯೋಗ ನೇಮಕಾತಿಯಲ್ಲಿ ಶೇಕಡಾ 1ರಷ್ಟು ಮೀಸಲಾತಿಯನ್ನು ನೀಡಲಾಗಿದೆ.
6. ಬಡತನ ನಿವಾರಣೆಗಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿರಿ.
ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
- ಪ್ರಧಾನಮಂತ್ರಿ ಗ್ರಾಮೋದಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.
- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು ಜಾರಿಗೊಳಿಸಲಾಗಿದೆ.
- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಜಾರಿಗೊಳಿಸಲಾಗಿದೆ.
- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನವನ್ನು ಜಾರಿಗೊಳಿಸಲಾಗಿದೆ.
- ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೊಳಿಸಲಾಗಿದೆ.
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಜಾರಿಗೊಳಿಸಲಾಗಿದೆ-
7. ಲಾಭ ಕೋರತನದಿಂದ ಅನೇಕ ದುಷ್ಪರಿಣಾಮಗಳಾಗುತ್ತವೆ. ಈ ಹೇಳಿಕೆಯನ್ನು ಸಮರ್ಥಿಸಿ.
ಲಾಭಕೋರತನದಿಂದ ಆರ್ಥಿಕ ಅಸಮಾನತೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಅಪರಾಧಗಳ ಏರಿಕೆಯಾಗುತ್ತದೆ. ಕಪ್ಪು ಹಣದ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ. ಅನೈತಿಕ ವ್ಯಾಪಾರ ವಹಿವಾಟಿಗೆ ಪ್ರಚೋದನೆ ನೀಡುತ್ತೆದೆ. ಬೆಲೆ ಏರಿಕೆಗೆ ದಾರಿ ಮಾಡಿಕೊಡುತ್ತದೆ. ಇದರಿಂದ ಹಣದುಬ್ಬರವು ಹೆಚ್ಚಳವಾಗುತ್ತದೆ. ಬಡತನ ಇನ್ನಷ್ಟು ಅಧಿಕ ಎನಿಸುತ್ತದೆ. ಜನಸಮುದಾಯದ ಆದಾಯದ ಬಹುಪಾಲು ಸೀಮಿತ ಶ್ರೀಮಂತ ವ್ಯಾಪಾರಿ ವರ್ಗದ ಕೈ ಸೇರುತ್ತದೆ.
8. ಕಳ್ಳ ಸಾಗಾಣಿಕೆ ಎಂದರೇನು? ಇದರ ನಿಯಂತ್ರಣಕ್ಕೆ ನಿಮ್ಮ ಸಲಹೆಗಳೇನು?
ಯಾವುದೇ ಆಮದು ಹಾಗೂ ರಫ್ತು ಸುಂಕಗಳನ್ನು ಸರ್ಕಾರಕ್ಕೆ ಪಾವತಿಸದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದು ಹಾಗೂ ಕಳುಹಿಸುವುದನ್ನು ಕಳ್ಳಸಾಗಾಣಿಕೆ ಎಂದು ಕರೆಯುತ್ತಾರೆ. ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸಲು ದೇಶದೊಳಗೆಯೇ ಪರ್ಯಾಯ ವಸ್ತುಗಳ ಪೂರೈಸುವುದು, ರಾಷ್ಟ್ರದ ಆಂತರಿಕ ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಿಸುವುದು, ಯೋಗ್ಯ ಆಮದು-ರಫ್ತು ಧೋರಣೆ, ವಿದೇಶಿ ವ್ಯಾಪಾರ ನೀತಿ, ಕಟ್ಟುನಿಟ್ಟಿನ ಕರಾವಳಿ ಗಸ್ತು ಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆ, ಆರ್ಥಿಕ ಅಪರಾಧಕ್ಕೆ ಕಠಿಣ ಶಿಕ್ಷೆ, ಅಂತರರಾಷ್ಟ್ರೀಯ ಹಾಗೂ ರಾಜ್ಯಗಳ ನಡುವಿನ ಆಂತರಿಕ ವ್ಯಾಪಾರ ಒಪ್ಪಂದಗಳು, ಕಳ್ಳ ಸಾಗಾಣಿಕೆಯು ಒಂದು ರಾಷ್ಟ್ರ ವಿರೋಧಿ ಚಟುವಟಿಕೆ ಹಾಗೂ ಆರ್ಥಿಕ ಅಪರಾಧ ಎಂಬ ವಿಚಾರವನ್ನು ಜನರಲ್ಲಿ ಮೂಡಿಸುವುದು, ಕಳ್ಳ ಸಾಗಾಣಿಕೆಯ ವಸ್ತುಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದರ ಮೂಲಕವೂ ಇದನ್ನು ನಿಯಂತ್ರಿಸಬಹುದು.
ಹೆಚ್ಚುವರಿ ಪ್ರಶ್ನೆಗಳು:
II. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ:
- ಚುನಾವಣಾ ಆಯೋಗದ ಮೊಟ್ಟ ಮೊದಲ ಮಹಿಳಾ ಚುನಾವಣಾ ಆಯುಕ್ತರು ಶ್ರೀಮತಿ ವಿ.ಎಸ್.ರಮಾದೇವಿ
- ಉಪಪ್ರಾದೇಶಿಕವಾದ ಬೆಳೆಯಲು ಪ್ರಮುಖ ಕಾರಣ ಪ್ರಾದೇಶಿಕ ಅಸಮತೋಲನ
- ಭ್ರಷ್ಟಾಚಾರ ತಡೆ ಕಾಯಿದೆಯನ್ನು ಜಾರಿಗೆ ತಂದ ವರ್ಷ 1988
- ದೇಶದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರು ಪ್ರತಿಭಾದೇವಿಸಿಂಗ್ ಪಾಟೀಲ್
- ಭಾರತದ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ವನ್ನು ಸ್ಥಾಪಿಸಲಾಗಿದೆ.
- ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ
II. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1.ಭ್ರಷ್ಟಾಚಾರ ಎಂದರೇನು?
ಭ್ರಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರಕ್ರಮಕ್ಕೆ ಪ್ರಚೋದನೆ ನೀಡುವಿಕೆ ಎಂದರ್ಥ.
2. ಭ್ರಷ್ಟಾಚಾರಕ್ಕೆ ಕಾರಣಗಳೇನು?
ಜಾತೀಯತೆ, ಸ್ವಜನ ಪಕ್ಷಪಾತ, ಉತ್ತರದಾಯಿತ್ವದ ಕೊರತೆ, ಕಠಿಣ ಕಾನೂನುಗಳ ಕೊರತೆ, ಮಾನವ ಸಹಜವಾದ ಸ್ವಾರ್ಥ, ಆಪತ್ತುಗಳ ನಿವಾರಣೆಯ ಲೆಕ್ಕಾಚಾರ, ಕಟ್ಟುನಿಟ್ಟಾದ ಮೇಲ್ವಿಚಾರಣೆ ಇಲ್ಲದಿರುವುದು, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ಅದಕ್ಷತೆ ಮುಂತಾದವು.
3. ಶ್ರೀಮಂತರ ಮತ್ತು ಬಡವರ ಅಂತರ ಹೆಚ್ಚಾಗುತ್ತಿರಲು ಕಾರಣಗಳೇನು?
ಖಾಸಗಿ ಕ್ಷೇತ್ರದ ಅತ್ಯಂತ ಹೆಚ್ಚಿನ ಮೊತ್ತದ ವೇತನ ಶ್ರೇಣಿ, ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಕ್ಷೇತ್ರ, ಶ್ವೇತವಸ್ತ್ರಧಾರಿ ಆರ್ಥಾತ್ ಮೇಲುಸ್ತರದ ನೌಕರಿಗಳು, ಲಾಭ ಬಡುಕತನ, ಭ್ರಷ್ಟಾಚಾರ ಇವೆಲ್ಲದರ ಫಲಶ್ರುತಿಯಾಗಿ ಶ್ರೀಮಂತರ ಮತ್ತು ಬಡವರ ಅಂತರ ಹೆಚ್ಚಾಗುತ್ತಿದೆ.
4. ಲಾಭಕೋರತನಕ್ಕೆ ಇರುವ ಮುಖ್ಯ ಕಾರಣಗಳು ಯಾವುವು?
ಏಕಸ್ವಾಮ್ಯ ವ್ಯವಸ್ಥೆ, ಬಹುರಾಷ್ಟ್ರೀಯ ಕಂಪನಿಗಳ ವ್ಯಾಪಕತೆ, ಅನಾರೋಗ್ಯಕರ ಮಾರುಕಟ್ಟೆ ನಿಯಮಗಳು, ಅಕ್ರಮ ದಾಸ್ತಾನು, ಕಳ್ಳ ವ್ಯಾಪಾರ, ಬೆಲೆಯ ಬಗ್ಗೆ ಸರಿಯಾದ ನಿಯಂತ್ರಣ ಇಲ್ಲದಿರುವಿಕೆ ಲಾಭಕೋರತನಕ್ಕೆ ಪ್ರಮುಖ ಕಾರಣಗಳಾಗಿವೆ.
5. ಲಾಭಕೋರತನವನ್ನು ನಿಯಂತ್ರಿಸುವ ವಿಧಾನಗಳು ಯಾವುವು?
ಬೆಲೆಗಳ ನಿಯಂತ್ರಣ, ಬೆಲೆ ಸೂಚ್ಯಂಕಗಳ ನಿಯತಕಾಲಿಕ ಪರಿಶೀಲನೆ, ಸಹಕಾರಿ ಮಾರುಕಟ್ಟೆಗಳ ವಿಸ್ತರಣೆ, ಸರಿಯಾದ ತೆರಿಗೆ ಧೋರಣೆ, ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಕೊರತೆಯಾಗದಂತೆ ಕ್ರಮವಹಿಸುವುದು ಮುಂತಾದವು.
6. ಭ್ರಷ್ಟಾಚಾರ ನಿರ್ಮೂಲನೆಗಾಗಿ ಇನ್ನೇನು ಮಾಡಬಹುದು?
ಭ್ರಷ್ಟಾಚಾರ ನಿಗ್ರಹಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕ ಸಹಕಾರ ತೀರಾ ಅತ್ಯಗತ್ಯ. ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುವುದಾದರೆ, ಒಳ್ಳೆಯ ರಾಜಕೀಯ ನಾಯಕತ್ವ, ಉತ್ತರದಾಯಿತ್ವ ಅಧಿಕಾರಿ ವರ್ಗ ಹಾಗೂ ಕಾನೂನು ಪ್ರಜ್ಞೆಯುಳ್ಳ ಜನತೆಯಿಂದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಬಹುದಾಗಿದೆ. ಭ್ರಷ್ಟಾಚಾರ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳನ್ನು ಬಲವರ್ಧನೆಗೊಳಿಸಬೇಕು. ಅತ್ಯಂತ ಕಠಿಣ ಶಿಕ್ಷಾ ವಿಧಾನವು ಭ್ರಷ್ಟಾಚಾರವನ್ನು ನಿರ್ಮೂಲನೆಗೆಳಿಸಲು ಎಲ್ಲಾ ಸ್ತರಗಳಲ್ಲಿಯೂ ಅತ್ಯಗತ್ಯ ಎನಿಸುತ್ತದೆ.
7. ಜನಸಂಖ್ಯಾ ಸ್ಫೋಟದಿಂದಾಗಿ ಎದುರಾಗುತ್ತಿರುವ ಸಮಸ್ಯೆಗಳು ಯಾವುವು?
ಜನಸಂಖ್ಯಾ ಸ್ಫೋಟದಿಂದಾಗಿ ನಿರುದ್ಯೋಗ, ಅನಕ್ಷರತೆ, ಬಡತನ, ವಸತಿ ಸೌಲಭ್ಯಗಳ ಕೊರತೆ, ಆರೋಗ್ಯ ಸಮಸ್ಯೆ, ಸುರಕ್ಷಿತ ಕುಡಿಯುವ ನೀರಿನ ಪೂರೈಕೆಯ ಕೊರತೆ ಮುಂತಾದ ಸಮಸ್ಯೆಗಳು ಎದುರಾಗುತ್ತಿವೆ.
8. ಲಾಭಕೋರತನ ಎಂದರೇನು?
ನ್ಯಾಯಯುತ ಬಳಕೆದಾರರಿಂದ ಅಧಿಕ ಹಣವನ್ನು ವಸೂಲಿ ಮಾಡಿ ಲಾಭಗಳಿಸುವ ಧೋರಣೆಯನ್ನು ಲಾಭಕೋರತನ ಎಂದು ಕರೆಯುತ್ತಾರೆ.
9. ಕೋಮುವಾದ ಅಥವಾ ಮತೀಯವಾದ ಎಂದರೇನು?
ಧರ್ಮದ ಆಧಾರದ ಮೇಲೆ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವೈಷಮ್ಯವನ್ನು ಬೆಳೆಸಿಕೊಳ್ಳುವುದನ್ನು ಕೋಮುವಾದ ಅಥವಾ ಮತೀಯವಾದ ಎಂದು ಕರೆಯುತ್ತೇವೆ.
10. ಕೋಮುವಾದವು ಉಂಟು ಮಾಡುವ ದುಷ್ಪರಿಣಾಮಗಳು ಯಾವುವು?
ಕೋಮುವಾದ ಸಾಮಾಜಿಕವಾಗಿ ಬಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಸಮಾಜದಲ್ಲಿ ಗುಂಪುಗಾರಿಕೆ, ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯನ್ನು ಸೃಷ್ಟಿಸುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ. ವ್ಯಕ್ತಿಗಳ ಜೀವ ಹಾಗೂ ಸೊತ್ತುಗಳ ನಾಶಕ್ಕೂ ಕಾರಣವಾಗುತ್ತದೆ. ಗುಂಪುಗಳ ಮಧ್ಯೆ ಪರಸ್ಪರ ದೋಷಾರೋಪಣೆ, ದೈಹಿಕ ಹಲ್ಲೆಗಳಿಗೂ ಕಾರಣವಾಗುತ್ತದೆ. ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಗೆ ಅಪಾಯವನ್ನು ತಂದೊಡ್ಡುವ ಸವಾಲಾಗಿದೆ. ಮಾರಕವಾಗಿದೆ.
10. ಪ್ರಾದೇಶಿಕವಾದ ಎಂದರೇನು?
ಒಂದು ನಿರ್ದಿಷ್ಟ ಜನಸಮುದಾಯವು ತಾವು ವಾಸಿಸುವ ಪ್ರದೇಶವನ್ನೇ ಗಾಢವಾಗಿ ಪ್ರೀತಿಸಿ ಕೇವಲ ಆ ಭಾಗದ ಬಗ್ಗೆಯೇ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು.
11. ಜನಸಂಖ್ಯಾ ಸ್ಪೋಟದಿಂದಾಗುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಯಾವುವು?
ಅಕ್ಷರ ಪ್ರಸರಣ, ತಾಂತ್ರಿಕ ಶಿಕ್ಷಣ, ಕೃಷಿ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ರಫ್ತು ಹೆಚ್ಚಳ, ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುವರಿ ಉದ್ಯೋಗವಕಾಶಗಳ ಸೃಷ್ಟಿ ಇವೆಲ್ಲಾ ಜನಸಂಖ್ಯಾ ಸ್ಪೋಟದಿಂದಾಗುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳಾಗಿವೆ.
12. ಬಡತನ ಎಂದರೇನು?
ಜನರು ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಸಾಧ್ಯವಾಗದೇ ಇರುವ ಸ್ಥಿತಿಯನ್ನು ಬಡತನ ಎನ್ನಬಹುದು.
13. ಅತಿಯಾದ ಪ್ರಾದೇಶಿಕತೆಯಿಂದ ಉಂಟಾಗುವ ಅಪಾಯಗಳೇನು?
ಭಾರತದಂತಹ ವಿಶಾಲ ರಾಷ್ಟ್ರ ಸಹಜವಾಗಿ ಹಲವಾರು ಪ್ರಾದೇಶಿಕ ವಿಭಿನ್ನತೆಗಳನ್ನು ಹೊಂದಿದೆ. ಒಂದು ನಿರ್ದಿಷ್ಟ ಹಂತದವರೆಗೆ ಈ ಪ್ರಾದೇಶಿಕವಾದವು ಅಗತ್ಯವಾದುದಾಗಿದೆ. ಆದರೆ ಇದು ಹೆಚ್ಚೆನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಅಪಾಯವನ್ನುಂಟುಮಾಡಬಹುದು. ಅಂತರರಾಜ್ಯ ಜಲವಿವಾದ ಹಾಗೂ ಗಡಿ ವಿವಾದಗಳಿಗೆ ಕಾರಣವಾಗಬಹುದು.
14. ಭ್ರಷ್ಟಾಚಾರದ ಜಾಲದಲ್ಲಿ ಸೇರಿಕೊಂಡಿರುವ ಸಂಗತಿಗಳು ಯಾವುವು?
ತೆರಿಗೆಗಳ್ಳತನ, ಅಕ್ರಮದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿ, ಕಳ್ಳಸಾಗಾಣಿಕೆ, ಆರ್ಥಿಕ ವಂಚನೆ, ಮೋಸಗಾರಿಕೆ, ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ, ಔದ್ಯೋಗಿಕ ವಂಚನೆ.
15. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಅವಶ್ಯಕವೆನಿಸುವ ಕ್ರಮಗಳು ಯಾವುವು?
ಉತ್ತಮ ಆರ್ಥಿಕ ಸುಧಾರಣೆಗಳು, ಯೋಜನಾಬದ್ಧ ಹಣಕಾಸಿನ ನಿರ್ವಹಣೆ, ಪ್ರಗತಿಪರ ತೆರಿಗೆ ಪದ್ಧತಿ, ಸಣ್ಣ ಹಾಗೂ ಗ್ರಾಮೀಣ ಮಟ್ಟದ ಗುಡಿ ಹಾಗೂ ಗೃಹ ಕೈಗಾರಿಕಾ ಅಭಿವೃದ್ಧಿ, ಬೃಹತ್ ಉದ್ಯಮ ಹಾಗೂ ಏಕಸ್ವಾಮ್ಯ ವಲಯಗಳ ಸರಿಯಾದ ನಿಯಂತ್ರಣ, ಭೂಸ್ಮಧಾರಣೆ, ಕಾರ್ಮಿಕಪರ ಧೋರಣೆಗಳು, ಸಾಮಾಜಿಕ ಭದ್ರತೆ ಮುಂತಾದ ಕ್ರಮಗಳ ಮೂಲಕ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಬಹುದು.
16. ಅನಕ್ಷರತೆಗೆ ಕಾರಣಗಳೇನು?
ಅನಕ್ಷರತೆಗೆ ಬಡತನ, ವಲಸೆ ಹೋಗುವಿಕೆ, ಮಕ್ಕಳ ದುಡಿಮೆ, ಬಾಲ್ಯ ವಿವಾಹ, ಚಿಕ್ಕ ಮಕ್ಕಳ ಲಾಲನೆ-ಪಾಲನೆಗೆ ಹಿರಿಯ ಮಕ್ಕಳನ್ನು ಬಳಸಿಕೊಳ್ಳುವುದು, ಶಿಕ್ಷಣ ಕೊಡಿಸಬೇಕೆಂಬ ಆಸಕ್ತಿಯ ಕೊರತೆ ಮೊದಲಾದ ಕಾರಣಗಳನ್ನು ಗುರಿಸಬಹುದಾಗಿದೆ.
17. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುವು?
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನದ ನಿವಾರಣೆಗಾಗಿ ವಿಶೇಷ ಆದ್ಯತೆ ನಡಲಾಗಿದೆ. ಇದಕ್ಕಾಗಿ ಡಿ.ಎಂ. ನಂಜುಡಪ್ಪ ಸಮಿತಿ, ಮಲೆನಾಡು ಅಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ೭ ಜಿಲ್ಲೆಗಳಿಗೆ ಸಂವಿಧಾನದ 371 ಜೆ ವಿಧಿಯ ಅಡಿಯಲ್ಲಿ ವಿಶೇಷ ಮಾನ್ಯತೆ ನೀಡುವ ಮೂಲಕ ಸೇರ್ಪಡೆ ಮಾಡುವುದರ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರಯತ್ನಿಸಲಾಗುತ್ತಿದೆ.
ಮುಖ್ಯಾಂಶಗಳು
- ನಾವು 1947 ರಿಂದ ಹಲವಾರು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
- ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಹುತೇಕ ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಹಾಗಾಗಿ ಅವುಗಳಿಗೆ ಸೂಕ್ತ ಎನಿಸುವ ಮಾನವೀಯ ಪರಿಹಾರಗಳನ್ನು ಕಂಡುಕೊಳ್ಳಬೇಕು.
- ಉತ್ತಮ ಶಾಸನಾತ್ಮಕ ಹಾಗೂ ಸಾಮಾಜಿಕ ಸುಧಾರಣೆಗಳು, ದಕ್ಷ ಆಡಳಿತ, ತ್ವರಿತ ಹಾಗೂ ಪಕ್ಷಪಾತರಹಿತ ನ್ಯಾಯಾಂಗ ವ್ಯವಸ್ಥೆ ಹಾಗೂ ಜನತೆಯ ಸಹಕಾರಗಳಿಂದ ಈ ಸವಾಲುಗಳನ್ನು ಪರಿಹರಿಸುವ ಪ್ರಯತ್ನ ನಡೆಯಬೇಕಿದೆ.
- ಕೋಮುವಾದ ಅಥವಾ ಮತೀಯವಾದ ನಮ್ಮ ಭಾರತೀಯ ಸಮಾಜದ ಪ್ರಮುಖ ಸಮಸ್ಯೆಯಾಗಿದೆ.
- ಧರ್ಮದ ಆಧಾರದ ಮೇಲೆ ಸಮಗ್ರ ಸಮಾಜ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವೈಷಮ್ಯ ಬೆಳೆಸಿಕೊಳ್ಳುವುದನ್ನು ಕೋಮುವಾದ ಅಥವಾ ಮತೀಯವಾದ ಎನ್ನುತ್ತೇವೆ.
- ಕೋಮುವಾದವು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಗೆ ಅಪಾಯ ತಂದೊಡ್ಡುವ ಸವಾಲಾಗಿದೆ.
- ಒಂದು ನಿರ್ದಿಷ್ಟ ಜನಸಮುದಾಯವು ತಾವು ವಾಸಿಸುವ ಪ್ರದೇಶವನ್ನೇ ಗಾಢವಾಗಿ ಪ್ರೀತಿಸಿ ಕೇವಲ ಆ ಭಾಗದ ಬಗ್ಗೆಯೇ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು.
- ರಾಜ್ಯದೊಳಗಿನ ವಿವಿಧ ಪ್ರದೇಶಗಳಲ್ಲಿರುವ ಪ್ರಾದೇಶಿಕವಾದವನ್ನು ಉಪಪ್ರಾದೇಶಿಕವಾದವೆಂದು ಕರೆಯಬಹುದು.
- ಈ ಉಪಪ್ರಾದೇಶಿಕವಾದ ಬೆಳೆಯಲು ಪ್ರಾದೇಶಿಕ ಅಸಮತೋಲನ ಪ್ರಮುಖ ಕಾರಣವಾಗಿದೆ.
- ಅನಕ್ಷರತೆಯು ಭಾರತದಲ್ಲಿ ಒಂದು ಮುಖ್ಯ ಸವಾಲಾಗಿದೆ. ದೇಶದಲ್ಲಿ ಇನ್ನೂ ಪೂರ್ಣಪ್ರಮಾಣದ ಸಾಕ್ಷರತೆಯನ್ನು ಸಾಧಿಸಬೇಕಾಗಿದೆ.
- ಭ್ರಷ್ಟಾಚಾರ ಭಾರತದ ಸಾರ್ವಜನಿಕ ಜೀವನದಲ್ಲಿ ಒಂದು ಮುಖ್ಯ ಪಿಡುಗಾಗಿದೆ.
- ಭ್ರಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರಕ್ರಮಕ್ಕೆ ಪ್ರಚೋದನೆ ನೀಡುವಿಕೆ ಎಂದು ಅರ್ಥ.
- ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ.
- ಲಿಂಗ ತಾರತಮ್ಯವು ನಿವಾರಣೆಯಾಗಬೇಕಾಗಿದೆ. ಸಾಮಾಜಿಕ ಪದ್ಧತಿಗಳು ಬಡತನ ಮತ್ತು ಅನಕ್ಷರತೆಯಂತಹ ಕಾರಣಗಳಿಂದ ಸ್ತ್ರೀಯರು ಇನ್ನೂ ಪ್ರಗತಿಯ ಪಥದಲ್ಲಿ ಹಿಂದುಳಿದಿರುವುದು ದೇಶದ ಅಭಿವೃದ್ಧಿಗೆ ಸಮಸ್ಯೆಯಾಗಿ ಕಾಡುತ್ತಿದೆ.
- ಲಿಂಗ ತಾರತಮ್ಯದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಆಗುವ ತಾರತಮ್ಯವೂ ಒಂದು. ತಾವು ಜನಿಸುವಾಗ ಇದ್ದ ಲಿಂಗಕ್ಕಿಂತ ಭಿನ್ನವಾದ ಶಾರೀರಿಕ ಮತ್ತು ಸಾಮಾಜಿಕ ವರ್ತನೆಯನ್ನು ಹೊಂದಿರುವವರೇ ಲಿಂಗತ್ವ ಅಲ್ಪಸಂಖ್ಯಾತರು.
- ತೀವ್ರಗತಿಯಲ್ಲಿ ಕಂಡುಬರುವ ಆರ್ಥಿಕ ಅಸಮಾನತೆಯನ್ನು ಭಾರತದಲ್ಲಿನ ಇನ್ನೊಂದು ಗಂಭೀರ ಸವಾಲು ಎನ್ನಬಹುದು.
- ಜನಸಂಖ್ಯಾ ಸ್ಫೋಟ, ಬಡತನ, ಲಾಭಕೋರತನ, ಕಳ್ಳಸಾಗಾಣಿಕೆ ಭಾರತ ಎದುರಿಸುತ್ತಿರುವ ಇನ್ನಿತರ ಸವಾಲುಗಳಾಗಿವೆ.
ಇತರೆ ವಿಷಯಗಳು :
ಸಾರ್ವಜನಿಕ ಆಡಳಿತ ಒಂದು ಪರಿಚಯ ಪಾಠದ ನೋಟ್ಸ್
ದುಡಿಮೆ ಮತ್ತು ಆರ್ಥಿಕ ಜೀವನ ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್