10th Standard Sarvajanika Adalita Ondu Parichaya Social Notes Question Answer Guide Mcq Pdf Download in Kannada Medium Karnataka State Syllabus 2025, 10ನೇ ತರಗತಿ ಸಾರ್ವಜನಿಕ ಆಡಳಿತ ಒಂದು ಪರಿಚಯ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ, ಸಾರ್ವಜನಿಕ ಆಡಳಿತ ಒಂದು ಪರಿಚಯ Question Answer, SSLC Social Science 6th Chapter Notes,10th Std Social Sixth Lesson Question And Answer,10th Political part 1 Sarvajanika Adalita Ondu Parichaya Notes, Kseeb Solutions for Class 10 social science Chapter 6 Notes Key Answer, 10th Standard Sarvajanik Adalita Ondu Parichaya in Kannada Notes, ಸಾರ್ವಜನಿಕ ಆಡಳಿತ ಒಂದು ಪರಿಚಯ Question Answer 10th, Sarvajanika Adalita Question Answer

10ನೇ ತರಗತಿ ಸಾರ್ವಜನಿಕ ಆಡಳಿತ ಒಂದು ಪರಿಚಯ ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. ಸಾರ್ವಜನಿಕ ಆಡಳಿತದ ಪಿತಾಮಹ ವುಡೋವಿಲ್ಸನ್
2. ಸಾರ್ವಜನಿಕ ಆಡಳಿತದ ಪದವನ್ನು ಪ್ರಪ್ರಥಮ ಬಾರಿಗೆ ಬಳಸಿದವರು ಅಲೆಕ್ಸಾಂಡರ್ ಹ್ಯಾಮಿಲ್ಟನ್
3. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ.
4. ಸಂವಿಧಾನದ 315ನೇ ವಿಧಿಯು ರಾಜ್ಯ ಲೋಕಸೇವಾ ಆಯೋಗದ ಕುರಿತು ತಿಳಿಸುತ್ತದೆ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.
1. ಸಾರ್ವಜನಿಕ ಆಡಳಿತವು ಪ್ರಸ್ತುತ ಅತ್ಯಗತ್ಯವಾಗಿದೆ. ಚರ್ಚಿಸಿ.
ಆಧುನಿಕ ಸಮಾಜವು ಸಂಕೀರ್ಣ ಮತ್ತು ಶೀಘ್ರಗತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವುದರಿಂದ ಸಾರ್ವಜನಿಕ ಆಡಳಿತವು ಪ್ರಮುಖ ಸ್ಥಾನವನ್ನು ಹೊಂದಿದೆ. ಸಾರ್ವಜನಿಕ ಆಡಳಿತದಿಂದ ಸಮಾಜಕ್ಕೆ ಆಗುವ ಪ್ರಯೋಜಗಳ ಅರಿವು ಮಹತ್ವವು ದಿನೇ ದಿನೇ ಹೆಚ್ಚುತ್ತಿದೆ. ಪೊಲೀಸ್ ರಾಜ್ಯದಿಂದ ಸುಖೀ ರಾಜ್ಯವಾಗಿ ಬದಲಾವಣೆಯಾಗುತ್ತಿರುವ ರಾಜ್ಯದ ಸ್ವರೂಪಕ್ಕೆ ಅನುಗುಣವಾಗಿ ಸಾರ್ವಜನಿಕ ಆಡಳಿತದ ಪ್ರಾಮುಖ್ಯತೆಯು ಹೆಚ್ಚುತ್ತಿದೆ. ಮಾನವನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಾನವ ಸಮಾಜದ ನೀವು ಉಳಿವು ಸಾರ್ವಜತ ಆಡಳಿತವನ್ನು ಅವಲಂಬಿಸಿದೆ.
2. ಸಾರ್ವಜನಿಕ ಆಡಳಿತವು ವ್ಯಕ್ತಿಯ ಹುಟ್ಟಿನಿಂದ ಮರಣದವರೆಗೆ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತದೆ. ಸಮರ್ಥಿಸಿ.
ಸಾರ್ವಜನಿಕ ಆಡಳಿತ ವ್ಯವಸ್ಥೆಯು ವ್ಯಕ್ತಿಯು ಗರ್ಭದಲ್ಲಿರುವಾಗಿನಿಂದ ಹಿಡಿದು ಅವನ ಮರಣದವರೆಗೂ ಅಗತ್ಯವಾದ ಸೇವೆಗಳನ್ನು ಒದಗಿಸುತ್ತದೆ. ಶಾಂತಿ ಹಾಗೂ ಸುವ್ಯಸ್ಥೆಯನ್ನು ಕಾಪಾಡಿ ಜನರ ಪ್ರಾಣ ಹಾಗೂ ಆಸ್ತಿಯ ರಕ್ಷಣೆ, ನ್ಯಾಯ ಒದಗಿಸುವುದು, ಶಿಕ್ಷಣ ನೀಡುವುದು, ಉದ್ಯೋಗಾವಕಾಶ ಕಲ್ಪಿಸುವುದು, ಅವಶ್ಯಕ ವಸ್ತುಗಳನ್ನು ಪೂರೈಸುವುದು, ದೇಶ ರಕ್ಷಣೆ, ಆರ್ಥಿಕ ಸಮಾನತೆಯನ್ನು ಉಂಟುಮಾಡುವುದು ಮುಂತಾರ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ.
3. ನೇಮಕಾತಿ ವಿಧಗಳ ಕುರಿತು ವಿವರಿಸಿ.
ನೇಮಕಾತಿಯಲ್ಲಿ ಪ್ರತ್ಯಕ್ಷ ನೇಮಕಾತಿ ಮತ್ತು ಪರೋಕ್ಷ ನೇಮಕಾತಿ ಎಂಬ ಎರಡು ವಿಧಗಳಿವೆ.
ಪ್ರತ್ಯಕ್ಷ ನೇಮಕಾತಿಯನ್ನು ನೇರ ನೇಮಕಾತಿ ಎಂದೂ ಕರೆಯುತ್ತಾರೆ. ನೇರ ನೇಮಕಾತಿಯು ಜನಪ್ರಿಯ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಿಶ್ಚಿತ ರೀತಿಯಲ್ಲಿ ಆಯ್ಕೆ ಮಾಡುವುದೇ ನೇರ ನೇಮಕಾತಿಯಾಗಿರುತ್ತದೆ. ನೇರ ನೇಮಕಾತಿಯ ಮೂಲಕ ಸೇವೆಗೆ ಸೇರಬೇಕಾದ ಅಭ್ಯರ್ಥಿಗಳು ಕೆಲವು ಸಾಮಾನ್ಯ ಮತ್ತು ವಿಶೇಷ ಅರ್ಹತೆಗಳನ್ನು ಹೊಂದಿರಬೇಕು. ಉದಾಹರಣೆಗೆ ನಾಗರಿಕ ಸೇವೆಗಳಿಗೆ ನಡೆಯುವ ನೇಮಾಕಾತಿ.
ಪರೋಕ್ಷ ನೇಮಕಾತಿಯನ್ನು ಆಂತರಿಕ ನೇಮಕಾತಿ ಎಂದೂ ಕರೆಯುವರು. ಈಗಾಗಲೇ! ಸರ್ಕಾರಿ ಸೇವೆಯ ಹುದ್ದೆಯಲ್ಲಿರುವವರನ್ನು ಅವರ ವಿದ್ಯಾರ್ಹತೆ ಮತ್ತು ಸೇವಾ ಹಿರಿತನ ಆಧಾರದ ಮೇಲೆ ಮೇಲ್ದರ್ಜೆಯ ಹುದ್ದೆಗಳಿಗೆ ನೇಮಕ ಮಾಡುವುದೇ ಪರೋಕ್ಷ ನೇಮಕಾತಿ ಇದೇ ಪದೋನ್ನತಿ ಮತ್ತು ಬಡ್ತಿಯ ವಿಧಾನವೂ ಆಗಿದೆ.
4. ಕಾನೂನು ವ್ಯವಸ್ಥೆಯಲ್ಲಿ ರಾಜ್ಯದ ಪಾತ್ರವೇನು? ವಿವರಿಸಿ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರಗಳ ಪ್ರಾಥವಿ! ಜವಾಬ್ದಾರಿಯಾಗಿದೆ. ತಮ್ಮ ಜವಾಬ್ದಾರಿಯ ನಿರ್ವಹಣೆಗಾಗಿ ರಾಜ್ಯಗಳು ಕಾರ್ಯ ನಿರ್ವಹಣಾ ವರ್ಗ ಮತ್ತು ಸಲಹಾ ವರ್ಗಗಳಿಂದ ಕೂಡಿದ ಪೊಲೀಸ್ ಆಡಳಿತವನ್ನು ಹೊಂದಿವೆ. ರಾಜ್ಯಗಳಲ್ಲಿ ಪೊಲೀಸ್ ಖಾತೆಯು ರಾಜ್ಯ ಗೃಹ ಮಂತ್ರಿಯ ಅಧೀನದಲ್ಲಿರುತ್ತದೆ. ರಾಜ್ಯ ಗೃಹ ಮಂತ್ರಿಯು ಪೊಲೀಸ್ ಆಡಳಿತಕ್ಕೆ ಸಂಬಂದ್ಧ ಪಟ್ಟ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಗೃಹ ಇಲಾಖೆಯ ಕಾರ್ಯದರ್ಶಿಯು ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದು ಇವರು ಗೃಹ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಇವರು ಗೃಹ ಮಂತ್ರಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನೆರವು ನೀಡುತ್ತಾರೆ. ಗೃಹ ಇಲಾಖೆಯು ಪೊಲೀಸ್ ಆಡಳಿತ ಮೇಲ್ವಿಚಾರಣೆ ಮತ್ತು ಸಂಯೋಜನೆಯ ಕಾರ್ಯವನ್ನು ನಿರ್ವಹಿಸುತ್ತದೆ.
ಹೆಚ್ಚುವರಿ ಪ್ರಶ್ನೆಗಳು:
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
- ಜಂಟಿ ಲೋಕಸೇವಾ ಆಯೋಗಗಳು ಸಾಂವಿಧಾನಾತ್ಮಕ ಸಂಸ್ಥೆಗಳಲ್ಲ.
- ಸೂಕ್ತ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ನೇಮಕಾತಿ
- ಲೂಥರ್ ಗುಲಿಕ್ ಸಾರ್ವಜನಿಕ ಆಡಳಿತದ ವ್ಯಾಪ್ತಿಯನ್ನು ಪೋಸ್ಟ್ ಕಾರ್ಬ್ ఎంబ ಇಂಗ್ಲಿಷ್ ಪದದಲ್ಲಿ ಸೂಚಿಸಿದ್ದಾರೆ.
- ಕನ್ನಡದಲ್ಲಿರುವ ಆಡಳಿತ ಎಂಬ ಪದ ಇಂಗ್ಲೀಷಿನ ಅಡ್ಮಿಸಿಸ್ಟ್ರೇಷನ್ ರೂಪಾಂತರವಾಗಿದೆ. ಎಂಬ ಪದದ
- ಕೇಂದ್ರ ಲೋಕಸೇವಾ ಆಯೋಗದ ಕೇಂದ್ರ ಕಛೇರಿ ದೆಹಲಿ ಯಲ್ಲಿದೆ.
- ಲೋಕಸೇವಾ ಆಯೋಗದ ಅಧ್ಯಕ್ಷರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ.
II.ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1.ಸಾರ್ವಜನಿಕ ಆಡಳಿತವು ಸಾಮಾಜಿಕ ಭದ್ರತೆಯನ್ನು ಹೇಗೆ ಧೃಡಪಡಿಸುತ್ತದೆ. ಉದಾಹರಣೆಯೊಂದಿಗೆ ವಿವರಿಸಿ.
ಸಮಾಜವು ವಿವಿಧ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳಿಗೆ ಸೇರಿದ ಜನರನ್ನೊಳಗೊಂಡಿರುತ್ತದೆ. ಸಮಾಜದಲ್ಲಿರುವ ಬಡವರು ಮತ್ತು ದುರ್ಬಲರ ಕ್ಷೇಮಾ ಭಿವೃದ್ಧಿಯೂ ಸಹ ರಾಜ್ಯ ಸರ್ಕಾರಗಳಂತಹ ರಾಜ್ಯಾಡಳಿತ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಬಡವರು, ಮಹಿಳೆಯರು, ಮಕ್ಕಳು, ಆದಿವಾಸಿಗಳು, ದಿವ್ಯಾಂಗ ಜನರು, ಹಿರಿಯನಾಗರಿಕರು, ಅನಾಥರು ಮತ್ತು ನಿರ್ಗತಿಕರಂತಹ ಅನೇಕ ಜನರಿಗೆ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ಅತ್ಯಗತ್ಯವಾಗಿರುತ್ತದೆ. ಅವರ ಏಳಿಗೆಗಾಗಿ ಸರ್ಕಾರ ಅನುಷ್ಠಾನಗೊಳಿಸುವ ನೀತಿಗಳೇ ಸಾಮಾಜಿಕ ಭದ್ರತಾ ನೀತಿಗಳಾಗಿವೆ. ಉದಾ: ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗ ಜನರಿಗೆ ನೀಡುವ ಮಾಶಾಸನಗಳು, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಜಾರಿಗೊಳಿಸುವ ಯುವನಿಧಿ ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಆಹಾರ ಭದ್ರತೆಯನ್ನು ಒದಗಿಸಲು ಅನುಷ್ಠಾನಗೊಳಿಸುವ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಮುಂತಾದವು ಸಾಮಾಜಿಕ ಭದ್ರತಾ ನೀತಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ.
2. ಸಾರ್ವಜನಿಕ ಆಡಳಿತವು ಸರ್ಕಾರದ ಆಧಾರಸ್ತಂಭವಾಗಿದೆ. ಹೇಗೆ?
ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಂಗವಿಲ್ಲದ ಸರ್ಕಾರವನ್ನು ಊಹಿಸಬಹುದು. ಆದರೆ ಆಡಳಿತಾಂಗ ವಿಲ್ಲದ ಸರ್ಕಾರ ಅಥವಾ ರಾಜ್ಯವನ್ನು ಊಹಿಸಲೂ ಅಸಾಧ್ಯ. ಸಾರ್ವಜನಿಕ ನೀತಿಗಳನ್ನು ಕಾರ್ಯಗತ ಗೊಳಿಸಲು ಆಡಳಿತಾತ್ಮಕ ಯಂತ್ರ ಎಲ್ಲ ರಾಷ್ಟ್ರಗಳಲ್ಲಿಯೂ ಅತ್ಯವಶ್ಯಕವಾಗಿರುತ್ತದೆ. ಹಾಗಾಗಿ ಪಾಲ್ಅಪಲ್ಬಿಯವರು ಆಡಳಿತವಿಲ್ಲದ ಸರ್ಕಾರ ಕೇವಲ ಒಣ ಹರಟೆಯ ಕೂಟವಾಗುವುದೆಂದು ಅಭಿಪ್ರಾಯಪಟ್ಟಿ ದ್ದಾರೆ.
3. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಸಂವಿಧಾನದ 355 ಮತ್ತು 356ನೇ ವಿಧಿಗಳಲ್ಲಿ ಏನನ್ನು ತಿಳಿಸಲಾಗಿದೆ?
ಸಂವಿಧಾನದ 355ನೇ ವಿಧಿಯ ಪ್ರಕಾರ ಬಾಹ್ಯ ಆಕ್ರಮಣಗಳಿಂದ ರಾಜ್ಯಗಳನ್ನು ರಕ್ಷಿಸುವುದು. ಸಂವಿಧಾನದ 356ನೇ ವಿಧಿಯನ್ವಯ ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ವಿಫಲವಾದಾಗ ರಾಜ್ಯ ತುರ್ತು ಪರಿಸ್ಥಿತಿ ಅಥವಾ ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಜಾರಿಗೊಳಿಸುವುದು.
4. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕಾರ್ಯಗಳನ್ನು ತಿಳಿಸಿ.
ಈ ಪಡೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು, ದಂಗೆಗಳನ್ನು ಹತ್ತಿಕ್ಕಲು ರಾಜ್ಯ ಪೊಲೀಸ್ ಪಡೆಗಳಿಗೆ ಸಹಾಯ ಮಾಡುತ್ತದೆ ಹಾಗೂ ದೇಶದ ಯಾವುದೇ ಭಾಗ ನೈಸರ್ಗಿಕ ವಿಕೋಪಗಳಿಗೆ ಒಳಗಾದಾಗ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತದೆ.
5. ವುಡ್ರೋವಿಲ್ಸನ್ ಸಾರ್ವಜನಿಕ ಆಡಳಿತವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?
ಕಾನೂನಿನ ಸಮಗ್ರ ಮತ್ತು ಕ್ರಮಬದ್ಧ ಜಾರಿಗೊಳಿಸುವಿಕೆಯೇ ಸಾರ್ವಜನಿಕ ಆಡಳಿತವಾಗಿರುತ್ತದೆ ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ.
6. ಒಟ್ಟಿನಲ್ಲಿ ಸಾರ್ವಜನಿಕ ಆಡಳಿತವೆಂದರೇನು?
ಒಟ್ಟಿನಲ್ಲಿ ಸಾರ್ವಜನಿಕ ಆಡಳಿತವೆಂದರೆ ಸಮಗ್ರ ಸರ್ಕಾರಿ ವ್ಯವಸ್ಥೆಯ ಸಮಸ್ತ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ. ರಾಜ್ಯದ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ಸರ್ಕಾರದ ಅಂಗವೇ ಸಾರ್ವಜನಿಕ ಆಡಳಿತವಾಗಿರುತ್ತದೆ.
7. ಸಾರ್ವಜನಿಕ ಆಡಳಿತವು ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಹೇಗೆ ಸಹಾಯ ಮಾಡುತ್ತದೆ?
ಸಾರ್ವಜನಿಕ ಆಡಳಿತವು ಶಾಸಕಾಂಗ ರೂಪಿಸುವ ಶಾಸನಗಳನ್ನು ಮತ್ತು ಕಾರ್ಯಾಂಗ ರೂಪಿಸುವ ಸಾರ್ವಜನಿಕ ನೀತಿ ಯೋಜನೆಗಳನ್ನು ಚಾಚೂ ತಪ್ಪದೆ ಕಾರ್ಯಗತಗೊಳಿಸುತ್ತದೆ. ಅವುಗಳ ನಿರೂಪಣೆಗೂ ಸಹ ಸಾರ್ವಜನಿಕ ಆಡಳಿತವೇ ಅವಶ್ಯಕ ಅಂಕಿ ಅಂಶಗಳು ಮತ್ತು ಮಾಹಿತಿಯನ್ನು ಒದಗಿಸುತ್ತದೆ. ನಿಯೋಜಿತ ಶಾಸನಗಳ ರಚನೆಯಲ್ಲಿ ಶಾಸನಗಳಿಗೆ ಅಗತ್ಯ ವಿವರಗಳನ್ನು ತುಂಬಿ ನೆರವಾಗುತ್ತದೆ.
8. ಯೋಜಿಸುವಿಕೆ ಎಂದರೇನು?
ಸರ್ಕಾರಿ ಯಂತ್ರ ಕೈಗೊಳ್ಳಬೇಕಾದ ಕಾರ್ಯಸೂಚಿ, ನರ್ವಹಿಸಬೇಕಾಗಿರುವ ಕಾರ್ಯಗಳು ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವ ವಿಧಿ ವಿಧಾನಗಳ ಕುರಿತು ಯೋಜನೆಯನ್ನು ಸಿದ್ಧಪಡಿಸುವುದು.
9. ನಿರ್ದೇಶಿಸುವಿಕೆ ಎಂದರೇನು?
ಸರ್ಕಾರದ ವಿವಿಧ ಇಲಾಖೆಗಳಿಗೆ ಕಾಲಕಾಲಕ್ಕೆ ಆದೇಶಗಳನ್ನು ಹಾಗೂ ನಿರ್ದೇಶನಗಳನ್ನು ನೀಡುವುದು ಮತ್ತು ತೀರ್ಮಾನಗಳನ್ನು ಕೈಗೊಳ್ಳುವುದು.
10. ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳನ್ನು ತಿಳಿಸಿ
- ಕೇಂದ್ರ ಸರ್ಕಾರದ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.
- ನೇರ ನೇಮಕಾತಿಗೆ ವ್ಯಕ್ತಿತ್ವ ಪರಿಕ್ಷೆಯನ್ನು ನಡೆಸುವುದು.
- ವಿವಿಧ ಹುದ್ದೆಗಳಿಗೆ ಬಡ್ತಿ ಮತ್ತು ವರ್ಗಾವಣೆಗೆ ಅನುಸರಿಸಬೇಕಾದ ಸೇವೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳ ದುರ್ವತನೆಯ ಮೇರೆಗೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
- ರಾಷ್ಟ್ರಾಧ್ಯಕ್ಷರ ಸೂಚನೆಯ ಮೇರೆಗೆ ಯಾವುದೇ ವಿಷಯಗಳಿಗೆ ಸರ್ಕಾರಕ್ಕೆ ಸಲಹೆ ನೀಡುವುದು.
ಮುಖ್ಯಾಂಶಗಳು
- ಆಧುನಿಕ ಸಮಾಜವು ಸಂಕೀರ್ಣ ಮತ್ತು ಶೀಘ್ರಗತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವುದರಿಂದ ಸಾರ್ವಜನಿಕ ಆಡಳಿತವು ಪ್ರಮುಖ ಸ್ಥಾನವನ್ನು ಹೊಂದಿದೆ.
- ಅಮೆರಿಕಾದ ಮಾಜಿ ಅಧ್ಯಕ್ಷರಾದ ವುಡೋವಿಲ್ಸನ್ರವರನ್ನು ಸಾರ್ವಜನಿಕ ಆಡಳಿತದ ಪಿತಾಮಹ ಎಂದು ಕರೆಯಲಾಗಿದೆ.
- ಸಾರ್ವಜನಿಕ ಆಡಳಿತದ ಪದವನ್ನು ಪ್ರಪ್ರಥಮಬಾರಿಗೆ ಬಳಸಿದವರು ಅಲೆಕ್ಸಾಂಡರ್ ಹ್ಯಾಮಿಲ್ಟನ್.
- ಆಡಳಿತ ಎಂದರೆ ಜನರಿಗೆ ಸೇವೆ ಸಲ್ಲಿಸುವ, ಜನರ ಬಗೆಗೆ ಕಾಳಜಿ ವಹಿಸುವ ಮತ್ತು ಜನರಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುವ ಪ್ರಕ್ರಿಯೆಯಾಗಿದೆ.
- ಸಾರ್ವಜನಿಕ ಆಡಳಿತವೆಂದರೆ ಸಮಗ್ರ ಸರ್ಕಾರಿ ವ್ಯವಸ್ಥೆಯ ಸಮಗ್ರ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ. ರಾಜ್ಯದ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ಸರ್ಕಾರದ ಅಂಗವೇ ಸಾರ್ವಜನಿಕ ಆಡಳಿತವಾಗಿರುತ್ತದೆ.
- ಸಾರ್ವಜನಿಕ ಆಡಳಿತವು ಸರ್ಕಾರದ ಆಧಾರಸ್ತಂಭವಾಗಿದೆ. ಸಾರ್ವಜನಿಕ ಹಿರಾಸಕ್ತಿಯನ್ನು ಕಾಪಾಡಲು ಸೇವೆ ಸಲ್ಲಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ. ಸಾಮಾಜಿಕ ಭದ್ರತೆಯನ್ನು ಧೃಡಪಡಿಸುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗಕ್ಕೂ ಸಹಾಯ ಮಾಡುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗಕ್ಕೂ ಸಹಾಯ ಮಾಡುತ್ತದೆ.
- ಕೇಂದ್ರ ಲೋಕಾಸೇವಾ ಆಯೋಗವು ಸಂವಿಧಾನದ ವಿಧಿ 315ರ ಅಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನಾತ್ಮಕ ಸಂಸ್ಥೆಯಾಗಿದೆ. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.
- ರಾಜ್ಯಗಳಲ್ಲಿ ರಾಜ್ಯಲೋಕಸೇವಾ ಆಯೋಗಗಳು ಅಸ್ತಿತ್ವದಲ್ಲಿವೆ.
- ಕರ್ನಾಟಕ ಲೋಕಸೇವಾ ಆಯೋಗವು ಸಂವಿಧಾನದ 315ನೇ ವಿಧಿಯ ಅಡಿಯಲ್ಲಿ 18.05.1951 ರಂದು ಸ್ಥಾಪಿಸಲ್ಪಟ್ಟಿತು.
- ಸಾರ್ವಜನಿಕ ಭದ್ರತೆ ಒದಗಿಸಲು ಕೇಂದ್ರ ಗೃಹ ಮಂತ್ರಾಲಯವು ಸಶಸ್ತ್ರ ಸೈನಿಕ ಪಡೆಗಳನ್ನು ಹೊಂದಿದ್ದು ಅವುಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
- ರಾಜ್ಯಗಳು ಕಾರ್ಯನಿರ್ವಹಣಾ ವರ್ಗ ಮತ್ತು ಸಲಹಾ ವರ್ಗಗಳಿಂದ ಕೂಡಿದ ಪೊಲೀಸ್ ಆಡಳಿತವನ್ನು ಹೊಂದಿವೆ.
ಇತರೆ ವಿಷಯಗಳು :
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದ ನೋಟ್ಸ್
ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್