10th Class Grahakara Shikshana Mattu Rakshane Social Science Notes Question Answer Guide Extract Mcq Pdf Download in Kannada Medium 2025, social science class 10 important questions with answers pdf download kannada medium Karnataka State Syllabus, grahakara shikshana mattu rakshane notes in kannada 10th social science, kseeb solutions for class 10 social science kannada medium chapter 33 notes, 10th social science grahakara shikshana mattu rakshane question answer, sslc ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ question answers, 10ನೇ ತರಗತಿ ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, sslc social science 33 chapter notes in kannada,10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್ Pdf.

10ನೇ ತರಗತಿ ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
1.ಗ್ರಾಹಕನಿಗಿರುವ ಮತ್ತೊಂದು ಹೆಸರು ಬಳಕೆದಾರ
2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ
3. ಪ್ರತಿವರ್ಷ ವಿಶ್ವ ಗ್ರಾಹಕ ದಿನವನ್ನು ಮಾರ್ಚ್ 15 ರಂದು ಆಚರಿಸುತ್ತೇವೆ.
4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ ವೇದಿಕೆ ಆಯೋಗಕ್ಕೆ ಸಲ್ಲಿಸಬೇಕು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಗ್ರಾಹಕ ಎಂದರೆ ಯಾರು?
ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಅಥವಾ ವೇತನ ಪ್ರತಿಫಲ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಾಗಿದ್ದಾರೆ ಅಥವಾ ಪದಾರ್ಥಗಳನ್ನು ಬಳಸಿಕೊಳ್ಳುವವರಾಗಿದ್ದಾರೆ.
2. ಗ್ರಾಹಕ ಆಂದೋಲನದ ಮೂಲ ಆಶಯ ಯಾವುದು?
ವ್ಯಾಪಾರಿಗಳು ಅಥವಾ ಪೂರೈಕೆದಾರರು ಗ್ರಾಹಕರಿಗೆ ಮಾಡುವ ಅನೇಕ ರೀತಿಯ ಶೋಷಣೆಯನ್ನು ತಪ್ಪಿಸುವುದು ಗ್ರಾಹಕ ಆಂದೋಲನದ ಮೂಲ ಆಶಯ.
3. ಪ್ರತಿಯೊಬ್ಬ ಗ್ರಾಹಕನಿಗಿರುವ ಹಕ್ಕು ಯಾವುದು?
ಪ್ರತಿಯೊಬ್ಬ ಗ್ರಾಹಕನಿಗೂ ತಾನು ನೀಡುವ ಹಣಕ್ಕೆ ಪ್ರತಿಫಲವಾಗಿ ಯೋಗ್ಯಮಟ್ಟದ ವಸ್ತು ಮತ್ತು ಸೇವೆಗಳನ್ನು ಪಡೆಯುವುದು.
4. ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂತು?
ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ೧೯೮೬ರಲ್ಲಿ ಜಾರಿಗೆ ಬಂತು.
5. ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ಯಾರು ನೇಮಿಸುತ್ತಾರೆ?
ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಿಸುತ್ತದೆ.
III. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟಗಳೇನು?
ಅನೇಕ ಸಂದರ್ಭಗಳಲ್ಲಿ ಮಾರಾಟಗಾರರು ಗ್ರಾಹಕರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅವರನ್ನು ಶೋಷಿಸುತ್ತಾರೆ ಹಾಗೂ ಮೋಸಗೊಳಿಸುತ್ತಾರೆ. ಮಧ್ಯವರ್ತಿಗಳೇ ಬೆಲೆಯನ್ನು ನಿರ್ಧರಿಸುತ್ತಾರೆ. ಇವೆಲ್ಲಾ ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟಗಳು.
2. ಬಳಕೆದಾರರ ಶೋಷಣೆಗೆ ಕಾರಣಗಳಾವುವು?
- ಮಾರಾಟ ವಿಧಾನದಲ್ಲಿ ಉಂಟಾದ ಬದಲಾವಣೆ.
- ಗ್ರಾಹಕ ಮತ್ತು ಪೂರೈಕೆದಾರರ ನಡುವಿನ ಅಂತರ ಹೆಚ್ಚಾಗಿ ಇವರಿಬ್ಬರ ನಡುವೆ ನೇರ ವ್ಯವಹಾರ ಇಲ್ಲದಿರುವುದು.
- ಉತ್ಪಾದಕರು ಹಾಗೂ ಗ್ರಾಹಕರು ಕೂಡಿ ನಿರ್ಧರಿಸಬೇಕಾದ ಬೆಲೆಯನ್ನು ಮಧ್ಯವರ್ತಿಗಳೇ ನಿರ್ಧರಿಸುವುದು.
3. ಗ್ರಾಹಕ ಸಂರಕ್ಷಣಾ ಕಾಯ್ದೆಯ ನಾಲ್ಕು ಮುಖ್ಯ ಉದ್ದೇಶಗಳನ್ನು ತಿಳಿಸಿರಿ.
- ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
- ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.
- ಗುಣಮಟ್ಟ, ಆಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.
- ಬಳಕೆದಾರಾರು ತಾವು ಖರೀದಿಸುವ ವಸ್ತು ಅಥವಾ ಸೇವೆಗಳಿಂದ ತೊಂದರೆಗೆ ಒಳಗಾದಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದು.
4. ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮುಖ್ಯ ಕಾರ್ಯವೇನು?
ತೊಂದರೆಗೆ ಒಳಗಾದ ಗ್ರಾಹಕರ ದೂರುಗಳನ್ನು ಸ್ವೀಕರಿಸುವುದು, ದೂರುಗಳನ್ನು ಭ್ಯರ್ಥ ಪಡಿಸುವುದು, ಸೂಕ್ತ ಪರಿಹಾರ ಕೊಡಿಸುವುದು.
5. ಮೂರು ಹಂತದ ಗ್ರಾಹಕ ನ್ಯಾಯಾಲಯಗಳನ್ನು ತಿಳಿಸಿರಿ.
- ಜಿಲ್ಲಾ ವೇದಿಕೆ
- ರಾಜ್ಯ ಆಯೋಗ
- ರಾಷ್ಟ್ರೀಯ ಆಯೋಗ,
6. ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳಾವುವು?
- ದೂರುಗಳು ಕೈಬರಹದ ಅಥವಾ ಬೆರಳಚ್ಚಿನ ಮಾದರಿಯಲ್ಲಿರಬೇಕು.
- ಈ ಮಾಹಿತಿಯಲ್ಲಿ ದೂರುಕೊಡುವವನ ಹೆಸರು, ವಿಳಾಸ ಮತ್ತು ದೂರವಾಣಿಯ ಸಂಖ್ಯೆ ಸರಿಯಾಗಿ ನಮೂದಿಸಿರಬೇಕು.
- ಯಾವ ವ್ಯಾಪಾರಿ ಅಥವಾ, ಪೂರೈಕೆದಾರನ ವಿರುದ್ಧ ದೂರುಕೊಡಬೇಕೆಂಬುದನ್ನು ಪೂರ್ಣವಾಗಿ ನಮೂದಿಸಿರಬೇಕು.
- ಯಾವ ವಸ್ತುವಿನಿಂದ ನಷ್ಟವಾಗಿದೆ ಅಥವಾ ಮೋಸವಾಗಿದೆ ಎಂಬುದು ಮತ್ತು ನಷ್ಟ ಹೊಂದಿರುವ ಮೊಬಲಗೆಷ್ಟೆಂಬುದನ್ನು ಸರಿಯಾಗಿ ನಮೂದಿಸಿರಬೇಕು.
- ನಷ್ಟದ ಸೂಕ್ತ ಪರಿಹಾರದ ಮೊಬಲಗು ಹಾಗೂ ಇದಕ್ಕೆ ಸಂಬಂಧಪಟ್ಟ ರಸೀತಿ ಅಥವಾ ಬಿಲ್ಲನ್ನು ಲಗತ್ತಿಸಬೇಕು.
- ಗ್ರಾಹಕನೇ ನೇರವಾಗಿ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು ವಕೀಲರು ಬೇಕಾಗಿಲ್ಲ.
ಹೆಚ್ಚುವರಿ ಪ್ರಶ್ನೆಗಳು:
I. ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ:
1.ಭಾರತ ಸರ್ಕಾರವು ಗ್ರಾಹಕ ಸಂರಕ್ಷಣಾ ಕಾಯಿದೆಯನ್ನು 1986 ಜಾರಿಗೆ ತಂದಿತು.
2. ಗ್ರಾಹಕ ರಕ್ಷಣೆ ಶೋಷಣೆಯಿಂದ ಮುಕ್ತಗೊಳಿಸಲು ಅಗತ್ಯವಾಗಿದೆ.
3. ಗ್ರಾಹಕರನ್ನು ಮಾರುಕಟ್ಟೆಯ ರಾಜ ಎಂಬುದು ಆಕರ್ಷಕವಾದ ಘೋಷಣೆಯಾಗಿದೆ.
4. ಪರಿಹಾರ ಮೊತ್ತವು ಒಂದು ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದರೆ ದೂರನ್ನು ರಾಜ್ಯ ಆಯೋಗಕ್ಕೆ ಸಲ್ಲಿಸಬೇಕು.
5. ಕಳೆದ ಐದು ದಶಕಗಳಲ್ಲಿ ಸುಮಾರು 30 ಕ್ಕಿಂತ ಹೆಚ್ಚು ಕಾಯ್ದೆಗಳು ಅನುಷ್ಠಾನಗೊಂಡಿವೆ.
II. ಈ ಪ್ರಶ್ನೆಗಳಿಗೆ ಉತ್ತರಿಸಿ.
1. ಗ್ರಾಹಕ ರಕ್ಷಣೆ ಎಂದರೇನು?
ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಗ್ರಾಹಕ ರಕ್ಷಣೆ ಎನ್ನುತ್ತಾರೆ.
2. ಗ್ರಾಹಕ ಹಕ್ಕುಗಳು ಎಂದರೇನು?
ಗ್ರಾಹಕ ಹಿತಾಸಕ್ತಿಗಳನ್ನು ರಕ್ಷಿಸಲು ಕೊಡಲಾಗಿರುವ ಅನೇಕ ಹಕ್ಕುಗಳನ್ನು ಮತ್ತು ಭರವಸೆಗಳನ್ನು ಗ್ರಾಹಕ ಹಕ್ಕುಗಳು ಎನ್ನುತ್ತೇವೆ.
3. ವ್ಯಾಪಾರ ಎಂದರೇನು?
ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುತ್ತೇವೆ.
4. ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆಯ ರಚನೆ ಮತ್ತು ಕಾರ್ಯಗಳನ್ನು ತಿಳಿಸಿ.
ರಾಷ್ಟ್ರೀಯ ಆಯೋಗವು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶರ ಅಧ್ಯಕ್ಷತೆಯಿಂದ ಕೂಡಿರುತ್ತದೆ. ಇಲ್ಲಿ ಇತರೆ ನಾಲ್ಕು ಸದಸ್ಯರಿರುತ್ತಾರೆ. ಇವರು ಸಾರ್ವಜನಿಕ ವ್ಯವಹಾರ ಅಥವಾ ಆಡಳಿತದಲ್ಲಿ ನುರಿತವರಾಗಿರಬೇಕು. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರುತ್ತಾರೆ. ಈ ಆಯೋಗವು ಹತ್ತು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರುಗಳನ್ನು ಇತ್ಯರ್ಥ ಮಾಡುತ್ತದೆ.
5. ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಗೆ ಯಾರು ಅಧ್ಯಕ್ಷರಾಗಿರುತ್ತಾರೆ?
ರಾಜ್ಯದ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಲೀ ಅಥವಾ ಹಾಲಿ ನ್ಯಾಯಾಧೀಶರಾಗಲಿ ಅಧ್ಯಕ್ಷರಾಗಿರುತ್ತಾರೆ.
ಮುಖ್ಯಾಂಶಗಳು:
- ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಸ್ವಯಂಸೇವಾ ಸಂಸ್ಥೆಗಳು ಬಳಕೆದಾರ ಎಂದು ಕರೆದವು.
- ಬಳಕೆದಾರರಿಂದ ಹಣ ಪಡೆದು ವಸ್ತು ಅಥವಾ ಸೇವೆಗಳನ್ನು ನೀಡುವವನೇ ಪೂರೈಕೆದಾರ.
- ಗ್ರಾಹಕ ಸಂರಕ್ಷಣಾ ಕಾಯಿದೆಯಲ್ಲಿ ಬಳಕೆದಾರರನ್ನು ಗ್ರಾಹಕರೆಂದು ಕರೆದಿದೆ.
- ಮೊಟ್ಟ ಮೊದಲಿಗೆ ಭಾರತದಲ್ಲಿ ೧೯೬೫ರಲ್ಲಿ ಮುಂಬೈ ಪಟ್ಟಣದ ಕೆಲವು ಮಹಿಳೆಯರು ಅವೇರ್ ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಚಳುವಳಿಯು ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಗಳು ಪ್ರಾರಂಭವಾಗಲು ಕಾರಣವಾಯಿತು.
- ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಅಥವಾ ವೇತನ ಪ್ರತಿಫಲ ಕೊಟ್ಟು ಕೆಲಸ ಮಾಡಿಸಿಕೊಳ್ಳುವವ ರಾಗಿದ್ದಾರೆ ಅಥವಾ ಪದಾರ್ಥಗಳನ್ನು ಬಳಸಿಕೊಳ್ಳುವವರಾಗಿದ್ದಾರೆ.
- ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುತ್ತೇವೆ.
- ಗ್ರಾಹಕರನ್ನು ಮಾರುಕಟ್ಟೆಯ ರಾಜ ಎಂಬುದು ಆಕರ್ಷಕವಾದ ಘೋಷಣೆಯಾಗಿದೆ.
- ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಗ್ರಾಹಕ ರಕ್ಷಣೆ ಎನ್ನುತ್ತಾರೆ.
- ಭಾರತ ಸರ್ಕಾರವು ೧೯೮೬ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು.
- ಪ್ರತಿ ವರ್ಷ ಮಾರ್ಚ್ ೧5ನೇ ತಾರೀಕಿನಂದು ವಿಶ್ವಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ.
- ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
- ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆ, ರಾಜ್ಯ ಮಟ್ಟದಲ್ಲಿ ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆ, ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಲಿಗಳನ್ನು ಸ್ಥಾಪಿಸಿದೆ.
- ಗ್ರಾಹಕ ಸಂರಕ್ಷಣೆಯ ಕಾಯ್ದೆಯ ಪ್ರಕಾರ ಗ್ರಾಹಕರ ಸಂರಕ್ಷಣೆಗೆ ಜಿಲ್ಲಾ ವೇದಿಕೆ, ರಾಜ್ಯ ಆಯೋಗ, ರಾಷ್ಟ್ರೀಯ ಆಯೋಗಳೆಂಬ ವೇದಿಕೆಗಳನ್ನು ನಿರ್ಮಿಸಲಾಗಿದೆ.
ಇತರೆ ವಿಷಯಗಳು :
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್