10th Standard Udyamasheelathe Chapter Social Notes | 10ನೇ ತರಗತಿ ಉದ್ಯಮಶೀಲತೆ‌ ಪಾಠದ ನೋಟ್ಸ್

Udyamasheelathe

10th Standard Udyama Sheelathe Social Science Notes Question Answer Guide Mcq Pdf Download in Kannada Medium karntaka State Syllabus 2025, 10ನೇ ತರಗತಿ ಉದ್ಯಮಶೀಲತೆ‌ ಸಮಾಜ ನೋಟ್ಸ್ ಪ್ರಶ್ನೋತ್ತರಗಳು, Kseeb Solutions for Class 10 Social Science Chapter 32 notes, sslc Notes udyama shilate notes, 10th ಉದ್ಯಮಶೀಲತೆ question answer, 10th Class ಉದ್ಯಮಶೀಲತೆ ಪಾಠದ ಪ್ರಶ್ನೋತ್ತರಗಳು,10th standard udyama shilate question answers in kannada, 10th class social science chapter 32 question answer, 10th class social science notes, 10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್, 10th Social Science Notes pdf Kannada Medium.

Udyamasheelathe

10ನೇ ತರಗತಿ ಉದ್ಯಮಶೀಲತೆ‌ ಸಮಾಜ ನೋಟ್ಸ್

1.ಉದ್ಯಮಿ ಎಂಬ ಪದವು ಫ್ರೆಂಚ್ ಪದ ಎಂಟ್ರಿ ಫ್ರೆಂಡೆ ನಿಂದ ಬಂದಿದೆ.

2. ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನು ಉದ್ಯಮಶೀಲತೆ ಎನ್ನುತ್ತೇವೆ.

3. ಜಿಲ್ಲಾ ಕೈಗಾರಿಕಾ ಕೇಂದ್ರವನ್ನು 1978 ರಲ್ಲಿ ಸ್ಥಾಪಿಸಿತು.

1. ಉದ್ಯಮಿ ಎಂದರೇನು?

ಉದ್ಯಮಿ ಎಂದರೆ ಯಾವುದಾದರೊಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವವನು. ಯಾವುದಾದರೂ ಒಂದು ಪ್ರತಿಫಲ ಕೊಡುವ ಉದ್ದಿಮೆಯನ್ನು ಸ್ಥಾಪಿಸುವ ಅವಕಾಶಕ್ಕೆ ಕೈ ಹಾಕುವವವನು. ಅವಕಾಶಗಳನ್ನು ಅವಲೋಕಿಸಿ ಆ ಅವಕಾಶಗಳನ್ನು ಸ್ವಪ್ರಯೋಜನಗಳಿ ಗಾಗಿ ಉಪಯೋಗಿಸಿಕೊಂಡು ಅವುಗಳನ್ನು ಸದಾವಕಾಶಗಳಿಂದ ಸಂಘಟನೆ ಮಾಡುವವನು. ಹೊಸ ಕಲ್ಪನೆಯನ್ನು ವ್ಯವಹಾರದಲ್ಲಿ ರೂಢಿಗೆ ತರುವವನು.

2. ಉದ್ಯಮಶೀಲತೆಯು ಸಾಹಸ ಕಾರ್ಯವಾಗಿದೆ. ಹೇಗೆ?

ಉದ್ಯಮಗಾರಿಕೆಯು ಏನೂ ಇಲ್ಲದುದನ್ನು ಏನಾದರೊಂದಾಗಿ ಸೃಜಿಸುವ ಸಾಮರ್ಥ್ಯವಾಗಿದೆ. ಇದು ಬೇರೆಯವರಿಗೆ ಕಷ್ಟಸಾಧ್ಯವಾದ ಗೊಂದಲಮಯ, ವಿರೋಧಾತ್ಮಕ ಮತ್ತು ಅಸ್ತವ್ಯಸ್ತತೆಯಿಂದ ಕೂಡಿದ ಒಂದು ಅವಕಾಶವನ್ನು ಗುರ್ತಿಸಿ ಅದನ್ನು ಕಾರ್ಯರೂಪಕ್ಕೆ ತರುವುದೇ ಆಗಿದೆ. ಉದ್ಯಮಗಾರಿಕೆಯು ಅವಕಾಶಗಳನ್ನು ಅನ್ವೇಷಿಸಿ ಅಥವಾ ಹುಡುಕಿ, ನಷ್ಟಗಳನ್ನು ಲೆಕ್ಕಾಚಾರ ಹಾಕಿ ಅದರಿಂದ ಲಾಭಪಡೆಯಲು ಒಂದು ಸಾಹಸಕಾರ್ಯವನ್ನು ಸ್ಥಾಪಿಸುವುದೇ ಆಗಿದೆ.

3. ಉದ್ಯಮಶೀಲತೆಯ ಗುಣಲಕ್ಷಣಗಳಾವುವು?

  • ಸೃಜನಾತ್ಮಕ
  • ಕ್ರಿಯಾತ್ಮಕ
  • ಗುಂಪುಕಟ್ಟುವುದು
  • ನಷ್ಟಭರಿತಕ್ಕೆ ಸಿದ್ದ
  • ವಚನಬದ್ದತೆ
  • ಸಮಸ್ಯೆಯ ಪರಿಹಾರ
  • ಪ್ರಚೋದನೆಯ ಸಾಧನೆ
  • ಗುರಿಮುಟ್ಟುವಿಕೆ
  • ಹೊಸ ಪದ್ಧತಿಯನ್ನು ರೂಢಿಸಿತರುವುದು
  • ನಾಯಕತ್ವ
  • ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದು.

4. ಉದ್ಯಮಿಯ ಪ್ರಾಮುಖ್ಯತೆಯನ್ನು ವಿವರಿಸಿ.

ಉದ್ಯಮಿಗಳು ಮಾರುಕಟ್ಟೆಯ ಆರ್ಥಿಕ ಸ್ಥಿತಿಯಲ್ಲಿ ಕೇಂದ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಉದ್ಯಮಿಗಳಲ್ಲಿ ಆರ್ಥಿಕತೆಯ ಯಂತ್ರದಲ್ಲಿ ವಿದ್ಯುತ್ತನ್ನು ಸಂಚರಿಸಲು ಸಹಕಾರಿಯಾಗುವ ಅಗ್ನಿಬಿರಟೆಯಂತೆ ಆರ್ಥಿಕ ಚಟುವಟಿಕೆಗಳಿಗೆ ಚೇತನ ಕೊಡುವ ಸಾಧಕರಾಗಿದ್ದಾರೆ. ಉದ್ಯಮಿಗಳು ಮತ್ತು ಅವರ ಚಟುವಟಿಕೆಗಳು ದೇಶದ ಯಶಸ್ಸು, ಅಭಿವೃದ್ಧಿ, ಬೆಳವಣಿಗೆ ಮತ್ತು ಸಮಯೋಚಿತ ವಿಮರ್ಶಾತ್ಮಕ ನಿರ್ಣಯಗಳಾಗಿರುತ್ತವೆ. ಜಗತ್ತಿನ ಅತಿ ಕ್ರಿಯಾತ್ಮಕ ಅಥವಾ ಚಲನಾತ್ಮಕ ಸಮಾಜಗಳು ಅತಿ ಹೆಚ್ಚು ಉದ್ಯಮಿಗಳಿಂದ ಕೂಡಿರುವುದಾಗಿವೆ ಹಾಗೂ ಆರ್ಥಿಕ ಮತ್ತು ಕಾನೂನಿನ ರಚನೆಗಳು ಉದ್ಯಮಿಗಳನ್ನು ಇನ್ನೂ ಗಣನೀಯ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜಿಸುತ್ತದೆ. ಉದ್ಯಮಿಗಳು ಜನರ ಪ್ರಯೋಜನಕಾರಿಯಲ್ಲಿರದ ಉಳಿತಾಯಗಳಿಂದ ಬಂಡವಾಳವನ್ನು ಬೆಳೆಸುತ್ತಾರೆ. ಅವರು ತಮ್ಮದೇ ಆದ ಮತ್ತು ಎರವಲು ಪಡೆದ ಸಂಪನ್ಮೂಲಗಳ ಮೂಲಕ ಉದ್ಯಮವನ್ನು ಸ್ಥಾಪಿಸುತ್ತಾರೆ. ಈ ರೀತಿಯ ಉದ್ಯಮಗಳು ಒಂದು ದೇಶದ ಮೌಲ್ಯಾಧಾರಿತ ಸಂಪತ್ತನ್ನು ಸೃಜಿಸುತ್ತವೆ. ಆರ್ಥಿಕ ಮತ್ತು ಕೈಗಾರಿಕಾಭಿವೃದ್ಧಿಗೆ ಬೇಕಾದ ಹೊಸ ವಸ್ತುಗಳನ್ನು ಮತ್ತು ಸೇವೆಗಳನ್ನು ಮಾರಾಟಕ್ಕೆ ಸಹಾಯ ಮಾಡುತ್ತಾರೆ.

5. ಉದ್ಯಮಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಪಾತ್ರವನ್ನು ವಿವರಿಸಿ.

ಜಿಲ್ಲಾ ಕೈಗಾರಿಕಾ ಕೇಂದ್ರಗಳು ಸರ್ಕಾರದ ವಿವಿಧ ಇಲಾಖೆಗಳೊಡನೆ ಸಂಯೋಜಕರಾಗಿ ಕೆಲಸ ಮಾಡುತ್ತವೆ ಮತ್ತು ಸೇವೆಗಳನ್ನು ಒದಗಿಸುವ ಕೇಂದ್ರಗಳಾಗಿವೆ. ಈ ಕೇಂದ್ರಗಳು ಏಕಗವಾಕ್ಷ ರೀತಿಯಲ್ಲಿ ಪರಸ್ಪರ ಕಾರಬಾರಿ ಸೇವೆಯನ್ನು ಹೊಸದಾಗಿ ಉದ್ಯಮವನ್ನು ಪ್ರಾರಂಭಿಸುವವರಿಗೆ ಜಿಲ್ಲಾ ಮಟ್ಟದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಮೊದಲು ಸಿದ್ಧಪಡಿಸಬೇಕಾದ ಯೋಜನಾವರದಿ. ಯಂತ್ರಗಳು ಮತ್ತು ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ. ಹೊಸದಾಗಿ ಕೈಗಾರಿಕಾ ಪ್ರದೇಶಗಳ ರಚನೆ. ಉದ್ದಿಮೆ ಅಭಿವೃದ್ಧಿ ಕಾರ್ಯಕ್ರಮದೆಡೆ ತರಬೇತಿ. ಕಚ್ಚಾಪದಾರ್ಥಗಳ ಹಚಿಚಿಕೆ, ಹಣಕಾಸಿನ ನೆರವು, ಸಾಧನ ಸಲಕರಣೆಗಳ ವ್ಯವಸ್ಥೆ, ಮಾರುಕಟ್ಟೆ ಸಹಾಯ. ಉದ್ದಿಮೆಯನ್ನು ಆಧುನಿಕರಿಸುವಲ್ಲಿ ಸಹಾಯ, ವಸ್ತುಗಳನ್ನು ರಫ್ತು ಮಾಡಲು ಸಹಾಯ ಮಾಡುವುದು. ಅತಂತ್ರಗೊಳ್ಳುತ್ತಿರುವ ಉದ್ದಿಮೆಗಳಿಗೆ ಸಹಾಯ, ಸಾಂಪ್ರದಾಯಿಕವಲ್ಲದ ಶಕ್ತಿಸಾಧನಗಳನ್ನು ಉಪಯೋಗಿಸಿ ವಸ್ತುಗಳ ತಯಾರಿಕೆಗೆ ಉತ್ತೇಜನ, ಪ್ರಮಾಣಬದ್ಧ ವಸ್ತುಗಳ ತಯಾರಿಕೆಯಲ್ಲಿ ಸಹಾಯ, ಕುಶಲಕೈಗಾರಿಕಾ ವಸ್ತುಗಳ ತಯಾರಿಕೆಯಲ್ಲಿ ಮಾದರಿ ವಸ್ತುಗಳ ತಯಾರಿಕೆಗೆ ಸಹಾಯ ಇತ್ಯಾದಿ ಸೇವೆಗಳನ್ನು ಒದಗಿಸುತ್ತವೆ.

1. ಒಬ್ಬ ಮನುಷ್ಯ ಸ್ವಉದ್ಯೋಗ ಉದ್ದಿಮೆಯನ್ನು ಸ್ಥಾಪಿಸಲು ಇಷ್ಟಪಟ್ಟಲ್ಲಿ ಯಾವ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲತೆಗಳಿವೆ?

  • ಜಾಹಿರಾತು ಸೇವಾಸಂಸ್ಥೆಗಳು.
  • ಮಾರುಕಟ್ಟೆ ಸಲಹಾ ಸಂಸ್ಥೆ.
  • ಕೈಗಾರಿಕಾ ಸಲಹಾ ಸಂಸ್ಥೆ.
  • ವಸ್ತುಗಳನ್ನು ಬಾಡಿಗೆಗೆ ಮತ್ತು ಗುತ್ತಿಗೆಗೆ ನೀಡುವ ಸಂಸ್ಥೆಗಳು.
  • ಛಾಯಾಪ್ರತಿ ತೆಗೆಯುವ ಕೇಂದ್ರಗಳು.
  • ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು.
  • ಕೈಗಾರಿಕಾ ವಸ್ತುಗಳ ಗುಣಮಟ್ಟ ಪ್ರಯೋಗಾಲಯಗಳು.
  • ಅಂತರ್ಜಾಲ ಮತ್ತು ಸಂವಹನ ಅಂಗಡಿಗಳು.
  • ದೂರದರ್ಶನ ಜಾಲ ಬಂದದ ಸೇವಾಕ್ಷೇತ್ರಗಳು.
  • ಕ್ರೆಚ್ ಮತ್ತು ಬ್ಯೂಟಿಪಾರ್ಲರ್‌ ಗಳು

2. ಉದ್ಯಮಿಗಳ ಪ್ರವರ್ತಕ ಸಂಸ್ಥೆಗಳನ್ನು ಹೆಸರಿಸಿ.

  • ಜಿಲ್ಲಾ ಕೈಗಾರಿಕೆ ಕೇಂದ್ರಗಳು.
  • ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ.
  • ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತ.
  • ಸಣ್ಣ ಪ್ರಮಾಣದ ಕೈಗಾರಿಕಾ ಸ್ಥಾಪನೆ.
  • ಸಣ್ಣ ಪ್ರಮಾಣದ ಕೈಗಾರಿಕಾ ಸೇವಾ ಸಂಸ್ಥೆ.
  • ಕೈಗಾರಿಕಾ ಪ್ರದೇಶಗಳು.
  • ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ.
  • ತಾಂತ್ರಿಕ ಸಲಹಾ ಸಂಸ್ಥೆಗಳು.

3. ಉದ್ಯಮಿಯ ಮುಖ್ಯ ಕಾರ್ಯಗಳನ್ನು ತಿಳಿಸಿ.

  • ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ.
  • ಉದ್ಯಮಿಯು ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.
  • ಉದ್ಯಮಗಾರನು ಉತ್ಪಾದಿಸುವ ವಸ್ತುಗಳ ಬಗ್ಗೆ, ತಾಂತ್ರಿಕತೆ ಬಗ್ಗೆ, ಮಾರುಕಟ್ಟೆ ಮತ್ತು ಉದ್ಯೋಗ ಮುಂತಾದವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾನೆ.
  • ಉದ್ಯಮಿಯು ಎಲ್ಲ ಅಂಶಗಳನ್ನು ಸಮಂಜಸವಾಗಿ ಸಂಯೋಜಿಸುತ್ತಾನೆ.
  • ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.
  • ಉದ್ಯಮಿಯು ತನ್ನ ಉದ್ಯಮದ ಹಣಕಾಸಿನ ಆಯವ್ಯಯವನ್ನು ನಿಭಾಯಿಸುತ್ತಾನೆ.
  • ಉದ್ಯಮಿಯು ಕಷ್ಟನಷ್ಟಗಳನ್ನು ಮತ್ತು ಅನಿಶ್ಚಿತೆಗಳನ್ನು ಎದುರಿಸುತ್ತಾನೆ.
  • ಉದ್ಯಮಿಯು ವ್ಯಾಪಾರದ ಮಾರ್ಗಗಳನ್ನು ತಿಳಿಸಿ ಅದು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳ್ಳುವಂತೆ ಮಾರ್ಗದರ್ಶನ ನೀಡುತ್ತಾನೆ.

4. ಆರ್ಥಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಉದ್ಯಮಿಗಳು ವಹಿಸುವ ಪಾತ್ರವನ್ನು ವಿವರಿಸಿ.

  • ಉದ್ಯಮಿಗಳು ಜನರ ಅನುಪಯುಕ್ತ ಉಳಿತಾಯಗಳನ್ನು ಬಂಡವಾಳ ರೂಪದಲ್ಲಿ ನಿರ್ಮಾಣ ಮಾಡುತ್ತಾರೆ. ಅವರು ಸಂಪನ್ಮೂಲಗಳನ್ನು ಉದ್ದಿಮೆಗಳನ್ನು ಪ್ರಾರಂಭಿಸಲು ಉಪಯೋಗಿಸುತ್ತಾರೆ.
  • ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಿಗಳು ಕುಶಲಕರ್ಮಿ ಗಳಿಗೆ, ತಾಂತ್ರಿಕ ಯೋಗ್ಯತೆ ಉಳ್ಳವರಿಗೆ ಮತ್ತು ಕಸಬುದಾರರಿಗೆ ಅಧಿಕ ಪ್ರಮಾಣದ ಉದ್ಯೋಗಗಳನ್ನು ಒದಗಿಸುತ್ತಾರೆ.
  • ಉದ್ಯಮಿಗಳು ಒಂದು ದೇಶದ ನಿವ್ವಳದೇಶೀಯ ಉತ್ಪನ್ನ ಮತ್ತು ಜನರ ತಲಾವರಮಾನ ಹೆಚ್ಚಿಸುತ್ತಾರೆ.
  • ಉದ್ಯಮಿಗಳು ಬಂಡವಾಳ ಮತ್ತು ಕೌಶಲ್ಯವನ್ನು ಪ್ರಯೋಜನಕಾರಿಯಾಗಿ ಒಟ್ಟುಗೂಡಿಸಿ ಹೊಸವಸ್ತುಗಳನ್ನು ಮತ್ತು ಸೇವೆಗಳನ್ನು ರೂಢಿಸಿ ತಂದು ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ.
  • ಉದ್ಯಮಿಗಳು ಉತ್ತಮ ವಸ್ತುಗಳನ್ನು ಕಡಿಮೆ ದರದಲ್ಲಿ ಜನರಿಗೆ ಒದಗಿಸಿ ಅವರ ಜೀವನಮಟ್ಟ ಉತ್ತಮಗೊಳ್ಳಲು ಶ್ರಮಿಸುತ್ತಾರೆ.
  • ಉದ್ಯಮಿಗಳು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಅವರು ಪ್ರಾಂತೀಯ ತಾರತಮ್ಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ನಿವಾರಿಸುತ್ತಾರೆ.
  • ಉದ್ಯಮಿಗಳು ಆದಾಯ ಮತ್ತು ಸಂಪತ್ತು ಒಂದು ಪ್ರದೇಶದಲ್ಲಿ ಕೇಂದ್ರೀಕೃತವಾಗುವುದನ್ನು ಕಡಿಮೆ ಮಾಡಿ ಸಮಾಜದ ಏಳಿಗೆಗೆ ಸಹಾಯ ಮಾಡುತ್ತಾರೆ.
  • ಉದ್ಯಮಿಗಳು ದೇಶದ ರಫ್ತು, ವ್ಯಾಪಾರವನ್ನು ಹೆಚ್ಚಿಸುತ್ತಾರೆ.
  • ಉದ್ಯಮಿಗಳು ಹೊಸ ಬದಲಾವಣೆಗಳನ್ನು ರೂಢಿಗೆ ತಂದು ತಾಂತ್ರಿಕತೆಯನ್ನು ಬದಲಾಯಿಸಿ ಹೆಚ್ಚು ಲಾಭದಾಯಕವಾಗಲು ಶ್ರಮಿಸುತ್ತಾರೆ.
  • ಇಂದಿನ ಆರ್ಥಿಕ ಮಾರುಕಟ್ಟೆಯ ಮುಂಚೂಣಿಯಲ್ಲಿ ಉದ್ಯಮಗಾರಿಕೆ ಪ್ರಮುಖಪಾತ್ರ ವಹಿಸುತ್ತದೆ.
  • ಉದ್ಯಮಿ ಎಂಬ ಪದವು ಫ್ರೆಂಚ್ ಪದ ಎಂಟ್ರಿ ಫ್ರೆಂಡೆಯಿಂದ ಬಂದಿದ್ದು ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವವ ಎಂದಾಗಿದೆ.
  • ಉದ್ಯಮಿಯನ್ನು ಉದ್ಯಮ ಶೀಲ ಅಥವಾ ಉದ್ದಿಮೆಗಾರ ಎಂದೂ ಕರೆಯುತ್ತಾರೆ.
  • ಒಬ್ಬ ಉದ್ಯಮಿಯು ತನ್ನ ಉದ್ದಿಮೆಯನ್ನು ಸ್ಥಾಪಿಸಲು ಕೈಗೊಳ್ಳುವ ಪ್ರಕ್ರಿಯೆಯನ್ನು ಉದ್ಯಮಶೀಲತೆ ಎನ್ನುತ್ತೇವೆ.
  • ಉದ್ಯಮಿಗಳು ವ್ಯಾಪಾರದ ದುರೀಣರಾಗಿದ್ದು ವಿವಿಧ ಅನಿಸಿಕೆಗಳನ್ನು ಗಮನಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದು ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುತ್ತಾರೆ.
  • ಉದ್ಯಮಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಅನುಕೂಲತೆಗಳಿವೆ.
  • ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಉದ್ದಿಮೆಗಳ ಸ್ಥಾಪನೆ ಅಭಿವೃದ್ಧಿ ಮತ್ತು ಅವುಗಳನ್ನು ಕಾಲಕ್ಕೆ ತಕ್ಕಂತೆ ಮಾರ್ಪಡಿಸಲು ಅನೇಕ ಹಣಕಾಸಿನ ಸಂಸ್ಥೆಗಳನ್ನು ಸ್ಥಾಪಿಸಿವೆ.
  • ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತ ಮತ್ತು ಸಮಗ್ರತೆಯನ್ನು ಕೇಂದ್ರೀಕರಿಸಲು ಸರ್ಕಾರವು ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.

ಇತರೆ ವಿಷಯಗಳು :

ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ ಪಾಠದ ನೋಟ್ಸ್

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಸಮಾಜ ವಿಜ್ಞಾನ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *