10th Standard Grameenabhivruddi Chapter Social Notes | 10ನೇ ತರಗತಿ ಗ್ರಾಮೀಣಾಭಿವೃದ್ಧಿ ಸಮಾಜ ವಿಜ್ಞಾನ ನೋಟ್ಸ್

Grameenabhivruddi

10th Standard Grameenabhivruddi Social Science Notes Question Answer Guide Extract Mcq Pdf Download in Kannada Medium Karnataka State Syllabus 2025, kseeb solutions for class 10 social science kannada medium chapter 30 Notes Key Answers, 10ನೇ ತರಗತಿ ಗ್ರಾಮೀಣಾಭಿವೃದ್ಧಿ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು Pdf, graminabhivruddi 10th notes social science, 10th class notes, 10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್, ಗ್ರಾಮೀಣಾಭಿವೃದ್ಧಿ notes 10th, rural development class 10 notes kseeb, sslc grameena abhivrudhi notes in kannada pdf download, 10 class social science chapter 30 notes Question Answer, 10th standard social science 30th lesson notes kannada medium.

Grameenabhivruddi

10ನೇ ತರಗತಿ ಗ್ರಾಮೀಣಾಭಿವೃದ್ಧಿ ಸಮಾಜ ವಿಜ್ಞಾನ ನೋಟ್ಸ್

1.ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ

2. ಸಂವಿಧಾನದ 63ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ.

3. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

4. ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಮಹಿಳಾ ಸ್ವಸಹಾಯ ಸಂಘ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

1. ಗ್ರಾಮೀಣಾಭಿವೃದ್ಧಿಯ ಅರ್ಥ ತಿಳಿಸಿ.

ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವುದನ್ನು ಗ್ರಾಮೀಣಾಭಿವೃದ್ಧಿ ಎಂದು ಕರೆಯಬಹುದಾಗಿದೆ.

2. ಅಧಿಕಾರ ವಿಕೇಂದ್ರೀಕರಣ ಎಂದರೇನು?

ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ.

3. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿ.

ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು

  1. ಗ್ರಾಮ ಪಂಚಾಯತ್,
  2. ತಾಲೂಕು ಪಂಚಾಯಿತಿ.
  3. ಜಿಲ್ಲಾ ಪಂಚಾಯತ್.

4. ಯಾವುದಾದರು ಎರಡು ವಸತಿ ಯೋಜನೆಗಳನ್ನು ತಿಳಿಸಿ.

  1. ಇಂದಿರಾ ಆವಾಸ್ ಯೋಜನೆ
  2. ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ

5. ಮಹಿಳೆಯರ ಯಾವ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ?

ಮಹಿಳೆಯರು ಮನೆಯಲ್ಲಿ ಮಾಡುವ ಕೂಲಿರಹಿತ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ.

1 ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹೇಗಿದೆ?

ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಇವರಲ್ಲಿ ಮೂರನೇ ಒಂದು ಭಾಗದ ಜನರು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಗ್ರಾಮೀಣ ಗುಡಿಕೈಗಾರಿಕೆಗಳು ನಶಿಸಿಹೋಗಿವೆ. ಸುಮಾರು ಶೇ.೬೦ರಷ್ಟು ಜನರು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದರೂ, ರಾಷ್ಟ್ರೀಯ ಆದಾಯಕ್ಕೆ ಈ ವಲಯದ ಕೊಡುಗೆ ಅತ್ಯಂತ ಕಡಿಮೆಯಿದ್ದು, ಅದು ನಿರಂತರವಾಗಿ ಕಡಿಮೆಯಾಗುತ್ತಿದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದೆ.

2. ಗ್ರಾಮಿಣ ಅಭಿವೃದ್ಧಿಯ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.

  • ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚಿನ ಜನರು ವಾಸಿಸುತ್ತಿದ್ದು ಅವರು ಎದುರಿಸುತ್ತಿರುವ ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ಮೂಲ ಸೌಕರ್ಯಗಳ ಕೊರತೆ ಮುಂತಾದ ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗ್ರಾಮೀಣ ಭಾರತವನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸಬೇಕಾಗಿದೆ.
  • ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಿ, ಅವರ ಜ್ಞಾನ, ಕೌಶಲ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಕೃಷಿಯ ಜೊತೆಗೆ ಪಶುಪಾಲನೆ, ಮೀನುಗಾರಿಕೆ, ರೇಷ್ಮೆಕೃಷಿ, ಕೋಳಿಸಾಕಣೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ ಕೃಷಿಯನ್ನು ಲಾಭದಾಯಕ ಹಾಗೂ ಆಕರ್ಷಕ ಉದ್ಯೋಗವನ್ನಾಗಿ ಅಭಿವೃದ್ಧಿ ಪಡಿಸುವುದರಿಂದ ಗ್ರಾಮೀಣ ಜನರು ನಗರಗಳಿಗೆ ವಲಸೆಹೋಗುವುದನ್ನು ತಪ್ಪಿಸಬಹುದಾಗಿದೆ.
  • ವಿದ್ಯುತ್‌, ನೀರಾವರಿ, ಸಾರಿಗೆ, ಸಂಪರ್ಕ, ಮಾರುಕಟ್ಟೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು ಗ್ರಾಮೀಣ ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ.
  • ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಬಡ ವರ್ಗದ ಜನರಿಗೆ ನಿರಂತರವಾಗಿ ಉದ್ಯೋಗಾವಕಾಶಗಳು ದೊರೆಯುವಂತಹ ವ್ಯವಸ್ಥೆಯನ್ನು ನಿರ್ಮಿಸಬೇಕಾಗಿದೆ.
  • ನಗರಗಳಲ್ಲಿನ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಮತ್ತು ಅವಕಾಶಗಳು ಗ್ರಾಮೀಣ ಜನರಿಗೂ ದೊರೆಯುವಂತಾಗಬೇಕು. ಅಭಿವೃದ್ಧಿಯ ಫಲ ಇವರಿಗೂ ಸಮಾನವಾಗಿ ದೊರೆಯಬೇಕು.

3. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯನ್ನು ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ತಿಳಿಸಿ.

ವಿಕೇಂದ್ರೀಕರಣದಿಂದ ಸ್ವಾವಲಂಬಿ, ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು. ಇದನ್ನೇ ಗಾಂಧೀಜಿಯವರು ಗ್ರಾಮ ಸ್ವರಾಜ್ಯ ಎಂದು ಕರೆದಿದ್ದರು. ವಿಕೇಂದ್ರೀಕರಣವು ಎಲ್ಲ ರೀತಿಯ ಶೋಷಣೆಗಳನ್ನು ತಡೆಯುತ್ತದೆ. ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ ಹಾಗೂ ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ.

4. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಬರೆಯಿರಿ.

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುವಲ್ಲಿ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ಮೂಲಕ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ, ಗ್ರಾಮಿಣ ಉತ್ಪಾದಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ದುಡಿಯುವ ಅವಕಾಶಗಳನ್ನು ಹೆಚ್ಚಿಸುವುದರಲ್ಲಿ, ಕಿರು ನೀರಾವರಿ ಯೋಜನೆಗಳ ನಿರ್ವಹಣೆ, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ, ಸುವರ್ಣ ಗ್ರಾಮೋದಯ ಯೋಜನೆ ಮೂಲಕ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದರಲ್ಲಿ, ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಸಮಾಜ ಕಲ್ಯಾಣ ಸೇವೆಗಳನ್ನು ಒದಗಿಸುವುದರಲ್ಲಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಪಾಲ್ಗೊಳ್ಳುವಂತೆ ಮಾಡುವುದರಲ್ಲಿ ಗ್ರಾಮೀಣ ಹಬ್ಬ ಹರಿದಿನಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದರಲ್ಲಿ, ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ, ಅಲ್ಲಿನ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸುವಲ್ಲಿ, ಸ್ವಾವಲಂಬಿ ಮತ್ತು ಸಮೃದ್ಧ ಬದುಕನ್ನು ಕಟ್ಟಿಕೊಡುವಲ್ಲಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಬಹು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

1.ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದ ವರ್ಷ 1993

2. ವಿಕೇಂದ್ರೀಕರಣ ಜಾರಿಗಾಗಿ ವ್ಯವಸ್ಥೆಯನ್ನು ಪಂಚಾಯತ್ ರಾಜ್ ಜಾರಿಗೆ ತರಲಾಗಿದೆ.

3. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸ್ತ್ರೀ-ಪುರುಷರಿಬ್ಬರೂ ಸಮಾನವಾದ ಜವಾಬ್ದಾರಿಯನ್ನು ಹೊಂದಿದ್ದಾರೆ.

4. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಗ್ರಾಮೀಣ ಗುಡಿ ಕೈಗಾರಿಕೆಗಳು ನಶಿಸಿಹೋಗಿವೆ.

5. ಈಗ ಮೂರು ಹಂತದ ಪಂಚಾಯಿತಿಗಳು ಅಸ್ತಿತ್ವದಲ್ಲಿವೆ.

1.ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳಾ ಸ್ವಹಾಯ ಸಂಘಗಳ ಪಾತ್ರವನ್ನು ವಿವರಿಸಿ.

ಮಹಿಳಾ ಸ್ವಸಹಾಯ ಸಂಘಗಳು ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಈ ಸಂಘಗಳ ಸದಸ್ಯರಾಗಿರುವ ಮಹಿಳೆಯರು ಇವುಗಳ ಮೂಲಕ ಸುಲಭವಾಗಿ ಸಾಲ ಪಡೆದು ಉತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಗಳು ಉಳಿತಾಯ ಸಂಗ್ರಹದಲ್ಲಿ ಮತ್ತು ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿವೆ.

3. ಪಂಚಾಯತ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಬಹುದಾದ ಯೋಜನೆಗಳು ಯಾವುವು?

  • ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
  • ಸ್ವರ್ಣಜಯಂತಿ ಗ್ರಾಮ ಸ್ವ-ಉದ್ಯೋಗ ಯೋಜನೆ.
  • ಇಂದಿರಾ ಆವಾಸ್ ಯೋಜನೆ.

ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ.

  • ಆಶ್ರಯ ಯೋಜನೆ.

ಸುವರ್ಣ ಗ್ರಾಮೋದಯ ಯೋಜನೆ.

4. ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ-ಈ ಹೇಳಿಕೆಯನ್ನು ಸಮರ್ಥಿಸಿ.

ಗ್ರಾಮ ಪಂಚಾಯ್ತಿಯಿಂದ ಮೊದಲ್ಗೊಂಡು ರಾಷ್ಟ್ರಪತಿಯವರೆಗೆ ಸರ್ಕಾರದ ವಿವಿಧ ಹಂತಗಳಲ್ಲಿ ರಾಜಕೀಯ ಮುಂದಾಳುಗಳಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದರಿಂದ, ಸಾಮಾನ್ಯ ಗ್ರಾಮೀಣ ಮಹಿಳೆಯರೂ ಅಧಿಕಾರ ಚುಕ್ಕಾಣಿ ಹಿಡಿದು ಗ್ರಾಮಗಳ ಅಭಿವೃದ್ಧಿಯಲ್ಲಿ ದುಡಿಯಲು ಅವಕಾಶವಾಗಿದೆ. ಸದ್ಯದಲ್ಲಿ ಕರ್ನಾಟಕದ ಪಂಚಾಯತ್ ಸಂಸ್ಥೆಗಳಿಗೆ ಚುನಾಯಿತರಾಗಿರುವ ಸದಸ್ಯರುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿರುವುದು ಮಹತ್ವದ ಅಂಶವಾಗಿದೆ.

  • ಭಾರತ ಹಳ್ಳಿಗಳ ದೇಶ ೨೦೧೧ ರ ಜನಗಣತಿಯ ಪ್ರಕಾರ ಶೇ.೬೮.೮೪ ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.
  • ಮಹಾತ್ಮ ಗಾಂಧಿಯವರು ಬಹು ಹಿಂದೆಯೇ ಭಾರತದ ನೈಜ ಅಭಿವೃದ್ಧಿಯೆಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದಿದ್ದರು.
  • ಸ್ವಾತಂತ್ರ್ಯಾನಂತರ ಸರ್ಕಾರವು ಅನುಸರಿಸಿದ ಅಭಿವೃದ್ಧಿ ತಂತ್ರಗಳು ನಗರ ಕೇಂದ್ರಿತ ಅಭಿವೃದ್ಧಿಗೆ ಅವಕಾಶ ನೀಡಿದ್ದರಿಂದ ನಗರಗಳಲ್ಲಿ ಕೈಗಾರಿಕೆಗಳು ಬೆಳವಣಿಗೆ ಹೊಂದಿ ನಗರಗಳು ವಿಸ್ತರಣೆಗೊಂಡವು.
  • ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಗುಡಿಕೈಗಾರಿಕೆಗಳು ನಶಿಸಿಹೋಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಈ ಅಸಮತೋಲನವನ್ನು ಹೋಗಲಾಡಿಸಿ ದೇಶದ ಸರ್ವಾಂಗಿಣ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಮೊದಲು ಗ್ರಾಮಿಣ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯಿದೆ.
  • ಗ್ರಾಮೀಣಾಭಿವೃದ್ಧಿಯಲ್ಲಿ ಅಧಿಕಾರದ ವಿಕೇಂದ್ರೀಕರಣ, ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ, ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ.

ಇತರೆ ವಿಷಯಗಳು :

ನೈಸರ್ಗಿಕ ವಿಕೋಪಗಳು ಪಾಠದ ನೋಟ್ಸ್

ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *