10th Standard Mysurina Odeyaru Hagu Karnatakadalli British Alvikege Pratirodhagalu Social Science Notes | 10ನೇ ತರಗತಿ ಮೈಸೂರಿನ ಒಡೆಯರು ಹಾಗೂ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಪಾಠದ ನೋಟ್ಸ್

Mysorina Odeyaru

10th Class Social Science 4th Chapter Notes Question Answer Guide Mcq Pdf Download in Kannada Medium Karnataka State Syllabus 2025, 10th Standard Mysurina Odeyaru Hagu Karnatakadalli British Alvikege Pratirodhagalu Social Notes,10ನೇ ತರಗತಿ ಮೈಸೂರಿನ ಒಡೆಯರು ಹಾಗೂ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಪಾಠದ ನೋಟ್ಸ್, 10th std social 4th Lesson notes, SSLC Social 4th Lesson Question And Answer 10th Standard 4th Chapter Social Notes Pdf Kseeb Solutions for Class 10 Social Science Kannada Medium Chapter 4 Notes

Mysorina Odeyaru

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ:

  1. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಹೈದರಾಲಿ ಮತ್ತು ಬ್ರಿಟಿಷ್ ರ ನಡುವೆ ನಡೆಯಿತು.
  2. ಎರಡನೆಯ ಆಂಗ್ಲೋ ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು.
  3. ರಾಜ ಒಡೆಯರ್ ಶ್ರೀರಂಗಪಟ್ಟಣ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.
  4. ಕಿತ್ತೂರು ರಾಣಿ ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
  5. ಕಿತ್ತೂರು ರಾಣಿ ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ
  6. ಸುರಪುರವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.
  7. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದಿದ್ದರು.
  8. ಅಮರ ಸುಳ್ಯ ಬಂಡಾಯವು ಮೂಲತಃ ರೈತ ಬಂಡಾಯ.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ:

1.ಚಿಕ್ಕದೇವರಾಜ ಒಡೆಯರ್ ಅವರ ಸಾಧನೆಗಳಾವುವು?

ಇವರು ಸಮರ್ಥಯೋಧರೂ ಹಾಗೂ ಆಡಳಿತಗಾರರೂ ಆಗಿದ್ದರು. ಶಿವಾಜಿಯ ಸೇನೆಯನ್ನು ಮಧುರೆ, ಇಕ್ಕೇರಿ ಮತ್ತು ಬಿಜಾಪುರಗಳಲ್ಲಿ ಹಿಮ್ಮೆಟಿಸಿದರು. ಮಾಗಡಿ ಮಧುಗಿರಿ, ಕೊರಟಗೆರೆ ಮತ್ತಿತರ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು. ಬೆಂಗಳೂರನ್ನು ಮೊಗಲರ ಸೇನಾನಿಯಿಂದ ಕೊಂಡು ಕೊಂಡರು. ಆಡಳಿತದಲ್ಲಿ ನೆರವು ನೀಡಲು ಒಂದು ಸಚಿವ ಸಂಪುಟ (ಅಠಾರ ಕಛೇರಿ) ವನ್ನು ನೇಮಕ ಮಾಡಿದರು. ಅಂಚೆ ವ್ಯವಸ್ತೆಯು ಇವರ ಕಾಲದಲ್ಲಿ ಜಾರಿಯಾಯಿತು. ಕಾವೇರಿ ನದಿಗೆ ಅಣೆಕಟ್ಟು ಕಟ್ಟಿ ಚಿಕ್ಕದೇವರಾಜ ನಾಲೆ ಮತ್ತು ದೊಡ್ಡ ದೇವರಾಜ ನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಮಾಡಿದರು. ಅನೇಕ ಕವಿಗಳಿಗೆ ಮತ್ತು ಪಂಡಿತರಿಗೆ ಆಶ್ರಯ ನೀಡಿದರು. ಇವರಿಗೆ ಕರ್ನಾಟಕ ಕವಿಚಕ್ರವರ್ತಿ, ಅಪ್ರತಿಮ ವೀರ, ತೆಂಕಣರಾಜ, ನವಕೋಟಿ ನಾರಾರ್ಯ ಎಂಬ ಬಿರುದುಗಳಿದ್ದವು.

2. ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?

ಚಿಕ್ಕದೇವರಾಜ ಒಡೆಯರ ಮರಣ ಮೈಸೂರು ರಾಜ್ಯದ ರಾಜಕೀಯ ಬೆಳವಣಿಗೆಯ ಮೇಲೆ ದುಷ್ಪರಿಣಾಮಗಳನ್ನು ಬೀರಿತು. ಉತ್ತರಾಧಿಕಾರತ್ವ ಸಮಸ್ಯೆ ಕಂಡುಬಂದಿದ್ದರ ಜೊತೆಗೆ ಆಡಳಿತವೂ ಕುಸಿಯಿತು. ಈ ಬೆಳವಣಿಗೆಗಳು ಆ ಕಾಲದ ಮೈಸೂರಿನ ರಾಜಕೀಯವನ್ನು ಮಸುಕುಗೊಳಿಸಿದವು. ಈ ರೀತಿಯ ಅತಂತ್ರ ಸನ್ನಿವೇಶಗಳ ಹಿನ್ನೆಲೆಯಲ್ಲಿದ್ದ ಮೈಸೂರು ಮತ್ತು ಕರ್ನಾಟಿಕ್ ಪ್ರಾಂತ್ಯಗಳ ಭೂ ಪ್ರದೇಶದಲ್ಲಿ ಹೈದರಾಲಿ ರಾಜಕೀಯ ಪ್ರಾಮುಖ್ಯತೆಯನ್ನು ಗಳಿಸಿದನು. ಹೈದರಾಲಿಯು ಬಹುಬೇಗನೆ ಶಸ್ತ್ರಗಳ ಉಪಯೋಗ ಮತ್ತು ಪ್ರಯೋಗಗಳಲ್ಲಿ ಖ್ಯಾತಿಗಳಿಸಿ, ಚುರುಕಿನ ಸೈನಿಕ ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿಸಿ ಅರಸರಾಗಿದ್ದ ಎರಡನೇ ಕೃಷ್ಣರಾಜ ಒಡೆಯರವರನ್ನು ಗೃಹಬಂಧನದಲ್ಲಿರಿಸಿ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡನು.

3. ಎರಡನೆಯ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳಾವುವು?

ಪೋರ್ಟೋನೋವೆ ಎಂಬಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು. ತರುವಾಯ ಪುಲಿಕಾಟ್ ಮತ್ತು ಸೋಲಿಂಗೂರ್‌ಗಳ ಕದನದಲ್ಲಿಯೂ ಆರ್ಥಿಕ ಹಾನಿ ಅನುಭವಿಸಿದನು. ಈ ವೇಳೆಗೆ ಬ್ರಿಟಿಷರು ಸಾಲ್ಟಾಯ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೈದರನ ಒಕ್ಕೂಟದಿಂದ ಮರಾಠರು ಹಾಗೂ ನಿಜಾಮನನ್ನು ಸೆಳೆಯುವಲ್ಲಿ ಸಫಲರಾದರು. ಯುದ್ಧದ ಮಧ್ಯದಲ್ಲಿ ಹೈದರಾಲಿ ಅನಾರೋಗ್ಯದಿಂದ ಮೃತನಾದನು. ಆತನ ಮಗ ಟಿಪ್ಪು ಯುದ್ಧವನ್ನು ಮುನ್ನಡೆಸಿದನು. ಬ್ರಿಟಿಷರು ಬಿದನೂರು ಮತ್ತು ಮಂಗಳೂರನ್ನು ವಶಪಡಿಸಿಕೊಳ್ಳಲು ಹವಣಿಸಿದಾಗ ಟಿಪ್ಪು ಮಂಗಳೂರು ಮತ್ತು ಕರಾವಳಿ ತೀರಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಸೂಕ್ತವೆಂದು ಯೋಚಿಸಿ ಮಂಗಳೂರಿನತ್ತ ಮುನ್ನಡೆದು ಬ್ರಿಟಿಷರ ಸೈನ್ಯವನ್ನು ಸೋಲಿಸಿದನು. ಕೊನೆಗೆ ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಆಂಗ್ಲ-ಮೈಸೂರು ಯುದ್ಧ ಕೊನೆಗೊಂಡಿತು.

4. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳು ಯಾವುವು

  • ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು.
  • ಮೂರು ಕೋಟಿ ರೂಪಾಯಿಗಳನ್ನು ಯುದ್ಧ ನಷ್ಟ ಭರ್ತಿಯಾಗಿ ಕೊಡುವುದು.
  • ಯುದ್ಧ ನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು, ಮತ್ತು ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

5. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಸಾಧನೆಗಳನ್ನು ತಿಳಿಸಿ.

ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿಯೂ ಶಿಕ್ಷಣ ಶುಲ್ಕವನ್ನು ರದ್ದು ಮಾಡಲಾಯಿತು. ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಏಳಿಗೆಗೆ ನೆರವು ಸಿಕ್ಕಿತು. ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು. ವಿದೇಶ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ವಿದ್ಯಾರ್ಥಿ ವೇತನ ನೀಡುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಟಾಟಾರವರ ಬೆಂಬಲದಿಂದ ಸ್ಥಾಪಿಸಲಾಯಿತು. ನೀರಾವರಿ ಸೌಲಭ್ಯಗಳನ್ನೊದಗಿಸಲು ವಿಶೇಷ ಗಮನಕೊಡಲಾಯಿತು. ಬೆಳಗೊಳದ ಹತ್ತಿರ ಕಾವೇರಿ ನದಿಗೆ ಆಣೆಕಟ್ಟು ಒಂದನ್ನು ಕಟ್ಟಲಾಯಿತು. ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಯಿತು. ಅನೇಕ ದೊಡ್ಡ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಅವುಗಳಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾಗದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಬೆಳಗೊಳದ ರಾಸಾಯನಿಕ ವಸ್ತುಗಳ ಮತ್ತು ಕೃತಕ ಗೊಬ್ಬರಗಳ ಕಾರ್ಖಾನೆ ಮುಂತಾದವುಗಳು. ನ್ಯಾಯ ವಿಧಾಯಕ ಸಭೆಯನ್ನು ರಚಿಸಲಾಯಿತು. ರಾಜ್ಯಾಂಗದ ಬದಲಾವಣೆಯಲ್ಲಿ ಇದೊಂದು ದೊಡ್ಡ ಹೆಜ್ಜೆಯಾಯಿತು. ಇವರ ಆಡಳಿತದಲ್ಲಿ ಮೈಸೂರು ಮಾದರಿ ರಾಜ್ಯ ಎಂಬ ಹೆಸರನ್ನು ಪಡೆದಿತ್ತು.

6. ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧವು ಬ್ರಿಟಿಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ವಿಮರ್ಶಿಸಿ.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಸಾ.ಶ. 1799ರಲ್ಲಿ ಆರಂಭವಾಯಿತು. ಅಭೇದ್ಯವಾದ ಕೋಟೆಯನ್ನು ಬ್ರಿಟಿಷರು ಭೇದಿಸಿದರು. ಎರಡೂ ಸೈನ್ಯಗಳು ವೀರಾವೇಶದಿಂದ ಕಾದಾಡಿದವು. ಟಿಪ್ಪು ತನ್ನ ಸೈನ್ಯವನ್ನು ಹುರಿದುಂಬಿಸುತ್ತ ಹೋರಾಡಿ ಹತನಾದನು. ಬ್ರಿಟಿಷರು ಆತನ ಹತೋಟಿಯಲ್ಲಿದ್ದ ಭೌಗೋಳಿಕ ಪ್ರದೇಶಗಳನ್ನು ಮರಾಠರು ಮತ್ತು ಜಾಮನೊಂದಿಗೆ ಹಂಚಿಕೊಂಡರು. ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗೆ ವರ್ಗಾಯಿಸಲ್ಪಟ್ಟಿತ್ತು. ಈ ಪ್ರದೇಶ ತರುವಾಯ ಮೈಸೂರು ಸಂಸ್ಥಾನವೆಂದು ಹೆಸರಾಯಿತು. ಹೀಗೆ ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧವು ಬ್ರಿಟಿಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು.

7. ದೋಂಡಿಯಾ ವಾಫ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇಷಿಸಿ.

ಟಿಪ್ಪುವಿನ ಸೈನ್ಯದಲ್ಲಿದ್ದ ಅತೃಪ್ತ ಸೈನಿಕರು, ಅಧಿಕಾರದಿಂದ ಮುಕ್ತಗೊಳಿಸಲ್ಪಟ್ಟ ಪಾಳೇಯಗಾರರು ಮೊದಲಾದವರನ್ನು ಸಂಘಟಿಸಿ ಒಂದು ಸುಸಜ್ಜಿತ ಸೈನ್ಯವನ್ನು ಕಟ್ಟಿ ಬಂಡಾಯದ ಬಾವುಟ ಹಾರಿಸಿದನು. ಶಿವಮೊಗ್ಗ ಮತ್ತು ಬಿದನೂರಿನ ಕೋಟೆಗಳನ್ನು ವಶಪಡಿಸಿಕೊಂಡನು. ಇದರಿಂದ ಲಾರ್ಡ್ ವೆಲ್ಲೆಸ್ಲಿಯು ಇವನ ಬಂಡಾಯವನ್ನು ಹತ್ತಿಕ್ಕಲು ಪ್ರಯತ್ನಿಸಿದನು. ದೋಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ, ಹೊನ್ನಾಳಿ, ಹರಿಹರ ಮೊದಲಾದವುಗಳ ಮೇಲೆ ಬ್ರಿಟಿಷ್ ಸೈನ್ಯ ಆಕ್ರಮಣ ನಡೆಸಿತು. ತನ್ನ ನೆಲೆಯನ್ನು ಕಳೆದುಕೊಂಡರೂ ಧೃತಿಗೆಡದ ದೋಂಡಿಯಾ ತನ್ನ ಹೋರಾಟವನ್ನು ಮುಂದುವರಿಸಿದನು. ಅನೇಕ ಅತೃಪ್ತ ಪಾಳೇಯಗಾರರು ಆತನನ್ನು ಪ್ರೋತ್ಸಾಹಿಸಿದರು. ಫ್ರೆಂಚರು ಸಹಾಯ ಹಸ್ತವನ್ನು ನೀಡಿದರು. ಶಿಕಾರಿಪುರದ ಕೋಟೆಯನ್ನು ಪುನಃ ಗೆದ್ದುಕೊಂಡ ದೋಂಡಿಯಾನ ಸೈನ್ಯವನ್ನು ಬ್ರಿಟಿಷ್ ಸೈನ್ಯ ಚದುರಿಸಿತು. ಎಲ್ಲಾ ದಿಕ್ಕುಗಳಿಂದಲೂ ದೋಂಡಿಯಾನನ್ನು ಸುತ್ತುವರೆದ ಬ್ರಿಟಿಷ್ ಸೈನ್ಯ ಯಾಪಲಪೆರವಿ ಎಂಬ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಕೋನ್‌ಗಲ್ ಎಂಬ ಸ್ಥಳದಲ್ಲಿ ಹತ್ಯೆಗೈದರು.

8. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.

ಕಿತ್ತೂರಿನ ಯುದ್ಧದಲ್ಲಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸಂಗೊಳ್ಳಿ ರಾಯಣ್ಣ ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡನು. ಭೌಗೋಳಿಕವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ತನ್ನ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡನು. ಬ್ರಿಟಿಷರ ಆಡಳಿತ ಯಂತ್ರದ ಪ್ರಮುಖ ಅಂಗವಾಗಿದ್ದ ತಾಲ್ಲೂಕು ಕಛೇರಿಗಳು ಮತ್ತು ಖಜಾನೆಗಳನ್ನು ಲೂಟಿ ಮಾಡುವುದು ಅವನ ತಕ್ಷಣದ ಉದ್ದೇಶಗಳಾಗಿದ್ದವು. ಮೊದಲು ನಂದಗಡ ಮತ್ತು ಖಾನಾಪುರ ತರುವಾಯ ಸಂಪಗಾವಿ ಆತನ ಕಾರ್ಯಾಚರಣೆಗಳ ಸ್ಥಳಗಳಾದವು. ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಸೈನಿಕ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾನೆ ಎಂದು ಭಾವಿಸಿದ ಬ್ರಿಟಿಷರು ಒಂದು ಸಂಚನ್ನು ರೂಪಿಸಿ ಅವನನ್ನು ಸೆರೆ ಹಿಡಿದರು. ಮುಖ್ಯ ಅಪರಾಧಿ ಎಂದು ಘೋಷಿಸಿ ಗಲ್ಲಿಗೇರಿಸಿದರು.

9. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದಿಂದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ.

ಬಂಡಾಯದ ನಾಯಕತ್ವವನ್ನು ವಹಿಸಿಕೊಂಡ ಪುಟ್ಟಬಸಪ್ಪ ಬಂಡುಕೋರರನ್ನು ಸಂಘಟಿಸಿ ಜನರನ್ನು ಸಂತೈಸಿದನು. ಬೆಳ್ಳಾರೆಯಲ್ಲಿದ್ದ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ್ದು ಬಂಡಾಯದ ಪ್ರಥಮ ಹೆಜ್ಜೆಯಾಗಿದೆ. ಬಂಡುಕೋರರ ಸ್ಥಾಪನೆಯ ನಂತರ ತಂಬಾಕು ಮತ್ತು ಉಪ್ಪಿನ ಮೇಲಿನ ಸುಂಕವನ್ನು ರದ್ದು ಮಾಡಲಾಗುವುದು ಎಂದೂ ಘೋಷಿಸಲಾಯಿತು. ಸುಳ್ಯ ಮತ್ತು ಆಸುಪಾಸಿನಲ್ಲಿ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದ ಅಮಲ್ದಾರನೋರ್ವನ ಹತ್ಯೆ ಪುಟ್ಟಬಸಪ್ಪನ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಇದರಿಂದಾಗಿ ಬಂಡಾಯ ವ್ಯಾಪಕ ಪ್ರಚಾರ ಮತ್ತು ಬೆಂಬಲವನ್ನು ಪಡೆದುಕೊಂಡಿತು. ಪುತ್ತೂರಿನಲ್ಲಿ ಬ್ರಿಟಿಷ್ ಸೈನ್ಯವನ್ನು ಎದುರಿಸಿದ ಹೋರಾಟಗಾರರು ಅಲ್ಲಿಂದ ಮಂಗಳೂರಿನ ಕಡೆಗೆ ತೆರಳಿದರು. ಪಾಣಿಮಂಗಳೂರು ಮತ್ತು ಬಂಟ್ವಾಳದಲ್ಲಿ ಕಾರ್ಯಾಚರಣೆಗಳನ್ನು ನಡೆಸಿದರು. ಬಂಟ್ವಾಳದ ಜೈಲು ಮತ್ತು ಖಜಾನೆಗಳನ್ನು ಲೂಟಿಮಾಡಿದರು. ಇದನ್ನು ಹತ್ತಿಕ್ಕಲು ಬ್ರಿಟಿಷರು ಕಣ್ಣಾನೂರು, ತಲ್ಲಿಚೇರಿ ಮತ್ತು ಬಾಂಬೆಯ ಸೈನ್ಯವನ್ನು ಅಪೇಕ್ಷಿಸಿದರು. ಇದನ್ನು ಅರಿತ ಪುಟ್ಟಬಸಪ್ಪ ಮತ್ತು ಆತನ ಸಂಗಡಿಗರು ಸುಳ್ಯಕ್ಕೆ ಪಲಾಯನ ಮಾಡಿದರು. ಬ್ರಿಟಿಷ್ ಸೈನ್ಯ ಕೊಡಗಿನಲ್ಲಿ ಸ್ಥಳೀಯರ ಸಹಕಾರದಿಂದ ಅವನನ್ನು ಮತ್ತು ಆತನ ಸಹಚರರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು.

10. ಸುರಪುರದ ದಂಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

ಬ್ರಿಟಿಷ್ ಸರ್ಕಾರವು ಸುರಪುರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸು ತ್ತಿತ್ತು. ಸಾ.ಶ. 1857ರಲ್ಲಿ ಪ್ರಾರಂಭದ ಹೋರಾಟದಲ್ಲಿನ ನಾನಾಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬ ಪುಕಾರು ಕಂಡುಬಂದಿತು. ಇದರಿಂದಾಗಿ ಬ್ರಿಟಿಷರು ರಾಜನನ್ನು ಸಂಶಯದಿಂದ ಕಾಣುವಂತಾಯಿತು. ರಾಜನ ಅವಧಿಯಲ್ಲಿನ ಆಡಳಿತದ ಬಗ್ಗೆ ವರದಿ ನೀಡಲು ಬ್ರಿಟಿಷ್ ಸರ್ಕಾರ ಕ್ಯಾಂಪ್‌ಬೆಲ್ ಎಂಬ ಅಧಿಕಾರಿಯನ್ನು ನೇಮಿಸಿತು. ಇವನು ರಾಜನು ಆಡಳಿತ ದುರ್ವ್ಯವಹಾರಗಳಲ್ಲಿ ನಿರತನಾಗಿದ್ದಾನೆ ಎಂಬ ಅಂಶವನ್ನು ವರದಿಯಲ್ಲಿ ಕಾಣಿಸಿ ಹೈದರಾಬಾದ್ ರೆಸಿಡೆಂಟಿಗೆ ಸಲ್ಲಿಸಿದನು. ಸಾ.ಶ. 1858ರಲ್ಲಿ ಬ್ರಿಟಿಷ್ ಸೈನ್ಯ ಸುರಪುರವನ್ನು ಆಕ್ರಮಿಸಿತು. ಯುದ್ದ ಮುಂದುವರಿಯಿತು. ಬ್ರಿಟಿಷರು ಸುರಪುರ ಕೋಟೆಯನ್ನು ವಶಪಡಿಸಿಕೊಂಡರು.

I. ಈ ಪ್ರಶ್ನೆಗಳಿಗೆ ಉತ್ತರಿಸಿ:

1.ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳೇನು?

ಮದರಾಸು ಒಪ್ಪಂದ ದಕ್ಷಿಣ ಭಾರತದಲ್ಲಿ ತಾತ್ಕಾಲಿಕವಾಗಿ ರಾಜಕೀಯ ಬೆಳವಣಿಗೆಗಳನ್ನು ತಡೆಹಿಡಿದಿತ್ತು. ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲು ಯತ್ನಿಸಿದರು. ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನು ಮುನ್ನಡೆಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬ್ರಿಟಿಷರ ಸಹಾಯವನ್ನು ಅಪೇಕ್ಷಿಸಿದನು. ಆದರೆ ಬ್ರಿಟಿಷರು ಇದನ್ನು ತಿರಸ್ಕರಿಸಿ ಮದರಾಸು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಮಾಹೆಯು ಫ್ರೆಂಚರ ವಸಾಹತುವಾಗಿದ್ದು ಹೈದರಾಲಿಯ ನಿಯಂತ್ರಣಕ್ಕೊಳಪಟ್ಟಿತ್ತು. ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಮೈಸೂರು ಯುದ್ಧಕ್ಕೆ ಕಾರಣವಾಯಿತು.

2. ಶೇಷಾದ್ರಿ ಅಯ್ಯರ್ ಅವರ ಕೊಡುಗೆಗಳನ್ನು ತಿಳಿಸಿ.

ಹಲವು ಹೊಸ ರೈಲುಮಾರ್ಗಗಳ ರಚನೆಗೆ ಕಾರಣ ಕರ್ತರಾದರು. ಆಡಳಿತ ಸೇವೆಗಾಗಿ ಪ್ರತಿಭಾವಂತ ಯುವಕರನ್ನು ಆಯ್ಕೆಮಾಡಲು ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಆರಂಭಿಸಿದರು. ಇವರ ಪ್ರಯತ್ನದ ಫಲವಾಗಿ ಶಿಶುವಿವಾಹ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಶಿಂಷಾಜಲವಿದ್ಯುತ್ ಯೋಜನೆ ಇವರ ಕಾಲದಲ್ಲಿ ಆರಂಭಗೊಂಡಿತು.

3. ಕಿತ್ತೂರು ರಾಣಿ ಚೆನ್ನಮ್ಮಳಿಗೆ ಬ್ರಿಟಿಷರ ವಿರುದ್ಧ ಯುದ್ಧ ಅನಿವಾರ್ಯವಾಗಿತ್ತು ಏಕೆ?

ಶಿವಲಿಂಗರುದ್ರಸರ್ಜನ ಮರಣಾನಂತರ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದು ಚೆನ್ನಮ್ಮ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದಳು. ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದ ಥ್ಯಾಕರೆ ಬಾಂಬೆಯ ಗವರ್ನರನಿಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ ದತ್ತು ಮಕ್ಕಳಿಗೆ ಹಕ್ಕನ್ನು ನೀಡುವುದನ್ನು ನಿರಾಕರಿಸಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು. ಕಿತ್ತೂರಿನ ಖಜಾನೆ, ಕೋಟೆ ಕೊತ್ತಲಗಳ ಸುಪರ್ದಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು, ಚೆನ್ನಮ್ಮ ಥ್ಯಾಕರೆಯ ಈ ಪ್ರಯತ್ನಗಳನ್ನು ವಿಫಲಗೊಳಿಸಲು ಯುದ್ಧವನ್ನು ಅನಿವಾರ್ಯವೆಂದು ಬಗೆದಳು.

4. ಮೂರನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ನೇರ ಕಾರಣ ಯಾವುದು?

ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ ಮೂರನೆಯ ಅಂಗೋ ಮೈಸೂರು ಯುದ್ಧಕ್ಕೆ ನೇರ ಕಾರಣವಾಯಿತು.

5. ರಾಜ ಒಡೆಯರ ಸಾಧನೆಗಳನ್ನು ತಿಳಿಸಿ.

ಸಣ್ಣ ಪಾಳೆಯಪಟ್ಟಾಗಿದ್ದ ಮೈಸೂರನ್ನು ಸಾಕಷ್ಟು ದೊಡ್ಡ ರಾಜ್ಯವನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶ್ರೀರಂಗಪಟ್ಟಣವನ್ನು ವಿಜಯನಗರದ ರಾಜ ಪ್ರತಿನಿಧಿಯಿಂದ ವಶಪಡಿಸಿಕೊಂಡು ರಾಜಧಾನಿಯನ್ನಾಗಿ ಮಾಡಿದರು. ಸುತ್ತಮುತ್ತಲಿನ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನ ರಾಜ್ಯ ವಿಸ್ತರಿಸಿದರು. ಶ್ರೀರಂಗಪಟ್ಟಣ, ಮೈಸೂರು ಮೇಲುಕೋಟೆಗಳ ದೇವಾಲಯಗಳ ಜೀರ್ಣೋದ್ದಾರಕ್ಕೆ ಸೂಕ್ತವಾದ ಏರ್ಪಾಡು ಮಾಡಿದರು. ರಾಜಮುಡಿ ಎಂಬ ಕಿರೀಟವನ್ನು ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅರ್ಪಿಸಿದರು. ಮೈಸೂರು ಸಂಸ್ಥಾನದ ನವರಾತ್ರಿ ಉತ್ಸವವನ್ನು ಶ್ರೀರಂಗಪಟ್ಟಣದಲ್ಲಿ ಪ್ರಾರಂಭಿಸಿದರು.

6. ಬ್ರಿಟಿಷರ ವಿರುದ್ಧ ಹಲಗಲಿಯ ಬೇಡರು ಸಿಡಿದೇಳಲು ಕಾರಣವೇನು?

ಸಾ.ಶ. 1857ರ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯ ಪ್ರದೇಶಗಳಲ್ಲಿ ಶಸ್ತ್ರಗಳ ಬಳಕೆಯನ್ನು ನಿರ್ಬಂಧಿಸಿ ಕಾನೂನೊಂದನ್ನು ಜಾರಿಗೆ ತಂದರು. ಇದನ್ನು ಹಲಗಲಿಗೂ ಸಹ ಅನ್ವಹಿಸಲಾಯಿತು. ಹಲಗಲಿಯ ಬೇಡರು ತಲೆತಲಾಂತರ ಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ. ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಸಿಡಿದೆದ್ದರು.

7. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳೇನು?

ಟಿಪ್ಪು ಭಾರತೀಯ ರಾಜರ ಒಕ್ಕೂಟವನ್ನು ತನ್ನಡೆಗೆ ಸೆಳೆಯಲು ಮಾಡುತ್ತಿದ್ದ ಪ್ರಯತ್ನಗಳು ಹಾಗೂ ತಮ್ಮ ಬದ್ಧ ವೈರಿಗಳಾದ ಫ್ರೆಂಚರೊಂದಿಗೆ ಟಿಪ್ಪು ಹೊಂದಿದ್ದ ಸಂಬಂಧಗಳು ವೆಲ್ಲೆಸ್ಲಿಯಲ್ಲಿ ಟಿಪ್ಪುವಿನ ವಿಚಾರದಲ್ಲಿ ಮತ್ತಷ್ಟು ದ್ವೇಷ ಭಾವನೆಗಳನ್ನು ಬೆಳೆಸಿದವು. ಟಿಪ್ಪು ಬ್ರಿಟಿಷರ ವಿರುದ್ಧವಾಗಿದ್ದ ಫ್ರೆಂಚರ ಸಹಕಾರ ಪಡೆಯಲು ಪ್ರಯತ್ನಿಸಿ ರಾಯಭಾರಿಯನ್ನು ಕಳುಹಿಸಿದ್ದನು. ಇದು ಬ್ರಿಟಿಷರಿಗೆ ಅಸಮಾಧಾನವನ್ನು ತಂದಿತು. ಟಿಪ್ಪು ಮತ್ತು ಫ್ರೆಂಚರ ನಡುವಿನ ಸ್ನೇಹ ಮುಂದಕ್ಕೆ ತಮ್ಮ ಅಧಿಪತ್ಯಕ್ಕೆ ಮುಳುವಾಗಬಹುದೆಂಬ ಭಾವನೆಗಳು ಬ್ರಿಟಿಷರಲ್ಲಿ ಬೆಳೆಯಿತು. ಹೊಸ ಷರತ್ವಗಳನ್ನು ಒಳಗೊಂಡಿರುವ ಸಹಾಯಕ ಸೈನ್ಯ ಪದ್ಧತಿಯನ್ನು ಟಿಪ್ಪುವಿನ ಮೇಲೆ ಹೇರಲಾಯಿತು. ಆದರೆ ಟಿಪ್ಪು ಅಮಾನವೀಯ ಸಹಾಯಕ ಸೈನ್ಯ ಪದ್ಧತಿ ಮತ್ತು ಅಸಮಾನ ಷರತ್ತುಗಳನ್ನು ಒಳಗೊಂಡಿದ್ದ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದನು. ಇದರಿಂದಾಗಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಪ್ರಾರಂಭವಾಯಿತು.

8. ದಿವಾನ್ ರಂಗಾಚಾರ್ಲು ಅವರ ಸಾಧನೆ ತಿಳಿಸಿ.

ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದರು. ಸಾ.ಶ. 1881ರಲ್ಲಿ ಕೋಲಾರದ ಚಿನ್ನದಗಣಿ, ಸಾ.ಶ. 1882ರಲ್ಲಿ ಬೆಂಗಳೂರು ರೈಲುಮಾರ್ಗವನ್ನು ಆರಂಭಿಸಿದರು. ಮೈಸೂರು

II. ಬಹು ಆಯ್ಕೆಯ ಪ್ರಶ್ನೆಗಳು:

1.ಮೂರನೆಯ ಆಂಗ್ಲೋ-ಮೈಸೂರು ಯುದ್ಧವನ್ನು ಮುಕ್ತಾಯಗೊಳಿಸಿದ ಒಪ್ಪಂದ:

ಎ) ಮಂಗಳೂರು

ಬಿ) ಮದ್ರಾಸ್

ಸಿ) ಶ್ರೀರಂಗಪಟ್ಟಣ ಒಪ್ಪಂದ

ಡಿ) ಸಾಲ್ಬಾಯ್ ಒಪ್ಪಂದ.

2. ಬ್ರಿಟಿಷರ ವಿರುದ್ಧ ತಿರುಗಿ ಬಿದ್ದವರಲ್ಲಿ ಪ್ರಮುಖನಾದವನು:

ಎ) ಕೃಷ್ಣಪ್ಪನಾಯಕ

ಬಿ) ಪುಟ್ಟಬಸಪ್ಪ

ಸಿ) ಕೊಪ್ಪಳದವೀರಪ್ಪ

ಡಿ) ಲಕ್ಷ್ಮಪ್ಪ

3. ನಾಲ್ವಡಿ ಕೃಷ್ಣರಾಜ ಒಡೆಯರನ್ನು ರಾಜಶ್ರೀ ಎಂದು ಕರೆದವರು:

ಎ) ಮಹಾತ್ಮ ಗಾಂಧಿ

ಬಿ) ಸ್ವಾಮಿ ವಿವೇಕಾನಂದ

ಸಿ) ಸರ್ ಅಲ್ಬಿಯನ್ ಬ್ಯಾನರ್ಜಿ

ಡಿ) ಸರ್ ಮಿರ್ಜಾ ಇಸ್ಮಾಯಿಲ್

4. ಅಭಿನವ ಕಾಳಿದಾಸ ಎನಿಸಿಕೊಂಡವರು:

ಎ) ಬಸಪ್ಪಶಾಸ್ತ್ರಿಗಳು

ಬಿ) ಎಂ. ಹಿರಿಯಣ್ಣ

ಸಿ) ಮುತ್ತಯ್ಯ ಭಾಗವತರ್

ಡಿ) ಬಿಡಾರಂ ಕೃಷ್ಣಪ್ಪ

5. ಕಮೀಷನರುಗಳ ಆಡಳಿತದ ಕಾಲದಲ್ಲಿನ ಕೊನೆಯ ಕಮೀಷನರ್:

ಎ) ಮಾರ್ಕ್ ಕಬ್ಬನ್

ಬಿ) ಜೇಮ್ಸ್ ಗೋರ್ಡನ್

ಸಿ) ಎಲ್.ಬಿ. ಬೌರಿಂಗ್

ಡಿ) ಬಿ.ಎಲ್. ಬೌರಿಂಗ್

6. ಮೈಸೂರು ಮಾದರಿ ರಾಜ್ಯ ಎಂಬ ಹೆಸರನ್ನು ಪಡೆದಿದ್ದು ಇವರ ಆಡಳಿತ ಕಾಲದಲ್ಲಿ:

ಎ) ಜಯಚಾಮರಾಜ ಒಡೆಯರು

ಬಿ) ಚಿಕ್ಕದೇವರಾಜ ಒಡೆಯರು

ಸಿ) ನಾಲ್ವಡಿ ಕೃಷ್ಣರಾಜ ಒಡೆಯರು

ಡಿ) ರಾಜ ಒಡೆಯರು

7. ಟಿಪ್ಪುಸುಲ್ತಾನನ ಮರಣದ ನಂತರ ಮೈಸೂರಿನ ಮಹಾರಾಜರಾಗಿ ಅಧಿಕಾರ ಸ್ವೀಕರಿಸಿದವರು:

ಎ) ರಾಜ ಒಡೆಯರು

ಬಿ) ಚಿಕ್ಕದೇವರಾಜ ಒಡೆಯರು

ಸಿ) ಜಯಚಾಮರಾಜ ಒಡೆಯರು

ಡಿ) ಮುಮ್ಮಡಿ ಕೃಷ್ಣರಾಜ ಒಡೆಯರು

8. ಮೈಸೂರು ರಾಜ್ಯಗೀತೆ ಕಾಯೋಶ್ರೀ ಗೌರಿಯನ್ನು ರಚಿಸಿದವರು:

ಎ) ಬಸಪ್ಪಶಾಸ್ತ್ರಿಗಳು

ಬಿ) ತಿರುಮಲಾರ್ಯ

ಸಿ) ಸಂಚಿಹೊನ್ನಮ್ಮ

ಡಿ) ಜಯಚಾಮರಾಜ

ಮುಖ್ಯಾಂಶಗಳು

  • ಇಂದಿನ ಕರ್ನಾಟಕವು ಏಕೀಕರಣದ ಪೂರ್ವದಲ್ಲಿ ವಿವಿಧ ರಾಜಕೀಯ ಅಧಿಕಾರಶಾಹಿಗಳಲ್ಲಿ ಹಂಚಿ ಹೋಗಿತ್ತು.
  • ವಿಜಯನಗರ ಸಾಮ್ರಾಜ್ಯದ ಪತನಾನಂತರ ತಲೆ ಎತ್ತಿ ಅದರ ಸಂಪ್ರದಾಯಗಳನ್ನು ಮುಂದುವರಿಸಿ, ಕಳೆದುಹೋದ ಘನತೆಯನ್ನು ಸ್ಥಾಪಿಸಿದ ರಾಜ್ಯವೇ ಮೈಸೂರು.
  • ಒಡೆಯರ ವಂಶವನ್ನು ಯದುರಾಯರಿಂದ ಜಯಚಾಮರಾಜ ಒಡೆಯರ್‌ವರೆಗೆ 25 ಅರಸರುಗಳು ಆಳಿದರು.
  • ಅವರಲ್ಲಿ ರಾಜ ಒಡೆಯರು ಚಿಕ್ಕದೇವರಾಜ ಒಡೆಯರು, ಹತ್ತನೆಯ ಚಾಮರಾಜೇಂದ್ರ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರು, ಜಯಚಾಮರಾಜ ಒಡೆಯರು ಪ್ರಮುಖರು.
  • ಸಾ.ಶ. 1831 ರಿಂದ 1881 ರವರೆಗಿನ ಕಾಲಾವಧಿಯನ್ನು ಕಮಿಷನರುಗಳ ಆಡಳಿತ ಎಂದು ಕರೆಯಲಾಗಿದೆ.
  • ಈ ಅವಧಿಯಲ್ಲಿ ಏಳು ಜನ ಕಮಿಷನರುಗಳು ರಾಜ್ಯದ ಆಡಳಿತವನ್ನು ನಡೆಸಿದರು.
  • ಬ್ರಿಟಿಷ್ ಸರ್ಕಾರದ ಆಶ್ವಾಸನೆಯಂತೆ ಸಾ.ಶ. 1881ರಲ್ಲಿ ಮೈಸೂರಿನ ಸಿಂಹಾಸನವನ್ನು ಹತ್ತನೆಯ ಚಾಮರಾಜ ಒಡೆಯರು ವಹಿಸಿಕೊಂಡರು.
  • ಇವರ ನಂತರ ನಾಲ್ವಡಿ ಕೃಷ್ಣರಾಜ ಒಡೆಯರು ಅಧಿಕಾರಕ್ಕೆ ಬಂದರು.
  • ನಾಲ್ವಡಿ ಕೃಷ್ಣರಾಜ ಒಡೆಯರ ನಂತರ ಜಯಚಾಮರಾಜ ಒಡೆಯರು ಸಿಂಹಾಸನವನ್ನೇರಿದರು. ಭಾರತ ಸ್ವಾತಂತ್ರಾನಂತರ ಮೈಸೂರು ರಾಜ್ಯದ ರಾಜಪ್ರಮುಖರಾಗಿದ್ದರು.
  • ಭಾರತದ ಚರಿತ್ರೆಯಲ್ಲಿ 18ನೇ ಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ವೆಂದ ಚಿತ್ರಿಸಲ್ಪಟ್ಟಿದೆ.
  • ಮೊಘಲ್ ಚಕ್ರವರ್ತಿ ಔರಂಗಜೇಬ್‌ನ ಮರಣ ಇದಕ್ಕೆ ಪ್ರಮುಖ ಕಾರಣವಾಗಿದ್ದ
  • ಚಿಕ್ಕದೇವರಾಜ ಒಡೆಯರ ಮರಣದಿಂದಾಗಿ ಉತ್ತರಾಧಿಕಾರತ್ನ ಸಮಸ್ಯೆಯ ಜೊತೆ ಆಡಳಿತವೂ ಕುಸಿದು. ಮೈಸೂರಿನ ರಾಜಕೀಯವನ್ನು ಮಸುಕುಗೊಳಿಸಿದವು.
  • ಈ ರೀತಿಯ ಅತಂತ್ರ ಸನ್ನಿವೇಶಗಳ ಹಿನ್ನೆಲೆಯಲ್ಲಿದ್ದ ಮೈಸೂರು ಮತ್ತು ಕರ್ನಾಟಕ ಪ್ರಾಂತ್ಯಗಳ ಭೂ ಪ್ರದೇಶದಲ್ಲಿ ರಾಜಕೀಯ ಪ್ರಾಮುಖ್ಯವನ್ನು ಗಳಿಸಿದ ಹೈದರಾ * ಚುರುಕಿನ ಸೈನಿಕ ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿದ ಅರಸರಾಗಿದ್ದ ಎರಡನೇ ಕೃಷ್ಣರಾಜ ಒಡೆಯರವರನ್ನು ಗೃಹಬಂಧನದಲ್ಲಿರಿ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡನು.
  • ಮರಾಠರು, ಹೈದರಾಬಾದಿನ ನಿಜಾಮ ಮತ್ತು ಅರ್ಕಾಟಿನ ನವಾಬರು ತಮ್ಮ ರಾಜಕೀಯ ಅಸ್ತಿತ್ವ ಮತ್ತು ಮೇಲ್ಮ ಸಾಧನೆಗಾಗಿ ಹೋರಾಟಗಳಲ್ಲಿ ನಿರತರಾಗಿದ್ದರು.
  • ಈ ಸಂಕ್ರಮಣದ ಸಂದರ್ಭವನ್ನು ತಮ್ಮ ರಾಜಕೀಯ ಪ್ರಾಬಲ್ಯಕ್ಕಾಗಿ ಬ್ರಿಟಿಷರ ಮತ್ತು ಫ್ರೆಂಚರು ಬಳಸಿ ಕೊಳ್ಳತೊಡಗಿದರು.
  • ಮೊದಲನೇ ಆಂಗ್ಲೋ ಮೈಸೂರು ಯುದ್ಧ ಸಾ.ಶ. 1767-1769ರವರೆಗೆ ನಡೆಯಿತು ಈ ಯುದ್ಧವು ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು.
  • ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಸಾ.ಶ. 1780-1784ರವರೆಗೆ ನಡೆಯಿತು. ಮಂಗಳೂರು ಒಪ್ಪಂದದ ಮೂಲಕ ಈ ಯುದ್ಧ ಕೊನೆಗೊಂಡಿತು.
  • ಬ್ರಿಟಿಷರು ಮತ್ತು ಟಿಪ್ಪುವಿನ ನಡುವೆ ನಡೆದ ಮೂರನೆಯ ಆಂಗ್ಲೋ ಮೈಸೂರು ಯುದ್ಧವು ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಕೊನೆಗೊಂಡಿತು.
  • ಸಾ.ಶ. 1799ರಲ್ಲಿ ಪ್ರಾರಂಭವಾದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಹತನಾದನು.
  • ಟಿಪ್ಪುವಿನ ಹತೋಟಿಯಲ್ಲಿದ್ದ ಪ್ರದೇಶಗಳನ್ನು ಬ್ರಿಟಿಷರು ಮರಾಠರು ಮತ್ತು ನಿಜಾಮನೊಂದಿಗೆ ಹಂಚಿಕೊಂಡರು.
  • ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗ ವರ್ಗಾಯಿಸಲ್ಪಟ್ಟಿತು. ನಂತರ ಮೈಸೂರು ಸಂಸ್ಥಾನವೆಂದು ಹೆಸರಾಯಿತು.
  • 19ನೆಯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕಂಡುಬಂದ ಪ್ರತಿಭಟನೆಗಳು ಮತ್ತು ಬಂಡಾಯಗಳಲ್ಲಿ ದೋಂಡಿಯಾ ವಾಘನ ನಾಯಕತ್ವದಲ್ಲಿ ಕಂಡು ಬಂದಿದ್ದ ಸಶಸ್ತ್ರ ಹೋರಾಟ ಪ್ರಮುಖವಾಗಿದೆ.
  • ಬ್ರಿಟಿಷರು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನಿನ ವಿರುದ್ಧ ಸಂಘಟಿಸಲ್ಪಟ್ಟ ಸಶಸ್ತ್ರ ಬಂಡಾಯಗಳಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಖ್ಯಾತಿಯನ್ನು ಗಳಿಸಿದೆ.
  • ಕಿತ್ತೂರಿನ ಯುದ್ಧದಲ್ಲಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನ ಹೆಸರು ಕಿತ್ತೂರು ಚೆನ್ನಮ್ಮನೊಂದಿಗೆ ಅಜರಾಮರ ಮತ್ತು ಆದರ್ಶಪ್ರಾಯವೆನಿಸಿದೆ.
  • ಅಮರ ಸುಳ್ಯ ಬಂಡಾಯ ಮೂಲತ: ರೈತ ಬಂಡಾಯವಾಗಿದ್ದು ಇದರ ಹಿನ್ನೆಲೆಯನ್ನು ಸಾ.ಶ. 1835-37ರ ಅವಧಿಯಲ್ಲಿ ಕರಾವಳಿ ಮತ್ತು ಕೊಡಗು ಪ್ರಾಂತ್ಯದಲ್ಲಿ ಕಂಡುಬಂದಿದ್ದ ಹೋರಾಟಗಳಲ್ಲಿ ಗುರುತಿಸಬಹುದಾಗಿದೆ.
  • ಸಾಮಾನ್ಯವಾಗಿ ಕರ್ನಾಟಕದ ಚರಿತ್ರೆಯಲ್ಲಿ ಸುರಪುರದ ವೆಂಕಟಪ್ಪ ನಾಯಕನನ್ನು ಸಾ.ಶ. 1857ರ ಕ್ರಾಂತಿಯ ನಾಯಕನೆಂದು ಇತಿಹಾಸಕಾರರು ವರ್ಣಿಸಿದ್ದಾರೆ.
  • ಬ್ರಿಟಿಷ್ ವಿರೋಧಿ ಚಳವಳಿ, ಸಶಸ್ತ್ರ ಬಂಡಾಯ ಮತ್ತು ದಂಗೆಗಳಲ್ಲಿ ಕೊಪ್ಪಳದಲ್ಲಿನ ದಂಗೆಯೂ ಪ್ರಮುಖವಾಗಿದೆ.
  • ಕೊಪ್ಪಳದ ದಂಗೆಯಲ್ಲಿ ಕಡಿಮೆ ಸೈನಿಕರ ಬೆಂಬಲವನ್ನು ಹೊಂದಿದ್ದ ವೀರಪ್ಪ ಸತತವಾಗಿ ಹೋರಾಟ ನಡೆಸಿ ಮರಣ ಹೊಂದಿದನು.
  • ಬ್ರಿಟಿಷರು ಜಾರಿಗೆ ತಂದ ಶಸ್ತ್ರಗಳ ಬಳಕೆಯ ನಿರ್ಬಂಧದ ಕಾನೂನಿನ ವಿರುದ್ಧ ಬಂಡಾಯವೆದ್ದ ಹಲಗಲಿಯ ಬೇಡರನ್ನು ಅತ್ಯಂತ ನಿಷ್ಕಾರುಣವಾಗಿ, ದಮನಕಾರಿಯಾಗಿ ಇಂಗ್ಲಿಷರು ಹತ್ತಿಕ್ಕಿದರು.

ಇತರೆ ವಿಷಯಗಳು :

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಮಾಜ ನೋಟ್ಸ್

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *