10th Standard Bharatada Sarige Hagu Samparka Chapter Social Science Notes Question Answer Extract Mcq Pdf Download in Kannada Medium, 2025 10ನೇ ತರಗತಿ ಭಾರತದ ಸಾರಿಗೆ ಹಾಗೂ ಸಂಪರ್ಕ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು pdf, 10th bharatada sarige hagu samparka in kannada Question Answer, 10th ಸಮಾಜ ನೋಟ್ಸ್, kseeb solutions for class 10 social science kannada medium chapter 27 Notes Key Answers, 10th standard social science chapter 27 notes in kannada, 10th social science notes pdf kannada medium, SSLC ಭಾರತದ ಸಾರಿಗೆ ಹಾಗೂ ಸಂಪರ್ಕ notes.

10ನೇ ತರಗತಿ ಭಾರತದ ಸಾರಿಗೆ ಹಾಗೂ ಸಂಪರ್ಕ ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ:
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
1.ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
2. ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ ರಸ್ತೆಗಳು ಸಾರಿಗೆ ಅವಶ್ಯಕವಾಗಿದೆ.
3. ಭಾರತದ ಹೆಬ್ಬಾಗಿಲು ಎಂದು ಮುಂಬೈ ಬಂದರನ್ನು ಕರೆಯುತ್ತಾರೆ.
4. ಭಾರತದ ಚಹದ ಬಂದರು ಕೋಲ್ಕತ್ತಾ
II. ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಸಂಕ್ಷಿಪ್ತವಾಗಿ ಉತ್ತರಿಸಿ.
1. ಭಾರತದಲ್ಲಿ ರಸ್ತೆಗಳ ಪ್ರಾಮುಖ್ಯತೆಯನ್ನು ತಿಳಿಸಿ.
ಭಾರತ ಹಳ್ಳಿಗಳ ದೇಶ ಹಾಗೂ ಕೃಷಿ ಪ್ರಧಾನವಾದ ದೇಶ. ಹಳ್ಳಿಯ ಮತ್ತು ಕೃಷಿಯ ಅಭಿವೃದ್ಧಿಗೆ ರಸ್ತೆಗಳ ಅವಶ್ಯಕತೆ ಮುಖ್ಯವಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ರಸ್ತೆಗಳ ಸಹಾಯದಿಂದ ಮಾತ್ರ ಸಾಧ್ಯ. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆಗಳು ಸಹಾಯ ಮಾಡುತ್ತವೆ. ರಸ್ತೆ ಸಾರಿಗೆಗಳು ರೈಲ್ವೆ ಸಾರಿಗೆಗೆ ಪೂರಕವಾಗಿವೆ. ಸರಕು ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ.
2. ಭಾರತದಲ್ಲಿರುವ ರಸ್ತೆ ಸಾರಿಗೆಯ ವಿಧಗಳು ಯಾವುವು?
- ರಾಷ್ಟ್ರೀಯ ಹೆದ್ದಾರಿಗಳು
- ರಾಜ್ಯ ಹೆದ್ದಾರಿಗಳು
- ಜಿಲ್ಲಾ ಹೆದ್ದಾರಿಗಳು ಮತ್ತು
- ಗ್ರಾಮೀಣ ಹೆದ್ದಾರಿಗಳು.
3. ಸುವರ್ಣ ಚತುಷ್ಕೋನ ಯೋಜನೆ ಎಂದರೇನು?
ಭಾರತದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತಾಗಳನ್ನು ನಾಲ್ಕು ಅಥವಾ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕಿಸುವ ಹೆದ್ದಾರಿಗಳೇ ಸುವರ್ಣ ಚತುಷೋನ ಹೆದ್ದಾರಿಗಳು.
4. ಭಾರತದಲ್ಲಿರುವ ಪ್ರಮುಖ ಬಂದರುಗಳನ್ನು ಪಟ್ಟಿ ಮಾಡಿ.
- ಕಾಂಡ್ಲಾ
- ಮುಂಬೈ
- ನವಶೇವಾ
- ಮರ್ಮಗೋವಾ
- ನವ ಮಂಗಳೂರು
- ಕೊಚ್ಚಿ
- ತೂತುಕುಡಿ
- ಚೆನ್ನೈ
- ವಿಶಾಖಪಟ್ಟಣಂ
- ಪಾರಾದೀಪ್
- ಕೋಲ್ಕತ್ತಾ
- ಹಾಲ್ಡಿಯಾ.
5. ಭಾರತದ ರಸ್ತೆ ಸಾರಿಗೆಯ ತೊಡಕುಗಳನ್ನು ಪಟ್ಟಿ ಮಾಡಿ.
- ಅನೇಕ ಗ್ರಾಮೀಣ ಮತ್ತು ಜಿಲ್ಲಾ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಕೆಲವು ವೇಳೆ ಅನುಪಯುಕ್ತವಾಗಿರುತ್ತವೆ.
- ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗಿವೆ.
- ರಸ್ತೆಗಳು ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ಪ್ರತಿ ವರ್ಷವೂ ಹಾಳಾಗುತ್ತಿವೆ.
- ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯೂ ಅಸಮರ್ಪಕ.
- ರಸ್ತೆಗಳ ಬದಿಯಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಕೊರತೆಯನ್ನು ದೇಶದಾದ್ಯಂತ ಕಾಣಬಹುದು.
6. ಸಂಪರ್ಕ ಮಾಧ್ಯಮ ಎಂದರೇನು? ಸಂಪರ್ಕದ ಮಾಧ್ಯಮಗಳಾವವು?
ವಿವಿಧ ಪ್ರದೇಶಗಳ ಜನರೊಡನೆ ಸುಲಭವಾಗಿ ಸಂಪರ್ಕಿಸಬಹುದಾದ ಹಾಗೂ ಎಲ್ಲಾ ಜನರನ್ನು ತಲುಪುವ ಮಾಧ್ಯಮವೇ ಸಂಪರ್ಕ ಮಾಧ್ಯಮ. ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತ ಪತ್ರಿಕೆಗಳ ಜೊತೆಗೆ ರೇಡಿಯೋ, ದೂರದರ್ಶನ, ಕೃತಕ ಉಪಗ್ರಹಗಳು, ಕಂಪ್ಯೂಟರ್ ಜಾಲ, ಇ-ಮೇಲ್, ಸಂಚಾರಿ ದೂರವಾಣಿಗಳು ಸಂಪರ್ಕದ ಮಾಧ್ಯಮಗಳಾಗಿವೆ.
7. ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿ.
- ಸಂಪರ್ಕ ಮಾಧ್ಯಮಗಳು ದೇಶದ ಜನರಿಗೆ ವಿವಿಧ ಪ್ರದೇಶದ ಆಗು-ಹೋಗುಗಳನ್ನು ತಿಳಿಯಲು ಅಗತ್ಯವಾಗಿದೆ.
- ಸರಕಾರದ ನೀತಿ ನಿಯಮಗಳನ್ನು ತಿಳಿಯಪಡಿಸಿ ಅದರ ಬಗ್ಗೆ ತಿಳುವಳಿಕೆಯನ್ನು ಮೂಡಿಸಬಹುದು.
- ಜನರಿಗೆ ಬೇಕಾದ ವ್ಯವಸಾಯ, ಕೈಗಾರಿಕೆ ಮುಂತಾದವುಗಳ ಜ್ಞಾನವನ್ನು ನೀಡುವುದರಿಂದ ಅಭಿವೃದ್ಧಿಯ ಪ್ರಕ್ರಿಯೆಯು ಶೀಘ್ರವಾಗಿ ಮುಂದುವರಿಯುವುದು.
- ವಾಣಿಜ್ಯ ವ್ಯಾಪಾರದ ಅಭಿವೃದ್ಧಿಗೆ ಸಂಪರ್ಕ ಮಾಧ್ಯಮಗಳು ಮೂಲ ಅಗತ್ಯವಾಗಿವೆ.
- ದೇಶದ ಏಕತೆ, ಒಗ್ಗಟ್ಟು ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅನುಕೂಲವಾಗುವುದು.
8. ಜಿ.ಐ.ಎಸ್. ಜಿ.ಪಿ.ಎಸ್‌ಗಿಂತ ಭಿನ್ನವಾಗಿದೆ ಹೇಗೆ?
ಜಿ.ಐ.ಎಸ್. ಪೃಥ್ವಿಯ ಮೇಲ್ಮನ ಅಂಕಿ-ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಪ್ರಬಲ ಸಲಕರಣೆಯ ಸಮೂಹವಾಗಿದ್ದು ಭೂ ಮೇಲ್ಮ ವಿವಿಧ ಬಗೆಯ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಲಕ್ಷಣಗಳೆರಡನ್ನು ಸಹ ಒಳಗೊಂಡಿರುವುದು. ಇದರಲ್ಲಿ ಜಿಲ್ಲೆಗಳು, ಭೂಸ್ವರೂಪಗಳು, ನದಿ ವ್ಯವಸ್ಥೆ, ವಸತಿಗಳ ಹಂಚಿಕೆ, ಭೂ ಸ್ವರೂಪ, ಭೂ ಬಳಕೆ, ಮಣ್ಣು-ಬೆಳೆಗಳ ಹಂಚಿಕೆ ಮೊದಲಾದವುಗಳನ್ನು ಒಂದರ ಮೇಲೊಂದರಂತೆ ಇರಿಸಿ ಅವುಗಳ ಸಂಬಂಧವನ್ನು ಸುಲಭವಾಗಿ ವಿಶ್ಲೇಷಿಸಬಹುದು. ಇದು ಕಂಪ್ಯೂಟರ್ ಆಧಾರಿತ ಭೂಮೇಲ್ಮಯ ವೈವಿಧ್ಯಮಯ ಅಂಕಿ- ಅಂಶಗಳನ್ನು ಸಂಸ್ಕರಿಸುವ ಮತ್ತು ವಿಶ್ಲೇಷಿಸುವ ಒಂದು ವ್ಯವಸ್ಥೆಯಾಗಿದೆ. ಜಿ.ಪಿ.ಎಸ್ ಭೂ ಮೇಲ್ಮಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸ್ರಚಿಸುವುದು ಹಾಗೂ ಆ ವಸ್ತುವಿನ ಸ್ಥಾನದ ಎತ್ತರವನ್ನು ಸಹ ಸೂಚಿಸುವುದು. ಕೃತಕ ಉಪಗ್ರಹಗಳು ಕಳುಹಿಸುವ ಮಾಹಿತಿ ಹಾಗೂ ಭೂ ಮೇಲ್ಮಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸೀವರ್‌ಗಳಿಂದ ಕಾರ್ಯ ನಿರ್ವಹಿಸಲ್ಪಡುವುದು.
9. ದೂರ ಸಂವೇದಿ ತಂತ್ರಜ್ಞಾನವನ್ನು ಕುರಿತು ಬರೆಯಿರಿ.
ಭೂ ಮೇಲ್ಮಗೆ ಸಂಬಂಧಿಸಿದ ಅಂಕಿ-ಅಂಶಗಳ ಸಂಗ್ರಹಣೆಯಲ್ಲಿ ಇಂದು ಬಳಕೆಯಲ್ಲಿರುವ ಆಧುನಿಕ ತಂತ್ರಜ್ಞಾನಗಳಲ್ಲಿ ದೂರ ಸಂವೇದಿ ಅತಿ ಮುಖ್ಯವಾದುದು. ವಸ್ತುಗಳನ್ನು ಭೌತಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಉಗ್ರಪಣೆಯನ್ನು ದೂರ ಸಂವೇದಿ ಎಂದು ಕರೆಯುವರು ವೈಮಾನಿಕ ಚಿತ್ರಗಳು ಹಾಗೂ ಉಪಗ್ರಹಗಳಿಂದ ಪಡೆದ ಚಿತ್ರಗಳು ದೂರ ಸಂವೇದಿ ಚಿತ್ರಗಳಾಗಿವೆ.
ಹೆಚ್ಚಿನ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1.ಭಾರತದ ನೈಸರ್ಗಿಕ ಬಂದರು:
ಎ) ಕೊಚ್ಚಿ
ಬಿ) ನವಮಂಗಳೂರು
ಸಿ) ಮರ್ಮಗೋವಾ
ಡಿ) ವಿಶಾಖ ಪಟ್ಟಣಂ
2. ಭಾರತದ ಕೃತಕ ಬಂದರು:
ಎ) ಮುಂಬೈ
ಬಿ) ಹಾಲ್ದಿಯಾ
ಸಿ) ಚೆನ್ನೈ
ಡಿ) ತುತುಕುಡಿ
3. ಭಾರತ ಸರ್ಕಾರವು ದಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿದ್ದು —— ರಲ್ಲಿ.
ಎ) 1990
ಬಿ)1995
ಸಿ) 1998
ಡಿ)1988
4. ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು:
ಎ) ವಿಶಾಖ ಪಟ್ಟಣ
ಬಿ) ಹಾಲ್ದಿಯಾ
ಸಿ) ಪಾರಾದೀಪ್
ಡಿ) ತುತುಕುಡಿ
5. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ———– ಭಾರತದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿಯಾಗಿದೆ
ಎ) 44
ಬಿ) 54
ಸಿ) 48
ಡಿ) 56
6. ಕಚ್ ಖಾರಿಯ ಶಿರೋಭಾಗದಲ್ಲಿರುವ ಬಂದರು
ಎ) ಕಾಂಡ್ಲಾ
ಬಿ) ನವಶೇವಾ
ಸಿ) ಹಾಲ್ಡಿಯಾ
ಡಿ) ಪಾರಾದೀಪ್
II. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ:
1.ಕೇರಳ ರಾಜ್ಯದಲ್ಲಿರುವ ಬಂದರು ಕೊಚ್ಚಿ
2. ಜಿ.ಪಿ.ಎಸ್. ವ್ಯವಸ್ಥೆಯನ್ನು ಮಾರ್ಗಸೂಚಿ ಅಥವಾ ಪಾತ್ ಫೈಂಡರ್ ಎಂದೂ ಕರೆಯುವರು.
3. ರಾಷ್ಟ್ರದ ಜೀವನಾಡಿ ಎಂದೇ ಹೆಸರಾಗಿರುವ ಸಾರಿಗೆ ರೈಲುಸಾರಿಗೆ
4. ಮರ್ಮಗೋವಾ ಬಂದರು ಗೋವಾ ರಾಜ್ಯದ ಝುವಾರಿ ಕೊಲ್ಲಿಯ ಪ್ರದೇಶದಲ್ಲಿದೆ.
5. ಭಾರತದ ಗಡಿರಸ್ತೆ ಪ್ರಾಧಿಕಾರವು ಜಗತ್ತಿನ ಅತಿ ಎತ್ತರದ ರಸ್ತೆ ಮಾರ್ಗವನ್ನು ಲಡಾಖ್‌ನ ಕಣಿವೆಯಲ್ಲಿ ನಿರ್ಮಿಸಿದೆ.
III. ಈ ಪ್ರಶ್ನೆಗಳಿಗೆ ಉತ್ತರಿಸಿರಿ:
1.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಎಂದರೇನು?
ಭಾರತದ ಉದ್ದಗಲಕ್ಕೂ ಸುಮಾರು ೧೩೧೫೦ ಕಿ.ಮೀ. ಗಳಷ್ಟು ಉದ್ದದ ನಾಲ್ಕು ಅಥವಾ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ.
2. ಜಿ.ಪಿ.ಎಸ್. ವ್ಯವಸ್ಥೆಯ ಉಪಯೋಗಗಳೇನು?
- ಪ್ರಾಕೃತಿಕ ವಿಕೋಪಗಳ ಸ್ಪಷ್ಟ ಭೌಗೋಳಿಕ ಸ್ಥಾನವನ್ನು ಗುರುತಿಸಿ ಪರಿಹಾರ ಕೈಗೊಳ್ಳಲು ಇವುಗಳು ಉಪಯುಕ್ತ.
- ಅರಣ್ಯ ಹಾಗೂ ಪರ್ವತ ಚಾರಣ ಮಾಡುವವರಿಗೆ ಮಾರ್ಗ ತಿಳಿಯಲು ಉಪಯುಕ್ತವಾಗಿವೆ.
- ಸೈನಿಕರು, ವೈಮಾನಿಕರು, ಮೀನುಗಾರರು ಹಾಗೂ ನಾವಿಕರು ಸರಿಯಾದ ಮಾರ್ಗವನ್ನು ಅನುಸರಿಸಲು ಜಿ.ಪಿಎಸ್. ಅಗತ್ಯ ಮಾಹಿತಿಯನ್ನು ನೀಡುವುದು.
- ಇಂದು ಸಾರಿಗೆ ಸಿಬ್ಬಂದಿ ನಿರ್ವಹಣೆಯಲ್ಲಿಯೂ ಇದರ ಬಳಕೆ ಹೆಚ್ಚಾಗಿದೆ.
- ನಗರಗಳಲ್ಲಿ ಮನೆಬಾಗಿಲಿಗೆ ಸೇವೆ ಕೊಡುವ ಹಲವು ಸಂಸ್ಥೆಗಳಿಗೆ ಇಂದು ಜಿ.ಪಿಎಸ್. ವ್ಯವಸ್ಥೆಯೇ ಜೀವಾಳ.
- ಗೂಗಲ್ ಮ್ಯಾಪ್‌ನಂಥ ವ್ಯವಸ್ಥೆಗಳು ಜಿ.ಪಿ.ಎಸ್. ವ್ಯವಸ್ಥೆ ಬಳಸಿ ದಾರಿ ತೋರಿಸುತ್ತವೆ.
3. ಪ್ರಸ್ತುತ ಬಳಕೆಯಾಗುತ್ತಿರುವ ಭೌಗೊಳಿಕ ಮಾಹಿತಿ ವ್ಯವಸ್ಥೆ ಹಾಗೂ ನಕ್ಷೆಗಳ ರಚನೆಯ ತಂತ್ರಾಂಶಗಳಲ್ಲಿ ಅತಿ ಮುಖ್ಯವಾಗಿರುವ ತಂತ್ರಾಂಶಗಳು ಯಾವುವು?
ಆ್ಯಪಲ್, ಆರ್ಕ್, ಇನ್ನೋ, ಆಟೋಕ್ಯಾಡ್, ಮ್ಯಾಪ್ ಇನ್ ಫೋ, ಆಕ್‌ವ್ಯೂ ಮೊದಲಾದವುಗಳು ಅತಿ ಮುಖ್ಯವಾಗಿವೆ.
4. ಸಾರಿಗೆ ಎಂದರೇನು?
ವಸ್ತುಗಳು, ಸೇವೆಗಳು, ಮಾಹಿತಿ ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದನ್ನೇ ಸಾರಿಗೆ ಎಂದು ಕರೆಯುವರು.
5. ದೂರ ಸಂವೇದಿ ತಂತ್ರಜ್ಞಾನದ ಉಪಯೋಗಗಳನ್ನು ತಿಳಿಸಿ.
- ದೂರ ಸಂವೇದಿ ಚಿತ್ರಗಳಿಂದ ಆ ಕಾಲದ ಅವಧಿಯಲ್ಲಿನ ನೈಜ ಹಾಗೂ ನಂಬಲರ್ಹವಾದ ಸ್ಪಷ್ಟ ಮಾಹಿತಿ ದೊರೆಯುವುದು.
- ಇದು ಭೂ ಮೇಲ್ಮನ ಸರ್ವೇಕ್ಷಣೆಗಿಂತ ಅತಿ ಶೀಘ್ರ, ಅಲ್ಪಾವದಿ ಹಾಗೂ ಕಡಿಮೆ ವೆಚ್ಚದ ಮಾಹಿತಿ ಸಂಗ್ರಹಣೆಯ ವಿಧಾನವಾಗಿದೆ.
- ಇದರಿಂದ ಪಡೆಯುವ ಮಾಹಿತಿಯನ್ನು ಸುಲಭವಾಗಿ ಕಂಪ್ಯೂಟರುಗಳಿಂದ ವಿಶ್ಲೇಷಿಸಬಹುದು.
- ಹವಾಮಾನದ ವೈಪರೀತ್ಯ ಹಾಗೂ ಭೂ ಮೇಲ್ಮ ಅಡಚಣೆಗಳಿದ್ದರೂ ದೂರ ಸಂವೇದಿ ಚಿತ್ರಗಳನ್ನು ಉಪಗ್ರಹಗಳಿಂದ ಪಡೆಯಬಹುದು.
- ಚಂಡಮಾರುತ, ಬಿರುಗಾಳಿ, ಪ್ರವಾಹ, ಬರಗಾಲ ಮೊದಲಾದ ನೈಸರ್ಗಿಕ ಪ್ರಕೋಪಗಳ ಪ್ರಭಾವದ ಪ್ರದೇಶ ಹಾಗೂ ಅವುಗಳ ಅನಾಹುತಗಳ ತೀವ್ರತೆಯ ಅಧ್ಯಯನಗಳಿಗೆ ದೂರಸಂವೇದಿ ಚಿತ್ರಗಳು ಅತ್ಯಂತ ಉಪಯುಕ್ತವಾಗಿವೆ.
- ಉಪಗ್ರಹ ಚಿತ್ರಗಳು, ಭೂಬಳಕೆ, ಅರಣ್ಯ ಪ್ರದೇಶ, ಜಲರಾಶಿಗಳು, ವಸತಿ ಪ್ರದೇಶಗಳು, ಬೆಳೆಗಳ ಹಂಚಿಕೆ, ಭೂ ಸವೆತ, ಕರಾವಳಿ ಹೀಗೆ ವಿವಿಧ ಬಗೆಯ ಪ್ರಾಕೃತಿಕ ಸಂಪನ್ಮೂಲಗಳ ವಿಶ್ಲೇಷಣೆಯಲ್ಲಿ ಅತ್ಯಂತ ಮಹತ್ತರವಾದವು.
6. ರಾಷ್ಟ್ರೀಯ ಹೆದ್ದಾರಿಗಳ ಪ್ರಾಮುಖ್ಯತೆಯನ್ನು ತಿಳಿಸಿ.
ರಾಷ್ಟ್ರೀಯ ಹೆದ್ದಾರಿಗಳು ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಸರಕು ಸಾಮಗ್ರಿಗಳನ್ನು ಅತ್ಯಲ್ಪ ಅವಧಿಯಲ್ಲಿ ದೇಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅತಿ ಕಡಿಮೆ ವೆಚ್ಚದಲ್ಲಿ ಸಾಗಿಸಲು ಉಪಯುಕ್ತವಾಗಿವೆ. ಇವು ಭಾರತವನ್ನು ಭಾವನಾತ್ಮಕವಾಗಿ ಬೆಸೆದು ರಾಷ್ಟ್ರೀಯ ಏಕತೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.
ಮುಖ್ಯಾಂಶಗಳು:
- ವಸ್ತುಗಳು, ಸೇವೆಗಳು, ಮಾಹಿತಿ ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದನ್ನೇ ಸಾರಿಗೆ ಎಂದು ಕರೆಯುವರು.
- ಸಾರಿಗೆಯು ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರ ಮಹತ್ತರವಾದುದು.
- ಸಾರಿಗೆಯಲ್ಲಿ ರಸ್ತೆ ಸಾರಿಗೆ, ರೈಲ್ವೆ ಸಾರಿಗೆ, ಜಲ ಸಾರಿಗೆ, ವಾಯು ಸಾರಿಗೆ ಎಂಬ ನಾಲ್ಕು ಪ್ರಕಾರಗಳಿವೆ.
- ರಸ್ತೆ ಸಾರಿಗೆಯನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಎಂದು ವರ್ಗೀಕರಿಸಲಾಗಿದೆ.
- ರಾಷ್ಟ್ರದ ಜೀವನಾಡಿ ಎಂದೇ ಹೆಸರಾಗಿರುವ ರೈಲ್ವೆಯು ಹೆಚ್ಚು ಜನರನ್ನು ಹಾಗೂ ಅಧಿಕ ಪ್ರಮಾಣದ ಸರಕು ಸೇವೆಗಳನ್ನು ಏಕಕಾಲಕ್ಕೆ ಸಾಗಿಸುವ ಮಾಧ್ಯಮವಾಗಿದೆ.
- ಭಾರತವು ಪುರಾತನ ಕಾಲದಿಂದಲೂ ಜಲಮಾರ್ಗವನ್ನು ಹೊಂದಿದೆ. ಭಾರತವು ಮೂರೂ ಕಡೆ ಸಮುದ್ರ ಪ್ರದೇಶವನ್ನು ಹೊಂದಿದೆ. ಬಂದರುಗಳನ್ನು ಕೂಡ ಹೊಂದಿದೆ.
- ಸುವರ್ಣ ಚತುಷೋನ ಮತ್ತು ಕಾರಿಡಾರ್ ರಸ್ತೆಗಳು ಭಾರತದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.
- ಇಂದು ಹಲವಾರು ಸಂಪರ್ಕ ಮಾಧ್ಯಮಗಳು ರೂಢಿಯಲ್ಲಿದ್ದು, ವಿವಿಧ ಪ್ರದೇಶಗಳ ಜನರೊಡನೆ ಸುಲಭವಾಗಿ ಸಂಪರ್ಕಿಸಬಹುದು. ಹೀಗೆ ಎಲ್ಲಾ ಜನರನ್ನು ತಲುಪುವ ಮಾಧ್ಯಮವೇ ಸಮೂಹ ಮಾಧ್ಯಮ.
- ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತ ಪತ್ರಿಕೆಗಳ ಜೊತೆಗೆ ರೇಡಿಯೋ, ದೂರದರ್ಶನ, ಕೃತಕ ಉಪಗ್ರಹಗಳು, ಕಂಪ್ಯೂಟರ್ ಜಾಲ, ಇ-ಮೇಲ್, ಸಂಚಾರಿ ದೂರವಾಣಿಗಳು ಸಂಪರ್ಕದ ಪ್ರಧಾನ ಮಾಧ್ಯಮಗಳಾಗಿವೆ.
- ಭೌಗೋಳಿಕ ಮಾಹಿತಿ ವ್ಯವಸ್ಥೆ, ಗ್ಲೋಬಲ್ ಪೊಜಿಶನಿಂಗ್ ಸಿಸ್ಟಂ, ದೂರ ಸಂವೇದಿ ತಂತ್ರಜ್ಞಾನಗಳು ಬಹು ಉಪಯುಕ್ತವಾಗಿವೆ.
- ಪ್ರಸ್ತುತ ಬಳಕೆಯಾಗುತ್ತಿರುವ ಭೌಗೊಳಿಕ ಮಾಹಿತಿ ವ್ಯವಸ್ಥೆ ಹಾಗೂ ನಕ್ಷೆಗಳ ರಚನೆಯ ತಂತ್ರಾಂಶಗಳಲ್ಲಿ ಆ್ಯಪಲ್, ಆರ್ಕ್, ಇನ್ನೋ, ಆಟೋಕ್ಯಾಡ್, ಮ್ಯಾಪ್ ಇನ್ ಫೋ, ಆಕ್‌ವ್ಯೂ ಮೊದಲಾದವುಗಳು ಅತಿ ಮುಖ್ಯವಾಗಿವೆ.
ಇತರೆ ವಿಷಯಗಳು :
ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ನೋಟ್ಸ್
ಭಾರತದ ಪ್ರಮುಖ ಕೈಗಾರಿಕೆಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್