10th Standard Bharatada Khanija Mattu Shakti Sampanmulagalu Social Science Notes | 10ನೇ ತರಗತಿ ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ನೋಟ್ಸ್

Bharatada Khanija Mattu Shakti Sampanmulagalu

10th Standard Bharatada Khanija Mattu Shakti Sampanmulagalu Social Science Notes Question Answer Guide Extract Mcq Pdf Download Kannada Medium,10ನೇ ತರಗತಿ ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು pdf, 10th Class bharatada khanija mattu shakti sampanmulagalu question answer in kannada Karnataka State Syllabus, kseeb solutions for class 10 social science kannada medium chapter 26 Notes,10th ಸಮಾಜ ನೋಟ್ಸ್, 10th std bharatada khanija mattu shakti sampanmulagalu notes in Kannada ,10th Class ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು notes,10th social 26th lesson notes, 10th social science 26 lesson question answer,10th standard social 26th chapter question answer kannada Medium.

Bharatada Khanija Mattu Shakti Sampanmulagalu

10ನೇ ತರಗತಿ ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ಸಮಾಜ ವಿಜ್ಞಾನ ನೋಟ್ಸ್

1. 2೦ನೇ ಶತಮಾನದ ಅದ್ಭುತ ಲೋಹ ಅಲ್ಯೂಮಿನಿಯಂ

2. ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಿರುವ ಗಣಿ ಹಟ್ಟಿ ಚಿನ್ನದ ಗಣಿ

3. ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.

1.ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳಾವವು?

ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳು ಯಾವುವೆಂದರೆ: ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಅದಿರು, ಅಭ್ರಕ, ಚಿನ್ನದ ಅದಿರು.

2. ಮ್ಯಾಂಗನೀಸ್ ಅದಿರಿನ ವಿಧಗಳು ಯಾವುವು?

ಪೈರೋಲೋಸೈಟ್, ಸೈಲೋಮೆಲೆನ್, ಮ್ಯಾಂಗನೈಟ್, ಬ್ರಾನೈಟ್, ಹೋಲ್ಯಾಂಡೈಟ್.

3. ಅಭ್ರಕದ ಉಪಯೋಗಗಳನ್ನು ತಿಳಿಸಿ.

ಅಭ್ರಕವು ಒಳ್ಳೆಯ ಪಾರದರ್ಶಕತೆ, ಸ್ಥಿತಿ ಸ್ಥಾಪಕತ್ವ, ಶಾಖ ನಿರೋಧಕ ಹಾಗೂ ಹೊಳಪುಳ್ಳ ಸಿಲಿಕೇಟ್ ಖನಿಜವಾಗಿದೆ. ಇದು ಶಾಖ ಮತ್ತು ವಿದ್ಯುತ್ತಿನ ಮಂದವಾಹಕವಾಗಿರುವುದರಿಂದ ಇದನ್ನು ಶಾಖ ನಿರೋಧಕ ಹಾಗೂ ವಿದ್ಯುತ್ ನಿರೋಧಕ ವಸ್ತುವಾಗಿ ಟೆಲಿಫೋನ್, ಟೆಲಿಗ್ರಾಫ್, ನಿಸ್ತಂತು ಸೇವೆ, ಗಾಜು ತಯಾರಿಕೆ, ಬಣ್ಣ, ವಾರ್ನಿಷ್, ಕೃತಕ ರಬ್ಬರ್, ಡೈನೊಮೋಗಳು, ರಾಸಾಯನಿಕ ಕೈಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

4. ಪರಮಾಣು ಖನಿಜಗಳು ಯಾವುವು?

ಯುರೇನಿಯಂ, ಥೋರಿಯಂ, ಬೆರಿಲಿಯಂ, ಲಿಥಿಯಂ.

5. ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳಾವುವು? ಅವುಗಳ ಪ್ರಾಮುಖ್ಯತೆಯನ್ನು ತಿಳಿಸಿ.

ರಶಕ್ತಿ, ಪವನಶಕ್ತಿ, ಸಾಗರ ಉಬ್ಬರವಿಳಿತ ಶಕ್ತಿ, ಭೂ ಅಂತರಾಳದ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವು ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳಾಗಿವೆ. ಇವು ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳಾಗಿವೆ. ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾಗಿವೆ. ಮುಗಿದುಹೋಗುವ ಸಂಪನ್ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ, ಅಣುವಿದ್ಯುತ್ ಶಕ್ತಿಗಳ ಉತ್ಪಾದನೆ ಕಡಿಮೆ ಇರುವ್ಯದರಿಂದ ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳ ಉಪಯೋಗ ಅನಿವಾರ್ಯವಾಗಿದೆ.

6. ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ನಿಮ್ಮದೇ ಆದ ಸಲಹೆಗಳನ್ನು ನೀಡಿ.

  • ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವುದು.
  • ಜಲವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವುದು.
  • ಬದಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು.
  • ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳ ಬಳಕೆಗೆ ಪ್ರೋತ್ಸಾಹ ನೀಡುವುದು.
  • ಶಕ್ತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸಲು ತಿಳುವಳಿಕೆ ನೀಡುವುದು.
  • ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವುದು.

1. ಬಹು ಉಪಯೋಗಿ ಖನಿಜ:

ಎ) ಮ್ಯಾಂಗನೀಸ್

ಬಿ) ಕಬ್ಬಿಣ

ಡಿ) ಅಭ್ರಕ

2. ಭಾರತವು ಪ್ರಪಂಚದಲ್ಲಿ ಪವನ ವಿದ್ಯುತ್ತನ್ನು ಉತ್ಪಾದಿಸುವ ದೊಡ್ಡ ದೇಶವಾಗಿದೆ.

ಎ) ಮೂರನೆಯ

ಬಿ) ನಾಲ್ಕನೆಯ

ಸಿ) ಆರನೆಯ

3. ಇವುಗಳಲ್ಲಿ ಕಬ್ಬಿಣ ಮಿಶ್ರ ಲೋಹ:

ಬಿ) ಬಾಯ್ಸ್ಟ್

ಸಿ) ಅಭ್ರಕ

ಡಿ) ಚಿನ್ನ

4. ಭಾರತದಲ್ಲಿ ಪೆಟ್ರೋಲಿಯಂನ್ನು ಮೊದಲು ——- ఎంబల్లి ಪತ್ತೆ ಮಾಡಲಾಯಿತು.

ಎ) ಲಕಿಮ್ ಪುರ

ಸಿ) ಬಾಂಬೆ ಹೈ

ಡಿ) ಅಂಕಲೇಶ್ವರ

ಎ) ಕೋಲಾರ

ಸಿ) ದೊಡ್ಡ ಬಳ್ಳಾಪುರ

ಡಿ) ತುಮಕೂರು

1.ಅಲ್ಯುಮಿನಿಯಂ ಲೋಹದ ಮುಖ್ಯ ಅದಿರು ಬಾಕ್ಸೈಟ್

2. ಭಾರತದಲ್ಲಿ ಈಗ ಒಟ್ಟು 19 ತೈಲ ಶುದ್ದೀಕರಣ ಕೇಂದ್ರಗಳಿವೆ.

3. ಭಾರತದ ಅತಿದೊಡ್ಡ ತೈಲ ನಿಕ್ಷೇಪ ಬಾಂಬೆ ಹೈ

4. ಸೂರ್ಯನ ಕಿರಣಗಳಿಂದ ಹೊರಸೂಸಲ್ಪಡುವ ಶಾಖದ ಬಳಕೆಯನ್ನು ಸೌರಶಕ್ತಿ ಎಂದು ಕರೆಯುವರು.

5. ಭಾರತದಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳು ದಾಮೋದರ ನದಿ ಕಣಿವೆಯಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿವೆ.

1. ಕಲ್ಲಿದ್ದಲು ಮಾರ್ಪಾಡುಗೊಂಡ ಬಗೆ ಹೇಗೆ?

ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ದಟ್ಟವಾದ ಅರಣ್ಯಗಳಿಂದ ಕೂಡಿದ್ದವೆಂದೂ, ಕ್ರಮೇಣ ಇವುಗಳು ಭೂಮಿಯ ಪದರುಗಳಲ್ಲಿ ಹುದುಗಿ ಹೋಗಿ ಶಾಖ ಮತ್ತು ಒತ್ತಡದಿಂದ ಕಲ್ಲಿದ್ದಲಾಗಿ ಮಾರ್ಪಾಡು ಹೊಂದಿದವೆಂದು ನಂಬಲಾಗಿದೆ.

2. ಭಾರತದಲ್ಲಿ ಉತ್ಪಾದಿಸುವ ಕಬ್ಬಿಣದ ಅದಿರಿನ ವಿಧಗಳನ್ನು ತಿಳಿಸಿ.

  • ಮ್ಯಾಗ್ನಟೈಟ್
  • ಹೆಮಟೈಟ್
  • ಲಿಮೊನೈಟ್
  • ಸಿಡರೈಟ್.

3.ಮ್ಯಾಂಗನೀಸ್ ಅದಿರಿನ ಉಪಯೋಗಗಳನ್ನು ತಿಳಿಸಿ.

ಮ್ಯಾಂಗನೀಸ್‌ನ್ನು ಉಕ್ಕಿನ ಉತ್ಪಾದನೆಯಲ್ಲಿ ಬಳಸುವರು. ರಾಸಾಯನಿಕ ಮತ್ತು ವಿದ್ಯುತ್ ಅವಾಗಾಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸಲಾಗುವುದು.

4. ಸೌರಶಕ್ತಿಯು ಹೇಗೆ ಉಪಯುಕ್ತವಾಗಿದೆ?

ಸೌರ ಶಕ್ತಿಯು ಮುಗಿದು ಹೋಗದ ಶಕ್ತಿಯಾಗಿದ್ದು ಈ ಶಕ್ತಿಯನ್ನು ನೇರವಾಗಿ ಶಾಖ ಶಕ್ತಿಯನ್ನಾಗಿ ಪರಿವರ್ತಿಸಬಹುದು. ಸೌರ ಶಕ್ತಿಯನ್ನು ಈಗಾಗಲೇ ವಿವಿಧ ವಿಧಾನ ಗಳಲ್ಲಿ ಬಳಸಲಾಗುತ್ತಿದ್ದು ಇವುಗಳಲ್ಲಿ ಸೋಲಾರ್ ವಾಟರ್‌ಹೀಟರ್, ಕುಕ್ಕರ್, ಸೋಲಾರ್ ಥರ್ಮಲ್, ವಿದ್ಯುತ್ ದೀಪ, ರೈಲ್ವೆ ಸಿಗ್ನಲ್, ನೀರೆತ್ತಲು ಹಾಗೂ ಸಂಪರ್ಕಮಾಧ್ಯಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

5. ಅಫ್ರಿಕದ ವಿಧಗಳು ಯಾವುವು?

ಅಭ್ರಕದ ವಿಧಗಳು ಯಾವುವೆಂದರೆ

  • ಮಸ್ಕೊವೈಟ್ (ಶ್ವೇತ ಅಭ್ರಕ)
  • ಬಯೋಟೈಟ್ (ಕಪ್ಪು ಅಭ್ರಕ)
  • ಪೂಗೋವೈಟ್ (ಕಂದು ಅಭ್ರಕ).

6. ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳ ಉಪಯೋಗ ಅನಿವಾರ್ಯವಾಗಿದೆ. ಏಕೆ?

ಭಾರತದಲ್ಲಿ ಬಳಸುವ ಶಕ್ತಿ ಸಂಪನ್ಮೂಲಗಳಲ್ಲಿ ಮುಗಿದುಹೋಗುವ(ಸಂಪ್ರದಾಯಕ) ಖಪನ್ಮೂಲಗಳು ಪ್ರಧಾನವಾಗಿವೆ. ಇವುಗಳ ಉತ್ಪಾದನೆಯೂ ಕಡಿಮೆ ಇದ್ದು, ವಿದೇಶಗಳಿಂದ ಅಮದು ಮಾಡಿಕೊಳ್ಳಬೇಕು. ಇದರಿಂದ ರಾಷ್ಟ್ರೀಯ ಆದಾಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದಾಗಿ ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳ ಉಪಯೋಗ ಅನಿವಾರ್ಯವಾಗಿದೆ.

  • ಖನಿಜಗಳು ನೈಸರ್ಗಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದವು.
  • ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ಒಳಗೊಂಡಿರುವ ಮಿಶ್ರಣವನ್ನೇ ಖನಿಜಗಳೆಂದು ಕರೆಯುವರು.
  • ಭಾರತದಲ್ಲಿ ದೊರಕುವ ಮುಖ್ಯ ಖನಿಜ ಸಂಪನ್ಮೂಲಗಳೆಂದರೆ ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಯ್ಸ್ಟ್ ಅದಿರು, ಅಭ್ರಕ, ಚಿನ್ನದ ಅದಿರು.
  • ಶಕ್ತಿ ಸಂಪನ್ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ, ಅಣು ಖನಿಜಗಳನ್ನು ದೇಶದಲ್ಲಿ ಉತ್ಪಾದಿಸಲಾಗುವುದು.
  • ಭಾರತದಲ್ಲಿ ಕಂಡು ಬರುವ ಅಣು ಖನಿಜಗಳಲ್ಲಿ ಯುರೇನಿಯಂ, ಥೋರಿಯಂ, ಬೆರಿಲಿಯಂ, ಲಿಥಿಯಂ ಪ್ರಮುಖವಾಗಿವೆ.
  • ಸಾಂಪ್ರದಾಯಿಕ ಹಾಗೂ ಮುಗಿದುಹೋಗುವ ಶಕ್ತಿ ಸಂಪನ್ಮೂಲಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ, ಅಣುವಿದ್ಯುತ್ ಶಕ್ತಿಗಳನ್ನು ಉದಾಹರಿಸಬಹುದಾಗಿದೆ.
  • ಅಸಾಂಪ್ರದಾಯಿಕ ಹಾಗೂ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳಲ್ಲಿ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್ ಶಕ್ತಿಗಳನ್ನು ಉದಾಹರಿಸಬಹುದಾಗಿದೆ.
  • ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಪವನಶಕ್ತಿ, ಸಾಗರ ಉಬ್ಬರವಿಳಿತ ಶಕ್ತಿ, ಭೂ ಅಂತರಾಳದ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವುಗಳನ್ನು ಅಸಂಪ್ರದಾಯಕ ಶಕ್ತಿ ಮೂಲಗಳೆಂದು ಕರೆಯುವರು.
  • ಭಾರತದಲ್ಲಿ ಬಳಸುವ ಶಕ್ತಿ ಸಂಪನ್ಮೂಲಗಳಲ್ಲಿ ಮುಗಿದುಹೋಗುವ ಸಂಪನ್ಮೂಲಗಳೇ ಪ್ರಧಾನವಾಗಿದ್ದು, ಇವುಗಳ ಉತ್ಪಾದನೆ ಕಡಿಮೆಯಿದ್ದು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಇದರಿಂದ ರಾಷ್ಟ್ರೀಯ ಆದಾಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದಾಗಿ ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳ ಉಪಯೋಗ ಅನಿವಾರ್ಯವಾಗಿದೆ.

ಇತರೆ ವಿಷಯಗಳು :

ಭಾರತದ ಭೂ ಬಳಕೆ ಹಾಗೂ ಕೃಷಿ ಪಾಠದ ನೋಟ್ಸ್

ಭಾರತದ ಸಾರಿಗೆ ಹಾಗೂ ಸಂಪರ್ಕ ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *