10th Standard Samajika Savalugalu Chapter Social Science Notes Question Answer Guide Mcq Pdf Download in Kannada Medium Karnataka State Syllabus 2025,10ನೇ ತರಗತಿ ಸಾಮಾಜಿಕ ಸವಾಲುಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, SSLC Social Science Chapter 24 Notes,10th Samajika Savalugalu Lesson Quesiotn and Answer in Kannada, Samajika Savalugalu 10th, Samajika Savalugalu 10th Class Question Answer, 10th Social Samajika Savalugalu Question Answer, Samajika Savalugalu in Kannada, SSLC Samajika Savalugalu Social Notes Pdf, Kseeb Solution Class 10 Chapter 24 Notes, 10th Social Science 24 Lesson Notes Key Answers

10ನೇ ತರಗತಿ ಸಾಮಾಜಿಕ ಸವಾಲುಗಳು ಸಮಾಜ ವಿಜ್ಞಾನ ನೋಟ್ಸ್
ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. ಸಂವಿಧಾನದ 24ನೇ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
2. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ 1986
3. ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ 1987 ರಲ್ಲಿ ರಾಷ್ಟ್ರೀಯ ನೀತಿ ಜಾರಿಗೊಳಿಸಿತು.
4. ವರದಕ್ಷಿಣೆ ನಿಷೇಧ ಕಾಯ್ದೆ ಮೊದಲು 1961 ರಲ್ಲಿ ಜಾರಿಗೆ ಬಂದಿತು.
5. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (POSCO) ಕಾಯಿದೆ 2012 ರಲ್ಲಿ ಜಾರಿಗೆ ಬಂದಿತು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ,
1.ಭಾರತದ ಯಾವುದಾದರೂ ಎರಡು ಸಾಮಾಜಿಕ ಸವಾಲುಗಳನ್ನು ಹೆಸರಿಸಿ.
- ಬಾಲಕಾರ್ಮಿಕ ಸಮಸ್ಯೆ
- ಹೆಣ್ಣು ಭ್ರೂಣಹತ್ಯೆ ಮತ್ತು ಹೆಣ್ಣು ಶಿಶುಹತ್ಯೆ.
2. ಬಾಲ ಕಾರ್ಮಿಕರು ಎಂದರೆ ಯಾರು?
ಭಾರತದ ಸಂವಿಧಾನದ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎನ್ನಬಹುದು.
3. ಹೆಣ್ಣು ಭ್ರೂಣ ಹತ್ಯೆ ಎಂದರೇನು?
ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದು, ಅದು ತಂದೆ-ತಾಯಿಯರಿಗೆ ಬೇಡವಾದ ಹೆಣ್ಣು ಭ್ರೂಣವಾಗಿದ್ದರೆ ಅದನ್ನು ಗರ್ಭದಲ್ಲಿಯೇ ಕೊಂದು ಹಾಕುವುದೇ ಹೆಣ್ಣು ಭ್ರೂಣ ಹತ್ಯೆ.
4. ಹೆಣ್ಣು ಶಿಶುಹತ್ಯೆ ಎಂದರೇನು?
ಜನನದ ನಂತರದಲ್ಲಿ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಪದ್ಧತಿಯೇ ಹೆಣ್ಣು ಶಿಶುಹತ್ಯೆ.
5. ಬಾಲ್ಯ ವಿವಾಹ ಎಂದರೇನು?
ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ ೧೮ ವರ್ಷದೊಳಗಿನ ಹುಡುಗಿಗೆ ಅಥವಾ ೨೧ ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎಂದು ಕರೆಯಲಾಗುತ್ತದೆ.
III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ:
1.ಬಾಲ ಕಾರ್ಮಿಕ ಸಮಸ್ಯೆಗೆ ಕಾರಣಗಳಾವುವು? ತಿಳಿಸಿ.
ಕಡುಬಡತನ, ಕುಟುಂಬ ಕಲಹ, ವಿಚ್ಛೇದನ, ಕೌಟುಂಬಿಕ ಹಿಂಸೆ, ಪೋಷಕರ ಅತಿಯಾದ ನಿಯಂತ್ರಣ, ಉದ್ಯಮಿಗಳ ಲಾಭ ಕೋರತನ, ಅನಕ್ಷರತೆ, ಮಕ್ಕಳ ಅಪಹರಣ ಹಾಗೂ ಜೀತ ಮುಂತಾದವು ಬಾಲ ಕಾರ್ಮಿಕ ಸಮಸ್ಯೆಗೆ ಕಾರಣಗಳು.
2. ಬಾಲ ಕಾರ್ಮಿಕ ಸಮಸ್ಯೆಯಿಂದಾಗುವ ಪರಿಣಾಮಗಳೇನು?
ಮಾಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಕೊರತೆ. ಮಕ್ಕಳನ್ನು ದಿನವಿಡೀ ದುಡಿಸಿಕೊಳ್ಳುವ ಮಂದಿ ಅವರ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ, ವೈದ್ಯಕೀಯ ಮತ್ತಿತರ ಅಗತ್ಯತೆಗಳ ಬಗ್ಗೆ ಯಾವುದೇ ಆಸಕ್ತಿ ವಹಿಸುವುದಿಲ್ಲ. ಅದರ ಬದಲು ಅವರನ್ನು ದೈಹಿಕವಾಗಿ ಮಾನಸಿಕವಾಗಿ ಹಿಂಸಿಸುವುದು ಕಂಡುಬಂದಿದೆ. ಅನಾರೋಗ್ಯ, ಪೌಷ್ಠಿಕ ಆಹಾರದ ಕೊರತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಒತ್ತಾಯದ ಮಡಿತ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ಇವೇ ಮುಂತಾದ ಕಾರಣಗಳಿಂದ ಲಕ್ಷಾಂತರ ಮಂದಿ ಬಾಲಕಾರ್ಮಿಕರು ಇಂದಿಗೂ ಬವಣೆ ಪಡುತ್ತಿದ್ದಾರೆ. ಆಟವಾಡುವ, ಕನಸುಕಾಣುವ ಮತ್ತು ಓದುವ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ದುಡಿ ಅವರ ಬಾಲ್ಯವನ್ನು ಕಸಿದುಕೊಳ್ಳಲಾಗಿದೆ.
3. ಬಾಲ ಕಾರ್ಮಿಕತೆಯ ನಿರ್ಮೂಲನಾ ಕ್ರಮಗಳಾವುವು? ವಿವರಿಸಿ.
ಬಾಲಕಾರ್ಮಿಕತನವನ್ನು ನಿರ್ಮೂಲನ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ೧೯೮೮ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ರಾಜ್ಯಗಳ ಹಂತದಲ್ಲಿಯೂ ಇದೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸೇರಿ ಕಾರ್ಖಾನೆಗಳಿಗೆ ಭೇಟಿ ಮಾಡಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚುತ್ತಾರೆ. ಬಾಲಕಾರ್ಮಿಕರಾಗಿ ಸಿಕ್ಕಿದಂತಹ ಮಕ್ಕಳನ್ನು ಕರೆತಂದು ಎಲ್ಲಾ ರೀತಿಯ ಉಚಿತ ಸೌಲಭ್ಯಗಳೊಂದಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಇಂತಹ ಮಕ್ಕಳ ಶಿಕ್ಷಣಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಬಾಲಮಂದಿರಗಳನ್ನು ತೆರೆದಿದ್ದು, ಈ ಮಕ್ಕಳಿಗೆ ಉಚಿತವಾಗಿ ವಸತಿ, ಊಟ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಭಾರತ ಸರ್ಕಾರವು 1987ರಲ್ಲಿ ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿತು. 1988ರಲ್ಲಿ ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಯಯೋಜನೆಯನ್ನು ರೂಪಿಸಿತು. 2006ರಲ್ಲಿ ಸರ್ಕಾರ ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆಯನ್ನು ಜಾರಿಗೊಳಿಸಿತು.
4. ವರದಕ್ಷಿಣೆ ಪಿಡುಗಿನಿಂದಾಗುವ ದುಷ್ಪರಿಣಾಮಗಳಾವುವು?
ಪರದಕ್ಷಿಣೆ ಸ್ತ್ರೀಯರ ಸ್ವಾಭಿಮಾನ, ಗೌರವ ಸ್ಥಾನಮಾನವನ್ನು ಕುಗ್ಗಿಸುತ್ತದೆ ಮತ್ತು ಕೇವಲ ಕಲಹೆಗಳನ್ನುಂಟು ಮಾಡುತ್ತದೆ. ಅದು ಸ್ತ್ರೀ ಪುರುಷರ ನಡುವೆ ಒಡಕು ಹಾಡಾಗಲು ಕಾರಣವಾಗಿದೆ. ವರದಕ್ಷಿಣೆ ಪಿಡುಗಿನಿಂದಾಗಿ ಅನೈತಿಕತೆ, ಮತ್ತು ಕ್ರೌರ್ಯ ನ್ಯಾವುದು, ಕೌಟುಂಬಿಕ ಸಂಬಂಧಗಳು ಹಾಳಾಗುವುವು. ವರದಕ್ಷಿಣೆ ಹಣದ ದಾಹದಿಂದಾಗಿ ಲೋಕದ ವಿವಾಹಗಳು ಕೂಡಾ ನಡೆಯುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು 3ಚು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವಿವಾಹ ವಿಚ್ಛೇದದ ಸಂಖ್ಯೆಗಳು ಹೆಚ್ಚುತ್ತಿವೆ.
5. ವರದಕ್ಷಿಣೆ ಸಮಸ್ಯೆಗೆ ಪರಿಹಾರ ಕ್ರಮಗಳಾವುವು?
ವರದಕ್ಷಿಣೆ ಸಾವು ಪ್ರಕರಣದ ವಿಚಾರಣೆಯನ್ನು ಜಾಮೀನು ರಹಿತ ಮತ್ತು ರಾಜಿರಹಿತ ಜಿಲೆಯಲ್ಲಿ ನಡೆಸಬಹುದು. ವರದಕ್ಷಿಣೆ ನಿಷೇಧ ಕಾಯ್ದೆಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತರುವುದು, ಕಾನೂನಿನ ಮೂಲಕವಲ್ಲದೆ ಜನಜಾಗೃತಿ, ಅಚಿತರಜಾತಿ ವಿವಾಹ, ಆಧುನಿಕ ಪ್ರಚಾರ ಮಾಧ್ಯಮಗಳು, ಸ್ವಯಂ ಸೇವಾ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ವರದಕ್ಷಿಣೆ ಸಮಸ್ಯೆಯನ್ನು ಪರಿಹರಿಸಬಹುದು.
6. ಬಾಲ್ಯ ವಿವಾಹದ ಪರಿಣಾಮಗಳಾವುವು?
ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗಿ, ಅವರು ಪ್ರಶ್ನಿಸುವ ಸ್ವತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಮಕ್ಕಳ ಮೇಲೆ ಅತಿಯಾದ ದೌರ್ಜನ್ಯ, ನಿರ್ಲಕ್ಷ್ಯ, ಹಿಂಸೆ, ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ಹೆಚ್ಚುತ್ತವೆ. ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಘನೆ – ಬಾಲ್ಯತನ, ಶಿಕ್ಷಣ, ಮನೋರಂಜನೆ, ಗೆಳೆಯರ ಒಡನಾಟಕ್ಕೆ ಧಕ್ಕೆ, ಅಪೌಷ್ಟಿಕತೆ, ರಕ್ತಹೀನತೆ, ಆನಾರೋಗ್ಯ, ಗರ್ಭಪಾತ, ಶಿಶುಮರಣ, ಕಾಯಿಮರಣಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುವ ಸಂಭವ ಹೆಚ್ಚು. ಹೆಣ್ಣು ಮಕ್ಕಳು ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದೆ ಆಗಾಗ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚು.
ಹೆಚ್ಚುವರಿ ಪ್ರಶ್ನೆಗಳು:
I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1. ವರದಕ್ಷಿಣೆ ನಿಷೇಧ ಕಾಯ್ದೆಯನ್ನು 1986 ರಲ್ಲಿ ತಿದ್ದುಪಡಿಮಾಡಲಾಯಿತು.
2. ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಿಕ ಕಾಯ್ದೆಯನ್ನು 1994 ಜಾರಿಗೆ ತರಲಾಯಿತು. ರಲ್ಲಿ
3. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ 2006
4. ಬಾಲ್ಯ ವಿವಾಹ ನಡೆದಾಗ ನಾವು ಪ್ರಪ್ರಥಮವಾಗಿ ಮಕ್ಕಳ ಸಹಾಯವಾಣಿ ೩. ಸ್ತ್ರೀಯರನ್ನು ಕಾಡುತ್ತಿರುವ ಒಂದು ಸಾಮಾಜಿಕ ಪಿಡುಗು 1098 ಗೆ ದೂರು ನೀಡಬಹುದು.
5. ಸ್ತ್ರೀಯರನ್ನು ಕಾಡುತ್ತಿರುವ ಒಂದು ಸಾಮಾಜಿಕ ಪಿಡುಗು ವರದಕ್ಷಿಣೆ
II. ಈ ಪ್ರಶ್ನೆಗಳಿಗೆ ಉತ್ತರಿಸಿ:
1. ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳು ಯಾವುವು?
ಲಿಂಗ ತಾರತಮ್ಯ. ಹೆಣ್ಣು ಬೇರೆಯವರ ಮನೆಗೆ ಹೋಗುವವಳು ಅವಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕು ಎಂಬ ನಂಬಿಕೆ. ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಭೇದಭಾವ. ಅಪ್ರಾಪ್ತರನ್ನು ಮದುವೆ ಮಾಡುವ ಒಂದು ಸಂಪ್ರದಾಯದ ಕಾರಣ. ಹಿಂದೆ ಬಾಲ್ಯವಿವಾಹಕ್ಕೆ ಒಳಗಾದವರೆಲ್ಲರೂ ಕುಟುಂಬದಲ್ಲಿ ತಲೆಮಾರುಗಳಿಂದ ನಡೆದುಬಂದ ಮದಂತೆ ಅದನ್ನೇ ಮುಂದುವರಿಸುವುದು. ಶಿಕ್ಷಣ ಇಲ್ಲದಿರುವಿಕೆ, ಬಾಲಕಾರ್ಮಿಕತೆ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟ, ಕಾನೂನಿನ ಕನಿಷ್ಠ ಮಟ್ಟದ ಅನುಷ್ಠಾನ ಮತ್ತು ಬಳಕೆಯ ಕೊರತೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಠಾನದ ಕೊರತೆ. ಶಿಕ್ಷಣಕ್ಕೆ, ಮಾನದ / ಸಮುದಾಯಗಳ / ಸಾರ್ವಜನಿಕ ಅಸಹಕಾರ. ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳ ದೋಷಪೂರಿತವಾದ ಅನುಷ್ಠಾನ.
2. ಬಾಲಕಾರ್ಮಿಕ ಸಮಸ್ಯೆಯನ್ನು ನಿರ್ಮೂಲನಗೊಳಿಸಲು ಇರುವ ಸಾಂವಿಧಾನಿಕ ಪರಿಹಾರ ಕ್ರಮಗಳು ಯಾವುವು?
- ನಮ್ಮ ಸಂವಿಧಾನದ ೨೪ನೇ ವಿಧಿಯು ೧೪ ವರ್ಷಕ್ಕೂ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ.
- ಅಪಾಯಕಾರಿಯಾದ ಯಾವುದೇ ಕೈಗಾರಿಕಾ ಘಟಕದಲ್ಲಿ ಮಕ್ಕಳನ್ನು ಉದ್ಯೋಗಿಗಳಾಗಿ ನೇಮಕ ಮಾಡಬಾರದೆಂದು ಎಚ್ಚರಿಸಿದೆ..
- ಸಂವಿಧಾನದ ರಾಜ್ಯ ನಿರ್ದೇಶಕ ಸೂತ್ರಗಳ ಪ್ರಕಾರ ಮಕ್ಕಳ ಹಿತ ಸಂರಕ್ಷಣೆಯನ್ನು ಸಾಧಿಸುವ ಹೊಣೆಗಾರಿಕೆ ಸರ್ಕಾರಕ್ಕಿದೆ ಎಂದು ತಿಳಿಸಿದೆ.
3. ಬಾಲ್ಯವಿವಾಹಕ್ಕೆ ಪರಿಹಾರಗಳೇನು?
- 18 ವರ್ಷದ ತನಕ ಯಾವ ಮಕ್ಕಳು ಶಾಲೆ / ಕಾಲೇಜು ಬಿಡದಿರುವಂತೆ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಅಂದರೆ ೧೦೦% ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು. ಹಾಜರಾತಿಯ ಜೊತೆಗೆ 1೦೦% ಜನನ ನೋಂದಣಿ ಮತ್ತು ಜನನ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಮಾಡುವುದು.
- ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು, ಬಾಲಕಿಯರ ಬಲವರ್ಧನೆ ಮತ್ತು ಸಬಲೀಕರಣ ಆದ್ಯತೆ. ಎಲ್ಲೇ ಬಾಲ್ಯವಿವಾಹ ನಡೆದರೂ ತಪ್ಪದೇ ದೂರು ನೀಡುವುದು, ಖಂಡಿಸುವುದು, ಪ್ರಶ್ನಿಸುವುದು.
4. ಸ್ತ್ರೀಯರ ಮೇಲೆ ನಡೆಯುತ್ತಿರುವ ಹಿಂಸಚಾರಗಳು ಯಾವುವು?
ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ, ದೈಹಿಕ ಮತ್ತು ಮಾನಸಿಕ ಕಿರುಕುಳ, ಗರ್ಭಪಾತಕ್ಕೆ ಪ್ರೇರೇಪಿಸುವುದು, ಅವಾಚ್ಯ ಪದಗಳ ಬಳಕೆ ಮುಂತಾದ ರೂಪದಲ್ಲಿ ಹಿಂಸಾಚಾರಗಳು ಕುಟುಂಬದ ಒಳಗೂ ಹೊರಗೂ ಸ್ತ್ರೀಯರ ಮೇಲೆ ನಡೆಯುತ್ತಲೇ ಇವೆ.
5. ವರದಕ್ಷಿಣೆಯ ರೂಪಗಳು ಯಾವುವು?
ವಿವಾಹದ ಉಡುಗೊರೆಯಾಗಿ ವಧುವಿನ ಕುಟುಂಬದವರಿಂದ ನಾನಾರೂಪದಲ್ಲಿ ಅಪೇಕ್ಷಿಸಲಾಗುವ ಸ್ವತ್ತು, ಚಿನ್ನಾಭರಣ, ನಗದು, ವಾಹನ ಇತ್ಯಾದಿಗಳು.
6. ಹೆಣ್ಣು ಭ್ರೂಣ ಹತ್ಯೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳು ಯಾವುವು?
ಹೆಣ್ಣು ಭ್ರೂಣ ಹತ್ಯೆಯಿಂದ ಸ್ತ್ರೀಪುರುಷರ ಲಿಂಗಾನುಪಾತದಲ್ಲಿ ಏರುಪೇರು, ಲಿಂಗ ತಾರತಮ್ಯತೆ, ಹೆಣ್ಣಿನ ಅಪಮೌಲೀಕರಣ ಮುಂತಾದ ದುಷ್ಪರಿಣಾಮಗಳು ಉಂಟಾಗುತ್ತಿವೆ.
ಮುಖ್ಯಾಂಶಗಳು:
- ಸಮಾಜವು ಸಂಕೀರ್ಣವಾದಂತೆಲ್ಲಾ, ಮುಗಿಲು ಮುಟ್ಟುವ ಕಾರ್ಯನಿರ್ವಹಣೆಯ ಬಿಕ್ಕಟ್ಟುಗಳು ಕೆಲವೊಮ್ಮೆ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಕುಬ್ಬವಾಗಿಸಿ ಶೋಷಣೆಗೆ ದೂಡುವುದುಂಟು. ಅವು ಆಯಾ ಕಾಲದ ಸಾಮಾಜಿಕ ಶೋಷಣೆಗಳಾಗಿ, ಸಮಸ್ಯೆಗಳಾಗಿ ವ್ಯಕ್ತವಾಗುತ್ತವೆ.
- ಭಾರತದಂತಹ ಅಭಿವೃದ್ಧಿ ಪಥದಲ್ಲಿರುವ ಸಮಾಜಗಳಲ್ಲಿ ಮಿತಿಮೀರಿದ ಜನಸಂಖ್ಯೆ, ಬಡತನ, ನಿರುದ್ಯೋಗ, ಭಿಕ್ಷಾಟನೆ, ಬಾಲಾಪರಾಧ, ಅಪರಾಧ, ಬಾಲಕಾರ್ಮಿಕರ ಸಮಸ್ಯೆ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ, ವರದಕ್ಷಿಣೆ ಕಿರುಕುಳ, ಯುವಜನರ ಅಶಾಂತಿ ಮುಂತಾದ ಹಲವಾರು ಬಗೆಯ ಸಮಸ್ಯೆಗಳು ತಾಂಡವವಾಡುತ್ತಿವೆ.
- ಇಂತಹ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ನಿರ್ಮೂಲನಗೊಳಿಸಲು ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿದೆ.
ಇತರೆ ವಿಷಯಗಳು :
ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಪಾಠದ ನೋಟ್ಸ್
ಭಾರತದ ಭೂ ಬಳಕೆ ಹಾಗೂ ಕೃಷಿ ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್