10th Standard Namma Bhashe Kannada Notes Question Answer Summery Guide Extract Mcq Pdf Download Kannada Medium Karnataka State Syllabus 2025, namma bhashe kannada lesson pdf, ನಮ್ಮ ಭಾಷೆ ಪಾಠದ ಪ್ರಶ್ನೋತ್ತರಗಳು pdf download, ನಮ್ಮ ಭಾಷೆ ಪಾಠದ ಪ್ರಶ್ನೋತ್ತರಗಳು kseeb solutions, ನಮ್ಮ ಭಾಷೆ 10th standard notes, 10ನೇ ತರಗತಿ ನಮ್ಮ ಭಾಷೆ ಕನ್ನಡ ನೋಟ್ಸ್, 10th kannada notes kseeb solutions for class 10 kannada chapter 1 namma bashe notes, sslc namma bhashe question answer,10th kannada notes pdf download kannada medium, 10th kannada 1st lesson question answers.

10ನೇ ತರಗತಿ ನಮ್ಮ ಭಾಷೆ ಕನ್ನಡ ನೋಟ್ಸ್
ಲೇಖಕರ ಪರಿಚಯ
ಎಂ. ಮರಿಯಪ್ಪ ಭಟ್ಟರು (೧೯೦೬) ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ ಗ್ರಾಮದವರು. ಬಹುಭಾಷಾ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆಗೈದವರು. ಮದ್ರಾಸು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದವರು.
ಶ್ರೀಯುತರು ರಚಿಸಿದ ಕೃತಿಗಳೆಂದರೆ.
- ‘ತುಳು – ಇಂಗ್ಲೀಷ್ ನಿಘಂಟು’,
- ಅಭಿನವಮಂಗರಾಜನ ನಿಘಂಟು,
- ಜಾತಕ ತಿಲಕಂ,
- ಛಂದಸ್ಸಾರ ಮೊದಲಾದ
- ಕೃತಿಗಳ ಕರ್ತೃವಾಗಿ ಪ್ರಸಿದ್ಧರಾದವರು.
ಶ್ರೀಯುತರಿಗೆ ‘ಕರ್ನಾಟಕ ಸರ್ಕಾರದ ಪುರಸ್ಕಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.
ಪ್ರಸ್ತುತ ಗದ್ಯಭಾಗವನ್ನು ಎಂ. ಮರಿಯಪ್ಪಭಟ್ಟ ಅವರ ‘ಕನ್ನಡ ಸಂಸ್ಕೃತಿ’ ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಟಿಪ್ಪಣಿ :-
- ರಾಜ್ಯಕಾರಣ :
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರಾಜ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರ ವರ್ಗದವರು, ವೈಸರಾಯಿ ಕಲೆಕ್ಟರ್ ಮುಂತಾದ ಪ್ರಾಂತ್ಯಾಧಿಕಾರಿಗಳು.
- ಕಣ್ಣೆಂಜಲು :
ಕಣ್ಣಿನಿಂದ ಬರುವ ಕಲ್ಮಶ, ಪಿಸುರು, ಹಿಕ್ಕು, ಕೆಟ್ಟ ಕಣ್ಣಿನ ನೋಟದಿಂದ ಆಗುವ ಕೆಡಕು.
ಕಠಿಣ ಪದಗಳ ಶಬ್ದಾರ್ಥ :-
ಅಮೂಲ್ಯ – ಬೆಲೆಕಟ್ಟಲಾಗದ, ಶ್ರೇಷ್ಠ,
ಪಿಯೂಷ = ಅಮೃತ
ನಿರೀಕ್ಷಣೆ = ಸೂಕ್ಷ್ಮವಾದ ಅವಲೋಕನ
ತ್ಯಜಿಸು = ಬಿಡು, ತೊರೆ
ಮೇಧಾಶಕ್ತಿ – ಬುದ್ದಿ ಸಾಮರ್ಥ್ಯ
ಘೃತ – ತುಪ್ಪ
ಜಂತು = ಜೀವಿ
ಗತಕಾಲ = ಪ್ರಾಚೀನಕಾಲ
ತೈಲ = ಎಣ್ಣೆ
ಪರಿಷ್ಕರಿಸು = ತಿದ್ದು, ಸರಿಪಡಿಸು
ಪುಂಗವ = ಶ್ರೇಷ್ಠ
ಸ್ವಾದ = ರುಚಿ
ಅಭಿಮತ = ಅಭಿಪ್ರಾಯ
ಉದ್ಘೋಷಿಸು = ಗಟ್ಟಿಯಾಗಿ ಹೇಳು
ಎರವಲು = ಕಡ, ಸಾಲ
ಕಂಗಾಲು = ಕೆಂಗೆಡು, ದಿಕ್ಕು ತೋಚದಿರುವುದು.
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧) ಭಾಷೆ ಯಾವುದಕ್ಕೆ ಸಾಧನವಾಗಿದೆ?
ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನವಾಗಿದೆ.
೨) ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ?
ಪ್ರಾಣಿಗಳು ತಮ್ಮ ಮಕ್ಕಳಿಗೆ ಮೊಲೆಯೂಡುವ ಎಲ್ಲಾ ಪ್ರಾಣಿಗಳೂ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತಮ್ಮ ಮಕ್ಕಳಿಗೆ ತರಬೇತು ಕೊಡುತ್ತವೆ.
೩) ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು?
ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಆರಂಭ ಮಾಡಿದನೋ ಅಂದಿನಿಂದ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.
೪) ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು?
“ನಯಸೇನ” ತನ್ನ ಕನ್ನಡ ಭಾಷಾಭಿಮಾನವನ್ನು ತಿಳಿಯುತ್ತಾ ಈ ಮೂಲಕ ತಿಳಿಸಿದ್ದಾರೆ.
೫) ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಮಹಮ್ಮದಿಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಶಬ್ದಗಳು ಬಂದುವು.
๒. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧) ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
ವ್ಯಾವಹಾರಿಕ ಭಾಷೆಯು ಜೀವದ್ಭಾಷೆಯಾಗಿದ್ದು, ಜನರು ಅದರಲ್ಲಿ ಮಾತನಾಡುತ್ತಾರೆ, ವ್ಯವಹರಿಸುತ್ತಾರೆ.
ಉದಾ : ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ಇಂಗ್ಲೀಷ್, ಗ್ರಾಂಥಿಕವೆಂದರೆ, ಅಭಿವೃದ್ಧಿ ಹೊಂದಿದ ಭಾಷೆ, ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ.
ಉದಾ : ಸಂಸ್ಕೃತ, ಕನ್ನಡ, ಇಂಗ್ಲೀಷ್, ಪಾಳಿ ಮುಂತಾದವು.
೨) ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ?
ಮನುಷ್ಯರು ಸಂಚಾರಿ (ಅಲೆದಾಡುವುದನ್ನು) ಬಿಟ್ಟು ಒಂದೆಡೆ ನೆಲೆ ನಿಂತು, ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಮೊದಲು ಮಾಡಿದನೋ ಅಂದಿನಿಂದಲೇ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಇದು ಲಿಪಿಯ ಉಗಮಕ್ಕೆ ಕಾರಣವಾಯಿತು.
೩) ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
ಅನಕ್ಷರಸ್ಥರು, ದಿನಗೂಲಿ ಮಾಡುವವರು ತಾವು ದಿನಗೆಲಸಕ್ಕೆ ಹೋದ ದಿನವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು ಗೆರೆ – ಎಳೆದು ಗುರುತಿಸಿ, ಕೊನೆಯಲ್ಲಿ ಎಣಿಸಿ ಲೆಕ್ಕ ಹಾಕಿ ಸಂಬಳ ಪಡೆಯುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ಮಾರುವವರು ಕೂಡ ಇದೇ ರೀತಿ ಗೆರೆ ಎಳೆಯುವುದರ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಭದ್ರ ಮಾಡಿಕೊಂಡರು.
೪) ಕನ್ನಡ ಭಾಷೆ ಹದಗೊಂಡದ್ದು ಹೇಗೆ?
ಬಸವಣ್ಣ, ಅಲ್ಲಮ ಪ್ರಭು, ಚಾಮರಸ, ಕುಮಾರವ್ಯಾಸ ರಂಥಹ ಕವಿಗಳು. ಪುರಂದರ ದಾಸರು, ಕನಕ ದಾಸರಂಥಹ ದಾಸ ಶ್ರೇಷ್ಠರು ಕನ್ನಡ ಪದ ಬಳಕೆಯನ್ನು ಸರಳ, ಸುಂದರ ಹಾಗೂ ಮಧುರನಾದದೊಂದಿಗೆ ತಮ್ಮ ಅನುಭವದ ಮಾತುಗಳನ್ನು ಜನರ ಹೃದಯ ಮುಟ್ಟುವಂತೆ ಅಭಿವ್ಯಕ್ತಿ ಗೊಳಿಸಿದ್ದರಿಂದ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ರುಚಿಯಾಗಿ ಕನ್ನಡ ಭಾಷೆ ಹದಗೊಂಡಿತು.
೫) ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು?
ಆಂಗ್ಲ ಭಾಷೆಯನ್ನು ಮಾತನಾಡುವ ಆಂಗ್ಲರು ಸಾಹಸ ಜೀವಿಗಳು ಹಾಗೂ ಬುದ್ಧಿಶಾಲಿಯಾಯಿತು. ಸೂರ್ಯನು ಎಂದೂ ಮುಳಗನೆನ್ನುವಂಥಹ ವಿಸ್ತಾರವಾದ ಸಾಮ್ರಾಜ್ಯ ವನ್ನು ಸ್ಥಾಪಿಸಿ, ವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸುವುದರ ಜೊತೆಗೆ ದೇಶ – ವಿದೇಶಗಳ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು. ಎಲ್ಲಕ್ಕೂ ಮಿಗಿಲಾಗಿ ಆಂಗ್ಲರು ಮಹಾ ಮೇಧಾವಿಗಳು, ತಮ್ಮ ಆಸೆ – ಆಕಾಂಕ್ಷೆ ವಿಚಾರ ಮುಂತಾದವನ್ನು ಭಾಷೆಯ ಮೂಲಕ ಉಜ್ವಲ ಅಭಿಮಾನಿಗಳಾಗಿ ಅಭಿಮಾನವುಳ್ಳವರಾಗಿ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಆ ಭಾಷೆ ಬೆಳೆದು ಆಂಗ್ಲಭಾಷೆ ವಿಶ್ವವ್ಯಾಪಿಯಾಗಲು ಕಾರಣವಾಯಿತು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧) ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ?
ಒಂದು ಭಾಷೆ ಸತ್ವಪೂರ್ಣವಾಗ ಬೇಕಾದರೆ ಅದನ್ನಾಡುವ ಜನ ಅಭಿಮಾನ ಧನರೂ, ಬುದ್ಧಿಶಲಿಗಳು, ಪ್ರಯೋಗಶೀಲರು ಆಗಿರಬೇಕು. ನಾಲೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಆಂಗ್ಲ ಜನತೆ ಸಾಹಸ ಜೀವಿಯಾಯಿತು. ಬುದ್ಧಿಶಾಲಿಯಾಯಿತು. ಸೂರ್ಯನು ಎಂದು ಮುಳುಗನೆನ್ನುವಂತಹ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿತು. ದೇಶ – ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು. ಹಾಗೂ ಅರಳಿಸಿದರು, ಎಲ್ಲಕ್ಕೂ ಮಿಗಿಲಾಗಿ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, ವಿಚಾರ, ಮುಂತಾದವುಗಳನ್ನು ಆ ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಆ ಭಾಷೆ ಬೆಳೆದು ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆಲ್ಲ ಆಂಗ್ಲ ಜನರ ಸಂಕಲ್ಪ, ಕೃಷಿ ಕಾರಣ ವೆಂದು ಬೇರೆ ಹೇಳಬಹುದಾಗಿದೆ. ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು.
೨) ಕನ್ನಡಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ? ವಿವರಿಸಿ.
ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಳ್ಳ ಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕು. ಅನೇಕ ಕವಿಗಳು, ಸಾಹಿತಿಗಳ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ೧೨ನೇ ಶತಮಾನದಲ್ಲಿ ನಯಸೇನನು – ‘ನಮಗೆ ತುಪ್ಪವೂ ಬೇಕು, ಎಣ್ಣೆಯೂ ಬೇಕು’ ಸಂಸ್ಕೃತವೂ ಬೇಕು. ಕನ್ನಡವೂ ಬೇಕು. ಆದರೆ -ಎಣ್ಣೆ – ತುಪ್ಪದ ಮಿಶ್ರಣ ಆಗಬಾರದು ಎಂದು ಹೇಳಿದನು. ಮುಂದೆ ಬಸವೇಶ್ವರರು, ಅಲ್ಲಮ ಪ್ರಭುಗಳಂತಹ ಶರಣರು, ಪುರಂದರದಾಸರು, ಕನಕದಾಸರಂತಹ ದಾಸಶ್ರೇಷ್ಠರು, ಚಾಮರಸ, ಕುಮಾರ ವ್ಯಾಸನಂತರಹ ಕವಿಗಳು ತಮ್ಮ -ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು.
ಹೀಗೆ ಕನ್ನಡ ಭಾಷೆ ಹದಗೊಂಡುದ್ದರಿಂದ ಅದು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದು ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗ ರಂಗ ಹೇಳಿದನು. ಭಾಷೆಯು ಸಚಿವ ಭಷೆಯಾಗಿದ್ದು ನಿಂತ ನೀರಿನಂತಾಗದೆ, ಹರಿಯುವ ನದಿಯಾದಾಗಿ ಅದು ಸಮೃದ್ಧವಾಗಿ ಬೆಳೆಯಬಲ್ಲದು. ಇದಕ್ಕಾಗಿ ಸಂಸ್ಕೃತ ಭಾಷೆ, ಇಂಗ್ಲೀಷ್. ಪೋರ್ಚಗೀಸ್, ಹಿಂದಿ, ಪರ್ಷಿಯನ್ ನಂತಹ ಭಾಷಾ ಶಬ್ದಗಳು ಸೇರಿಕೊಂಡವು. ಇಷ್ಟು ಮಾತ್ರವಲ್ಲ ಅನ್ಯಭಾಷೆಗಳೊಂದಿಗೆ ಗಡಿ ಪ್ರದೇಶದ ಭಾಷೆಗಳಲ್ಲಿನ ಶಬ್ದಗಳನ್ನು ಬಳಸಿಕೊಳ್ಳುವುದರಿಂದ ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡಿದೆ.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧) “ಸಂಸ್ಕೃತಿಯ ಇತಿಹಾಸ ಉಳಿಯಿತು”
ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ಕಾವ್ಯವನ್ನು”ಎಂ. ಮರಿಯಪ್ಪ ಭಟ್ಟರು” ರಚಿಸಿರುವ “ನಮ್ಮ ಭಾಷೆ” ಎಂಬ ಪಠ್ಯದಿಂದ ಆರಿಸಲಾಗಿದೆ. ಪ್ರಸ್ತುತ ಈ ಗದ್ಯಭಾಗವನ್ನು ಎಂ. ಮರಿಯಪ್ಪಭಟ್ಟ ಅವರ “ಕನ್ನಡ ಸಂಸ್ಕೃತಿ” ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಮಾನವರು ತಮ್ಮ ಮೇಧಾಶಕ್ತಿಯಿಂದ ಜೀವ ಸೌಕರ್ಯಗಳನ್ನು ಹಾಗೂ ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲ – ಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರ ಕೃತಿಗಳನ್ನು ಬರೆದಿಡತೊಡಗಿದ್ದನು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮೇಲ್ಕಂಡ ವಾಕ್ಯವನ್ನು ತಿಳಿಸಿದ್ದಾರೆ.
ಸ್ವಾರಸ್ಯ: ‘ಸಂಸ್ಕೃತಿ’ ಎಂಬುದು ಗತಕಾಲದ ಹಿರಿಯರ ಜ್ಞಾನಾನುಭವಗಳ ಸಾರಸರ್ವವನ್ನು ಉಳಿಸಿಕೊಂಡ ಬೆಳೆಸಬಲ್ಲ ಮೂಲ, ಸಾಧನವೇ ಭಾಷೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಹಿತ್ಯ ಕೃತಿಗಳು ರಚಿತಗೊಂಡವು. ಹೀಗಾಗಿ ಹಿರಿಯರಿಂದ ಬಂದ ಸಂಸ್ಕೃತಿ ಇತಿಹಾಸ ಉಳಿಯಿತು.
ವಿಶೇಷತೆ : ಸಂಸ್ಕೃತಿ ಜ್ಞಾನ ಭಂಡಾರ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿದು ಭಾಷೆಯು ಪ್ರಗತಿ ಪಥ ಸುಗುಮವಾಯಿತು
೨) “ತಕ್ಕುದೆ ಬೆರಸ ಧೃತಮುಮಂ ತೈಲಮುಮಂ”
ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ಕಾವ್ಯವನ್ನು “ಎಂ. ಮರಿಯಪ್ಪ ಭಟ್ಟರು” ರಚಿಸಿರುವ “ನಮ್ಮ ಭಾಷೆ” ಎಂಬ ಪಠ್ಯದಿಂದ ಆರಿಸಲಾಗಿದೆ. ಪ್ರಸ್ತುತ ಈ ಗದ್ಯಭಾಗವನ್ನು ಎಂ. ಮರಿಯಪ್ಪಭಟ್ಟ ಅವರ “ಕನ್ನಡ ಸಂಸ್ಕೃತಿ” ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ. ಆದರೆ ಅವರಲ್ಲಿ ಅನೇಕರು ಕನ್ನಡವನ್ನು ಸಂಸ್ಕೃತಮಯವನ್ನಾಗಿ ಮಾಡಿ ಬಿಟ್ಟಿದ್ದರು. ಕನ್ನಡ ಮಾತ್ರ ಬಲ್ಲವರಿಗೆ ಇದು ಕಬ್ಬಿಣದ ಕಡಲೆಯಾಯಿತು. ಆ ಸಂದರ್ಭದಲ್ಲಿ ೧೩ನೇ ಶತಮಾನದ ನಯಸೇನ ಕವಿ ಈ ಮೆಲ್ಕಂಡ ವಾಕ್ಯವನ್ನು ಹೇಳಿದ್ದಾರೆ.
ಸ್ವಾರಸ್ಯ : ನಮಗೆ ತುಪ್ಪವೂ ಬೇಕು, ಎಣ್ಣೆಯೂ ಬೇಕು, ಅಂದರೆ ನಮಗೆ ಸಂಸ್ಕೃತವೂ ಬೇಕು, ಕನ್ನಡವೂ ಬೇಕು. ಆದರೆ “ಎಣ್ಣೆ – ತುಪ್ಪದ ಮಿಶ್ರಣ” ಬೇಡ ಎಂಬುದು ನಯಸೇನ ಕವಿಯ ಅಭಿಪ್ರಾಯ ಎಂಬುದನ್ನು ಕವಿ ಸ್ಪಷ್ಟ ಪಡಿಸಿದ್ದಾರೆ.
ವಿಶೇಷತೆ : ಪ್ರಸ್ತುತ ವಾಕ್ಯದಲ್ಲಿ ಸಂಸ್ಕೃತವನ್ನು ತುಪ್ಪಕ್ಕೂ, ಕನ್ನಡವನ್ನು ಎಣ್ಣೆಗೂ ಹೋಲಿಸಲಾಗಿದೆ. ವಾಕ್ಯಗಳಲ್ಲಿ ಸಂಸ್ಕೃತ ಶಬ್ದಗಳೇ ಇದ್ದು ಕ್ರಿಯಾಪದಗಳು ಮಾತ್ರ ಕನ್ನಡದಲ್ಲಿ ಇರುತ್ತಿದ್ದುದರಿಂದ ಸಂಸ್ಕೃತವು ಸಾಮಾನ್ಯ ಜನರಿಗೆ ಕಬ್ಬಿಣದ ಕಡಲೆಯಾಯಿತು. ಆದ್ದರಿಂದ ಸಂಸ್ಕೃತವು ಎಷ್ಟೇ ಕಷ್ಟವೆನಿಸಿದರೂ ನಮಗೆ ಎರಡೂ ಬೇಕು. ಆದೆ ತುಪ್ಪ -ಎಣ್ಣೆಯ ಮಿಶ್ರಣದಂತೆ ಸಂಸ್ಕೃತ – ಕನ್ನವೂ ಬೆರೆಯದಂತೆ ಸಾಹಿತ್ಯ ರಚನೆಯಾಗಬೇಕೆಂಬುದು ಕವಿ ಅಭಿಪ್ರಾಯ ಪಟ್ಟಿದ್ದಾನೆ.
೩) “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ”
ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ಕಾವ್ಯವನ್ನು “ಎಂ. ಮರಿಯಪ್ಪ ಭಟ್ಟರು” ರಚಿಸಿರುವ “ನಮ್ಮ ಭಾಷೆ” ಎಂಬ ಪಠ್ಯದಿಂದ ಆರಿಸಲಾಗಿದೆ. ಪ್ರಸ್ತುತ ಈ ಗದ್ಯಭಾಗವನ್ನು ಎಂ. ಮರಿಯಪ್ಪಭಟ್ಟ ಅವರ “ಕನ್ನಡ ಸಂಸ್ಕೃತಿ” ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡ ಅಭಿವೃದ್ಧಿ ಹೊಂದ ಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಅನೇಕ ಕವಿಗಳು ಸಾರಿದ್ದಾರೆ. ಹಲವಾರು ಕವಿಗಳು, ಶರಣರು, ದಾಸ ಶ್ರೇಷ್ಠರು ತಮ್ಮ ಅನುಭವ ಸಾರವನ್ನು, ಜನ ಸಾಮಾನ್ಯರ ಹೃದಯ ಮುಟ್ಟುವಂತೆ ಅಭಿವ್ಯಕ್ತ ಪಡಿಸಿದ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಕನ್ನಡ ಭಾಷೆಯು ಸುಂದರವಾದ ಸರಳವಾದ ಭಾಷೆಯಾಗಿದ್ದು ಹೇಳುಗರಿಗೆ ಮಾತ್ರವಲ್ಲ ಕೇಳುಗರಿಗೂ ಹಿತವನ್ನು ಉಂಟು ಮಾಡುವ ಸಂದರ್ಭದಲ್ಲಿ ಕನ್ನಡ ಭಾಷೆಯ ಗುಣ ವಿಶೇಷತೆಯನ್ನು ತಿಳಿಸಲಾಗಿದೆ. ಕನ್ನಡ ಭಾಷೆ, ಸ್ವಾತ ಭರಿತ ಸುಲಿದ ಬಾಳೆಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ ರಸಭರಿತವಾಗಿದ್ದು ಉಷ್ಣ ಅಳಿದ ಹಾಲಿನಂತೆ ಸವಿಯಾಗಿರುತ್ತದೆ. ಎಂಬುದಾಗಿ ಲೇಖಕರು ಮಹಲಿಂಗ ರಂಗನ ಮಾತುಗಳನ್ನು ಇಲ್ಲಿ ಉಲ್ಲೆಖಿಸಿದ್ದಾರೆ.
ವಿಶೇಷತೆ : ಪ್ರಸ್ತುತ ಸಾಲಿನಲ್ಲಿ ಕನ್ನಡ ಭಾಷೆಯನ್ನು ಸಿಪ್ಪೆ ಸುಲಿದು ಬಾಳೆಹಣ್ಣಿಗೂ, ಸಿಗುರು ತೆಗೆದು ಕಬ್ಬಿನಂತೆ ಹಾಗೂ ಉಷ್ಣ ಅಳಿದ ಹಾಲಿನಂತೆ ಮನಕ್ಕೆ ದೇಹಕ್ಕೆ ತಂಪಾಗಿರುತ್ತದೆ.
೪) “ಒಬ್ಬ ತಾಯಿಯ ಗಾನದ ಶ್ರುತಿಯಂತೆ”
ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ಕಾವ್ಯವನ್ನು “ಎಂ. ಮರಿಯಪ್ಪ ಭಟ್ಟರು” ರಚಿಸಿರುವ “ನಮ್ಮ ಭಾಷೆ” ಎಂಬ ಪಠ್ಯದಿಂದ ಆರಿಸಲಾಗಿದೆ. ಪ್ರಸ್ತುತ ಈ ಗದ್ಯಭಾಗವನ್ನು ಎಂ. ಮರಿಯಪ್ಪಭಟ್ಟ ಅವರ “ಕನ್ನಡ ಸಂಸ್ಕೃತಿ” ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಭಾಷೆಗಳಲ್ಲಿ ಮೇಲು – ಕೀಳೆಂಬುದಿಲ್ಲ, ನಾಲ್ಕು ಜನ ಮಾತನಾಡುತ್ತಿದ್ದ ಭಾಷೆಗೂ ನಲವತ್ತು ಲಕ್ಷ ಜನ ಮಾತನಾಡುತ್ತಿದ್ದ ಭಾಷೆಗೂ ಸತ್ಯ ಹಾಗೂ ಸತ್ಯ ದೃಷ್ಟಿಯಿಂದ ಎಲ್ಲಾ ಭಾಷೆಗಳೂ ಅಷ್ಟೇ ಎಂದು ಭಾಷೆಯ ಬಗ್ಗೆ ವಿವರಿಸುತ್ತಾ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಎಲ್ಲಾ ಮಕ್ಕಳಿಗೂ ತಾಯಿಯೇ ಪ್ರೇರಣೆ, ತಾಯಿಯ ಆರೈಕೆಯಲ್ಲಿ ಎಲ್ಲಾ ಮಕ್ಕಳಿಗೂ ಸ್ಪೂರ್ತಿಯು ಹೌದು. ಒಬ್ಬ ತಾಯಿಯ ಗಾನದ ಶ್ರುತಿಯಂತೆ ಎಲ್ಲಕ್ಕೂ ಅಷ್ಟೇ ಸ್ಥಾನವಿದೆ. ಆದ್ದರಿಂದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ ಪ್ರೀತಿಯಿಂದ ಆಹ್ವಾನಿಸಬೇಕು, ಎಂಬ ಕಿವಿ ಮಾತನ್ನು ಲೇಖಕರು ಭಾಷೆಯ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.
ವಿಶೇಷತೆ : ‘ತಾಯಿಯ ಮಧುರ ಹಾಡಿನಂತೆ’ ಎಂದು ಹೇಳುವಾಗ ಪ್ರತಿಯೊಬ್ಬರಿಗೂ ನಮ್ಮ ಭಾಷೆಯ ಮೇಲೆ ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳ ಬೇಕೆಂಬ ಕಿವಿಮಾತನ್ನು ಲೇಖಕರು ಹೇಳಿದ್ದಾರೆ.
ಉ. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
೧) ಭಾಷೆ ಇದ್ದೂ ಅದರ ಪಿಯೂಷವನ್ನು ಕುಡಿದು ಅರಗಿಸಿಕೊಳ್ಳದ, ವ್ಯಕ್ತಿ ಜಂತುವೇ ಸರಿ.
೨) ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
೩) ಕನ್ನಡ ಗ್ರಾಂಥಿಕ ಭಾಷಾ ವರ್ಗಕ್ಕೆ ಸೇರಿದೆ.
೪) ಇಂಗ್ಲೀಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ.
೫) ‘ನಮ್ಮ ಭಾಷೆ’ ಗದ್ಯ ಭಾಗದ ಆಕರ ಗ್ರಂಥ ಕನ್ನಡ ಸಂಸ್ಕೃತಿ.
ಊ. ಹೊಂದಿಸಿ ಬರೆಯಿರಿ.
ಅ | ಆ |
೧. ವ್ಯಾವಹಾರಿಕ | ಅ. ಅನ್ಯದೇಶ್ಯ |
೨. ದಾಸರು | ಆ. ಚಾಕ್ಷುಷ |
೩. ದಿವಾನ | ಇ. ಕೀರ್ತನೆಗಳು |
೪. ಗ್ರಾಂಥಿಕ | ಈ. ತದ್ಭವರೂಪ |
೫. ಶಿವಶರಣರು | ಉ. ವಚನಗಳು |
ಊ. ಶ್ರವಣ |
ಉತ್ತರಗಳು: ೧-ಆ, ೨-ಇ, ೩-ಅ, ೪-ಈ, ೫-ಉ
ಪ್ರಾಯೋಗಿಕ ಅಭ್ಯಾಸ
ಅ. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
೧. ವಿಚಾರವಿನಿಮಯ
ಹಂಪಿಯಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಬಹಳಷ್ಟು ಕವಿಗಳು – ಸಾಹಿತಿಗಳು ಒಟ್ಟಾಗಿ ಸೇರಿ ಶಿಕ್ಷಣ ಕ್ರಮ ಪಠ್ಯ ವಿಷಯಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿ ಕೊಂಡರು.
೨. ಸಂಶೋಧಕ
ನಿರ್ದಿಷ್ಟವಾದ, ಕರಾರುವಕ್ಕಾದ ಅಂಕಿ ಅಂಶಗಳನ್ನು ನೀಡುವುದು ಸಂಶೋಧಕರ ಆದ್ಯ ಕರ್ತವ್ಯವಾಗಿದೆ.
೩. ಪರಿಷ್ಕರಿಸು
ಕರ್ನಾಟಕ ಸರ್ಕಾರವು ಹತ್ತನೆ ತರಗತಿ ಪ್ರಥಮ ಭಾಷೆ ಪಠ್ಯವನ್ನು ಪರಿಷ್ಕರಿಸಿ ಬಿಡುಗಡೆ ಮಾಡಿದ್ದಾರೆ.
೪. ಪ್ರಗತಿಪಥ
ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ದೇಶವು ಪ್ರಗತಿ ಪಥದತ್ತ ಸಾಗುತ್ತಿದೆ.
ಆ. ಕೊಟ್ಟಿರುವ ಕನ್ನಡರೂಪಗಳ ಮೂಲರೂಪ ಬರೆಯಿರಿ.
೧. ಹೋಟ್ಲು | ಹೋಟಲ್ |
೨. ಇಸ್ಕೂಲು | ಸ್ಕೂಲ್ |
೩. ಆಫೀಸು | ಆಫೀಸ್ |
೪. ಲೈಟು | ಲೈಟ್ |
೫. ಹಾಸ್ಪಿಟಲು | ಹಾಸ್ಪಿಟಲ್ |
ಸೈದ್ದಾಂತಿಕ ಭಾಷಾಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ :-
೧) ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.
೨) ಕನ್ನಡದಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.
ಕನ್ನಡದಲ್ಲಿರುವ ಹ್ರಸ್ವ ಸ್ವರಗಳು-
ಅ, ಇ, ಉ, ಋ, ಎ, ಒ
ಕನ್ನಡದಲ್ಲಿರುವ ದೀರ್ಘ ಸ್ವರಗಳು –
ಆ, ಈ, ಊ, ಏ, ಐ, ಓ, ಔ
೩) ಕನ್ನಡದಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.
ಕನ್ನಡದಲ್ಲಿರುವ ಮಹಾಪ್ರಾಣ – ಅಕ್ಷರಗಳೆಂದರೆ
ಖ, ಘ, ಛ, ಝ, ಠ, ಢ, ಥ, ಧ, ಫ, ಭ
೪) ಕನ್ನಡದಲ್ಲಿ ವರ್ಗೀಯ ಅಕ್ಷರಗಳನ್ನು ಬರೆಯಿರಿ.
ಕನ್ನಡದಲ್ಲಿರುವ ವರ್ಗೀಯ ಅಕ್ಷರಗಳೆಂದರೆ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
೫) ಕನ್ನಡದಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ
ಙ, ಞ, ಣ್, ನ್, ಮ್
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಗಳನ್ನು ಆರಿಸಿ ಬರೆಯಿರಿ.
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಎಚ್ಚರ, ಕಣ್ಣಿಗೆ, ಅದ್ಭುತ, ಬಟ್ಟೆ
ವಿಜಾತೀಯ ಸಂಯುಕ್ತಾಕ್ಷರಗಳು
ಕಾರ್ಯ, ಶಸ್ತ್ರ, ಅದ್ಭುತ
ಆ. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರ ಗಳನ್ನು ಆರಿಸಿ ಬರೆಯಿರಿ.
- ಸಮನಾಗಿ – ಸ
- ಮದುವೆ – ವೆ
- ದೇಶ – ಶ
- ಮಾನುಷ – ಷ
- ಮನೆಯ – ಯ
- ಹೊತ್ತು – ಹೊ
- ಬಳಿಕ – ಳಿ
- ಒಳಗೆ – ಳ
- ನೆಲ – ಲ
ಇ. ಕೊಟ್ಟಿರುವ ಪದಗಳಲ್ಲಿನ ಧ್ವನಿ ವ್ಯತ್ಯಾಸದೊಂದಿಗೆ ಆಗುವ ಅರ್ಥ ವ್ಯತ್ಯಾಸ ಅರಿಯಿರಿ.
೧) ಪ್ರದಾನ > ಪ್ರಧಾನ
ಪ್ರದಾನ – ದಾನ ಕೊಡುವುದು, ಸಂಭಾವನೆ, ಮೆಚ್ಚುಗೆ
ಪ್ರಧಾನ – ಮುಖ್ಯ, ಶ್ರೇಷ್ಠ, ಮಂತ್ರಿ
೨) ಮದ್ಯ > ಮಧ್ಯ
ಮದ್ಯ – ಮದಿರಾ, ಸರಾಯಿ, ಹೆಂಡ
ಮಧ್ಯ – ಕೇಂದ್ರ, ನಡುವಿನ ಸ್ಥಳ
೩) ಹುಣ್ಣು > ಉಣ್ಣು
ಹುಣ್ಣು – ಗಾಯ
ಉಣ್ಣು – ತಿನ್ನು, ಊಟ ಮಾಡು
೪) ಸುಳಿ > ಸುಲಿ
ಸುಳಿ – ನೀರಿನಲ್ಲಿ ಚಕ್ರಾಕಾರವಾಗಿ ಸುತ್ತು
ಸುಲಿ – ಸಿಪ್ಪೆಯನ್ನು ತೆಗೆಯುವುದು, ಸ್ವಚ್ಛಮಾಡು, ತೊಳೆ
೪. ಮೊದಲೆರಡು ಪದಗಳಿಗಿರುವ ಸಂಬಂಧವಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು = ಛ್, ಝ್ : ಮಹಾಪ್ರಾಣ
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : ಅವರ್ಗೀಯ ವ್ಯಂಜನಾಕ್ಷರಗಳು: ೯
ಇ) ಆ, ಈ, ಊ : ದೀರ್ಘ ಸ್ವರಗಳು :: ಅ, ಇ, ಉ, ಋ : ಹೃಸ್ವ ಸ್ವರಗಳು
ಈ) ಸ್ವರಗಳು : ೧೩ : ಯೋಗವಾಹಗಳು : ೨
೫. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.
ಅ) ರಾಷ್ಟ್ರೀಯ ಹಬ್ಬಗಳ ಮಹತ್ವ
ಪ್ರಸ್ತಾವನೆ : ‘ಹಬ್ಬಗಳು’ ನಮ್ಮ ದೇಶದ ಸಾಂಸ್ಕೃತಿಕ ಸಂಕೇತಗಳಾಗಿವೆ. ಅಂತೆಯೇ ಭಾರತ ದೇಶ, ಹಬ್ಬಗಳ ದೇಶ. ಸಾಂಸ್ಕೃತಿಕ ದೇಶ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಹಬ್ಬಗಳನ್ನು ಎರಡು ರೀತಿಯಲ್ಲಿ ವಿಭಜಿಸಬಹುದು. ಅವುಗಳೆಂದರೆ –
1) ರಾಷ್ಟ್ರೀಯ ಹಬ್ಬಗಳು
2) ಧಾರ್ಮಿಕ ಆಧಾರ ಒಲಗೊಂಡ ಹಬ್ಬಗಳು
ಈ ಹಬ್ಬಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ.
ವಿವರಣೆ : ರಾಷ್ಟ್ರೀಯ ಹಬ್ಬಗಳ ಮಹತ್ವ ಬಹು ಹೆಚ್ಚಿನದಾಗಿದೆ.
ಏಕೆಂದರೆ ಹಬ್ಬಗಳು ತನ್ನದೇ ಆದ ಕೆಲವು ಗುಣಲಕ್ಷಣಗಳನ್ನು ಹೊಂದಿವೆ. ಅವುಗಳಲ್ಲಿ ಪ್ರಮುಖವಾದ ಅಂಶಗಳೆಂದರೆ
ರಾಷ್ಟ್ರೀಯ ಹಬ್ಬಗಳನ್ನು ಸಂಪೂರ್ಣ ರಾಷ್ಟ್ರಾದ್ಯಂತ ಆಚರಿಸಲಾಗುವುದು. ಚಿಕ್ಕ-ಚಿಕ್ಕ ಹಳ್ಳಿಯಿಂದ ದೊಡ್ಡ-ದೊಡ್ಡ ನಗರ ಪ್ರದೇಶಗಳಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುವರು.
ರಾಷ್ಟ್ರೀಯ ಹಬ್ಬಗಳನ್ನು ಎಲ್ಲಾ ಜಾತಿ-ಧರ್ಮದವರು ಎಲ್ಲಾ ರೀತಿಯ ಭಾಷೆಯನ್ನಾಡುವವರು ಇದನ್ನು ಬಹಳ ಭಕ್ತಿ, ಶ್ರದ್ಧೆ ಮನೋಭಾವದಿಂದ ಆಚರಿಸುವರು.
ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಗೀತೆ, ರಾಷ್ಟ್ರಧ್ವಜ
ರಾಷ್ಟ್ರಲಾಂಛನಗಳ ಬಗ್ಗೆ ತಿಳಿದಿದ್ದು ಸ್ವಯಂ ಪ್ರೇರಿತ ಗೌರವವನ್ನು ಸಲ್ಲಿಸುವರು.
ರಾಷ್ಟ್ರೀಯ ಹಬ್ಬಗಳು ರಾಷ್ಟ್ರದೆಲ್ಲೆಡೆ ಏಕಕಾಲದಲ್ಲಿ ತಮ್ಮದೆ ಆದ ಸಾಂಸ್ಕೃತಿಕ ವೈಭವಗಳೊಂದಿಗೆ ಆಚರಿಸುವರು.
ಪ್ರತಿಯೊಬ್ಬ ಪ್ರಜೆಯು ರಾಷ್ಟ್ರಧ್ವಜಕ್ಕೆ ವಂದಿಸಿ, ರಾಷ್ಟ್ರಗೀತೆಯನ್ನು ಹಾಡುವ ಪರಂಪರೆ ಅಂದಿನಿಂದ ಇಂದಿನವರೆಗೆ ಮುಂದೆಯೂ ಸಾಗುವುದರಲ್ಲಿ ಸಂದೇಹವಿಲ್ಲ.
ರಾಷ್ಟ್ರೀಯ ಹಬ್ಬಗಳು ವೈಯಕ್ತಿಕ ವೈಮನಸ್ಸಿನ ಭಾವನೆಗಳನ್ನು ತೊರೆದು ಏಕತೆಯನ್ನು ಸಾಧಿಸುವ ಸಂಕೇತಗಳಾಗಿವೆ.
ಇಷ್ಟೊಂದು ಮಹತ್ವಪೂರ್ಣ ಹೊಂದಿರುವ ರಾಷ್ಟ್ರೀಯ ಹಬ್ಬಗಳೆಂದರೆ
೧) ಸ್ವಾತಂತ್ರೋತ್ಸವ
೨) ಗಣರಾಜ್ಯೋತ್ಸವ
೩) ಗಾಂಧೀ ಜಯಂತಿ
೪) ಶಿಕ್ಷಕರ ದಿನಾಚರಣೆ
೫) ಮಕ್ಕಳ ದಿನಾಚರಣೆ
ಈ ಮೇಲ್ಕಂಡ ರಾಷ್ಟ್ರೀಯ ಹಬ್ಬಗಳನ್ನು ಪ್ರತಿಯೊಬ್ಬರು ಬಹಳ ವೈಭವಪೂರ್ಣವಾಗಿ, ಅರ್ಥಗರ್ಭೀತವಾಗಿ ಆಚರಿಸುತ್ತ ಬಂದಿದ್ದಾರೆ.
ನಿಷ್ಕರ್ಷೆ / ಉಪಸಂಹಾರ
- “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ರಾಷ್ಟ್ರೀಯ ಹಬ್ಬಗಳನ್ನು ಶಾಲಾ-ಕಾಲೇಜು ಮಟ್ಟಗಳಲ್ಲಿ ಕಡ್ಡಾಯವಾಗಿ ಆಚರಿಸಲಾಗುತ್ತಿದೆ. ಇದನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಗುರು-ಹಿರಿಯರು ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆ ಮಾರ್ಗ ದರ್ಶನಗಳನ್ನು ನೀಡಬೇಕು.
- ದೇಶದ ನಾಯಕರಿಗೆ ಕೃತಜ್ಞತೆಯನ್ನು ಸಲ್ಲಿಸುವ ಪರಂಪರೆಯನ್ನು ರೂಢಿಸಿಕೊಳ್ಳಬೇಕು.
- ದೇಶಭಕ್ತಿ ಗೀತೆ, ನೃತ್ಯ, ನಾಟಕಗಳಿಂದ ಎಲ್ಲರನ್ನು ರಂಜಿಸುವುದು ಮಾತ್ರವಲ್ಲದೆ ದೇಶ ಸೇವೆಗೈದ ಮಹನೀಯರಿಗೆ ಕೃತಜ್ಞತೆಯನ್ನು ಸಲ್ಲಿಸಿದಂತಾಗುತ್ತದೆ.
- ಪ್ರತಿಯೊಬ್ಬರೂ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಅರಿತು ಇದನ್ನು ಆಚರಿಸುವ ಪರಿಪಾಠ ಮುಂದುವರೆಯ ಬೇಕು.
ಆ) ಗ್ರಂಥಾಲಯಗಳ ಮಹತ್ವ
ಪ್ರಸ್ತಾವನೆ : ಗ್ರಂಥಗಳ ಅಂದರೆ ಪುಸ್ತಕಗಳನ್ನು
ಹೊಂದಿರುವ ಆಲಯವೇ ಗ್ರಂಥಾಲಯವಾಗಿದೆ. ಗ್ರಂಥಗಳು (ಪುಸ್ತಕಗಳು) ಮನುಷ್ಯನ ಜ್ಞಾನವನ್ನು ಹೆಚ್ಚಿಸುವ ಹಾಗೂ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಸಾಧನಗಳಾಗಿವೆ. ಗ್ರಂಥಾಲಯ ಎಂಬುದೊಂದು ಮಾನವನ ಸಾಮಾಜಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ.
ವಿವರಣೆ : ಗ್ರಂಥಾಲಯಗಳು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅತ್ಯಾವಶ್ಯಕವಾಗಿ ಅಗತ್ಯವೆನಿಸಿಬಿಟ್ಟಿದೆ. ಚಿಕ್ಕ ಮಕ್ಕಳಿಗೆ ಬೇಕಾದ ಪುಟ್ಟ – ಪುಟ್ಟ ವಿವಿಧ ಪ್ರಕಾರ ಪುಸ್ತಕಗಳು ಆಕರ್ಷಣೀಯವಾಗಿದೆ.
ವಿದ್ಯಾರ್ಥಿಗಳಿಗಂತೂ ಗ್ರಂಥಾಲಯದ ಅವಶ್ಯಕತೆ ಅತಿ ಹೆಚ್ಚು. ತಮ್ಮ ವಿದ್ಯಾರ್ಥಿ ಜೀವನಕ್ಕೆ ಇದೊಂದು ಪೂರಕ ಸಾಧನ. ಗ್ರಂಥಾಲಯಗಳಿಲ್ಲದ ಶಾಲೆಯೇ ಇಲ್ಲ. ಕಾಲೇಜ್ ಅಂತೂ ಇಲ್ಲವೇ ಇಲ್ಲ. ಪಠ್ಯ ಪುಸ್ತಕ, ಪಠ್ಯಕ್ಕೆ ಪೂರಕವಾಗಿರುವ ರೆಫೆರೆನ್ಸ್ ಪುಸ್ತಕಗಳು ನಮಗೆ ಗ್ರಂಥಾಲಯದಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. ಆದ್ದರಿಂದ ಶಾಲಾ – ಕಾಲೇಜ್ಗಳಲ್ಲಿ ಗ್ರಂಥಾಲಯಗಳು ಅನಿವಾರ್ಯ ಹಾಗೂ ಅವಿಭಾಜ್ಯ ಅಂಗವಾಗಿದೆ. ಗ್ರಂಥಾಲಯದ ಮಹತ್ವವನ್ನು ಅರಿತು ಇತ್ತೀಚೆಗೆ “ಸಾರ್ವಜನಿಕ ಗ್ರಂಥಾಲಯಗಳು” ಸ್ಥಾಪಿತವಾಗಿವೆ. ಇವು ವಯೋವೃದ್ಧರಿಗೆ ಸಮಯದ ಸದುಪಯೋಗವಾಗಿದೆ. ವಿದ್ಯಾರ್ಥಿಗಳಿಗೆ, ಪ್ರೌಢರಿಗೆ ಜ್ಞಾನವನ್ನು ನೀಡುವ ರಸಾತ್ಮಕವಾಗಿದೆ. ಗ್ರಂಥಾಲಯಗಳಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಮುಂತಾದ ಎಲ್ಲಾ ಭಾಷೆಗಳಲ್ಲಿ ವಿಜ್ಞಾನ, ಇತಿಹಾಸ, ಭೂಗೋಳ, ಸಾಹಿತ್ಯ, ವ್ಯಕ್ತಿ ಚಿತ್ರಣ, ಆತ್ಮ ಕಥನಗಳು, ಪ್ರವಾಸ ತಾಣಗಳು ಹೀಗೆ ಅತ್ಯಂತ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು ಗ್ರಂಥಾಲಯದಲ್ಲಿ ಇದ್ದು ಜ್ಞಾನಕೇಂದ್ರಗಳಂತೆ ಕೆಲಸಮಾಡುತ್ತಿವೆ. ಇಷ್ಟೆ ಅಲ್ಲದೆ ಎಲ್ಲಾ ಭಾಷೆಯ ವೃತ್ತ ಪತ್ರಿಕೆಗಳು ಕೂಡ ನಮಗೆ ಗ್ರಂಥಾಲಯದಲ್ಲಿ ಸಿಗುತ್ತದೆ.
ಉಪಸಂಹಾರ / ನಿರ್ಷ್ಕಷೆ್ರ
ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳು ವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಗ್ರಂಥಾಲಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿ ಕೊಳ್ಳಬೇಕಾದುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಗ್ರಂಥಾ ಲಯ ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯವೂ ಹೌದು. ಪುಸ್ತಕಗಳ ಉಪಯೋಗ ಪಡೆಯುವಾಗ, ಪಡೆದ ಮೇಲೂ
ಹೊಂದಿರುವ ಆಲಯವೇ ಗ್ರಂಥಾಲಯವಾಗಿದೆ. ಗ್ರಂಥಗಳು (ಪುಸ್ತಕಗಳು) ಮನುಷ್ಯನ ಜ್ಞಾನವನ್ನು ಹೆಚ್ಚಿಸುವ ಹಾಗೂ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಸಾಧನಗಳಾಗಿವೆ. ಗ್ರಂಥಾಲಯ ಎಂಬುದೊಂದು ಮಾನವನ ಸಾಮಾಜಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ.
ವಿವರಣೆ : ಗ್ರಂಥಾಲಯಗಳು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅತ್ಯಾವಶ್ಯಕವಾಗಿ ಅಗತ್ಯವೆನಿಸಿಬಿಟ್ಟಿದೆ. ಚಿಕ್ಕ ಮಕ್ಕಳಿಗೆ ಬೇಕಾದ ಪುಟ್ಟ – ಪುಟ್ಟ ವಿವಿಧ ಪ್ರಕಾರ ಪುಸ್ತಕಗಳು ಆಕರ್ಷಣೀಯವಾಗಿದೆ.
ವಿದ್ಯಾರ್ಥಿಗಳಿಗಂತೂ ಗ್ರಂಥಾಲಯದ ಅವಶ್ಯಕತೆ ಅತಿ ಹೆಚ್ಚು. ತಮ್ಮ ವಿದ್ಯಾರ್ಥಿ ಜೀವನಕ್ಕೆ ಇದೊಂದು ಪೂರಕ ಸಾಧನ. ಗ್ರಂಥಾಲಯಗಳಿಲ್ಲದ ಶಾಲೆಯೇ ಇಲ್ಲ. ಕಾಲೇಜ್ ಅಂತೂ ಇಲ್ಲವೇ ಇಲ್ಲ. ಪಠ್ಯ ಪುಸ್ತಕ, ಪಠ್ಯಕ್ಕೆ ಪೂರಕವಾಗಿರುವ ರೆಫೆರೆನ್ಸ್ ಪುಸ್ತಕಗಳು ನಮಗೆ ಗ್ರಂಥಾಲಯದಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. ಆದ್ದರಿಂದ ಶಾಲಾ – ಕಾಲೇಜ್ಗಳಲ್ಲಿ ಗ್ರಂಥಾಲಯಗಳು ಅನಿವಾರ್ಯ ಹಾಗೂ ಅವಿಭಾಜ್ಯ ಅಂಗವಾಗಿದೆ. ಗ್ರಂಥಾಲಯದ ಮಹತ್ವವನ್ನು ಅರಿತು ಇತ್ತೀಚೆಗೆ “ಸಾರ್ವಜನಿಕ ಗ್ರಂಥಾಲಯಗಳು” ಸ್ಥಾಪಿತವಾಗಿವೆ. ಇವು ವಯೋವೃದ್ಧರಿಗೆ ಸಮಯದ ಸದುಪಯೋಗವಾಗಿದೆ.
ವಿದ್ಯಾರ್ಥಿಗಳಿಗೆ, ಪ್ರೌಢರಿಗೆ ಜ್ಞಾನವನ್ನು ನೀಡುವ ರಸಾತ್ಮಕವಾಗಿದೆ. ಗ್ರಂಥಾಲಯಗಳಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಮುಂತಾದ ಎಲ್ಲಾ ಭಾಷೆಗಳಲ್ಲಿ ವಿಜ್ಞಾನ, ಇತಿಹಾಸ, ಭೂಗೋಳ, ಸಾಹಿತ್ಯ, ವ್ಯಕ್ತಿ ಚಿತ್ರಣ, ಆತ್ಮ ಕಥನಗಳು, ಪ್ರವಾಸ ತಾಣಗಳು ಹೀಗೆ ಅತ್ಯಂತ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು ಗ್ರಂಥಾಲಯದಲ್ಲಿ ಇದ್ದು ಜ್ಞಾನಕೇಂದ್ರಗಳಂತೆ ಕೆಲಸಮಾಡುತ್ತಿವೆ. ಇಷ್ಟೆ ಅಲ್ಲದೆ ಎಲ್ಲಾ ಭಾಷೆಯ ವೃತ್ತ ಪತ್ರಿಕೆಗಳು ಕೂಡ ನಮಗೆ ಗ್ರಂಥಾಲಯದಲ್ಲಿ ಸಿಗುತ್ತದೆ.
ಉಪಸಂಹಾರ / ನಿರ್ಷ್ಕಷೆ್ರ
ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳು ವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಗ್ರಂಥಾಲಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿ ಕೊಳ್ಳಬೇಕಾದುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಗ್ರಂಥಾ ಲಯ ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯವೂ ಹೌದು. ಪುಸ್ತಕಗಳ ಉಪಯೋಗ ಪಡೆಯುವಾಗ, ಪಡೆದ ಮೇಲೂ ಅವು ಹಾಳಾಗದಂತೆ ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯ.
ಗ್ರಂಥಾಲಯದ ಮಹತ್ವವನ್ನು ಅರಿತೇ ಇಂದು ಸಂಚಾರಿ ಗ್ರಂಥಾಲಯಗಳು ಕೂಡ ಜಾರಿಗೆ ಬಂದಿರುವುದು ಸಂತಸದ ವಿಷಯವಾಗಿದೆ.
ಬನ್ನಿ, ನಾವೆಲ್ಲ ಗ್ರಂಥಾಲಯದ ಸದ್ಬಳಕೆ ಮಾಡಿ ಕೊಳ್ಳೋಣ.
ಇ) ಸಾಮಾಜಿಕ ಪಿಡುಗುಗಳು
ಸಮಾಜಕ್ಕೆ ಸಮಸ್ಯೆಯನ್ನು ಅಥವಾ ಕೆಡಕನ್ನುಂಟು ಮಾಡುವಂತಹ ಅನಿಷ್ಟಗಳೇ ಸಾಮಾಜಿಕ ಪಿಡುಗುಗಳು. ಅವುಗಳೆಂದರೆ ಅನಕ್ಷರತೆ, ಜಾತೀಯತೆ, ಅಸ್ಪೃಶ್ಯತೆ, ಭಿಕ್ಷಾಟನೆ, ಮಾದಕ ವಸ್ತುಗಳ ಸೇವನೆ ಮುಂತಾದವು. ಈ ಸಾಮಾಜಿಕ ಪಿಡುಗುಗಳು ದೇಶ ಎದುರಿಸಬೇಕಾಗಿರುವ ಸವಾಲುಗಳಾಗಿ ಪರಿಣಮಿಸಿದೆ. ಸಮಾಜ ಕಲುಷಿತವಾಗಲು ದಾರಿ ಮಾಡಿಕೊಡುವ ಇವುಗಳಿಂದ ಸಾಮಾಜಿಕ ಕ್ಷೋಭೆ , ಪರಿಸರ ಹಾನಿಯೂ ಉಂಟಾಗುತ್ತಿದೆ.
ಅನಕ್ಷರತೆ:
ಇದು ಅನೇಕ ಮೂಢ ನಂಬಿಕೆಗಳಿಗೆ ಎಡೆ ಮಾಡಿ ಕೊಡುತ್ತದೆ. ನಿರುದ್ಯೋಗ, ಬಡತನ, ಅಜ್ಞಾನ, ಜನಸಂಖ್ಯೆಯ ಹೆಚ್ಚಳ ಇವುಗಳಿಗೆಲ್ಲ ಅನಕ್ಷರತೆಯೇ ಮುಖ್ಯ ಕಾರಣ. ಪ್ರಜಾಪ್ರಭುತ್ವದ ಯಶಸ್ಸಿಗೂ ಇದು ಅಡ್ಡಿಯಾಗಿದೆ. ಇದನ್ನು ಮನಗಂಡ ಸರ್ಕಾರ ಅಕ್ಷರ ದಾಸೋಹ, ಅನೌಪಚಾರಿಕ ಶಿಕ್ಷಣ, ರಾಷ್ಟ್ರೀಯ ವಯಸ್ಕರ ಶಿಕ್ಷಣ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ವರ್ಗ, ಪಂಗಡ ಮತ್ತು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.
ಭಿಕ್ಷಾಟನೆ:
ಮನುಷ್ಯ ದುಡಿದು ತಿನ್ನಬೇಕು ಎಂಬ ತತ್ವಕ್ಕೆ ವಿರುದ್ಧವಾಗಿ ಸೋಮಾರಿಗಳು ಭಿಕ್ಷಾಟನೆಯೆಂಬ ಸುಲಭಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇದು ದೇಶದ ಘನತೆಗೆ ಕುಂದು ತರುವ ವಿಷಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದ್ದರೂ ಭಿಕ್ಷಾಟನೆ ನಡೆಯುತ್ತಲೇ ಇದೆ.
ಮಾದಕ ವಸ್ತುಗಳ ಸೇವನೆ:
ಅಫೀಮು, ಗಾಂಜಾ, ಕೊಕೇನ್, ಹೆರಾಯಿನ್, ಬ್ರೌನ್ ಷುಗರ್ ಮುಂತಾದ ಮಾದಕ ವಸ್ತುಗಳ ಸೇವನೆಗೆ ತೊಡಗುವವರು ಹೆಚ್ಚಾಗಿ ಯುವಕ ಯುವತಿಯರು, ಇದೊಂದು ದುಶ್ಚಟವಾಗಿ ಸಾಮಾಜಿಕ ಶಾಂತಿಗೆ ಭಂಗ ತರುವುದಲ್ಲದೆ ಕಳ್ಳ ಸಾಗಾಣಿಕೆಗೂ ದಾರಿ ಮಾಡಿಕೊಡುತ್ತದೆ ಮತ್ತು ತರಿಸುವ ಮಾದಕ ವಸ್ತುಗಳ ಸೇವನೆಯಿಂದಾಗಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದಲ್ಲದೆ ಮಾನಸಿಕ ತುಮುಲಕ್ಕೂ ಒಳಗಾಗುತ್ತಾರೆ. ಸಮಾಜದಲ್ಲಿ ಅಗೌರವಕ್ಕೆ ಪಾತ್ರರಾಗುತ್ತಾರೆ. ಅಪಘಾತಗಳಿಗೆ ಕಾರಣರಾಗುತ್ತಾರೆ. ಆ ಮೂಲಕ ಸಾಮಾಜಿಕ ಸಮಸ್ಯೆಗಳಿಗೂ ಕಾರಣರಾಗುತ್ತಾರೆ. ಮಾದಕ ವಸ್ತುಗಳ ಸೇವನೆ ಯುವಜನತೆಯನ್ನು ದಿಕ್ಕುಗೆಡಿಸುವುದಲ್ಲದೆ ಅವರ ಏಳಿಗೆಗೂ ಮಾರಕವಾಗಿದೆ.
ಜಾತೀಯತೆ :
ಸರ್ವ ಧರ್ಮ ಸಮನ್ವಯದ ಬೀಡಾದ ಭಾರತ ದೇಶದಲ್ಲಿ ಜಾತೀಯತೆ ಒಂದು ದೊಡ್ಡ ಪಿಡುಗಾಗಿದೆ. ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ನಿರ್ಮೂಲನವಾಗದಿದ್ದಲ್ಲಿ ರಾಷ್ಟ್ರದ ಪ್ರಗತಿ ಅಸಾಧ್ಯ. ವ್ಯಕ್ತಿಯ ವಿಕಾಸಕ್ಕೆ ಅಡ್ಡಿಯನ್ನುಂಟು ಮಾಡುವ ಜಾತೀಯತೆ ಪ್ರಾಂತೀಯತೆಗೂ ಕಾರಣವಾಗುತ್ತದೆ. ದೇಶದ ಹಿತದೃಷ್ಟಿಯಿಂದ, ಸಮಾಜದ ಹಿತದೃಷ್ಟಿಯಿಂದ ಜಾತೀಯತೆಯ ಮನೋಭಾವ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ.
ಹೀಗೆ ಸಾಮಾಜಿಕ ಪಿಡುಗುಗಳು ಅನೇಕ ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಇವುಗಳನ್ನು ಹೋಗಲಾಡಿಸಲು ಸರ್ಕಾರದೊಂದಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಆಗ ಮಾತ್ರ ಇವುಗಳನ್ನು ನಿವಾರಿಸಲು ಸಾಧ್ಯವಾದೀತು.
ಹೆಚ್ಚಿನ ಅಭ್ಯಾಸಕ್ಕಾಗಿ
ಆ. ಕೆಳಗಿನ ಪ್ರಶ್ನೆಗಳಿಗೆ ಸರಿಯಾದುದನ್ನು ಆರಿಸಿ ಬರೆಯಿರಿ.
೧. ‘ನಮ್ಮ ಭಾಷೆ’ ಈ ಗದ್ಯ ಭಾಗವನ್ನು________ ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.
ಅ) ನಮ್ಮ ಸಂಸ್ಕೃತಿ
ಆ) ಕನ್ನಡ ಸಂಸ್ಕೃತಿ
ಇ) ನಮ್ಮ ಕನ್ನಡನಾಡಿನ ಸಂಸ್ಕೃತಿ
ಈ) ನಮ್ಮ ದೇಶದ ಸಂಸ್ಕೃತಿ
ಉತ್ತರ : ಆ) ಕನ್ನಡ ಸಂಸ್ಕೃತಿ
೨. ವಿಚಾರ ವಿನಿಮಯ ಮಾಡುವುದಕ್ಕೆ_____ ಒಂದು ಅಮೂಲ್ಯ ಸಾಧನ.
ಅ) ಭಾಷೆ
ಆ) ಹಣ
ಇ) ಆರೋಗ್ಯ
ಈ) ಆಸ್ತಿ
ಉತ್ತರ : ಅ) ಭಾಷೆ
೩. ವಿಶ್ವದಲ್ಲಿ ಸುಮಾರು____ ಭಾಷೆಗಳಿವೆ ಎದು ತಿಳಿದು ಬಂದಿದೆ.
ಅ) 400
ಆ) 40000
ಇ) 4000
ಈ) 400000
ಉತ್ತರ : ಇ) 4000
೪________ಸರ್ವ ಸಂಪನ್ನತೆಯಿಂದ ಕೂಡಿದ ದೇವಭಾಷೆ ಗ್ರಾಂಥಿಕ ಭಾಷೆಯಾಗಿದೆ.
ಅ) ಕನ್ನಡ
ಆ) ಪ್ರಾಕೃತ
ఇ) ಹಿಂది
ಈ) ಸಂಸ್ಕೃತ
ಉತ್ತರ : ಈ) ಸಂಸ್ಕೃತ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ‘ನಮ್ಮ ಭಾಷೆ’ಯ ಬಗ್ಗೆ ಪರಿಚಯಿಸಿದವರು ಯಾರು?
ಎಂ. ಮರಿಯಪ್ಪಭಟ್ಟರು.
೨. ನಮಗೆ ಸಂಸ್ಕೃತವೂ ಬೇಕು, ಕನ್ನಡವೂ ಬೇಕು; ಎಂದು ಹೇಳಿದವರು ಯಾರು?
ನಯಸೇನ.
೩. ಯಾರ ಆಳ್ವಿಕೆಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ?
ಮಹಮದೀಯರು.
೪. ಭಾಷೆಯಲ್ಲಿದ್ದ ಸಾಮಾಗ್ರಿಯನ್ನೇ ಉಪಯೋಗಿಸಿ ಕೊಂಡು ಭಾಷಾಭಿವೃದ್ಧಿಯನ್ನು ಮಾಡುವ ಇನ್ನೊಂದು ವಿಧಾನ ಯಾರಿಗೆ ಸೇರಿದುದಾಗಿದೆ?
ನುಡಿಗಟ್ಟುಗಳಿಗೆ ಸೇರಿದುದಾಗಿದೆ.
೫. ಯೂರೋಪಿನ ಸಾಮಾನ್ಯ ಭಾಷೆ ಯಾವುದು?
ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಯಾಗಿದೆ.
ಇ. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ :
೧. ಅಮೂಲ್ಯ ಸಾಧನ
ನಮ್ಮ ಸುತ್ತ – ಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಅಮೂಲ್ಯ ಸಾಧನ.
೨. ಪೋಷಣೆ
ಪ್ರಾಚೀನ ಕಾಲದಿಂದಲೂ ಕನ್ನಡಕ್ಕೆ ಸಂಸ್ಕೃತದ ಪೋಷಣೆ ದೊರೆತಿದೆ.
೩. ದೇವ ಭಾಷೆ
ಸಂಸ್ಕೃತವನ್ನು ದೇವ ಭಾಷೆ ಎಂದು ಕರೆಯಲಾಗಿದೆ.
೩. ಕೊಳು ಕೊಡುಗೆ
ನೆರೆ ಹೊರೆಯ ಭಾಷೆಗಳಲ್ಲಿ ಕೊಳು ಕೊಡುಗೆಯ ವ್ಯವಹಾರ ನಡೆದು ನಡೆಯುತ್ತದೆ
೪. ನುಡಿಗಟ್ಟುಗಳು
ಎರಡು ಅಥವಾ ಹೆಚ್ಚು ಶಬ್ದಗಳು ಸೇರಿ ಒಂದು ನುಡಿಗಟ್ಟಾಗಿ ಅದಕ್ಕೊಂದು ನವೀನಾರ್ಥ ಬರುತ್ತದೆ.
ಈ ಸಜಾತಿಯ ಹಾಗೂ ವಿಜಾತೀಯ ಸಂಯುಕ್ತಾಕ್ಷರಗಳಾಗಿ ಬೇರ್ಪಡಿಸಿ.
೧) ಅಪ್ಪ | ೨) ಅಕ್ಷರ |
೩) ಅಜ್ಜ | ೪) ಉಷ್ಣ |
೫) ಅಕ್ಕ | ೬)ಅಸ್ತ್ರ |
೭) ಕಜ್ಜ | ೮) ಅದ್ಭುತ |
ಉತ್ತರ:
ಸಜಾತಿಯ ಸಂಯುಕ್ತಾಕ್ಷರಗಳು | ವಿಜಾತೀಯ ಸಂಯುಕ್ತಾಕ್ಷರಗಳು |
---|---|
೧) ಅಪ್ಪ | ೨) ಅಕ್ಷರ |
೩) ಅಜ್ಜ | ೪) ಉಷ್ಣ |
೫) ಅಕ್ಕ | ೬) ಅಸ್ತ್ರ |
೭) ಕಜ್ಜ | ೮) ಅದ್ಭುತ |