10ನೇ ತರಗತಿ ಜಾಗತಿಕ ಸಂಸ್ಥೆಗಳು ನೋಟ್ಸ್ ಪ್ರಶ್ನೋತ್ತರಗಳು, 10th Std Jagatika Samstegalu Social Science Notes Quesiton Answer Guide Mcq Pdf Download in Kannada Medium 2025, SSLC jagatika Samstegalu Lesson Notes, kseeb solutions for class 10 social science chapter 22 Notes and Key Answers, state syllabus class 10 social science 22 Lesson Notes Pdf, Jagatika Samsthegalu In Kannada.

ಅಭ್ಯಾಸ
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1.ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ 1945 ಅಕ್ಟೋಬರ್ 24
2. ವಿಶ್ವಸಂಸ್ಥೆಯ ಮುಖ್ಯ ಕಚೇರಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿದೆ.
3. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ
4. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿ ಒಂಭತ್ತು ವರ್ಷಗಳು.
5. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಇಟಲಿ ದೇಶದ ರೋಮ್ ಎಂಬಲ್ಲಿ ಇದೆ.
6. ಅಂತರರಾಷ್ಟ್ರೀಯ ನ್ಯಾಯಾಲಯವು ನೆದರ್ಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.
7. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯವರ ಹೆಸರು ಆಂಟೋನಿಯೋ ಗುಟೆರಸ್
8. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ 1948
9. ಸಾರ್ಕ್ ಸ್ಥಾಪನೆಯಾದ ವರ್ಷ 1985
II. ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಗುಂಪುಗಳಲ್ಲಿ ಚರ್ಚಿಸಿ ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
- ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ಪ್ರಮುಖ ನಾಯಕರುಗಳ ಹೆಸರುಗಳನ್ನು ತಿಳಿಸಿ.
ಇಂಗ್ಲೆಂಡಿನ ವಿನ್ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಫ್ರಾಂಕ್ಲಿನ್ ಎಫ್.ಡಿ. ರೂಸ್ವೆಲ್ಟ್,
2. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವು?
- ಸಾಮಾನ್ಯ ಸಭೆ,
- ಭದ್ರತಾ ಮಂಡಳಿ
- ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ
- ದತ್ತಿ ಸಮಿತಿ,
- ಅಂತರರಾಷ್ಟ್ರೀಯ ನ್ಯಾಯಾಲಯ, ಹಾಗೂ
- ಸಚಿವಾಲಯ.
3. ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?
ಅಮೆರಿಕಾ ಸಂಯುಕ್ತ ಸಂಸ್ಥಾನ, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಯುನೈಟೆಡ್ ಕಿಂಗ್ಡಂ.
4. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾವುವು?
ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.
5. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.
- ಕಾರ್ಮಿಕ ವರ್ಗದ ಸಾಮಾಜಿಕ ಭದ್ರತೆ, ಆರೋಗ್ಯ ಸಂರಕ್ಷಣೆ, ಉತ್ತಮ ಜೀವನ ಮಟ್ಟ ಇತ್ಯಾದಿ ವಿಚಾರಗಳು.
- ಮಹಿಳಾ ಕಾರ್ಮಿಕರ ಹೆರಿಗೆ ಸೌಲಭ್ಯ, ಕನಿಷ್ಠ ವೇತನ ಜಾರಿ, ವಸತಿ ನಿರ್ಮಾಣ ಇತ್ಯಾದಿ ವಿಚಾರಗಳು ಈ ಸಂಸ್ಥೆಯ ಕಾರ್ಯ ಪರಿಧಿಯೊಳಗೆ ಸೇರಿದೆ.
6. SAARCಅನ್ನು ವಿಸ್ತರಿಸಿ.
South Asian Association of Regional Co-operation. (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ)
III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ, ಆರರಿಂದ ಎಂಟು ವಾಕ್ಯಗಳಲ್ಲಿ ಉತ್ತರಿಸಿ.
1. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿಮಾಡಿರಿ.
- ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವುದು.
- ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು.
- ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು.
- ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ಮಾನವೀಯ ನೆಲೆಯ ಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡು ಹುಡುಕುವುದು.
- ಅಂತರರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮಾನ್ಯತೆ ದೊರಕಿಸುವುದು.
- ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.
2. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗ ಸಂಸ್ಥೆಯಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವೂ 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ಮತದ ಹಕ್ಕು ಮಾತ್ರ ಇರುತ್ತದೆ. ಸಾಮಾನ್ಯ ಸಭೆಯು ತನ್ನ ಪ್ರಥಮ ಅಧಿವೇಶನದಲ್ಲಿಯೇ ಒಂದು ವರ್ಷದ ಅವಧಿಗೆ ಒಬ್ಬರು ಅಧ್ಯಕ್ಷರನ್ನು ಆರಿಸುತ್ತದೆ. ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ ಏಳು ಮಂದಿ ಅಧ್ಯಕ್ಷರನ್ನೂ ಇಲ್ಲಿ ಆರಿಸಲಾಗುತ್ತದೆ.
3. ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಕಾರ್ಯಗಳಾವುವು?
- ಅಂತರರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ.
- ನಿರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ಹಲವಾರು ವಿಚಾರಗಳು ಈ ಮಂಡಳಿಯ ಕಾರ್ಯವ್ಯಾಪ್ತಿಯೊಳಗೆ ಬರುತ್ತವೆ.
- ಮಾನವ ಹಕ್ಕುಗಳ ಬಗ್ಗೆ ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಬಗೆಗೂ ಈ ಮಂಡಳಿಯು ಶಿಫಾರಸ್ಸು ಮಾಡುತ್ತದೆ.
- ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುತ್ತದೆ.
- ವಿಶೇಷ ಪ್ರಾವೀಣ್ಯತೆಯ ಅಂಗ ಸಂಸ್ಥೆಗಳಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐ.ಎಲ್.ಒ), ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ), ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಹೆಚ್.ಒ) ಮುಂತಾದವುಗಳ ಕಾರ್ಯಗಳನ್ನು ಸಮನ್ವಯ ಮಾಡುತ್ತದೆ.
4. ವಿಶ್ವಸಂಸ್ಥೆಯ ಸಾಧನೆಗಳನ್ನು ಪಟ್ಟಿ ಮಾಡಿ.
- ಕೊರಿಯಾ ವಿವಾದ, ಸೂಯೆಜ್ ಕಾಲುವೆ ಬಿಕ್ಕಟ್ಟು ಮತ್ತು ವಿಯೆಟ್ನಾಂ ಸಮಸ್ಯೆಗಳನ್ನು ಬಗೆಹರಿಸಿದೆ.
- ಕಾಶ್ಮೀರ ಸಮಸ್ಯೆ ಮತ್ತು ಪ್ಯಾಲಿಸ್ತೀನ್-ಇಸ್ರೇಲ್ ವಿವಾದದ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.
- ನಿಶ್ಯಸ್ತ್ರೀಕರಣ ಸಾಧನೆಯ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ.
- ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ವ್ಯಾಪಾರ್” ಸಂಘಟನೆಗಳ ಮೂಲಕ ಆರ್ಥಿಕ, ಹಣಕಾಸಿನ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ.
- ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ.
- ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ ವಿಶ್ವದಾದ್ಯಂತ ಮಾನವ ಹಕ್ಕುಗಳ ಜಾರಿಗೆ ಪ್ರಯತ್ನಿಸುತ್ತಿದೆ.
- ವರ್ಣಬೇಧನೀತಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವಗಳನ್ನು ಅಂತ್ಯವಾಗಿಸಲು ಶ್ರಮಿಸುತ್ತಿದೆ.
- ಜಾಗತಿಕ ತಾಪಮಾನ ಹೆಚ್ಚಳದಿಂದಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಶ್ರಮಿಸುತ್ತಿದೆ.
5. ಯುನೆಸ್ಕೋದ ಕಾರ್ಯಗಳಾವುವು?
ಇದು ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕೃತಿ ಮುಂತಾದುವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯ ಸಂಸ್ಥೆಯಾಗಿದೆ. ತಾಂತ್ರಿಕ ಶಿಕ್ಷಣ, ಮಾಧ್ಯಮ ತಂತ್ರಗಾರಿಕೆ, ರಚನಾತ್ಮಕ ಚಿಂತನೆ, ಸಾಂಸ್ಕೃತಿಕ ವಿಚಾರಗಳು ಹಾಗೂ ಪರಿಸರ ವಿಜ್ಞಾನದ ಬಗೆಗೆ ಇದು ಕಾರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರಕಾರಗಳಿಗೆ ಹಾಗೂ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ.
6. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳ ಪರಿಹಾರದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪಾತ್ರವನ್ನು ವಿಶ್ಲೇಷಿಸಿ.
ಇದು ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತದೆ. ವಿಶ್ವ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶೀ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಕರಿಸುತ್ತದೆ. ಇದರಲ್ಲಿ ಆಡಳಿತ ಮಂಡಳಿ, ಕಾರ್ಯನಿರ್ವಹಣಾ ನಿರ್ದೇಶಕ ಮಂಡಳಿ ಹಾಗೂ ಆಡಳಿತ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇದರ ಕಾರ್ಯ ನಿರ್ವಹಣೆಯ ಗುಣಮಟ್ಟ ಹಾಗು ಪಾರದರ್ಶಕತೆ ಸಾಕಷ್ಟು ಮನ್ನಣೆಯನ್ನು ಪಡೆದಿದೆ. ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಇದೊಂದು ಕೇಂದ್ರ ಬ್ಯಾಂಕು ಎಂಬುದಾಗಿ ಇದನ್ನು ಕರೆಯಬಹುದಾಗಿದೆ. ಆರ್ಥಿಕವಾಗಿ ಮುಂದುವರಿದ ಹಾಗೂ ಹಿಂದುಳಿದ ರಾಷ್ಟ್ರಗಳ ಪರಸ್ಪರ ಸಂಬಂಧವನ್ನು ಬೆಸೆಯುವಲ್ಲಿ ಇದು ಪೂರಕ ಪಾತ್ರ ವಹಿಸುತ್ತದೆ.
7. ಕಾಮನ್ವೆಲ್ತ್ ರಾಷ್ಟ್ರಗಳ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
ಪ್ರಜಾತಂತ್ರವನ್ನು ಎತ್ತಿ ಹಿಡಿಯುವುದು, ಸ್ವಾತಂತ್ರ್ಯದ ಸಂರಕ್ಷಣೆ, ಬಡತನ ನಿರ್ಮೂಲನ, ವಿಶ್ವಶಾಂತಿ ನೆಲೆಗೊಳಿಸುವಿಕೆ, ಕ್ರೀಡೆ, ವಿಜ್ಞಾನ, ಹಾಗೂ ಕಲೆಯ ಬೆಳವಣಿಗೆಗೆ ಹಾಗೂ ಆ ಬಗೆಗೆ ಸಂಬಂಧಗಳ ವೃದ್ಧಿ-ಇವು ಕಾಮನ್ವೆಲ್ತ್ ರಾಷ್ಟ್ರಸಂಘದ ಉದ್ದೇಶಗಳು.
8. ಯುರೋಪಿಯನ್ ಯೂನಿಯನ್ ಸಂಸ್ಥೆಯನ್ನು ಕುರಿತು ವಿವರಿಸಿ.
ಯುರೋಪಿಯನ್ ಯೂನಿಯನ್ ಸಂಸ್ಥೆಯು ಯುರೋಪ್ ಖಂಡದ 27 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಮ್ಯಾಸ್ಟ್ರಿಚ್ ಎಂಬಲ್ಲಿ ಯುರೋಪಿಯನ್ ಯುನಿಯನ್ ಒಪ್ಪಂದಕ್ಕೆ ಅನುಗುಣವಾಗಿ 1992ರಲ್ಲಿ ಇದು ಉದಯವಾಯಿತು. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿನ ಮುಖ್ಯ ಅಂಗ ಸಂಸ್ಥೆಗಳೆಂದರೆ 1. ಯುರೋಪಿಯನ್ ಸಮಿತಿ, 2. ಯುರೋಪಿಯನ್ ಆಯೋಗ, 3. ಯುರೋಪಿಯನ್ ಸಂಸತ್ತು 4. ಯುರೋಪಿಯನ್ ನ್ಯಾಯಾಲಯ 5. ಯುರೋಪಿಯನ್ ಕೇಂದ್ರ ಬ್ಯಾಂಕ್. ಐರೋಪ್ಯ ಒಕ್ಕೂಟವು ಒಂದು ಸಂಯುಕ್ತ ರಾಜ್ಯವನ್ನು ಹೋಲುವಂತಿದೆ. ಇದರ ಪ್ರತಿಪಾದಕರು ಹೇಳುವಂತೆ ಈ ಸಂಸ್ಥೆ ಶಾಂತಿ ಮತ್ತು ಪ್ರಜಾತಂತ್ರಕ್ಕಾಗಿ ಕಾರ್ಯ ನಿರ್ವಹಿಸುತ್ತದೆ. ಐರೋಪ್ಯ ಒಕ್ಕೂಟವು ಈ ಹಿಂದಿನ ಯುರೋಪಿಯನ್ ಆರ್ಥಿಕ ಸಮುದಾಯದ ವಾರಸುದಾರ ಸಂಸ್ಥೆಯಾಗಿದೆ. ಇದರ ಸದಸ್ಯ ರಾಷ್ಟ್ರಗಳು ಸ್ವಯಂ ಇಚ್ಛೆಯಿಂದ ತಮ್ಮ ಸಾರ್ವಭೌಮ ಅಧಿಕಾರದ ಗಮನಾರ್ಹ ಅಂಶವನ್ನು ಈ ಸಂಸ್ಥೆಗೆ ನೀಡಿವೆ. ಈ ಸಂಸ್ಥೆಯ ಕೇಂದ್ರ ಕಛೇರಿ ಬೆಲ್ಟಿಯಂ ದೇಶದ ಬ್ರುಸೆಲ್ಸ್ನಲ್ಲಿದೆ.
ಹೆಚ್ಚಿನ ಪ್ರಶ್ನೆಗಳು:
I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1.ಯುರೋಪಿಯನ್ ಯೂನಿಯನ್ 1992ರಲ್ಲಿ ಮ್ಯಾಸ್ಟ್ರಿಚ್ ಉದಯವಾಯಿತು. ಎಂಬಲ್ಲಿ
2. 1965 ರಲ್ಲಿ ನೊಬೆಲ್ ಶಾಂತಿ ಬಹುಮಾನ ಗಳಿಸಿದ ಸಂಸ್ಥೆ ಯುನಿಸೆಫ್
3. ಇದೀಗ ವಿಶ್ವ ಸಂಸ್ಥೆಯ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಸಂಖ್ಯೆ 193
4. ವಿಶ್ವಸಂಸ್ಥೆಯ ಒಂದು ಪ್ರಧಾನ ಅಂಗಸಂಸ್ಥೆ ಅಂತರಾಷ್ಟ್ರೀಯ ನ್ಯಾಯಾಲಯ
5. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿರುವ ನ್ಯಾಯಾಧೀಶರ ಸಂಖ್ಯೆ 15
6. ಪ್ರಪಂಚದ ಮಾನವರ ಆರೋಗ್ಯ ಸುಧಾರಿಸಲು ಸ್ಥಾಪನೆಗೊಂಡ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ
7. ಯುನೆಸ್ಕೋ ಸ್ಥಾಪನೆಯಾದ ವರ್ಷ 1946
II. ಬಹು ಆಯ್ಕೆಯ ಪ್ರಶ್ನೆಗಳು:
1. ವಿಶ್ವಸಂಸ್ಥೆಯ ಸಚಿವಾಲಯದ ಮಹಾಕಾರ್ಯದರ್ಶಿಯವರ ಅಧಿಕಾರದ ಅವಧಿ:
ಎ) ಮೂರು ವರ್ಷಗಳು
ಬಿ) ನಾಲ್ಕು ವರ್ಷಗಳು
ಸಿ) ಎರಡು ವರ್ಷಗಳು
ಡಿ) ಐದು ವರ್ಷಗಳು
2. ವಿಶ್ವಸಂಸ್ಥೆ ಎಂಬ ಪದವನ್ನು ಚಾಲ್ತಿಗೆ ತಂದವರು:
ಎ) ವಿನ್ಸ್ಟನ್ ಚರ್ಚಿಲ್
ಬಿ) ಜೋಸೆಫ್ ಸ್ಟಾಲಿನ್
ಸಿ) ಫ್ರಾಂಕ್ಲಿನ್ ಎಫ್.ಡಿ. ರೂಸ್ವೆಲ್ಟ್
ಡಿ) ಲೆನಿನ್
3. 1995 ಜನವರಿ 1 ರಂದು ಹುಟ್ಟಿಕೊಂಡ ಸಂಸ್ಥೆ:
ಎ) ಆಸಿಯಾನ್
ಬಿ) ವಿಶ್ವ ವ್ಯಾಪಾರ ಸಂಘಟನೆ
ಸಿ) ಕಾಮನ್ವೆಲ್ತ್ ರಾಷ್ಟ್ರ ಸಂಘ
ಡಿ) ಅಂತರರಾಷ್ಟ್ರೀಯ ಕಾರ್ಮಿಕ ಸಂಘ
4. ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯಲ್ಲಿರುವ ಸದಸ್ಯ ರಾಷ್ಟ್ರಗಳ ಸಂಖ್ಯೆ:
ಎ) 54
ಬಿ) 58
ಸಿ) 60
ಡಿ) 65
5. ವಿಶ್ವ ಆರೋಗ್ಯ ಸಂಸ್ಥೆಯು ——– ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಯಶಸ್ಸು ಕಂಡಿದೆ
ಎ) ಏಡ್ಸ್
ಬಿ) ಸಿಡುಬು
ಸಿ) ಪ್ಲೇಗ್
ಡಿ) ಕೋವಿಡ್-19
6. ವಿಶ್ವ ಬ್ಯಾಂಕ್ ಸಮೂಹದ ಪ್ರಮುಖ ಸಂಸ್ಥೆ
ಎ) ಐ.ಬಿ.ಆರ್.ಡಿ
ಬಿ) ಡಬ್ಲ್ಯೂ.ಟಿ.ಒ
ಸಿ) ಐ.ಎಮ್.ಎಫ್
ಡಿ) ಯುನಿಸೆಫ್
III. ಈ ಪ್ರಶ್ನೆಗಳಿಗೆ ಉತ್ತರಿಸಿ:
1.ಸಾರ್ಕ್ ಸದಸ್ಯತ್ವ ಹೊಂದಿದ ರಾಷ್ಟ್ರಗಳು ಯಾವುವು?
ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್, ಭೂತಾನ್ ಹಾಗೂ ಅಪಘಾನಿಸ್ತಾನ ಸಾರ್ಕ್ ಸದಸ್ಯತ್ವ ಹೊಂದಿದ ರಾಷ್ಟ್ರಗಳು.
2. ಐ.ಬಿ.ಆರ್.ಡಿ ಯ ಕಾರ್ಯಗಳನ್ನು ತಿಳಿಸಿ.
- ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ ಅಭಿವೃದ್ಧಿಗಾಗಿ ಅವಶ್ಯಕವಿರುವ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಗಾಧ ಮೊತ್ತದ ಸಾಲ ನೀಡುತ್ತದೆ.
- ವಿಶ್ವ ವ್ಯಾಪಾರ ಹಾಗೂ ವಿದೇಶೀ ವಿನಿಮಯ ಪಾವತಿ ಸಮತೋಲನಕ್ಕೆ ಸಹಾಯ ಮಾಡುತ್ತದೆ.
- ಎಲ್ಲಾ ಪ್ರಗತಿಪರ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಸಹಾಯ ನೀಡುತ್ತದೆ.
3. ಪ್ರಾದೇಶಿಕ ಸಹಕಾರ ಸಂಸ್ಥೆಗಳನ್ನು ಪಟ್ಟಿಮಾಡಿ.
ಕಾಮನ್ವೆಲ್ತ್ ರಾಷ್ಟ್ರಗಳ ಸಂಘ, ಸಾರ್ಕ್, ಐರೋಪ್ಯ ಒಕ್ಕೂಟ, ಆಸಿಯಾನ್, ಆಫ್ರಿಕ ಒಕ್ಕೂಟ ಸಂಸ್ಥೆ.
4. ಭದ್ರತಾ ಮಂಡಳಿಯ ಕಾರ್ಯಗಳೇನು?
- ಜಾಗತಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರಕ್ಕಾಗಿ ಯತ್ನಿಸುತ್ತದೆ.
- ಅವಶ್ಯಕವಿದ್ದರೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಅಂತರರಾಷ್ಟ್ರೀಯ ಶಾಂತಿ ಹಾಗೂ ಸುವ್ಯವಸ್ಥೆಗೆ ನಿಯೋಜಿಸುತ್ತದೆ.
- ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ ಹಾಗೂ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉಮೇದುವಾರಿಕೆಗೆ ಹೆಸರು ಸೂಚಿಸುತ್ತದೆ.
5. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಮುಖ ಉದ್ದೇಶಗಳು ಯಾವುವು?
ಎ) ಕೃಷಿ ಕ್ಷೇತ್ರದ ಅಭಿವೃದ್ಧಿ,
ಬಿ) ಪೌಷ್ಟಿಕ ಆಹಾರ ಒದಗಿಸುವಿಕೆ.
ಸಿ) ಜಾಗತಿಕ ಜನಸಮುದಾಯವನ್ನು ಹಸಿವಿನಿಂದ ವಿಮುಕ್ತಿಗೊಳಿಸುವುದು.
ಡಿ) ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟದ ಸುಧಾರಣೆ.
6. ಯುನಿಸೆಫ್ ಸಂಸ್ಥೆಯ ಮೂಲ ಉದ್ದೇಶವೇನು?
ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಯುನಿಸೆಫ್ ಸಂಸ್ಥೆಯ ಮೂಲ ಉದ್ದೇಶ.
7. ಆಸಿಯಾನ್ ಮುಖ್ಯ ಉದ್ದೇಶಗಳೇನು?
ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಸಾಮಾಜಿಕ ಬೆಳವಣಿಗೆಗೆ ಪ್ರಯತ್ನಿಸುವುದು ಮತ್ತು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ, ವೈಜ್ಞಾನಿಕ, ಆಡಳಿತಾತ್ಮಕ ಇತ್ಯಾದಿ ಕ್ಷೇತ್ರಗಳಲ್ಲಿ ಪರಸ್ಪರ ನೆರವು ಹಾಗೂ ಸಹಭಾಗಿತ್ವ ಹೊಂದುವಿಕೆ.
8. ಸಾರ್ಕ್ ಪ್ರಗತಿಗೆ ತೊಡಕಾಗಿರುವ ಸೂತ್ರ ಯಾವುದು?
ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕೆಂಬ ಸೂತ್ರವು ಸಾರ್ಕ್ ಪ್ರಗತಿಗೆ ತೊಡಕಾಗಿದೆ.
ಮುಖ್ಯಾಂಶಗಳು:
- ಮೊದಲನೆಯ ವಿಶ್ವ ಸಮರದ ಬಳಿಕ ಜಾಗತಿಕ ಶಾಂತಿಗಾಗಿ ಲೀಗ್ ಆಫ್ ನೇಷನ್ಸ್ ಎಂಬ ಸಂಸ್ಥೆ ಪ್ರಾರಂಭವಾಯಿತು. ಆದರೆ ದ್ವಿತೀಯ ಮಹಾಯುದ್ಧ ಪ್ರಾರಂಭಗೊಳ್ಳುತ್ತಿರುವಂತೆಯೇ ಈ ಸಂಸ್ಥೆ ಪತನದ ಹಾದಿಯನ್ನು ಹಿಡಿಯಿತು.
- ಎರಡನೇ ಮಹಾಯುದ್ಧವು ನಡೆಯುತ್ತಿದ್ದಂತೆಯೇ ಜಾಗತಿಕವಾಗಿ ಶಾಶ್ವತ ಶಾಂತಿ ಸ್ಥಾಪನೆಯ ಯತ್ನವೂ ಆರಂಭವಾಯಿತು.
- ಇಂಗ್ಲೆಂಡಿನ ವಿನ್ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಫ್ರಾಂಕ್ಲಿನ್ ಎಫ್.ಡಿ ರೂಸ್ವೆಲ್ಟ್ ಜಾಗತಿಕ ಶಾಂತಿ ಸ್ಥಾಪನೆಗಾಗಿ ವಿಶ್ವಮಟ್ಟದ ಸಂಸ್ಥೆಯ ಸ್ಥಾಪನೆಗೆ ಮುಂದಾದರು.
- ವಿಶ್ವಸಂಸ್ಥೆ ಎಂಬ ಶಬ್ದವನ್ನು ಅಮೆರಿಕಾದ ಅಧ್ಯಕ್ಷ ಫ್ರಾಂಕ್ಲಿನ್ಎಫ್.ಡಿ. ರೂಸ್ವೆಲ್ಟ್ ಚಾಲ್ತಿಗೆ ತಂದರು.
- 1945 ಅಕ್ಟೋಬರ್ 24ರಂದು ವಿಶ್ವಸಂಸ್ಥೆ ಉದಯವಾಯಿತು.
- ಇದೀಗ ವಿಶ್ವಸಂಸ್ಥೆಯು ಸುಮಾರು 193 ರಾಷ್ಟ್ರಗಳು ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿವೆ.
- ವಿಶ್ವಸಂಸ್ಥೆಯ ಮುಖ್ಯ ಕಛೇರಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ.
- ವಿಶ್ವಸಂಸ್ಥೆಯ ಸನ್ನದಿನ ಪ್ರಕಾರ ವಿಶ್ವ ಸಂಸ್ಥೆಗೆ ಆರು ಪ್ರಧಾನ ಅಂಗಸಂಸ್ಥೆಗಳಿವೆ.
- ಸಾಮಾನ್ಯ ಸಭೆ,
- ಭದ್ರತಾ ಸಮಿತಿ,
- ಆರ್ಥಿಕ ಹಾಗೂ ಸಾಮಾಜಿಕ ಸಮಿತಿ,
- ದತ್ತಿ ಸಮಿತಿ,
- ಅಂತರರಾಷ್ಟ್ರೀಯ ನ್ಯಾಯಾಲಯ, ಹಾಗೂ
- ಸಚಿವಾಲಯ, ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಾಗಿವೆ.
- ಆಹಾರ ಮತ್ತು ಕೃಷಿ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಯುನೆಸ್ಕೋ, ಯುನಿಸೆಫ್. ಐ.ಎ.ಎಫ್, ಐ.ಬಿ.ಆರ್.ಡಿ, ಅಂತರರಾಷ್ಟ್ರೀಯ ಕಾರ್ಮಿಕ ಸಂಘ, ವ್ಯಾಪಾರ ಮತ್ತು ಅಭಿವೃದ್ಧಿ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನ, ವಿಶ್ವ ವ್ಯಾಪಾರ ಸಂಘಟನೆ ವಿಶ್ವಸಂಸ್ಥೆಯ ಆಶ್ರಯದ ವಿವಿಧ ಸಂಘ ಸಂಸ್ಥೆಗಳಾಗಿವೆ.
- ಕಾಮನ್ವೆಲ್ತ್ ರಾಷ್ಟ್ರ ಸಂಘ, ಸಾರ್ಕ್, ಯುರೋಪಿಯನ್ ಯೂನಿಯನ್, ಆಸಿಯನ್, ದಿ ಆರ್ಗನೈಸೇಶನ್ ಪ್ರಾದೇಶಿಕ ಸಹಕಾರ ಸಂಸ್ಥೆಗಳಾಗಿವೆ.
ಇತರೆ ವಿಷಯಗಳು :
ಭಾರತದ ವಿದೇಶಾಂಗ ನೀತಿ ಹಾಗೂ ಜಾಗತಿಕ ಸವಾಲುಗಳು ಪಾಠದ ನೋಟ್ಸ್
ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್