10th Standard Bharatada Videshanga Niti hagu jagatika Savalugalu Chapter Social Notes |10ನೇ ತರಗತಿ ಭಾರತದ ವಿದೇಶಾಂಗ ನೀತಿ ಹಾಗೂ ಜಾಗತಿಕ ಸವಾಲುಗಳು ಪಾಠದ ನೋಟ್ಸ್

Bharatada Videshanga Niti hagu jagatika Savalugalu

10th Standard Bharatada Videshanga Niti hagu jagatika Savalugalu Social Science Notes Question Answer Guide Mcq Pdf Download in Kannada Medium 2025,10ನೇ ತರಗತಿ ಭಾರತದ ವಿದೇಶಾಂಗ ನೀತಿ ಹಾಗೂ ಜಾಗತಿಕ ಸವಾಲುಗಳು ಸಮಾಜ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು, Kseeb solutions for class 10 social science Chapter 21 Notes, 10th Std Social Science 21 lesson Question Answer, state syllabus class 10 social science Chapter notes Pdf, SSLC Bharathada Videshanga Neeti in Kannada Question and Answer.

Bharatada Videshanga Niti hagu jagatika Savalugalu
Bharatada Videshanga Niti hagu jagatika Savalugalu
  1. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಜವಾಹರಲಾಲ್‌ ನೆಹರು
  2. ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.
  3. ಭಾರತವು ಒಂದು ಶಾಂತಿಪ್ರಿಯ ರಾಷ್ಟ್ರವಾದುದರಿಂದ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಪ್ರತಿಪಾದಿಸುತ್ತಿದೆ.

1.ವಿದೇಶಾಂಗ ನೀತಿ ಎಂದರೇನು?

ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.

2. ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಯಾವುವು?

  • ವಸಾಹತುಶಾಹಿತ್ವಕ್ಕೆ ವಿರೋಧ.
  • ಸಾಮ್ರಾಜ್ಯಶಾಹಿತ್ವಕ್ಕೆ ವಿರೋಧ.
  • ವರ್ಣಭೇಧ ನೀತಿಗೆ ವಿರೋಧ.
  • ಅಲಿಪ್ತ ನೀತಿ.
  • ಆಫ್ರಿಕ ಮತ್ತು ಏಷ್ಯಾದ ಪ್ರಗತಿಗೆ ಪ್ರಥಮ ಆಧ್ಯತೆ.
  • ನಿಶ್ಯಸ್ತ್ರೀಕರಣ
  • ವಿಶ್ವಸಂಸ್ಥೆ ಮತ್ತು ವಿಶ್ವಶಾಂತಿಗೆ ಬೆಂಬಲ.

3. ದ್ವಿತೀಯ ಮಹಾಯುದ್ಧದ ನಂತರ ಎದುರಾದ ಜಾಗತಿಕ ಸವಾಲುಗಳು ಯಾವುವು?

ಮಾನವ ಹಕ್ಕುಗಳ ನಿರಾಕರಣೆ, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇದ ನೀತಿ ಹಾಗೂ ಭಯೋತ್ಪಾದಕತೆಯಂತಹ ಹಲವಾರು ಸವಾಲುಗಳು ಇನ್ನೂ ಹಾಗೆಯೇ ಉಳಿದು ಕೊಂಡಿರುವುದು.

4. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತವು ಕೈಗೊಂಡಿರುವ ಕ್ರಮಗಳನ್ನು ತಿಳಿಸಿ

ಸಾರ್ವತ್ರಿಕ ಮಾನವ ಹಕ್ಕುಗಳನ್ನು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ. ಭಾರತ ತನ್ನ ಸಂವಿಧಾನದಲ್ಲಿಯೂ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತ ವಾಗಿರಬೇಕೆಂಬುದನ್ನು ಭಾರತ ಸಮರ್ಥಿಸುತ್ತಾ ಬಂದಿದೆ. ಜನಾಂಗ ಹತ್ಯೆ, ಎಲ್ಲಾ ವಿಧದ ಶೋಷಣೆ, ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ. ವಿಶ್ವ, ಸಂಸ್ಥೆ ಹಾಗೂ ಇನ್ನಿತರ ಜಾಗತಿಕ ವೇದಿಕೆಯ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಿದೆ.

5. ‘ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ‘ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ಪರಿಣಾಮಗಳಾವುವು?

ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ವಿಶ್ವದಾದ್ಯಂತ ಭಯ, ಅಸ್ಥಿರತೆ ಸೃಷ್ಟಿಯಾಗುತ್ತದೆ. ಯುದ್ಧದ ಸಂಭವನೀಯತೆ ಹೆಚ್ಚಾಗುತ್ತದೆ. ವಿಶ್ವಶಾಚಿತಿ ಸ್ಥಾಪನೆಗೆ ಅಡ್ಡಿಯಾಗುತ್ತದೆ. ಆರ್ಥಿಕವಾಗಿ ನಷ್ಟದಾಯಕ ಸ್ಥಿತಿ ಹಾಗೂ ಆರ್ಥಿಕ ಅಸ್ಥಿರತೆಗೆ ದಾರಿ ಮಾಡಿಕೊಡುತ್ತದೆ. ಅಮೇರಿಕಾದ ಅಧ್ಯಕ್ಷ ಐಸನ್ ಹೋವರ್ ಹೇಳಿರುವಂತೆ “ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ”. ಈ ಹೇಳಿಕೆಯು ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ದುಷ್ಪರಿಣಾಮಗಳನ್ನು ದೃಢಪಡಿಸುತ್ತದೆ.

6. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವುವು? ಈ ರೀತಿ ಹಿಂದುಳಿಯುವಿಕೆಯ ಕಾರಣಗಳಾವುವು?

ಬಡತನ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಸಮರ್ಪಕವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಕಳಪೆಯಾಗಿರುತ್ತದೆ. ಅನರೋಗ್ಯ ಹಾಗೂ ಅಪೌಷ್ಟಿಕತೆ ಹೆಚ್ಚಾಗಿರುತ್ತದೆ. ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತದೆ. ಈ ರೀತಿಯ ಹಿಂದುಳಿಯುವಿಕೆಗೆ ಕಾರಣ ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿತ್ವ. ಐರೋಪ್ಯ ರಾಷ್ಟ್ರಗಳು ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದವು. ಈ ಸಾಮ್ರಾಜ್ಯ ಶಾಹಿತ್ವ ಮತ್ತು ವಸಾಹತುಶಾಹಿತ್ವ ದಿಂದಾಗಿ ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳ ಸಂಪನ್ಮೂಲಗಳನ್ನು ಲೂಟಿ ಮಾಡಲಾಯಿತು. ಇದರಿಂದಾಗಿ ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳು ಆರ್ಥಿಕವಾಗಿ ತೀರಾ ಹಿಂದುಳಿದವು.

7. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತವು ಕೈಗೊಂಡಿರುವ ಸುಧಾರಣಾ ಕ್ರಮಗಳಾವುವು?

ಆರ್ಥಿಕ ಅಸಮಾನತೆಯ ಸವಾರಣೆಗಾಗಿ ಭಾರತವು ಯಾವುದೇ ಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಪ್ರತಿಪಾದಿಸಿತು. ಹಲವು ಬಡ ರಾಷ್ಟ್ರಗಳಿಗೆ ಭಾರತವು ನೆರವು ನೀಡುತ್ತಾ ಬಂದಿದೆ. ತನ್ಮೂಲಕ ಹಿಂದುಳಿದ ರಾಷ್ಟ್ರಗಳ ಆತ್ಮಗೌರವವನ್ನು ಭಾರತ ಎತ್ತಿಹಿಡಿಯಲು ಸಹಕರಿಸಿತು. ಆದರೊಂದಿಗೆ ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿತು.

8. ಭಯೋತ್ಪಾದಕತೆಯಿಂದ ಉಂಟಾಗುವ ಪರಿಣಾಮಗಳಾವುವು?

ಭಯೋತ್ಪಾದಕತೆಯು ವ್ಯಕ್ತಿಗಳ ಪ್ರಾಣಹಾನಯನ್ನುಂಟು ಮಾಡುತ್ತದೆ. ಆಸ್ತಿ-ಪಾಸ್ತಿಗಳ ನಷ್ಟ ಉಂಟುಮಾಡುತ್ತದೆ. ಸಾಮಾಜಿಕ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತದೆ. ಆರ್ಥಿಕ ಅಭಿವೃದ್ಧಿಗೆ ತಡೆ ಉಂಟುಮಾಡುತ್ತದೆ. ಮಾನಸಿಕ ವೇದನೆಯನ್ನು ನೀಡುತ್ತದೆ. ಕಾನೂನು-ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಯನ್ನುಂಟುಮಾಡುತ್ತದೆ. ವಿವಿಧ ರಾಷ್ಟ್ರಗಳ ಭದ್ರತೆಗೆ ಆತಂಕಕಾರಿಯಾಗಿದೆ.

9. ಭಯೋತ್ಪಾದಕತೆಯ ಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವುವು?

ರಾಷ್ಟ್ರೀಯ ತನಿಖಾ ದಳವನ್ನು ಸ್ಥಾಪಿಸಿದೆ. ವಿಶೇಷ ಪರಿಣತಿ ಪಡೆಗಳನ್ನು ರಚಿಸಿದೆ. ಕೆಲವೊಮ್ಮೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ರಕ್ಷಣಾ ಪಡೆಗಳನ್ನು ಬಳಸುತ್ತಿದೆ. ತನ್ನ ಹಾಗೂ ಅನ್ಯರ ನೆಲದಲ್ಲಿ ಭಯೋತ್ಪಾದನೆಗೆ ತೀವ್ರ ವಿರೋಧ ವ್ಯಕಪಡಿಸುತ್ತದೆ. ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಹಕಾರದ ಬಗ್ಗೆ ನಸಂತರವಾಗಿ ಕರೆ ನೀಡುತ್ತಾ ಬಂದಿದೆ. ರಾಜ್ಯ ಸರ್ಕಾರಗಳು ಭಯೋತ್ಪಾದಕ ನಿಗ್ರಹ ಪಡೆಗಳನ್ನು ರಚಿಸಿದೆ. ಇಂಟೆಲಿಜೆನ್ಸ್ ಬ್ಯೂರೋ ಮತ್ತು ಸಂಶೋಧನೆ ಹಾಗೂ ವಿಶ್ಲೇಷಣಾ ಘಟಕ ಮುಂತಾದ ಗುಪ್ತಚರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಗುಪ್ತಚರ ವ್ಯವಸ್ಥೆಯನ್ನು ಬಲವರ್ಧನೆ ಮಾಡಲಾಗಿದೆ. ಭಯೋತ್ಪಾದಕರಿಗೆ ಹಣಕಾಸು ವರ್ಗಾವಣೆಯನ್ನು ತಡೆಯಲು ಹಣಕಾಸು ಗುಪ್ರಚರ ಘಟಕವನ್ನು ಸ್ಥಾಪಿಸಲಾಗಿದೆ. ಎಲ್ಲಾ ರೀತಿಯ ಭಯೋತ್ಪಾದಕತೆಯ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತ ಬೆಂಬಲವನ್ನು ಸೂಚಿಸುತ್ತದೆ.

1.ಭಾರತ ಇಂದು ಪ್ರಪಂಚದ 5ನೇ ಬೃಹತ್ ಆರ್ಥಿಕ ಶಕ್ತಿಶಾಲಿ ದೇಶವಾಗಿ ಗುರುತಿಸಿಕೊಂಡಿದೆ.

2. ಹಿಂಸೆ-ದ್ವೇಷಗಳಿಗಿಂತ ಶಾಂತಿ-ಪ್ರೇಮಗಳೇ ಮಿಗಿಲಾದವು.

3. ಎಲ್ಲರನ್ನೂ ಒಳಗೊಂಡು ಶಾಂತಿಯಿಂದ ಬದುಕಲು ಪ್ರೇರಣೆ ನೀಡುವ ವಿಚಾರ ಆದರ್ಶವಾದ

4. ಈಗಲೂ ಅಲಿಪ್ತ ನೀತಿ ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳಲ್ಲೊಂದಾಗಿದೆ.

5. ತೃತೀಯ ಜಗತ್ತು ಎಂಬ ವಿಚಾರವೇ ಬಡ ರಾಷ್ಟ್ರಗಳು ಎಂಬ ಅಂಶವನ್ನು ಎತ್ತಿ ತೋರುತ್ತಿದೆ.

6. ಭಯೋತ್ಪಾದಕತೆಯನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದೂ ಕರೆಯಬಹುದು.

7. ವಿಶ್ವ ಕುಟುಂಬದ ಸದಸ್ಯರಲ್ಲಿ ಇರುವ ಪ್ರಮುಖ ಸಮಸ್ಯೆ ಆರ್ಥಿಕ ಅಸಮಾನತೆ

1.ಭಾರತವು ಉಗ್ರಗಾಮಿತ್ವಕ್ಕೆ ಸಾಕಷ್ಟು ತುತ್ತಾಗಿದೆ ಎಂಬುದಕ್ಕೆ ಉದಾಹರಣೆ ಗಳಾವುವು?

1993ರಲ್ಲಿ ನಡೆದ ಮುಂಬೈ ದಾಳಿ, 2001ರ ಡಿಸೆಂಬರ್ 13ರಂದು ನವದೆಹಲಿಯ ಸಂಸತ್ ಭವನದ ಮೇಲೆ ನಡೆದ ದಾಳಿ, 2008ರ ನವೆಂಬ‌ರ್ 26ರಂದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ಮತ್ತು ತಾಜ್‌ ಮಹಲ್ ಪ್ಯಾಲೇಸ್ ಹೋಟೆಲ್ ಮೇಲಿನ ದಾಳಿ, ಅಂತೆಯೇ ಹೈದರಾಬಾದ್, ಚೆನ್ನೈ, ಬೆಂಗಳೂರು, ಬುದ್ಧಗಯಾ ಮುಂತಾದ ಕಡೆಗಳಲ್ಲಿ ನಡೆದ ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳು ಭಾರತವು ಉಗ್ರಗಾಮಿತ್ವಕ್ಕೆ ಸಾಕಷ್ಟು ತುತ್ತಾಗಿದೆ ಎಂಬುದಕ್ಕೆ ಉದಾಹರಣೆಗಳಾಗಿವೆ.

2. ಬಾಹ್ಯ ನಿರ್ಧಾರಕ ಅಂಶಗಳು ಯಾವುವು?

  • ಅಂತರರಾಷ್ಟ್ರೀಯ ಪರಿಸ್ಥಿತಿಗಳು.
  • ಅಂತರರಾಷ್ಟ್ರೀಯ ಸಂಘಟನೆಗಳೊಂದಿಗಿನ ಸಂಬಂಧ.
  • ಜಾಗತಿಕ ಸಾರ್ವಜನಿಕ ಅಭಿಪ್ರಾಯ.

3. ವಿದೇಶಾಂಗ ನೀತಿಯ ನಿರ್ಧಾರಕ ಅಂಶಗಳು ಎಂದರೇನು?

ವಿದೇಶಾಂಗ ನೀತಿಯ ನಿರೂಪಣೆಗೆ ಪ್ರೇರಕವಾದ ನಿರ್ಣಾಯಕ ಅಂಶಗಳೇ ವಿದೇಶಾಂಗ ನೀತಿಯ ನಿರ್ಧಾರಕ ಅಂಶಗಳು.

4. ಸಾಮಾನ್ಯ ನಿರ್ಧಾರಕ ಅಂಶಗಳು ಯಾವುವು?

  • ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆ.
  • ಪರಸ್ಪರ ಅವಲಂಬನೆ.
  • ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆ ಮತ್ತು ಅಭಿವೃದ್ಧಿ.
  • ಪ್ರಚೋಧನಾತ್ಮಕ ಅಂಶಗಳು.

5. ಶಸ್ತ್ರಾಸ್ತ್ರಗಳ ಪೈಪೋಟಿ ಎಂದರೇನು?

ಶಸ್ತ್ರಾಸ್ತ್ರಗಳ ತಯಾರಿಕೆ, ದಾಸ್ತಾನು ಹಾಗೂ ಬಳಕೆಗೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಸ್ಪರ್ಧೆಯನ್ನು ಶಸ್ತ್ರಾಸ್ತ್ರಗಳ ಪೈಪೋಟಿ ಎನ್ನಬಹುದು.

6. ಭಯೋತ್ಪಾದಕತೆ ಎಂದರೇನು?

ಬಲಪ್ರಯೋಗದ ಒತ್ತಡ ತಂತ್ರಗಾರಿಕೆ, ಉಗ್ರಗಾಮಿ ಸಂಘಟನೆಗಳ ಉದ್ದೇಶ ಪೂರೈಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆಯನ್ನು ಭಯೋತ್ಪಾದಕತೆ ಎನ್ನಬಹುದು.

7. ಜವಹರಲಾಲ್‌ ನೆಹರೂರವರನ್ನು ಭಾರತದ ವಿದೇಶಾಂಗ ನೀತಿಯ ಪಿತಾಮಹ ಎಂದು ಕರೆಯುತ್ತಾರೆ. ಏಕೆ?

ಭಾರತದ ವಿದೇಶಾಂಗ ನೀತಿಗೆ ಭದ್ರ ಬುನಾದಿ ಹಾಕುವಲ್ಲಿ ಜವಾಹರಲಾಲ್‌ ನೆಹರೂ ರವರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಜವಹರಲಾಲ್ ನೆಹರೂರವರನ್ನು ಭಾರತದ ವಿದೇಶಾಂಗ ನೀತಿಯ ಪಿತಾಮಹ ಎಂದು ಕರೆಯುತ್ತಾರೆ.

8. ನಿಶ್ಯಸ್ತ್ರೀಕರಣ ಎಂದರೇನು?

ನಿಶ್ಯಸ್ತ್ರೀಕರಣ ಎಂದರೆ ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ತ್ಯಜಿಸುವ ನೇರ ಪ್ರಕ್ರಿಯೆ.

9. ಮಾನವ ಹಕ್ಕುಗಳಿಗೆ ನಡೆದ ಹೋರಾಟಗಳು ಯಾವುವು?

1776ರ ಅಮೆರಿಕಾದ ಸ್ವಾತಂತ್ರ್ಯ ಯುದ್ಧ, 1789ರ ಫ್ರಾನ್ಸಿನ ಮಹಾಕ್ರಾಂತಿ, 1917ರ ರಷ್ಯಾಕ್ರಾಂತಿ, 20ನೆಯ ಶತಮಾನದ ಪ್ರಥಮಾರ್ಧದ ಭಾರತ ಹಾಗೂ ಇನ್ನಿತರ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟಗಳು.

10. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಾಂವಿಧಾನಿಕವಾಗಿ ಮಾನ್ಯತೆಗೊಂಡ ಹಕ್ಕುಗಳು ಯಾವುವು?

ಬದುಕುವ ಹಾಗೂ ಸ್ವಾತಂತ್ರ್ಯದ ಹಕ್ಕು, ಸ್ವರಕ್ಷಣೆಯ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ’ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು.

11. ಮನುಕುಲದ ಇತಿಹಾಸವನ್ನು ಪರಿಶೀಲಿಸಿದಾಗ ಗೋಚರಿಸುವ ಸತ್ಯ ಯಾವುದು?

ಹಿಂಸೆ, ಭಯೋತ್ಪಾದನೆಗಳಿಂದ ಸಾಧನೆ ಮಾಡಿದ್ದು ಕ್ಷುಲ್ಲಕ ಹಾಗೂ ಸತ್ಯ, ಅಹಿಂಸೆ ಪ್ರೇಮ ತ್ಯಾಗಗಳಿಂದ ಸಾಧಿಸಿದ್ದು ಅಪಾರ.

12. ಮನುಕುಲಕ್ಕೆ ಚೈತನ್ಯ, ಹೊಸಬೆಳಕು, ನೆಮ್ಮದಿ ಯಾರಿಂದ ಪ್ರಾಪ್ತವಾಗಿದೆ?

ಬುದ್ಧ, ಮಹಾವೀರ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಇಂತಹವರಿಂದ ಮನುಕುಲಕ್ಕೆ ಚೈತನ್ಯ, ಹೊಸಬೆಳಕು, ನೆಮ್ಮದಿ ಪ್ರಾಪ್ತವಾಗಿದೆ.

13. ಭಯೋತ್ಪಾದನೆಗೆ ಪ್ರೇರಣೆ ನೀಡುವ ವಿಚಾರಧಾರೆಗಳು ಯಾವುವು?

ಧಾರ್ಮಿಕ ಮೂಲಭೂತ ಚಿಂತನೆ, ಪ್ರತ್ಯೇಕವಾದ, ತೀವ್ರ ಎಡಪಂಥೀಯ ವಿಚಾರ, ನಾಡ ಬಿಡುಗಡೆಯ ಛಲ, ವರ್ಣದ್ವೇಷ ನೀತಿ ಮುಂತಾದ ವಿಚಾರಧಾರೆಗಳು ಭಯೋತ್ಪಾದನೆಗೆ ಪ್ರಚೋಧನೆ ನೀಡುತ್ತವೆ.

14. ನಿಶ್ಯಸ್ತ್ರೀಕರಣದ ಸಾಧನೆಗಾಗಿ ಏರ್ಪಟ್ಟಿರುವ ಜಾಗತಿಕ ಒಪ್ಪಂದಗಳು ಯಾವುವು?

ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ, ಪರಮಾಣು ಪ್ರಸರಣ ನಿಷೇಧ ಒಪ್ಪಂದ, ಸಮಗ್ರ ಪರೀಕ್ಷಾ ನಿಷೇದ ಒಪ್ಪಂದ, ಫಲಿಕೆ ನಿಷೇದ ಒಪ್ಪಂದ, ಜೈವಿಕ ಶಸ್ತ್ರಾಸ್ತ್ರ ಸಮಾವೇಶ ಇವೆಲ್ಲವುಗಳನ್ನು ಶಸ್ತ್ರಾಸ್ತ್ರಗಳ ಪೈಪೋಟಿಯನ್ನು ತಡೆಗಟ್ಟುವಲ್ಲಿ ಕೆಲವೊಂದು ಮಹತ್ವದ ವಿಶ್ವಮಟ್ಟದ ಒಡಂಬಡಿಕೆಗಳು ಎಂದು ಪರಿಗಣಿಸಬಹುದು.

  • ವಿದೇಶಾಂಗ ನೀತಿಗೆ ಭದ್ರಬುನಾದಿ ಹಾಕುವಲ್ಲಿ ಜವಹರಲಾಲ್ ನೆಹರೂರವರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಅವರನ್ನು ಭಾರತದ ವಿದೇಶಾಂಗ ನೀತಿಯ ಪಿತಾಮಹ ಎಂದು ಕರೆಯುತ್ತಾರೆ.
  • ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.
  • ವಿದೇಶಾಂಗ ನೀತಿಯ ನಿರೂಪಣೆಗೆ ಪ್ರೇರಕವಾದ ನಿರ್ಣಾಯಕ ಅಂಶಗಳೇ ವಿದೇಶಾಂಗ ನೀತಿಯ ನಿರ್ಧಾರಕ ಅಂಶಗಳು.
  • ಪ್ರತಿಯೊಂದು ದೇಶವು ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿರುವಂತೆ ಭಾರತವು ತನ್ನ ಬೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈತಿಕ ಹಿನ್ನೆಲೆಯನ್ನಾಧರಿಸಿ ತನ್ನದೇ ಆದ ವಿದೇಶಾಂಗ ನೀತಿಯನ್ನು ರಚಿಸಿಕೊಂಡಿದೆ.
  • ಭಾರತದ ವಿದೇಶಾಂಗ ನೀತಿಯ ವಿಕಾಸವನ್ನು ಬ್ರಿಟಿಷರ ಕಾಲದಿಂದಲೂ ಗುರುತಿಸಬಹುದು.
  • ವಸಾಹತುಶಾಹಿತ್ವಕ್ಕೆ ವಿರೋಧ, ಸಾಮ್ರಾಜ್ಯಶಾಹಿತ್ವಕ್ಕೆ ವಿರೋಧ, ವರ್ಣಭೇಧ ನೀತಿಗೆ ವಿರೋಧ, ಅಲಿಪ್ತ ನೀತಿ, ಆಫ್ರಿಕ ಮತ್ತು ಏಷ್ಯಾದ ಪ್ರಗತಿಗೆ ಪ್ರಥಮ ಅಧ್ಯಯೆ, ನಿಶ್ಯಸ್ತ್ರೀಕರಣಕ್ಕೆ ಬೆಂಬಲ, ವಿಶ್ವಸಂಸ್ಥೆ ಮತ್ತು ವಿಶ್ವಶಾಂತಿಗೆ ಬೆಂಬಲ ಇವು ಭಾರತದ ವಿದೇಶಾಂಗ ಆತಿಯ ಮೂಲತತ್ವಗಳು.
  • ದ್ವಿತೀಯ ಜಾಗತಿಕ ಯುದ್ಧದ ಬಳಿಕ ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿ ನೀತಿಗಳಿಗೆ ಹಿನ್ನೆಡೆಯಾಯಿತು. ಹಳೆಯ ಜಗತ್ತಿನ ಬದಲಾವಣೆಯೊಂದಿಗೆ ನೂತನ ಜಗತ್ತು ಹುಟ್ಟಿಕೊಳ್ಳಲಾರಂಭಿಸಿತು.
  • 1945ರಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯೊಂದಿಗೆ ಹೊಸ ಶಕೆ ಆರಂಭಗೊಂಡರೂ ಜಾಗತಿಕವಾಗಿ ಮಾನವ ಹಕ್ಕುಗಳು, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇಧ ನೀತಿ ಹಾಗೂ ಭಯೋತ್ಪಾದಕತೆಯಂತಹ ಹಲವಾರು ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ.
  • ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಮಾನವೀಯ, ನ್ಯಾಯಯುತ, ಸಾಮಾಜಿಕ ಸ್ಥಿತಿಗತಿಗಳೇ ಮಾನವ ಹಕ್ಕುಗಳಾಗಿವೆ.
  • ಸಾರ್ವತ್ರಿಕ ಮಾನವ ಹಕ್ಕುಗಳನ್ನು ಭಾರತ ನಿರಂತರ ಪ್ರತಿಪಾದಿಸುತ್ತಾ ಬಂದಿದೆ.
  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತವಾಗಿರಬೇಕೆಂಬುದನ್ನು ಸಮರ್ಥಿಸುತ್ತಾ ಬಂದಿದೆ.
  • ಶಸ್ತ್ರಾಸ್ತ್ರಗಳ ತಯಾರಿಕೆ, ದಾಸ್ತಾನು ಹಾಗೂ ಬಳಕೆಗೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಸ್ಪರ್ಧೆಯನ್ನು ಶಸ್ತ್ರಾಸ್ತ್ರಗಳ ಪೈಪೋಟ ಎನ್ನಬಹುದು.
  • ಶಸ್ತ್ರಾಸ್ತ್ರಗಳ ತೀವ್ರ ಪೈಪೋಟಿಯನ್ನು ನಿಲ್ಲಿಸಲು ನಿಶ್ಯಸ್ತ್ರೀಕರಣವೊಂದೇ ಪ್ರಮುಖ ಉಪಾಯ ಎಂದು ಭಾಸವಾಗುತ್ತಿದೆ.
  • ನಿಶ್ಯಸ್ತ್ರೀಕರಣ ಎಂದರೆ ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ತ್ಯಜಿಸುವ ನೇರ ಪ್ರಕ್ರಿಯೆ.
  • ಭಾರತ ಒಂದು ಶಾಂತಿಪ್ರಿಯ ರಾಷ್ಟ್ರವಾದುದರಿಂದ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಪ್ರತಿಪಾದಿಸುತ್ತದೆ.
  • ವಿಶ್ವ ಕುಟುಂಬದ ಸದಸ್ಯರಲ್ಲಿ ಪರಸ್ಪರ ಆರ್ಥಿಕ ಅಸಮಾನತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ.
  • ಭಾರತ ಒಂದು ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾನತೆಯನ್ನು ಪ್ರತಿಪಾದಿಸುತ್ತಿದೆ.
  • ಭಯೋತ್ಪಾದಕತೆಯನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದೂ ಕರೆಯಬಹುದು.
  • ಬಲಪ್ರಯೋಗದ ಒತ್ತಡ ತಂತ್ರಗಾರಿಕೆ. ರಾಜಕೀಯ, ಧಾರ್ಮಿಕ, ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗುರಿಹೊಂದಿದ ಭಯೋತ್ಪಾದಕತೆಯು ವ್ಯಕ್ತಿಗಳಿಗೆ ಮತ್ತು ಸೊತ್ತುಗಳಿಗೆ ಅಪಾರ ಹಾನಿ ಉಂಟುಮಾಡುತ್ತದೆ.
  • ಭಯೋತ್ಪಾದನೆಯ ಸವಾಲನ್ನು ಎದುರಿಸಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಇತರೆ ವಿಷಯಗಳು :

ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಪಾಠದ ನೋಟ್ಸ್

ಜಾಗತಿಕ ಸಂಸ್ಥೆಗಳು ಪಾಠದ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *