10th Standard Swatantra Horata Social Science Notes Question Answer Mcq Pdf Download in Kannada Medium 2025, SSLC ಸ್ವಾತಂತ್ರ್ಯ ಹೋರಾಟ ಸಮಾಜ ನೋಟ್ಸ್, 10ನೇ ತರಗತಿ ಸ್ವಾತಂತ್ರ್ಯ ಹೋರಾಟ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 10th Class Swatantra Horat Lesson Notes, 10th Std Social Science Swatantra Horata Question Answer, Kseeb Solutions for Class 10 Social Science chapter 18 Notes, State Syllabus Class 10 Social Science 18 Lesson Notes, Class 10 Swatantra Horata Question Answer in Kannada, ಸ್ವಾತಂತ್ರ್ಯ ಹೋರಾಟ ಪಾಠದ ಪ್ರಶ್ನೆ ಉತ್ತರ, ಸ್ವಾತಂತ್ರ್ಯ ಹೋರಾಟ Question Answer.

ಅಭ್ಯಾಸ
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ.
1. ಭಾರತೀಯ ರಾಷ್ಟ್ರೀಯ ಕಾಂಗ್ರೇಸನ್ನು ಸಾ.ಶ. 1885 ರಲ್ಲಿ ಸ್ಥಾಪಿಸಲಾಯಿತು.
2. ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ವನ್ನು ತಿಳಿಸಿದವರು ದಾದಾಬಾಯಿ ನವರೋಜಿ
3. ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು’ ಬಾಲಗಂಗಾಧರ ತಿಲಕ ಎಂದು ರವರು ಘೋಷಿಸಿದರು.
4. ಅಲಿ ಸಹೋದರರು ನಡೆಸಿದ ಚಳುವಳಿ ಖಿಲಾಫತ್
5. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಹಮದ್ ಅಲಿಜಿನ್ನಾ ರವರು ಮಂಡಿಸಿದರು.
6. ಸಾ.ಶ. 1929ರ ಲಾಹೋರ್‌ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷರಾಗಿದ್ದವರು ಜವಾಹರಲಾಲ್ ನೆಹರು
7. ಮಹಾದ್ ಮತ್ತು ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಡಾ।। ಬಿ.ಆರ್. ಅಂಬೇಡ್ಕರ್
8. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ಕ್ಯಾಪ್ಟನ್ ಲಕ್ಷ್ಮಿ ರವರು ವಹಿಸಿದರು.
9. ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ದಂಡಿ ಎಂಬಲ್ಲಿ ನಡೆಸಿದರು.
10. ಕ್ವಿಟ್ ಇಂಡಿಯಾ ಚಳುವಳಿಯು ಸಾ.ಶ. 1942 ರಲ್ಲಿ ನಡೆಯಿತು.
II. ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಿ
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಸ್ಥಾಪಕರು
ಎ) ಮಹಾತ್ಮಗಾಂಧೀಜಿ
ಬಿ) ಎ.ಓ. ಹ್ಯೂಮ್
ಸಿ) ಬಾಲಗಂಗಾಧರ ತಿಲಕ್
ಡಿ) ಗೋಪಾಲ ಕೃಷ್ಣಗೋಖಲೆ
2. ‘ಮರಾಠ’ ಪತ್ರಿಕೆಯನ್ನು ಪ್ರಕಟಿಸಿದವರು
ಎ) ಜವಾಹರಲಾಲ್ ನೆಹರು
ಬಿ) ರಾಸ್ ಬಿಹಾರಿ ಬೋಸ್
ಸಿ) ಬಾಲಗಂಗಾಧರ ತಿಲಕ್
ಡಿ) ವಿ.ಡಿ. ಸಾವರ್ಕರ್
3. ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ
ಎ) ಸಾ.ಶ. 1924
ಬಿ) ಸಾಶ. 1923
ಸಿ) ಸಾಶ. 1929
ಡಿ) ಸಾಶ. 1906
4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷ ರಾಗಿದ್ದವರು
ಎ) ಸರ್ದಾರ್ ವಲ್ಲಭ ಬಾಯಿ ಪಟೇಲ್
ಬಿ) ಡಾ. ಬಿ. ಆರ್. ಅಂಬೇಡ್ಕರ್
ಸಿ) ಲಾಲ ಲಜಪತ ರಾಯ್
ಡಿ) ಸುಭಾಷ್ ಚಂದ್ರಬೋಸ್
5. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು
ಎ) ಭಗತ್ ಸಿಂಗ್
ಬಿ) ಚಂದ್ರಶೇಖರ್ ಅಜಾದ್
ಸಿ) ಅಬುಲ್ ಕಲಾಂ ಅಜಾದ್
ಡಿ) ಸರ್ದಾರ್ ವಲ್ಲಭ ಬಾಯಿ ಪಟೇಲ್
III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ. ಉತ್ತರಿಸಿ.
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಗೂ ಮೊದಲು ಇದ್ದ ಸಂಘಟನೆಗಳು ಯಾವುವು?
ದಿ ಹಿಂದೂ ಮೇಳ, ದಿ ಈಸ್ಟ್ ಇಂಡಿಯಾ ಅಸೋಸಿಯೇಷನ್, ಪೂನಾ ಸಾರ್ವಜನಿಕ ಸಭಾ ಮತ್ತು ದಿ ಇಂಡಿಯನ್ ಅಸೋಸಿಯೇಷನ್.
2. ಬ್ರಿಟಿಷ್ ಸರ್ಕಾರದ ಮುಂದಿಟ್ಟ ಮಂದಗಾಮಿಗಳ ಬೇಡಿಕೆಗಳಾವುವು?
ದೇಶದ ಕೈಗಾರಿಕೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣ ಕೊಡುವುದು, ಬಡತನದ ಬಗ್ಗೆ ಅಧ್ಯಯನ ನಡೆಸಲು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುವುದು ಇವೇ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
3. ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿಶ್ಲೇಷಿಸಿ.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದಾದ ದುಷ್ಪರಿಣಾಮಗಳನ್ನು ಮೊಟ್ಟಮೊದಲನೆಯು ಬಾರಿಗೆ ಮಂದಗಾಮಿಗಳು ಕೂಲಂಕಷವಾಗಿ ಅವಲೋಕಿಸುವ ಪ್ರಯತ್ನ ಮಾಡಿದರು. ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು. ದಾದಾಬಾಯಿ ನವರೋಜಿಯವರು ಇಂಗ್ಲೆಂಡಿನ ಸೋರಿಹೋಗುವ ಸಂಪತ್ತಿನ ಬಗ್ಗೆ ವಿಶ್ಲೇಷಿಸಿ ಅದನ್ನು ಸಂಪತ್ತಿನ ಸೋರುವಿಕೆ ಸಿದ್ದಾಂತ ಎಂದು ಕರೆದರು. ಆಮದನ್ನು ಹೆಚ್ಚಿಸಿ ರಫ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಅವರು ಪ್ರತಿಪಾದಿಸಿದರು. ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಹರಿದುಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು.
4. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ.
ವಿ.ಡಿ. ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ರಾಸ್ ಬಿಹಾರಿ ಘೋಷ್, ಮೇಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ ಪ್ರಸಾದ ಬಿಸ್ಮಿಲ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್.
5. ಸ್ವಾತಂತ್ರ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.
ತಿಲಕರು ಸ್ವರಾಜ್ಯವು ನನ್ನ ಆಜನ್ಮ ಹಕ್ಕು ಅದನ್ನು ಪಡೆದೇ ತೀರುವೆನೆಂದು ಘೋಷಿಸಿದರು. ಗಣೇಶ, ಶಿವಾಜಿ, ದುರ್ಗ ಮುಂತಾದ ಉತ್ಸವಗಳ ಮೂಲಕ ಜನರನ್ನು ರಾಷ್ಟ್ರೀಯತೆಗೆ ಪ್ರಚೋದಿಸಿದರು. ಮರಾಠಿ ಭಾಷೆಯಲ್ಲಿ ಕೇಸರಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮರಾಠ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು. ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು. ಅವರ ಕ್ರಾಂತಿಕಾರಕ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು ಎಂಬ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು.
6. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?
ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ ಸಾ.ಶ. 1905ರ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಬಂಗಾಳದ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧಗಳು ವ್ಯಕ್ತವಾದವು. ಪ್ರತಿರೋಧದ ಒಂದು ಬಗೆಯಾಗಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು. ಇದನ್ನು ದೇಶದಾದ್ಯಂತ ಕೊಂಡೊಯ್ದವರು ತೀವ್ರವಾದಿಗಳು, ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಬಹಿಷ್ಕರಿಸಲು ಸ್ವದೇಶಿ ಆಂದೋಲಸವು ಕರೆ ನೀಡಿತು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನು ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ಬಂಗಾಳದ ವಿಭಜನೆಯನ್ನು ಹಿಂಪಡೆಯಿತು.
7. ಚೌರಿ ಚೌರ ಘಟನೆಯನ್ನು ವಿವರಿಸಿ.
ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ ಸಾವಿರಾರು ಸ್ವಾತಂತ್ರ್ಯ ಯೋಧರು ಚಳುವಳಿಗೆ ಧುಮುಕಿದರು. ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಹಲ್ಲೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಜನರು ಠಾಣೆಗೆ ಮಗ್ಗಲೆತ್ನಿಸಿದಾಗ ಪೋಲಿಸರು ಗೋಲಿಬಾರ್ ನಡೆಸಿದರು. ಪೋಲಿಸರ ಬಳಿ ಇದ್ದ ಶಸ್ತ್ರಾಸ್ತ್ರಗಳು ಖಾಲಿಯಾದ ಕಾರಣದಿಂದ ಪೋಲಿಸರು ಠಾಣೆಯೊಳಗೆ ಓಡಿದರು. ಕುಪಿತರಾದ ಚಳುವಳಿಗಾರರು ಪೋಲಿಸ್ ಠಾಣೆಗೆ ಬೆಂಕಿ ಹಚ್ಚಿದರು. ಇದರಿಂದ 22 ಜನ ಪೋಲಿಸರು ಸಜೀವ ದಹನವಾದರು. ಚಳುವಳಿಗಾರರ ಹಿಂಸಾತ್ಮಕ ವರ್ತನೆಗಾಗಿ ಗಾಂಧೀಜಿಯವರು ವಿಷಾದ ವ್ಯಕ್ತಪಡಿಸಿ ಚಳವಳಿಯನ್ನು ಹಿಂತೆಗೆದುಕೊಂಡರು.
8. ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.
ಕಾನೂನು ಭಂಗ ಚಳುವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ಪೈಸರಾಯ್ ಇರ್ವಿನ್‌ನ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ಬೇಡಿಕೆಗಳು ಈಡೆರದೇ ಹೋದಲ್ಲಿ ಕಾನೂನು ಧಂಗ ಚಳುವಳಿ ಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದರೆ ಇರ್ವಿನ್ ಅವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಗಾಂಧೀಜಿಯವರು ಸಬರಮತಿ ಆಶ್ರಮದಿಂದ ಸೂರತ್ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾಯಿದೆ ಭಂಗ ಚಳುವಳಿಯನ್ನು ಪಾರಂಭಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ದಂಡಿ ಸತ್ಯಾಗ್ರಹ ಎಂದು ಕರೆಯುತ್ತಾರೆ.
9. ಕ್ವಿಟ್ ಇಂಡಿಯಾ ಚಳುವಳಿಯು ವಿಫಲವಾಗಲು ಕಾರಣಗಳೇನು?
ಗಾಂಧಿ, ನೆಹರು, ರಾಜೇಂದ್ರಪ್ರಸಾದ್, ಅಬುಲ್ ಕಲಾಂ ಅಜಾದ್, ಸರದಾರ್ ವಲ್ಲಭ ಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಕಸ್ತೂರಬಾ ಗಾಂಧಿ ಮೊದಲಾದ ನಾಯಕರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಹುತೇಕ ನಾಯಕರು ಬಂಧನದಲ್ಲಿದ್ದ ಭಾರತೀಯ ಕಾಂಗ್ರೆಸ್ಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು. ಮುಸ್ಲಿಂ ಲೀಗ್ ಈ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಈ ಕಾರಣಗಳಿಂದ ಕ್ವಿಟ್ ಇಂಡಿಯಾ ಚಳುವಳಿಯು ವಿಫಲವಾಯಿತು.
10. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡುಬರುವ ತೀವ್ರಗಾಮಿಗಳ ಹೆಸರುಗಳನ್ನು ಬರೆಯಿರಿ.
ಅರಬಿಂದೋ ಘೋಷ್, ಬಾಲಗಂಗಾಧರ ತಿಲಕ್, ಲಾಲ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್.
11. ಎರಡನೆಯ ದುಂಡು ಮೇಜಿನ ಷರತ್ತಿನ ಸಮಾವೇಷದ ಫಲಿತಾಂಶವೇನು?
ಬ್ರಿಟಿಷ್ ಸರ್ಕಾರವು ಅಸ್ಪೃಶ್ಯರನ್ನು ಪ್ರತ್ಯೇಕ ಮತಕ್ಷೇತ್ರವಾಗಿ ಪರಿಗಣಿಸುವುದಾಗಿ ಘೋಷಿಸಿತು. ಇದನ್ನು ವಿರೋಧಿಸಿ ಗಾಂಧೀಜಿಯವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅಂಬೇಡ್ಕರ್ ಅವರ ಮನವೊಲಿಸುವ ಪ್ರಯತ್ನಗಳು ನಡೆದವು. ಇದರ ಫಲವಾಗಿ ಪೂನಾ ಒಪ್ಪಂದವಾಯಿತು. ಇದರ ಪ್ರಕಾರ ಪ್ರತ್ಯೇಕ ಮತಕ್ಷೇತ್ರದ ಬದಲಾಗಿ ಸಾಮಾನ್ಯ ಮತಕ್ಷೇತ್ರಗಳಲ್ಲಿಯೇ ಕೆಲವು ಕ್ಷೇತ್ರಗಳನ್ನು ಅಸ್ಪೃಶ್ಯರಿಗೆ ಮೀಸಲಿಡಲಾಯಿತು. ಅಂತಹ ಕಡೆಗಳಲ್ಲಿ ಅಸ್ಪೃಶ್ಯ ಪ್ರತಿನಿಧಿ ಎಲ್ಲಾ ಜನರ ಪ್ರತಿನಿಧಿಯಾಗಿರುತ್ತಿದ್ದರು. ಪ್ರತ್ಯೇಕ ಮತಕ್ಷೇತ್ರಕ್ಕೆ ಬದಲಾಗಿ ಕೆಲವು ಕ್ಷೇತ್ರಗಳು ಅಸ್ಪೃಶ್ಯರಿಗಾಗಿ ಕಾದಿರಿಸಲ್ಪಟ್ಟವು.
12. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರಬೋಸರ ಸಾಧನೆಗಳನ್ನು ವಿವರಿಸಿ.
ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿದ್ದರೂ, ದೇಶಾಭಿಮಾನದಿಂದಾಗಿ ಬ್ರಿಟಿಷ್ ಸರ್ಕಾರದ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಫಾರ್ವಡ್್ರ ಬ್ಲಾಕ್ ಎಂಬ ಹೊಸ ಪಕ್ಷವನ್ನು ಕಟ್ಟಿದರು. ಕಾಂಗ್ರೆಸ್‌ನ ತ್ರಿಪುರ ಅಧಿವೇಶನ ಅಧ್ಯಕ್ಷರಾದರು. ವಿದೇಶದಲ್ಲಿ ನೆಲೆಗೊಂಡ ಭಾರತೀಯರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಪ್ರಯತ್ನದಲ್ಲಿದ್ದ ಇವರು ವಿಯೆನ್ನಾ, ಇಸ್ತಾನ್ ಬುಲ್ ಮುಂತಾದ ದೇಶಗಳಿಗೆ ಪ್ರವಾಸ ಬೆಳೆಸಿ ತಾಯ್ಯಾಡಿಗೆ ತಮ್ಮ ಬೆಂಬಲವನ್ನು ನೀಡಲು ಪ್ರೇರೇಪಿಸಿದರು. ಬ್ರಿಟಿಷ್ ವಿರೋಧಿ ಶಕ್ತಿಗಳೊಡಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಬಯಸಿ ಗೃಹಬಂಧನದಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿದಾಗ ಸಿಟ್ಲರ್ ಇವರಿಗೆ ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದನು. ಬೋಸರು ಅಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿದರು. ಅಜಾದ್ ಹಿಂದ್ ರೇಡಿಯೋ ಮೂಲಕ ತಮ್ಮ ಭಾಷಣಗಳನ್ನು ಭಾರತೀಯರಿಗೆ ಪ್ರಸರಣ ಮಾಡಿದರು. ದಾಸ್ ಬಿಹಾರಿ ಬೋಸರವರು ಟೋಕಿಯೋದಲ್ಲಿ ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಸೇನೆಯ ಮುಖಂಡತ್ವವನ್ನು ವಹಿಸಿಕೊಂಡರು. ರಂಗೂನಿನ ಮೂಲಕ ಬ್ರಿಟಿಷರ ಕೈಯಲ್ಲಿದ್ದ ದೆಹಲಿಯನ್ನು ವಶಪಡಿಸಿಕೊಳ್ಳಲು ಯುದ್ಧತಂತ್ರವನ್ನು ರೂಪಿಸಿದ್ದರು. ಆ ಹೊತ್ತಿಗೆ ಭಾರತದಿಂದ ಐ.ಎನ್.ಎ.ಗೆ ಸೇರ್ಪಡೆಯಾದ ಸಾವಿರಾರು ಯೋಧರು ದೆಹಲಿಯನ್ನು ಆಕ್ರಮಿಸಲು ತಯಾರಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುಭಾಷರ ಆದೇಶದಂತೆ ಸಶಸ್ತ್ರ ಹೋರಾಟವನ್ನು ಅವರು ಬರ್ಮಾದ ಗಡಿಯಲ್ಲಿ ಆರಂಭಿಸಿದರು.
13. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟುವರ್ಗಗಳ ಬಂಡಾಯಗಳನ್ನು ವಿವರಿಸಿ.
ಸಂತಾಲ ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಗುರುತಿಸಿದೆ. ಈ ಬುಡಕಟ್ಟು ಜನರನ್ನು ಬಂಗಾಳಿ ಮತ್ತು ಒರಿಸ್ಸಾದ ಗುಡ್ಡಗಾಡು ಪ್ರದೇಶಗಳಲ್ಲಿ ಗುರುತಿಸಬಹುದು. ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ಧತಿಯಿಂದ ಈ ಬುಡಕಟ್ಟು ಜನರು ನಿರ್ಗತಿಕರಾದರು. ಬುಡಕಟ್ಟು ಜನರ ಭೂಮಿಯು ಜಮೀನ್ದಾರರ ಕೈಸೇರಿತು. ಬಂಗಾಳಿ ಜಮೀನ್ದಾರರು, ಲೇವಾದೇವಿಗಾರರು ಮತ್ತು ಕಂಪನಿ ಸರ್ಕಾರವು ನೇರ ಶೋಷಣೆಗೆ ಕಾರಣರಾದರು. ಸಂತಾಲರ ಶಾಂತಿಪ್ರಿಯತೆ ಮತ್ತು ಸಭ್ಯತೆಯನ್ನು ಕಂಪನಿ ಸರ್ಕಾರವು ಶೋಷಣೆಗೆ ಉಪಯೋಗಿಸಿಕೊಂಡಿತು. ಇದರಿಂದ ಅಸಮಾಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರು ಮತ್ತು ಮಹಾಜನರನ್ನು ಲೂಟಿಮಾಡಲು ನಿರ್ಧರಿಸಿದರು. ದಂಗೆಯು ಬಾರಹತ್ ಪ್ರದೇಶದಲ್ಲಿ ತೀವ್ರವಾಯಿತು. ಬಾಗತಪುರ್ ಮತ್ತು ರಾಜಮಹಲ್‌ಗಳಲ್ಲಿ ತೀವ್ರವಾಯಿತು. ಪರಿಣಾಮವಾಗಿ ಬುಡಕಟ್ಟು ಜನರು ಅವರ ಶತ್ರುಗಳನ್ನು ಹತ್ಯೆ ಮಾಡಿದರು. ಇದರಿಂದಾಗಿ ಜಮೀನ್ದಾರರು, ಲೇವಾದೇವಿಗಾರರು ಪಲಾಯನ ಮಾಡಿದರು. ಸಂತಾಲರ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಸೈನ್ಯವನ್ನು ಬಳಸಿಕೊಂಡರು. ಸಂತಾಲರ ದಂಗೆಯು ಕೊನೆಗೊಂಡರೂ ಅದರ ಸ್ಫೂರ್ತಿಯು ಮುಂದಿನ ಅನೇಕ ಹೋರಾಟಗಳಿಗೆ ಪ್ರೇರಣೆಯಾಯಿತು.
ಹೆಚ್ಚುವರಿ ಪ್ರಶ್ನೆಗಳು:
I. ಬಹು ಆಯ್ಕೆಯ ಪ್ರಶ್ನೆಗಳು:
1. ವಿಮುಕ್ತಿ ದಿವಸವನ್ನು ಆಚರಿಸಿದವರು:
ಎ) ಕಾಂಗ್ರೆಸ್
ಬಿ) ಮುಸ್ಲಿಂಲೀಗ್
ಸಿ) ಫಾರ್ವರ್ಡ್ ಬ್ಲಾಕ್
ಡಿ) ಸ್ವತಂತ್ರ ಕಾರ್ಮಿಕ ಪಕ್ಷ
2. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು:
ಎ) ದಾದಾ ಬಾಯಿ ನವರೋಜಿ
ಬಿ) ಡಾ.ಬಿ.ಆರ್.ಅಂಬೇಡ್ಕರ್
ಸಿ) ಡಾ. ಬಾಬುರಾಜೇಂದ್ರ ಪ್ರಸಾದ್
ಡಿ) ಗೋಪಾಲಕೃಷ್ಣ ಗೋಖಲೆ
3. 1946ರ ಮಾರ್ಚ್‌ನಲ್ಲಿ ಭಾರತಕ್ಕೆ ವೈಸ್‌ರಾಯ್ ಆಗಿ ಬಂದವರು:
ಎ) ಲಾರ್ಡ್ ಮೌಂಟ್ ಬ್ಯಾಟನ್
ಬಿ) ಜಾನ್ ಸೈಮನ್
ಸಿ) ಲಾರ್ಡ್ ಕರ್ಜನ್
ಡಿ) ಲಾರ್ಡ್ ರಿಪ್ಪನ್
4. ಕಾಂಗ್ರೆಸ್‌ನ ಸಮಾಜವಾದಿ ಬಣದ ಪ್ರಮುಖ ನಾಯಕ:
a) ತೇಜ ಬಹದ್ದೂರ್ ಸಪ್ಪು
ಬಿ) ಜಯಪ್ರಕಾಶ್ ನಾರಾಯಣ್
ಸಿ) ಸಿ.ಆರ್.ದಾಸ್
ಡಿ) ಮೋತಿಲಾಲ್ ನೆಹರು
5. ಸಂವಿಧಾನ ಸಭೆಯ ಅಧ್ಯಕ್ಷರು:
ಎ) ಡಾ.ಬಿ.ಆರ್.ಅಂಬೇಡ್ಕರ್
ಬಿ) ಜವಾಹರಲಾಲ್ ನೆಹರು
ಸಿ) ಡಾ.ಬಾಬುರಾಜೇಂದ್ರ ಪ್ರಸಾದ್
ಡಿ) ಎಂ.ಆರ್.ಜಯಕರ್
II. ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ:
1.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಮಂದಗಾಮಿಯುಗ ಎನ್ನುತ್ತಾರೆ.
2. ಭಾರತ ಮತ್ತು ಪಾಕಿಸ್ತಾನ ದೇಶಗಳ ಗಡಿಗಳನ್ನು ರ‍್ಯಾಡ್‌ಕ್ಲಿಫ್ ಆಯೋಗವು ಗುರುತಿಸಿತು.
3. ಸಾ.ಶಾ. 1920 ರಿಂದ 19470ರ ಕಾಲವನ್ನು ಗಾಂಧಿಯುಗ ಎಂದು ಗುರುತಿಸಲಾಗಿದೆ.
4. ರಾಜಕೀಯ ಭಿಕ್ಷುಗಳು ಎಂದು ಕರೆಯಲ್ಪಟ್ಟವರು ತೀವ್ರವಾದಿಗಳು
5. ಕಾರ್ಮಿಕರ ಹೋರಾಟವು ಸಾ.ಶ. 1827 ರಲ್ಲಿ ಕಲ್ಕತ್ತದಲ್ಲಿ ಆರಂಭವಾಯಿತು.
6. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಎ. ಓ. ಹೊಂ
7. ನಾಗಾಬುಡಕಟ್ಟಿನ ತರುಣ ಯೋಧಪಡೆಯನ್ನು ಕಟ್ಟಿದವನು ಜಾದೋನಾಂಗ್
8. ಈಶಾನ್ಯ ಭಾರತದ ಭಾಗದಲ್ಲಿ ಯುವತಿಯರ ಪಡೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದವಳು ಗಾಯಿಡಿನ್ ಲೂ
9. ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತಂದವನು ಲಾರ್ಡ್ ಲಿಟ್ಟನ್
10. ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದವನು ಲಾರ್ಡ್ ಕರ್ಜನ್
III. ಈ ಪ್ರಶ್ನೆಗಳಿಗೆ ಉತ್ತರಿಸಿ:
1.ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕುರಿತು ಬರೆಯಿರಿ.
ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ಚಳುವಳಿಯು ವ್ಯಾಪಕವಾಗಿ ಹರಡಿತು. ಅಲ್ಲಲ್ಲಿ ಇದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನು ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು. ಜನರಲ್ ಡಯರ್ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಿದನು. ಜಲಿಯನ್‌ವಾಲಾಬಾಗ್‌ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು. ಅವರಿಗೆ ಈ ನಿಷೇಧದ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ. ಸುಮಾರು 20 ಸಾವಿರ ಜನ ರೌಲತ್ ಕಾಯಿದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು. ಸುತ್ತಲು ಎತ್ತರವಾದ ಗೋಡೆಗಳಿಂದ, ಕಿರಿದಾದ ಪ್ರದೇಶದಿಂದ ಕೂಡಿದ ಜಲಿಯನ್‌ವಾಲಾಬಾಗ್‌ನಲ್ಲಿ ಸಭೆಯ, ಶಾಂತಿಯಿಂದ ನಡೆಯುತ್ತಿದ್ದಾಗ ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್ ನು ಯಾವ ಮುನ್ಸೂಚನೆಯನ್ನು ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ನಡೆಸುತ್ತಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದಾಗ 379 ಮಂದಿ ಪ್ರಾಣಕಳೆದುಕೊಂಡರು. ಸಹಸ್ರಾರು ಜನರು ಗಾಯಗೊಂಡರು.
2. ಕ್ರಾಂತಿಕಾರಿಗಳ ಹೋರಾಟದ ವಿಧಾನವನ್ನು ತಿಳಿಸಿ.
ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಭಾರತದಿಂದ ಓಡಿಸಬಹುದೆಂದು ಬಲವಾಗಿ ನಂಬಿದ್ದರು. ರಹಸ್ಯಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಭೇತಿ ನೀಡುವಲ್ಲಿ ನಿರತರಾಗಿದ್ದರು. ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು ಮತ್ತು ಬಂದೂಕುಗಳ ಪ್ರಯೋಗ ಮಾಡಿದರು.
3. ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯನ್ನು ಜಾರಿಗೆ ತರಲು ಕಾರಣವೇನು?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿದ್ದ ಹಲವಾರು ವೈವಿದ್ಯತೆಗಳ ನಡುವೆಯೂ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿತು. ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು. ಇದರಿಂದಾಗಿ ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು. ಕಾಂಗ್ರೆಸ್‌ನ ಬಲವರ್ಧನೆಯನ್ನು ಗಮನಸಿದ ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು.
4. ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರವನ್ನು ವಿವರಿಸಿ.
ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹವನ್ನು ಪ್ರಮುಖ ತಂತ್ರಗಳನ್ನಾಗಿ ಬಳಸಿಕೊಂಡರು. ತಮ್ಮ ಸಿದ್ಧಾಂತಗಳನ್ನು ಹಿಂದ್ ಸ್ವರಾಜ್ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು. ಸತ್ಯಾಗ್ರಹವು ಇವರ ಹೋರಾಟದ ಪ್ರಮುಖ ಅಸ್ತ್ರವಾಯಿತು. ಸಾ.ಶ. 1919ರಲ್ಲಿ ಜಾರಿಗೆ ತರಲಾದ ರೌಲತ್ ಕಾಯಿದೆಯ ವಿರುದ್ಧ ತಮ್ಮ ಹೋರಾಟದ ಸಾತ್ವಿಕ ಅಸ್ತ್ರವಾದ ಸತ್ಯಾಗ್ರಹವನ್ನು ಬಳಸಿದರು. ಖಿಲಾಫತ್ ಚಳಿವಳಿಗೆ ತಮ್ಮ ಬೆಂಬಲವನ್ನು ನೀಡಿದರು. ಬ್ರಿಟಿಷರ ವಿರುದ್ಧ ಸಾ.ಶ. 1920ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು. ಚೌರಿಚೌರದಲ್ಲಿ ನಡೆದ ಘಟನೆಗೆ ಬ್ರಿಟಿಷ್ ಸರ್ಕಾರವು ಗಾಂಧೀಜಿಯವರನ್ನು ಹೊಣೆಗಾರರನ್ನಾಗಿಸಿ ಸೆರೆಮನೆವಾಸ ವಿಧಿಸಿತು. ಕಾನೂನು ಭಂಗ ಚಳುವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ತಮ್ಮ ಬೇಡಿಕೆಗಳು ಈಡೇರದೇ ಹೋದಾಗ ಸಬರಮತಿ ಆಶ್ರಮದಿಂದ ಸೂರತ್ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪನ್ನು ತಯಾರಿಸಿ ಕಾನೂನು ಭಂಗ ಚಳುವಳಿಯನ್ನು ಪ್ರಾರಂಭಿಸಿದರು. ಸಾ.ಶ. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದೇಶಬಾಂಧವರಿಗೆ ಮಾಡು ಇಲ್ಲವೇ ಮಡಿ ಎನ್ನುವ ಕರೆ ನೀಡಿದರು. ಈ ಕರೆ ನೋಡಿದ ಹಿನ್ನೆಲೆಯಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದರು.
5. ಭಾರತದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿನ ಕಾರ್ಮಿಕ 6 ಬಂಡಾಯವನ್ನು ವಿವರಿಸಿ.
ಕಾರ್ಮಿಕರ ಹೋರಾಟವು ಸಾ.ಶ. 1827 ರಲ್ಲಿ ಕಲ್ಕತ್ತದಲ್ಲಿ ಆರಂಭವಾಯಿತು. ಸೆಣಬು, ಬಟ್ಟೆಗಿರಣಿ ಕಾರ್ಮಿಕರು, ರೈಲ್ವೆ ಕೂಲಿಗಳು ತಮ್ಮ ಬೇಡಿಕೆಗಳಿಗಾಗಿ ಸಂಘಟಿತರಾಗತೊಡಗಿದರು. ರೈಲ್ವೆ ಕೂಲಿಗಳು ಲ್ದಾಣದಲ್ಲಿ ಮುಷ್ಕರ ನಡೆಸಿ ಹೆಚ್ಚಿನ ಕೂಲಿಗಾಗಿ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಲ್ಕತ್ತದಲ್ಲಿ ಪ್ರಿಂಟರ್ಸ್ ಯೂನಯನ್‌ನವರು ಮತ್ತು ಬಾಂಬೆ ಬಟ್ಟೆ ಗಿರಣಿಯ ಕಾರ್ಮಿಕರು ರಾಷ್ಟ್ರೀಯ ಜಾಗೃತಿ ಉಂಟು ಮಾಡಿದರು. ಮದ್ರಾಸ್‌ನಲ್ಲಿ ಲೇಬರ್ ಯೂನಿಯನ್ ಸ್ಥಾಪನೆಗೊಂಡಿತು. ನಂತರದಲ್ಲಿ ಕಾರ್ಮಿಕ ಸಂಘಟನೆಗಳು ಸ್ಥಾಪನೆಗೊಂಡವು. ಕಾಂಗ್ರೆಸ್ ಕಾರ್ಮಿಕ ಸಂಘಟನೆಗಳ ಇಂತಹ ಚಳುವಳಿಗೆ ಬೆಂಬಲ ನೀಡಿತು.
6. ನೆಹರುರವರು ಪ್ರಧಾನಮಂತ್ರಿಯಾದ ನಂತರ ರಾಷ್ಟ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳನ್ನು ವಿವರಿಸಿ?
ಕೈಗಾರಿಕೀಕರಣ ಮತ್ತು ನವಭಾರತದ ಶಿಲ್ಪಿಯಾಗಿ ಭಾರತದ ನೆಹರುರವರನ್ನು ಕಾಣುತ್ತೇವೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಭಾರತದ ಅನೇಕ ದೇಶೀಸಂಸ್ಥಾಗಳ ವಿಲೀನಕ್ಕೆ ಕಾರಣರಾದರು. ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವಯ ತಳಹದಿಯನ್ನು ಹಾಕಿದರು. ಬಂಡವಾಳ ಹಾಗೂ ಸಮಾಜವಾದಿ ತತ್ವವನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯು ನೆಹರು ಅವರ ಆಧುನಿಕ ಭಾರತದ ಮೈಲಿಗಲ್ಲಾಯಿತು. ಬೃಹತ್ ಕೈಗಾರೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು. ಪಂಚಶೀಲ ತತ್ವಗಳ ಆಧಾರದ ಮೇಲೆ ಶಕ್ತಿ ರಾಜಕಾರಣದಿಂದ ದೂರವೇ ಉಳಿದು ಶಾಂತಿ ಸಹಬಾಳ್ವೆಯ ಸೂತ್ರಗಳನ್ನು ಅನುಷ್ಟಾನಕ್ಕೆ ತರಲು ಕಾರಣರಾದರು.
7. ಸೈಮನ್ ಆಯೋಗವನ್ನು ಭಾರತೀಯರು ಬಹಿಷ್ಕರಿಸಲು ಕಾರಣಗಳೇನು?
ಸೈಮನ್ ಆಯೋಗವು ಬ್ರಿಟಿಷ್ ಸರ್ಕಾರದ ಸಂಸದೀಯ ಆಯೋಗ ಎಂಬ ನೆಪದಲ್ಲಿ ಒಬ್ಬ ಭಾರತೀಯನನ್ನೂ ಒಳಗೊಂಡಿರಲಿಲ್ಲ. ಇದರಿಂದ ಇದು ಭಾರತೀಯರಿಗೆ ಮಾಡಿದ ಅವಮಾನವೆಂದು ಭಾವಿಸಿದ ಕಾಂಗ್ರೆಸ್ ಸೈಮನ್ ಆಯೋಗವನ್ನು ಬಹಿಷ್ಕರಿಸಿತು.
8. ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರವರ ಬಗ್ಗೆ ಟಿಪ್ಪಣಿ ಬರೆಯಿರಿ.
ಸಾಮಾಜಿಕ ಸ್ವಾತಂತ್ರವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಬಲವಾಗಿ ನಂಬಿದ್ದ ಡಾ.ಬಿ.ಆರ್. ಅಂಬೇಡ್ಕರವರು ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿರುವ ಕಟ್ಟಕಡೆಯ ಮನುಷ್ಯಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರೆಯದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಅದು ಕೇವಲ ಮರೀಚಿಕೆಯ ಉಳಿಯುತ್ತದೆ ಎಂದು ತಿಳಿದಿದ್ದರು. ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ, ಅದರ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು. ಅಸ್ಪೃಶ್ಯರು ಕನಿಷ್ಠ ಮಟ್ಟದ ಅವಕಾಶಗಳಿಂದ ವಂಚಿತರಾಗಿರುವುದನ್ನು ನಿರೂಪಿಸಲು ಮಹಾಡ್ ಮತ್ತು ಕಾಲಾರಾಂ ದೇವಾಲಯ ಚಳುವಳಿಗಳನ್ನು ರೂಪಿಸಿದರು. ಮೂರೂ ದುಂಡುಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು. ಬಹಿಷ್ಕೃತ ಹಿತಕಾರನೆ ಸಭಾ ಎಂಬ ಸಂಘಟನೆಯನ್ನು ಹಾಗೂ ಸ್ವತಂತ್ರ ಕಾರ್ಮಿಕ ಪಕ್ಷ ಎಂಬ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಪ್ರಬುದ್ಧ ಭಾರತ, ಜನತಾ, ಮೂಕನಾಯಕ, ಬಹಿಷ್ಕೃತ ಭಾರತ ಪತ್ರಿಕೆಗಳನ್ನು ಹೊರಡಿಸಿದರು. ಕೃಷಿ ಕಾರ್ಮಿಕರ ಏಳಿಗೆಗಾಗಿಯೂ ದುಡಿದರು. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಇವರು ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ ಅಸ್ಪೃಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು. ಸ್ವತಂತ್ರ ಭಾರತದಲ್ಲಿ ಕಾನೂನು ಮಂತ್ರಿಯಾದರು. ಆಧುನಿಕತೆ, ವೈಚಾರಿಕತೆ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ಪ್ರೇರಣೆ ಪಡೆದರೂ ದೇಶೀಯ ಬೇರುಗಳ ಕಡೆಗೆ ಒಲವನ್ನು ತೋರಿದರು.
ಮುಖ್ಯಾಂಶಗಳು:
- ಸಾ.ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಕಾರಿ ಸುಧಾರಣೆಗಳು ಕಂಡು ಬಂದರು.
- ಜನರು ಅಲ್ಲಲ್ಲಿ ಸಂಘಟಿತರಾಗಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅನೇಕ ಪ್ರಾಂತ್ಯಗಳಲ್ಲಿ ಸಂಸ್ಥೆಗಳನ್ನು ಹುಟ್ಟು ಹಾಕಿದರು.
- ಸಾ.ಶ. 1885ರಲ್ಲಿ ಎ.ಓ. ಹೂಮ್ ಎಂಬ ನಿವೃತ್ತ ಸಿವಿಲ್ ಸರ್ವಿಸ್ ಅಧಿಕಾರಿಯ ಮೂಲಕ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವನೆಯನ್ನು ವೃದ್ಧಿಸಲು ಶ್ರಮಿಸಿತು.
- 19ನೆಯ ಶತಮಾನದ ಕೊನೆಯ ಭಾಗದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಕಾಣಿಸಿಕೊಂಡಿತು.
- ಕಾರ್ಯತಂತ್ರ, ನಂಬಿಕೆಗಳು ಮತ್ತು ಹೋರಾಟದ ಮಾದರಿಯಿಂದಾಗಿ ಅವರುಗಳನ್ನು ಮಂದಗಾಮಿಗಳು ಮತ್ತು ತೀವ್ರವಾದಿಗಳೆಂದು ಗುರುತಿಸುತ್ತಾರೆ.
- ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಮಂದಗಾಮಿ ಯುಗ ಎನ್ನುತ್ತಾರೆ.
- ಮಂದಗಾಮಿಗಳ ಮೃದುಧೋರಣೆಯನ್ನು ಟೀಕೆ ಮಾಡುತ್ತಾ ತೀವ್ರವಾದ ನಿಲುವುಗಳನ್ನು ಪ್ರತಿಪಾದಿಸುತ್ತಾ ಬಂದ ಬಣವನ್ನು ತೀವ್ರವಾದಿಗಳೆಂದು ಗುರುತಿಸಲಾಗಿದೆ.
- ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಓಡಿಸಬಹುದೆಂದು ಬಲವಾಗಿ ನಂಬಿದ್ದವರು ಕ್ರಾಂತಿಕಾರಿಗಳು.
- ಭಾರತದ ಈಶಾನ್ಯ ಭಾಗದಲ್ಲಿ ಜಾದೋನಾಂಗ್ ಎಂಬುವರು ನಾಗಾಬುಡಕಟ್ಟಿನ ತರುಣ ಯೋಧಪಡೆಯೊಂದನ್ನು ಗಾಡಿಯನ್ ಲೂ ಎಂಬುವವರು ಯುವತಿಯರ ಪಡೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದರು.
- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾ.ಶ 1920 ರಿಂದ 1947 ರ ಕಾಲವನ್ನು ಗಾಂಧಿಯುಗವೆಂದು ಗುರುತಿಸಲಾಗಿದೆ.
- ಭಾರತವು ಸ್ವಾತಂತ್ರ್ಯ ಪಡೆಯುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧಿಯವರು ಮುಖ್ಯ ಭೂಮಿಕೆಯಲ್ಲಿದ್ದರು.
- ಬ್ರಿಟಿಷರ ವಿರುದ್ಧ ಖಿಲಾಫತ್ ಚಳುವಳಿ, ಅಸಹಕಾರ ಚಳುವಳಿ, ಸವಿನಯ ಕಾನೂನು ಭಂಗ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲದೆ ರೈತರ ಪ್ರತಿಭಟನೆ, ಕಾರ್ಮಿಕ ಮತ್ತು ಬುಡಕಟ್ಟು ಬಂಡಾಯಗಳೂ ಪ್ರಮುಖವಾಗಿವೆ.
- ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಪಾತ್ರವು ಒಂದು ದಿಟ್ಟ ಮೈಲಿಗಲ್ಲು.
- ಸ್ವಾತಂತ್ರ್ಯ ಹೋರಾಟಗಾರರೂ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಅವರಿಗೆ ಮರಣೋತ್ತರವಾಗಿ ಭಾರತರತ್ನವನ್ನು ನೀಡಿ ಗೌರವಿಸಿದೆ.
- ಪಂಡಿತ್ ಜವಹರಲಾಲ್ ನೆಹರುರವರು ಹೋಂರೂಲ್ ಚಳವಳಿಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸಿದರು. ಅವರ ಚಿಂತನೆಗಳು ರಾಜಕೀಯ ಚಟುವಟಿಕೆಗಳಿಗೆ ಹೊಸ ತಿರುವನ್ನು ನೀಡಿದವು.
- ಕೈಗಾರೀಕರಣ ಮತ್ತು ನವಭಾರತದ ಶಿಲ್ಪಿಯಾಗಿ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರೂರವರನ್ನು ನಾವು ಕಾಣುತ್ತೇವೆ.
- ನೆಹರೂರವರು ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವಯ ತಳಹದಿಯನ್ನು ಹಾಕಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು. ಪಂಚಶೀಲ ತತ್ವಗಳ ಆಧಾರದ ಮೇಲೆ ಶಕ್ತಿ ರಾಜಕಾರಣದಿಂದ ದೂರವೇ ಉಳಿದು ಶಾಂತಿ ಸಹಬಾಳ್ವೆಯ ಸೂತ್ರಗಳನ್ನು ಅನುಷ್ಠಾನಕ್ಕೆ ತರಲು ಕಾರಣರಾದರು.
- ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಮಧ್ಯಂತರ ಸರ್ಕಾರ ರಚಿಸುವು ವಿಚಾರದಲ್ಲಿ ಭಿನ್ನತೆ ಉಂಟಾಗಿ ಸಂಬಂಧ ತೀರ ಹದಗೆಟ್ಟ ಸಮಯದಲ್ಲಿ ಭಾರತಕ್ಕೆ ವೈಸ್‌ರಾಯ್ ಆಗಿ ಬಂದ ಲಾರ್ಡ್‌ಮೌಂಟ್ ಬ್ಯಾಟನ್‌ರವರು ಗಾಂಧೀಜಿ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು.
- ಸಾ.ಶ. 1947ರ ಜುಲೈನಲ್ಲಿ ಭಾರತ ಸ್ವಾತಂತ್ರ್ಯ ಮಸೂದೆಯು ಕಾಯ್ದೆಯ ರೂಪವನ್ನು ಪಡೆಯಿತು. ಈ ಕಾಯಿದೆಯನ್ವಯ ಸಾ.ಶ. 1947ರ ಆಗಸ್ಟ್ 15ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಉದಯಿಸಿದವು.
ಇತರೆ ವಿಷಯಗಳು :
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857) ಪಾಠದ ನೋಟ್ಸ್
ಸ್ವಾತಂತ್ರ್ಯೋತ್ತರ ಭಾರತ ಪಾಠದ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್